ಅಭಿಪ್ರಾಯ / ಸಲಹೆಗಳು

Crime Reported in Kavoor PS

ಪಿರ್ಯಾದಿದಾರರ ಗಾಂಧಿನಗರದಲ್ಲಿರುವ ಬಿ.ಕೆ.ಜುವೇಲ್ಲರ್ಸ್ ಎಂಬ ಅಂಗಡಿಗೆ ದಿನಾಂಕ 20/08/2022 ರಂದು ಬೆಳಿಗ್ಗೆ 11.10 ರ ವೇಳೆಗೆ ಯಾರೋ ಅಪರಿಚಿತ ವ್ಯಕ್ತಿ  ಬಂದು ನವರತ್ನ ಕೇಳುವ ನೆಪದಲ್ಲಿ ಪಿರ್ಯಾದಿದಾರರು ಆಭರಣಗಳನ್ನು ತೋರಿಸುವ ಸಮಯ ಅಂಗಡಿಯಲ್ಲಿದ್ದ ಸಮಯ ಸುಮಾರು 38 ಗ್ರಾಂ.( ಅಂದಾಜು 5 ಪವನ್ ) ಚಿನ್ನವನ್ನು ಮೋಸದಿಂದ ತೆಗೆದುಕೊಂಡು ಹೋಗಿ ಪರಾರಿಯಾಗಿರುತ್ತಾನೆ, ಆದ್ದರಿಂದ ಸದ್ರಿ ಅಪರಿಚಿತ ವ್ಯಕ್ತಿಯನ್ನು ಪತ್ತೆಮಾಡಿ ಚಿನ್ನವನ್ನು ಪತ್ತೆಮಾಡಿಕೊಡುವರೇ, ಎಂಬಿತ್ಯಾದಿ

Crime Reported in  Mangalore Rural PS                           

 ಪಿರ್ಯಾದಿ Yusuf Mirshad ರವರು ಮಂಗಳೂರು ತಾಲೂಕು ಅರ್ಕುಳ ಗ್ರಾಮದ ವಳಚ್ಚಿಲ್ ಬಾಕಿಮಾರ್ ಮನೆ ಎಂಬಲ್ಲಿಯ ನಿವಾಸಿಯಾಗಿದ್ದು, ಮಂಗಳೂರಿನ ಕಾಲೇಜಿನಲ್ಲಿ ಬಿ.ಕಾಂ ಪದವಿ ವಿದ್ಯಾಭ್ಯಾಸ ಮಾಡುತಿರುವುದಾಗಿದೆ, ದಿನಾಂಕ: 19-08-2022 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರ ತಮ್ಮ ರಮ್ಲಾನ್ ಮಿಫ್ರಾನನು ಆತನ ಗೆಳೆಯ ಸಮ್ರಾನ್ ಎಂಬವರ ಮೊಬೈಲ್ ಫೋನ್ ನಿಂದ ಕರೆ ಮಾಡಿ ವಳಚ್ಚಿಲ್ ಬದ್ರಿಯಾ ಮದರಸಾ ಬಳಿ ಆತನ ಪರಿಚಯದ ಇಸ್ಮಾಯಿಲ್ ರವರ ಮಗ ಮಿಸ್ತ ಮತ್ತು ಆತನ ಗೆಳೆಯ ಆಶಿಕ್ ಎಂಬವವರು ತನ್ನ ಮೊಬೈಲ್ ಫೋನನ್ನು ತೆಗೆದುಕೊಂಡು ವಾಪಾಸ್ ನೀಡದೇ ಸತಾಯಿಸುತ್ತಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ವಿಚಾರ ತಿಳಿದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರ ತಾಯಿಯ ತಮ್ಮ ರಮ್ಲಾನ್ ಆಸೀಪ್ ರವರು ಸದ್ರಿ ಸ್ಥಳಕ್ಕೆ ಹೋಗಿ ಇಸ್ಮಾಯಿಲ್ ರವರ ಮಗ ಮಿಸ್ತ ಮತ್ತು ಆತನ ಗೆಳೆಯ ಆಶಿಕ್ ರವರಲ್ಲಿ ಮೊಬೈಲ್ ಫೋನ್ ವಾಪಾಸ್ ನೀಡಲು ತಿಳಿಸಿದಾಗ ಮಿಸ್ತನು “ರಂಡೆ ಮಕ್ಕಳೇ” ಎಂಬಿತ್ಯಾದಿಯಾಗಿ ಅವಾಚ್ಯವಾಗಿ ಬೈದು “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಮಿಸ್ತನು ತನ್ನ ಬಳಿ ಬಚ್ಚಿಟ್ಟುಕೊಂಡಿದ್ದ ಚಾಕುವನ್ನು ತೆಗೆದು ಪಿರ್ಯಾದಿದಾರರ ಮಾವ ರಮ್ಲಾನ್ ಆಸೀಫ್ ರವರನ್ನು ಕೊಲೆ ಮಾಡುವ ಏಕೈಕ ಉದ್ಧೇಶದಿಂದ ಅವರ ಎದೆಗೆ, ಕೈಗೆ ಹಾಗೂ ಬಾಯಿಗೆ ಚಾಕುವಿನಿಂದ ಇರಿದು ತೀವ್ರ ಸ್ವರೂಪದ ಗಾಯಗೊಳಿಸಿದಾಗ ರಮ್ಲಾನ್ ಆಸೀಫ್ ರವರು ಜೋರಾಗಿ ಬೊಬ್ಬೆ ಹಾಕಿದಾಗ ಬೊಬ್ಬೆ ಕೇಳಿ ನೆರೆಕರೆಯವರು ಸ್ಥಳಕ್ಕೆ ಬರುವುದನ್ನು ನೋಡಿದ ಮಿಸ್ತನು ರಮ್ಲಾನ್ ಆಸೀಫ್ ರವರ ನ್ನುದ್ಧೇಶಿಸಿ “ನಿಮ್ಮನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಓಡಿ ಹೋಗಿದ್ದು, ಗಾಯಾಳು ರಮ್ಲಾನ್ ಆಸೀಫ್ ರವರನ್ನು ಚಿಕಿತ್ಸೆಯ ಬಗ್ಗೆ ತುಂಬೇ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗತೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದು ಎಂಬಿತ್ಯಾದಿ

Crime Reported in Moodabidre PS

ಪಿರ್ಯಾದಿದಾರರಾದ ಮೋಹನ್ (42) ಎಂಬುವರು ಮೂಡಬಿದ್ರೆಯ ಬೆಳುವಾಯಿ ಮಠದಕೆರೆ ಎಂಬಲ್ಲಿ ಕಾರು ರಿಪೇರಿ ಹಾಗೂ ಪೈಂಟಿಂಗ್ ನ  ಗ್ಯಾರೇಜ್ ನ್ನು ನಡೆಸಿಕೊಂಡಿದ್ದು ಅವರ ಗ್ಯಾರೇಜಿನಲ್ಲಿ ಅಶೋಕ್ ಆಚಾರ್ಯ ಎಂಬವರು ವೆಲ್ಡರ್ ಆಗಿ ಕೆಲಸ ಮಾಡಿಕೊಂಡಿದ್ದು, ರಿಪೇರಿಗಾಗಿ ತಂದಿದ್ದ ಬೆಳ್ಮಣ್ ಗ್ರಾಮದ ನಿವಾಸಿ ರಾಜೇಂದ್ರ ಪ್ರಸಾದ್ ತಂತ್ರಿ ಎಂಬವರ ಓಮ್ನಿ ಕಾರು ನಂಬ್ರ ಕೆಎ 20 ಬಿ 1420 ನೇದನ್ನು ಕಾರು ರಿಪೇರಿಯಾದ ನಂತರ ಟ್ರಯಲ್ ನೋಡುವರೇ ಅಶೋಕ್ ಆಚಾರ್ಯರವರು ಕಾರನ್ನು ನಿನ್ನೆ ದಿನ ದಿನಾಂಕ:19-08-2022 ರಂದು ಸಂಜೆ 5-00 ಗಂಟೆಗೆ ತೆಗೆದುಕೊಂಡು ಹೋಗಿ ವಾಪಾಸ್ ಬರುತ್ತಾ ಮಠದಕೆರೆ ಎಂಬಲ್ಲಿ ತಲುಪಿದಾಗ ಸಮಯ ಸುಮಾರು 5-05 ಗಂಟೆಗೆ ಕಾರ್ಕಳ ಕಡೆಯಿಂದ ಒಂದು ಟಿಪ್ಪರ್ ನ್ನು ಅದರ ಚಾಲಕನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ತನ್ನ ಮುಂದಿನಿಂದ ಹೋಗುತ್ತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡುತ್ತಾ ಮುಂದಕ್ಕೆ ಬಂದು ಅಶೋಕ್ ರವರ ಕಾರಿಗೆ ಡಿಕ್ಕಿ ಪಡಿಸಿ ದ ಪರಿಣಾಮ  ಅಶೋಕ್ ಆಚಾರ್ಯರವರ ಎದೆಗೆ, ಹೊಟ್ಟೆಗೆ,ಮುಖಕ್ಕೆ ಗಾಯ ನೋವುಗಳಾಗಿರುತ್ತದೆ. ಡಿಕ್ಕಿ ಪಡಿಸಿದ ಟಿಪ್ಪರಿನ ನಂಬ್ರ ಕೆಎ 53  5268  ಆಗಿದ್ದು, ಅದರ ಚಾಲಕ ಬಾಲಪ್ಪ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 20-08-2022 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080