ಅಭಿಪ್ರಾಯ / ಸಲಹೆಗಳು

Crime Reported in Urva PS

ದಿನಾಂಕ 09-0-2023 ರಂದು ಸಂಜೆ ಸುಮಾರು 07.00 ಗಂಟೆ ಸಮಯಕ್ಕೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಹಯಾತುದ್ದೀನ್ ಜುಮ್ಮಾ ಮಸೀದಿಯಲ್ಲಿ ಪಿರ್ಯಾದಿ Mr K.H MOHAMMED ದಾರರು ಪ್ರಾರ್ಥನೆ ಮುಗಿಸಿ ಮಸೀದಿಯ ಪ್ರವೇಶ ದ್ವಾರದ ಬಳಿ ಬಂದು ನಝೀರ್ ರವರೊಂದಿಗೆ ಮಸೀದಿಯ ಕಂಪೌಂಡ್ ಗೋಡೆಯ ವಿಚಾರದಲ್ಲಿ ಮಾತನಾಡಲು ಪ್ರಾರಂಭಿಸಿದಾಗ (ಪ್ರಸ್ತುತ ಮಸೀದಿಯ ಕಾರ್ಯದರ್ಶಿಯಾಗಿರುವ ಆರೋಪಿತರು) ಏಕಾಏಕಿ ಅರ್ಜಿದಾರರಿಗೆ ಬ್ಯಾರಿ ಭಾಷೆಯಲ್ಲಿ  “ಕೈ ಕಾಲ್ ಒಡಿಕ್ರೆ, ನಿಂಗಲೆ ಬೈಕಲೆ, ನಿಗಲೆ ಇದೇ ಸೊರ ಪಿತ್ನ ಆಕ್ರೊ, ನಿಂಗಲೋ, ತಲೆ ಅದ್ಚಿ ಪೊಟ್ಟಾಟ್ರೆ” ಇತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರನ್ನು ನೆಲಕ್ಕೆ ತಳ್ಳಿದ್ದು ಅಲ್ಲದೇ, ಪಿರ್ಯಾದಿದಾರರಿಗೆ ಹೊಡೆಯುವ ಉದ್ದೇಶದಿಂದ ಪಕ್ಕದ ಕ್ಯಾಂಟೀನ್ ನಿಂದ ಒಂದು ಸೋಡಾ ಬಾಟಲಿಯನ್ನು ತೆಗೆದುಕೊಂಡು ಸೋಡಾ ಬಾಟಲಿಯಿಂದ ಹೊಡೆಯಲು ಪ್ರಯತ್ನಿಸಿದ್ದು, ಅಲ್ಲದೇ ಆರೋಪಿಯು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಸೋಡಾ ಬಾಟಲಿಯನ್ನು ಪಿರ್ಯಾದಿದಾರರ ಕಡೆಗೆ ಎಸೆದಿದ್ದು ಪಿರ್ಯಾದಿದಾರರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದು, ನಂತರ ಪಿರ್ಯಾದಿದಾರರಿಗೆ ಆರೋಪಿತರರು ಜೀವ ಬೆದರಿಕೆ ನೀಡಿ ಅಲ್ಲಿಂದ ತೆರಳಿರುತ್ತಾರೆ ಎಂಬಿತ್ಯಾದಿ.

 

CEN Crime PS

ಪಿರ್ಯಾದಿದಾರರು rflavya6 ಇನ್ಸ್ಟ್ರಾಗ್ರಾಂ ಖಾತೆಯನ್ನು  ಹೊಂದಿದ್ದು, ಅದರಲ್ಲಿ ದಿನಾಂಕ: 13-05-2023 ರಂದು ಸದ್ರಿ ಇನ್ ಸ್ಟ್ರಾಗ್ರಾಂ ಖಾತೆಯನ್ನು  ನೋಡುತ್ತಿರುವ ಸಂಧರ್ಭ ಅದರಲ್ಲಿ  best__deals__store ಎಂಬ ಇನ್ ಸ್ಟ್ರಾಗ್ರಾಂ ಖಾತೆಯಿಂದ IPHONE 14 PRO ಮೊಬೈಲ್   ಮಾರಾಟಕ್ಕಿದೆ ಎಂಬ  ಜಾಹೀರಾತು ಬಂದಿದ್ದು  ಅದನ್ನು ಖರೀದಿ ಮಾಡುವ ಬಗ್ಗೆ  ಅದನ್ನು ಕ್ಲಿಕ್ ಮಾಡಿದಾಗ ಅದರಲ್ಲಿ  ಇದ್ದ  ವಾಟ್ಸಾಪ್ ನಂ. 9648946608 ನೇದ್ದರ ಪೇಜ್ ತೆರೆದಿದ್ದು  ಅದರಲ್ಲಿ ಪಿರ್ಯಾದಿದಾರರು IPHONE 14 PRO ಮೊಬೈಲ್ ನ್ನು ಖರೀದಿಮಾಡುವುದಾಗಿ ಸಂದೇಶ ಕಳುಹಿಸಿರುತ್ತಾರೆ. ನಂತರ  ಸದ್ರಿಯವರು  ವಾಟ್ಸಾಪ್ ನಲ್ಲಿ ಮೊಬೈಲ್ ಖರೀದಿಸಲು  ಮೊದಲಿಗೆ ಹಣ  ಹಾಕುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಸದ್ರಿಯವರು  ಕಳುಹಿಸಿದ್ದ  ಕ್ಯೂ ಆರ್ ಕೋಡ್ ನ್ನು   ಸ್ಕ್ಯಾನ್ ಮಾಡಿ ರೂ.13,999/-ಹಣವನ್ನು  ವರ್ಗಾಯಿಸಿರುತ್ತಾರೆ, ತದನಂತರ ದಿನಾಂಕ:16-05-2023 ರಂದು ಮೊಬೈಲ್ ನಂ.7415171733 ನೇದ್ದರಿಂದ ಪಿರ್ಯಾದಿದಾರರ ಮೊಬೈಲ್ ನಂ.ಕ್ಕೆ  ಕರೆ ಬಂದಿದ್ದು  ಕರೆ ಮಾಡಿದ  ವ್ಯಕ್ತಿಯು ತಾನು ಅಮೆಜಾನ್ ನಿಂದ ಕರೆಮಾಡುತ್ತಿರುವುದಾಗಿ ತಿಳಿಸಿ ನೀವು ಆರ್ಡರ್ ಮಾಡಿದ ಮೊಬೈಲ್ ನ್ನು ಕಳುಹಿಸಲು  ಇಂಟರ್ ನ್ಯಾಷನಲ್ ಜಾರ್ಜ್ಸ್ ರೂ.21,609/-ಹಣವನ್ನು ಹೆಚ್ ಡಿ ಎಫ್ ಸಿ  ಬ್ಯಾಂಕ್ ಖಾತೆ ನಂ.50100620257008  IFSC: HDFC0006486 ನೇದ್ದಕ್ಕೆ ಹಣ ವರ್ಗಾಯಿಸುವಂತೆ  ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಸದ್ರಿಯವರ  ಬ್ಯಾಂಕ್  ಖಾತೆ ನಂಬ್ರಕ್ಕೆ ಪಿರ್ಯಾದಿದಾರರು  ರೂ.21,609/- ಹಣವನ್ನು  ವರ್ಗಾಯಿಸಿದ್ದು , ತದನಂತರ ಸಾಕಷ್ಟು ಬಾರಿ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನ ಮಾಡಿದ್ದರು ಸದ್ರಿಯರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ,ಈ ರೀತಿ ಪಿರ್ಯಾದಿದಾರರಿಂದ ಒಟ್ಟು ರೂ.35,608/-  ಹಣವನ್ನು ಅನಧಿಕೃತವಾಗಿ ವರ್ಗಾಯಿಸಿ ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೋರಿಕೆಎಂಬಿತ್ಯಾದಿ.

 

2) ದಿನಾಂಕ:04-05-2023 ರಂದು ಪಿರ್ಯಾದಿದಾರರ ವಾಟ್ಸಾಪ್ ಗೆ +244956195199 ನೇದ್ದರಿಂದ ಪಾರ್ಟ್ ಟೈಮ್ ಕೆಲಸವಿರುವುದಾಗಿ ಸಂದೇಶ ಬಂದಿದ್ದು ಪಿರ್ಯಾದಿದಾರರು ಅದರ ಬಗ್ಗೆ ಗಮನ ಕೊಟ್ಟಿರುವುದಿಲ್ಲ ತದನಂತರ +244956195199 ನಂಬ್ರದಿಂದಲೇ Chegg India Pvt Ltd ನೇದ್ದರಿಂದ ಕೆಲಸ ಇರುವುದಾಗಿ ಸಂದೇಶ ಬಂದಿದ್ದು ಈ ಬಗ್ಗೆ ವಾಟ್ಸಾಪ್ ನಲ್ಲಿ ವಿಚಾರಿಸಿದಾಗ ಮೊದಲಿಗೆ ಪಿರ್ಯಾದಿದಾರರಿಂದ ಬ್ಯಾಂಕ್ ಖಾತೆಯ ಮಾಹಿತಿ ಎಲ್ಲಾ ಪಡೆದುಕೊಂಡು ನಂತರ @Anna9638527, ಟೆಲಿಗ್ರಾಮ್ ತೆರಳಿ ಅಲ್ಲಿರುವ ಲಿಂಕ್ ನ್ನು ಕ್ಲಿಕ್ ಮಾಡಿ  ಆಪ್ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಸದ್ರಿ ಟೆಲಿಗ್ರಾಮ್ ಮುಖೇನ ಒಂದು ಆಪ್ ನ್ನು ಡೌನ್ ಲೋಡ್ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು ಡೌನ್ ಲೋಡ್ ಮಾಡಿದಾಗ ಅದರಲ್ಲಿ  ರೂ.10,000/-ಟಾಸ್ಕ್ ನ್ನು ಮುಗಿಸಿದರೆ ರೂ.4000/-ಹಣ ಲಾಭ ಬರುವುದಾಗಿ ಟಾಸ್ಕ್ ಇದ್ದು  ಅದರಂತೆ ಪಿರ್ಯಾದಿದಾರರು ಮೊದಲಿಗೆ ತಮ್ಮ ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆ ನಿಂದ ಪೇಟಿಎಂ ಮುಖೇನ ಅವರು ನೀಡಿದ YES BANK ACCOUNT NO.021863300003080 IFSC:YESB0000218 ACCOUNT HOLDER NAME:MOHAMMAD AAFAQUE MANSOOR ಖಾತೆಗೆ ರೂ.10,000/-ಹಣವನ್ನು  ವರ್ಗಾವಣೆ ಮಾಡಿರುತ್ತಾರೆ ನಂತರದಲ್ಲಿ ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ರೂ.14,000/-ಹಣ ಲಾಭವಾಗಿ ಜಮೆಯಾಗಿರುತ್ತದೆ. ಪುನಃ  ಟೆಲಿಗ್ರಾಂ ಖಾತೆ @Samira85613  ನೇದ್ದರಿಂದ ದಿನಾಂಕ:05-05-2023ರಂದು ಒಂದು ಇನ್ ಸ್ಟಾಗ್ರಾಂ  ಖಾತೆಯನ್ನು ಅನುಸರಿಸುವಂತೆ  ತಿಳಿಸಿದ್ದು ಅದರಂತೆ  ಪಿರ್ಯಾದಿದಾರರು ಅವರು ತಿಳಿಸಿದ ಇನ್ ಸ್ಟಾಗ್ರಾಮ್ ಖಾತೆಯನ್ನು ಅನುಸರಿಸಿದಾಗ ಪಿರ್ಯಾದಿದಾರರ ಬ್ಯಂಕ್ ಖಾತೆಗೆ ರೂ.300/- ಹಣ ಎರಡು ಬಾರಿ ಜಮೆಯಾಗಿರುತ್ತದೆ.ತದನಂತರ ಪಿರ್ಯಾದಿದಾರರು ಲಾಭ ಗಳಿಸುವ ಉದ್ದೇಶದಿಂದ @Samira85613  ಟೆಲಿಗ್ರಾಂನಲ್ಲಿ ಟಾಸ್ಕ್ ಗೆ ಹಣ ಹೂಡಿಕೆ ಮಾಡುವುದಾಗಿ ಚಾಟ್ ಮಾಡಿದ್ದು  ನಂತರ ಸದ್ರಿ ಟೆಲಿಗ್ರಾಮ್ ನಲ್ಲಿ ಬಂದ   ICICI BANK A/C  NO.670705601096,IFSC: ICIC0006707 NAME: RAMAN DAS ಈ ಖಾತೆಗೆ 10,000/-ಹಣ ವರ್ಗಾಯಿಸಿರುತ್ತಾರೆ. ನಂತರ ಟೆಲಿಗ್ರಾಂನಲ್ಲಿ  ರೂ.30,000/-ಹಣವನ್ನು ಎರಡನೇ ಟಾಸ್ಕ್ ಗೆ  ಹೂಡಿಕೆ ಮಾಡುವಂಎ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು  ಅವನು ನೀಡಿದ YES BANK  A/C  NO.003363300008275 IFSC:YESB0000033  NAME: SHREE DEV ನೇದ್ದಕ್ಕೆ ಹಣವರ್ಗಾವಣೆ ಮಾಡಿದ್ದು ಸದ್ರಿ ಆಪ್ ನಲ್ಲಿ ಲಾಭ ಸಹಿತ ರೂ.56,000/-ಹಣ ಇರುವಂತೆ ನಮೂದು ಇದ್ದು ಅದನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳಲು ಪ್ರಯತ್ನಿಸಿದಾಗ ಅದು  ವರ್ಗಾವಣೆಯಾಗದಿರುವುದಿಲ್ಲ  ಈ ಬಗ್ಗೆ ಟಾಸ್ಕ್ ಬಂದ ಟೆಲಿಗ್ರಾಂ @Samira85613 ಖಾತೆಯಲ್ಲಿ ಚಾಟ್ ಮುಖೇನ ಕೇಳಿದಾಗ ಅವರು ರೂ.56,000/-ಹಣವನ್ನು ವರ್ಗಾವಣೆ ಮಾಡಲು ಟಾಸ್ಕ್ 3ನೇದ್ದನ್ನು ಮುಗಿಸುವಂತೆ ಅದಕ್ಕೆ ರೂ 1,00,000/- ಹಣವನ್ನು ಅವರು ತಿಳಿಸಿದ YES BANK ACCOUNT NO.30,000/- IFSC: YESB0000550 NAME:SARTHAK TRAVELS ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ತಿಳಿಸಿದ್ದು ಅಷ್ಟು ಹಣ ಪಿರ್ಯಾದಿದಾರರಲ್ಲಿ ಇಲ್ಲದೇ ಇದ್ದು ಪಿರ್ಯಾದಿದಾರರು ತನ್ನಲ್ಲಿರುವ 30,000/-ಹಣವನ್ನು ಹಾಕುವುದಾಗಿ ತಿಳಿಸಿ ಹಣ ವರ್ಗಾವಣೆ ಮಾಡಿರುತ್ತಾರೆ.  ಮೇಲ್ಕಂಡ ಎಲ್ಲ ಹಣವನ್ನು ಪಿರ್ಯಾದಿದಾರರು ತನ್ನ ಎಸ್ ಬಿ ಐ ಬ್ಯಾಂಕ್ ಖಾತೆ ನಂ. ನೇದ್ದರಿಂದ ಹಣವರ್ಗಾವಣೆ ಮಾಡಿರುತ್ತಾರೆ. ತದನಂತರ ಸದ್ರಿ ವ್ಯಕ್ತಿಯು  ಮತ್ತೆ ಮತ್ತೆ ಹಣ ಹಾಕುವಂತೆ ತಿಳಿಸಿದಾಗ ಪಿರ್ಯಾದಿದಾರರಿಗೆ  ಇದು ವಂಚನೆಯ ಜಾಲವೆಂದು ತಿಳಿದು ಬಂದಿರುತ್ತದೆ.      ಈ ರೀತಿ ಪಿರ್ಯಾದಿದಾರರಿಂದ ರೂ 70,000/- ವರ್ಗಾಯಿಸಿಕೊಂಡು ಮೋಸ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 12:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080