ಅಭಿಪ್ರಾಯ / ಸಲಹೆಗಳು

Crime Report in  Traffic South Police Station                     

ಫಿರ್ಯಾದಿ PRATHAM S MOODBIDRI ದಾರರು ದಿನಾಂಕ: 20-09-2023 ರಂದು ತನ್ನ ಬಾಬ್ತು KA-19-EC-8799 ನೇ ಸ್ಕೂಟರನ್ನು ಸವಾರಿ ಮಾಡಿಕೊಂಡು ತನ್ನ ತಾಯಿ ಭಾರತಿಯವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಮಂಗಳೂರು ಕಡೆಗೆ ಹೊರಟು ಸಮಯ ಸುಮಾರು ಬೆಳಿಗ್ಗೆ 6-00 ಗಂಟೆಗೆ ಕುಲಶೇಖರ ಮಿಲ್ಕ್ ಡೈರಿ ಬಳಿ ತಲುಪಿದಾಗ, ಫಿರ್ಯಾದಿದಾರರ ಎದುರು ಕಡೆಯಿಂದ ಬಂದ ಸ್ಕೂಟರ್ ಸವಾರನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸ್ಕೂಟರನ್ನು ಚಲಾಯಿಸಿಕೊಂಡು ಬಂದು ಏಕಾಏಕಿ ಸ್ಕೂಟರನ್ನು ತಿರುಗಿಸಿ ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರು ಮತ್ತು ಅವರ ತಾಯಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಫಿರ್ಯಾದಿದಾರರ ತಾಯಿಯ ಬಲಕಾಲಿನ ಮೊಣಕಾಲು ಮತ್ತು ಬಲಕೈ ಮೇಲ್ಬಾಗಕ್ಕೆ ಗಾಯವಾಗಿದ್ದು, ಮೂಗು  ಮತ್ತು ಕಿವಿಯಲ್ಲಿ ರಕ್ತ ಸ್ರಾವವಾಗಿರುತ್ತದೆ. ಹಾಗೂ ಫಿರ್ಯಾದಿದಾರರಿಗೆ ಸಣ್ಣ  ಪ್ರಮಾಣದ ಗಾಯಗಳಾಗಿರುತ್ತದೆ. ಸದ್ರಿ ಸ್ಥಳದಲ್ಲಿದ್ದ ಸಾರ್ವಜನಿಕರು ಫಿರ್ಯಾದಿದಾರರು ಮತ್ತು ಅವರ ತಾಯಿಯನ್ನು SCS ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷೀಸಿ ಫಿರ್ಯಾದಿದಾರರ ತಾಯಿಯವರನ್ನು ICU ಗೆ ದಾಖಲು ಮಾಡಿರುತ್ತಾರೆ. ಡಿಕ್ಕಿ ಪಡಿಸಿದ ಸ್ಕೂಟರ್ ಸವಾರನ್ನು ಸ್ಕೂಟರನ್ನು ನಿಲ್ಲಿಸದೇ ಓಡಿ ಹೋಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Mangalore East PS                                          

ಪಿರ್ಯಾಧಿ SALIAN SUJITH ದಾರರು ಸುಮಾರು 1 ವರ್ಷದಿಂದ ಭಾರತ್ ಬೀಡಿ ಜಂಕ್ಷನ್ ಬಳಿ ಇರುವ ಪ್ರಕೃತಿ ಕಾಂಪ್ಲೆಕ್ಸ್ ನಲ್ಲಿ ಸ್ಕೈ ನೆಟ್ ಎಂಬ ಹೆಸರಿನ ಮೊಬೈಲ್, ಲಾಪ್ ಟ್ಯಾಪ್ ಸಿಸಿ ಟಿ ವಿ ಸೇಲ್ಸ್ ಮತ್ತು ಸರ್ವೀಸ್ ಅಂಗಡಿಯನ್ನು ಸ್ನೇಹಿತ ಶಬರೀಶ್ ನಾಯಕ್ ಎಂಬವರೊಂದಿಗೆ ಸೇರಿ ನಡೆಸುತ್ತಿದ್ದು  ದಿನಾಂಕ 18-09-2023 ರಂದು ಸಂಜೆ ಸುಮಾರು 18-30 ಗಂಟೆಗೆ ಎಂದಿನಂತೆ ಅಂಗಡಿಯನ್ನು ಬಾಗಿಲು ಹಾಕಿ ಮನೆಗೆ ಹೋಗಿದ್ದು.  ಬೆಳಿಗ್ಗೆ ಪ್ರಕೃತಿ ಕಾಂಪ್ಲೆಕ್ಸ್ ನ ವಾಚ್ ಮೇನ್ ರವರು ಬೆಳಿಗ್ಗೆ 07.30 ಗಂಟೆಗೆ ಪಿರ್ಯಾಧಿದಾರರಿಗೆ ಫೋನ್ ಮಾಡಿ ನಿನ್ನೆ ದಿನ ಬೀಗ ಹಾಕಲಿಲ್ಲವಾ ಎಂದು ಕೇಳಿದ್ದು  ಪಿರ್ಯಾದಿದಾರರು  ಅಂಗಡಿಗೆ ಬೀಗ ಹಾಕಿ ಬಂದಿದ್ದೇವೆ ಎಂದು ತಿಳಿಸಿದ್ದು ಏನಾಯಿತು ಎಂದು ಕೇಳಿದಾಗ ವಾಚ್ ಮೇನ್ ರವರು  ಪಿರ್ಯಾದಿದಾರ ಅಂಗಡಿಯ ಶಟರ್ ಬಾಗಿಲು ತೆರೆದಿದೆ ಎಂದು ಹೇಳಿದ್ದು ಪಿರ್ಯಾಧಿದಾರರು ಮತ್ತು ಪಿರ್ಯಾಧಿದಾರರ ಪಾರ್ಟನರ್ ಕೂಡಲೇ ಅಂಗಡಿಯ ಒಳಗೆ ಹೋಗಿ ನೋಡಲಾಗಿ ಸೇಲ್ಸ್ ಕೌಂಟರ್ ನಲ್ಲಿ ಇಟ್ಟಿದ್ದ ಇಯರ್ ಫೋನ್, ಇಯರ್ ಬಟ್ಸ್, ಒಂದು ಸ್ಮಾರ್ಟ್ ವಾಚ್, ಕಂಪ್ಯೂಟರ್ ಮೌಸ್, ಸಿಸಿ ಕ್ಯಾಮೇರಾ, ಹಾಗೂ ಕ್ಯಾಶ್ ಡ್ರಾಯರ್ ನಲ್ಲಿದ್ದ ನಗದು ರೂ 4,500/- ವನ್ನು ಅಂಗಡಿಯ ಶಟರ್ ಬಾಗಿಲಿನ ಬೀಗ ಮುರಿದು ಯಾರೋ ಕಳ್ಳರು ಮದ್ಯ ರಾತ್ರಿ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತು ಹಾಗೂ ನಗದು ಮೌಲ್ಯ ಒಟ್ಟು ಸುಮಾರು 15000/-ಆಗಬಹುದು. ಅಲ್ಲದೆ ಪಿರ್ಯಾಧಿದಾರರ ಅಂಗಡಿಯ ಪಕ್ಕದ ಫೊಟೋ ಫ್ರೇಮ್ ನ ಫ್ರೇಮ್ ಇಟ್ ಎಂಬ ಹೆಸರಿನ ಅಂಗಡಿಯ ಶಟರ್ ಬಾಗಿಲು ಬೀಗ ಮುರಿದು ಒಳಗಿನ ಗ್ಲಾಸ್ ಬಾಗಿಲನ್ನು ಒಡೆದು ಒಳಗೆ ಹೋಗಿ ಅವರ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿಟ್ಟಿದ್ದ ನಗದು ರೂ 3000/- ರೂ ಹಾಗೂ BLAZE-2  ಲಾವಾ ಮೊಬೈಲ್ ಒಂದನ್ನು ಕೂಡ ಕಳವು ಮಾಡಿಕೊಂಡು ಹೊಗಿದ್ದು ಕಳವಾದ ಸೊತ್ತು ಮತ್ತು ನಗದು ಮೌಲ್ಯ ಒಟ್ಟು ರೂ 6,000/- ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.

Mangalore East Traffic PS                        

 ಪಿರ್ಯಾದಿದಾರರಾದ ಮಹೇಶ್ ಎಸ್ ಶೆಟ್ಟಿರವರು ದಿನಾಂಕ 15-09-2023 ರಂದು ಬೆಳಿಗ್ಗೆ ತನ್ನ ಮನೆಯಿಂದ ಫೆಲಿಕ್ಸ್ ಎಂಬುವರ ಬಾಬ್ತು KA-19-AD-9616 ನೊಂದಣಿ ನಂಬ್ರದ TATA ACE ಟೆಂಪೋವನ್ನು ಕಲ್ಲಾಪು ಮಾರ್ಕೇಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 05.15 ಗಂಟೆಗೆ ನಂತೂರು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಬಿಕರ್ನಕಟ್ಟೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಗೆ KA-19-Z-1197 ನೊಂದಣಿ ನಂಬ್ರದ ಇನೋವಾ ಕಾರನ್ನು ಅದರ ಚಾಲಕ ನಿಸರ್ ಎಂಬಾತನು ನಿರ್ಲಕ್ಷ್ಯತನದಿಂದ ಹಾಗೂ ದುಡುಕುತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಟೆಂಪೋದ ಎಡಗಡೆಗೆ ಢಿಕ್ಕಿ ಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು, ಸಾರ್ವಜನಿಕರು ಉಪಚರಿಸಿ ಆಟೋರಿಕ್ಷಾವೊಂದರಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಎಡ ಕುತ್ತಿಗೆ, ಎಡಗಡೆ ತಲೆಯಲ್ಲಿ ಮೂಳೆ ಮುರಿತದ ಗಾಯ ಹಾಗೂ ಎಡಕಿವಿಗೆ ಗುದ್ದಿದ ನಮೂನೆಯ ಗಾಯವಾಗಿದ್ದು, ಒಳರೋಗಿಯಾಗಿ ದಾಖಲಿಸಿಕೊಂಡು  ಚಿಕಿತ್ಸೆ ನೀಡಿರುತ್ತಾರೆ.ಸದ್ರಿ ಅಪಘಾತದಿಂದ ಟೆಂಪೋದ ಎದುರು ಭಾಗ, ಹಿಂಬದಿ ಭಾಗ ಹಾಗೂ ಎಡಗಡೆ ಜಖಂಗೊಂಡಿರುತ್ತದೆ.  ಈ ಅಪಘಾತಕ್ಕೆ KA-19-Z-1197 ಕಾರು ಚಾಲಕ ನಿಸರ್ ಎಂಬುವರ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿತ್ತದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ  ಎಂಬಿತ್ಯಾದಿ.

Traffic South Police Station              

ಫಿರ್ಯಾದಿ Anish ದಾರರು ದಿನಾಂಕ 19-09-2023 ರಂದು ಪ್ರವೀಣ್ ಎಂಬುವವರ ಬಾಬ್ತು ಸ್ಕೂಟರ್ ನಂಬ್ರ KA-19-EZ-1314  ನೇದನ್ನು ಸವಾರಿ ಮಾಡಿಕೊಂಡು ಅನೀಶ್ ಎಂಬವವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಬಳಿಯ ಟಿ.ಸಿ ರೋಡ್ ನಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಗೆ ಹೊರಟು ಸೆಬಾಸ್ಟಿಯನ್ ಚರ್ಚ್ ಎದುರಿನ ಸಾರ್ವಜನಿಕ ರಸ್ತೆಯನ್ನು ತಲುಪುತ್ತಿದ್ದಂತೆ ಮದ್ಯಾಹ್ನ ಸಮಯ ಸುಮಾರು 3.30 ಗಂಟೆಗೆ  ಫಿರ್ಯಾದಿದಾರರ ಎದುರಿನಿಂದ ಅಂದರೆ ತೊಕ್ಕೊಟ್ಟು ಒಳಪೇಟೆ ಕಡೆಯಿಂದ ಉಳ್ಳಾಲ ಪುರಸಭೆ ಕಡೆಗೆ KA-19-AD-6394 ನೇ ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಮೊಹಮ್ಮದ್ ಇಮ್ರಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದಿದಾರರ ಬಲಕಾಲಿನ ಪಾದಕ್ಕೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ಪರಿಣಾಮ ಫಿರ್ಯಾದಿದಾರರ ಬಲಕಾಲಿನ ಪಾದದ ಮೂರನೇ ಬೆರಳಿಗೆ ಮೂಳೆಮುರಿತದ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು ಬಳಿಕ ಅಪಘಾತ ಪಡಿಸಿದ ಆಟೋರಿಕ್ಷಾ ಚಾಲಕ ಚಿಕಿತ್ಸೆಯ ಬಗ್ಗೆ ತೊಕ್ಕೊಟ್ಟುವಿನ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಕೊಂಡು ಹೋಗಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 20-09-2023 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080