ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore East Traffic PS         

ಈ ದಿನ ದಿನಾಂಕ: 19-02-2024 ರಂದು ಪಿರ್ಯಾದಿ HARISH KOTIAN ಇವರ ತಾಯಿ ಶ್ರೀಮತಿ. ಸರಸ್ವತಿ ರವರು ಎಂದಿನಂತೆ ಬೆಳಿಗ್ಗೆ ಪಾಂಡೇಶ್ವರದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಯ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 09-30 ಗಂಟೆಗೆ ಪಾಂಡೇಶ್ವರದ ಹ್ಯಾಬಿಟ್ಯಾಟ್ ಎಂಬ ಹೆಸರಿನ ಕಟ್ಟಡದಲ್ಲಿರುವ ಪ್ರೆಸ್ಟೀಜ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಅಂಗಡಿ ಕಟ್ಟಡದ ಎದುರಿನಲ್ಲಿರುವ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಪ್ರೆಸ್ಟೀಜ್ ಎಂಟರ್ ಪ್ರೈಸಸ್ ಅಂಗಡಿಯ ಎದುರಿನ ಇಂಟರ್ ಲಾಕ್ ಜಾಗದಲ್ಲಿ ನಿಲ್ಲಿಸಿದ್ದ KA-70-2525 ನಂಬ್ರದ ಪಿಕ್-ಅಪ್ ವಾಹನವನ್ನು ಅದರ ಚಾಲಕ ಕಮಲಾಕ್ಷ ಎಂಬಾತನು ನಿರ್ಲಕ್ಷ್ಯತನದಿಂದ ಫುಟ್ ಪಾತ್ ಕಡೆಗೆ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಶ್ರೀಮತಿ. ಸರಸ್ವತಿ ರವರಿಗೆ ಢಿಕ್ಕಿ ಪಡಿಸಿದ ಪರಿಣಾಮ ಶ್ರೀಮತಿ. ಸರಸ್ವತಿ ರವರರು ರಸ್ತೆಗೆ ಬಿದ್ದು, ಬಲಕಾಲಿನ ಹೆಬ್ಬೆರಳಿಗೆ ಚರ್ಮ ತರಚಿದ ಗಾಯ ಮತ್ತು ಸೊಂಟಕ್ಕೆ ಗುದ್ದಿದ ಗಂಭೀರ ಸ್ವರೂಪದ ಗಾಯವಾದವರನ್ನು ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ಸಾಗಿಸಲ್ಪಟ್ಟು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಸಾಗಿಸಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ.

 

Bajpe PS

ಪಿರ್ಯಾದಿ Janardhan Gouda ಇವರು ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಖರ್ಚು ಮಾಡಿ ಉಳಿದ ಹಣವನ್ನು ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಟ್ಟು, ಡಬ್ಬಿಯನ್ನು ಮನೆಯ ಒಳಗಡೆ ರೂಮಿನಲ್ಲಿರುವ ಮರದ ಟೇಬಲ್ ನ ಲಾಕರ್ ಒಳಗಡೆ ಇಟ್ಟಿರುತ್ತಾರೆ. ಅದರ ಬೀಗದ ಕೀ ಯನ್ನು ಹಾಲ್ ನಲ್ಲಿರುವ ಟಿವಿಯ ಬಳಿ ಇಡುತ್ತಿದ್ದರು. ಸದ್ರಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಸುಮಾರು 40,000 ರೂಪಾಯಿ ಹಣ ಇರುತ್ತದೆ.  ದಿನಾಂಕ 13.02.2024 ರಂದು ಪಿರ್ಯಾದಿದಾರರು ಕೆಲಸಕ್ಕೆ ಹೋಗಿರುತ್ತಾರೆ. ಅದೇ ದಿನ ಸುಮಾರು 12.45 ಗಂಟೆಗೆ ಪಿರ್ಯಾದಿದಾರರ ಹೆಂಡತಿಯು ಹಾಗೂ ಅವರ ಮಗಳೊಂದಿಗೆ ದೇವಸ್ಥಾನಕ್ಕೆ ಹೋಗಿ ಸುಮಾರು 14.30 ಗಂಟೆಗೆ ವಾಪಾಸು ಮನೆಗೆ ಬಂದಿದ್ದು, ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್ ರೂಮಿನಲ್ಲಿ ವಸ್ತುಗಳು ಹಾಗೂ ಇನ್ನೊಂದು ರೂಮಿನಲ್ಲಿದ್ದ ಬಟ್ಟೆಗಳು ಚೆಲ್ಲಪಿಲ್ಲಿಯಾಗಿ ಬಿದ್ದಿದ್ದು, ಲಾಕರ್ ತೆರೆದು ಪ್ಲಾಸ್ಟಿಕ್ ಡಬ್ಬಿಯಲ್ಲಿದ್ದ ಹಣವನ್ನು ಯಾರೋ ಕಳ್ಳರು ಕಳವು ಮಾಡಿ ತೆಗೆದುಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಕಳ್ಳರು ಮನೆಯ ಹಿಂಬದಿಯ ಬಾಗಿಲಿನ ಚಿಲಕದ ನಟ್ ಬೋಲ್ಟ್ ಗಳನ್ನು ಬಿಚ್ಚಿ ಒಳಗಡೆ ಬಂದು ಕಳ್ಳತನ ಮಾಡಿರುತ್ತಾರೆ ಎಂಬಿತ್ಯಾದಿ.

 

Traffic South Police

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ DHANESHA ಇವರು ದಿನಾಂಕ: 17-02-2024 ರಂದು ತನ್ನ ಬಾಬ್ತು KA-02-AE-1261 ನೇ ನಂಬ್ರದ ಕಾರನ್ನು ವರ್ಕಾಡಿಯಿಂದ ಮುಡಿಪು ಸಜೀಪ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸಮಯ ಸುಮಾರು 21-30 ಗಂಟೆಗೆ ನಂದರಪಡ್ಪು ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಮುಡಿಪು ಕಡೆಯಿಂದ ಹೊಸಂಗಡಿ ಕಡೆಗೆ KA-11-C-0290 ನೇ ನಂಬ್ರದ ಲಾರಿಯೊಂದನ್ನು ಅದರ ಚಾಲಕ ಸ್ವಾಮಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಮುಂದಿನ ಬಲಬದಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಹಾಗೂ ಕಾರಿನ ಬಲಭಾಗ ಭಾಗಶಃ ಜಖಂಗೊಂಡಿರುತ್ತದೆ. ಹಾಗೂ ಲಾರಿ ಕೂಡಾ ಜಖಂಗೊಂಡಿರುತ್ತದೆ.ಯಾರಿಗೂ ಗಾಯಗಳಾಗಿರುವುದಿಲ್ಲ. ಲಾರಿ ಚಾಲಕನು ಆರಂಭದಲ್ಲಿ  ಕಾರಿನ ಕರ್ಚಿನ ಹಣವನ್ನು  ನೀಡುವುದಾಗಿ ತಿಳಿಸಿದ್ದು, ನಂತರ ನೀಡಲು ನಿರಾಕರಿಸಿರುವುದರಿಂದ ಈ ದಿನ ದಿನಾಂಕ: 19/02/2024 ರಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ   

 

Traffic South Police

ದಿನಾಂಕ 18-02-2024 ರಂದು ಪಿರ್ಯಾದಿ Ibrahim Khalil ಇವರ ಪರಿಚಯದ ಅಬ್ದುಲ್ ಖಾದರ್ ರವರು  KA19HN9277 ನೇ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಮಂಗಳೂರು ಕಡೆಯಿಂದ  ತೆರಳುತ್ತಿರುವ ಸಮಯ ಬೆಳಿಗ್ಗೆ ವಾಮಂಜೂರು ಚೆಕ್  ಪೊಸ್ಟ್ ಬಳಿ ಸ್ಕೂಟರ್ ನ್ನು ದುಡುಕುತನ  ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಸ್ಕೂಟರ್ ಒಮ್ಮಲೆ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಬ್ದುಲ್ ಖಾದರ್  ರವರ ಎಡಕಾಲಿನ ಮೊಣಗಂಟಿನಲ್ಲಿ ಮೂಳೆ ಮುರಿತ ಗಾಯ, ಎಡಬದಿಯ ಭುಜದಲ್ಲಿ ಮೂಳೆ ಮುರಿತದ ಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ದೇರಳಕಟ್ಟೆ  ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

Konaje PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:19-02-2024 ರಂದು ಪಿರ್ಯಾದಿ Nagaraj S ಇವರು ಇಲಾಖಾ ವಾಹನದಲ್ಲಿ   ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ, ನಾಟೆಕಲ್ ಜಂಕ್ಷನ್  ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ 1) ಜೀತೆಶ್ ಪ್ರಾಯ: 20 ವರ್ಷ ತಂದೆ: ಜಗದೀಶ್ ವಾಸ: ಗಣೇಸ್ ಮಹಲ್ ಪಟ್ಟೋರಿ ಮನೆ ಕೊಣಾಜೆ ಗ್ರಾಮ ಉಳ್ಳಾಲ ತಾಲೂಕು ಮಂಗಳೂರು 2) ಜತೀನ್ ಪ್ರಾಯ: 20 ವರ್ಷ ತಂದೆ: ಶಿವಪ್ಪ, ವಾಸ: ವಗ್ಗ ಮನೆ ಕವಲಪಡು ಗ್ರಾಮ ಬಂಟ್ವಾಳ. ಎಂಬವರನ್ನು ಮುಂದಿನ ಕ್ರಮದ ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ  ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಗಳು TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ.

 

Konaje PS

 ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:19-02-2024 ರಂದು ಪಿರ್ಯಾದಿ Nagaraj S ಇವರು ಇಲಾಖಾ ವಾಹನದಲ್ಲಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ, ಪದಳಿಕಟ್ಟೆ  ಬಳಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ ಪವಾಜ್, ಪ್ರಾಯ: 25 ವರ್ಷ. ತಂದೆ:ಹಸನ್ ವಾಸ:ಪದಳಿಕಟ್ಟೆ ಮನೆ ಊರುಮನೆ ಮಂಜಾನಾಡಿ ಗ್ರಾಮ, ಉಳ್ಳಾಲ ಎಂಬವರನ್ನು ಮುಂದಿನ ಕ್ರಮದ ಮಂಗಳೂರು ದೇರಳಕಟ್ಟೆ ಕೆ. ಎಸ್ ಹೆಗ್ಡೆ  ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಗಳ TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

 

Ullal PS

ಈ ಪ್ರಕರಣದ ಸಾರಾಂಶವೇನೆಂದರೆ ಪ್ರಕರಣದ ಪಿರ್ಯಾದಿ Prakash Hebbar ಇವರ ತಮ್ಮ ದಿ: ಸತೀಶ್ ಹೆಬ್ಬಾರ್ ರವರ ಮಗಳು ಕು: ಚೈತ್ರಾ ಹೆಬ್ಬಾರ್ ಎಂಬವಳು ಉಳ್ಳಾಲ ಠಾಣಾ ವ್ಯಾಪ್ತಿಯ ಪನೀರ್ ನಿಟ್ಟೆ ಯೂನಿವರ್ ಸಿಟಿ ಯಲ್ಲಿ  MSC ಮುಗಿಸಿ  PHD Food Security ವಿದ್ಯಾಬ್ಯಾಸ ಮಾಡುತ್ತಿದ್ದವಳು ದಿನಾಂಕ 17-02-2024 ರಂದು ತನ್ನ ಬಾಬ್ತು ಸ್ಕೂಟರ್ ನಂಬ್ರ KA-25-W-8054 ನೇದರಲ್ಲಿ ಮಾಡೂರು ರೂಂ ನಿಂದ ಹೊರಗಡೆ ಹೋದವಳು ಪಿರ್ಯಾದಿದಾರರ ಮನೆಗೂ ಹೋಗದೇ, ಅವಳ ಮನೆಯಾದ ಪುತ್ತೂರಿಗೆ  ಹೋಗದೇ ಕಾಣೆಯಾಗಿರುತ್ತಾಳೆ,ಪತ್ತೆ ಹಚ್ಚಿ ಕೊಡಬೇಕಾಗಿ ಎಂಬಿತ್ಯಾದಿ. 

ಇತ್ತೀಚಿನ ನವೀಕರಣ​ : 22-02-2024 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080