ಅಭಿಪ್ರಾಯ / ಸಲಹೆಗಳು

Crime Report in  Panambur PS

ಪಿರ್ಯಾದಿದಾರರಾದ ದಾವುದ್ ಹಕೀಂ ರವರು ಸಿವಿಲ್ ಕಂಟ್ರಾಕ್ಟರ್ ಆಗಿದ್ದು ದಿನಾಂಕ: 17-09-2023 ರಂದು ರಾತ್ರಿ 8-00 ಗಂಟೆಗೆ ವಾಸದ ಮನೆ KBS Jokatte ಯಲ್ಲಿದ್ದಾಗ ಪಿರ್ಯಾದಿಯ ಸಂಬಂಧಿ ರಿಫಾಝ್  ಎಂಬಾತನು ಮನೆಯ ಹೊರಗಡೆ ಬಂದು ರಂಡೇಮಗ, ಸೂಳೆಮಗ ಎಂದು ಪಿರ್ಯಾದಿದಾರರನ್ನು ಅವಾಚ್ಯಶಬ್ದಗಳಿಂದ ಬೈಯುತ್ತಿದ್ದಾಗ ಪಿರ್ಯಾದಿ ಹೊರಗಡೆ ಬಂದಿದ್ದು, ಆ ಸಮಯ ರಿಫಾಝಾನು ಆತನ ಕೈಯಲ್ಲಿದ್ದ ಕಬ್ಬಿಣದ ಪಂಚಿನಿಂದ ಪಿರ್ಯಾದಿಯ ಕೈಗೆ, ಮುಖಕ್ಕೆ ಮತ್ತು ಕುತ್ತಿಗೆಗೆ  ಹೊಡೆದು ಗಾಯಗೊಳಿಸಿದ್ದು, ನಂತರ  ಸ್ಥಳಕ್ಕೆ ರಿಫಾಝ್ ನ ತಂದೆ ರಫೀಕ್ ಹಾಗೂ ಉಳಿದವರು ಬಂದಿದ್ದು, ರಫೀಕ್ ಸಹ ಹೊಡೆದಿರುತ್ತಾನೆ. ಉಳಿದವರು ಈ ಘಟನೆಯನ್ನು ನೋಡಿದ್ದು ಹಲ್ಲೆ ಮಾಡಿರುವುದಿಲ್ಲ ರಿಫಾಝ್ ನ ತಾಯಿಗೆ ಪಿರ್ಯಾದಿ ಬೈದ ಎಂಬ ಕಾರಣಕ್ಕೆ ಹಲ್ಲೆ ನಡೆಸಿರುವುದಾಗಿದೆ.ರಾತ್ರಿ ವೆನ್ ಲಾಕ್ ಆಸ್ಫತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಈ ದಿನ ಕುತ್ತಿಗೆ ಮತ್ತು ಎದೆ ನೋವು ಜಾಸ್ತಿಯಾಗಿರುವುದರಿಂದ ಪದ್ಮವತಿ ಆಸ್ಫತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಪಿರ್ಯಾದಿಯನ್ನು ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ಪಂಚ್ ನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿದ ರಿಫಾಝ್ ಮತ್ತು ಆತನ ತಂದೆ ರಫೀಕ್ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ.

Kankanady Town PS                

ಪಿರ್ಯಾದಿದಾರರಾದ ಶ್ರೀ ಯಲ್ಲಪ್ಪ ರವರು ಕೆಎ-19-ಹೆಚ್.ಎನ್-8572 ನೇ ಬಜಾಜ್ ಪಲ್ಸರ್ ಎನ್ ಎಸ್ 125 ಬೈಕ್ ನ್ನು ಉಪಯೋಗಿಸಿಕೊಂಡಿದ್ದು, ಈ ಬೈಕ್ ನ್ನು ಪ್ರತಿ ದಿನ naguri ಭಾರತಿ ಸೂಪರ್ ಬಜಾರ್ ನ ಮುಂದುಗಡೆ ಪಾರ್ಕ್ ಮಾಡುತ್ತಿರುತ್ತಾರೆ. ದಿನಾಂಕ: 17-09-2023 ರಂದು ರಾತ್ರಿ 8-30 ಗಂಟೆಗೆ ಭಾರತಿ ಸೂಪರ್ ಬಜಾರ್ ನ ಎದುರುಗಡೆ ಪಾರ್ಕ್ ಮಾಡಿ, ಮರು ದಿನ ದಿನಾಂಕ: 18-9-2023 ರಂದು ಬೆಳಿಗ್ಗೆ 6-00 ಗಂಟೆ ಯ ಮದ್ಯೆ ಪಿರ್ಯಾದಿದಾರರ ಬಜಾಜ್ ಪಲ್ಸರ್ ಎನ್ ಎಸ್ ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬೈಕ್ ನ ಇಂಜಿನ್ ನಂಬರ್ JEXCPA13666, ಚಾಸಿಸ್ ನಂಬರ್: MD2B72BX1PCA47618, ಬಣ್ಣ: ಆರೆಂಜ್, ಮೌಲ್ಯ: 95,000/- ಆಗಬಹುದು, ಈ ಬೈಕ್ ನ್ನು ಪಿರ್ಯಾದಿದಾರರು ನಗರದ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದ ಕಾರಣ ಠಾಣೆಗೆ ದೂರು ನೀಡಿರುವುದಾಗಿದೆ.

   

Mangalore West Traffic PS                               

ಪಿರ್ಯಾದಿ ROSHAN KULAYI ದಾರರು ದಿನಾಂಕ 18-09-2023 ರಂದು ತಮ್ಮ ಬಾಬ್ತು   KA-19-EK-5445 ನೇ ನಂಬ್ರದ ಸ್ಕೂಟರ್ ನಲ್ಲಿ ಮಂಗಳೂರು ಕದ್ರಿ ದೇವಸ್ಥಾನಕ್ಕೆ ಬಂದವರು ದೇವಸ್ಥಾನದ ಪೂಜೆ ಮುಗಿಸಿಕೊಂಡು ವಾಪಸ್ಸು ಮನೆ ಕಡೆಗೆ ಕೆಪಿಟಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಕುಳಾಯಿ ಕಡೆಗೆ ತೆರಳುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ  12.30 ಗಂಟೆಗೆ ಕುಂಟಿಕಾನಾ ಪ್ಲೈ ಓವರ್ ದಾಟಿ ಮುಂದಕ್ಕೆ ದಡ್ಡಲ್ ಕಾಡು ಅಡ್ಡ ರಸ್ತೆ  ಬಳಿ ತಲುಪುತ್ತಿದ್ದಂತೇ ಕುಂಟಿಕಾನಾ ಸರ್ವೀಸ್ ರಸ್ತೆ ಅಥವಾ ದಡ್ಡಲ್ ಕಾಡು ರಸ್ತೆಯಿಂದ  ಮೋಟಾರು ಸೈಕಲ್ ನ್ನು ಅದರ ಸವಾರನು ದುಡುಕು ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ  ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಎಡ ಕೈಗೆ ಗುದ್ದಿದ ರಕ್ತ ಬರುವ ಗಾಯ, ಬಲಗಣ್ಣಿನ ಕೆಳಗಡೆ ತರಚಿದ ಹಾಗೂ ಎಡಮೊಣಗಂಟಿನಲ್ಲಿ ರಕ್ತಗಾಯವಾಗಿದ್ದವರನ್ನು  ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಘಟನಾ ಸ್ಥಳಕ್ಕೆ ಬಂದ ಪಿರ್ಯಾದಿದಾರರ ತಮ್ಮ ಅಶ್ವಿನ್ ರವರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಗೆ ಕರೆತಂದಿದ್ದು ಪರಿಕ್ಷೀಸಿದ ವೈಧ್ಯರು  ಎಡಗೈ ಮೂಳೆ ಮುರಿತವಾಗಿರುವುದಾಗಿ ತಿಳಿಸಿದ್ದು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಸದ್ರಿ ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ  ಅಪಘಾತ ಸ್ಥಳದಲ್ಲಿ  ಮೋಟಾರು ಸೈಕಲ್ ನಿಲ್ಲಿಸದೇ   ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

   

ಇತ್ತೀಚಿನ ನವೀಕರಣ​ : 19-09-2023 02:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080