ಅಭಿಪ್ರಾಯ / ಸಲಹೆಗಳು

Crime Report in  : Kavoor PS

ಪಿರ್ಯಾದಿದಾರರಾದ ಹರ್ಷಿತ್ ರೈ ರವರು ದಿನಾಂಕ 17/11/2023 ರಂದು ಸಂಜೆ 5.00 ಗಂಟೆಗೆ ಗಾಂಧಿನಗರದಲ್ಲಿರುವ Fro Fitness Gym ಗೆ ಮನೆಯಿಂದ ನಡೆದುಕೊಂಡು ಹೋಗುವಾಗ ಸುಮಾರು 25-30 ವರ್ಷ ಪ್ರಾಯದ ಅಪರಿಚಿತ ಯುವಕನೊಬ್ಬ ಸ್ಕೂಟರ್ ನಲ್ಲಿ ಹಿಂಬದಿಯಿಂದ ಬಂದು ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಸುಮಾರು 16 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದಿದ್ದು, ಆ ಸಮಯ ಪಿರ್ಯಾದಿದಾರರು ತಮ್ಮ ಕೈಯಿಂದ ಸರವನ್ನು ಹಿಡಿದಿದ್ದು ಸರವು ತುಂಡಾಗಿ ಒಂದು ತುಂಡು ಕೈಯಲ್ಲಿ ಉಳಿದಿರುತ್ತದೆ. ಉಳಿದ ಇನ್ನೊಂದು ತುಂಡು ಸರವನ್ನು ಬಲವಾಗಿ ಎಳೆದುಕೊಂಡು ಸುಲಿಗೆ ಮಾಡಿ ಆತನ ಕಪ್ಪುಬಣ್ಣದ ಸ್ಕೂಟರ್ ನಲ್ಲಿ ಗಾಂಧಿನಗರದ ಕಡೆಗೆ ಪರಾರಿಯಾಗಿರುತ್ತಾನೆ. ಈತನು ಗೆರೆಗಳಿರುವ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈತನನ್ನು ಮುಂದಕ್ಕೆ ನೋಡಿದರೆ ಗುರುತಿಸುತ್ತೇನೆ. ಸುಲಿಗೆಯಾದ ಚಿನ್ನದ ಸರದಲ್ಲಿ ಉಳಿದ ತುಂಡು ಸುಮಾರು 8 ಗ್ರಾಂ ಇದ್ದು, ಇನ್ನೊಂದು 8 ಗ್ರಾಂ ತೂಕದ ಸರವು ಅಪರಿಚಿತ ಸುಲಿಗೆಕೋರನು ಎಳೆದುಕೊಂಡು ಪರಾರಿಯಾಗಿರುತ್ತಾನೆ. ಇದರ ಅಂದಾಜು ಮೌಲ್ಯ ರೂ 50000/- ಆಗಬಹುದು, ಎಂಬಿತ್ಯಾದಿ.

CEN Crime PS

ಫಿರ್ಯಾದಿದಾರರ  ಇನ್ಸ್ಟಾ ಗ್ರಾಂ ಖಾತೆಗೆ ದಿನಾಂಕ 24-09-2023 ರಂದು ಆನ್ ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಹಣ ಸಂಪಾದಿಸುವ ಬಗ್ಗೆ ಸಂದೇಶ ಬಂದಿರುತ್ತದೆ. ನಂತರ ಸದ್ರಿ ಟ್ರೇಡಿಂಗ್ ಆ್ಯಪ್ ಗೆ ಫಿರ್ಯಾದಾರರನ್ನು ಸೇರಿಸಲಾಗಿರುತ್ತದೆ. ಮೊದಲಿಗೆ ಸಣ್ಣ ಟಾಸ್ಕ್ ನೀಡಿ ಸ್ವಲ್ಪ ಪ್ರಮಾಣದ ಹಣ ನೀಡಿರುತ್ತಾರೆ. ನಂತರ ದೊಡ್ಡ ಮಟ್ಟದ ಹಣ ಗಳಿಸಲು ದೊಡ್ಡ ಟಾಸ್ಕ್ ನೀಡಿದ್ದು, ಪಿರ್ಯಾದಿದಾರರು ರೂ 50,000/-, 4,50,000/- ಬಳಿಕ ರೂ 15,00,000/- ತದನಂತರ ರೂ 500,000/- ರಂತೆ ಹಣವನ್ನು ಹೂಡಿಕೆ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ಹೂಡಿಕೆಯಾದ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ಹಣವು ವಿತ್ ಡ್ರಾ ಆಗಿರುವುದಿಲ್ಲ ಇದರಿಂದ ಪಿರ್ಯಾದಿದಾರರಿಗೆ ಅನುಮಾನ ಉಂಟಾಗಿರುತ್ತದೆ.ಈ ರೀತಿ ಪಿರ್ಯಾದಿದಾರರಿಂದ ದಿನಾಂಕ 26-09-2023 ರಿಂದ 09-10-2023 ರವರೆಗೆ ಹಂತಹಂತವಾಗಿ ರೂ 25,000,00/- ಹಣವನ್ನು ಪಿರ್ಯಾದಿದಾರರ ಹೆಚ್ ಡಿ ಎಫ್ ಸಿ  ಬ್ಯಾಂಕ್ ಅಕೌಂಟ್ ನಂಬ್ರ  ನೇದರಿಂದ ಹಣವನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆ. ಹೀಗೆ ಪಿರ್ಯಾದಿದಾರರಿಗೆ ಮೋಸ ಹಾಗೂ ವಂಚನೆ ಮಾಡಿ ಹಣ ವರ್ಗಾವಣೆ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ದೂರಿನ ಸಾರಾಂಶ.

CEN Crime PS

ದಿನಾಂಕ 17-11-2023 ರಂದು ಸೆನ್ ಕ್ರೈಂ ಪೊಲೀಸ್ ಉಪ ನಿರೀಕ್ಷಕರಾದ ಓಂದಾಸ್ ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ಉರ್ವಸ್ಟೋರ್ ಸುಂಕದಕಟ್ಟೆ ರಸ್ತೆಯ ಗುರು ಮಾರುತಿ ವ್ಯಾಯಾಮ ಶಾಲೆಯ ಬಳಿ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಸದ್ರಿ ರಸ್ತೆಯಲ್ಲಿ ನಡೆದಾಡುವ ನಾಗರಿಕರಿಗೆ ಮತ್ತು ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ್ದು, ಮಾಹಿತಿ ಬಂದ ಸ್ಥಳವಾದ ಮಂಗಳೂರು ನಗರದ ಉರ್ವಸ್ಟೋರ್ ಸುಂಕದಕಟ್ಟೆ ರಸ್ತೆಯ ಗುರು ಮಾರುತಿ ವ್ಯಾಯಾಮ ಶಾಲೆಯ ಬಳಿ 14:10 ಗಂಟೆಗೆ ಹೋದಾಗ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಶಾಹೀಲ್  ಪ್ರಾಯ (22) ವಾಸ: ಕುನೀಲ್ ಮನೆ ರಾಮನಂಟೋರಾ ಅಂಚೆ ಪರ್ಪನಂಗಡಿ ಕ್ಯಾಲಿಕಟ್ಟ ಕೇರಳ ರಾಜ್ಯಎಂಬುದಾಗಿ ತಿಳಿಸಿದ್ದು, ಆತನನ್ನು  ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ  ಠಾಣೆಗೆ ತಂದು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

CEN Crime PS

 ದಿನಾಂಕ 17-11-2023 ರಂದು ಸೆನ್ ಕ್ರೈಂ ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ರವರಿಗೆ ಬಂದ ಮಾಹಿತಿಯಂತೆ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ್ದು ಮಾಹಿತಿ ಬಂದ ಸ್ಥಳವಾದ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ 14:40 ಗಂಟೆಗೆ ಹೋದಾಗ ಒಬ್ಬಾತನು ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಸಾದೀಕ್ ಕೆ ಟಿ ಪ್ರಾಯ(23) ವಾಸ: ಪೋಂಕನಾಥ್ ಮನೆ ಪುಲಿಕುಂನ್ನು ಚೆಲ್ಮಂಬ್ರಾ ಅಂಚೆ ಮಲಪುರಂ  ಜಿಲ್ಲೆ,ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು, ಆತನನ್ನು  ವಶಕ್ಕೆ ಪಡೆದು 15-00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಕೋರಿಕೆ ಪತ್ರವನ್ನು ತಯಾರಿಸಿ ಸಿಬ್ಬಂಧಿಗಳ ಸಹಾಯದಿಂದ ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರದೊಂದಿಗೆ  ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 18-11-2023 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080