ಅಭಿಪ್ರಾಯ / ಸಲಹೆಗಳು

Crime report in Barke PS

ಪಿರ್ಯಾದಿದಾರಾದ ಶ್ರೀ ಅಭಿಷೇಕ್ ದಾರರ ಮಾಲಕತ್ವದ ಕೆಎ 19 ಇಬಿ 0002 ನೇ ಸುಜುಕಿ ಆಕ್ಸಸ್ 125 ಮೋಟಾರ್ ಸೈಕಲ್ ನ್ನು ದಿನಾಂಕ: 16-06-2023 ರಂದು ತನ್ನ ವಾಸ್ತವ್ಯದ ಅಪಾರ್ಟಮೆಂಟಿನ ಪಾರ್ಕಿಂಗ್ ಸ್ಥಳದಲ್ಲಿ ಎಂದಿನಂತೆ ರಾತ್ರಿ 8-30 ಗಂಟೆಗೆ ಪಾರ್ಕ್ ಮಾಡಿ ಮರುದಿನ ಬೆಳಿಗ್ಗೆ 07-00 ಗಂಟೆಗೆ ಕೆಲಸಕ್ಕೆ ಹೊಗುವ ಸಮಯ ಅಪಾರ್ಟಮೆಂಟ್ ನ ಪಾರ್ಕಿಂಗ್ ಸ್ಥಳಕ್ಕೆ ಬಂದು ಮೋಟಾರ್ ಸೈಕಲ್ ನ್ನು ನೋಡಿದಾಗ ಮೋಟಾರ್ ಸೈಕಲ್ ಸ್ಥಳದಲ್ಲಿ ಇಲ್ಲದೆ ಇದ್ದು, ಸದ್ರಿ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡಿ ಹೋಗಿರುತ್ತಾರೆ. ಪಿರ್ಯಾದಿದಾರರು ತನ್ನ ಕಾಣೆಯಾದ ದ್ವಿ-ಚಕ್ರ ವಾಹನವನ್ನು ಪಾರ್ಕ್ ಮಾಡಿದ ಸ್ಥಳದ ಸುತ್ತ ಮುತ್ತಲಿನ ಪರಿಸರದಲ್ಲಿ ಹಾಗೂ ಮಂಗಳೂರು ನಗರದಾದ್ಯಂತ ಎಲ್ಲಾ ಸ್ಥಳದಲ್ಲಿ ಹುಡುಕಾಡಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ ಪಿರ್ಯಾದಿದಾರರ ಕಳವಾದ ಮೋಟಾರ್ ಸೈಕಲ್ ನ್ನು ಪತ್ತೆ ಮಾಡಿ ಕೋಡಬೇಕೆಂಬಿತ್ಯಾದಿ ಸಾರಾಂಶ.

ಕಳುವಾದ ದ್ವಿಚಕ್ರ ವಾಹನದ ವಿವರ.   

KA 19 EB 0002, Suzuki Access

ಬಣ್ಣ- Black Colur

CEN Crime PS

ಫಿರ್ಯಾದಿ ಪರಿಚಯದ ಜಾಗದ  ಬ್ರೋಕರ್ ಹಾಗೂ ರಿಯಲ್ ಎಸ್ಟೇಟ್ ಎಜೆಂಟ್ ರಾದ ಆರೋಪಿಗಳಾದ ತಿಪ್ಪೇಸ್ವಾಮಿ ಮತ್ತು ಹರ್ಷವರ್ಧನ ಗೌಡ ಎಂಬವರು ಮಂಗಳೂರು ಹೊರ ವಲಯದ ಉಳ್ಳಾಲದ ಮಾರಾಟಕ್ಕಿರುವ ಜಾಗವನ್ನು ಕೊಡಿಸುವುದಾಗಿ ಫಿರ್ಯಾದಿಯನ್ನು ನಂಬಿಸಿದಂತೆ  ಫಿರ್ಯಾದಿಯು ತನ್ನ  ಕರ್ನಾಟಕ ಬ್ಯಾಂಕ್ ಖಾತೆಯಿಂದ RTGS ಮೂಲಕ ರೂ.25 ಲಕ್ಷ ಹಣ ಆರೋಪಿತರ ಖಾತೆಗೆ ವರ್ಗಾವಣೆ ಮಾಡಿ ಮತ್ತು ನಗದಾಗಿ ಬೇರೆ ಬೇರೆ ದಿನಾಂಕದಂದು ರೂ.10 ಲಕ್ಷ ಒಟ್ಟು ರೂ.35 ಲಕ್ಷ ಹಣವನ್ನು ಆರೋಪಿತರು ಫಿರ್ಯಾದಿಯಿಂದ ಪಡೆದುಕೊಂಡು ಜಾಗವನ್ನು ಫಿರ್ಯಾದಿಗೆ ತೆಗೆಯಿಸಿ ಕೊಡದೆ ಹಣವನ್ನು ವಾಪಸು ನೀಡದೆ ಇದ್ದಾಗ ಫಿರ್ಯಾದಿ ಹಣ ಕೇಳಲು ಕೊಲೆ ಬೆಧರಿಕೆ ಹಾಕಿ ಫಿರ್ಯಾದಿಯನ್ನು ನಂಬಿಸಿ ವಂಚಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

2) ಪಿರ್ಯಾದಿದಾರರು ವಿದೇಶದಲ್ಲಿ ಉದ್ಯೋಗಾವಕಾಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದ ಸಮಯದಲ್ಲಿ ದಿನಾಂಕ: 28/03/2023 ರಂದು ಇನ್ಸ್ಟಾಗ್ರಾಂ ಖಾತೆಯ ಮೂಲಕ ವಿಲಿಯಂ ಪೌಲ್ ಆಂಟನಿ ಎಂಬವರನ್ನು ಪರಿಚಯವಾಗಿದ್ದು ಸದ್ರಿಯವರು ತಾನು ಕೆನಡಾ ದೇಶದ ಪ್ರಜೆಯಾಗಿದ್ದು ಇಮ್ಮಿಗ್ರೇಷನ್ ಅಧಿಕಾರಿಯಾಗಿರುವುದಾಗಿ ತನ್ನನ್ನು ಪರಿಚಯಿಸಿಕೊಂಡು, ಪಿರ್ಯಾದಿದಾರರಿಗೆ ಕೆನಡಾ ದೇಶದಲ್ಲಿ ಉದ್ಯೋಗ ಒದಗಿಸುವುದಾಗಿ ನಂಬಿಸಿ ವಾಟ್ಸ್ ಆಪ್ ನಂಬ್ರ +1(289)724-1900 ನೇದರ ಮೂಲಕ ಪಿರ್ಯಾದಿದಾರರೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದು ಉದ್ಯೋಗ ನೇಮಕಾತಿಯ ಬಗ್ಗೆ ವಿವಿಧ ದಾಖಲಾತಿಗಳನ್ನು ಕಳುಹಿಸಿ, ನೇಮಕಾತಿಯ ಬಗ್ಗೆ ವಿವಿಧ ಕಾರಣಗಳನ್ನು ತಿಳಿಸಿ ದಿನಾಂಕ: 28/03/2023 ರಿಂದ ದಿನಾಂಕ: 09/06/2023 ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ರೂ 4,80,000/- ಗಳನ್ನು ಪಿರ್ಯಾದಿದಾರರ ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ:  ನೇಯದರಿಂದ ಆರೋಪಿತರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ: 483402120003728 IFSC: UBIN0548341 , ಆಕ್ಸಿಸ್ ಬ್ಯಾಂಕ್ ಖಾತೆ ಸಂಖ್ಯೆ: 923020019323691 IFSC: UTIB0000655 ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ: 538202010011239 IFSC: UBIN0916277 ನೇಯದಕ್ಕೆ ವರ್ಗಾಯಿಸಿಕೊಂಡು  ಈವರೆಗೆ ಯಾವುದೇ ಉದ್ಯೋಗ ಒದಗಿಸಿಕೊಡದೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

Mangalore North PS                

ಪಿರ್ಯಾದಿ KANAKAPPA ದಾರರು  ಮಂಗಳೂರಿನ ಸಿಕ್ಕಿದ  ಕಡೆಗಳಲ್ಲಿ ಬಿಲ್ಡಿಂಗ್  ಹೆಲ್ಪರ್  ಕೆಲಸವನ್ನು  15  ವರ್ಷಗಳಿಂದ  ಮಾಡುತ್ತಿದ್ದು ಪಿರ್ಯಾದಿದಾರರು ಕೆಲಸಕ್ಕೆ ಬರಲು ತನ್ನ ಹೆಸರಿನಲ್ಲಿರುವ ಹೋಂಡಾ ಆಕ್ಟಿವಾವ ನ್ನು ಉಪಯೋಗಿಸುತ್ತಿದ್ದು  ದಿನಾಂಕ  30-05-2023 ರಂದು ಎಂದಿನಂತೆ ಕೆಲಸದ ನಿಮಿತ್ತ ಬಂದವನು ಮಂಗಳೂರಿನ ಜ್ಯೋತಿಕೆ,ಎಂ.ಸಿ ಆಸ್ಪತ್ರೆ ಯ ಒಳಗಡೆ ಬಿಲ್ಡಿಂಗ್ ಕೆಲಸ ನಡೆಯುತ್ತಿದ್ದು  ಪಿರ್ಯಾದಿದಾರರ ಬಾಬ್ತು  ಹೋಂಡಾ ಆಕ್ಟಿವಾ ಸ್ಕೂಟರ್ ನಂಬ್ರ ಕೆ,ಎ-19-EW-5669 ನೊಂದಣಿ ನಂಬ್ರದ  ದ್ವಿಚಕ್ರ  ವಾಹನವನ್ನು ಕೆ,ಎಂ,ಸಿ ಆಸ್ಪತ್ರೆ ಹೊರಗಡೆ  ಪಾರ್ಕಿಂಗ್  ಜಾಗದಲ್ಲಿ ಬೆಳಿಗ್ಗೆ 08.30 ಗಂಟೆಗೆ  ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು  ಸಂಜೆ ಸುಮಾರು 5.30 ಗಂಟೆಗೆ ಪಾರ್ಕ್ ಮಾಡಿದ ಆಕ್ಟಿವಾ ವಾಹನದ  ಬಳಿಗೆ ಬಂದಾಗ ಸದ್ರಿ ಸ್ಥಳದಲ್ಲಿ ಆಕ್ಟಿವಾ ವಾಹನ   ಅಲ್ಲಿರದೇ ಇದ್ದು ನಂತರ ಎಲ್ಲಾ ಕಡೆ ಹುಡುಕಾಡಿದರೂ  ಸಿಗದೇ ಇದ್ದುದರಿಂದ  ಪಿರ್ಯಾದಿದಾರರ   KA-19-EW-5669 ನೊಂದಣಿ ನಂಬ್ರದ  ಹೋಂಡಾ ಕಂಪನಿಯ ಆಕ್ಟಿವಾ ವಾಹನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಎಂಬಿತ್ಯಾದಿ ಸಾರಾಂಶ.

KA-19-EW-5669 ನೊಂದಣಿ ನಂಬ್ರದ  ಹೋಂಡಾ ಕಂಪನಿಯ  ಆಕ್ಟಿವಾ  ಸ್ಕೂಟರ್ ಮಾಡೆಲ್ 2017 ಬಿಳಿ  ಬಣ್ಣ,ಅಂದಾಜು ಮೌಲ್ಯ ರೂ. 20,000/-

 

 

Mangalore West Traffic PS           

ದಿನಾಂಕ:08-06-2023 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರಾದ ಮುರಳಿಧರ ಶೆಣೈ ರವರ ತಮ್ಮ ವಾಸುದೇವ ಶೆಣೈ[57] ರವರು ಅವರ ಬಾಬ್ತು KA19HG1905 ನೇ ಸ್ಕೂಟರ್ ನ್ನು ಮಂಗಳೂರು ನಗರದ ಕೆ ಎಸ್ ರಾವ್ ರಸ್ತೆಯ ನಲಪಾಡ್ ರೆಸಿಡೆನ್ಸಿ ಕಟ್ಟಡದ ಪಾರ್ಕಿಂಗ್ ಸ್ಥಳದ ಒಳಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಸ್ಕೂಟರ್ ಸಮೇತ ನಿಯಂತ್ರಣ ತಪ್ಪಿಬಿದ್ದು ಗಾಯಗೊಂಡು ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದು ಅದೇ ದಿನ ರಾತ್ರಿ ಗಾಯದ ನೋವು ಜಾಸ್ತಿ ಆಗಿರುದರಿಂದ ವೆನ್ ಲಾಕ್ ಆಸ್ಪತ್ರತೆಗೆ ದಾಖಲಾಗಿದ್ದವರು ದಿನಾಂಕ:18-06-2023 ರಂದು ಸಂಜೆ 04:35 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಮ್ರುತಪಟ್ಟಿರುತ್ತಾರೆ ಎಂಬಿತ್ಯಾದಿ.

CEN Crime PS

ದಿನಾಂಕ 15-06-2023 ರಂದು ಪಿರ್ಯಾದಿದಾರರ  ಮೊಬೈಲ್ ಗೆ ಇನ್ಸ್ ಸ್ಟಾಗ್ರಾಮ್ ನಲ್ಲಿ  ಗಿಪ್ಟ್ ಪಾರ್ಸೆಲ್ ಬಂದಿರುವುದಾಗಿ ಮಾಹಿತಿ ಬಂದಿದ್ದು ನಂತರ ದಿನಾಂಕ 16-06-2023 ರಂದು  ಬೆಳಿಗ್ಗೆ 10-00 ಸಮಯಕ್ಕೆ ಪಿರ್ಯಾದಿದಾರರು ಕೆಲಸದಲ್ಲಿದ್ದ ಸಮಯ ಬ್ರಾಡ್ ವೇ ಶಿಪ್ಪಿಂಗ್ ಕಂಪನಿಯ  ಮೊಬೈಲ್ ನಂಬ್ರ ++447760437507ನೇ ರಿಂದ ವಾಟ್ಸಸ್ ಆಫ್ ಮೆಸೇಜ್ ಬಂದಿದ್ದು ಸದ್ರಿಯವರು ಪಾರ್ಸೆಲ್ ಬಂದಿರುವ ಬಗ್ಗೆ ಹೇಳಿ ಮುಂದಿನ ಪಾರ್ಸೆಲ್ ಪ್ರೊಸೆಸ್ ಗಾಗಿ 45,000/- ಹಾಕಲು ಅಪರಿಚಿತ ವ್ಯಕ್ತಿಯ ಖಾತೆ ಸಂಖ್ಯೆ. 110120890408 IFSC CNRB0019046 ನೀಡಿದ ಮೇರೆಗೆ  ಆ ಖಾತೆಗೆ ಪಿರ್ಯಾದಿದಾರರು ಹಣವನ್ನು ವರ್ಗಾಯಿಸಿರುತ್ತಾರೆ ನಂತರ ಮರುಕ್ಷಣವೇ ಉಡುಗೊರೆ ಜೊತೆಗೆ ಹಣವನ್ನು ಇರಿಸಲಾಗಿದೆ ಈ ಬಗ್ಗೆ  ನಿಯಮ ಉಲ್ಲಂಘನೆಯಾಗಿದೆ ಎಂದು  ಬೆದರಿಸಿ 1,61,000/- ರೂ ಕಟ್ಟಬೇಕೆಂದು ಬೇಡಿಕೆಯಿಟ್ಟು ನಂತರ ಮೊಬೈಲ್ ಸಂಖ್ಯೆ +447432476463 ನೇದಲ್ಲಿ ಪದೆ ಪದೆ ಸಂದೇಶಗಳನ್ನು ಕಳುಹಿಸಿ ಬಾಕಿ ಉಳಿದ ಮೊತ್ತವನ್ನು ನೀಡುವಂತೆ ಹೇಳಿರುತ್ತಾರೆ  ಪಿರ್ಯಾದಿದಾರರಿಗೆ ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ..

 

ಇತ್ತೀಚಿನ ನವೀಕರಣ​ : 21-08-2023 01:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080