Crime Reports: CEN Crime PS Mangaluru City
ಪಿರ್ಯಾದಿ ದಿನಾಂಕ 13-02-2023 ರಂದು ಫೇಸಬುಕ್ ಖಾತೆಯಲ್ಲಿ ಆನ್ ಲೈನ್ ನಲ್ಲಿರುವಾಗ iPhone ಎಂಬ ಮೊಬೈಲ್ ವಿಡೀಯೋವನ್ನು ನೋಡಿದ್ದು ಅದಕ್ಕೆ ಪಿರ್ಯಾದಿದಾರರು ಲೈಕ್ ಮಾಡಿರುತ್ತಾರೆ. ನಂತರ ದಿನಾಂಕ 15-02-2023 ರಂದು ಯಾರೋ ಅಪರಿಚಿತ ವ್ಯಕ್ತಿಯು 7076200482 ನೇದರ ಮೊಬೈಲ್ ನಂಬ್ರನಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ ನೇದಕ್ಕೆ ನಾನು ಆರ್ಮಿ ಅಧಿಕಾರಿ ಎಂಬುದಾಗಿ ರೂ,15,000/- ಹಣದಲ್ಲಿ iPhone ಸಿಗುವುದಾಗಿ ಎಂಬ ಸಂದೇಶ ಕಳುಹಿಸಿದ್ದು ನಂತರ ಅದೇ ನಂಬ್ರನಿಂದ ಪೋನ್ ಕರೆಯು ಬಂದಿದ್ದು ಕರೆ ನಂತರ ಆ ವ್ಯಕ್ತಿಯು ಆರ್ಮಿ ಅಧಿಕಾರಿ ಐಡಿ ಕಾರ್ಡನ್ನು ಕಳಹಿಸಿ ಪಿರ್ಯಾದಿದಾರರಿಗೆ iPhone ನ್ನು ಕೋರಿಯರ್ ಮಾಡುವುದಾಗಿ ತಿಳಿಸಿ ಆತನ ಗೂಗಲ್ ಪೇ ನಂಬ್ರ 8168648196 ನ್ನು ಪಿರ್ಯಾದಿದಾರರ ವಾಟ್ಸಾಫ್ ನಂಬ್ರ: ನೇದಕ್ಕೆ ಕಳುಹಿಸಿದ್ದು, ಈ ಗೂಗಲ್ ಪೇ ನಂಬ್ರ 8168648196 ನೇದಕ್ಕೆ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಅದನ್ನು ನಂಬಿ ಐ ಫೋನ್ 11 ಸಲುವಾಗಿ ದಿನಾಂಕ 15-02-2023ರಂದು ಹಂತ ಹಂತವಾಗಿ ರೂಪಾಯಿ 1,36,515/- ಹಣವನ್ನು ಪಿರ್ಯಾದಿದಾರರು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಯಿಂದ ವರ್ಗಾವಣೆಗೊಳಿಸಿದ್ದು, ಆದರೆ ಇಲ್ಲಿಯವರೆಗೂ ಮೊಬೈಲ್ ಆಗಲೀ ಹಾಕಿದ ಹಣವಾಗಲೀ ವಾಪಾಸ್ಸು ಬಾರದೇ ಇದ್ದುದರಿಂದ ಈ ದಿನ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.
CEN Crime PS Mangaluru City
ಪಿರ್ಯಾದಿ” ಎಂಬ “Instagram” ಖಾತೆಯನ್ನು ಹೊಂದಿದ್ದು, ದಿನಾಂಕ 11-04-2023 ರಂದು ರಾತ್ರಿ “Instagram” ಖಾತೆಯನ್ನು ನೋಡುತ್ತಿರುವ ಸಮಯ 23:00 ಗಂಟೆಗೆ ಪಿರ್ಯಾದಿದಾರರ ಗೆಳೆಯನ ಖಾತೆಯಾದ “Shravinluke” ನೇದರಿಂದ ಪಿರ್ಯಾದಿದಾರರಿಗೆ “Received Rs. 416000 from (90XXXX1819) in your Instagram Wallet. Wallet txn id: 179291336476 ಎಂಬ Post ಬಂದಿದ್ದು, ತಕ್ಷಣ ಪಿರ್ಯಾದಿದಾರರಿಗೆ “lizzy_.hopper” ಖಾತೆಯಿಂದ ಸಂದೇಶ ಬರಲಾರಂಭಿಸಿದ್ದು, ಪಿರ್ಯಾದಿದಾರರು ಗೆಳೆಯನ “Instagram” ಖಾತೆಯನ್ನು ನಂಬಿ ದಿನಾಂಕ 12-04-2023 ರಂದು ರೂ. 40,000/- ಹಣವನ್ನು, ತದನಂತರ ದಿನಾಂಕ 13-04-2023 ರಂದು “lizzy_.hopper” ನೇಯವರು ಹೇಳಿದಂತೆ “Cash withdrawal pin fee” ಎಂದು ರೂ. 50,000/- ಹಣವನ್ನು, ಒಟ್ಟು ರೂ. 90,000/- ಹಣವನ್ನು ತನ್ನ ಯೂನಿಯನ್ ಬ್ಯಾಂಕ್ ಖಾತೆ ನಂಬ್ರ ನೇದರಿಂದ ವರ್ಗಾಯಿಸಿರುತ್ತಾರೆ. ಬಳಿಕ ಅದೇ ದಿನ ಇನ್ನೂ 70,000/- ಹಣವನ್ನು ವರ್ಗಾಯಿಸಲು ತಿಳಿಸಿದ್ದು, ಈ ಬಗ್ಗೆ ಗೆಳೆಯನಾದ “Shravinluke” ಖಾತೆಯವರಿಗೆ ದೂರವಾಣಿ ಮೂಲಕ ವಿಚಾರಿಸಿದ್ದಲ್ಲಿ “ತನ್ನ ಖಾತೆಯು ಸುಮಾರು 6 ತಿಂಗಳಿನಿಂದ ಹ್ಯಾಕ್ ಆಗಿರುವುದಾಗಿ” ತಿಳಿಸಿದ್ದು, ಯಾರೋ ಅಪರಿಚಿತರು ಪಿರ್ಯಾದಿದಾರರ ಗೆಳೆಯನ “Shravinluke” ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿ “Bitcoin Advertisement” ಕಳುಹಿಸಿ ಪಿರ್ಯಾದಿದಾರರಿಂದ ರೂ. 90,000/- ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವ “Shravinluke” ಮತ್ತು “lizzy_.hopper” ನೇ “Instagram” ಖಾತೆಯ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ಲಿಖಿತ ಪಿರ್ಯಾದಿ ಎಂಬಿತ್ಯಾದಿ.
CEN Crime PS Mangaluru City
ಪಿರ್ಯಾದಿ ಐ.ಸಿ.ಐ.ಸಿ.ಐ ಕ್ರೇಡಿಟ್ ಕಾರ್ಡನ್ನು ಹೊಂದಿದ್ದು ದಿನಾಂಕ 31-01-2023 ರಂದು ಪಿರ್ಯಾದಿದಾರರು ತನ್ನ ಕ್ರೇಡಿಟ್ ಕಾರ್ಡನ ಸ್ಟೇಟ್ ಮೇಂಟ್ ನ ಮಾಹಿತಿ ಪಡೆಯುವ ಸಲುವಾಗಿ ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬ್ರ ಸರ್ಚ್ ಮಾಡಿದಾಗ ಗೂಗಲ್ ನಲ್ಲಿ ದೊರೆತ 18601207777 ಮೊಬೈಲ್ ನಂಬ್ರಗೆ ಕರೆ ಮಾಡಿ ವಿಚಾರಿಸಿರುತ್ತಾರೆ. ನಂತರ ಸಲ್ಪ ಸಮಯದ ನಂತರ ಯಾರೋ ಅಪರಿಚಿತ ವ್ಯಕ್ತಿಯು 8910911818 ನೇದರಿಂದ ಪಿರ್ಯಾದಿದಾರರ ನೇದಕ್ಕೆ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿಯು ತಾನು ಐ.ಸಿ.ಐ.ಸಿ.ಐ ಬ್ಯಾಂಕನಿಂದ ಕರೆ ಮಾಡಿರುವುದಾಗಿ ತಿಳಿಸಿ ಪಿರ್ಯಾದಿದಾರರಿಗೆ ನೀವು ಐ.ಸಿ.ಐ.ಸಿ.ಐ ಕ್ರೇಡಿಟ್ ಕಾರ್ಡನ ಸ್ಟೇಟ್ ಮೇಂಟ್ ನ ಮಾಹಿತಿ ಪಡೆಯಲು ನೀವು ನಿಮ್ಮ ಮೊಬೈಲ್ ನಲ್ಲಿ Any Desk App ಡೌನ್ ಲೋಡ್ ಮಾಡುವಂತೆ ತಿಳಿಸಿರುತ್ತಾನೆ ಸದ್ರಿ ವ್ಯಕ್ತಿಯು ತಿಳಿಸಿದಂತೆ ಪಿರ್ಯಾದಿದಾರರು Playstore ನಲ್ಲಿ ಹೋಗಿ Any Desk App ನ್ನು ಡೌನ್ ಲೋಡ್ ಮಾಡಿರುತ್ತಾರೆ ಕೂಡಲೇ ಪಿರ್ಯಾದಿದಾರರ ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಬಂದರ ಶಾಖೆ ಖಾತೆ ನಂಬ್ರ ನೇದರಿಂದ ಹಂತ ಹಂತವಾಗಿ ಒಟ್ಟು ರೂ. 83,999/- ಹಣವನ್ನು ಅನಧಿಕೃತವಾಗಿ ವರ್ಗಾವಣೆಮಾಡಿಕೊಂಡು ಮೋಸ ಮಾಡಿರುವುದು ಎಂಬಿತ್ಯಾದಿ.
Mangalore East Traffic PS
ಪಿರ್ಯಾದಿ ಮೋಹನ್ ದಾಸ್ ಶೆಟ್ಟಿ, ಪ್ರಾಯ: 47 ವರ್ಷ ಎಂಬುವರು ದಿನಾಂಕ 19/04/2023 ರಂದು ರಾತ್ರಿ ತಮ್ಮ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-R-6369 ನೇಯದನ್ನು ಚಲಾಯಿಸಿಕೊಂಡು ಬಿಕರ್ನಕಟ್ಟೆ ಕಡೆಯಿಂದ ಪಡೀಲ್ ಕಡೆಗೆ ಹಾದು ಹೋಗಿರುವ ರಾ.ಹೆ 73 ನೇಯದರಲ್ಲಿ ಹೋಗುತ್ತಿದ್ದಾಗ ಸಮಯ ಸುಮಾರು ರಾತ್ರಿ 9-00 ಗಂಟೆಗೆ ಕುಲಶೇಖರ ಕೈಕಂಬ ಪ್ಲೈ ಓವರ್ ಎಂಟ್ರೆನ್ಸ್ ತಲುಪುತ್ತಿದ್ದಂತೆ ಅವರ ಬಲ ಹಿಂಭಾಗದಲ್ಲಿ ಬರುತ್ತಿದ್ದ ಲಾರಿ ನೊಂದಣಿ ಸಂಖ್ಯೆ: KA-13-D-2295 ನೇಯದನ್ನು ಅದರ ಚಾಲಕ ಪವನ್ ಎಂಬಾತನು ತನ್ನ ಲಾರಿಯ ಮುಂಭಾಗದಲ್ಲಿ ಹೋಗುತ್ತಿದ್ದ ಟ್ಯಾಂಕರ್ ಲಾರಿಯೊಂದನ್ನು ಎಡ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿಕೊಂಡು ಬಂದಿದ್ದರಿಂದ ಸದ್ರಿ ಲಾರಿಯ ಎಡ ಮುಂಭಾಗದ ಚಕ್ರದ ಹಿಂಭಾಗದಲ್ಲಿ ಬಾಡಿಗೆ ಅಳವಡಿಸಿದ ಆಂಗ್ಲರ್ ಪಟ್ಟಿ ಪಿರ್ಯಾದಿದಾರರ ಮೋಟಾರ್ ಸೈಕಲಿನ ಹ್ಯಾಂಡಲಿಗೆ ಢಿಕ್ಕಿಯಾದ ರಭಸಕ್ಕೆ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕೈ ಕೋಲುಕೈಯಲ್ಲಿ ಆಳವಾದ ಚರ್ಮ ಹರಿದ ರಕ್ತಗಾಯ ಹಾಗೂ ತಲೆಗೆ ತರಚಿದ ಗಾಯವಾಗಿದ್ದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿಕೆ ಎಂಬಿತ್ಯಾದಿ.
Crime Reports: CEN Crime PS Mangaluru City
ಪಿರ್ಯಾದಿ ಮುಂಬಯಿಯ ಬ್ಯಾಂಕ್ ಆಫ್ ಇಂಡಿಯಾ ಅಂಧೇರಿ(ವೆಸ್ಟ್) ಬ್ರಾಂಚ್ ನಲ್ಲಿ ಖಾತೆ ಸಂಖ್ಯೆ ಖಾತೆ ಹೊಂದಿರುತ್ತಾರೆ. ದಿನಾಂಕ 14-04-2023 ರಂದು ಪಿರ್ಯಾದಿದಾರರು ಕೆಲವು ಗೃಹೋಪಯೋಗಿ ವಸ್ತುಗಳನ್ನು VRL Logistic ನಲ್ಲಿ ಮುಂಬೈನಿಂದ ಪಾರ್ಸೆಲ್ ಮಾಡಿ ಕಳುಹಿಸಿದ್ದು ಸದ್ರಿ VRL ಕಂಪನಿಯವರು 2 ದಿನದಲ್ಲಿ ಮಂಗಳೂರಿಗೆ ಪಾರ್ಸೆಲ್ ತಲುಪುತ್ತದೆ ಎಂದು ತಿಳಿಸಿರುತ್ತಾರೆ. ಬಳಿಕ ಪಿರ್ಯಾದುದಾರರು ಮಂಗಳೂರಿಗೆ ಬಂದು 2 ದಿನ ಕಳೆದರೂ ಪಾರ್ಸೆಲ್ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ವಿಚಾರಿಸುವರೇ ಪಿರ್ಯಾದುದಾರರು ದಿನಾಂಕ 17-04-2023 ಸದ್ರಿ VRL ಕಂಪೆನಿಯ ಸ್ಲಿಪ್ ನಲ್ಲಿ ನಮೂದಿಸಿದ ವೆಬ್ ಸೈಟನ್ನು ಗೂಗಲ್ ನಲ್ಲಿ ತೆರೆದು ತನ್ನ ಹೆಸರು, ಮೊಬೈಲ್ ನಂಬ್ರ, Tracking ID ಮತ್ತು ವಿಳಾಸ ನಮೂದಿಸಿರುತ್ತಾರೆ. ಇದಾದ ಸ್ವಲ್ಪ ಹೊತ್ತಿನ ನಂತರ ಯಾವುದೋ ನಂಬರಿನಿಂದ(ನಂಬ್ರ ಪಿರ್ಯಾದುದಾರರಿಗೆ ತಿಳಿದಿರುವುದಿಲ್ಲ) ಕರೆಯೊಂದು ಬಂದಿದ್ದು Tracking ಗಾಗಿ ರೂ.2 ಗೂಗಲ್ ಪೇ ಮಾಡಬೇಕೆಂದು ಸೂಚಿಸಿರುತ್ತಾರೆ. ಅದರ ನಂತರ ಫಿರ್ಯಾದುದಾರರು ರೂ.2 ಗೂಗಲ್ ಪೇ ಮಾಡಿದ್ದು ಅದಕ್ಕೆ ಯಾವುದೇ ಪ್ರತ್ಯುತ್ತರ ಬಂದಿರುವುದಿಲ್ಲ. ಮರುದಿನ ದಿನಾಂಕ 18-04-2023 ರಂದು ಸಂಜೆ 5-30 ಗಂಟೆಗೆ ಫಿರ್ಯಾದುದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ,9500/- ರೂ.4500/-, ರೂ.400 ಮತ್ತು ರೂ.38/- ರಂತೆ ಒಟ್ಟು ರೂ.99,938/- ಹಣ ಕಡಿತಗೊಂಡ ಬಗ್ಗೆ ಸಂದೇಶ ಬಂದಿರುತ್ತದೆ. ನಂತರ ಪಿರ್ಯಾದುದಾರರು ಮಂಗಳೂರಿನ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಯಾರೋ ಅಪರಿಚಿತರು ಫಿರ್ಯಾದುದಾರರಿಗೆ VRL Logistic ನಿಂದ ಮಾತನಾಡುವುದಾಗಿ ನಂಬಿಸಿ, ಪಾರ್ಸೆಲ್ ಟ್ರಾಕ್ ಮಾಡುವರೇ ಸಹಾಯ ಮಾಡುವುದಾಗಿ ತಿಳಿಸಿ ಅನಧಿಕೃತವಾಗಿ ಪಿರ್ಯಾದುದಾರರ ಖಾತೆಯಿಂದ ಒಟ್ಟು ರೂ.99,938/- ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದು ತಿಳಿದು ಬಂದಿದ್ದು ಸದರಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.
CEN Crime PS Mangaluru City
ಪಿರ್ಯಾದಿ ದಿನಾಂಕ 04-02-2023 ರಂದು ಮದ್ಯಾಹ್ನ 12-00 ಗಂಟೆ ಸಮಯಕ್ಕೆ BIT Company Private Limited ಎಂಬ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಇರುವುದಾಗಿ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಆರೋಪಿಯ ಮೊಬೈಲ್ ನಂಬ್ರ; 8412871317 ನೇದರಿಂದ ವಾಟ್ಸಾಪ್ ಮೂಲಕ ಮೆಸೇಜ್ ಬಂದಿರುತ್ತದೆ. ಇದನ್ನು ನಂಬಿದ ಪಿರ್ಯಾದಿದಾರರು ಆರೋಪಿಗಳು ನೀಡಿದ ಟಾಸ್ಕ್ ನ್ನು ಪೂರ್ತಿಗೊಳಿಸಿದ್ದಕ್ಕೆ ರೂಪಾಯಿ 240/- ಮತ್ತು 2232/- ನ್ನು ಪಿರ್ಯಾದಿದಾರರ ಖಾತೆಗೆ ಜಮಾ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ಮುಂದಿನ ಟಾಸ್ಕ್ ಬಗ್ಗೆ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗೆ ಮತ್ತು ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ದಿನಾಂಕ 04-02-2023 ರಿಂದ 10-03-2023 ರವರೆಗೆ ಒಟ್ಟು ರೂಪಾಯಿ 5,66,664/-ವರ್ಗಾಯಿಸಿರುತ್ತಾರೆ. ಆರೋಪಿಗಳು ಪಿರ್ಯಾದಿದಾರರಲ್ಲಿ ಇನ್ನೂ ಹಣದ ಬೇಡಿಕೆ ಇಟ್ಟಾಗ ಮೋಸ ಹೋಗಿರುವುದು ತಿಳಿದು ಹೋಗಿ ಬ್ಯಾಂಕ್ ನಲ್ಲಿ ವಿಚಾರಿಸಿಕೊಂಡಾಗ ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿರುವುದಾಗಿ ನೀಡಿದ ಪಿರ್ಯಾದಿಯಾಗಿರುತ್ತದೆ. ತನ್ನ ಖಾತೆಯನ್ನು ಹೊಂದಿರುವ ಬ್ಯಾಂಕಿನಲ್ಲ ಅನಧಿಕೃತವಾಗಿ ವರ್ಗಾವಣೆಯಾದ ಹಣದ ಬಗ್ಗೆ ಪರಿಶೀಲಿಸಿ ಕಾದು ನೋಡಿ ಈ ದಿನ ವಿಳಂಬವಾಗಿ ದೂರನ್ನು ನೀಡಿರುವುದಾಗಿದೆ
Urva PS
ಪಿರ್ಯಾದಿ ಶ್ರೀಮತಿ ಕುಶಾಲಾಕ್ಷಿ ರವರ ಮಗಳಾದ ಕುಮಾರಿ ಪವಿತ್ರ, ಪ್ರಾಯ 23 ವರ್ಷ ಎಂಬವರು ದಿನಾಂಕ 18-04-2023 ರಂದು ಬೆಳಿಗ್ಗೆ ಸುಮಾರು 09-00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೇ ಇದ್ದು, ಅರ್ಜಿದಾರರು ಸಂಬಂಧಿಕರ ಮನೆ ಮತ್ತು ಎಲ್ಲಾ ಕಡೆ ಹುಡುಕಾಡಿದಲ್ಲಿ ಕುಮಾರಿ ಪವಿತ್ರಾ ರವರು ಈವರೆಗೆ ಪತ್ತೆಯಾಗದೆ ಕಾಣೆಯಾಗಿರುತ್ತಾರೆ.
ಕಾಣೆಯಾದವರ ವಿವರ:
ಹೆಸರು:- ಕುಮಾರಿ ಪವಿತ್ರಾ
ವಯಸ್ಸು: 23 ವರ್ಷ
ಎತ್ತರ:- 4.5 ಅಡಿ
ಚಹರೆ: ಎಣ್ಣೆ ಕಪ್ಪು ಮೈ ಬಣ್ಣ
ತಿಳಿದಿರುವ ಭಾಷೆ:- ಕನ್ನಡ, ತುಳು, ಇಂಗ್ಲೀಷ್, ಹಿಂದಿ
Bajpe PS
ಪಿರ್ಯಾದಿ Bikash Ranjan rowth ಪ್ರಕಾಶ್ ಎಂಬುವರಿಗೆ ಸೇರಿದ ಇಟಾಚಿ ಹಾಗೂ ಮಿನಿ ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 19.04.2023 ರಂದು ಸಮಯ ಸುಮಾರು 1.00 ಗಂಟೆಯ ಸಮಯಕ್ಕೆ ಮಾಲಕರಾದ ಪ್ರಕಾಶ್ ರವರು ತಿಳಿಸಿದಂತೆ ನಾಡಾಜೆ ಶೈಲೇಶ್ ಎಂಬುವರ ಮನೆಯ ಕಾಮಗಾರಿಗೆ ಮಣ್ಣನ್ನು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ನಾಡಜೆ ಎಂಬಲ್ಲಿರುವ ಗುಡ್ಡದ ಮಣ್ಣನ್ನು ಜಮೀನಿನ ಮಾಲಕರು ತೆಗೆಯುವಂತೆ ತಿಳಿಸಿದ ಮೇರೆಗೆ KA19AD3588 ನೇ ಮೀನಿ ಲಾರಿ ಹಾಗೂ KA19MJ2113 ನೇ ಜೆಸಿಬಿ ಯ ಚಾಲಕನಾದ ಕೋಸಾರ್ ಅನ್ಸಾರಿ ರವರ ಮೂಲಕ ಸುಮಾರು 03 ಲೋಡ್ ನಷ್ಟು ಮಣ್ಣನ್ನು ಶೈಲೇಶ್ ರವರ ಮನೆಯ ನಿರ್ಮಾಣದ ಜಾಗದಲ್ಲಿ ಹಾಕಿ ಇನ್ನೋಂದು ಲೋಡ್ ತುಂಬಲು ಪಿರ್ಯಾದಿದಾರರು ಮತ್ತು ಜೆಸಿಬಿ ಚಾಲಕ ಸಮಯ 4.00 ಗಂಟೆಯ ಸಮಯಕ್ಕೆ ಮಣ್ಣನ್ನು ತುಂಬಿಸುವ ಸಮಯ ಗುಡ್ಡವು ಕುಸಿದು ಜೆಸಿಬಿ ಹಾಗೂ ಮಿನಿ ಲಾರಿಯ ಮೇಲೆ ಮಣ್ಣು ಬಿದ್ದಿದ್ದು ಪಿರ್ಯಾದಿದಾರರು ಲಾರಿಯಿಂದ ಹಾರಿ ಓಡಿದ್ದು ಆದರೆ ಜೆಸಿಬಿ ಚಾಲಕನಾದ ಕೋಸಾರ್ ಅನ್ಸಾರಿ ಕುಸಿದ ಮಣ್ಣಿನ ಅಡಿ ಜೆಸಿಬಿ ಸಮೇತ ಸಿಲುಕಿದ್ದು ನಂತರ ಅವನನ್ನು ಮಣ್ಣಿನಿಂದ ಹೊರೆತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿದ್ದು ಈ ಘಟನೆಗೆ ಜೆಸಿಬಿ ಮಾಲಕ ಹಾಗೂ ಜಮೀನಿನ ಮಾಲಕರು ಗುಡ್ಡ ಕುಸಿಯುತ್ತದೆ ಎಂಬುದರ ಬಗ್ಗೆ ತಿಳಿದಿದ್ದರು ಯಾವುದೇ ಮುಂಜಾಗೃತ ಕ್ರಮವನ್ನು ಅನುಸರಿಸಿರುವುದಿಲ್ಲ ಎಂಬಿತ್ಯಾದಿ.
Bajpe PS
ಪಿರ್ಯಾದಿ Shivaprasad Bhat ತನ್ನ KA19MF3512ನೇ ಓಮಿನಿ ಕಾರಿನಲ್ಲಿ ತನ್ನ ಅಣ್ಣ ಉದಯ್ ಭಟ್ (50) ಮತ್ತು ಸಂಬಂಧಿ ಪ್ರವೀಣ್ ಕೆ ಎ (31) ರವರೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ಸಮಯ ಬೆಳಗ್ಗೆ 9.00 ಗಂಟೆಗೆ ಮೂಳೂರು ಗ್ರಾಮದ ರೋಸಾ ಮಿಸ್ತಿಕಾ ಶಾಲೆಯ ಬಳಿ ಬರುತಿದ್ದಂತೆ ಕೈಕಂಬ ಗುರುಪುರ ಮಾರ್ಗವಾಗಿ KA19MK7988 ನೇ ಟೋಯೊಟಾ ಕಾರಿನ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತಿದ್ದ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಕೈಮೂಳೆ ಮುರಿತವಾಗಿದ್ದು ಮತ್ತು ಬಲಗಾಲಿನ 3ನೇ ಬೆರಳಿಗೆ ಮುರಿತವಾಗಿದ್ದು ಪಿರ್ಯಾದಿದಾರರ ಅಣ್ಣ ಉದಯ್ ಭಟ್ ರವರಿಗೆ ತಲೆ ,ಪೆಕ್ಕೆಲುಬಿಗೆ ತೀವ್ರ ಗಾಯವಾಗಿದ್ದು ಹಾಗೂ ಪಿರ್ಯಾದಿದಾರರ ಸಂಬಂದಿಗೆ ಎಡಕಾಲಿಗೆ ರಕ್ತಗಾಯವಾಗಿದ್ದು ಗಾಯಾಳುಗಳನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ
Traffic South Police Station
ದಿನಾಂಕ:19-04-2023 ರಂದು ಪಿರ್ಯಾದಿ LOKESH ಬಾಬ್ತು ಸ್ಕೂಟರ್ ನಂಬ್ರ KA-19-EY-5221 ನೇದನ್ನು ಪಿರ್ಯಾದಿದಾರರು ಕೆಲಸ ಮಾಡುವ ವೈನ್ಸ್ ಅಂಡ್ ಸ್ಪಿರಿಟ್ಸ್ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿರುವ ಅಶ್ವಿನ್ ರವರು ಸವಾರರಾಗಿ ಹಾಗೂ ಬ್ರಿಜಿಷ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅವರ ರೂಂ ಆದ ಜಪ್ಪಿನಮೊಗೆರು ಬಳಿ ಇರುವ ಕುರ್ಬಿಸ್ಥಾನ ಎಂಬಲ್ಲಿಂದ ಪಂಪ್ ವೆಲ್ ಬಳಿಯ ವೈನ್ ಶಾಪ್ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 10:00 ಗಂಟೆಗೆ ರಾ.ಹೆ-66 ರ ಜಪ್ಪಿನಮೊಗೆರು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ KA-21-Z-1401 ನೇದರ ಕಾರಿನ ಚಾಲಕ ಮೊಯಿದೀನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಶ್ವಿನ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಹಾಗೂ ಸಹ ಸವಾರರಿಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅಶ್ವಿನ್ ಅವರಿಗೆ ತಲೆ ಹಿಂಬದಿಗೆ ರಕ್ತ ಬರುವ ಗಾಯ ಮತ್ತು ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಮುಖಕ್ಕೆ, ಬಲಗಾಲಿಗೆ ತರಚಿದ ಗಾಯವಾಗಿರುತ್ತದೆ, ಮತ್ತು ಸಹ ಸವಾರರಾದ ಬ್ರಿಜಿಷ್ ರವರಿಗೆ ತಲೆಯ ಹಿಂಬದಿಗೆ ಗುದ್ದಿದ ಹಾಗೂ ರಕ್ತ ಬರುವ ಗಾಯವಾಗಿದ್ದು, ಬಲಗಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಅವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಬೇರೊಂದು ವಾಹನದಲ್ಲಿ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಎಂಬಿತ್ಯಾದಿ