ಅಭಿಪ್ರಾಯ / ಸಲಹೆಗಳು

 

 Crime Report in Mangalore North PS   

ದಿನಾಂಕ: 19-07-2023 ರಂದು ಪಿರ್ಯಾದಿದಾರರಾದ ಅಪರಾಧ ಪತ್ತೆ ವಿಭಾಗದ ಎಎಸ್‌‌ಐ ದಾಮೋದರ ಮತ್ತು ಪಿಸಿ   ಸುನೀಲ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯ ಮಾಡುತ್ತಾ ಇದ್ದ ಸಮಯದಲ್ಲಿ ಬೆಳಿಗ್ಗೆ 11-45 ಗಂಟೆಗೆ ಬಂದ  ಮಾಹಿತಿಯಂತೆ ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ್ ಪೂಜಾ ಸೇಲ್ಸ್ ಎಂಬ ಅಂಗಡಿಗೆ ತಾಗಿ ಅದರ ಮಾಲಕ ಮನೋಹರ್ ಶೇಟ್ ಎಂಬಾತನು ಅಮಲು ಬರುವಂತಹ ಬಾಂಗ್ ಎಂಬ ಚಾಕೋಲೇಟನ್ನು ಸಾರ್ವಜನಿಕರಿಗೆ ಹಣಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಪಿರ್ಯಾದಿದಾರರು ಖಚಿತಪಡಿಸಿಕೊಂಡು ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ವರದಿಯನ್ನು  ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ.

Traffic South Police Station

ದಿನಾಂಕ :19-07-2023 ರಂದು ಪಿರ್ಯಾದಿದಾರರಾದ ಪ್ರಜ್ಞೇಶ್ ಶೆಟ್ಟಿ, ಎಂಬವರು ತನ್ನ ಪರಿಚಯದ ಮುಡಿಪು ಸುಳ್ಯಮದ ಸವಿನ್ ಪೂಜಾರಿ(23) ರೊಂದಿಗೆ ಅವರ ಬಾಬ್ತು KL-14-AC-0417 ನೇ ನಂಬ್ರದ ಆಕ್ಟಿವ್ ಹೋಂಡಾದಲ್ಲಿ ಕೆಲಸದ ಬಗ್ಗೆ ಬಂಟ್ವಾಳದ ಕಡೆಗೆ ಹೊರಟವರು, ಅಡ್ಯಾರ್ ಸಹ್ಯಾದ್ರಿ ಕಾಲೇಜು ಮುಂಭಾಗದ ಬಳಿ ತಲುಪಿ ಸಮಯ ಸುಮಾರು 11.30 ಗಂಟೆಗೆ ಸಹ್ಯಾದ್ರಿ ಕಾಲೇಜ್ ಬಳಿ ಇರುವ ATM ಗೆ ಹೋಗುವರೇ, ಸಹ್ಯಾದಿ ಕಾಲೇಜು ಎದುರುಗಡೆ ಇರುವ ಯು ಟರ್ನ್ ನಲ್ಲಿ  ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದಂತೆ, ಹಿಂಭಾಗದಿಂದ ಅಂದರೆ ಮಂಗಳೂರು ಕಡೆಯಿಂದ ಮೋಟಾರು ಬೈಕ್ ಸಂಖ್ಯೆ:KA-19-HF-4646 ನೇ ಸವಾರ ಮೊಹಮ್ಮದ್ ನಶತ್ ( 21 ವರ್ಷ)  ತನ್ನ ಬೈಕನ್ನು ಅತಿವೇಗ ಮತ್ತು ತೀರ ದುಡುಕುತನ ದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಇದ್ದ ಅಕ್ಟಿವ್ ಹೋಂಡಾದ ಬಲಭಾಗಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಗಿ ರಸ್ತೆ ರಾ.ಹೆದ್ದಾರಿಯ ವಿಭಾಜಕಕ್ಕೆ ಹೊಡೆದ ರಭಸಕ್ಕೆ ಮೋಟಾರ್ ಸೈಕಲ್ ನು  ಮೇಲಕ್ಕೆ ಎಸೆಯಲ್ಪಟ್ಟಾಗ ಆತನ ತಲೆಯು  ಲೈಟ್ ಕಂಬಕ್ಕೆ ಬಡಿದು ಆತನು ಡಾಮಾರು ರಸ್ತೆ ಗೆ ಬಿದ್ದ ಪರಿಣಾಮ ತಲೆಗೆ ತೀವ್ರ ರಕ್ತಗಾಯಗೊಂಡವನನ್ನು ಅಲ್ಲಿ ಸೇರಿದ ಜನರು ಉಪಚರಿಸಿ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ವೈದ್ಯರ ಮುಂದೆ ಹಾಜರುಪಡಿಸಿದಾಗ, ಆತನನ್ನು ಪರೀಕ್ಷಿಸಿದ ವೈದ್ಯರು 12.35 ಗಂಟೆಗೆ ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು, ಪಿರ್ಯಾದಿದಾರ ಹಾಗೂ ಆಕ್ಟಿವ್ ಹೋಂಡಾ ಸವಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ..

Mangalore South PS                    

 ದಿನಾಂಕ: 19-07-2023 ರಂದು ಪಿರ್ಯಾದಿದಾರರಾದ ಹೆಚ್.ಸಿ  ಲಕ್ಷ್ಮಣ ಸಾಲೋಟಗಿ ಮತ್ತು ಪಿಸಿ  ಹರೀಶ್.ಕೆಜೆ ರವರು ಠಾಣಾ ಸರಹದ್ದಿನಲ್ಲಿ, ಅಪರಾಧ ಪತ್ತೆಯ ಬಗ್ಗೆ ರೌಂಡ್ ಕರ್ತವ್ಯ ಮಾಡುತ್ತಾ ಮಧ್ಯಾಹ್ನ 2-30, ಗಂಟೆಗೆ ಬಂದ  ಮಾಹಿತಿಯಂತೆ  ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಯ ಬಳಿ ಗ್ರಾಂಡ್ ಕಿಚನ್ ಎಂಬ ಹೋಟೆಲ್ ನ ಮುಂಭಾಗ  ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತನು ಮಾದಕ ವಸ್ತು ಮಿಶ್ರಿತ ಬಾಂಗ್ ಎಂಬ ಚಾಕೋಲೇಟನ್ನು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪಿರ್ಯಾದಿದಾರರು ಖಚಿತಪಡಿಸಿಕೊಂಡು ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ವರದಿಯನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Ullal PS     

ದಿನಾಂಕ 19/07/2023 ರಂದು 11-15 ಗಂಟೆಗೆ ಪೆರ್ಮನ್ನೂರು ಗ್ರಾಮದ ಮಾರ್ಗತಲೆ ಸಾರ್ವಜನಿಕ ರಸ್ತೆ ಬದಿಯಲ್ಲಿ  ಅಬೂಬಕ್ಕರ್ ಮಿಸ್ಬಾ ಪ್ರಾಯ 29 ವರ್ಷ ವಾಸ : ಪರಪ್ಪು ಹೌಸ್, ಮಾರ್ಗತಲೆ ಪೋಸ್ಟ್, ಪೆರ್ಮನ್ನೂರು ಗ್ರಾಮ, ಉಳ್ಳಾಲ ತಾಲೂಕು ಎಂಬಾತನು ಗಾಂಜಾ ಸೇವಿಸಿ ನಶೆಯಲ್ಲಿರುವವನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸದ್ರಿ ವ್ಯಕ್ತಿಯು ನಿಷೇದಿತ ಅಮಲು ಪದಾರ್ಥವಾದ ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಗಾಂಜಾ ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಿ ವೈದ್ಯಕೀಯ ದೃಡಪತ್ರ ನೀಡುವ ಬಗ್ಗೆ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಹಾಜರುಪಡಿಸಿದಾಗ, ಸದ್ರಿ ವ್ಯಕ್ತಿಯು ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ Positive for Tetrahydrocannabin  ಎಂಬುದಾಗಿ ದೃಡಪತ್ರ ನೀಡಿರುತ್ತಾರೆ. ಆದುದರಿಂದ ಕಾನೂನು ಬಾಹಿರವಾಗಿ ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಅಬೂಬಕ್ಕರ್ ಮಿಸ್ಬಾ ಎಂಬವರ ರವರ ಮೇಲೆ ಕಲಂ ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

                      

ಇತ್ತೀಚಿನ ನವೀಕರಣ​ : 21-08-2023 02:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080