Feedback / Suggestions

Crime Reports: CEN Crime PS Mangaluru City

ಪಿರ್ಯಾದಿ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಸಂಖ್ಯೆ ನೇ ದನ್ನು ಹೊಂದಿರುತ್ತಾರೆ.  ದಿನಾಂಕ 31-03-2023 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸದಲ್ಲಿದ್ದ ಸಮಯ ಸುಮಾರು 12.00 ಗಂಟೆಗೆ 8274849531 ನೇ ನಂಬ್ರದಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ಬ್ಯಾಂಕ್ ಆಫ್ ಬರೋಡಾ ದಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಪಿರ್ಯಾದಿದಾರರಲ್ಲಿ  ಹೊಸ ಕ್ರೆಡಿಟ್ ಕಾರ್ಡ್ ನ activation ಬಗ್ಗೆ ಕರೆ ಮಾಡುತ್ತಿದ್ದು ಪಿರ್ಯಾದಿದಾರರಲ್ಲಿ  ಹೊಸ ಕಾರ್ಡ್ ನಂಬ್ರವನ್ನು ಹೇಳುವಂತೆ ತಿಳಿಸಿದ್ದು ಪಿರ್ಯಾದಿದಾರರು ತನ್ನ  ಹೊಸ ಕಾರ್ಡ್ ನಂಬ್ರವನ್ನು ತಿಳಿಸಿ ನಂತರ ತನ್ನ ಮೊಬೈಲ್ ಗೆ ಬಂದಿರುವ 2 ಓ.ಟಿ.ಪಿ ಯ ವಿವರವನ್ನು ಸದ್ರಿ ವ್ಯಕ್ತಿಗೆ ತಿಳಿಸಿರುತ್ತಾರೆ.  ಇದಾದ ಅರ್ಧ ಗಂಟೆಯ ಬಳಿಕ ಪಿರ್ಯಾದಿದಾರರ ಕ್ರೆಡಿಟ್ ಕಾರ್ಡ್ ಸಂಖ್ಯೆ ನೇದರಿಂದ ರೂ.1,99,999 ಹಾಗೂ ರೂ.48000/- ಡೆಬಿಟ್ ಆಗಿರುವ ಸಂದೇಶ ಬಂದಿರುತ್ತದೆ. ನಂತರ ಪಿರ್ಯಾದಿದಾರರು ಈ ಬಗ್ಗೆ ಬ್ಯಾಂಕ್ ಬರೋಡಾ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಲ್ಲಿ ಯಾರೋ ಅಪರಿಚಿತರು ಬ್ಯಾಂಕ್ ಅಪ್ ಬರೋಡಾ ದಿಂದ ಮಾತನಾಡುವುದಾಗಿ ಕರೆ ಮಾಡಿ ಪಿರ್ಯಾದಿದಾರರಿಂದ ಕ್ರೆಡಿಟ್ ಕಾರ್ಡ್ ವಿವರವನ್ನು ಪಡೆದು  ಕ್ರೆಡಿಟ್ ಕಾರ್ಡ್ ಸಂಖ್ಯೆ ನೇ ದರಿಂದ ಒಟ್ಟು 2,47,999/- ಹಣವನ್ನು ಅನಧಿಕೃತವಾಗಿ ವರ್ಗಾಯಿಸಿ ಮೋಸ ಮಾಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಆದುದರಿಂದ ಸದ್ರಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

CEN Crime PS Mangaluru City

ಪಿರ್ಯಾದಿ ರವರಿಗೆ ದಿನಾಂಕ 21.03.2023 ರಂದು ಫೇಸ್ ಬುಕ್ ನಲ್ಲಿ ಡಾ ಕತ್ರೀನಾ ರೊಬರ್ಟ. ಯು ಕೆ ಎಂಬ  ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ಅವರು ಅದನ್ನು accept ಮಾಡಿಕೊಂಡು ಪರಸ್ಪರ ಚಾಟ್ ಮಾಡಿಕೊಂಡಿದ್ದು, ಆರೋಪಿತರು ತನ್ನನ್ನು ಡಾಕ್ಟರ್ ಅಂತಾ ಪರಿಚಯಿಸುತ್ತಾ, ಪಿರ್ಯಾದಿದಾರರ ಬಗ್ಗೆ ತಿಳಿದುಕೊಂಡು ಮುಂದುವರಿದು ಆರೋಪಿತರು ತನಗೆ ಭಾರತವನ್ನು ನೋಡಲಿಕ್ಕೆ ತುಂಬಾ ಇಷ್ಟ ಉಂಟು ಅಂತ ಚಾಟ್ ನಲ್ಲಿ ತಿಳಿಸಿ ಪಿರ್ಯಾದಿದಾರರಲ್ಲಿ  ವಾಟ್ ಆಪ್ ನಂಬ್ರವನ್ನು ಕೇಳಿದ್ದು, ಪಿರ್ಯಾದಿದಾರರು ವಾಟ್ಸ್ ಆಪ್ ನಂಬ್ರ ವನ್ನು ನೀಡಿದಂತೆ, ಸ್ವಲ್ಪ ದಿನದ ಬಳಿಕ ವಾಟ್ಸಪ್ ನಂಬ್ರ  ಗೆ ಸ್ಕೀನ್ ಶಾಟ್ ಬಂದಿದ್ದು, ಬ್ರಿಟಿಷ್ ಆರ್ ವಿಶ್ ಪ್ಲೇನ್ ಟಿಕೆಟ್ ಟು ಇಂಡಿಯಾ ಎಂಬುದಾಗಿ, ಭಾರತಕ್ಕೆ ದಿನಾಂಕ 12.04.2023 ರಂದು ಬರುತ್ತೇನೆ ಎಂಬುದಾಗಿ ನಮೂದಾಗಿರುತ್ತದೆ. ದಿನಾಂಕ 12-04-2023 ರಂದು ಪಿರ್ಯಾದಿದಾರರಿಗೆ 09233090933 ನೇ ನಂಬ್ರನಿಂದ ದೂರವಾಣಿ ಕರೆ ಬಂದಿದ್ದನ್ನು ಸ್ವೀಕರಿಸಲಾಗಿ ತಾನು  ಇಂಡಿಯಾ ವಿಮಾನ ನಿಲ್ದಾಣ ಅಧಿಕಾರಿ ಮಾತನಾಡುವುದು, ಡಾ. ಕತ್ರೀನಾ ರೊಬರ್ಟ ರವರಿಗೆ ಫೇಮೆಂಟ್ ಮಾಡಲಿಕ್ಕೆ ಹಣ ಇಲ್ಲಾ, ಅವರಲ್ಲಿರುವುದು ಟ್ರಾವೇಲ್ ಚೆಕ್, ಅದನ್ನು ಭಾರತದಲ್ಲಿ ಸ್ವೀಕರಿಸುವುದಿಲ್ಲ, ಕತ್ರೀನಾ ಅವರನ್ನು ಪೇಮೆಂಟ್ ಮಾಡದಿದ್ದರೆ ಅವರ ದೇಶಕ್ಕೆ ಅವರನ್ನು ವಾಪಾಸ್ಸು ಕಳಿಸುತ್ತಾರೆ, ನೀವು ಅವರ ಗಾರ್ಡಿಯನ್ ಆಗಿದ್ದು, ನೀವೇ ಹಣ ಕಳಿಸಬೇಕು, ಕತ್ರೀನಾ ರವರು ಸ್ವದೇಶಕ್ಕೆ ಹೋದ ಮೇಲೆ ಹಣ ವಾಪಾಸ್ಸು ನೀಡುವುದಾಗಿ ತಿಳಿಸುತ್ತಿದ್ದಾರೆ ಎಂಬುದಾಗಿ ಮಾತನಾಡಿ ಪಿರ್ಯಾದಿದಾರರಿಗೆ ಮಾನಸಿಕವಾಗಿ ಹಿಂಸೆ ನೀಡಿ ಒತ್ತಡವನ್ನು ಆರಂಭಿಸಿದ್ದು, ಬಳಿಕ ಆರೋಪಿತರು ತನ್ನ  ಕೆನರಾ ಬ್ಯಾಂಕ್ ಅಕೌಂಟ್ ನೀಡಿದಂತೆ ಪಿರ್ಯಾದಿದಾರರು ಹಂತ ಹಂತವಾಗಿ ಅವರ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ ನೇದರಿಂದ ರೂ.4,00,000/- ಹಣವನ್ನು ಐ.ಎಂ.ಪಿ.ಎಸ್. ಮೂಲಕ ಮತ್ತು ಕರ್ಣಾಟಕ  ಬ್ಯಾಂಕ್ ಖಾತೆ ಸಂಖ್ಯೆ  ನೇದರಿಂದ ರೂ.50,000/- ಹಣವನ್ನು ಐ.ಎಂ.ಪಿ.ಎಸ್. ಮೂಲಕ ವರ್ಗಾವಣೆ  ಮಾಡಿರುತ್ತಾರೆ.  ಈ ರೀತಿ ತನಗೆ ಫೇಸ್ ಬುಕ್ ನಲ್ಲಿ ಪರಿಚಯಿಸಿಕೊಂಡು ನಂತರ ತನ್ನನ್ನು ತಾನು ಡಾಕ್ಟರ್ ಎಂಬುದಾಗಿ ಪರಿಚಯಿಸಿಕೊಂಡು ವಾಟ್ಸಪ್ ನಲ್ಲಿ ಚಾಟ್ ಮಾಡಿಕೊಂಡು ಪಿರ್ಯಾದಿದಾರರನ್ನು ನಂಬಿಸಿ ಅವರ ಐ.ಸಿ.ಐ.ಸಿ.ಐ ಹಾಗೂ ಕರ್ಣಾಟಕ ಬ್ಯಾಂಕ್ ಖಾತೆಯಿಂದ  ಅನಧಿಕೃತವಾಗಿ ಹಣವನ್ನು ವರ್ಗಾಯಿಸಿಕೊಂಡ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

CEN Crime PS Mangaluru City

ಪಿರ್ಯಾದಿದಾರರು 2022ರ ಆಗಸ್ಟ್ 1 ರಂದು ಸಾಮಾಜಿಕ ಜಾಲತಾಣವಾದ ಇನ್ಸ್ ಸ್ಟಾ ಗ್ರಾಮ್ ಖಾತೆಯನ್ನು ಪರಿಶೀಲನೆ ಮಾಡುತ್ತಿದ್ದಾಗ, ಖ್ಯಾತ ಭಾರತೀಯ ಕ್ರಿಕೆಟಿಗ ಶ್ರೀ ಸುರೇಶ್ ರೈನಾರವರು ಬ್ರಾಂಡ್ ಅಂಬಾಸೆಡರ್ ಆಗಿದ್ದ  COSTA SAVINGS App ನೋಡಿದ್ದರು. ಸದ್ರಿ  ಸಾಮಾಜಿಕ ಜಾಲತಾಣದ ಲಿಂಕ್ https://instagram.com/sahil.ali_official_?igshid=YmMyMTA2M2Y= ಆಗಿರುತ್ತದೆ. ಪ್ರಸಿದ್ಧ ಭಾರತೀಯ ಕ್ರಿಕೆಟಿಗ ಶ್ರೀ ಸುರೇಶ್ ರೈನಾ ಅವರು ಈ ಅಪ್ಲಿಕೇಶನ್‌ನ ಮುಖವಾಗಿರುವುದರಿಂದ ಮತ್ತು ಕೋಸ್ಟಾ ಉಳಿತಾಯವನ್ನು ಪ್ರಚಾರ ಮಾಡಿದ್ದರಿಂದ ಪಿರ್ಯಾದಿದಾರರು ಇದರಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಗಳಿಸಬಹುದು ಎಂದು ಮನಗಂಡು ಆಗಸ್ಟ್ 2022 ರ 18 ರಂದು ರೂಪಾಯಿ 1,00,000/- ಹೂಡಿಕೆ ಮಾಡಿದರು. ನಂತರ 13-09-2022 - ರೂ.60,000, 13-09-2022 - ರೂ.70,000 13-09-2022 - ರೂ.3,80,000, 27-09-2022 - ರೂ.4,15,000 ಹೀಗೆ ಒಟ್ಟು 10,25,000 ಮೊತ್ತ ರೂಪಾಯಿ  ಹೂಡಿಕೆ ಮಾಡಿದ್ದು, ಮೊದಲು ಲಾಭಾಂಶ ನೀಡಿದ್ದು, ಬಳಿಕ ಸದ್ರಿ ಅಪ್ಲಿಕೇಷನ್ ನಿಂದ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದು, ಸದ್ರಿ ಅಪ್ಲಿಕೇಷನ್ ನಲ್ಲಿ ಇದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದರಿಂದ ಪಿರ್ಯಾದಿದಾರರು ಮೋಸ ಹೋಗಿರುವುದು ಖಚಿತಗೊಂಡಿದ್ದು, ಆರೋಪಿಗಳಾದ ಅಬ್ಬಾಸ್ ಹುಸೇನ್ ಶಾಹಿಲ್, ವೈಭವ್ ಗೋವಿಂದ್ ಸಾವಂತ್ ಮತ್ತು ಲೋಕೇಶ್ ಕಿಶೋರ್ ಜಾದವ್ ಎಂಬವರು COSTA SAVINGS App   ಎಂಬ ನಕಲಿ ವೆಬ್ ಸೈಟ್ ನ್ನು ಇನ್ಸ್ ಸ್ಟಾ ಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮೋಸದಿಂದ ಪಿರ್ಯಾದಿದಾರರ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ.ಎಂಬಿತ್ಯಾದಿ.

Traffic North Police Station

ಪಿರ್ಯಾದಿ Shravya D S ತಾಯಿಯಾದ ಶಶಿಕಲಾ (40 ವರ್ಷ) ರವರು ನಿನ್ನೆ ದಿನ ದಿನಾಂಕ; 18-04-2023 ರಂದು ಸುರತ್ಕಲ್ ತಡಂಬೈಲು ಹತ್ತಿರ ಗರುಡಾ ಹಾಲ್ ಎದುರು ಉಡುಪಿ- ಮಂಗಳೂರು NH 66 ರಸ್ತೆಯನ್ನು ದಾಟಿ ಮಂಗಳೂರು- ಉಡುಪಿ ರಸ್ತೆಯಲ್ಲಿ ನಡೆದುಕೊಂಡು ರಸ್ತೆಯ ಎಡಬದಿಗೆ ತಲುಪುತ್ತಿದ್ದಂತೆ ಸಂಜೆ ಸಮಯ 7:15 ಘಂಟೆಗೆ ಸುರತ್ಕಲ್ ಕಡೆಯಿಂದ KA-19-AD-7013 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕನಾದ IMRAN KHAN ಎಂಬಾತನು ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಾಯಿಗೆ ಡಿಕ್ಕಿ ಪಡಿಸಿರುತ್ತಾನೆ ಇದರ ಪರಿಣಾಮ ಪಿರ್ಯಾದಿದಾರರ ತಾಯಿಗೆ ಹಣೆಯ ಬಲಬದಿ ತಲೆಯಲ್ಲಿ ಚರ್ಮ ಸುಲಿದ ರೀತಿಯ ರಕ್ತಗಾಯವಾಗಿದ್ದು ಹಾಗೂ ಬಲಭುಜಕ್ಕೆ, ಬಲಮೊಣಕಾಲಿಗೆ ತರಚಿದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಅಥರ್ವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ ಎಂಬಿತ್ಯಾದಿ ಸಾರಾಂಶ.

Traffic North Police Station                                                                     

ಪಿರ್ಯಾದಿ Shakil Bava ಚಿಕ್ಕಮ್ಮನ ಮಗನಾದ ಮೊಹಮ್ಮದ್ ಸಾಬಿತ್ (27 ವರ್ಷ) ಎಂಬಾತನು ನಿನ್ನೆ ದಿನಾಂಕ: 18-04-2023 ರಂದು ಆತನ ತಂದೆಯ ಬಾಬ್ತು KA-19-EZ-2365 ನಂಬ್ರದ ಸ್ಕೂಟರಿನಲ್ಲಿ ತನ್ನ ಮನೆಯಾದ 4ನೇ ಬ್ಲಾಕ್ ಕೃಷ್ಣಾಪುರದಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದ ಸಮಯ ಸಂಜೆ ಸುಮಾರು 4:15 ಘಂಟೆಗೆ  ಚೊಕ್ಕಬೆಟ್ಟು ಫಿಜ್ಜಾ ಗ್ರೌಂಡ್ ಬಳಿ ತಲುಪುತ್ತಿದ್ದಂತೆ ಆತನ ಹಿಂದಿನಿಂದ ಅಂದರೆ ಕೃಷ್ಣಾ ಪುರ 4ನೇ ಬ್ಲಾಕ್ ಕಡೆಯಿಂದ ಸಿಟಿ ಬಸ್ ಒಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಹಾಗೂ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೊಹಮ್ಮದ್ ಸಾಬಿತನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೊಹಮ್ಮದ್ ಸಾಬಿತನು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಆತನ ಬಲ ಮೊಣಕೈಗೆ ಮೂಳೆ ಮುರಿತದ ಗಾಯ ಹಾಗೂ ಎಡ ಕೈಗೆ ಕೂಡಾ ಮೂಳೆ ಬಿರುಕು ಬಿಟ್ಟಂತಹ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಅಪಘಾತ ಪಡಿಸಿದ ಬಸ್ಸನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದು ಬಸ್ಸಿನ ನೋಂದಣಿ ನಂಬ್ರ ತಿಳಿದು ಬಂದಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

Mangalore South PS  

ದಿನಾಂಕ 12-04-2023 ರಂದು 22-00  ‍ಗಂಟೆಯಿಂದ ದಿನಾಂಕ 15-04-2023 ಸಂಜೆ 16-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ವೆಲೆಸ್ಸಿಯಾ ಗೋರಿಗುಡ್ಡದಲ್ಲಿರುವ ಸೈಂಟ್ ಆಂಟೋನಿ ಕೃಪಾ ಅಪಾರ್ಟ್ ಮೆಂಟ್ ನ ಕಂಪೌಂಡು ಬಳಿ ರಸ್ತೆ ಬದಿ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಪಿರ್ಯಾದುದಾರರ  SHALOM SANDEESHಅಣ್ಣ  ಉಪಯೋಗಿಸುತ್ತಿದ್ದ ಪಿರ್ಯಾದುದಾರರ ಆರ್. ಸಿ. ಮಾಲಕತ್ವದ KA 19 HC 5483 ನೊಂದಣಿ ಸಂಖ್ಯೆಯ ಸಂಖ್ಯೆಯ, ME1RG5258K0045549 ಚೆಸಿಸ್ ನಂಬ್ರದ, G3K5E0136845 ಇಂಜೀನ್ ನಂಬ್ರದ 09/2019ನೇ ಮೋಡಲ್ ನ PURPLE-BLUE ಬಣ್ಣದ ಅಂದಾಜು ರೂಪಾಯಿ 60,000/- ಬೆಲೆ ಬಾಳುವ YAMAHA R-15 ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.                                       

Crime Reports: CEN Crime PS Mangaluru City                                         

ಪಿರ್ಯಾದಿಯವರು ಮಂಗಳೂರಿನ ಎಸ್.ಬಿ.ಐ ಪೋರ್ಟ್ ರೋಡ್ ಬ್ರಾಂಚಿನಲ್ಲಿ ಖಾತೆ ಸಂಖ್ಯೆ ನೇ ದನ್ನು ಹೊಂದಿರುತ್ತಾರೆ. ದಿನಾಂಕ 01-03-2023 ರಂದು ರಾತ್ರಿ ಸಮಯ ಸುಮಾರು 11.00 ಗಂಟೆಗೆ  ಮನೆಯಲ್ಲಿದ್ದ ಸಮಯ ಸದ್ರಿಯವರ  ಟೆಲಿಗ್ರಾಂ ಖಾತೆಗೆ CIGGYBOIII  ಎಂಬ ಟೆಲಿಗ್ರಾಂ ಖಾತೆಯಿಂದ ಲಿಂಕ್ ಒಂದು ಬಂದಿದ್ದು ಪಿರ್ಯಾದಿದಾರರು ಸದ್ರಿ ಲಿಂಕನ್ನು ಪರಿಶೀಲಿಸುವ ಸಮಯ ಸದ್ರಿ ಲಿಂಕ್ ಅಳಿಸಿಹೋಗಿರುತ್ತದೆ. ಮರುದಿನ ಬೆಳಿಗ್ಗೆ ಪಿರ್ಯಾದಿದಾರರು ಮನೆಯ ಸಮೀಪದ ಅಂಗಡಿಗೆ ಹೋಗಿ ಸದ್ರಿ ಅಂಗಡಿಯಲ್ಲಿ upi ಮೂಲಕ ಹಣ ಪಾವತಿಸುವ ಸಮಯ transaction exceeded ಎಂಬುದಾಗಿ ಸಂದೇಶವೊಂದು ಬಂದಿದ್ದು ಇದನ್ನು ಪರಿಶೀಲಿಸುವರೇ ತಾನು ಖಾತೆಯನ್ನು ಎಸ್.ಬಿ.ಐ ಬ್ಯಾಂಕಿಗೆ ತೆರಳಿ ಖಾತೆ ಸಂಖ್ಯೆ  ನೇದನ್ನು ಪರಿಶೀಲಿಸಿದ ಸಮಯ ದಿನಾಂಕ 01-03-2023 ಹಾಗೂ 02-03-2023 ರಂದು ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಒಟ್ಟು ರೂ. 1,16,000/- ಹಣ ಡೆಬಿಟ್ ಆದ ಬಗ್ಗೆ ತಿಳಿದು ಬಂದಿರುತ್ತದೆ. ಸದ್ರಿ transaction ನ್ನು ಪಿರ್ಯಾದಿದಾರರು ಮಾಡಿರುವುದಿಲ್ಲ. ಆದುದರಿಂದ ಪಿರ್ಯಾದಿದಾರರಿಗೆ ಯಾವುದೋ ಲಿಂಕ್ ನ್ನು ಕಳುಹಿಸಿ ಅವರ ಗಮನಕ್ಕೆ ಬಾರದೇ ಎಸ್.ಬಿ.ಐ ಖಾತೆ ಸಂಖ್ಯೆ  ನೇದರಿಂದ ರೂ 116000/- ವನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿರುವ CIGGYBOIII ಎಂಬ ಟೆಲಿಗ್ರಾಂ ಖಾತೆಯನ್ನು ಹೊಂದಿರುವ  ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

CEN Crime PS Mangaluru City

ಪಿರ್ಯಾದಿ ದಿನಾಂಕ 05-02-2023 ರಂದು ಪಿರ್ಯಾದಿದಾರರ ಟೆಲಿಗ್ರಾಮ್ ಖಾತೆ   Kayak travel search engine ಆನ್ಲೈನ್ ನಲ್ಲಿ ಪಾರ್ಟ್ ಟೈಂ ಜಾಬ್ ಇದೆ ಎಂದು ಹೇಳಿ ಒಂದು ವೆಬ್ ಸೈಟ್ ಲಿಂಕ್ ಕಳುಹಿಸಿದ್ದರು. ನಂತರ ಆರೋಪಿಗಳು ಮೊಬೈಲ್ ನಂಬ್ರ: 9233424937 ಮತ್ತು 9501710027 ನಂಬ್ರದಿಂದ ಕರೆ ಮಾಡಿ ನಂತರ ರೂಪಾಯಿ 872/-  ನ್ನು ಪಿರ್ಯಾದಿದಾರರ ಖಾತೆಗೆ ಕಳುಹಿಸಿದ್ದರು. ನಂತರ ಎರಡನೇ ದಿನ 12,000/- ವನ್ನು ಕಳುಹಿಸಿದ್ದರು. 3 ನೇ ದಿನ ಮತ್ತು ಅದರ ಮುಂದಿನ ದಿನಗಳಲ್ಲಿ ಪಿರ್ಯಾದಿದಾರರು ಕ್ರಮವಾಗಿ ರೂಪಾಯಿ 1,00,000/-, 1,80,000/-, 1,04,141/-, 40,576/- ಮತ್ತು 4,96,000/- ಹಣವನ್ನು ಟಾಸ್ಕ್ ಕಂಪ್ಲೀಟ್ ಮಾಡಲು ವಿವಿಧ ದಿನಗಳಲ್ಲಿ ತಾನು ಹೊಂದಿರುವ ಕರ್ನಾಟಕ ಬ್ಯಾಂಕ್ ಖಾತೆ ನಂಬ್ರ:  ನೇದರಿಂದ ಐಎಂಪಿಎಸ್/ ನೆಪ್ಟ್ ಟ್ರಾನ್ಸಾಕ್ಷನ್ ಮೂಲಕ ಆರೋಪಿಗಳ ಖಾತೆಗೆ ವರ್ಗಾಯಿಸಿ ಮೋಸ ಹೋಗಿರುತ್ತಾರೆ ಎಂಬಿತ್ಯಾದಿ.

CEN Crime PS Mangaluru City

ಪಿರ್ಯಾದಿ ಮಂಗಳೂರಿನ ಕುಲಶೇಖರ ಸಿಲ್ವರ್ ಗೇಟ್ ಎಸ್.ಬಿ.ಐ ಬ್ಯಾಂಕ್ ನಲ್ಲಿ ಖಾತೆ ನಂಬ್ರ:  ರಂತೆ ಖಾತೆ ಹೊಂದಿರುತ್ತಾರೆ.   ದಿನಾಂಕ 11-01-2023 ರಂದು ಸಂಜೆ ವೇಳೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ:  ನೇದಕ್ಕೆ ಆರೋಪಿಯ ಮೊಬೈಲ್ ನಂಬ್ರ: 8235667175 ರಿಂದ ಮೆಸೇಜ್ ಬಂದು ನಂತರ ಕರೆ ಮಾಡಿ ತಾನು ಬ್ಯಾಂಕ್ ಮೆನೇಜರ್  ಮಾತನಾಡುತ್ತಿದ್ದೇನೆ,   ಕೆವೈಸಿ ಅಪ್ ಡೇಟ್ ಮಾಡಲು ಒಟಿಪಿ ಕೊಡಬೇಕೆಂದು ತಿಳಿಸಿದಂತೆ   ಪಿರ್ಯಾದಿದಾರರು ನಂಬಿ,  ತನ್ನ ಮೊಬೈಲ್ ನಂಬ್ರಕ್ಕೆ ಬಂದ ಒಟಿಪಿ ನಂಬ್ರವನ್ನು ಕರೆ ಮಾಡಿದ ವ್ಯಕ್ತಿಗೆ ನೀಡಿರುತ್ತಾರೆ. ಆ ಕೂಡಲೇ ಅಂದರೆ ಸಂಜೆ ಸುಮಾರು 6-00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಕ್ರಮವಾಗಿ 99999/- 99900/- ಮತ್ತು 25,000/- ರಂತೆ ಒಟ್ಟು ರೂಪಾಯಿ 2,24,899/- ಆರೋಪಿಯು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ. ಎಂಬಿತ್ಯಾದಿ.

Mangalore East PS

ಪಿರ್ಯಾದಿ Mr G R Prasad ಕೋ ಆಪರೇಟಿವ್ ಸೊಸ್ಯೆಟಿ ಇನ್ ಕೋ ಆಪರೇಟೆಡ್ ಕರ್ನಾಟಕ ರಾಜ್ಯ ಸೌಹಾರ್ದಾಕ್ಟ್ 1997 ರಂತೆ ರಿಜಿಸ್ಟರ್ ಮಾಡಿದ್ದ M/S ಪ್ರಣವ್ ಸೌಹಾರ್ದ ಸಹಕಾರಿ ಲಿಮಿಟೆಡ್ ಯೆಯ್ಯಾಡಿ ಮಂಗಳೂರು ಇದರ ಮೆನೆಜರ್ ಆಗಿದ್ದು ಇವರ ಸಂಸ್ಥೆಯಲ್ಲಿ ಆರೋಪಿ 2 Mohammed ashraf ps ಯವರು ವಾಹನ ಖರೀದಿ ಬಗ್ಗೆ ಸಾಲ ಪಡೆಯಲು ಪಿರ್ಯಾದಿದಾರರ ಸಂಸ್ಥೆಯಲ್ಲಿ ಸದಸ್ಯರಾಗಿದ್ದು ಅಲ್ಲದೆ ISUZU ಕಂಪೆನಿಯ ಡೀಲರ್ ಸ್ವಸ್ಥಿಕ್ ಮೋಟಾರ್ಸ್ ಪ್ರವ್ಯೇಟ್ ಲಿಮಿಟೆಡ್ ಹಯಾಗ್ರೀವಾ ನಗರ್ ಉಡುಪಿ ಎಂಬ ಎಂಬ ಹೆಸರಿನ ನಕಲಿ ದಾಖಲಾತಿಯನ್ನು ಪಿರ್ಯಾದಿದಾರರ ಸಂಸ್ಥೆಗೆ ನೀಡಿ ವಾಹನದ ಸಾಲವನ್ನು ಪಡೆದುಕೊಂಡು ಗ್ಯಾರಂಟರ್ ಆಗಿ 1. ಕೆ. ಶಂಕರ್  ಹಾಗೂ 2. ಒಂದನೇ ಆರೋಪಿಯಾದ ಶ್ರೀಮತಿ ಎನಿದ್ ಫೆಲಿಕ್ಸ್ “ಡಿ”ಸೋಜಾ ಎಂಬವರನ್ನು ತೋರಿಸಿ, ಅವರುಗಳಿಂದ ದಾಖಲೆಗಳನ್ನು ಪಿರ್ಯಾದಿದಾರರ ಸಂಸ್ಥೆಗೆ ನೀಡಿದ್ದು, ಸಾಲ ಪಡೆದು ಸಾಲವನ್ನು ಮರುಪಾವತಿಸದೇ ತಪ್ಪಿಸಿದ್ದು, ಗ್ಯಾರಂಟಿದಾರರಾದ ಶಂಕರ್ ಎಂಬವರು ತಾನು ಗ್ಯಾರಂಟಿದಾರರಾಗಿ ನಿಂತ ಬಗ್ಗೆ ಹಣವನ್ನು ಪಾವತಿಸಿದ್ದು, ಆರೋಪಿ 1 ನೇಯವರು ಸುಳ್ಳು ದಾಖಲಾತಿಗಳನ್ನು ನೀಡಿ ತನ್ನ ಪಾಲಿನ ಹಣವನ್ನು ಕೂಡ ಪಾವತಿಸದೇ ಇದ್ದು ಆರೋಪಿ 1 ಮತ್ತು 2 ನೇಯವರು ಪಿರ್ಯಾದಿದಾರರ ಸಂಸ್ಥೆಗೆ ಮೋಸಮಾಡಿರುವುದಾಗಿದೆ ಎಂಬಿತ್ಯಾದಿ.

Traffic South Police Station

ಪಿರ್ಯಾದಿ ASHOK ACHARYA B N ದಿನಾಂಕ:16-04-2023 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಂಬರ್ KL-14-H-7720 ನೇದರಲ್ಲಿ ಮನೆಯಾದ ಪಚ್ಚಂಬಳ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12-45 ಗಂಟೆಗೆ ಕೋಟೆಕಾರ್ ಬೀರಿ ಮಸೀದಿ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಬಂದ KL-14-M-5557 ನೇದರ ಕಾರು ಚಾಲಕ ತನ್ನ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಹಿಂಬದಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತಾ ಡಾಮಾರು ರಸ್ತೆಗೆ ಬಿದ್ದು ಅವರ ಎಡಕಾಲಿನ ಪಾದದಬಳಿ ಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಕೈ ಕಾಲುಗಳಿಗೆ ಚಿಕ್ಕಪುಟ್ಟ ಗಾಯವಾಗಿರುತ್ತದೆ. ಕೂಡಲೇ ಅಪಘಾತ ಪಡಿಸಿದ ಕಾರು ಚಾಲಕ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ.

 

Traffic South Police Station

ಪಿರ್ಯಾದಿ  IBRAHIM ದಿನಾಂಕ:18-04-2023 ರಂದು ಕಲ್ಲಾಪು ಬಳಿಯ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಗ್ಲೋಬಲ್ ಮಾರ್ಕೆಟ್ ಬಳಿ ಇರುವ ತಮ್ಮ ಹಣ್ಣಿನ ಅಂಗಡಿಯ ಹತ್ತಿರ ಹೋಗಲು ರಾ.ಹೆ. 66 ರಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು 02.30  ಗಂಟೆಗೆ ಮಂಗಳೂರು ಕಡೆಯಿಂದ ತೊಕ್ಕೂಟ್ಟು ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ನಂಬ್ರ KA-19-AD-6921  ನೇದನ್ನು ಅದರ ಚಾಲಕ ಅಬ್ದುಲ್ ನಝೀರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ತಲೆಗೆ ಎಡಕಾಲಿನ ಪಾದದ ಬಳಿ ಹಾಗೂ ಕೈಗಳಿಗೆ ಗುದ್ದಿದ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ  ತೊಕ್ಕೂಟ್ಟು ಸಹರಾ ಆಸ್ಪತ್ರೆಗೆ ದಾಖಲಿಸಿದ್ದು  ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಯೆನಪೋಯಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Mangalore North PS

ಪಿರ್ಯಾದಿ RAMESH MALYA ಅಳಕೆ  ಯಲ್ಲಿರುವ ಶ್ರೇಯಾ ಸ್ವೀಟ್ಸ್ ನ ಮಾಲೀಕನಾಗಿ ಕೆಲಸ ಮಾಡಿ ಕೊಂಡಿರುವುದಾಗಿದೆ, ಪಿರ್ಯಾದಿದಾರರ ಮಗಳಾದ ಎನ್ ಶಿಖಾ ಮಲ್ಯ ರವರು ಈ ದಿನ ದಿನಾಂಕ 18.04.2023 ರಂದು ಬೆಳಗ್ಗೆ 09.30 ಗಂಟೆಯ ಸಮಯ ಅಳಕೆ  ಯಲ್ಲಿರುವ ಶ್ರೇಯಾ ಸ್ವೀಟ್ಸ್ ಶಾಫ್ ಗೆ ಬಂದವರು ಪಾಂಡೇಶ್ವರದಲ್ಲಿರುವ ಶ್ರೀನಿವಾಸ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೊರಟವಳು  ಈ ವರೆಗೂ ಮನೆಗೆ  ಬರದ ಕಾರಣ ನಾನು ಕಾಲೇಜಿಗೆ ಹೋಗಿ ವಿಚಾರಿಸಿದಾಗ ಕಾಲೇಜಿಗೂ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ ನಂತರ  ಶಿಖಾ ಮಲ್ಯ  ರವರ ಸ್ನೇಹಿತರನ್ನು ,ಹಾಗೂ ಸಂಭಂದಿಕರನ್ನು ವಿಚಾರಿಸಲಾಗಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ ಈ ವರೆಗೂ  ಪಿರ್ಯಾದಿಧಾರರು  ಮಗಳನ್ನು ಮಂಗಳೂರು ನಗರದ ರೈಲ್ವೆ ಸ್ಟೇಶನ್, ಬಸ್ ಸ್ಟಾಂಡ್, ಸಿಟಿ ಸೆಂಟರ್ , ಮಾರ್ಕೆಟ್ ಕಡೆಗಳಲ್ಲಿ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದುದರಿಂದ   ಈಗ ಠಾಣೆಗೆ ಬಂದು  ದೂರನ್ನು ನೀಡುತ್ತಿದ್ದು,ಪಿರ್ಯಾದಿದಾರರ ಮಗಳಾದ ಎನ್ ಶಿಖಾ ಮಲ್ಯ  ಪ್ರಾಯ 19 ವರ್ಷ ಎಂಬಾತರನ್ನು   ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿಸಿಕೊಂಡಿರುವುದಾಗಿದೆ.

ಕಾಣೆಯಾದ  ಎನ್ ಶಿಖಾ ಮಲ್ಯ ರವರ ಚಹರೆ ವಿವರಗಳು             

ಎನ್ ಶಿಖಾ ಮಲ್ಯ ಪ್ರಾಯ :19 ವರ್ಷ ,

ತಂದೆ: ರಮೇಶ್ ಮಲ್ಯ ,

ವಾಸ: ಶೀಕಾ ಮನೆ ಫಸ್ಟ್ ಎ ಕ್ರಾಸ್

ಶಿವಭಾಗ್ ಮಂಗಳೂರು

ಎತ್ತರಃ 5.5ಅಡಿ

ಮೈಬಣ್ಣಃ ಬಿಳಿ ಮೈ ಬಣ್ಣ, ಸಾಧಾರಣ ಶರೀರ

ಕಪ್ಪು ಬಣ್ಣದ ಪ್ಯಾಂಟ್‌ ಕಪ್ಪು ಬಣ್ಣದ ಟಿ ಶರ್ಟ್‌ ಧರಿಸಿರುತ್ತಾರೆ

ಭಾಷೆ: ಕನ್ನಡ, ಹಿಂದಿ ಕೊಂಕಣಿ, ಇಂಗ್ಲೀಷ

Mangalore South PS  

ಪಿರ್ಯಾದಿ Umesh poojary ತಮ್ಮ ಜನಾರ್ಧನ ಪೂಜಾರಿ ಪ್ರಾಯ: 45 ವರ್ಷ ರವರು, ದಿನಾಂಕ : 18-04-2023 ರಂದು ಸಂಜೆ 3-30 ಗಂಟೆಯ ಸುಮಾರಿಗೆ ಮಂಗಳೂರು ನಗರದ ಕೇಂದ್ರ ಮೈದಾನದ ಫುಟ್ ಬಾಲ್ ಗ್ರೌಂಡ್ ನ ಪಬ್ಲಿಕ್ ಗ್ಯಾಲರಿಯ ಮೇಲೆ ಮಲಗಿಕೊಂಡಿದ್ದರು. ಈ  ಸಮಯ ಮೈದಾನದಲ್ಲಿಯೇ ಸುತ್ತಾಡುತ್ತಾ, ಅಲ್ಲಿಯೇ ಇರುವ  ನಾಲ್ಕು ಮಂದಿ ಆರೋಪಿಗಳು, ಜನಾರ್ಧನ ಪೂಜಾರಿ ರವರು ಮಲಗಿದ್ದಲ್ಲಿಗೆ ಹೋಗಿ ಅವರಲ್ಲಿದ್ದ ಮೊಬೈಲ್ ಅನ್ನು ತೆಗೆದುಕೊಳ್ಳಲು ಅವರ ಪ್ಯಾಂಟ್ ಕಿಸೆಯನ್ನು ಹುಡುಕುತ್ತಿದ್ದಾಗ, ಜನಾರ್ಧನ ಪೂಜಾರಿ ರವರು ಎಚ್ಚರಗೊಂಡಿರುತ್ತಾರೆ. ಈ ಸಮಯ ಆ ನಾಲ್ಕು ಮಂದಿ ಆರೋಪಿಗಳು ಜನಾರ್ಧನ ಪೂಜಾರಿ ರವರಲ್ಲಿ ಮೊಬೈಲ್ ಕೊಡುವಂತೆ ಕೇಳಿದ್ದು, ಜನಾರ್ಧನ ಪೂಜಾರಿ ರವರು  ಮೊಬೈಲ್ ಕೊಡಲು ನಿರಾಕರಿಸಿರುತ್ತಾರೆ. ಆದರೂ ಕೂಡಾ ಆ ನಾಲ್ಕು ಮಂದಿ ಆರೋಪಿಗಳು ಅವರಲ್ಲಿದ್ದ ಮೊಬೈಲ್ ನ್ನು ಬಲವಂತವಾಗಿ ಸುಲಿಗೆ ಮಾಡಲು ಪ್ರಯತ್ನಿಸಿದ್ದು, ಜನಾರ್ಧನ ಪೂಜಾರಿ ರವರು ತಮ್ಮ ಮೊಬೈಲ್ ಅನ್ನು ಕೊಡದೇ ಇದ್ದಾಗ, ಆರೋಪಿಗಳು ಜನಾರ್ಧನ ಪೂಜಾರಿ ರವರನ್ನು ಕೊಲೆ ಮಾಡಿ ಮೊಬೈಲ್ ಅನ್ನು ಸುಲಿಗೆ ಮಾಡುವ ಉದ್ದೇಶದಿಂದ, ಆರೋಪಿಗಳಲ್ಲಿ ಒಬ್ಬಾತನು ತನ್ನ ಕಾಲಿನಿಂದ ಜನಾರ್ಧನ ಪೂಜಾರಿ  ರವರ ಎದೆಗೆ ಒದ್ದಾಗ ಅವರು ಸುಮಾರು 6 ಅಡಿ ಮೇಲಿನಿಂದ ಕೆಳಗಡೆ ಬಿದ್ದಿರುತ್ತಾರೆ. ಬಳಿಕ ಪುನಃ ನಾಲ್ಕು ಜನ ಆರೋಪಿಗಳು ಜನಾರ್ಧನ ಪೂಜಾರಿ ರವರು ಬಿದ್ದಿದ್ದಲ್ಲಿಗೆ  ಹೋಗಿ, ತಮ್ಮ ಕೈಗಳಿಂದ  ಜನಾರ್ಧನ ಪೂಜಾರಿ ರವರಿಗೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಜನಾರ್ಧನ ಪೂಜಾರಿರವರನ್ನು ಕೊಲೆ ನಡೆಸಿ, ಅವರಲ್ಲಿದ್ದ ಮೊಬೈಲ್ ನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Mangalore South PS

ಪಿರ್ಯಾದಿ ಜೆರಾರ್ಡ್ ಟವರ್ಸ್, ಪ್ರಾಯ 66 ವರ್ಷ ಎಂಬವರು  ದಿನಾಂಕ 17-04-2023 ರಂದು ಮಂಗಳೂರು ನಗರದ ವೆಲೆನ್ಸಿಯಾ ಚರ್ಚ್ ಸ್ಮಶಾನದ ಹತ್ತಿರ ಮರಣಕ್ಕೆ ಹೋಗಿ, ಅಲ್ಲಿ ಎಲ್ಲರೂ ಸಂತ್ವಾನ ಸಭೆ ಸೇರಿ, ಆ ಸಮಯ ಪಿರ್ಯಾದಿದಾರರು ತನ್ನ ಪರಿಚಯದ ವ್ತಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ಸಂಜೆ  ಸುಮಾರು 5-30 ಗಂಟೆಗೆ ಪಿರ್ಯಾದಿದಾರರಿಗೆ ಪರಿಚಯದ ಅನೀಲ್ ಲೋಬೊ ಎಂಬವರು ಏಕಾಏಕಿ ಪಿರ್ಯಾದಿದಾರರ ಹಿಂದಿನಿಂದ  ಬಂದು   ಕಾಲಿನಿಂದ ಬಲವಾಗಿ ಪಿರ್ಯಾದಿದಾರರ ಸೊಂಟಕ್ಕೆ ಒದ್ದಾಗ, ಪಿರ್ಯಾದಿದಾರರು ನೆಲಕ್ಕೆ  ಬಿದ್ದಿರುತ್ತಾರೆ. ಆಗ ಆರೋಪಿ  ಅನೀಲ್ ಲೋಬೊ ಎಂಬವರು ಕೈ ಮುಷ್ಠಿಯಿಂದ ಪಿರ್ಯಾದಿದಾರರ  ಎಡ ಕಿವಿ ಹಾಗೂ ತಲೆಗೆ ಹಲ್ಲೆ ನಡೆಸಿದ್ದು, ಆ ಸಮಯ ಪಿರ್ಯಾದಿದಾರರ ಕನ್ನಡಕ ಕೆಳಗೆ ಬಿದ್ದು ಹಾನಿಗೊಂಡು, ಪಿರ್ಯಾದಿದಾರರ  ಕೈಯಲ್ಲಿದ್ದ ವಾಚ್ ಕಟ್ ಆಗಿ ಕೈಗೆ ತಾಗಿ ಗಾಯವಾಗಿರುತ್ತದೆ. ಪಿರ್ಯಾದಿದಾರರು ಫಾದರ್ ಮುಲ್ಲರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.  ಎಂಬಿತ್ಯಾದಿಯಾಗಿರುತ್ತದೆ.

 Mangalore South PS

ಪಿರ್ಯಾದಿ ಶ್ರೀ ಅನಿಲ್ ಲೋಬೋ ರವರು ದಿನಾಂಕ 17-04-2023 ರಂದು ಸಂಜೆ 5-00 ಗಂಟೆ ಸುಮಾರಿಗೆ  ಮಂಗಳೂರು ನಗರದ ವೆಲೆನ್ಸಿಯಾ ಚರ್ಚ್ ನಲ್ಲಿ ಓಸಿನ್ ಪಿರೇರಾ ಎಂಬುವರ ಮರಣ ಮುಗಿಸಿ  ಹೊರ ಬಂದು ಕಾಫಿ ಕುಡಿಯುತ್ತಿರುವ ಸಂದರ್ಭದಲ್ಲಿ, ಪಿರ್ಯಾದಿದಾರರ ಪರಿಚಯದ  ಆರೋಪಿ ಬೆಂದೂರು ನಿವಾಸಿ ಜೆರಾಲ್ಡ್ ಟವರ್ಸ್ ಎಂಬುವರು ಪಿರ್ಯಾದಿದಾರರ ಹಿಂದಿನಿಂದ  ಬಂದು  ಪಿರ್ಯಾದಿದಾರರ ಭುಜಕ್ಕೆ ದೂಡಿ, ಪಿರ್ಯಾದಿದಾರರ ಕೈಯಲ್ಲಿದ್ದ ಕಾಫಿಯನ್ನು ಪಿರ್ಯಾದಿದಾರರ ಮುಖಕ್ಕೆ ಚೆಲ್ಲಿ,  ಪಿರ್ಯಾದಿದಾರರನ್ನು ಉದ್ದೇಶಿಸಿ, “ನೀನು ಎಮ್.ಸಿ.ಸಿ ಬ್ಯಾಂಕಿನ ಚೇರ್ ಮೆನ್ ಆಗಿ ಬಾರಿ ಹಾರಾಡುತ್ತೀಯಾ, ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನ್ನ  ಕೈಕಾಲು ಮುರಿಯುತ್ತೇನೆ, ಬೋಳಿ ಮಗನೇ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ” ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ 18-04-2023 ರಂದು ಪೆರ್ಮನ್ನೂರು ಗ್ರಾಮದ ಕಲ್ಲಾಪು ಪಟ್ಲ ವಾಸುದೇವ  ತಂತ್ರಿ ರೋಡ್  ಕೆಮ್ಮಡೆ ಬೆಟ್ಟು ಗದ್ದೆ ಎಂಬಲ್ಲಿ ವಾಸವಾಗಿದ್ದ ಪಿರ್ಯಾದಿ Rati ಸ್ವಸಹಾಯದ ಹಣ ಪಾವತಿ ಮಾಡಲು ಹೋದವರು  ಸಂಜೆ 3-45 ಗಂಟೆಯ ಸಮಯಕ್ಕೆ ಬಂದಾಗ ಮನೆಯ ದಕ್ಷಿಣ ಭಾಗದ ಕಂಪೌಂಡ್ ಗೋಡೆಯನ್ನು ಪಿರ್ಯಾದಿದಾರರ ಮನೆಯ ಸಮೀಪದಲ್ಲಿ ವಾಸವಾಗಿರುವ ಹರೀಶ, ಸಂದೀಪ್, ಶಿವಾನಂದ, ಅಮೀತಾ, ಶುಬ್ಬಲಕ್ಷ್ಮಿ ದಿವ್ಯಾ, ಮತ್ತಿತರರು ಸೇರಿಕೊಂಡು ಕೈಯಲ್ಲಿ, ಪಿಕಾಸು, ಕತ್ತಿ, ಗುದ್ದಲಿ, ಕೊಡಲಿ ಹಿಡಿದುಕೊಂಡು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ  ಕಂಪೌಂಡ ಗೋಡೆಯನ್ನು ಕೆಡವಿ ಹಾಕುವುದನ್ನು ನೋಡಿದ ಪಿರ್ಯಾದಿದಾರರು ಅವರ ಬಳಿಗೆ ಬಂದು , ನಮ್ಮ ಕಂಪೌಂಡು ಗೋಡೆಯನ್ನು ಒಡೆದು ಹಾಕಿ ಯಾಕೇ ನಷ್ಟ ಉಂಟು ಮಾಡುತ್ತೀರಿ ಎಂದು ಕೇಳಿದಾಗ ಅವರೆಲ್ಲರೂ “ಬೇವಾರ್ಸಿ ರಂಡೇ, ಮುಂಡೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿದಲ್ಲದೇ, ಹರೀಶ್ ಎಂಬಾತನು ಪಿರ್ಯಾದಿದಾರರ ಮೈಮೇಲೆ ಕೈಹಾಕಿ ಮಾನ ಹಾನಿ ಮಾಡಿ ಫಿರ್ಯಾದಿ ಧರಿಸಿದ್ದ ಬಟ್ಟೆಯನ್ನು ಹಿಡಿದು ಎಳೆದು ಹರಿದು ಹಾಕಿ ಬಳಿಕ ಹರೀಶ, ಸಂದೀಪ್ ಶಿವಾನಂದ ರವರುಗಳು ಅವರ ಕೈಯಲ್ಲಿದ್ದ ಫಿಕಾಸು ಮತ್ತಿತರ ಸಾಮಾಗ್ರಿಗಳಿಂದ ಹೋಡೆಯಲು ಬಂದಾಗ ಬಗ್ಗಿ ತಪ್ಪಿಸಿಕೊಂಡ  ಪಿರ್ಯಾದಿಯನ್ನು ಕಂಡು ಆರೋಪಿಗಳು ಫಿರ್ಯಾದಿಯನ್ನು ದೂಡಿ ಹಾಕಿ ಕೈಗಳಿಂದ ಎದ್ವಾ ತದ್ವಾ ಹೋಡೆದ ಪರಿಣಾಮ ಫಿರ್ಯಾದಿದಾರರ ಬಲ ಕೈಗೆ, ಬೇನ್ನಿನ ಹಿಂಬಾಗ, ಎಡ ಕೈಗೆ ಸೊಂಟಕ್ಕೆ ತರಚಿದ ಗಾಯ ನೋವುಂಟು ಆಗಿರುತ್ತದೆ. ಮತ್ತೆ ಫಿರ್ಯಾದಿದಾರರ ಮನೆಯ ಗೋಡೆಗೆ ಕೂಡಾ ಹಾನಿ ಉಂಟು ಮಾಡಿ ಒಟ್ಟು ಸುಮಾರು 1 ಲಕ್ಷ ನಷ್ಟ ಉಂಟು ಮಾಡಿರುತ್ತಾರೆ. ಗಾಯ ಗೊಂಡಿರುವ ಪಿರ್ಯಾದಿದಾರರು ನೇತಾಜಿ ಯಲ್ಲಪ್ಪ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Ullal PS

ದಿನಾಂಕ 17-04-2023 ರಾತ್ರಿ 10-00 ಗಂಟೆಗೆ ಪಿರ್ಯಾದಿ Indumathi ಹಾಗೂ ಅವರ ಮಗಳು ಹಾಗೂ ಮಕ್ಕಳು ಮನೆಯಲ್ಲಿರುವ ಸಮಯ ಅಳಿಯನಾದ ಧನರಾಜ್ ಎಂಬಾತನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಗಳು ಅಕ್ಷೀತಾಳಿಗೆ ಹೋಡೆಯಲು ಬಂದಾಗ ಫಿರ್ಯಾದಿದಾರರು ಮತ್ತು ಮಗಳು ಭಯಗೊಂಡು ಮನೆಯಿಂದ ಹೊರಗೆ ಹೋಗಿ ಆ ದಿನ ಬೇರೆಯವರ ಮನೆಯಲ್ಲಿ ಇದ್ದು, ದಿನಾಂಕ 18-04-2023 ಸಮಯ 10-30 ಗಂಟೆಗೆ ಫಿರ್ಯಾದಿದಾರರು ಮತ್ತು ಅವರ ಮಗಳು ವಾಪಾಸು ಮನೆಗೆ ಬಂದಾಗ ಅಳಿಯ ಧನರಾಜ್ ನು ಹೋರಗೆ ಹೋಗಿದ್ದವನು ಮನೆಗೆ ಬಂದು ಎಕಾಎಕಿ ಫಿರ್ಯಾದಿದಾರರನ್ನು ಉದ್ದೇಶಿಸಿ ಬೇವರ್ಸಿ ರಂಡೆಲೆ, ಎಂದು ಅವಾಚ್ಯ ಶಬ್ದಗಳಿಂದ ಬೈಯಲು ಪ್ರಾರಂಬಿಸಿದಾಗ ಯಾಕೇ ಬೈಯುತ್ತಿದ್ದಿ ಎಂದು ಪ್ರಶ್ನೀಸಿದಕ್ಕೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ, ಫಿರ್ಯಾದಿದಾರರ ಮೈಮೇಲೆ ಕೈ ಹಾಕಿ ಮಾನಹಾನಿ ಮಾಡಿದಲ್ಲದೆ ಕೈಯಿಂದ ಹೊಡೆದು ದೂಡಿ ಹಾಕಿದಾಗ ರಕ್ಷಣೆಗೆ ಬಂದ ಮಗಳು ಅಕ್ಷಿತಾಳಿಗೆ ಧನರಾಜ್ನು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಕತ್ತಿಯಿಂದ ಕಡಿಯಲು ಹೋದಾಗ ಆಕೆ ಹೆದರಿಕೊಂಡು ಮಕ್ಕಳಿಬ್ಬರ ಜೋತೆ ಹೋರಗಡೆ ಹೋಗಿರುತ್ತಾಳೆ. ಆತನು ಫಿರ್ಯಾದಿದಾರರನ್ನು ಉದ್ದೇಶಿಸಿ ನಿಮ್ಮನೆಲ್ಲಾ ಕಡಿದು ಕೊಂದು ಹಾಕದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ ಸಾರಾಂಶ.

 

 

                                                                       

                                 

                                         

Last Updated: 21-08-2023 12:35 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080