ಅಭಿಪ್ರಾಯ / ಸಲಹೆಗಳು

Crime Report in : CEN Crime PS 

ಪಿರ್ಯಾದುದಾರರು ಹಿರಿಯ ನಾಗರೀಕರಾಗಿದ್ದು ಮನೆಯಲ್ಲಿಯೇ ಇರುವುದಾಗಿದೆ. ಪಿರ್ಯಾದುದಾರರು ತಮ್ಮ ಬಾಬ್ತು ಅಪಾರ್ಟ್ ಮೆಂಟ್ ಒಂದು ಖಾಲಿ ಇದ್ದು ಸದ್ರಿ ಅಪಾರ್ಟ್ ಮೆಂಟ್ ನ ಬಗ್ಗೆ MAGIC BRICK  ನಲ್ಲಿ ಜಾಹೀರಾತು ನೀಡಿರುತ್ತಾರೆ.ದಿನಾಂಕ 08-12-2023 ರಂದು ಯಾರೋ ಅಪರಿಚಿತ ವ್ಯಕ್ತಿ ತನ್ನ ದೂರವಾಣಿ ಸಂಖ್ಯೆ-9256568140 ಮತ್ತು 7077619515 ನೇದರಿಂದ ಪಿರ್ಯಾದುದಾರರ ದೂರವಾಣಿ ಸಂಖ್ಯೆ ನೇದಕ್ಕೆ ಕರೆ ಮಾಡಿ ತಾನು ಆಶೀಶ್ ಕುಮಾರ್ ಹಾಗೂ ತಾನು ಭಾರತೀಯ ಸೇನೆಯಲ್ಲಿ  ನೌಕರನಾಗಿರುವುದಾಗಿ ಪಿರ್ಯಾದುದಾರರಿಗೆ ತಿಳಿಸಿ MAGIC BRICK ನಲ್ಲಿ ಪಿರ್ಯಾದುದಾರರ ಅಪಾರ್ಟ್ ಮೆಂಟ್ ಖಾಲಿ ಇರುವ ಬಗ್ಗೆ ಮಾತನಾಡಿ ನಂತರ ಬಾಡಿಗೆ ವಿಷಯವಾಗಿ ಪಿರ್ಯಾದುದಾರರಲ್ಲಿ ವಿಚಾರಿಸಿಕೊಂಡು ನಂತರ ಮುಂಗಡ ಹಣ ಪಾವತಿಸುವುದಾಗಿಯೂ ಹಾಗೂ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ಪಿರ್ಯಾದುದಾರರಿಗೆ ಹಣ ಸಂದಾಯವಾಗುವುದಾಗಿ ತಿಳಿಸಿ ಮೊದಲಿಗೆ 1/-ರೂ,5/-ರೂ ,49,999/-ರೂ ಮತ್ತು 49994/-ರೂಗಳ UPI CODE ಗಳನ್ನು ಪಿರ್ಯಾದುದಾರರಿಗೆ ವಾಟ್ಸ ಆಪ್ ಮುಖಾಂತರ ಕಳುಹಿಸಿರುತ್ತಾರೆ ನಂತರ ಪಿರ್ಯಾದುದಾರರು ಸದ್ರಿ ಸಂಗತಿಯನ್ನು ಸತ್ಯವೆಂದು ಭಾವಿಸಿ ತಮ್ಮ ಬಾಬ್ತು ಹೆಚ್ ಡಿ ಎಫ್ ಸಿ ಬ್ಯಾಂಕ್, ಮಲ್ಲೇಶ್ವರಂ ಶಾಖೆ ಖಾತೆ ನಂಬ್ರ ನೇದರಿಂದ ಗೂಗಲ್ ಪೇ ಮುಖಾಂತರ ದಿನಾಂಕ 08-12-2023 ರಂದು 1,41,999/-ರೂಪಾವತಿಸಿರುತ್ತಾರೆ ನಂತರ ದಿನಾಂಕ 09-12-2023 ರಂದು ಸದ್ರಿ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಪಿರ್ಯಾದುದಾರರಿಗೆ ಕರೆ ಮಾಡಿ ಅದೇ ರೀತಿ ಮತ್ತೊಮ್ಮೆ ಪಾವತಿ ಮಾಡಬೇಕೆಂದು ಹಾಗೂ ಸದ್ರಿ ಹಣ ಪಿರ್ಯಾದುದಾರರಿಗೆ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ದೊರೆಯುವುದಾಗಿ ನಂಬಿಸಿದಂತೆ ಪಿರ್ಯಾದುದಾರರು ಅದೇ ರೀತಿ  ಐ ಎಂ ಪಿ ಎಸ್ ಮುಖಾಂತರ 1,00,000/-ರೂ ಹಣ ಪಾವತಿಸಿರುತ್ತಾರೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮುಖಾಂತರ ಆಶೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ತಾನು ಆರ್ಮಿ ಯಲ್ಲಿ ನೌಕರನೆಂದು ಪಿರ್ಯಾದುದಾರರಿಗೆ ನಂಬಿಸಿ ಆನ್ ಲೈನ್ ಮುಖಾಂತರ ಒಟ್ಟು 2,41,999/- ರೂಗಳನ್ನು ಆನ್ ಲೈನ್ ಮುಖಾಂತರ ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ, ಸದ್ರಿ ಅಪರಿಚಿತ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿದೆ.

CEN Crime PS

ಪಿರ್ಯಾದಿ ಲಾಜಿಸ್ಟಿಕ್ ವ್ಯವಹಾರವನ್ನು ನಡೆಸುತ್ತಿದ್ದು, ತನ್ನ ವ್ಯವಹಾರಕ್ಕೆ ಜೆಪ್ಪು ಮಾರ್ನಮಿಕಟ್ಟೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ನಂಬ್ರ  ನೇದ್ದನ್ನು ಹೊಂದಿರುತ್ತಾರೆ. ಸದ್ರಿ ಖಾತೆಯ ಬಾಬ್ತು 15 ಹಾಳೆಗಳಿರುವ ಚೆಕ್ ಪುಸ್ತಕವನ್ನು 2022ರ ಪೆಭ್ರವರಿ ತಿಂಗಳಲ್ಲಿ ಪಡೆದು ಒಂದು ಹಾಳೆಯನ್ನು ಮಾತ್ರ ಉಪಯೋಗಿಸಿ, ಉಳಿದ ಚೆಕ್ ನ್ನು ತನ್ನ ಬಳಿ ಇಟ್ಟುಕೊಂಡಿದ್ದು,  2023ನೇ ಡಿಸೆಂಬರ್ ತಿಂಗಳ 4 ಮತ್ತು 6ನೇ ತಾರೀಕಿನಂದು  ಪಿರ್ಯಾದಿಯ ಖಾತೆ ಹೊಂದಿರುವ ಜೆಪ್ಪು ಮಾರ್ನಮಿಕಟ್ಟೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿಗೆ ನಗದೀಕರಣಕ್ಕಾಗಿ  2 ಕೋಟಿ, ಮತ್ತು 2 ಕೋಟಿ ಹಾಗೂ 2 ಕೋಟಿ ಎಪ್ಪತ್ತೈದು ಲಕ್ಷ ನಮೂದಿಸಿದ 3 ಚೆಕ್ ಬಂದಿರುವ ವಿಚಾರ ಪಿರ್ಯಾದಿಗೆ ತಿಳಿದು ಬ್ಯಾಂಕಿನಲ್ಲಿ ವಿಚಾರಿಸಿದ್ದಲ್ಲಿ ಆಪಾದಿತರಾದ ಕೇರಳ ರಾಜ್ಯದ ಎರ್ನಾಕುಲಂನ ಅರುವಪಾರ ನಡುಕುಡಿ ವಾಸಿ ಆಪಾದಿತರಾದ ಗೋಪಕುಮಾರ್ ಎನ್.ಜಿ ಮತ್ತು ಅವರ ಸಹೋದರ ಸುಮೇಶ್ ಕುಮಾರ್ ಎನ್.ಜಿ ಎಂಬವರು ಈ ಹಿಂದೆ ಪಿರ್ಯಾದಿಯ ಮತ್ತು ಆಪಾದಿತರ ಮಧ್ಯೆ ಜಾಗದ ತಕಾರರಿನ ದ್ವೇಷದಿಂದ ಪಿರ್ಯಾದಿಯ ಕಳೆದು ಹೋಗಿರುವ ಚೆಕ್ ನ್ನು ಯಾವುದೋ ಮಾರ್ಗದಿಂದ ಸಂಗ್ರಹಿಸಿ ಪಿರ್ಯಾದಿಗೆ ನಷ್ಟವನ್ನುಂಟು ಮಾಡಿ ಅಕ್ರಮವಾಗಿ ದುರ್ಲಾಭವನ್ನು ಪಡೆಯುವ ದುರುದ್ದೇಶದಿಂದ ಪಿರ್ಯಾದಿಯ ಸಹಿಯನ್ನು ಫೋರ್ಜರಿ ಮಾಡಿದ ಚೆಕ್ ನ್ನು  ಬಳಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

CEN Crime PS

ಪಿರ್ಯಾದಿದಾರರಾದ ತಸ್ಲೀಂ ಆರೀಫ್ ಅಬ್ದುಲ್ ಖಾದರ್ ಮತ್ತು ಅಫೀಝ್ ಅಹಮ್ಮದ್ ಎಂಬವರು ಮಸ್ಕತ್ ದೇಶದಲ್ಲಿ ಟ್ರಾನ್ಸ್ ಫೋರ್ಟ್ ಸರ್ವೀಸ್ ಸ್ಟೇಷನ್ ಫಿಶ್ ಅಕ್ವೇರಿಯಂ ವ್ಯವಹಾರವನ್ನು ಹೊಂದಿದ್ದು ಜಂಟಿ ಮಾಲಿಕತ್ವದಲ್ಲಿ ಉದ್ಯಮವನ್ನು ನಡೆಸಿಕೊಂಡಿರುತ್ತಾರೆ. ಪ್ರಕರಣದ ಆಪಾದಿತ ಮೊಹಮ್ಮದ್ ಹನೀಫ್ ಸಿರಿಯಾ @ ಸಾದಿಕ್ ಪಿರ್ಯಾದಿದಾರರ ವ್ಯವಹಾರದಲ್ಲಿ ಸಹಭಾಗಿತ್ವ ಜವಬ್ದಾರಿಯೊಂದಿಗೆ ಸೇರಿಕೊಂಡು ಮಸ್ಕತ್ ನಲ್ಲಿ ಪಿರ್ಯಾದಿದಾರರ ಜೊತೆಯಲ್ಲಿ ವ್ಯವಹಾರವನ್ನು ನಡೆಸಿಕೊಂಡಿದ್ದು ಪಿರ್ಯಾದಿದಾರರಿಗೆ ಭಾರತೀಯ ಕರೆನ್ಸಿಯ ಮೌಲ್ಯವಾದ 1 ಕೋಟಿ ಮೊತ್ತವನ್ನು ಬಾಕಿ ಇರಿಸಿ ವಿದೇಶದಿಂದ ಪರಾರಿಯಾಗಿರುತ್ತಾನೆ. ಹಣ ಬಾಕಿ ಇರಿಸಿದ ಬಗ್ಗೆ ಪಿರ್ಯಾದಿ ಆಪಾದಿತನಲ್ಲಿ ಕೇಳಿದ್ದಲ್ಲಿ ದಿನಾಂಕ 10-01-2023 ರಂದು ಬೆಳಿಗ್ಗೆ 11-30 ಗಂಟೆಗೆ ಮಂಗಳೂರಿನಲ್ಲಿರುವ ಆರ್ಶಿಯಾ ವಿಲ್ಲಾ, ವಾಸ್ ಲೇನ್, 1ನೇ ಕ್ರಾಸ್, ಯೂನಿಟಿ ಆಸ್ಪತ್ರೆಯ ಬಳಿಯಲ್ಲಿರುವ ಮನೆಯಲ್ಲಿ ಪಿರ್ಯಾದಿ ಇರುವಾಗ ಮನೆಗೆ ಬಂದ ಆಪಾದಿತನು ಬಾಕಿ ಇರುವ  ಹಣದ ಬಗ್ಗೆ ಇನ್ನು ಮುಂದಕ್ಕೆ ಕೇಳಿದ್ದಲ್ಲಿ ಪಿರ್ಯಾದಿಯನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ನೀಡಿ ಹೋಗಿದ್ದು ಆಪಾದಿತ ಈವರೆಗೆ ಪಿರ್ಯಾದಿಗೆ ಹಣ ನೀಡದೇ ವಂಚಿಸಿರುವುದಾಗಿದೆ ಎಂಬಿತ್ಯಾದಿ.

Mangalore North PS

ಪಿರ್ಯಾದಿ Mohammed Sinan ದಾರರು ಬಂದರಿನ ಪ್ಲಾಸ್ಟಿಕ್ ಲೈನ್ ಅಂಗಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಸದ್ರಿ ಅಂಗಡಿಯ ಮಾಲಕರಾದ ಮೊಹಮ್ಮದ್ ಮನ್ಸೂರ್ ಎಂಬವರು ಸಿಟಿಯೊಳಗಡೆ ಸಾಮಾನುಗಳನ್ನು ಕೊಂಡು ಹೋಗಲು KA-19-EC-9557 ನೇ ಆಕ್ಟಿವಾ ಹೋಂಡಾವನ್ನು ಉಪಯೋಗಿಸಲು ಕೊಟ್ಟಿದ್ದರು. ದಿನಾಂಕ 01/12/2023 ರಂದು ಪಿರ್ಯಾದಿದಾರರು ಎಂದಿನಂತೆ ಪ್ಲಾಸ್ಟಿಕ್ ಲೈನ್ ಅಂಗಡಿಯಲ್ಲಿ ಕೆಲಸ ಮುಗಿಸಿ ಸಂಜೆ 07.00 ಗಂಟೆ ಸುಮಾರಿಗೆ ಮಂಗಳೂರು ಉತ್ತರ ದಕ್ಕೆಯ ಬಳಿ ಇರುವ ಅಂಗಡಿ ಮಾಲಕರ ಪ್ಲಾಸ್ಟಿಕ್ ಸಾಮಾಗ್ರಿಗಳಿರುವ ಗೋಡಾನ್ ಎದುರಿಗೆ KA-19-EC-9557 ನೇ ಹೋಂಡಾ ಆಕ್ಟಿವಾ ವಾಹನವನ್ನು ಪಾರ್ಕ್ ಮಾಡಿ ಪಿರ್ಯಾದಿದಾರರು ಮತ್ತು ಇತರೆ ಕೂಲಿ ಕೆಲಸಗಾರರು ಮನೆಗೆ ಹೋಗಿದ್ದು. ದಿನಾಂಕ 02/12/2023 ರಂದು ಬೆಳಿಗ್ಗೆ 09.30 ಗಂಟೆಗೆ ಪಿರ್ಯಾದಿದಾರರು ಕೆಲಸಕ್ಕೆಂದು ಅಂಗಡಿಗೆ ಬಂದು ಉತ್ತರ ದಕ್ಕೆಯ ಬಳಿ ಇರುವ ಗೋಡಾನ್ ಹತ್ತಿರ KA-19-EC-9557 ನೇ ಹೋಂಡಾ ಆಕ್ಟಿವಾ ವಾಹನವನ್ನು ನೋಡಿದಾಗ ನಿಲ್ಲಿಸಿದ ಜಾಗದಿಂದ ಕಾಣೆಯಾಗಿರುತ್ತದೆ. ಸದ್ರಿ ವಾಹನದ ಪತ್ತೆಯ ಬಗ್ಗೆ ದಕ್ಕೆ, ಮಂಗಳೂರಿನ ದಕ್ಷಿಣ ದಕ್ಕೆ, ಮೀನು ಮಾರ್ಕೆಟ್, ಬದ್ರಿಯಾ ಜಂಕ್ಷನ್ ಪರಿಸರ, ರೈಲ್ವೆ ಸ್ಟೇಷನ್ ಮುಂತಾದ ಕಡೆಗೂ ಹುಡುಕಾಡಿದರೂ ಪತ್ತೆಯಾಗದೆ ಇದ್ದು.  ಸದ್ರಿ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ದೃಢಪಟ್ಟಿರುವುದರಿಂದ ಈ ದಿನ ಠಾಣೆಗೆ ಬಂದು ದೂರು ನೀಡುತ್ತಿದ್ದು ಸದ್ರಿ ವಾಹನವು 2011 ನೆ ಇಸ್ವಿಯ ಮೊಡೆಲ್ ಆಗಿದ್ದು ವಾಹನದ ಬೆಲೆ 20,000/- ರೂ ಆಗಬಹುದು ಸದ್ರಿ ದ್ವಿ ಚಕ್ರ ವಾಹನವನ್ನು ಹಾಗೂ ಕಳುವು ಮಾಡಿಕೊಂಡು ಹೋದ ವ್ಯಕ್ತಿಯನ್ನು ಪತ್ತೆ ಮಾಡುವರೇ ವಿನಂತಿ ಎಂಬಿತ್ಯಾದಿ.

Konaje PS

ದಿನಾಂಕ: 16-12-2023 ರಂದು ಬೆಳಿಗ್ಗೆ 09-00 ಗಂಟೆಗೆ  ಕೊಣಾಜೆ ಪೊಲೀಸ್ ಠಾಣಾ  ಸಿಬ್ಬಂದಿ ಹೆಚ್ ಸಿ ಗಣೇಶ್ ಕುಮಾರ್ ರವರಿಗೆ ಮಂಗಳೂರು ತಾಲೂಕು ಹರೇಕಳದ ಗ್ರಾಮದ ರಾಜಗುಡ್ಡೆ ಗುಡ್ಡೆ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಇಸ್ಪೀಟ್ ಎಂಬ ನಸೀಬಿನ ಆಟವನ್ನು ಆಡುತ್ತಿದ್ದು, ಸದ್ರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ವರದಿಯನ್ನು ಸ್ವೀಕರಿಸಿಕೊಂಡು ತಕ್ಷೀರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳು ಜುಗಾರಿ ನಸೀಬಿನ ಆಟಕ್ಕೆ ಬಳಸಿದ ಸೊತ್ತುಗಳಾದ  ನಗದು ಹಣ ರೂ. 6750/- , ಇಸ್ಪೀಟ್ ಎಲೆಗಳು ಒಟ್ಟು-52, ನೀಲಿ ಬಣ್ಣದ ಪ್ಲಾಸ್ಟಿಕ್ ಟರ್ಪಾಲು, ಹೊಸದಾದ ಇಸ್ಪೀಟ್ ಎಲೆಗಳ ಪ್ಯಾಕೇಟ್ ಗಳು -5, ಮೊಬೈಲ್ ಪೋನ್ ಗಳು -3 ಮತ್ತು ಬಿಳಿ ಬಣ್ಣದ ಆಕ್ಟಿವಾ  6 ಜಿ ಡಿಎಲ್ ಎಕ್ಸ್ ಸ್ಕೂಟರ್ ನಂಬ್ರ: ಕೆಎ19-ಹೆಚ್ ಕೆ 7088  ನೇದನ್ನು ಸ್ವಾಧೀನಪಡಿಸಿಕೊಂಡು ಸೊತ್ತುಗಳೊಂದಿಗೆ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದು ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Mangalore East PS

ಪಿರ್ಯಾದಿದಾರರಾದ ರಾಜೇಂದ್ರ.ಬಿ ಮಂಗಳೂರು ನಗರದ ಸಿ.ಸಿ.ಬಿ ಘಟಕದ ಪೊಲೀಸ್ ಉಪನಿರೀಕ್ಷಕರುರಾಗಿದ್ದು, ದಿನಾಂಕ”: 17-12-2023 ರಂದು ಸಂಜೆ 4-00 ಗಂಟೆಗೆ ಸಿಸಿಬಿ ಕಚೇರಿಯಲ್ಲಿದ್ದ ಸಮಯ ಮಂಗಳೂರು ನಗರದ ಕಂಕನಾಡಿ ಎಂಬಲ್ಲಿ  ಕಂಕನಾಡಿಯಿಂದ ಪಳ್ನೀರು ಕಡೆಗೆ ಹೋಗುವ ರಸ್ತೆಯಲ್ಲಿರುವ ಪಾಸ್ಟ್ ಪುಡ್ ಅಂಗಡಿಗಳ ಬಳಿಯಲ್ಲಿ ಒಬ್ಬನು ಖೋಟಾ ನೋಟುಗಳನ್ನು ವಶದಲ್ಲಿರಿಸಿಕೊಂಡು ಚಲಾವಣೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಮಾಹಿತಿಯೊಂದು ಲಭಿಸಿದ್ದು, ಸಂಜೆ: 4-30 ಗಂಟೆಗೆ ಮಾಹಿತಿ ಬಂದ ಸ್ಥಳವಾದ  ಕಂಕನಾಡಿ ಎಂಬಲ್ಲಿ ಸಂತ ಜೋಸೇಪ್ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹೋದಾಗ ಅಲ್ಲಿ ರಮೇಶ್ ಎಂಬವರ ಪಾಸ್ಟ್ ಪುಡ್ ಸ್ಟಾಲ್ ಹತ್ತಿರ ನಿಂತು ಕೊಂಡಿದ್ದ ಪ್ರಶ್ವಿತ್ ಪ್ರಾಯ: 25 ವರ್ಷ ವಾಸ;ಅಬುಪಡ್ಪು,ಕೀರ್ತೆಶ್ವರದ ಹತ್ತಿರ, ಮಂಜೇಶ್ವರ್ ಪೋಸ್ಟ್ ಮತ್ತು ತಾಲೂಕು ಕೇರಳ ರಾಜ್ಯ ಎಂಬಾತನನ್ನು ಸಿಬ್ಬಂದಿಯವರ ಮುಖಾಂತರ ವಶಕ್ಕೆ ಪಡೆದು ವಿಚಾರಿಸಿದಾಗ ತನ್ನಲ್ಲಿ ಭಾರತೀಯ ಕರನ್ಸಿಯ ಖೊಟಾ ನೋಟು ಇದೆ ಅದನ್ನು ಚಲಾವಣೆ ಮಾಡಲು ನಿಂತು ಕೊಂಡಿರುವುದಾಗಿ ತಿಳಿಸಿ .ಆತನನ್ನು ದಿನಾಂಕ: 17-12-2023 ರಂದು ಸಂಜೆ: 4-45  ಗಂಟೆಗೆ ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Kavoor PS

ಪಿರ್ಯಾದಿ JAYAPRAKASH H M ದಾರರು ಎಮ್.ಎನ್.ಸಿ ಕಂಪೆನಿಯಲ್ಲಿ ಕೆಲಸ ಮಾಡುವುದಾಗಿದೆ ಇವರು ಮೊಬೈಲ್ ನಂ-ನೇ ದನ್ನು ಹೊಂದಿರುತ್ತಾರೆ ಪಿರ್ಯಾದಿದಾರರು AXIS BANK  ಕೋರಮಂಗಲ ಬ್ಯ್ರಾಂಚ್ ಅಕೌಂಟ್ ನಂಬ್ರ-ನೇ ದನ್ನು ಹೊಂದಿರುತ್ತಾರೆ ಈ ಮೊಬೈಲ್ ನಂಬ್ರದಲ್ಲಿ ವಾಟ್ಸಪ್ ಮತ್ತು ಸದ್ರಿ ಬ್ಯಾಂಕ್ ಖಾತೆಯಲ್ಲಿ ಪೇಟಿಎಮ್ ಯು.ಪಿ.ಐ ಐ.ಡಿ ಯನ್ನು ಹೊಂದಿರುತ್ತಾರೆ ದಿನಾಂಕ-27-11-2023 ರಂದು ಪಿರ್ಯಾದುದಾರರ ಮೊಬೈಲ್ ನಲ್ಲಿ JP MORGAN TRAIDING ಎಂಬ ವ್ಯಾಟ್ಸ್ ಅಪ್ ಗ್ರುಪ್  ಕ್ರಿಯೇಟ್ ಆಗಿದ್ದು ಈ ವ್ಯಾಟ್ಸಪ್ ಗ್ರುಪ್ ಗೆ GC GOLD ಆ್ಯಪ್ ಡೌನ್ ಲೋಡ್ ಮಾಡಿ ಎಂದು ಲಿಂಕ್ ಕಳುಹಿಸಿದ್ದು ಡೌನ್ ಲೋಡ್ ಮಾಡಿದಾಗ ಈ  ಗ್ರುಪ್ ನಲ್ಲಿದ್ದವರು ಸ್ಟಾಕ್ ಖರೀದಿ ಮಾಡುವ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಹಾಗೂ ಹಣವನ್ನು ಹಾಕಿ ಸ್ಟಾಕ್ ಖರೀದಿ ಮಾಡಿ ಎಂದು ಸೂಚನೆ ನೀಡಿದಾಗ ದಿನಾಂಕ-4-12-2023 ರಂದು ಪಿರ್ಯಾದಿದಾರರು ಬಾಡಿಗೆ ಮನೆಯಲ್ಲಿದ್ದಾಗ ಸ್ಟಾಕ್ ಖರೀದಿ ಮಾಡಲು GC GOLD ಆ್ಯಪ್ ಗೆ ಪೇ.ಟಿಎಮ್ ಮೂಲಕ ರೂ 5000 ಹಣವನ್ನು ಕಳುಹಿಸಿರುತ್ತಾರೆ ಈ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನ ಪಟ್ಟಂತೆ  ರೂ 5035 ಹಣ ಅಖೌಂಟ್ ಗೆ ಬಂದಿರುತ್ತದೆ ನಂತರ ಓ.ಟಿ.ಪಿ ನಂಬ್ರ ಕಳುಹಿಸಿದಂತೆ ಓಕೆ ಕೊಟ್ಟಿದ್ದರಿಂದ ದಿನ಻ಂಕ-5-12-2023 ರಂದು ಕೂಡಾ ಅಕೌಂಟ್ ನಿಂದ ರೂ 50.000 ಹಣ ದಿನಾಂಕ-6-12-2023 ರಂದು ರೂ 50,000 ಹಣ ಮತ್ತು 75,000 ರೂ ಹಣವು ಸದ್ರಿ ಆ್ಯಪ್ ಗೆ ಕಟಾವು ಆಗಿರುತ್ತದೆ ಪಿರ್ಯಾದಿದಾರರ ಅಕೌಂಟ್ ನಿಂದ ಒಟ್ಟು ರೂ 1,75,000 ರೂ ಹಣ GC GOLF APP ನವರು ಜಮಾ ಮಾಡಿರುತ್ತಾರೆ ಈ ದಿನಗಳಲ್ಲಿ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನ ಪಟ್ಟರೂ ಸಾದ್ಯವಾಗದೇ ಇರುತ್ತದೆ ಈ ಮೋಸದ ಬಗ್ಗೆ  ನಾನು ಕೂಡಲೆ 1930 ಗೆ ಮಾಹಿತಿ ನೀಡಿ ವರದಿ ಪಡೆದಿರುತ್ತಾರೆ ಹಾಗೂ KSP ಆ್ಯಪ್ ನಲ್ಲಿ ದೂರು ದಾಖಲು ಮಾಡಿರುತ್ತಾರೆ ಆದುದ್ದರಿಂದ ಸ್ಟಾಕ್ ಎಕ್ಸ್ ಚೇಂಜ್ ಗೆ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿ GC GOLD APP ಕ್ರಿಯೇಟ್ ಮಾಡಿ ಪಿರ್ಯಾದಿದಾರರ ಖಾತೆಯಿಂದ ರೂ 1,75,000(ಒಂದು ಲಕ್ಷ ಎಪ್ಪತ್ತೈದು ಸಾವಿರ ) ಹಣವನ್ನು ಮೋಸದಿಂದ ಜಮಾ ಮಾಡಿಕೊಂಡು ಮೋಸ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 18-12-2023 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080