Feedback / Suggestions

Bajpe PS

ಪಿರ್ಯಾದಿ Harish B S ಭಾವನಾದ ಅಶೋಕ್ ಪ್ರಾಯ:32 ವರ್ಷ ಇವರು ದಿನಾಂಕ 19.02.2023 ರಂದು ಮಂಗಳೂರಿನಿಂದ ಮನೆಗೆ ಹೊರೆಟಿದ್ದು ಅದರಂತೆ ಪಿರ್ಯಾದಿದಾರರ ಮತ್ತು ಅವರ ಭಾವನಾದ ಅಶೋಕ್ ಎಂಬುವರು ಬೇರೆ ಬೇರೆ ಬೈಕ್ ಗಳಲ್ಲಿ ಹೋಗುತಿದ್ದು ಸಮಯ ಸುಮಾರು ರಾತ್ರಿ 10.30 ಗಂಟೆಗೆ ಪಿರ್ಯಾದಿದಾರರ ಭಾವನವರು ಚಲಾಯಿಸುತಿದ್ದ ಬೈಕ್ ನಂಬ್ರ KA19EQ8824 ನೇದರಲ್ಲಿ ಹೋಗುತ್ತಾ ಮಂಗಳೂರು ತಾಲೂಕು ಕಂದಾವರ ಗ್ರಾಮದ ಗುರುಪುರ ಕೈಕಂಬದ ವಿಕಾಸ್ ನಗರ ತಲುಪುತಿದ್ದಂತೆ ಎದುರುಗಡೆಯಿಂದ ಬಂದ ಅಂದರೆ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಬಂದ KL 14 AA 1857 ನೇ ಸ್ಕೂಟರ್ ನನ್ನು ಆರೋಪಿಯು ಇನ್ನೋಬ್ಬನನ್ನು  ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಮತ್ತು ಮಾನವ ಜೀವಕ್ಕೆ ಅಪಾಯಾಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಯಲ್ಲಿ ಚಾಲಾಯಿಸಿಕೊಂಡು ಪಿರ್ಯಾದಿದಾರರ ಬಾವನವರು ಚಲಾಯಿಸುತಿದ್ದ ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಮತ್ತು ಸ್ಕೂಟರ್ ರಸ್ತೆಯಲ್ಲಿ ಮುಗುಚಿ ಬಿದ್ದಿರುತ್ತದೆ ಪರಿಣಾಮ ಪಿರ್ಯಾದಿದಾರರ ಭಾವನಾದ ಅಶೋಕ್ ನಿಗೆ ತಲೆಗೆ ಮತ್ತು ಮುಖಕ್ಕೆ ಗಂಬೀರ ಗಾಯವಾಗಿದ್ದು ಸ್ಕೂಟರ್ ನಲ್ಲಿದ್ದ ಇಬ್ಬರಿಗೂ ಗಾಯಾವಾಗಿದ್ದು ಗಾಯಗೊಂಡವರನ್ನು ಕೂಡಲೇ ಅಂಬುಲೆನ್ಸ್ ನಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದು ಗಂಬೀರ ಗಾಯಗೊಂಡಿದ್ದ ಅಶೋಕ್ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿಯಾಗಿದೆ

Mangalore North PS

ಪಿರ್ಯಾದಿ DEEPAK HEMRAM  ಮಹಾಲಕ್ಷ್ಮೀ ಸೆರಾಮಿಕ್ ಸೆಂಟರ್ ನಲ್ಲಿ ಲೋಡಿಂಗ್ & ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಹಾಗೂ ಅವರ ಹೆಂಡತಿಯಾದ ತಪಸಿ ಸರೆನ್ ಹೆಮ್ರಾಮ್ ರವರು ಮೇಲಿನ ವಿಳಾಸದಲ್ಲಿ ಒಟ್ಟಿಗೆ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಹೆಂಡತಿಯಾದ ತಪಸಿ ಸರೆನ್ ಹೆಮ್ರಾಮ್ ರವರು ಸಿಟಿ ಸೆಂಟರ್ ಮಾಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 15.02.2023 ರಂದು ವಾರದ ರಜೆಯಲ್ಲಿ ಮನೆಯಲ್ಲಿರುತ್ತಾರೆ. ಪಿರ್ಯಾದಿದಾರರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ತಮ್ಮ ಹೆಂಡತಿಯದಾದ ತಪಸಿ ಸರೆನ್ ಹೆಮ್ರಾಮ್ ರವರು ಮನೆಯಲ್ಲಿ ಇರದೇ ಇದ್ದು, ಅಕ್ಕಪಕ್ಕದವರನ್ನು ವಿಚಾರಿಸಿದಾದ ಅದೇ ದಿನ ಮದ್ಯಾಹ್ನ ಸುಮಾರು 1:30 ಗಂಟೆಗೆ ಮನೆಯಿಂದ ಹೊರಗೆ ಹೋಗಿರುತ್ತಾರೆ ಎಂದು ತಿಳಿಸಿದ್ದು, ಇವರೆಗೂ ಮನಗೆ ಬಂದಿರುವುದಿಲ್ಲ. ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾದ ತನ್ನ ಹೆಂಡತಿ ತಪಸಿ ಸರೆನ್ ಹೆಮ್ರಾಮ್ ರವರನ್ನು ಪತ್ತೆ ಹಚ್ಚಿಕೊಡಬೇಕೆಂಬಿತ್ಯಾದಿ ಸಾರಾಂಶ.                             

Traffic North Police Station   

ಪಿರ್ಯಾದಿ  Sunil M ದಿನಾಂಕ 19-02-2023 ರಂದು ಸಂಜೆ 18:20 ಗಂಟೆಗೆ ಸುರತ್ಕಲ್ NITK ಟೋಲ್ ಗೇಟ್ ಬಳಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಹೆಲ್ಮೆಟ್ ವ್ಯಾಪಾರ ಮಾಡುತ್ತಿದ್ದವರು ವ್ಯಾಪಾರ ಮುಗಿಸಿ ತನ್ನ ಬಾಬ್ತು ಓಮಿನಿ ಕಾರ್ ನಂಬ್ರ KA-21-P-3208 ನೇಯದನ್ನು ರಸ್ತೆಯ ಬದಿಯ ಮಣ್ಣು ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ವ್ಯಾಪಾರಕ್ಕೆ ತಂದಿದ್ದ ಹೆಲ್ಮೆಟ್ ಗಳನ್ನು ತುಂಬಿಸುತ್ತಿದ್ದ ಸಮಯ ಉಡುಪಿ ಕಡೆಯಿಂದ ಬಂದಂತಹ KA-19-ML-9802 ನೇ ಕಾರನ್ನು ಅದರ ಚಾಲಕ ಜೇಸನ್ ಮಿನೇಜಸ್ ಎಂಬಾತನು ತೀರಾ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರ ಓಮಿನಿ ಕಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಇದರ ಪರಿಣಾಮ ಎರಡೂ ಕಾರುಗಳು ರಸ್ತೆಯ ಬದಿಯ ಗುಂಡಿಗೆ ಬಿದ್ದಿದ್ದು, ಪಿರ್ಯಾದಿದಾರರ ಓಮಿನಿಯ ಮುಂದಿನ ಹಾಗೂ ಹಿಂದಿನ ಭಾಗಗಳು ಸಂಪೂರ್ಣ ಜಖಂಗೊಂಡಿದ್ದು ಪಿರ್ಯಾದಿದಾರರು ಕಾರಿನಿಂದ ಹೊರಗೆ ಇದ್ದಿದ್ದರಿಂದ ಅವರಿಗೆ ಯಾವುದೇ ತೊಂದರೆಯಾಗಿರುವುದಿಲ್ಲ ಅಲ್ಲದೇ ಅಪಘಾತ ಪಡಿಸಿದ ಕಾರು ಚಾಲಕ ಜೇಸನ್ ಮಿನೇಜಸ್ ನಿಗೆ ಮೂಗಿಗೆ ಗುದ್ದಿದ ರೀತಿಯ ರಕ್ತ ಗಾಯ ಮತ್ತು ಬೆನ್ನಿಗೆ ಗುದ್ದಿದ ರೀತಿಯ ನೋವಾಗಿದ್ದು ಆತನನ್ನು ಅಪಘಾತ ಪಡಿಸಿದ ಕಾರಿನಲ್ಲಿದ್ದ ಇತರ ಸ್ನೇಹಿತರು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಲ್ಲದೇ ಅಪಘಾತ ಪಡಿಸಿದ ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ.

Konaje PS

ಪಿರ್ಯಾದಿ Sangeetha ಕುಟುಂಬವು ಮೂಲತಃ ಓರಿಸ್ಸಾ ರಾಜ್ಯದ ಭುವನೇಶ್ವರದವರಾಗಿದ್ದು, ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ಕೊಣಾಜೆ ಗ್ರಾಮ ಪಂಚಾಯತ್ ಬಳಿ ಇರುವ ಖಾದರ್ ಖಾನ್ ರವರ ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿದೆ. ಪಿರ್ಯಾದಿದಾರರ ಗಂಡ ಅರುಣ್ ಪ್ರಧಾನ್ (31 ವರ್ಷ) ರವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತದ ಚಟವನ್ನು ಹೊಂದಿರುತ್ತಾರೆ. ದಿನಾಂಕ 29 ಡಿಸೆಂಬರ್ 2022 ರಂದು ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು, ವಾಪಾಸ್ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರು ತನ್ನ ಗಂಡನ ಬಗ್ಗೆ ಸಂಬಂಧಿಕರಲ್ಲಿ ವಿಚಾರಿಸಿ, ಮಂಗಳೂರಿನ ಹಲವು ಕಡೆಗಳಲ್ಲಿ ಹುಡುಕಾಡಿದಾಗಲೂ ಸಿಕ್ಕಿರುವುದಿಲ್ಲ. ಆದುದರಿಂದ ಕಾಣೆಯಾದ ಅರುಣ್ ಪ್ರಧಾನ್ ರವರನ್ನು ಹುಡುಕಿಕೊಡಬೇಕಾಗಿ ಎಂಬಿತ್ಯಾದಿ.

Urva PS                   

ದಿನಾಂಕ 18-02-2023 ರಂದು ಬೆಳಗಿನ ಜಾವ 12:30 ಗಂಟೆಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕನಗರ ಕೋಡಿಕಲ್, ಅಪ್ಪಿನ್ ಡಿಸೋಜ ಕಂಪೌಂಡ್ ನ ಶ್ರೀ ಮೆಲ್ವಿನ್ ಡಿಸೋಜ ರವರ ಮಗ ಡೋಕಿನ್ ಡಿಸೋಜ ಪ್ರಾಯ: 27 ವರ್ಷ ರವರ ಮನಗೆ ಯಾರೋ ವ್ಯಕ್ತಿಗಳು ಕಲ್ಲು ತೂರಾಟ ಮಾಡಿ ಹೋಗಿರುತ್ತಾರೆ. ಎಂಬಿತ್ಯಾದಿ.

2) ಪಿರ್ಯಾದಿ ಭುವನ್ ದೇವಾಡಿಗ ರವರು ದಿನಾಂಕ 18-02-2023 ರಂದು ರಾತ್ರಿ 01:55 ಗಂಟೆಗೆ ತಮ್ಮ ಮನೆಯಾದ ಮಂಗಳೂರು ಅಶೋಕನಗರದ ಭಗತ್ ಸಿಂಗ್ ರಸ್ತೆಯ ಅನುಗ್ರಹ ಎಂಬಲ್ಲಿ ಇರುವ ಸಮಯ ಮೊಬೈಲ್ ನಂಬ್ರ  ರಿಂದ ಪ್ರತಾಪ್ ಶೆಟ್ಟಿ ಎಂಬವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬಿತ್ಯಾದಿ

Traffic North Police Station   

ಪಿರ್ಯಾದಿ Deekshith ದಿನಾಂಕ 18-02-2023 ರಂದು ಆತನ ಸ್ನೇಹಿತ ದೀಕ್ಷಿತ್ ಜೊತೆಯಲ್ಲಿ ಪಿರ್ಯಾದಿದಾರರ ಸಂಬಂಧಿ ಪ್ರಶಾಂತ್ ಎಂಬವರ ಬಾಬ್ತು KA-12-A-9677 ನಂಬ್ರದ ಟಿಪ್ಪರ್ ಲಾರಿಯಲ್ಲಿ ಲೋಡಿಂಗ್ ಅನ್ ಲೋಡಿಂಗ್ ಕೆಲಸಕ್ಕೆ ಹೋಗಿದ್ದು ಸದ್ರಿ ಟಿಪ್ಪರ್ ಲಾರಿಗೆ ಮಳಲಿಯಲ್ಲಿ ಹೊಯಿಗೆ ಲೋಡ್ ಮಾಡಿಕೊಂಡು ಕಳವಾರಿಗೆ ಅನ್ ಲೋಡ್ ಮಾಡಲು ಬಂದವರು ಹೊಯಿಗೆಯನ್ನು ಅನ್ ಲೋಡ್ ಮಾಡಿ ವಾಪಾಸು ಬರುತ್ತಿದ್ದ ಸಮಯ ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಕಳವಾರು ಚರ್ಚ್ ಬಳಿ ಟಿಪ್ಪರ್ ಲಾರಿಯನ್ನು ಅದರ ಚಾಲಕ ತಿಲಕ್ ಎಂಬಾತನು ಇಳಿಜಾರು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಳವಾರು ಚರ್ಚ ಕಾಂಪೌಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಲಾರಿ ಮಗುಚಿಬಿದ್ದು ಟಿಪ್ಪರಿನಲ್ಲಿದ್ದ ಪಿರ್ಯಾದಿದಾರರಿಗೆ ಎಡಕಾಲಿಗೆ ಗುದ್ದಿದ ರೀತಿಯ ಹಾಗೂ ಎಡ ಹಣೆಯ ಬಳಿ ರಕ್ತ ಗಾಯ ಹಾಗೂ ಪಿರ್ಯಾದಿದಾರರ ಸ್ನೇಹಿತ ದೀಕ್ಷಿತ್ ಎಂಬಾತನಿಗೆ ಲಾರಿಯ ಕೂಲೆಂಟ್ ವಾಟರ್ ಸೊಂಟದ ಕೆಳಗೆ ಬಿದ್ದು ಎರಡೂ ತೊಡೆಗಳು ಮಂಡಿಯ ವರಗೆ ಬೆಂದ ರೀತಿಯ ಗಾಯವಾಗಿದ್ದು ಟಿಪ್ಪರ್ ಲಾರಿಯ ಚಾಲಕ ತಿಲಕನಿಗೆ ಬಲ ತೊಡೆಯ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಎ.ಜೆ. ಆಸ್ಪಯತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Kavoor PS

ದಿನಾಂಕ: 18/02/2023 ರಂದು ಪಿರ್ಯಾದಿದಾರರು RAGHU NAYAK ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಧ್ಯಾನ್ನ 13.45 ಗಂಟೆಗೆ ಕಾವೂರು ಗ್ರಾಮದ ಗಾಂಧಿನಗರ ,ಮಲ್ಲಿ ಲೇಔಟ್ ಬಳಿ ತಲುಪಿದಾಗ ಆರೋಪಿತನಾದ ಪ್ರವೀಣ್  (26) ಎಂಬಾತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿರುವವನನ್ನು ವೈದ್ಯಕೀಯ ತಪಾಸಣೆಯ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು,ಎ.ಜೆ ಆಸ್ಪತ್ರೆಯ ತಜ್ಞ ವೈದ್ಯರು ಆತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ.

Traffic South Police Station          

ದಿನಾಂಕ 18-02-2023 ರಂದು  ಪಿರ್ಯಾದಿ  H K  ಹುಸೈನ್ ರವರು  ಸ್ಕೂಟರ್ ನಂಬರ್   KA-19-HM-1772  ನೇದರಲ್ಲಿ   ಸಹ ಸವಾರರಾಗಿ ಮತ್ತು  ಅವರ  ಪರಿಚಯದವರಾದ  ಅಬ್ದುಲ್  ಅಝಿಝ್   ಎಂಬವರು ಸ್ಕೂಟರ್ ನ ಸವಾರರಾಗಿ ಪಿರ್ಯಾದಿದಾರರ ಮನೆಯಾದ ಬಂದರು ಕಡೆಯಿಂದ  ಕಲ್ಲಾಪು  ಗ್ಲೋಬಲ್ ಮಾರ್ಕೇಟ್ ಕಡೆಗೆ  ಪಂಪ್ ವೆಲ್  ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ರ  ರಸ್ತೆಯಲ್ಲಿ ಸ್ಕೂಟರನ್ನು ಸವಾರಿ ಮಾಡಿಕೊಂಡು  ಹೋಗುತ್ತಿರುವ ಸಮಯ  ಸುಮಾರು  ಬೆಳಿಗ್ಗೆ  07: 30 ಗಂಟೆಗೆ  ಮಹಾಕಾಳಿ ಪಡ್ಪು ಜಂಕ್ಷನ್  ಬಳಿ   ತಲುಪುತ್ತಿದ್ದಂತೆ   ನಾಯಿಯೊಂದು ಅಡ್ಡ ಬಂದ  ಪರಿಣಾಮ ಸ್ಕೂಟರ್  ಸವಾರ  ಅಬ್ದುಲ್ ಅಝಿಝ್ ನು  ಸ್ಕೂಟರ್ ನ  ನಿಯಂತ್ರಣ  ತಪ್ಪಿ ಸ್ಕಿಡ್ ಆಗಿ ಪಿರ್ಯಾದಿದಾರರು ಮತ್ತು  ಸವಾರ ಸ್ಕೂಟರ್  ಸಮೇತ ಡಾಮಾರು  ರಸ್ತೆಗೆ ಬಿದ್ದಿರುತ್ತಾರೆ. ಈ  ಅಪಘಾತದಿಂದ  ಪಿರ್ಯಾದಿದಾರರ  ಬಲಭುಜಕ್ಕೆ  ,ಬಲಕೈಗೆ  ಮೂಳೆಮುರಿತದ ಗಾಯ ಮುಖಕ್ಕೆ ಹಾಗೂ ತಲೆಯ ಬಲಬದಿಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಸ್ಕೂಟರ್ ಸವಾರನಿಗೆ ಮುಖಕ್ಕೆ ಬಲಕೈ ಕಿರುಬೆರಳಿಗೆ ರಕ್ತಗಾಯ ಹಾಗೂ ಹೊಟ್ಟೆಗೆ  ಗುದ್ದಿದ ಗಾಯವಾಗಿದ್ದು ಚಿಕಿತ್ಸೆ  ಬಗ್ಗೆ ಅಲ್ಲಿ ಸೇರಿದ  ಜನರು ಆಟೋರಿಕ್ಷಾವೊಂದರಲ್ಲಿ ಕರೆದುಕೊಂಡು ಹೋಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ನಂತರ  ಪಿರ್ಯಾದಿದಾರರನ್ನು  ಅವರ  ಮನೆಯವರು  ಹೆಚ್ಚಿನ ಚಿಕಿತ್ಸೆ ಬಗ್ಗೆ  ಯುನಿಟಿ ಆಸ್ಪತ್ರೆ ಕರೆದುಕೊಂಡು  ಹೋಗಿ ದಾಖಲು  ಮಾಡಿರುತ್ತಾರೆ ಎಂಬಿತ್ಯಾದಿ                            

Surathkal PS

ದಿನಾಂಕ 18-02-2023 ರಂದು ಪಿರ್ಯಾದಿದಾರರು Arunkumar D ರೌಂಡ್ಸ್ ಕರ್ತವ್ಯದಲ್ಲಿದ್ದು, ಸಂಜೆ ವೇಳೆಗೆ ಸಂಚರಿಸುತ್ತಾ ಸುರತ್ಕಲ್ ಕಾನ, ಜನತಾ ಕಾಲನಿ ,ಕಾಟಿಪಳ್ಳ, ಕಡೆಗಳಲ್ಲಿ ರೌಂಡ್ಸ್ ಮಾಡುತ್ತಾ ಸುರತ್ಕಲ್ ಇಡ್ಯಾ ಗ್ರಾಮದ ಬಂಗ್ಲ ಗುಡ್ಡೆ ಬಳಿ ಇರುವ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ಸುಮಾರು 19.00 ಗಂಟೆಗೆ ತಲುಪಲಾಗಿ ಸದ್ರಿ ರಸ್ತೆಯ ಎಡ ಬದಿಯಲ್ಲಿ ಓರ್ವ ವ್ಯಕ್ತಿಯು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡು, ಸದ್ರಿ ವ್ಯಕ್ತಿಯ ಬಳಿಗೆ ವಾಹನದಲ್ಲಿ ತೆರಳಿ ನೋಡಲಾಗಿ ಆತನು ಸುರತ್ಕಲ್ ಪೊಲೀಸ್ ಠಾಣಾ ಎಂ.ಓ.ಬಿ ಅಸಾಮಿ ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಗಪೂರ್ (37) ಆಗಿದ್ದು ಆತನನ್ನು ವಿಚಾರಿಸಲಾಗಿ ಆತನ ನಡವಳಿಕೆಯಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು, ಆತನ ವಿಳಾಸ ಕೇಳಲಾಗಿ ಅಬ್ದುಲ್ ಗಪೂರ್ ಪ್ರಾಯ 37 ವರ್ಷ,  ವಾಸ: ಸಂಖ್ಯೆ 128, ಸೈಟ್ ನಂ 209, 6ನೇ ಬ್ಲಾಕ್, ಎಮ್.ಜಿ.ಎಂ ಹಾಲ್ ಹಿಂಭಾಗ, ಚೊಕ್ಕಬೆಟ್ಟು, ಕೃಷ್ಣಾಪುರ, ಕಾಟಿಪಳ್ಳ ಗ್ರಾಮ, ಮಂಗಳೂರು. ಆತನ ನಡವಳಿಕೆಯಲ್ಲಿ ಅಮಲು ಪದಾರ್ಥ ಸೇವಿಸಿದ ಬಗ್ಗೆ ವಿಚಾರಿಸಿದಾಗ ಈ ದಿನ ಮುಂಜಾನೆ ಓರ್ವ ವ್ಯಕ್ತಿಯಿಂದ ಸ್ವಲ್ಪ ಗಾಂಜಾವನ್ನು ಖರೀದಿಸಿ ಸ್ವಲ್ಪ ಹೊತ್ತಿನ ಮುಂಚೆ ಸಿಗರೇಟಿಗೆ ಹಾಕಿ ಸೇವಿಸಿರುವುದಾಗಿ ತಿಳಿಸಿರುತ್ತಾರೆ, ಆತನನ್ನು ವಶಕ್ಕೆ ಪಡೆದು ಏ.ಜೆ ಆಸ್ಪತ್ರೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ಕಾರ್ಯನಿರತ ವೈದ್ಯಾದಿಕಾರಿಯವರು ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಯವರು ತಮ್ಮ ವರದಿಯಲ್ಲಿ Tetrahydracannabinoid – POSITIVE.   The drug one step screen test panel(Urine) is an immunoassay based on the principle of competive binding  ಎಂಬುದಾಗಿ ವರದಿ ನೀಡಿದ ವರದಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಮಡಿರುವುದು ಎಂಬಿತ್ಯಾದಿಯಾಗಿರುತ್ತದೆ.

Mangalore South PS

ದಿನಾಂಕ: 18.02.2023 ರಂದು ಸಮಯ ಸಂಜೆ 07:00 ಗಂಟೆಗೆ ಪಿರ್ಯಾದಿದಾರರು Harish P ಸಿಬ್ಬಂದಿರವರೊಂದಿಗೆ ಮಂಗಳೂರು ನಗರದ ಓಲ್ಡ್  ಕೇಂಟ್ ರಸ್ತೆಯ ಪರಿಸರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  ಆರೋಪಿ ಅಲ್ತಾಫ್ ಪ್ರಾಯ: 25  ವಾಸ: ಸಿರಿಸೀಮೆ ನರ್ಸರಿ ಬಳಿ, ಬಜಾಲ್ ನಂತೂರ ಮಂಗಳೂರು. ಹಾಲಿ ವಾಸ: ಫ್ಲಾಟ್ ನಂಬ್ರ-201, ಆಯೇಷಾ, ಅಪಾರ್ಟ್ ಮೆಂಟ್, ಓಲ್ಡ್ ಕೇಂಟ್ ರೋಡ್ ಮಂಗಳೂರು.ಎಂಬಾತನು ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ಅನುಮಾನದಿಂದ ವಶಕ್ಕೆ ಪಡೆದುಕೊಂಡು ಎ.ಜೆ. ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿ ಆರೋಪಿಯು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯರ ವರದಿಯಲ್ಲಿ ದೃಢಪಟ್ಟಿರುತ್ತದೆ. ಆದುದರಿಂದ ಆರೋಪಿ ವಿರುದ್ದ  ಠಾಣಾ  NDPS ACT  ರೀತಿ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Last Updated: 20-02-2023 07:25 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080