Crime Report in CEN Crime PS
ಪ್ರಕರಣದ ಪಿರ್ಯಾದಿದಾರರರು ಎಂಪಾರ್ ಕನ್ ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಝೋನಲ್ ಅಡ್ಮೀನಿಸ್ಟ್ರೇಟರ್ ಆಗಿದ್ದು ಸದ್ರಿ ಕಂಪನಿಯು ಬಿಲ್ಡಿಂಗ್ ಕನ್ ಸ್ಟ್ರಕ್ಷನ್ಸ್ ಕಂಪನಿಯಾಗಿರುತ್ತದೆ ಕಂಪನಿಯಲ್ಲಿ ಶೇಖರ್ ಎಂಬವರು ಸುಮಾರು 19 ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡಿದ್ದು ಕಂಪನಿಯ ವತಿಯಿಂದ ನಿರ್ಮಾಣ ಮಾಡುತ್ತಿರುವ ಎಂ.ಜಿ ರಸ್ತೆಯಲ್ಲಿರುವ ಜನತಾ ಕನ್ ಸ್ಟ್ರಕ್ಷನ್ಸ್ ರವರ ಮಾಲಿಕತ್ವದ ಕಾಮಗಾರಿಯ ಪ್ರೋಜೆಕ್ಟ್ ಜನರಲ್ ಮ್ಯಾನೆಜರ್ ಹಾಗೂ ಸೈಟ್ ಇನ್ ಚಾರ್ಜ್ ಆಗಿದ್ದರು ನಂತರ ಈ ಕಾಮಗಾರಿಯು ಕಾರಣಾಂತರಗಳಿಂದ ಅರ್ಧಕ್ಕೆ ನಿಂತು ಹೋದ ಮೇಲೆ ಕಂಪನಿಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಅದೇ ಸೈಟನಲ್ಲಿ ಇದ್ದವು. ಸದ್ರಿ ಸಾಮಗ್ರಿಗಳನ್ನು ಶೇಖರ್ ಎಂಬವರು 2023 ನೇ ಜನವರಿ ತಿಂಗಳಿನಲ್ಲಿ ಕಂಪನಿಯ ಗಮನಕ್ಕೆ ಬಾರದ ಹಾಗೆ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ದುರ್ಲಾಭ ಪಡೆಯುವ ಉದ್ದೇಶದಿಂದ ಚಂದನ್ ಕುಮಾರ್ ಎಂಬವರ ಸಹಾಯದಿಂದ ಕೆಎ-19-ಸಿ-7717 ಮತ್ತು ಕೆಎ-19-ಎಡಿ-5716 ನೇ ಲಾರಿಯನ್ನು ಬಳಸಿಕೊಂಡು ಎಂ.ಜಿ ರಸ್ತೆಯಲ್ಲಿರುವ ಜನತಾ ಕನ್ ಸ್ಟ್ರಕ್ಷನ್ಸ್ ರವರ ಸೈಟ್ ನಲ್ಲಿದ್ದ ಸುಮಾರು 60 ಲಕ್ಷ ಮೌಲ್ಯದ ಸೊತ್ತುಗಳನ್ನು ಸಾಗಾಟ ಮಾಡಿ ಕಂಪನಿಗೆ ನಷ್ಟ ಮಾಡಿರುವುದಾಗಿದೆ.
Mangalore East PS
ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕ ಯೋಗಿಶ್ವರನ್ ರವರು ದಿನಾಂಕ: 19-08-2023 ರಂದು ರಂದು ನೈಟ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 01:30 ಗಂಟೆ ವೇಳೆಗೆ ಮಂಗಳೂರು ನಗರದ ಕೆ.ಪಿ.ಟಿ ಜಂಕ್ಷನ್ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿಯು ಬಂದಿದ್ದು ಮಾಹಿತಿಯಂತೆ ಸ್ಥಳಕ್ಕೆ ಹೋದಾಗ ಅಲ್ಲಿ ಇಬ್ಬರು ಯುವಕರು ನಿಂತುಕೊಂಡಿದ್ದು ವಶಕ್ಕೆ ತೆಗೆದು ಕೊಂಡು ವಿಚಾರಿಸಲಾಗಿ ಈತನ ಹೆಸರು 1 ) ಮೊಹಮ್ಮದ್ ಅಕ್ಬರ್ ಪ್ರಾಯ:26 ವರ್ಷ,ವಾಸ: 3-79 ಎಫ್,ಅಳಕೆ ಮಜಲು ಮನೆ ,ಇಡ್ಕಿದು ಗ್ರಾಮ, ದಕ್ಷಿಣ ಕನ್ನಡ, 2 ) ಸಾನೀರ್ ಪ್ರಾಯ:23 ವರ್ಷ, ವಾಸ: ಅಳಕೆ ಮಜಲು ಮನೆ ,ಕುಳ ಗ್ರಾಮ ದಕ್ಷಿಣ ಕನ್ನಡ, ಎಂಬುದಾಗಿ ತಿಳಿಸಿದ್ದು ಅವರನ್ನ ವಿಚಾರಣೆಗೆ ಒಳಪಡಿಸಿದಾಗ, ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಅವರನ್ನ ವಶಕ್ಕೆ ಪಡೆದು ಅವರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ METHAMPHETAMINE 1000 NG PER ML ಪಾಸಿಟಿವ್ ಎಂದು ವರದಿ ನೀಡಿರುತ್ತಾರೆ. ಅದುದರಿಂದ ಅವರ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.
Kavoor PS ..
ಪಿರ್ಯಾಧಿ MR KUMAR S SHETTY ದಾರರ ತಂದೆಯವರ ಹೆಸರಿನಲ್ಲಿ ಬಂಗ್ರಾ ಕೂಳೂರು ಗ್ರಾಮದ ಸರ್ವೆ.ನಂಬ್ರ 9/2 ರಲ್ಲಿ 20 ಸೆನ್ಸ್ ಆಸ್ತಿ ಇದ್ದು, ದಿನಾಂಕ; 30-12-2001 ರಂದು ಪಿರ್ಯಾಧಿದಾರರ ತಂದೆ ಶ್ರೀ ಸಂಜೀವ ಶೆಟ್ಟಿರವರು ಮರಣ ಹೊಂದಿದ್ದು, ನಂತರ ಸದ್ರಿ ಆಸ್ತಿಯ ಉತ್ತಾರಾಧಿಕಾರಿಗಳಾದ ಪಿರ್ಯಾಧಿದಾರರ ತಾಯಿಯಾದ ಶ್ರೀಮತಿ ಕಲ್ಯಾಣಿ ಶೆಟ್ಟಿ ಹಾಗೂ ಪಿರ್ಯಾಧಿದಾರರ ಅಕ್ಕ ಶ್ರೀಮತಿ ಸುಜಾತ ಗಣೇಶ್ ಶೆಟ್ಟಿರವರು ಸದ್ರಿ ಆಸ್ತಿಯ ಮಾಲೀಕರಾಗಿರುತ್ತಾರೆ. ದಿನಾಂಕ: 08-10-2019 ರಂದು ಶ್ರೀಮತಿ ಕಲ್ಯಾಣಿ ಶೆಟ್ಟಿ ರವರು ಮರಣ ಹೊಂದಿದ್ದು ನಂತರ ಪಿರ್ಯಾಧಿದಾರರು ಆಸ್ತಿಗೆ ಸಂಬಂದಿಸಿದ ದಾಖಲಾತಿಗಳನ್ನು ನವೀಕರಿಸುವ ಉದ್ದೇಶದಿಂದ ಬಾಂಬೆಯಿಂದ ಮಂಗಳೂರಿಗೆ ಬಂದು ದಾಖಲಾತಿಗಳನ್ನು ನೋಡಿದಾಗ ಆರೋಪಿ ಸುನೀಲ್ ಶೆಟ್ಟಿ ಎಂಬಾತನು ತಾಯಿ ಕಲ್ಯಾಣಿ ಶೆಟ್ಟಿರವರ ಹೆಸರಿನಲ್ಲಿ ನಕಲಿ ಸೆಲ್ ಡೀಡ್ ನ್ನು ತಯಾರಿಸಿ ದಿನಾಂಕ: 23-01-2013 ರಂದು ದಾಖಲಾತಿ ನಂಬ್ರ:10117/2012-13 ರಂತೆ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ತಯಾರಿಸಿದ್ದು. ನಂತರ ಪಿರ್ಯಾಧಿದಾರರ ಸಹೋದರಿ ಶ್ರೀಮತಿ ಸುಜಾತ ಗಣೇಶ್ ಶೆಟ್ಟಿ ರವರು ತಾಯಿ ಕಲ್ಯಾಣಿ ಶೆಟ್ಟಿರವರ ಪರವಾಗಿ ದಿನಾಂಕ: 05-11-2011 ರಂದು “POWER OF AUTORNY” ಪಡೆದುಕೊಂಡ ಬಗ್ಗೆ ದಾಖಲಾತಿ ತಯಾರಿಸಿದ್ದು, ಈ ತರ ಯಾವದೇ “POWER OF AUTORNY” ಯನ್ನು ಕಲ್ಯಾಣಿ ಶೆಟ್ಟಿ ರವರು ಸುಜಾತ ಶೆಟ್ಟಿರವರಿಗೆ ನೀಡಿರುವುದಿಲ್ಲ. ಸದ್ರಿ ಆರೋಪಿತನು “POWER OF AUTORNY “ ಯಲ್ಲಿ ಪಿರ್ಯಾಧಿದಾರರ ಹಾಗೂ ಅವರ ಸಹೋದರಿಯ ನಕಲಿ ಸಹಿಯನ್ನು ಮಾಡಿ ಪಿರ್ಯಾಧಿದಾರರ ತಾಯಿ ಕಲ್ಯಾಣಿ ಶೆಟ್ಟಿ ರವರ ಹೆಸರಿನಲ್ಲಿ ದಿನಾಂಕ; 23-01-2013 ರಂದು ದಾಖಲಾತಿ ನಂಬ್ರ : 10117/2012-13 ರಂತೆ ಸೆಲ್ ಡೀಡ್ ತಯಾರಿಸಿರುತ್ತಾನೆ. ಅಲ್ಲದೇ ದಾಖಲಾತಿಗಳಲ್ಲಿ ದಿನಾಂಕ: 23-01-2013 ರಂದು ದಾಖಲಾತಿ ಸಂಖ್ಯೆ: 10117/2012-13 ರ ಸೆಲ್ ಡೀಡ್ ನಂತೆ 2,28,000 ರೂ ಹಣವನ್ನು ಡಿ.ಡಿ. ನಂಬ್ರ :48735 ಮುಖಾಂತರ ಹಾಗೂ 7,72,000 ರೂ ಹಣವನ್ನು ಚೆಕ್ ನಂಬ್ರ: 48608 ರಂತೆ ಪಿರ್ಯಾದಿದಾರರ ತಾಯಿಯ ಹೆಸರಿಗೆ ಪಾವತಿ ಮಾಡಿರುವುದು ಕಂಡುಬಂದಿರುತ್ತದೆ. ಆದರೆ ಪಿರ್ಯಾಧಿದಾರರ ತಾಯಿಯ ಹೆಸರಿಗೆ ಆ ತರ ಯಾವುದೇ ಹಣ ಜಮಾ ಆಗಿರುವುದಿಲ್ಲ. ಆರೋಪಿತ ಸುನೀಲ್ ಶೆಟ್ಟಿಯು ಸುಳ್ಳು ದಾಖಲಾತಿಗಳನ್ನು ತಯಾರಿಸಿ ನಕಲಿ ಸಹಿಯನ್ನು ಮಾಡಿ ವಂಚನೆ ಮಾಡಿರುವುದಾಗಿದೆ. ಎಂಬಿತ್ಯಾದಿ.
Konaje PS
ಪಿರ್ಯಾದಿದಾರರಾದ ನಗರ ಅಪರಾಧ ವಿಭಾಗ (ಸಿಸಿಬಿ) ಮಂಗಳೂರು ನಗರದ ಪೊಲೀಸ್ ಉಪನಿರೀಕ್ಷಕರಾದ ನರೇಂದ್ರ ರವರಿಗೆ ದಿನಾಂಕ 19-08-2023 ರಂದು ಬೆಳಿಗ್ಗೆ 08-00 ಗಂಟೆಗೆ ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಕಾಯರಗೋಳಿ ಕ್ರಾಸ್ ಎಂಬಲ್ಲಿ KL-59-5618 ನೇ ನೀಲಿ ಬಣ್ಣದ ಮಾರುತಿ-800 ಕಾರಿನಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತುವಾದ MDMA ನೇದನ್ನು ಆಕ್ರಮವಾಗಿ ವಶದಲ್ಲಿರಿಸಿಕೊಂಡು ಸಾಗಾಟ ಮಾಡಿಕೊಂಡು ಮಾರಾಟ ಮಾಡಲು ಬರುತ್ತಿರುವುದಾಗಿ ಬಂದ ಮಾಹಿತಿಯಂತೆ ಬೆಳಿಗ್ಗೆ 10-15 ಗಂಟೆಗೆ ಕುರ್ನಾಡು ಗ್ರಾಮದ ಕಾಯರ್ ಗೋಳಿ ಗುಳಿನಕಟ್ಟೆ ಬಳಿ ದಾಳಿ ಮಾಡಿ
ಹಸನ್ ಸಾಧಿಕ್ ನನ್ನು ವಶಕ್ಕೆ ಪಡೆದು ವಿಚಾರಿಸಿ ನಂತರ ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಸಿಬ್ಬಂದಿಗಳ ಮುಖೇನಾ ಅಂಗಶೋಧನೆ ನಡೆಸಿ ಆತನ ವಶದಲ್ಲಿದ್ದ ಮೆಟಾಲಿಕ್ ಸಿಲ್ವರ್ ಬಣ್ಣದ SAMSUNG ಕಂಪೆನಿಯ Galaxy A23 5G ಹೆಸರಿನ SM-A236E/DS ಮೊಡೆಲ್ ನ ಮೊಬೈಲ್ ಪೋನ್ ಇದರ ಅಂದಾಜು ಮೌಲ್ಯ 15,000/-, 50 ಗ್ರಾಂ ತೂಕದ ಬಿಳಿ ಮತ್ತು ಕಂದು ಬಣ್ಣದ ಹರಳುನಂತಿರುವ MDMA ಮಾದಕ ವಸ್ತು ಇರುವ ಬಿಳಿ ಬಣ್ಣದ ಪ್ಲ್ಯಾಸ್ಟಿಕ್ ಪ್ಯಾಕೆಟ್ ಇದರ ಅಂದಾಜು ಮೌಲ್ಯ ರೂ 2,50,000/-, SF-400 ಎಂದು ಬರೆದಿರುವ ಬಿಳಿ ಬಣ್ಣದ ಡಿಜಿಟಲ್ ತೂಕ ಮಾಪನ ಇದರ ಅಂದಾಜು ಮೌಲ್ಯ 500/-, ನೀಲಿ ಬಣ್ಣದ ಪ್ಲ್ಯಾಸ್ಟಿಕ್ ಲಕೋಟೆ -1 ಮತ್ತು ಅದರಲ್ಲಿದ್ದ ವಿವಿಧ ಗಾತ್ರದ ಖಾಲಿ ಪ್ಲ್ಯಾಸ್ಟಿಕ್ ಲಕೋಟೆಗಳು-96 ಮತ್ತು KL-59-5618 ನೇ ನೀಲಿ ಬಣ್ಣದ ಮಾರುತಿ -800 ಕಾರು ಇದರ ಅಂದಾಂಜು ಮೌಲ್ಯ ರೂ 1,00,000/-ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 3,65,500/- ಆಗಿರುತ್ತದೆ. ಆರೋಪಿಯಾದ ಹಸನ್ ಸಾಧಿಕ್ @ ಬ್ಲೇಡ್ ಸಾಧಿಕ್ ಪ್ರಾಯ:35 ವರ್ಷ, ವಿಳಾಸ: ಕೊಡಂಗಾಯಿ ಹೌಸ್, ವಿಟ್ಲ ಪಡ್ನೂರು, ಬಂಟ್ವಾಳ ತಾಲೂಕು, ಹಾಲಿ: ಪ್ಲ್ಯಾಟ್ ನಂಬ್ರ 102, ರಿಯಾ ಪ್ಲ್ಯಾನೆಟ್ ಬಿಲ್ಡಿಂಗ್, ಎಸ್.ಬಿ.ಐ ಬ್ಯಾಂಕ್ ಎದುರುಗಡೆ, ವಿಟ್ಲ, ಬಂಟ್ವಾಳ ಉಳ್ಳಾಲ ತಾಲೂಕು ಎಂಬಾತನು ಮನುಷ್ಯ ಜೀವಕ್ಕೆ ಹಾನಿಕಾರಿಯಾಗಿರುವ ಮನೋದ್ರೇಕಕಾರಿಯಾಗಿರುವ ಮಾದಕ ದ್ರವ್ಯ MDMA ವನ್ನು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ KL-59-5618 ನೇ ನೀಲಿ ಬಣ್ಣದ ಮಾರುತಿ -800 ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಅಲ್ಲಿ ನೈಜೀರಿಯನ್ ಮಹಿಳೆಯನ್ನು ಸಂಪರ್ಕಿಸಿ ಅವಳಿಗೆ ಹಣ ಕೊಟ್ಟು 50 ಗ್ರಾಂ MDMA ಮಾದಕ ವಸ್ತುವನ್ನು ಖರೀದಿ ಮಾಡಿಕೊಂಡು ಬಂದು ಅದನ್ನು ಯಾವುದೇ ಪರವಾನಿಗೆಯಿಲ್ಲದೆ KL-59-5618 ನೇ ನೀಲಿ ಬಣ್ಣದ ಮಾರುತಿ -800 ಕಾರಿನಲ್ಲಿ ಅಕ್ರಮವಾಗಿ ಮಾರಾಟ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿದೆ.
Mangalore East Traffic PS
ಪಿರ್ಯಾದಿದಾರರಾದ ಶಾಂಭವಿ ಎಸ್ ಶೆಟ್ಟಿ ಎಂಬುವರು ದಿನಾಂಕ: 18/08/2023 ರಂದು ಮನೆಯಲ್ಲಿದ್ದ ವೇಳೆ ಅವರ ಅಳಿಯ ಭರತೇಶ್ ಶೆಟ್ಟಿ ರವರು ದೂರವಾಣಿ ಕರೆ ಮಾಡಿ ತಮ್ಮ ತಾಯಿ ನಳೀನಿ ಆರ್ ಶೆಟ್ಟಿ ರವರಿಗೆ ನಂತೂರು ಬಳಿ ರಸ್ತೆ ಅಪಘಾತವಾಗಿದ್ದು ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆಸ್ಪತ್ರೆಗೆ ಹೋಗಿ ನೋಡಿದಾಗ ಗಾಯಾಳು ನಳೀನಿ ಆರ್ ಶೆಟ್ಟಿರವರು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ಬಗ್ಗೆ ಗಾಯಾಳುವನ್ನು ಆಸ್ಪತ್ರೆಗೆ ಕರೆತಂದವರಲ್ಲಿ ವಿಚಾರಿಸಿದಾಗ ನೊಂದಣಿ ಸಂಖ್ಯೆ: KA-19-AC-5664 ನೇಯ ಆಟೋರಿಕ್ಷಾವನ್ನು ಅದರ ಚಾಲಕ ಲೋಕೇಶ್ ಅಮೀನ್ ಎಂಬಾತನು ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 12-40 (PM) ಗೆ ನಂತೂರು ಜಂಕ್ಷನ್ ಬಳಿಯ ಬಸ್ ನಿಲ್ದಾಣದಿಂದ ಸ್ಪಲ್ಪ ದೂರ ಮುಂದೆ ತಲುಪುತ್ತಿದ್ದಂತೆ ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವೊಂದನ್ನು ಎಡ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಆಟೋ ರಿಕ್ಷಾ ರಸ್ತೆಯ ತೀರಾ ಎಡಕ್ಕೆ ಚಲಿಸಿ ರಸ್ತೆಯಿಂದ ಕೆಳಗೆ ಇಳಿದಿದ್ದು ಪುನಃ ರಸ್ತೆಗೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿರುತ್ತದೆ, ಇದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಳೀನಿ ರವರಿಗೆ ತಲೆಗೆ ಜಜ್ಜಿದ ರೀತಿಯ ಒಟ್ಟೆಯಾದ ಗಾಯವಾಗಿದ್ದು ಅದೇ ಆಟೋರಿಕ್ಷಾದಲ್ಲಿಯೇ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ, ಆದುದರಿಂದ ಸದ್ರಿ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.