ಅಭಿಪ್ರಾಯ / ಸಲಹೆಗಳು

 

 Crime Report in Mangalore West Traffic PS                               

ದಿನಾಂಕ 14-07-2023 ರಂದು ಸುಮಾರು ಸಂಜೆ 4.15 ಗಂಟೆಗೆ  ಮಂಗಳೂರು ನಗರದ ಬಳ್ಳಾಲ್ ಭಾಗ್ ವೃತ್ತದಲ್ಲಿ ಪಿರ್ಯಾದಿ SMT. SHOBHA ದಾರರು ತನ್ನ ಗಂಡನ ಬಾಬ್ತು KA-19-EG-0109ನೇ ನಂಬ್ರದ ಸ್ಕೂಟರ್ ನಲ್ಲಿ ಹಿಂಬದಿಯಲ್ಲಿ ಮಗಳನ್ನು ಕುಳ್ಳಿರಿಸಿಕೊಂಡು ಮನೆಯಿಂದ ಮಣ್ಣಗುಡ್ಡೆ ಬಳ್ಳಾಲ್ ಭಾಗ್ ವೃತ್ತ ಮಾರ್ಗವಾಗಿ ಶ್ರೀದೇವಿ ಕಾಲೇಜ್ ಗೆ ಹೋಗಲು ಬಳ್ಳಾಲ್ ಭಾಗ್ ಜಂಕ್ಷನ್ ನಿಂದ ಪಿ.ವಿ.ಎಸ್ ಕಡೆಗೆ ಹೋಗುವ ಪಥಕ್ಕೆ ಹೋಗಲು  ಸ್ಕೂಟರ್ ನ್ನು ನಿಲ್ಲಿಸಿ ಲಾಲ್ ಭಾಗ್ ಕಡೆಯಿಂದ ಬರುತ್ತಿರುವ ವಾಹನವನ್ನು ಗಮನಿಸುತ್ತಿದ್ದ ಸಂದರ್ಭ ಪಿ.ವಿ.ಎಸ್ ಕಡೆಯಿಂದ KA-03-AJ-6477ನೇ ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ ನ ಬಲಬದಿಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಮಗಳು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಬಲ ಕಾಲಿನ ಮೊಣಗಂಟಿನ ಕೆಳಗಿನ ಎಲುಬುಗೆ ಗುದ್ದಿದ ಗಾಯವಲ್ಲದೇ ಮಗಳ ತಲೆಗೆ ಗುದ್ದಿದ ನೋವುವಾಗಿರುತ್ತದೆ. ಕೂಡಲೇ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಅದೇ ಕಾರಿನಲ್ಲಿ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಇವರ ಪೈಕಿ ಪಿರ್ಯಾದಿದಾರರ ಮಗಳಿಗೆ ವೈದ್ಯಾಧಿಕಾರಿಯವರು ಚಿಕಿತ್ಸೆ ನೀಡಿ ಬಿಡುಗಡೆ ಮಾಡಿದ್ದು ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

2) ಪಿರ್ಯಾದಿದಾರರಾದ ಡಾ| ನಿಖಿತಾ ನಾರಾಯಣ್ ಸಹಾ ರವರು ದಿನಾಂಕ 20-07-2023 ರಂದು ತಾನು ವಾಸಮಾಡಿಕೊಂಡಿರುವ ಸಿಂಪನಿ ಅಪಾರ್ಟ್ ಮೆಂಟ್ ನಿಂದ ಹೊರಗಡೆ ಬಂದು ಗೇಟ್ ಎದುರುಗಡೆಯಿಂದ ರಸ್ತೆಯನ್ನು ದಾಟುತ್ತಿದ್ದಂತೆ ಸಮಯ ಸುಮಾರು ಬೆಳಿಗ್ಗೆ 9.45 ಗಂಟೆಗೆ ಅತ್ತಾವರ ಕಡೆಯಿಂದ ಸ್ಟರಕ್ ರಸ್ತೆ ಕಡೆಗೆ KA-19-ML-9008 ನೊಂದಣಿ ನಂಬ್ರದ ಕಾರನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಡಾ| ನಿಖಿತಾ ನಾರಾಯಣ್ ಸಹಾ ರವರಿಗೆ ಢಿಕ್ಕಿಹೊಡೆದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದಿದ್ದು, ತಲೆಯ ಭಾಗಕ್ಕೆ ಮತ್ತು ಬಲಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಸದ್ರಿಯವರನ್ನು ಗೆಳೆಯ ಶಿಶಿರ್ ದಾಸ್ ಎಂಬವರು ಚಿಕಿತ್ಸೆಯ ಬಗ್ಗೆ ಹತ್ತಿರದ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿದೆ. ಅಪಘಾತಪಡಿಸಿದ ಕಾರು ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯದೆ ಜೊತೆಗೆ ಅಪಘಾತದ ಕುರಿತಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಅಪಘಾತದ ಸ್ಥಳದಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬಿತ್ಯಾದಿ.

 

Mangalore East Traffic PS       

ಪಿರ್ಯಾದಿದಾರರಾದ ಜಾಯ್ ಚಾಕೊ ರವರು ದಿನಾಂಕ 17-07-2023 ರಂದು ತನ್ನ ಬಾಬ್ತು KA-19-MM-5382 ನೊಂದಣಿ ನಂಬ್ರದ ಕಾರನ್ನು ಫಳ್ನೀರ್ ರೋಡ್ ಮಾರ್ಗವಾಗಿ ಅತ್ತಾವರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಂಜೆ ಸಮಯ ಸುಮಾರು 4.15 ಗಂಟೆಗೆ ಅತ್ತಾವರ ಕಾಸಾಗ್ರ್ಯಾಂಡ್ ಅಪಾರ್ಟ್ ಮೆಂಟ್ ಎದುರು ತಲುಪುತ್ತಿದ್ದಂತೆ ಅಪಾರ್ಟ್ಮೆಂಟ್ ನ EXIT ಗೇಟಿನಿಂದ ಮುಖ್ಯ ರಸ್ತೆ ಕಡೆಗೆ  NEW KWID CAR-KA-28-TCR-66  ( ENGINE NO MEEBBA04N6816108) ನೇಯದನ್ನು ಅದರ ಚಾಲಕಿ ನಿರ್ಲಕ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾಬ್ತು ಕಾರಿನ ಎಡಭಾಗಕ್ಕೆ ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ಪರಿಣಾಮ ಪಿರ್ಯಾದಿದಾರರ ಕಾರಿನ ಎಡಹಿಂಭಾಗದ ಫೆಂಡರ್, ಹಿಂಭಾಗದ ಬಂಪರ್, ಎಡ ಹಿಂಭಾಗದ ಡೋರ್ ಗಳು ಜಖಂಗೊಂಡಿದ್ದು, ಈ ಬಗ್ಗೆ ಅಪಘಾತಪಡಿಸಿದ ಕಾರು ಚಾಲಕಿಯು ರಿಪೇರಿಗೆ ತಗಲುವ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು, ನಂತರ ಪಿರ್ಯಾದಿದಾರರ ದೂರವಾಣಿ ಕರೆಗೆ ಸ್ಪಂದಿಸದೆ ಇದ್ದ ಕಾರಣ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

 

Traffic North Police Station          

ಪಿರ್ಯಾದಿ Ganesh Acharya ದಾರರ ಮಗ ಮೇಘರಾಜ (21) ಎಂಬವರು ದಿನಾಂಕ 19.07.2023 ರಂದು ಬೆಳಿಗ್ಗೆ ಪಣಂಬೂರು ಕುದುರೆ ಮುಖಕ್ಕೆ ಕೆಲಸಕ್ಕೆಂದು ಹೋದವರು ಕೆಲಸ ಮುಗಿಸಿ ರಾತ್ರಿ ವೇಳೆಗೆ ಮೋಟಾರ್ ಸೈಕಲ್ ನಂಬ್ರ KA-19EU-6124 ರಲ್ಲಿ ತನ್ನ ಸ್ನೇಹಿತ ಮನೀಶ್ ಕುಮಾರ್ (23) ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕುದುರೆಮುಖದಿಂದ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಮನೆಯ ಕಡೆಗೆ ಬರುತ್ತಿರುವಾಗ ರಾತ್ರಿ ಸಮಯ ಸುಮಾರು 9:30 ಗಂಟೆಗೆ ಟೋಟಲ್ ಗ್ಯಾಸ್ ನಿಂದ  SEZ ಫ್ಲೈ ಓವರ್ ನಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆಯೇ ಮೋಟಾರ್ ಸೈಕಲನ್ನು ಮೇಘರಾಜನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಸ್ಡಿಡ್ ಆಗಿ ಬಿದ್ದ ಪರಿಣಾಮ ಇಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರ ಮೇಘರಾಜರವರ ತಲೆಯ ಎಡಭಾಗಕ್ಕೆ ಗಂಭೀರ ಸ್ವರೂಪದ ಗಾಯ, ಎಡಕಾಲಿನ ಮಣಿಗಂಟಿಗೆ, ಎಡಭುಜಕ್ಕೆ ತರಚಿದ ರಕ್ತಗಾಯ, ಮತ್ತು ಸಹಸವಾರ ಮನೀಶ್ ಕುಮಾರ್ ಈತನ ಎಡಕಾಲಿನ ಮೊಣಗಂಟಿಗೆ ಮತ್ತು ಎಡಭುಜಕ್ಕೆ ತರಚಿದ ರಕ್ತ ಗಾಯವಾಗಿರುತ್ತದೆ, ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Kavoor PS     

ಫಿರ್ಯಾದಿ SHARANAPPA ದಾರರ  ತಂಗಿಯಾದ  ಯಮನವ್ವ (26 ವರ್ಷ) ಎಂಬವರು ಪ್ರತಿದಿನ ತನ್ನ ತಾಯಿಯೊಂದಿಗೆ ಕಾವೂರು ಜಂಕ್ಷನ್ ಗೆ ಬಂದು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.  ದಿನಾಂಕ 27/06/2023 ರಂದು ಬೆಳಿಗ್ಗೆ 8.00 ಗಂಟೆಗೆ ಫಿರ್ಯಾದಿದಾರರ  ತಂಗಿಯಾದ  ಯಮನವ್ವ ರವರು ಕೂಲಿ ಕೆಲಸಕ್ಕೆಂದು ಹೋಗಿದ್ದು, ಸಾಯಂಕಾಲ ದವರೆಗೂ ವಾಪಾಸ್ಸು ಬರದೇ ಇರುವಾಗ ತಾಯಿಯು ಯಮನವ್ವರವರಿಗೆ ಪೋನ್ ಕರೆ ಮಾಡಿ “ಎಲ್ಲಿದ್ದಿಯವ್ವಾ”? ಎಂದು ಕೇಳಿದಾಗ ಕಾವೂರು ಕಟ್ಟೆಯ ಬಳಿ ಸಂಬಳ ಪಡೆದುಕೊಂಡು ಬರುವುದಾಗಿ ತಿಳಿಸಿದ್ದು ಈ ವರೆಗೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ತಮ್ಮ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿ ಮಂಗಳೂರು ನಗರದ ಆಸುಪಾಸಿನಲ್ಲಿ ಹುಡುಕಾಡಿದ್ದು ಪತ್ತೆಯಾಗದೇ ಕಾಣೆಯಾಗಿರುತ್ತಾಳೆ  ಎಂಬಿತ್ಯಾದಿ.

ಕಾಣಿಯಾದವರ ಚಹರೆ:

ಹೆಸರು: ಯಮನವ್ವ (26 ವರ್ಷ) ಗಂಡ: ಮೌನೇಶ್

ಎತ್ತರ: 5.6  ಅಡಿ, ಸಪೂರ ಶರೀರ, ಎಣ್ಣೆ ಕಪ್ಪು ಮೈಬಣ್ಣ,

Bajpe PS

ಪಿರ್ಯಾದಿ PI Prakash ದಾರರಿಗೆ ನಡುಗೋಡು ಗ್ರಾಮದ ಕುತುಕೊಳಿ  ಎಂಬಲ್ಲಿ ನಂದಿನಿ ನದಿಯಿಂದ ಯಾರೋ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ದಿನಾಂಕ 20.07.2023 ರಂದು ಸಮಯ ಸುಮಾರು 08.30 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ನಂದಿನಿ ನದಿ ದಂಡೆಯಲ್ಲಿ ಬೋಟ್ ಗೆ ಮೋಟಾರು ಇಂಜಿನ್  ಫಿಕ್ಸ್ ಮಾಡಿ ಪೈಪ್ ಗಳನ್ನು ಜೋಡಿಸಿ ನದಿಯಿಂದ ಮರಳನ್ನು ಜಾಲರಿ ಮುಖೇನಾ ಫಿಲ್ಟರ್ ಮಾಡಿ ನದಿ ದಡದಲ್ಲಿ ಸಂಗ್ರಹಿಸುತ್ತಿದ್ದು ಕಂಡುಬಂದಿದ್ದು  ಈ ಕೆಲಸದಲ್ಲಿ ತೊಡಗಿದ್ದ ಇಬ್ಬರು ಪೊಲೀಸ್ ಜೀಪ್ ಬಂದ ಕೂಡಲೇ ಓಡಿ ಹೋಗಿದ್ದು, ನಂತರ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು                                                          ಕಬ್ಬಿಣದ ಬೋಟ್ -1, ಡಿಸೇಲ್ ಮೋಟರ್ -1, ಪೂಟ್ ಬಾಲ್ ಅಳವಡಿಸಿರುವ PVC ಪೈಪು-1,  ಕಬ್ಬಿಣದ ಪೈಪುಗಳು-3, ಕಬ್ಬಿಣ ಪೈಪುಗಳಿಗೆ ಜೋಡಿಸಿರುವ ಕಬ್ಬಿಣದ ಡ್ರಮ್ ಗಳು - 6, ಮರಳನ್ನು ಫಿಲ್ಟರ್ ಮಾಡಲು ಬಳಸುವ ಕಬ್ಬಿಣ ಜಾಲರಿ-1,  ಪೈಪ್ ಗಳಿಗೆ ಕಟ್ಟಿರುವ ನೈಲಾನ್ ಹಗ್ಗಗಳು -2 ,ಕಬ್ಬಿಣದ ಹಾರೆಗಳು -3, ಕಬ್ಬಿಣದ ಬಕೇಟ್ ಗಳು-3, ನದಿ ದಡದಲ್ಲಿ ಸಂಗ್ರಹಿಸಿರುವ ಸುಮಾರು 5 ಯುನಿಟ್ ಗಳಷ್ಟು  ಮರಳನ್ನು ಮಹಜರು ಮೂಲಕ ವಶಕ್ಕೆ ಪಡೆದು, ಠಾಣೆಗೆ ಬಂದು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಕಳವು ಮಾಡುತ್ತಿದ್ದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕೈಗೊಳ್ಳುವಂತೆ ದೂರು ನೀಡಿರುವುದಾಗಿದೆ ಎಂಬಿತ್ಯಾದಿ

Ullal PS

ಪಿರ್ಯಾದಿ vishnuprasad ದಾರರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ 04-07-2023 ರಂದು ದೇರಳಕಟ್ಟೆ ಯೆನೋಪೋಯ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ನನ್ನ ಅಕ್ಕನ ಆರೈಕೆ ನೋಡಿಕೊಳ್ಳಲು KL-14-U-9539 ನಂಬ್ರದ ACTIVA 4G ಸ್ಕೂಟರ್ ನಲ್ಲಿ ಯೆನೋಪೋಯ ಆಸ್ಪತ್ರೆಯ ಪಾರ್ಕಿಂಗ್ ಸ್ಧಳದಲ್ಲಿ ಸಂಜೆ 07-00 ಗಂಟೆಗೆ ನಿಲ್ಲಿಸಿ ಆಸ್ಪತ್ರೆಗೆ ಹೋಗಿ ಅಕ್ಕನ ಆರೈಕೆ ನೋಡಿಕೊಳ್ಳುತ್ತಿದ್ದನು ನಂತರ ದಿನಾಂಕ 05-07-2023 ರಂದು  ಪಿರ್ಯಾದಿದಾರರ ಅಕ್ಕ ಡಿಸ್ ಚಾರ್ಜು ಆದ ಬಳಿಕ ಸಮಜೆ 4.00 ಗಂಟೆಗೆ ಪಾರ್ಕಿಂಗ್ ಸ್ಧಳಕ್ಕೆ ಹೋಗಿ ನೋಡಿದಾಗ ಪಿರ್ಯಾದಿದಾರರ ಸ್ಕೂಟರ್ ಕಾಣೆಯಾಗಿರುತ್ತದೆ ನಂತರ ಪಿರ್ಯಾದಿದಾರರು ಸ್ಕೂಟರ್ ನ್ನು ಪಾರ್ಕಿಂಗ್ ಸ್ಧಳ ಮತ್ತು ಗ್ರೌಂಡ್ ಪ್ರದೇಶ ಮುಂತಾದ ಕಡೆ ಹುಡುಕಾಡಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಸದ್ರಿ ಸ್ಕೂಟರನ್ನು  ದಿನಾಂಕ 04-07-203 ರಂದು ಸಂಜೆ 07.00 ಗಂಟೆಯಿಂದ 05-07-2023 ರಸಂಜೆ 04.00 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಹೋಗಿರುತ್ತಾರೆ ಕಳವು ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿ, ಕಳವಾದ KA-14-U-9539 ನೇ ನಂಬ್ರದ ಸ್ಕೂಟರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080