ಅಭಿಪ್ರಾಯ / ಸಲಹೆಗಳು

Crime Report in : CEN Crime PS

ಫಿರ್ಯಾದುದಾರರಿಗೆ ಪ್ರಕರಣದ ಆರೋಪಿ ಸೆಲ್ವಕುಮಾರ್, ತಂದೆ: ಜಯರಾಜ್, ವಾಸ: ಟಿ.ಪಿ 1000, ಎ.ಕೆ ಕಾಲೊನಿ, ಬಿ.ಎಸ್.ಎ ರೋಡ್ ಕ್ರಾಸ್, ಫ್ರೇಜರ್ ಟೌನ್ ಅಂಚೆ, ಬೆಂಗಳೂರು ಎಂಬಾತನು ಬೆಂಗಳೂರು ದಕ್ಷಿಣ ತಾಲೂಕಿನ ಜೀವನಭೀಮನಗರ ಗ್ರಾಮದ ಸರ್ವೆ ನಂಬ್ರ 50 & 52/2 ರಲ್ಲಿ 2.20 (2 ಎಕ್ರೆ 20 ಗುಂಟೆ) ಸ್ಥಿರಾಸ್ತಿಯನ್ನು ಕೊಡಿಸುವುದಾಗಿ ಹೇಳಿ ಫಿರ್ಯಾದುದಾರರನ್ನು ನಂಬಿಸಿದ್ದು, ಆರೋಪಿಯ ಮಾತನ್ನು ನಂಬಿದ ಫಿರ್ಯಾದುದಾರರು ದಿನಾಂಕ 23-08-2013 ರಂದು ಸದ್ರಿ ಸ್ಥಿರಾಸ್ತಿ ಖರೀದಿಸುವ ಬಗ್ಗೆ ರೂ. 10.00 ಲಕ್ಷದ ವಿಜಯಾ ಬ್ಯಾಂಕಿನ ಚೆಕ್ ಮತ್ತು ರೂ. 10.00 ಲಕ್ಷದ ING Vysya Bank ನ ಚೆಕ್ ಹಾಗೂ ನಗದಾಗಿ ರೂ. 20.00 ಲಕ್ಷ ಹೀಗೆ ಒಟ್ಟು ರೂ. 40.00 ಲಕ್ಷ ಹಣವನ್ನು ಮುಂಗಡವಾಗಿ ಆರೋಪಿಗೆ ನೀಡಿದ್ದು, ಈ ಬಗ್ಗೆ ಒಪ್ಪಂದ ಪತ್ರವನ್ನು ಮಾಡಿ ಕೊಂಡಿರುತ್ತಾರೆ. ನಂತರ ಆರೋಪಿಯು ಸದ್ರಿ ಸ್ಥಿರಾಸ್ತಿಯನ್ನು ಫಿರ್ಯಾದುದಾರರಿಗೆ ಕೊಡಿಸದೇ ಹಣವನ್ನು ವಾಪಾಸು ನೀಡದೇ ಇದ್ದು, ಫಿರ್ಯಾದುದಾರರು ಆರೋಪಿಯಲ್ಲಿ ತಾನು ನೀಡಿದ ಹಣವನ್ನು ವಾಪಾಸು ನೀಡುವಂತೆ ಕೇಳಿದಾಗ, ಆರೋಪಿಯು ರೂ. 40.00 ಲಕ್ಷ ಮೌಲ್ಯದ ಆಂಧ್ರ ಬ್ಯಾಂಕಿನ ಚೆಕ್ ನಂಬ್ರ 817800 ದಿನಾಂಕ 05-10-2022 ರಂತೆ ನೀಡಿದ್ದು, ಸದ್ರಿ ಚೆಕ್ ನ್ನು ಫಿರ್ಯಾದುದಾರರು ಬ್ಯಾಂಕ್ ಆಫ್ ಬರೋಡಾದಲ್ಲಿ ನಗದೀಕರಿಸಲು ನೀಡಿದಾಗ ಸದ್ರಿ ಚೆಕ್ ಅಮಾನ್ಯಗೊಂಡಿರುವುದಾಗಿ ಬ್ಯಾಂಕ್ ನಲ್ಲಿ ತಿಳಿಸಿರುತ್ತಾರೆ. ಆರೋಪಿಯು ಫಿರ್ಯಾದುದಾರರಿಗೆ ಬೆಂಗಳೂರಿನಲ್ಲಿ ಸ್ಥಿರಾಸ್ತಿಯನ್ನು ಕೊಡಿಸುವುದಾಗಿ ರೂ. 40.00 ಲಕ್ಷವನ್ನು ಪಡೆದುಕೊಂಡು, ಫಿರ್ಯಾದುದಾರರಿಗೆ ಸ್ಥಿರಾಸ್ತಿಯನ್ನು ಕೊಡಿಸದೇ, ಹಣವನ್ನು ವಾಪಾಸು ನೀಡದೇ ನಂಬಿಸಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿತಾಗಿರುತ್ತದೆ.

Kankanady Town PS

ಪಿರ್ಯಾದಿ Dr. Mahadeshwara H S ದಾರರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ನಲ್ಲಿ  ಭೂವಿಜ್ಞಾನಿಯಾಗಿದ್ದು, ದಿನಾಂಕ:18-12-2023  ರಂದು ಉಪ ನಿರ್ದೇಶಕರು, ಉಪನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ರವರಿಗೆ ಖಾಸಗಿ ಭಾತ್ಮೀದಾರರಿಂದ ಮಂಗಳೂರಿನ ಕಣ್ಣೂರು, ಬಜಾಲ್ ಮತ್ತು ಬಡ್ಲ ಗ್ರಾಮಗಳ ವ್ಯಾಪ್ತಿಯ ಸಿ.ಆರ್. ಝಡ್ ವಲಯದಲ್ಲಿ ಹರಿಯುವ ನೇತ್ರಾವತಿ ನದಿ ಪಾತ್ರದಲ್ಲಿ ಅನಧಿಕೃತವಾಗಿ ಸಾಮಾನ್ಯ ಮರಳನ್ನು ಕಳ್ಳತನ ನಡೆಸುತ್ತಿದ್ದಾರೆ ಎಂದು ಬಂದ ಮಾಹಿತಿ ಮೇರೆಗೆ ಕಛೇರಿಯ ಹಿರಿಯ ಭೂವಿಜ್ಞಾನಯವರಾದ ಶ್ರೀ ಕೆ ಎಂ ನಾಗಭೂಷಣ್ ಮತ್ತು ಭೂವಿಜ್ಞಾನಯವರಾದ ಶ್ರೀ ಗಿರೀಶ್ ಮೋಹನ್ ಎಸ್ ಎನ್ ಇವರುಗಳೊಟ್ಟಿಗೆ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಮಸೀದಿಯ ಬಳಿ ಹೋಗಿ ಅಲ್ಲಿಂದ ಮೋಟಾರು ಚಾಲಿತ ದೋಣಿಯಲ್ಲಿ ನೇತ್ರಾವತಿ ನದಿಗೆ ಇಳಿದು ನದಿ ಮಾರ್ಗವಾಗಿ ಬಡ್ಲ ಬಜಾಲ್ ಎಂಬ ಪ್ರದೇಶಗಳಿಗೆ ತೆರಳಿ ಪರಿಶೀಲಿಸಲಾಗಿ ಬಜಾಲ್ ಎಂಬ ಪ್ರದೇಶದಲ್ಲಿ ಅಕ್ರಮ ಸಾಮಾನ್ಯ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ 05 ದೋಣಿಗಳನ್ನು ವಶಕ್ಕೆ ಪಡೆದು ಮೋಟಾರು ಚಾಲಿತ ದೋಣಿಯ ಸಹಾಯದಿಂದ ಸದರಿ 05 ದೋಣಿಗಳನ್ನು ಕಣ್ಣೂರಿನ ಮಸೀದಿ ಬಳಿ ಎಳೆದು ತಂದು ಶ್ರೀ ಅಬ್ರಾಹಂ ( ಸೀಸರ್) ಇವರ ಒಡೆತನದ ಸರ್ವೆ ಸಂಖ್ಯೆ 03 ರಲ್ಲಿ ಇರಿಸಿ ಪ್ರತಿ ದೋಣಿಗೆ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ.ಸದರಿ ದೋಣಿಗಳ ಮಾಲಿಕರನ್ನು ಪತ್ತೆ ಹಚ್ಚಲಾಗಿ ಶ್ರೀ ಮೊಹಮ್ಮದ್ ತೋಹಿಬ್ ಬಿನ್ ಅಬ್ದುಲ್ ಹಮೀದ್, ಶ್ರೀ ಮೊಹಮ್ಮದ್ ಅಶ್ರಪ್ ಬಿನ್ ಅಬ್ದುಲ್ ಖಾದರ್, ಶ್ರೀ ಅಝರ್ ಬಜಾಲ್, ಶ್ರೀ ಹಸನಬ್ಬ (ಎಂ ಕೆ ಮೋನು) ಬಿನ್ ಕುಂಜರಬ್ಬ, ಬಜಾಲ್ ನಂತೂರು ಮತ್ತು ಶ್ರೀ ಅಬ್ದುಲ್ ರೆಹಮಾನ್ ಬಿನ್ ಅಬ್ಬಾಸ್ ಎಂಬುದು ಸ್ವತ: ಸದರಿ ಮೇಲ್ಕಾಣಿಸಿದ ವ್ಯಕ್ತಿಗಳು ತಾವಾಗೆ ದೋಣಿಗಳ ಹಕ್ಕು ಸಾಧಿಸಿ ಬಂದಿರುವ ಹಿನ್ನೆಲೆಯಲ್ಲಿ ಮತ್ತು ನೆರೆದಿದ್ದ ಸ್ಥಳೀಯರ ವಿಚಾರಣೆಯಿಂದ ತಿಳಿದು ಬಂದಿದ್ದು, ಆದುದರಿಂದ ಮರಳು ಕಳ್ಳತನ ಮಾಡುವ ದೋಣಿಗಳ ಮಾಲಿಕರ ಹಾಗೂ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ.ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿರುವುದಾಗಿ ಎಂಬಿತ್ಯಾದಿ.

Bajpe PS

ದಿನಾಂಕ 18-12-2023 ರಂದು ಮದ್ಯಾಹ್ನ ಸುಮಾರು  13.30  ಗಂಟೆಗೆ ಬಜಪೆ  ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಕರಂಬಾರು ಬಸ್ ಸ್ಟಾಪ್ ಬಳಿಯಲ್ಲಿ ಒಬ್ಬ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ವಿಚಾರಿಸಿದಾಗ  ಆತನ ಹೆಸರು ಸಚಿನ್ (23),  ವಾಸ: ಶ್ರೀದೇವಿ ಕೃಪಾ ನಿಲಯ, ಉರುಂದಾಡಿ ಗುಡ್ಡೆ, ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರಾ ಬಳಿ, ಪಂಜಿಮೊಗರು, ಕಾವೂರು, ಮಂಗಳೂರು ತಾಲೂಕು. ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಿಸಲಾಗಿ ನಾನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ನಂತರ ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುವ ಮೇರೆಗ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

Bajpe PS

ದಿನಾಂಕ 18-12-2023 ರಂದು ಮದ್ಯಾಹ್ನ ಸುಮಾರು  13.00  ಗಂಟೆಗೆ ಬಜಪೆ  ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಕರಂಬಾರು ಎಂಬಲ್ಲಿ ಒಬ್ಬ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು ನಮ್ಮ ವಾಹನವನ್ನು ಆತನ ಬಳಿ ನಿಲ್ಲಿಸಿ ವಿಚಾರಿಸಿದಾಗ  ಆತನ ಹೆಸರು ಮಣಿಕಂಠ (25), ವಾಸ: ಉರುಂದಾಡಿ ಗುಡ್ಡೆ, ಶ್ರೀ ಗೋಪಾಲ ಕೃಷ್ಣ ಭಜನಾ ಮಂದಿರಾ ಬಳಿ, ಪಂಜಿಮೊಗರು, ಕಾವೂರು, ಮಂಗಳೂರು ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಿಸಲಾಗಿ ನಾನು ಸೀಗರೇಟ್ ಒಳಗೆ ಗಾಂಜಾ ತುಂಬಿಸಿ  ಸೇದುತ್ತಿರುವುದಾಗಿ ಒಪ್ಪಿಕೊಂಡಿದ್ದು ತಜ್ಞ ವೈಧ್ಯರಲ್ಲಿ ಕಳುಹಿಸಿಕೊಟ್ಟಲ್ಲಿ ವೈದ್ಯರು ಸದ್ರಿಯವರನ್ನು ಪರೀಕ್ಷೆಗೆ ಒಳಪಡಿಸಿದ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುವ ಮೇರೆಗ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ ನೀಡಿರುತ್ತಾರೆ ಎಂಬಿತ್ಯಾದಿ.

Traffic South Police Station                                         

ಪಿರ್ಯಾದಿ ABDUL SHABBIR ದಾರರ ಮಾವ ದಿನಾಂಕ:17-12-2023 ರಂದು ರಾತ್ರಿ ಸುಮಾರು 10.45 ಗಂಟೆಗೆ ಕೆ.ಸಿ ರೋಡ್ ಮಸೀದಿಯಲ್ಲಿ ನಡೆದ ವಾರ್ಷಿಕ ಝೀಕ್ರು ನೋಡಿ ವಾಪಸ್ಸು ಮನೆ ಕಡೆಗೆ ಕೆ.ಸಿ ರೋಡ ಬ್ರೀಡ್ಜ್ ನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾದ ಎದುರುಗಡೆಯಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ KA-19-HF-3431 ನೇದರ ಸ್ಕೂಟರೊಂದನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ನಡೆದುಕೊಂಡು ಬರುತ್ತಿದ್ದ  ಪಿರ್ಯಾದಿದಾರರ ಮಾವನಿಗೆ ಡಿಕ್ಕಿ ಹೊಡೆದು  ಸ್ಕೂಟರ್ ಸೇತುವೆಗೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿರುವುದಾಗಿ ಪಿರ್ಯಾದಿದಾರರ ಅತ್ತೆ ಆಮೀನಾ ರವರು ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಕೆ.ಸಿ ರೋಡ್ ಬ್ರೀಡ್ಜ್ ಬಳಿ ಹೋದಾಗ ಬ್ರೀಡ್ಜ್ ಜನರು ಸೇರಿದ್ದು ಪಿರ್ಯಾದಿದಾರರ ಮಾವ ಸುಲೈಮಾನ್(65) ರವರನ್ನು ಜನರು  ಉಪಚರಿಸಿತ್ತಿದ್ದು ಅವರ ತಲೆ ಹಿಂಭಾಗಕ್ಕೆ ತಿವ್ರ ಗಾಯವಾಗಿದ್ದು ಪ್ರಜ್ಞಾ ಹೀನರಾಗಿದ್ದರು ಹಾಗೂ ಗಾಯಗೊಂಡ ಇಬ್ಬರು ಗಂಡಸರನ್ನು ಅಲ್ಲಿ ಸೇರಿದ್ದ  ಜನರು ಉಪಚರಿಸುತ್ತಿದ್ದು ಅವರು ಹೆಸರು ಕೇಳಿದ್ದಲ್ಲಿ ಒಬ್ಬಾತನ ಹೆಸರು ಸಂತೋಷ್ ತಾನು ಸ್ಕೂಟರ್ ಸವಾರನೆಂದು ತಿಳಿಸಿದ್ದು ,ಆತನ ಎಡಕಾಲಿನ ತೊಡೆಗೆ ಹಾಗೂ ಎಡಕೈಗೆ ರಕ್ತ ಗಾಯವಾಗಿರುತ್ತದೆ.ಇನ್ನೊರ್ವನ ಹೆಸರು ಕೇಳಿದ್ದಲ್ಲಿ ರವಿ ಸ್ಕೂಟರ್ ಸಹಸವಾರ ಎಂದು ತಿಳಿಸಿದ್ದು ಆತನ ಬಲಕೈ ಕಿರು ಬೆರಳಿಗೆ ಗಾಯವಾಗಿರುತ್ತದೆ.ಈ ಅಪಘಾತದ ಪರಿಣಾಮ ಸ್ಕೂಟರ್  ಜಖಂಗೊಂಡಿದ್ದು ,ಅದೇ ರಸ್ತೆಯಲ್ಲಿ ಬರುತ್ತಿದ್ದ ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಮುಂದೆ ಹಾಜರು ಪಡಿಸಿದ್ದು ವೈದ್ಯರು ಪರೀಕ್ಷಿಸಿ ತುರ್ತು ನಿಗಾ ಘಟಕದಲ್ಲಿ  ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.ಗಾಯಗೊಂಡ ಸ್ಕುಟರ್ ಸವಾರರು ಕೂಡಾ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Mangalore East PS

ಪಿರ್ಯಾದಿ  ಆಯುಷ್ಮಾನ್ ರವರು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ದಿನಾಂಕ 17-12-2023 ರಂದು ರಾತ್ರಿ ಸಮಯ ಸುಮಾರು 23:15 ಗಂಟೆಗೆ ಜ್ಯೋತಿ ಬಲ್ಮಠ ಕಂಕನಾಡಿ ಮಾರ್ಗವಾಗಿ ದೂರುದಾರರ ಮನೆಯಾದ ಫಳ್ನಿರು ಕಡೆಗೆ ಹೋಗುತ್ತಿರುವಾಗ ಬೆಂದೂರ್ ವೆಲ್ ತಲುಪುತ್ತಿರುವಾಗ ತೆರೆಸಾ ಶಾಲೆಯ ಕಡೆಯಿಂದ ಬರುವ ಮಾರ್ಗದಲ್ಲಿ ಬಂದ KA-20-Z-2948 ನೇ ನಂಬ್ರದ ಕಾರು ದೂರುದಾರರ ಕಾರಿನ ಮುಂದೆ ಹೋಗುತ್ತಿದ್ದು ದೂರುದಾರರು KA-19-MK-6266 ನೆ ಕಾರಿನಲ್ಲಿ ಹೋಗುತ್ತಿದ್ದು ಎದುರಿಗೆ ಹೋಗುವ ಕಾರನ್ನು ಓವರ್ ಟೆಕ್ ಮಾಡುವರೆ ಹಾರ್ನ್ ಹಾಕಿ ಮುಂದೆ ಹೋಗುತ್ತಿದ್ದು, ಇದರಿಂದ ಸಿಟ್ಟು ಬಂದು KA-20-Z-2948ನೇ ನಂಬ್ರದ ಕಾರಿನ ಅಪರಿಚಿತರು, ಸಮಯ ಸುಮಾರು 11:30 ಗಂಟೆಗೆ ಕಂಕನಾಡಿ ಪೋಂಪೈ ಬೇಕರಿ ಹತ್ತಿರ ತಲುಪುತ್ತಿದ್ದಂತೆ ದೂರುದಾರರ ಕಾರಿಗೆ ಅಡ್ಡಲಾಗಿ KA-20-Z-2948 ನೇ ನಂಬ್ರದ ಕಾರು ನಿಲ್ಲಿಸಿದ್ದು ಅದರಲ್ಲಿದ್ದ ಯುವಕರು ದೂರುದಾರರ ಮುಖಕ್ಕೆ, ಕಾಲಿಗೆ, ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಪರಾರಿಯಾಗಿರುತ್ತಾರೆ ಎಂಬಿತ್ಯಾದಿ.

Traffic North Police Station               

ದಿನಾಂಕ 18-12-2023 ರಂದು ಪಿರ್ಯಾದಿ Deepa ದಾರರ ಗಂಡ ಸಂತೋಷ ಶೆಟ್ಟಿರವರು ತನ್ನ ಬಾಬ್ತು KA-20-EW-6337 ನಂಬ್ರದ ಸ್ಕೂಟರಿನಲ್ಲಿ ಬೆಳಿಗ್ಗೆ ಕುಂದಾಪುರಕ್ಕೆ ಹೋಗಿ ವಾಪಾಸು ಕೋಡಿಕಲ್ನ ತಮ್ಮ ಬಾಡಿಗೆ ಮನೆ ಕಡೆಗೆ ಬರುತ್ತಾ ರಾತ್ರಿ ಸಮಯ ಸುಮಾರು 10.30 ಗಂಟೆಗೆ  ಕೋಡಿಕಲ್ ಕ್ರಾಸ್ ತೆರೆದ ಡಿವೈಡರ್ ಬಾಗದಲ್ಲಿ ಬಲಬದಿಯ ಇಂಡಿಕೇಟರ್ ಹಾಕಿಕೊಂಡು ಕೋಡಿಕಲ್ ಕಡೆಗೆ ತಿರುಗಿಸಿ ಅರ್ಧ NH 66 ನೇ ಡಾಮಾರು ರಸ್ತೆ ದಾಟಿ ಮುಂದಕ್ಕೆ ಹೋಗುತ್ತಿದ್ದಂತೆ ಕೊಟ್ಟಾರ Flyover ಕಡೆಯಿಂದ ಕೂಳೂರು ಕಡೆಗೆ KA-19-AC-4335 ನಂಬ್ರದ ಬಿಳಿ ಬಣ್ಣದ Toyoto Etios ಕಾರನ್ನು ಅದರ ಚಾಲಕನಾದ ವಿಶ್ವನಾಥ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಂತೋಷ್ ಶೆಟ್ಟಿಯವರಿಗೆ ಹಣೆಯ ಎಡಬದಿ, ಮೂಗಿನಲ್ಲಿ, ಬಲಕಣ್ಣಿನ ಕೆಳಭಾಗ ಕೆನ್ನೆಯಲ್ಲಿ, ಗಲ್ಲದಲ್ಲಿ, ಬಲಕೋಲು ಕೈಯ್ಲಲಿ ಹಾಗೂ ತಟ್ಟಿನಲ್ಲಿ ಅಲ್ಲಲ್ಲಿ ಚರ್ಮ ತರಚಿಕೊಂಡ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 19-12-2023 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080