ಅಭಿಪ್ರಾಯ / ಸಲಹೆಗಳು

Crime Reported in CEN Crime PS

ದಿನಾಂಕ 06-05-2023 ರಂದು ತಮ್ಮ DCB ಬ್ಯಾಂಕ್ ಸ್ಟೇಟ್ ಮೆಂಟ್ ನೋಡಿದಾಗ ತಮ್ಮ ಬ್ಯಾಂಕ್ ಖಾತೆನೇರಿಂದ 45,657/- ಹಣ ಡೆಬಿಟ್ ಆಗಿರುವುದು ಕಂಡುಬಂದಿದ್ದು ಕೂಡಲೇ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ವಿಚಾರಿಸಿದಾಗ ಬ್ಯಾಂಕ್ ಮ್ಯಾನೇಜರ್ ರವರು ರಜೆಯಲ್ಲಿರುವುದಾಗಿಯೂ, ತಾನು ಬ್ಯಾಂಕಿಗೆ ಹೋಗಿ ಪರಿಶೀಲಿಸಿ ತಿಳಿಸುತ್ತೇನೆ ಎಂದು ಹೇಳಿರುತ್ತಾರೆ. ಅದರಂತೆ ದಿನಾಂಕ 18-05-2023 ರಂದು ಫಿರ್ಯಾದುದಾರರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಫಿರ್ಯಾದುದಾರರ ಗಮನಕ್ಕೆ ಬಾರದೆ ಬ್ಯಾಂಕ್ ಖಾತೆಯಿಂದ ದಿನಾಂಕ 08-04-2023 ರಂದು favouring Booking. Com, ಎಂಬಲ್ಲಿಗೆ ಹಣ ವರ್ಗಾವಣೆ ಯಾಗಿರುವುದು ಕಂಡುಬಂದಿದೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡುವಂತೆ  ಬ್ಯಾಂಕ್ ಮೆನೇಜರ್ ಫಿರ್ಯಾದುದಾರರಲ್ಲಿ  ತಿಳಿಸಿರುತ್ತಾರೆ. ಅದರಂತೆ ಫಿರ್ಯಾದುದಾರರು, ಯಾರೋ ಅಪರಿಚಿತ ವ್ಯಕ್ತಿ  ತನ್ನ ಗಮನಕ್ಕೆ ಬಾರದೆ ಬ್ಯಾಂಕ್ ಖಾತೆಯಿಂದ ದಿನಾಂಕ 08-04-2023 ರಂದು favouring Booking. Com, ಎಂಬಲ್ಲಿಗೆ ಮೋಸ ವಂಚನೆ ಮೂಲಕ ಹಣ ವರ್ಗಾವಣೆ ಮಾಡಿರುವುದಾಗಿದೆ ಎಂಬಿತ್ಯಾದಿಯಾಗಿ ನೀಡಿದು ದೂರು ಆಗಿರುತ್ತದೆ.

Traffic South Police Station

ದಿನಾಂಕ 19-05-2023 ರಂದು  ಪಿರ್ಯಾದಿ SUSHRATH S SHETTY ತಂದೆಯವರಾದ  ಸುಧಾಕರ ಶೆಟ್ಟಿ   ಎಂಬವರು ಅಳಪೆ  ಗ್ಯಾಲರಿ ಅಪಾರ್ಟ್ ಮೆಂಟ್  ಎದುರು   ಪಂಪ್ ವೆಲ್  ಕಡೆಯಿಂದ   ಪಡೀಲ್   ಕಡೆಗೆ  ಹಾದು   ಹೋಗಿರುವ  ರಸ್ತೆಯನ್ನು   ಎಡಬದಿಯಿಂದ  ಬಲಬದಿಗೆ  ದಾಟುತ್ತಿರುವ ಸಮಯ  ಸುಮಾರು   ಬೆಳಿಗ್ಗೆ  05:30 ಗಂಟೆಗೆ  ಗಣೇಶ್  ಟ್ರಾವೆಲ್  ಎಂಬ  ಹೆಸರಿನ  ಬಸ್  ನಂಬರ್   KA-51-AH-6448  ನೇದನ್ನು   ಅದರ   ಚಾಲಕ  ದಯಾನಂದ  ಎಂಬಾತನು  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ   ಚಲಾಯಿಸಿಕೊಂಡು   ಬಂದು   ಸುಧಾಕರ ಶೆಟ್ಟಿಯವರಿಗೆ  ಡಿಕ್ಕಿ ಹೊಡೆದು ಅಪಘಾತ   ಸ್ಥಳದಿಂದ ವಾಹನ  ಸಮೇತ  ಪರಾರಿಯಾದ  ಪರಿಣಾಮ   ಅವರು   ಡಾಮಾರು  ರಸ್ತೆಗೆ  ಬಿದ್ದು  ಅವರ  ತಲೆಗೆ ಗುದ್ದಿದ ಗಾಯವಾಗಿದ್ದು ಕಿವಿಯಲ್ಲಿ ಹಾಗೂ  ಮೂಗಿನಲ್ಲಿ ರಕ್ತ ಸೋರುತ್ತಿರುವ ಗಾಯವಾಗಿದ್ದವರನ್ನು ಅಲ್ಲಿ  ಸೇರಿದ  ಜನರು ಚಿಕಿತ್ಸೆ  ಬಗ್ಗೆ ಹೈಲ್ಯಾಂಡ್  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ಅಲ್ಲಿ  ಪ್ರಥಮ ಚಿಕಿತ್ಸೆ  ಕೊಡಿಸಿರುತ್ತಾರೆ . ನಂತರ  ಹೆಚ್ಚಿನ ಚಿಕಿತ್ಸೆ  ಬಗ್ಗೆ  ಪಿರ್ಯಾದಿದಾರು  ವೆನ್ಲಾಕ್  ಆಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ   ಅಲ್ಲಿನ  ವೈದ್ಯರು ಸಮಯ  07:15  ಗಂಟೆಗೆ  ವೈದ್ಯರು  ಸುಧಾಕರ ಶೆಟ್ಟಿಯವರನ್ನು ಪರೀಕ್ಷಿಸಿ   ಆಸ್ಪತ್ರೆಗೆ  ಕರೆತರುವ ಮೊದಲೇ  ಮೃತಪಟ್ಟಿರುತ್ತಾರೆ ಎಂದು  ತಿಳಿಸಿರುತ್ತಾರೆ  ಎಂಬಿತ್ಯಾದಿ.

Mangalore South PS                                     

ಪಿರ್ಯಾದಿ ಮಂಗಳೂರು ನಗರ ಸಿ.ಸಿ.ಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಶರಣಪ್ಪ ಭಂಡಾರಿ ರವರು ದಿನಾಂಕ 19-05-2023 ರಂದು ಸಿಬ್ಬಂದಿಗಳೊಂದಿಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಮಯ ಸುಮಾರು 11-00 ಗಂಟೆಗೆ ಮಂಗಳೂರು ನಗರದ  ಅತ್ತಾವರ ಕಟ್ಟೆ ಪರಿಸರದಲ್ಲಿ ಮಾದಕ ವಸ್ತುವನ್ನು ಸೇವನೆ ಮಾಡಿಕೊಂಡಿದ್ದ ಆರೋಪಿ ನೌಷದ್, ಪ್ರಾಯ: 23 ವರ್ಷ,  ವಾಸ: ಕೇರಾಫ್ ಅಸ್ವೀರ್ ರವರ ಬಾಡಿಗೆ ಮನೆ, ಉರು ಮನೆ, ನಾಟೆಕಲ್, ಕೊಣಾಜೆ, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಆರೋಪಿಯನ್ನು ಮಂಗಳೂರು ಎ.ಜೆ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿದ ಬಗ್ಗೆ ವೈಧ್ಯರಿಂದ ತಪಾಸಣೆ ನಡೆಸಲಾಗಿ,  ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ವೈದಕೀಯ ವರದಿಯಿಂದ ತಿಳಿದು ಬಂದಿರುತ್ತದೆ. ಆದ್ದುದರಿಂದ ಗಾಂಜಾ ಸೇವನೆ ಮಾಡಿದ ಅಪರಾದ ಎಸಗಿದ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

Crime Reported in CEN Crime PS

ಪಿರ್ಯಾದಿ ದಿನಾಂಕ 20-04-2023 ರಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಿನಕ್ಕೆ 1500 ದಿಂದ 3000 ಹಣವನ್ನು ಗಳಿಸಬಹುದು ಎಂಬ ಪೋಸ್ಟ್ ಇದ್ದುದನ್ನು ನೋಡಿ, ಸದ್ರಿ ಇನ್ಸ್ಟಾಗ್ರಾಮ್ ಖಾತೆಯ ವ್ಯಕ್ತಿಗೆ ಕರೆ ಮಾಡಿರುತ್ತಾರೆ. ಆ ವ್ಯಕ್ತಿಯು ನಂತರ ಫಿರ್ಯಾದುದಾರರಿಗೆ ವಾಟ್ಸಾಫ್ ನಲ್ಲಿ @aisha232734 ಎಂಬ ಟೆಲಿಗ್ರಾಮ್ ಗ್ರೂಪ್ ಗೆ ಸೇರಿಸಿದ ಬಗ್ಗೆ ಮೆಸೇಜ್ ಕಳುಹಿಸಿ ಟಾಸ್ಕ್ ಕಂಪ್ಲೀಟ್ ಮಾಡಲು ತಿಳಿಸಿರುತ್ತಾರೆ. ಅದರಂತೆ ಮೊದಲಿಗೆ 10ರೂ. ಮತ್ತು 20ರೂ. ಅಲ್ಲಿ ಟಾಸ್ಕ್ ಮಾಡಿದ ಬಳಿಕ ಪಿರ್ಯಾದಿದಾರರಿಗೆ ಹಣವನ್ನು ವಾಪಸ್ಸು ಕಳುಹಿಸಿದ್ದು ಇದನ್ನು ನಂಬಿದ ಫಿರ್ಯಾದುದಾರರು ಆರೋಪಿಗಳು ನೀಡಿದ ಟಾಸ್ಕ್ ಬಗ್ಗೆ ತಾನು ಹೊಂದಿರುವ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಖಾತೆ ನಿಂದ 1,05,000/- ಮತ್ತು ಐಸಿಐಸಿಐ ಬ್ಯಾಂಕ್ ಖಾತೆ ನಂಬ್ರ ನೇದರಿಂದ 76,500/- ಹೀಗೆ ಒಟ್ಟು ರೂಪಾಯಿ 1,81,500/- ದಿನಾಂಕ 01-05-2023 ರಂದು ಒಂದೆ ದಿನದಲ್ಲಿ ಯುಪಿಐ, ಐಎಂಪಿಎಸ್, ಮತ್ತು ನೆಪ್ಟ್ ಮೂಲಕ ಕಳುಹಿಸಿ ಮೋಸ ಹೋಗಿರುತ್ತಾರೆ.  ಆರೋಪಿಗಳು ಇನ್ಸ್ ಸ್ಟಾ ಗ್ರಾಮ್ ಖಾತೆಯಲ್ಲಿ ನಕಲಿ ಪೋಸ್ಟ್ ಗಳನ್ನು ಹಾಕಿ ಟೆಲಿಗ್ರಾಮ್ ಆಪ್ ಮೂಲಕ ಲಿಂಕ್ ಕಳುಹಿಸಿ ಫಿರ್ಯಾದಾರರಲ್ಲಿ ಹಣ ಗಳಿಸಬಹುದು ಎಂದು ನಂಬಿಸಿ ಟಾಸ್ಕ್ ರೂಪದಲ್ಲಿ ಹಣವನ್ನು ಮೋಸದಿಂದ ತೊಡಗಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Traffic North Police Station

ದಿನಾಂಕ-18-05-2023 ರಂದು  ಪಿರ್ಯಾದಿ Pavan A Shetty ಗುತ್ತಿನ ಮನೆಯಲ್ಲಿ ನಡೆಯಲಿರುವ ಪಿರ್ಯಾದಿದಾರರ ತಂದೆಯವರಾದ ದಿ| ಅಶೋಕ್ ಶೆಟ್ಟಿಯವರ ಉತ್ತರ ಕ್ರಿಯೆ ಕಾರ್ಯಕ್ರಮಕ್ಕೆ  ಬರುವ ಸಲುವಾಗಿ  ಪಿರ್ಯಾದಿದಾರರ ಸಂಬಂದಿಕರಾದ ಸುಧಾಕರ ಶೆಟ್ಟಿ(68 ವರ್ಷ), ಭೋಜ ಶೆಟ್ಟಿ(73ವರ್ಷ), ವಿಠಲ ಶೆಟ್ಟಿ(70ವರ್ಷ) ರವರು ಮುಲ್ಕಿ ಜಂಕ್ಷನಿನಿಂದ ಆಟೋ ರಿಕ್ಷಾ ನಂಬ್ರ KA-19-AA-3706 ನೇದರಲ್ಲಿ ಪ್ರಯಾಣಿಕರಾಗಿ ಹೊರಟು ಉಳೆಪಾಡಿ ಕಡೆಗೆ ಬರುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 12:30 ಗಂಟೆಗೆ  ಮುಲ್ಕಿಯ ಕುಕ್ಕಿ ಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಆಟೋ ರಿಕ್ಷಾವನ್ನು  ಅದರ ಚಾಲಕ ಬಶೀರ ಎಂಬವರು  ದುಡುಕುತನ ಮತ್ತು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಮುಂದಿನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಗಮನಿಸಿ ಒಮ್ಮೆಲೆ ಆಟೋ ರಿಕ್ಷಾವನ್ನು ಎಡಕ್ಕೆ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾವು ಹತೋಟಿ ತಪ್ಪಿ  ರಸ್ತೆಗೆ ಬಿದ್ದು,ಆಟೋ ರಿಕ್ಷಾದಲ್ಲಿ  ಪ್ರಯಾಣಿಸುತ್ತಿದ್ದ ವಿಠಲ ಶೆಟ್ಟಿಯವರ ಬಲ ಬದಿಯ ಕಾಲರ್ ಬೋನಿಗೆ ಮೂಳೆ ಮುರಿತದ ಗಾಯ, ಬಲ ರಿಬ್ಸ್ ಗೆ  ಗುದ್ದಿದ ರೀತಿಯ ಗಾಯ, ಸುಧಾಕರ ಶೆಟ್ಟಿಯವರ ಎಡ ಬದಿಯ ಕಾಲರ್ ಬೋನಿಗೆ  ಮೂಳೆ ಮುರಿತದ ಗಾಯ, ಎಡ ರಿಬ್ಸ್ ಗೆ ಗುದ್ದಿದ ರೀತಿಯ ಗಾಯ ಹಾಗೂ ಭೋಜ ಶೆಟ್ಟಿಯವರ ಎಡ ಬದಿಯ ರಿಬ್ಸ್ ಗೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿದ್ದು ಗಾಯಾಳುಗಳು  ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Moodabidre PS

ದಿನಾಂಕ 17.05.2023 ರಂದು ಪಿರ್ಯಾದಿ Sandhya Prasad Shetty ಮನೆಯಾದ ಕರಿಂಜೆ ಗ್ರಾಮದಲ್ಲಿ ಗೃಹ ಪ್ರವೇಶ ಕಾರ್ಯಕ್ರಮವಿದ್ದು ರಾತ್ರಿ ಸಮಯ ಸುಮಾರು 07.27 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಗಂಡನ ಮೊಬೈಲ್ ಗೆ ರವಿ ಭಂಡಾರಿ ಎಂಬುವರು ಕರೆ ಮಾಡಿ "ನಿನ್ನ ಮನೆಗೆ ಬರುತ್ತೇನೆ, ನೀನು ರಾತ್ರಿ ಗೃಹ ಪ್ರವೇಶ ಕಾರ್ಯಕ್ರಮ ಹೇಗೆ ನಡೆಸುತ್ತೀಯಾ, ನಿನ್ನನ್ನು ಬಿಡುವುದಿಲ್ಲ ಹಾಗೂ ಹಣದ ವಿಚಾರದಲ್ಲಿ ನಾನು ನಿನಗೆ ಯಾವುದೇ ಹಣ ನೀಡುವುದಿಲ್ಲ ಹೇಗೆ ವಸೂಲಿ ಮಾಡುತ್ತೀಯ ನೋಡುತ್ತೇನೆ" ಎಂದು ಬೆದರಿಕೆ ಹಾಕಿದ್ದು, ನಂತರ ಪುನಃ ಕರೆ ಮಾಡಿದ್ದು ಆ ಸಮಯ ಪಿರ್ಯಾದಿದಾರರು ಕರೆ ಸ್ವೀಕರಿಸಿದ್ದು, ಆಗ 'ನೀನು ಯಾರು, ಹೇಗೆ ನೀವು ಗೃಹ ಪ್ರವೇಶದ ಕಾರ್ಯಕ್ರಮದಲ್ಲಿ ಖುಷಿಯಲ್ಲಿ ಸಂಭ್ರಮಿಸುತ್ತೀರಿ ನಾನು ನೋಡುತ್ತೇನೆ, ನಿನ್ನ ಬಗ್ಗೆ ಎಲ್ಲಾ ಗೊತ್ತು ನೀನು ಎಂಥವಳು ಎಂದು ಹೇಳಬೇಕಾ’ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ನಂತರ ರಾತ್ರಿ ಸುಮಾರು 10.30 ಗಂಟೆ ಸಮಯಕ್ಕೆ ರವಿ ಭಂಡಾರಿ, ಪಚ್ಚು ಪುಚ್ಚೇರಿ, ಆಕಾಶ್, ಜಗ್ಗು, ಪ್ರಜ್ವಲ್ ಹಾಗೂ ಇತರರು ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ಪಿರ್ಯಾದಿದಾರರ ಎದೆಗೆ ದೂಡಿ ನಿನ್ನ ಗಂಡ ಪ್ರಸಾದ್ ಎಲ್ಲಿ ಅವನನ್ನು ಕರೆಯಿಸಿ ಎಂದು ಏರು ಧ್ವನಿಯಲ್ಲಿ ಬೈದು ಕಾರ್ಯಕ್ರಮಕ್ಕೆ ಬಂದಿದ್ದ ನೆಂಟರನ್ನು ದೂಡಿ, ಕಾರ್ಯಕ್ರಮಕ್ಕೆ ಮಾಡಿದ ಊಟವನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 21-08-2023 12:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080