ಅಭಿಪ್ರಾಯ / ಸಲಹೆಗಳು

Crime report in Barke PS

ಪಿರ್ಯಾದಿದಾರರಾದ ಶ್ರೀಮತಿ ಶರ್ಮಿಳ ಎಂಬುವರ ಮಗಳು ಶ್ರೀಮತಿ ನಮಿತಾ ಬಂಗೇರಾ ಪ್ರಾಯ 29 ವರ್ಷ ಎಂಬುವರಿಗೆ ಸುಮಾರು 6 ವರ್ಷಗಳ ಹಿಂದೆ ಹೆಜಮಾಡಿಯ ಗೌತಮ್ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವಳ ಗಂಡ ಸುಮಾರು 4 ½  ವರ್ಷಗಳಿಂದ ವಿದೇಶದಲ್ಲಿರುತ್ತಾರೆ. ಪಿರ್ಯಾದಿದಾರರ ಮಗಳು ಮಂಗಳಾದೇವಿ ಟೂರಿಸ್ಟ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ: 19-06-2023 ರಂದು ರಜೆ ಮಾಡಿ ಬೆಳಿಗ್ಗೆ 10-15 ಗಂಟೆಗೆ ಸಂಬಳ ತರಲು ಮನೆಯಿಂದ ಕಚೇರಿ ಹೋಗುವುದಾಗಿ ತಿಳಿಸಿ ವಾಪಾಸು ಮನೆಗೆ ಬಾರದೆ ಇದ್ದುದ್ದರಿಂದ ಪಿರ್ಯಾದಿದಾರರು ನಮೀತಾ ಕೆಲಸ ಮಾಡಿಕೊಂಡಿದ್ದ ಕಚೇರಿಗೆ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿಗಳು ನಮಿತಾ ಬಂದಿರುವುದಿಲ್ಲ ಎಂದು ತಿಳಿಸಿದಾಗ ಅವಳ ಮೊಬೈಲ್ ನಂಬ್ರ  ನೇಯದಕ್ಕೆ ಕರೆಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ಈವೆರೆಗೆ ಪಿರ್ಯಾದಿದಾರರ ಮಗಳು ಮನೆಗೆ ಬಾರದೇ ಇದ್ದುದರಿಂದ ಪತ್ತೆ ಮಾಡಿಕೋಡಬೇಕಾಗಿ ಎಂಬಿತ್ಯಾದಿ ದೂರಿನ ಸಾರಾಂಶ.

ಕಾಣೆಯಾದ ಮಹಿಳೆಯ ಚಹರೆ:

 

  1. ಹೆಸರು: ನಮಿತ ಬಂಗೇರ
  2. ಪ್ರಾಯ: 29 ವರ್ಷ,
  3. ಎತ್ತರ 5 ಅಡಿ 4 ಇಂಚು
  4. ಮೈಬಣ್ಣ: ಬಿಳಿ ಮೈಬಣ್ಣ, ದಪ್ಪ ಶರೀರ. ದುಂಡು ಮುಖ.
  5. ಮಾತನಾಡುವ ಭಾಷೆ: ಕನ್ನಡ, ತುಳು, ಇಂಗ್ಲಿಷ್, ಹಿಂದಿ ಭಾಷೆ
  6. ಧರಿಸಿದ ಬಟ್ಟೆ: ಗುಲಾಬಿ ಬಣ್ಣದ ಕುರ್ತ ಧರಿಸಿರುತ್ತಾರೆ.

 

Mangalore East PS

ಪಿರ್ಯಾದಿ Ranjeeth ದಾರರು ದಿನಾಂಕ 15-10-2022 ರಂದು 22.45 ಗಂಟೆಗೆ  ಬೆಂಗಳೂರಿನ ಗೊರಗುಂಟೆ ಪಾಳ್ಯದಿಂದ ಮಂಗಳೂರಿಗೆ  ಬರುವ ಕೆಎ 51 ಬಿ 1231 ನೇ ದುರ್ಗಾಂಬಾ ಬಸ್ ನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಸಮಯ ತಾನು ಕುಳಿತ್ತಿದ್ದ ಬಸ್ಸಿನ ಸೀಟಿನ ಮೇಲ್ ಬದಿಯಲ್ಲಿ  ಕ್ಯಾರಿರ್ಯ ನಲ್ಲಿ  ಲೆನೋವಾ ಲ್ಯಾಪ್ ಟಾಪ್ ಮತ್ತು ಪಾಸ್ ಪೋರ್ಟ್ ಇದ್ದ ಬ್ಯಾಗ್ ನ್ನು ಇರಿಸಿದ್ದು, ದಿನಾಂಕ 16/10/2022 ರಂದು ಬೆಳಿಗ್ಗೆ 8.30 ಗಂಟೆಗೆ ಮಂಗಳೂರು ಪಿ ವಿ ಎಸ್ ಸರ್ಕಲ್ ಬಳಿ ನೋಡಿದಾಗ ಪಿರ್ಯಾಧಿದಾರರು ಬ್ಯಾಗ್ ನಲ್ಲಿ ಇರಿಸಿದ ಲ್ಯಾಪ್ ಟಾಪ್ ಮತ್ತು ಪಾಸ್ ಪೋರ್ಟ್ ಬ್ಯಾಗ್ ಸಹಿತ ಇಲ್ಲದೇ ಇದ್ದು ಬಸ್ಸಿನಲ್ಲಿ ಎಲ್ಲಾ ಕಡೆ ಹುಡುಕಾಡಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮೊಬೈಲ್ ನಂಬ್ರಗಳಿಗೆ ಕರೆ ಮಾಡಿ ವಿಚಾರಿಸಿದರೂ ಪತ್ತೆಯಾಗದೇ ಇದ್ದು. ಬಿ ಸಿ ರೋಡಿನಲ್ಲಿ ಇಳಿದ ರಿಜ್ವಾನ್ ಮತ್ತು ಆಸೀಪ್  ಎಂಬವರ   ನಂಬ್ರಕ್ಕೆ ಕರೆ ಮಾಡಿದಲ್ಲಿ    ಸ್ವಿಚ್ ಆಫ್ ಆಗಿದ್ದು, ಸದ್ರಿ ರವರ ಮೇಲೆ ಗುಮಾನಿ ಇರುವುದಾಗಿದೆ. ಕಳುವಾದ ಲ್ಯಾಪ್ ಟಾಪ್ ಅಂದಾಜು ಬೆಲೆ ರೂ 40,000/- ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

Mangalore South PS                                     

 ಪಿರ್ಯಾದಿ Justin Thom ದಾರರು ಆರೋಪಿ ಜುನೈದ್ ಎಂಬಾತನ ಬಳಿ ನಗದು ಹಣ ರೂ 5,000/- ವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಜುನೈದ್ ಪಿರ್ಯಾದಿದಾರರಲ್ಲಿ ಹಣವನ್ನು ವಾಪಾಸ್ಸು ನೀಡುವಂತೆ ಕೇಳಿದಾಗ, ಪಿರ್ಯಾದಿದಾರರು ಸ್ವಲ್ಪ ದಿವಸಗಳ ಬಳಿಕ ವಾಪಾಸ್ಸು ಕೊಡುವುದಾಗಿ ತಿಳಿಸಿರುತ್ತಾರೆ.  ದಿನಾಂಕ 20-06-2023 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿದಾರರು  ತನ್ನ  ಸ್ನೇಹಿತ ಮೆಲ್ವಿನ್ ಹಾಗೂ ಇತರರೊಂದಿಗೆ ಮಂಗಳೂರು ನಗರದ ಮಾರ್ನಾಮಿಕಟ್ಟೆಯ  ಗೂಡಂಗಡಿಯೊಂದರ ಬಳಿ ಟೀ ಕುಡಿಯುತ್ತಿದ್ದ ಸಮಯ, ಕಾರಿನಲ್ಲಿ ಬಂದ ಆರೋಪಿಗಳಾದ  ಜುನೈದ್ ಹಾಗೂ ಫಯಾಜ್ ರವರುಗಳು ಪಿರ್ಯಾದಿದಾರರ ಬಳಿ ಬಂದು “ಒಂದು ಪರ್ಸನಲ್ ವಿಷಯ ಮಾತನಾಡಲು ಇದೆ ನಮ್ಮ ಜೊತೆ ಬರುತ್ತೀಯಾ? ಎಂದು ಮಲೆಯಾಳಿ ಭಾಷೆಯಲ್ಲಿ  ಕೇಳಿದಾಗ, ಪಿರ್ಯಾದಿದಾರರು ಒಪ್ಪಿಕೊಂಡು ಕಾರಿನಲ್ಲಿ ಆರೋಪಿಗಳ ಜೊತೆ ಹೋಗಿರುತ್ತಾರೆ. ಪಿರ್ಯಾದಿದಾರರು ಹಾಗೂ ಆರೋಪಿಗಳು ಕಾರಿನಲ್ಲಿ ಮಂಗಳೂರು ನಗರದ ಕಾಪ್ರಿಗುಡ್ಡೆ ಕೆ.ಕೆ. ಅಪಾರ್ಟ್ ಮೆಂಟ್ ಬಳಿ ಹೋಗಿ ಕಾರಿನಿಂದ  ಇಳಿದು ಮಾತನಾಡುತ್ತಿದ್ದಾಗ, ಸಮಯ ಸುಮಾರು ಬೆಳಿಗ್ಗೆ 6-30 ಗಂಟೆಗೆ  ಆರೋಪಿ ಜುನೈದ್  ಪಿರ್ಯಾದಿದಾರರಲ್ಲಿ “ನನ್ನ ಹಣವನ್ನು ಯಾವಾಗ ನೀಡುತ್ತೀಯಾ? ಎಂದು  ಕೇಳಿದಾಗ, ಪಿರ್ಯಾದಿದಾರರು  ಜುನೈದ್ ನಲ್ಲಿ “ಇನ್ನು ಸ್ವಲ್ಪ ದಿನ ಸಮಯ ಕೊಡು, ನಿನ್ನ ಹಣವನ್ನು  ಕೊಡದೆ ನಾನು ಎಲ್ಲು ಹೋಗುವುದಿಲ್ಲ”  ಎಂದು ಹೇಳಿದ್ದು, ಜುನೈದ್  ಏಕಾ ಏಕಿ ಕೋಪಗೊಂಡು, “ ನಾಯಿಂಡ ಮೋನೆ,  ಎಂಡ್ ಪೈಸ ಕೊರ್ಕನಿ ಎತ್ರ ದಿವಸ ವೇಣು” (ನಾಯಿದ ಮಗನೆ, ನನ್ನ ಹಣವನ್ನು ಕೊಡಲು ಇನ್ನು ಎಷ್ಟು ದಿವಸ ಬೇಕು) ಎಂದು ಕೆಟ್ಟ ಶಬ್ದದಿಂದ ಬೈದು, ಬಿಲ್ಡಿಂಗ್ ಬಳಿ ಬಿದ್ದಿದ್ದ ಮರದ ರೀಪ್ ತೆಗೆದುಕೊಂಡು, ಪಿರ್ಯಾದಿದಾರರ ಎಡಕೈ ಮೊಣಗಂಟಿನ ಬಳಿ ಹಲ್ಲೆ ನಡೆಸಿದಾಗ, ಆರೋಪಿ ಫಯಾಜ್ ಕೈಯಿಂದ ಪಿರ್ಯಾದಿದಾರರ ಬೆನ್ನಿಗೆ ಹಾಗೂ ಕೆನ್ನೆಗೆ ಹಲ್ಲೆ ನಡೆಸಿರುತ್ತಾರೆ. ಇದರಿಂದ ಭಯಗೊಂಡ ಪಿರ್ಯಾದಿದಾರರು ಕೆ.ಕೆ ಅಪಾರ್ಟ್ ಮೆಂಟ್ ನ 2 ನೇ ಮಹಡಿಗೆ ಹೋಗಿ, ಆರೋಪಿಗಳು ಸ್ಥಳದಲ್ಲಿ ಇರುವ ಬಗ್ಗೆ ಕೆಳಗಡೆ ಇಣುಕಿ ನೋಡಲು ಹೋದಾಗ ಪಿರ್ಯಾದಿದಾರರು ಆಯ ತಪ್ಪಿ ಕೆಳಗಡೆ ನೆಲಕ್ಕೆ ಬಿದ್ದು ಗಾಯಗೊಂಡಿರುತ್ತಾರೆ. ಈ ಬಗ್ಗೆ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿರುತ್ತದೆ.

 

CEN Crime PS

ದಿನಾಂಕ: 19/06/2023 ರಂದು ಸುಮಾರು 14.00 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ಸಂಖ್ಯೆ:  ನೇಯದಕ್ಕೆ 08985115341 ನೇ ನಂಬ್ರದಿಂದ ಒಂದು ಸಂದೇಶ ಸ್ವೀಕೃತವಾಗಿದ್ದು ಸದ್ರಿ ಸಂದೇಶದಲ್ಲಿ ಎಸ್.ಬಿ.ಐ ಯೋನೋ ಖಾತೆಗೆ ಪಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆಯು ಮಾಡದೇ ಇದ್ದಲ್ಲಿ ಬ್ಯಾಂಕ್ ಖಾತೆ ಸ್ಥಗಿತವಾಗುವುದಾಗಿಯೂ ಕೂಡಲೇ ಅಪ್ ಡೇಟ್ ಮಾಡಲು ಸಂದೇಶದಲ್ಲಿ ಕಳುಹಿಸಿರುವ ಲಿಂಕ್ ನ್ನು ಒತ್ತಿ ಎಂದು ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿಧಾರರು ಸದ್ರಿ ಸಂದೇಶದಲ್ಲಿ ಸ್ವಿಕೃತವಾದ ಲಿಂಕ್ ನ್ನು ತೆರೆದು ತನ್ನ ಪಾನ್ ಕಾರ್ಡ್ ನಂಬ್ರವನ್ನು ನಮೂದಿಸಿ ತನ್ನ ಮೊಬೈಲ್ ಗೆ ಸ್ವೀಕೃತವಾದ ಎರಡು  OTP ಗಳನ್ನು ನಮೂದಿಸಿದ್ದು  ಕೂಡಲೇ ಪಿರ್ಯಾದಿದಾರರ ಎಸ್.ಬಿ.ಐ ಖಾತೆ ಸಂಖ್ಯೆ: ನೇಯದರಿಂದ ಹಂತ ಹಂತವಾಗಿ ಒಟ್ಟು ರೂ 77,999/- ಬೇರೆ ಖಾತೆಗೆ ವರ್ಗಾವಣೆಯಾಗಿರುತ್ತದೆ. ಆದುದರಿಂದ  ಮೋಸ ಮಾಡುವ ಉದ್ದೇಶದಿಂದ  ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಅಪ್ಡೇಟ್ ಆಗಿಲ್ಲವೆಂದು ಮೊಬೈಳ್ ಸಂದೇಶದ ಮೂಲಕ ಲಿಂಕ್ ಕಳುಹಿಸಿ  ಬ್ಯಾಂಕ್ ಖಾತೆ ಮಾಹಿತಿಯನ್ನು ಪಡೆದುಕೊಂಡು  ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವ ಅಪರಿಚಿತ ವ್ಯಕ್ತಿಯ ಮೇಲೆ ಸೂಕ್ತ ಕಾನೂನುಕಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

 

2) ದಿನಾಂಕ: 19/06/2023 ರಂದು 11.51 ಗಂಟೆಗೆ ಪಿರ್ಯಾದಿ ಮೊಬೈಲ್ ನೇಯದಕ್ಕೆ 9038641830 ನೇ ನಂಬ್ರದಿಂದ ಅಪರಿಚಿತ ವ್ಯಕ್ತಿಯು ಕರೆ ಮುಂಬೈಯಲ್ಲಿರುವ ಮನೆಯ ವಿದ್ಯುತ್ ಬಿಲ್ ಬಾಕಿ ಇದ್ದು ಪಾವತಿ ಮಾಡುವಂತೆ ಕರೆ ಮಾಡಿ ತಿಳಿಸಿರುತ್ತಾರೆ, ನಂತರ ವಿದ್ಯುತ್ ಬಿಲ್ ಗೆ ಸಂಬಂಧಿಸಿದಂತೆ 8372963813, 6290375182 ನಂಬ್ರಗಳಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ವಿದ್ಯುತ್ ಬಿಲ್ ಆನ್ ಲೈನ್ ಪಾವತಿಯ ಬಗ್ಗೆ  ಗೂಗಲ್ ಪ್ಲೇಸ್ಟೋರ್ ನಿಂದ ಮೀಟಿಂಗ್ ಆಪ್ ಇನ್ಸ್ಟಾಲ್ ಮಾಡುವಂತೆ  ತಿಳಿಸಿದ್ದು ಅದರಂತೆ ಸದ್ರಿ ಆಪ್ ನ್ನು ಇನ್ಸ್ಟಾಲ್ ಮಾಡಿ ಅವರು ಕೋರಿದ ಮಾಹಿತಿಯನ್ನು ಅದರಲ್ಲಿ ನಮೂದಿಸಿದಂತೆ HDFC ಮುಂಬೈ ವಸಾಯಿ ಬ್ರಾಂಚ್ ನಲ್ಲಿರುವ ಖಾತೆ ನೇಯದರಿಂದ 50,000/- ರಂತೆ ಹಂತ ಹಂತವಾಗಿ ಒಟ್ಟು ರೂ 2,00,000/- ಗಳು ಬೇರೆ ಖಾತೆ ವರ್ಗಾವಣೆಯಾಗಿರುತ್ತದೆ. ವಿದ್ಯುತ್ ಬಿಲ್ ಬಾಕಿ ಇರುವುದಾಗಿ ನಂಬಿಸಿ ಪ್ಲೇಸ್ಟೋರ್ ನಿಂದ ಆಪ್ ಇನ್ಸ್ಟಾಲ್ ಮಾಡಿಸಿ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

 

 

 

Mangalore East PS

ಪಿರ್ಯಾದಿ Mohammed Althaf N M ದಾರರ ತಾಯಿಯವರ ಹೆಸರಿನಲ್ಲಿರುವ ಮೋಟಾರ್ ಸೈಕಲ್ KL-46-U-9448 ACCESES 125 ನೇಯದನ್ನು ಪಿರ್ಯಾದಿದಾರರ ವಾಸವಾಗಿರುವ ಬೆಂದೋರವೆಲ್ ನಲ್ಲಿರುವ ರೆಸಿಡೆನ್ಸಿ ಗೇಟ್ ಬಳಿ ಇರುವ ಕೈರಾಳಿ ಹೋಟೆಲ್  ಬಳಿಯಲ್ಲಿ ಪ್ರತಿದಿನ ಪಾರ್ಕಿಂಗ್ ಮಾಡುತ್ತಿದ್ದು ದಿನಾಂಕ 16-06-2023 ರಂದು ಮಧ್ಯಹ್ನ 02-00 ಗಂಟೆಗೆ ಅದೇ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ಪಿರ್ಯಾದಿದಾರರು ವಾಸವಿರುವ ಕೈರಾಳಿ ಹೋಟೆಲಿನ ಎದುರಲ್ಲಿರುವ ರೆಸಿಡೆನ್ಸಿ ಗೇಟ್ ಲಾಡ್ಜ್ ಗೆ ತೆರಳಿದ್ದು ಮರಳಿ ರಾತ್ರಿ ಸಮಯ ಸುಮಾರು 20:30 ಗಂಟೆಗೆ ಊಟ ಮಾಡಲು ವಾಪಸ್ಸು ಕೈರಾಳಿ ಹೋಟೆಲಿನ ಬಳಿ ಬಂದು ನೋಡಿದಾಗ ಸದ್ರಿ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲ್ ಸ್ಥಳದಲ್ಲೆ ಇಲ್ಲದೇ ಇದ್ದು ಈ ಬೈಕ ನ್ನು ದಿ.16-06-2023 ರಂದು ಮಧ್ಯಹ್ನ 02-00 ಗಂಟೆಯಿಂದ ರಾತ್ರಿ 20:30 ಗಂಟೆಯ- ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ: 45000/- ಆಗಬಹುದು. ಇದರ ಚಾಸಿಸ್ ನಂ: MB98DP11AMK8H02396, ಇಂಜಿನ್ ನಂಬರ್:  AF21254585,  ಬಿಳಿ ಬಣ್ಣ, ಮಾಡೆಲ್: 2020, ಪಿರ್ಯಾದಿದಾರರು ಕಳವಾದ ತನ್ನ ಸ್ಕೂಟರ್ ನ್ನು ನಗರ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ತಡವಾಗಿ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080