ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೇ ಪಿರ್ಯಾದಿ VIJAYA KUMAR B L ಇವರು ಮಂಗಳೂರು ನಗರದ ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಮೇನೆಜರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸ್ಟಾಕ್ ಟ್ರೆಡಿಂಗ್ ಎಂಬ ಜಾಹೀರಾತನ್ನು ನೋಡಿ ಸದ್ರಿ ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ “C54 Pantheon Ventures Investment Club” ಎಂಬ ವಾಟ್ಸ್ ಆಪ್ ಗ್ರೂಪ್ ಅನ್ನು ದಿನಾಂಕ 02-12-2023 ರಂದು ಜಾಹಿನ್ ಆಗಿರುತ್ತಾರೆ.ಸದ್ರಿ ವಾಟ್ಸಾ ಆಪ್ ಗ್ರೂಪ್ ನಲ್ಲಿ ಹಲವಾರು ಅಡ್ಮಿನ್ ಗಳು ಮತ್ತು ಸದಸ್ಯರು ಇರುತ್ತಾರೆ, AMITH SHAA ಎಂಬುವರು ಸದ್ರಿ ವಾಟ್ಸ ಆಪ್ ಗ್ರೂಪ್ ನ ಚೀಫ್ ಅಡ್ಮಿನ್ ಆಗಿದ್ದು ಪ್ರತಿ ದಿನ ಆನ್ ಲೈನ್ ವೀಡಿಯೋ ಕ್ಲಾಸ್ ಮೂಲಕ ಸ್ಟಾಕ್ ಟ್ರೆಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುವ ಬಗ್ಗೆ ವಿವರಿಸಿರುತ್ತಾರೆ ಸದ್ರಿ ವಿಷಯವನ್ನು ಪಿರ್ಯಾದಿದಾರರು ಸತ್ಯವೆಂದು ಭಾವಿಸಿ ಆನ್ ಲೈನ್ ಸ್ಟಾಕ್ ಟ್ರೆಡಿಂಗ್ ನಲ್ಲಿ ಹಣ ತೊಡಗಿಸುವ ಬಗ್ಗೆ ತಮ್ಮ ಬಾಬ್ತು ಎಸ್ ಬಿ ಐ ಬ್ಯಾಂಕ್ ಖಾತೆ ಯಿಂಧ ದಿನಾಂಕ 11-01-2024 ರಿಂದ ದಿನಾಂಕ 05-02-2024 ರ ವರೆಗೆ ಹಂತ ಹಂತವಾಗಿ ಒಟ್ಟು 18,53,000/- ರೂಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ INDUSIND BANK A/C NO-258860525408,257078578814,258490011383 ಮತ್ತು AU SMALL FINANCE BANK LTD A/C NO-2402262755886479 ನೇದಕ್ಕೆ ಪಾವತಿಸಿರುತ್ತಾರೆ.ನಂತರದ ದಿನಗಳಲ್ಲಿ ಪಿರ್ಯಾದಿದಾರರು ತಾವು ಹೂಡಿದ ಹಣವನ್ನು ಹಿಂಪಡೆಯಲು ಸದ್ರಿ ಸ್ಟಾಕ್ ಡ್ರೆಡಿಂಗ್ ಕಂಪನಿಯ ಕಸ್ಟಮರ್ ಕೇರ್ ರವರನ್ನು ಆಪ್ ಮೂಲಕ ಸಂಪರ್ಕಿಸಿದಾಗ ಸದ್ರಿಯವರು ಶೇ.40 ರಷ್ಟು ಹಣವನ್ನು ಕಮಿಷನ್ ಆಗಿ ನೀಡುವಂತೆಯೂ ಹಾಗೂ ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪಿರ್ಯಾದಿದಾರರನ್ನು ಒತ್ತಾಯಿಸಿದಾಗ ಪಿರ್ಯಾದಿದಾರರು ಈ ಬಗ್ಗೆ ಅನುಮಾನ ಬಂದು ತಮ್ಮ ಸ್ನೇಹಿತರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವ ಬಗ್ಗೆ ಖಚಿತಪಡಿಸಿಕೊಂಡಿರುತ್ತಾರೆ ಈ ರೀತಿಯಾಗಿ ಯಾರೋ ಅಪರಿಚಿ ವ್ಯಕ್ತಿ ಆನ್ ಲೈನ್ ಸ್ಟಾಕ್ ಟ್ರೆಡಿಂಗ್ ಎಂಬ ಹೆಸರಿನಲ್ಲಿ ಪಿರ್ಯಾದಿದಾರರಿಂದ ಒಟ್ಟು 18,53,000/- ರೂಗಳನ್ನು ಪಾವತಿಸಿಕೊಂಡು ಆನ್ ಲೈನ್ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

Mangalore East

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ YOGEESH ಇವರ ತಂದೆ ನಾಗೇಶ್ ರವರು ಈ ದಿನ ದಿನಾಂಕ 20-02-2024 ರಂದು ಎಂದಿನಂತೆ ತನ್ನ ಕೂಲಿ ಕೆಲಸ ಮುಗಿಸಿಕೊಂಡು ನಂತೂರು ಬಿಕರ್ಣಕಟ್ಟೆ ಮಾರ್ಗವಾಗಿ  ರಾ.ಹೆ 73 ರಲ್ಲಿ ನಡೆದುಕೊಂಡು ಬರುತ್ತ ಸಮಯ ಸುಮಾರು 20:45 ಗಂಟೆಗೆ ತನ್ನ ಮನೆಯಾದ ಬಜ್ಜೋಡಿ ಕಡೆಗೆ ಹೋಗಲು ರಸ್ತೆ ದಾಟುತ್ತಿರುವಾಗ ನಂತೂರು ಕಡೆಯಿಂದ ಬಿಕರ್ಣಕಟ್ಟೆ ಕಡೆಗೆ ಹೋಗುತ್ತಿದ್ದ KA-19-HM-0201 ನೇ ನಂಬ್ರದ  ಸ್ಕೂಟರನ್ನು ಅದರ ಸವಾರ ಅಶ್ವಿತ್ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಯ ಬಲಕಾಲಿಗೆ ಡಿಕ್ಕಿ ಪಡಿಸಿರುತ್ತಾನೆ, ಡಿಕ್ಕಿಯ ಪರಿಣಾಮ ಪಿರ್ಯಾದಿದಾರರ ತಂದೆ ರಸ್ತೆಗೆ ಬಿದ್ದು ತಲೆಗೆ ರಕ್ತಗಾಯ ಮತ್ತು ಬಲಕಾಲಿನ ತೊಡೆ ಭಾಗದಲ್ಲಿ ಮೂಳೆ ಮುರಿತ ಉಂಟಾಗಿರುವ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತಿಳಿಸಿರುತ್ತಾರೆ, ಅಪಘಾತ ಪಡಿಸಿದ ಸ್ಕೂಟರ್ ಸವಾರ ಅಶ್ವಿತ್ ಎಂಬುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ  ಎಂಬಿತ್ಯಾದಿ.

 

Traffic North Police

 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಈ ದಿನ  ದಿನಾಂಕ 20-02-2024 ರಂದು ಮನೆಯಿಂದ ಪಿರ್ಯಾದಿ Kamala B ಮತ್ತು ಅವರ ಮಗಳು ಮಮತ ರವರು ಜೊತೆಯಲ್ಲಿ ಹೊರಟು, ಮಗಳು KMC ಆಸ್ಪತ್ರೆಗೆ ಕೆಲಸಕ್ಕೆ, ಪಿರ್ಯಾದಿದಾರರು ಮಂಗಳೂರಿಗೆ ಅಗತ್ಯ ಕೆಲಸದ ಬಗ್ಗೆ ಹೋಗುವ ಸಲುವಾಗಿ ಶಿವನಗರ ಬಸ್ಸು ನಿಲ್ದಾಣದ ಬಳಿಗೆ ಬಂದು ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿದ್ದ ಸಮಯ ಸುಮಾರು ಬೆಳಿಗ್ಗೆ 07:30 ಗಂಟೆಗೆ ಶಿವನಗರ ಒಳರಸ್ತೆ ಕಡೆಯಿಂದ ಮುಖ್ಯ ರಸ್ತೆ ಕಡೆಗೆ KA-19-MK-3634 ನಂಬ್ರದ ECHO ಕಾರೊಂದನ್ನು ಅದರ ಚಾಲಕನಾದ ಮಂಜುನಾಥ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿವನಗರ ಜಂಕ್ಷನಿನಲ್ಲಿರುವ ರಸ್ತೆಯ ಮಧ್ಯದ ಕಟ್ಟೆಗೆ ಡಿಕ್ಕಿ ಪಡಿಸಿ, ಎಡಕ್ಕೆ ಚಲಾಯಿಸಿ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಪಿರ್ಯಾದಿದಾರರ ಮಗಳು ಮಮತಾಳಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಮತಾ ರವರು ರಸ್ತೆಗೆ ಬಿದ್ದು, ತಲೆಗೆ ಮತ್ತು ಎದೆಗೆ ತೀರ್ವ ತರಹದ ರಕ್ತಗಾಯವಾಗಿದ್ದು, ಅಲ್ಲದೇ ದೇಹದ ಇತರ ಕಡೆಗಳಲ್ಲಿ ಗಾಯವಾಗಿರುತ್ತದೆ. ನಂತರ ಮಮತಾಳನ್ನು ಚಿಕಿತ್ಸೆಯ ಬಗ್ಗೆ KMC ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

  

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ Maruti Balappa Pujari ಇವರ ಬಡಗ ಮಿಜಾರು ಗ್ರಾಮದ ಪಿದಮಲೆ ಎಂಬಲ್ಲಿರುವ ಅವರ ಧಣಿಗೆ ಸೇರಿದ ಜಾಗಕ್ಕೆ ಕೆಲಸದ ನಿಮಿತ್ತ ದಿನಾಂಕ 19/02/2024 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಹೋದಾಗ ಅಲ್ಲಿ ಪಕ್ಕದ ಜಾಗದವರಾದ ರಾಬರ್ಟ್ ಲೋಬೊ ಹಾಗೂ ರಾಕೇಶ್ ಲೋಬೊ ರವರು ಹಿಟಾಚಿಯೊಂದನ್ನು ತಂದು ಕೆಲಸ ಮಾಡಿಸುತ್ತಿದ್ದು, ಸದ್ರಿ ಹಿಟಾಚಿಯನ್ನು ನಿಯಂತ್ರಿಸುತ್ತಿದ್ದ ಚಾಲಕ ಬಸವರಾಜ್ ಎಂಬಾತನು ಹಿಟಾಚಿಯಿಂದ ತೆಗೆಯುತ್ತಿದ್ದ ಮಣ್ಣನ್ನು ಪಿರ್ಯಾದಿದಾರರ ಧಣಿಯವರ ಜಾಗಕ್ಕೆ ಹಾಕುತ್ತಿದ್ದುದನ್ನು ಕಂಡು ಆತನಲ್ಲಿ ಇಲ್ಲಿ ಮಣ್ಣು ಹಾಕಬೇಡ ಎಂದು ಹೇಳಿದರೂ ಕೂಡ ಬಸವರಾಜ್ ಎಂಬಾತನು ಉದ್ದೇಶಪೂರ್ವಕವಾಗಿ ಹಿಟಾಚಿಯನ್ನು ಒಮ್ಮೆಲೆ ಪಿರ್ಯಾದಿದಾರರ ಕಡೆ ತಿರುಗಿಸಿದ ಪರಿಣಾಮ ಸದ್ರಿ ಹಿಟಾಚಿಯ ಬಕೇಟ್ ಭಾಗವು ಪಿರ್ಯಾದಿದಾರರ ಭುಜಕ್ಕೆ ತಾಗಿ ಗುದ್ದಿದ ಗಾಯವಾಗಿದ್ದು, ಆ ಸಮಯ ಪಿರ್ಯಾದಿದಾರರು ತನ್ನ ಮೊಬೈಲ್ ಫೋನ್ ನ್ನು ತೆಗೆದು ತನ್ನ ರೈಟರ್ ಅರುಣ್ ಭಟ್ ರವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಿರುವಾಗ ರಾಕೇಶ್ ಲೋಬೊ ರವರು ಓಡಿ ಬಂದು ಪಿರ್ಯಾದಿದಾರರನ್ನು ಹಿಡಿದು ಮೊಬೈಲ್ ಫೋನ್ ನ್ನು ತೆಗೆದುಕೊಂಡು ಬಳಿಕ ಹಿಂತಿರುಗಿಸಿದ್ದು, ಬಸವರಾಜ್ ಹಾಗೂ ಈ ಘಟನೆಯು ನಡೆಯುವಾಗ ಏನೂ ಹೇಳದೇ ಪರೋಕ್ಷವಾಗಿ ಬಸವರಾಜ್ ಗೆ ಸಹಾಯ ಮಾಡಿದ ರಾಬರ್ಟ್ ಲೋಬೊ ಮತ್ತು ರಾಕೇಶ್ ಲೋಬೊ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ದೂರು ಎಂಬಿತ್ಯಾದಿ

 

Mangalore South PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 20-02-2024 ರಂದು ಮಂಗಳೂರು ನಗರದ   ಸೆಂಟ್ರಲ್ ರೈಲ್ವೇ ನಿಲ್ದಾಣದ ಉತ್ತರ-ಪಶ್ಚಿಮ ದಿಕ್ಕಿಗೆ  ರೈಲ್ವೇ ಕಾಲೋನಿಯ ಗೇಟಿನ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಅಡ್ಯಾರ ಕಣ್ಣೂರಿನ ಮೊಹಮ್ಮದ್ ಇರ್ಷಾದ್ ಎಂಬಾತನು KA19HK6418  ನೇ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ ನಲ್ಲಿ ಸುಮಾರು ಮುಕ್ಕಾಲು ಕೆ.ಜಿಯಷ್ಟು ಮಾಧಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವವನ ವಿರುಧ್ದ  ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

 

Mangalore East PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ RATHNA ಇವರ ಮಗಳಾದ ಮೇಘನಾ @ ನೀಲಾ  ತಂದೆ : ಹನುಮಂತ, ಕೊಲಾಸೋ ಆಸ್ಪತ್ರೆಯ ಹತ್ತಿರ ಕಂಕನಾಡಿ ಮಂಗಳೂರು ಎಂಬಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು ದಿನಾಂಕ 19-02-2024 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದುದಾರರು ತಮ್ಮ  ಮಗಳ ಬಳಿ ನಿನ್ನ ಗಂಡನು ಇವತ್ತು ಮನೆಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತಾನೆ ರೆಡಿಯಾಗಿರು ಎಂದು ಹೇಳಿ ಮನೆಯ ಕೆಲಸಕ್ಕೆ ಹೋಗಿರುತ್ತೇನೆ ನಂತರ ಪಿರ್ಯಾದುದಾರರ ಮಗಳು 11:00 ಗಂಟೆಗೆ ಕರೆ ಮಾಡಿ ಸ್ಟೇಟ್ ಬ್ಯಾಂಕ್ ಗೆ ಹೋಗಿ ಬಟ್ಟೆ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದವಳು ಪಿರ್ಯಾದುದಾರರು ಕೆಲಸ ಮುಗಿಸಿಕೊಂಡು  ಸಂಜೆ 04:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮಗಳು ಮನೆಗೆ ಬಾರದೇ  ಮೊಬೈಲ್ ಪೋನ್ ಸ್ವಿಚ್  ಆಫ್ ಮಾಡಿಕೊಂಡಿರುತ್ತಾಳೆ. ಪಿರ್ಯಾದುದಾರರು ಮಗಳ ಬಗ್ಗೆ ಅವಳ ಸ್ನೇಹಿತರು ಮತ್ತು ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಲಾಗಿ ಪತ್ತೆಯಾಗದೇ ಇರುವುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 22-02-2024 04:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080