ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore East Traffic PS

ಪಿರ್ಯಾದಿದಾರರಾದ ಶರಣ್ ವಿ.ಕೆ (ಪ್ರಾಯ 19ವರ್ಷ) ರವರು ಈ ದಿನ ದಿನಾಂಕ 19/03/2024 ರಂದು ಮಧ್ಯಾಹ್ನ ಸಮಯ ಸುಮಾರು 3-15 ಗಂಟೆಗೆ ನಂತೂರು ಬಸ್ ನಿಲ್ದಾಣದ ಕಡೆಗೆ ಹೋಗುವುದಕ್ಕಾಗಿ ನಂತೂರು ಜಂಕ್ಷನ್ ನಲ್ಲಿನ ಪಂಪವೆಲ್ ಕಡೆಗೆ ಇರುವ ರಸ್ತೆಯನ್ನು ದಾಟಿಕೊಂಡು ಬಳಿಕ ಪಂಪವೆಲ್ ಕಡೆಯಿಂದ ಬರುವ ರಸ್ತೆಯನ್ನು ದಾಟುತ್ತಾ ರಸ್ತೆಯ ಅಂಚಿನ ಕಡೆಗೆ ಸುಮಾರು 20 ಅಡಿ ದೂರ ತಲುಪುತ್ತಿದ್ದಂತೆ ಪಂಪವೆಲ್ ಕಡೆಯಿಂದ ಬರುತ್ತಿದ್ದ ಕಾರು ನೊಂದಣಿ ಸಂಖ್ಯೆ: KA-19-MM-7272 ನೇಯದನ್ನು ಅದರ ಚಾಲಕ ಶ್ರೀಕಾಂತ್ ಎಂಬಾತನು ಪಿರ್ಯಾದಿದಾರರು ಪೂರ್ಣವಾಗಿ ರಸ್ತೆ ದಾಟುವ ಮೊದಲೆ ಕೆ.ಪಿ.ಟಿ ಕಡೆಗೆ ಹೋಗುವ ಆತುರದಲ್ಲಿ ಅಪಾಯಕಾರಿಯಾದ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಪಿರ್ಯಾದಿದಾರರ ತೀರಾ ಹಿಂಭಾಗದ ಮೂಲಕ ಚಲಾಯಿಸಿದ ಪರಿಣಾಮ ಸದ್ರಿ ಕಾರಿನ ಎಡ ಭಾಗದ ಸೈಡ್ ಮಿರರ್ ಪಿರ್ಯಾದಿದಾರರಿಗೆ ಢಿಕ್ಕಿಯಾದರಭಸಕ್ಕೆ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಎಡಕಾಲು ತಿರುಚಿದಂತಾಗಿ ಒಳಪೆಟ್ಟಾದ ಗಾಯವಾಗಿದ್ದು ವಿನಯ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಎಡ ಕೋಲು ಕಾಲಿನಲ್ಲಿ ಮೂಳೆ ಮುರಿತವುಂಟಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

 

 

Traffic North Police Station

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿ Nandaraja ಇವರು ದಿನಾಂಕ 18-03-2024 ರಂದು ರಾತ್ರಿ ವೇಳೆಗೆ ತನ್ನ ಮಾಲಕರಾದ ನಾರಾಯಣ ಸನಿಲ್ ರವರ ಬಾಬ್ತು ರೋಯಲ್ ಎನ್ ಫೀಲ್ಡ್ ಬುಲೆಟ್ ಮೋಟಾರ್ ಸೈಕಲ್ ನಂಬ್ರ KA-19-EN-7469 ರಲ್ಲಿ ನಾರಾಯಣ ಸನಿಲ್ ರವರು ಸವಾರನಾಗಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ಕುಡುಂಬೂರಿನಿಂದ ಸುರತ್ಕಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ ರಾತ್ರಿ ಸಮಯ ಸುಮಾರು 8:30 ಗಂಟೆಗೆ ಹೊಸಬೆಟ್ಟು ಜಂಕ್ಷನ್ ಬಳಿ ತಲುಪುತ್ತಿದ್ದಂತೆಯೇ ಹೊಸಬೆಟ್ಟು ಜಂಕ್ಷನ್ ಬಳಿ ಸುರತ್ಕಲ್ ಕೂಳೂರು ರಸ್ತೆಯ ತೆರೆದ ಡೈವೈಡರ್ ನಲ್ಲಿ ಆಕ್ಟಿವಾ ಕಂಪೆನಿಯ KA-19-EM-7326 ನಂಬ್ರ ಸ್ಕೂಟರನ್ನು ಅದರ ಸವಾರ ಕೃಷ್ಣ ಕುಮಾರ್ ಸಿನ್ಹಾ ಎಂಬವರು ಬಲ ಬದಿಯ ಇಂಡಿಕೇಟರ್ ಹಾಕಿ ರಸ್ತೆಯನ್ನು ದಾಟುತ್ತಿರುವಾಗ ಬುಲೆಟ್ ಮೋಟಾರ್ ಸೈಲಕನ್ನು ಅದರ ಸವಾರ ನಾರಾಯಣ ಸನಿಲ್ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೂರು ಜನರು ತಮ್ಮ ತಮ್ಮ ವಾಹನಗಳ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ಸವಾರ ಕೃಷ್ಣ ಕುಮಾರ್ ಸಿನ್ಹಾರವರ ತಲೆಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಗಾಯ, ಹಾಗೂ ಎಡ ಪಕ್ಕೆಲುಬಿಗೆ ಗುದ್ದಿದ ರೀತಿಯ ಗಾಯ, ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ರಕ್ತ ಗಾಯ, ಬಲಕೈ  ಮಣಿಗಂಟಿನ ಬಳಿ, ಬಲ ಭುಜದ ಬಳಿ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯ, ಬುಲೆಟ್ ಮೋಟಾರ್ ಸೈಕಲ್ ಸವಾರ ನಾರಾಯಣ ಸನಿಲ್ ರವರ ಬಲಕೈ ಮಣಿಗಂಟಿನ ಬಳಿ, ಹಾಗೂ ಬಲಕಾಲಿನ ಕೋಲು ಕಾಲಿಗೆ ಮೂಳೆಗೆ ಮುರಿತದ ಗಾಯವಾಗಿದ್ದು ಗಾಯಾಳುಗಳ ಪೈಕಿ ಪಿರ್ಯಾದಿ ಮತ್ತು ನಾರಾಯಣ ಸನಿಲ್ ರವರು ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಸ್ಕೂಟರ್ ಸವಾರ ಕೃಷ್ಣ ಕುಮಾರ್ ರವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ ಎಂಬಿತ್ಯಾದಿ

 

Barke PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:19.03.2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್. ಪಿಎಸ್ ಐ ಮಂಗಳೂರು ಮತ್ತು ಸಿಬ್ಬಂದಿ ಯವರೊಂದಿಗೆ ಮಂಗಳೂರು ನಗರದ ಮಣ್ಣಗುಡ್ಡೆ ಬಳಿ ತಲುಪಿದಾಗ ಒಬ್ಬ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಅದೀಕ್ ಪಿ ಕಲೇಶನ್ (19 ವರ್ಷ) ತಂದೆ: ಎ.ಜಿ. ಕಲೇಶನ್ ವಾಸ: PANACKAL HOUSE, PONKUNNAM POST CHIRAKKDAVU KERALA STATE  ಎಂಬಾತನ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು ,  ಮುಂದಿನ ಕ್ರಮದ ಬಗ್ಗೆ   ಮಂಗಳೂರು ಎ,ಜೆ ಆಸ್ಪತ್ರೆಗೆ. ಕಳುಹಿಸಿಕೊಟ್ಟಲ್ಲಿ  “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

 

 

Traffic South Police

 ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ಮಹಂತೇಶ ಶಂಕರಪ್ಪ ಹಟ್ಟಿಮನಿ ರವರು ದಿನಾಂಕ: 18-03-2024 ರಂದು ಅವರು ವಾಸವಿರುವ ಕಟ್ಟಡ ಅಲ್-ಅಲಿಫ್ ಪರ್ನಿಚರ್ ಕಟ್ಟಡದಿಂದ ಸ್ವಲ್ಪ ದೂರವಿರುವ ಮಹಾಲಸ ಜನರಲ್ ಸ್ಟೋರ್ ಗೆ ಮುಡಿಪು ಕಡೆಯಿಂದ ಬಿ.ಸಿ ರೋಡ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂಜೆ ಸಮಯ ಸುಮಾರು 7.45 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮುಡಿಪು ಕಡೆಯಿಂದ ಬಿ.ಸಿ ರೋಡ್ ಕಡೆಗೆ KA-21-F-0084 ನೇ  ನಂಬ್ರದ ಕೆ,ಎಸ್,ಆರ್,ಟಿ,ಸಿ ಬಸ್ಸನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ  ರಸ್ತೆಯ ತೀರ ಎಡಬದಿಗೆ ಚಲಾಯಿಸಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಂತೇಶ ಶಂಕರಪ್ಪ ಹಟ್ಟಿಮನಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಯ ಎಡಬದಿಯ ತಗ್ಗಿನ ಜಾಗಕ್ಕೆ ಬಿದ್ದು ಮಹಂತೇಶ ಶಂಕರಪ್ಪ ಹಟ್ಟಿಮನಿ ರವರ ತಲೆಯ ಹಿಂಭಾಗದಲ್ಲಿ ಚರ್ಮ ಹರಿದ ರಕ್ತಗಾಯ ಹಾಗೂ ಸೊಂಟದ ಹಿಂಬದಿಗೆ, ಬಲಕಾಲಿನ ಕೋಲುಕಾಲಿಗೆ ಮತ್ತು ಎದೆಗೆ ಗುದ್ದಿದ ನಮೂನೆಯ ಗಾಯವಾಗಿದ್ದು ಅಲ್ಲಿದ್ದ ಸಾರ್ವಜನಿಕರು ಹಾಗೂ ಅಪಘಾತ ಪಡಿಸಿದ ಬಸ್ಸಿನ ಚಾಲಕಮತ್ತು ಅದರ ನಿರ್ವಾಹಕನು ಗಾಯಾಳುವನ್ನು ಉಪಚರಿಸಿದ್ದು, ನಂತರ ಸ್ಥಳಕ್ಕೆ ಬಂದ ಗಾಯಾಳುವಿನ ಸಹೋದ್ಯೋಗಿ ಭೀಮಪ್ಪನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಗಾಯಾಳು ಮಹಂತೇಶ ಶಂಕರಪ್ಪ ಹಟ್ಟಿಮನಿರವರನ್ನು ಪರಿಕ್ಷಿಸಿದ ವೈದ್ಯರು ಒಳರೋಗಿ ದಾಖಲಿಸಿರುವುದಾದೆ,ಎಂಬಿತ್ಯಾದಿ

 

Traffic South Police Station                        

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ: 18-03-2024 ರಂದು ಫಿರ್ಯಾದಿ Chandrahasa ಇವರ ಮಗಳಾದ ಬಬಿತ ರವರು ಗ್ರಾಮಚಾವಡಿಯಲ್ಲಿರುವ ಆಯಿಷಾ ಲ್ಯಾಬೊರೇಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಯಾದ ಅಸೈಗೋಳಿ ಕಡೆಗೆ ಹೋಗಲು ತನ್ನ ಬಾಬ್ತು ಸ್ಕೂಟರ್ ನಂಬರ್ KA-19-EW-5937 ನೇದನ್ನು ಸವಾರಿ ಮಾಡಿಕೊಂಡು ಗ್ರಾಮಚಾವಡಿ ಜಂಕ್ಷನ್ ತಲುಪಿದಾಗ ಸಮಯ ಸುಮಾರು 18-00 ಗಂಟೆಗೆ ಕೊಣಾಜೆ ಕಡೆಯಿಂದ KA-19-C-8099 ನೇ ನಂಬ್ರದ ಮಂಜನಾಡಿ ಬಸ್ ರೂಟ್ ನಂಬರ್ 55 ನೇದರ ಚಾಲಕ ಮೊಹಮ್ಮದ್ ಸಲೀಂ ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಬಿತಾ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಬಿತಾ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕಣ್ಣಿನ ಹುಬ್ಬಿನ ಬಳಿ ಹಾಗೂ ಬಲ ಮತ್ತು ಎಡ ದವಡೆಯ ಬಳಿ ಗುದ್ದಿದ ಗಾಯವಾಗಿದ್ದು, ಬಲಕಣ್ಣಿನ ಮೇಲೆ ಚರ್ಮ ಹರಿದ ರಕ್ತಗಾಯವಾಗಿರುತ್ತದೆ. ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಅಪಘಾತ ಸ್ಥಳಕ್ಕೆ ಬಂದ ಆಯಿಷಾ ಲ್ಯಾಬೊರೇಟರಿಯ ಮಾಲಕಿ ಬಬಿತಾ ರವರನ್ನು ಉಪಚರಿಸಿ ಕಣಚೂರು ಆಸ್ಪತ್ರೆ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 20-03-2024 09:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080