ಅಭಿಪ್ರಾಯ / ಸಲಹೆಗಳು

CEN Crime PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 31/10/2023 ರಂದು ಪಿರ್ಯಾದಿದಾರರು ಫೇಸ್ ಬುಕ್ ನಲ್ಲಿ “992 stock front line group”  ಎಂಬ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಸಲಹೆ ಒದಗಿಸುವ ವಾಟ್ಸ್ ಆಪ್ ಗ್ರೂಪ್ನ ಜಾಹೀರಾತು ನೋಡಿ, ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಸಲಹೆ ಪಡೆದುಕೊಳ್ಳಲು ಸದ್ರಿ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸೇರಿಕೊಂಡು,ಸದ್ರಿ ಗ್ರೂಪ್ ನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಬರುವ ಸಂದೇಶಗಳನ್ನು ನೋಡುತ್ತಿದ್ದರು, ನಂತರ ದಿನಾಂಕ: 05/12/2023 ರಂದು “992 stock front line group”  ವಾಟ್ಸ್ ಆಪ್ ಗ್ರೂಪ್ ನ ಅಡ್ಮಿನ್ ತಿಳಿಸಿದಂತೆ ಟ್ರೇಡಿಂಗ್ ಬಗ್ಗೆ  CHC- SES APP ಎಂಬ ಆನ್ ಲೈನ್ ಆಪ್ ನಲ್ಲಿ ನೊಂದಣಿ ಮಾಡಿಕೊಂಡು ಸದರಿ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು ಅದರಂತೆ “992 stock front line group” ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ  ಪಿರ್ಯಾದಿದಾರರು ತನ್ನ ಬಾಬ್ತು ICICI Saving Bank A/c no: 001401001337,  IFSC: ICIC0000014 ನೇಯದರಿಂದ ದಿನಾಂಕ: 05/12/2023 ರಿಂದ 08/01/2024 ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು ರೂ 10,32,000/- ವರ್ಗಾಯಿಸಿ ಮೋಸಹೋಗಿರುತ್ತಾರೆ ಎಂಬಿತ್ಯಾದಿ

 

Urva PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೆಂದರೆ ಪಿರ್ಯಾಧಿದಾರರಾದ ರಿತೇಶ್ ರವರು ತಮ್ಮ ಬಾಬ್ತು ಮೋಟರು ಸೈಕಲ್ ನಂಬ್ರ KA19ET1610(FZ) ನೇಯದನ್ನು ದಿನಾಂಕ-19-01-2024 ರಂದು ರಾತ್ರಿ 9.30 ಗಂಟೆಗೆ ತಾನೂ ಬಾಡಿಗೆಗೆ ವಾಸವಿರುವ ಮನೆಯಾದ ಉರ್ವಾ ಪೋಲೀಸು ಠಾಣಾ ವ್ಯಾಪ್ತಿಯ ಕೊಡಿಕಲ್ ಕಲ್ಲಕಂಡ ಎಂಬಲ್ಲಿರುವ ಶ್ರೇಯಾ ಹಸ್ಮಿತ ಅರ್ಪಾಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದು, ಈ ದಿನ ದಿನಾಂಕ 20-01-2024 ರಂದು ಬೆಳಿಗ್ಗೆ 7.30 ವೇಳೆಗೆ ಫಿರ್ಯಾಧಿಯವರು ಬಂದು ನೋಡಿದಾಗ ಮೋಟರು ಸೈಕಲ್ ಇಲ್ಲದೆ ಇದ್ದು, ಈ ಮೋಟಾರು ಸೈಕಲ್ ನ್ನು ದಿನಾಂಕ 19-01-2024 ರ ರಾತ್ರಿ 9.30 ಗಂಟೆಯಿಂದ ದಿನಾಂಕ 20.01.2024 ರ ಬೆಳಿಗ್ಗೆ 7.30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡಿರಬಹುದು, ಈ ಕಳವು ಆದ ಮೋಟಾರು ಸೈಕಲ್ ನ ಅಂದಾಜು ಮೌಲ್ಯ  ಸುಮಾರು ರೂಪಾಯಿ 20,000/- ಆಗಬಹುದು ಎಂಬಿತ್ಯಾದಿ

 

Mulki PS  

ಪಿರ್ಯಾದಿ Sheikh Ahmed Swaroof ಇವರು  ತನ್ನ ತಾಯಿ, ತಮ್ಮಂದಿರೊಂದಿಗೆ ಮನೆಯಲ್ಲಿ ವಾಸವಿದ್ದು, ಪಿರ್ಯಾದಿದಾರರ ತಮ್ಮನಾದ ಶೇಖ್ ಅಬ್ದುಲ್ ಸೈಫ್ ಪ್ರಾಯ: 21 ವರ್ಷ ರವರು ಐಟಿಐ ವಿದ್ಯಾಭ್ಯಾಸ ಮುಗಿಸಿ ಬಳಿಕ ಸುರತ್ಕಲ್ ನಲ್ಲಿ ಫ್ರೂಟ್ ಅಂಗಡಿ ಹಾಗೂ ಟ್ರೆಂಡಿಂಗ್ ಫ್ಯಾಶನ್ ಎಂಬ ಡ್ರೆಸ್ ಅಂಗಡಿಯನ್ನು ನಡೆಸಿಕೊಂಡಿದ್ದು, ಬಳಿಕ ಫಿರ್ಯಾದಿದಾರರು  ಮುಕ್ಕಾದಲ್ಲಿ ಹೊಂದಿರುವ ಸ್ಮೂತ್ ಬ್ರೀಫ್ ಕೆಫೆಯನ್ನು ನಡೆಸುತ್ತಿದ್ದು, ದಿನಾಂಕ 17-01-2024 ರಂದು ಸಂಜೆ 16.00 ಗಂಟೆಗೆ ಹಳೆಯಂಗಡಿಯ ಸಂತೆಕಟ್ಟೆಗೆ ಹೋದವನು   ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ   ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ವಿವರ

ಶೇಖ್ ಅಬ್ದುಲ್ ಸೈಫ್  ಪ್ರಾಯ 21 ವರ್ಷ, 

ಸಾಧಾರಣ ಶರೀರ, ಗೋಧಿ ಮೈಬಣ್ಣ, ಎತ್ತರ 5’8,

ಕನ್ನಡ, ಹಿಂದಿ , ಬ್ಯಾರಿ ಭಾಷೆ, ತುಳು, ಇಂಗ್ಲೀಫ್ ಮಾತನಾಡುತ್ತಾರೆ,

ಐಟಿಐ ವಿದ್ಯಾಭ್ಯಾಸ.

ಮನೆಯಿಂದ ತೆರಳುವಾಗ ಜೋಗರ್ ಪ್ಯಾಂಟ್, ಹಸಿರು ಬಣ್ಣದ ಉದ್ದ ಕೈಯ ಅಂಗಿ ಧರಿಸಿರುತ್ತಾರೆ.                

ಇತ್ತೀಚಿನ ನವೀಕರಣ​ : 20-01-2024 08:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080