ಅಭಿಪ್ರಾಯ / ಸಲಹೆಗಳು

Mangalore East Traffic PS        

ಪಿರ್ಯಾದಿದಾರರಾದ ಶಾಲೆಟ್ ಗೋವಿಯಸ್, ಪ್ರಾಯ-72 ವರ್ಷ ಎಂಬವರು ನಿನ್ನೆ ದಿನ ದಿನಾಂಕ: 18-01-2024 ರಂದು ರೈಲ್ವೆ ಸ್ಟೇಷನ್ ಪರಿಸರದಲ್ಲಿರುವ ನಾಯಿಗಳಿಗೆ ಅನ್ನ ಹಾಕಿ ವಾಪಾಸು ಮಸೀದಿ ರಸ್ತೆಯಿಂದಾಗಿ ಮಿಲಾಗ್ರೀಸ್ ಕಡೆಗೆ ಹೋಗುವರೇ ರಸ್ತೆ ದಾಟುತ್ತಿದ್ದಾಗ ಸಮಯ ಸುಮಾರು ರಾತ್ರಿ 08:10 ಗಂಟೆಗೆ ಅತ್ತಾವರ  ಕಡೆಯಿಂದ ರೈಲ್ವೆ ಸ್ಟೇಷನ್ ಕಡೆಗೆ ಸಾಗಿರುವ ಸಾರ್ವಜನಿಕ ರಸ್ತೆಯಲ್ಲಿ KA-19-HQ-0941 ನೇ ಸ್ಕೂಟರ್ ಸವಾರೆ ಅಮೀನಾ ಸಂಶೀರ ಎಂಬವಳು ತನ್ನ ಬಾಬ್ತು ಸ್ಕೂಟರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ, ಎಡಕೈಯ ಮುಂಗೈ, ಎಡಕಾಲಿನ ಮೊಣಗಂಟಿಗೆ, ಎದೆಯ ಬಳಿ, ಹೊಟ್ಟೆಯ ಬಳಿ, ಎಡಕಾಲಿನ ಪಾದಕ್ಕೆ ಗುದ್ದಿದ ನಮೂನೆಯ ಒಳನೋವು ಆಗಿದ್ದು, ಅಪಘಾತಪಡಿಸಿದ ಸ್ಕೂಟರ್ ಸವಾರಳು ಪಿರ್ಯಾದಿದಾರರನ್ನು ಅಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಜ್ಯೋತಿ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿ ಮನೆಗೆ ಕಳುಹಿಸಿಕೊಟ್ಟಿರುವುದಾಗಿದೆ ಈ ಅಪಘಾತಕ್ಕೆ KA-19-HQ-0941 ನೇ ಸ್ಕೂಟರ್ ಸವಾರೆ ಅಮೀನ ಸಂಶೀರರವರ ನಿರ್ಲಕ್ಷತನ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಅಪಘಾತಪಡಿಸಿದ ಸ್ಕೂಟರ್ ಸವಾರೆಯು ಪಿರ್ಯಾದಿದಾರರ ಆಸ್ಪತ್ರೆಯ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು, ನಂತರ ಈ ದಿನ ಆಸ್ಪತ್ರೆಯ ವೆಚ್ಚವನ್ನು ನೀಡಲು ನಿರಾಕರಿಸಿರುವುದರಿಂದ ಠಾಣೆಗೆ ಬಂದು ತಡವಾಗಿ ದೂರನ್ನು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

 

Traffic North Police

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Lawrence Salvadore Sequeira  ಇವರು  ದಿನಾಂಕ 18.01.2024 ರಂದು ಸಂಜೆ ವೇಳೆಗೆ ಕೀರೆಂ ಚರ್ಚ್ ನಿಂದ ರೇಷ್ಮಾ ಕೇಬಲ್ ಶಾಪಿಗೆ ನಡೆದುಕೊಂಡು ಹೋಗುತ್ತಾ ಸಂಜೆ ಸಮಯ ಸುಮಾರು 6:15 ಗಂಟೆಗೆ ಧಾಮಸ್ ಕಟ್ಟೆ ಚರ್ಚ್ ಎದುರಿನ ರಸ್ತೆಯನ್ನು ದಾಟಿ ರಸ್ತೆಯ ಅಂಚನ್ನು ತಲುಪಿದಾಗ ತೊಡಮಾ ರಸ್ತೆ ಕಡೆಯಿಂದ ಸ್ಕೂಟರ್ ನಂಬ್ರ KA-20EX-3567  ನೇಯದನ್ನು ಅದರ ಸವಾರ ಪ್ರಸ್ತುತ್ ಶೆಟ್ಟಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಎಡಕಾಲಿನ ಕೋಲು ಕಾಲಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ದೇಹದ ಇತರ ಕಡೆ ತರಚಿದ ರೀತಿಯ ಗಾಯವಾಗಿದ್ದು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ . ಈ ಅಪಘಾತದಿಂದ ಸ್ಕೂಟರ್ ಸವಾರ ಪ್ರಸ್ತುತ್ ಶೆಟ್ಟಿರವರ ಎಡಕೈ ತೋರು ಬೆರಳಿಗೆ ಗುದ್ದಿದ ಗಾಯ, ದೇಹದ ಇತರ ಕಡೆ ತರಚಿದ ಗಾಯವಾಗಿರುತ್ತದೆ ಎಂಬಿತ್ಯಾದಿ.

 

Traffic North Police Station   

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Ganesh N ಇವರ ತಾಯಿ ಶ್ರೀಮತಿ ಮಂಜಮ್ಮ (56 ವರ್ಷ)  ಎಂಬವರು ದಿನಾಂಕ 18-01-2024 ರಂದು ಸಂಜೆ ವೇಳೆಗೆ ಶ್ರೀನಿವಾಸ ಆಸ್ಪತ್ರೆಯಿಂದ ಮುಕ್ಕ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗುತ್ತಾ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ದ್ವಾರದ ಎದುರು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯನ್ನು ಸಂಜೆ ಸಮಯ ಸುಮಾರು 5:00 ಗಂಟೆಗೆ ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಕಾರು ನಂಬ್ರ KA-47-9191  ನೇಯದನ್ನು ಅದರ ಚಾಲಕ ಶೇಖರ ಶೇರುಗಾರ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಾಯಿ ಮಂಜಮ್ಮರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಂಜಮ್ಮರವರು ಡಾಮಾರು ರಸ್ತೆಗೆ ಬಿದ್ದು ಅವರ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಭುಜಕ್ಕೆ ಗುದ್ದಿದ ರೀತಿಯ ಒಳಗಾಯ, ಹಣೆಗೆ ಚರ್ಮ ಹರಿದ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುತ್ತಾರೆ  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 19-01-2024 08:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080