ಅಭಿಪ್ರಾಯ / ಸಲಹೆಗಳು

Crime Report in  Mangalore Rural PS

ಪಿರ್ಯಾದಿ Ranjan M K ದಾರರಿಗೆ ದಿನಾಂಕ 19-10-2023 ರಂದು 22.45 ಗಂಟೆಗೆ ದೊರೆತ ಖಚಿತ ವರ್ತಮಾನದ ಮೇರೆಗೆ 23.15 ಗಂಟೆಗೆ ಉಳಾಯಿಬೆಟ್ಟು ಗ್ರಾಮದ ಇಡ್ಮ ಎಂಬಲ್ಲಿ ಹರಿಯುತ್ತಿರುವ ಪಲ್ಗುಣಿ ನದಿಯಿಂದ ಸರ್ಕಾರಿ ಸೊತ್ತುವಾದ ಮರಳನ್ನು ಕಳವು ಮಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಾಗ ಸದ್ರಿ ಸ್ಥಳದಲ್ಲಿದ್ದ ಟಿಪ್ಪರ್ ಗಳ ಬಳಿಯಲ್ಲಿ ನಿಂತಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದು ಪರಿಶೀಲಿಸಲಾಗಿ ಸ್ಥಳದಲ್ಲಿ ನಿಂತಿದ್ದ ಕೆಎ -19-ಎಸಿ-7136 ಮತ್ತು ಕೆಎ 15-ಎ-0477 ನೇ ಟಿಪ್ಪರಗಳ ಪಕ್ಕದಲ್ಲಿ ನದಿಯಿಂದ ಕಳವು ಮಾಡಿದ ಒಂದು ಲೋಡಿನಷ್ಟು ಮರಳನ್ನು ಸಂಗ್ರಹಿಸಿಟ್ಟುರುವುದು ಕಂಡು ಬಂದಿರುವುದರಿಂದ ಸದ್ರಿ ಟಿಪ್ಪರ್ ಲಾರಿ ಹಾಗೂ ಮರಳಿನ ಲೋಡನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿದ್ದು ಆರೋಪಿಗಳು ಪಲ್ಗುಣಿ ನದಿಯಿಂದ ಮರಳನ್ನು ಕಳವು ಮಾಡಿ ಟಿಪ್ಪರ್ ಲಾರಿಗಳಲ್ಲಿ ಸಾಗಿಸಲು ಪ್ರಯತ್ನಿಸಿರುವುದರಿಂದ ಸದ್ರಿ ಆರೋಪಿಗಳ ವಿರುಧ್ದ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಎಂಬಿತ್ಯಾದಿ.

Mangalore Rural PS

ದಿನಾಂಕ: 20-10-2023 ರಂದು ಬೆಳಿಗ್ಗೆ 11.15 ಗಂಟೆಗೆ ಮಂಗಳೂರು ತಾಲೂಕು ಪಚ್ಚನಾಡಿ ಗ್ರಾಮ ಸಂತೋಷ್ ನಗರ ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ  ಕೆ ಸಂದೇಶ್ ಕುಮಾರ್(29) ವರ್ಷ,  ವಾಸ-3-35/38,ಸಂತೋಷ್ನಗರ,ಪಚ್ಚನಾಡಿ ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

Traffic South Police Station                                               

ಫಿರ್ಯಾದಿ MOHAMMAD SAFWAN ದಾರರು ದಿನಾಂಕ: 19-10-2023 ರಂದು ಬೆಳಿಗ್ಗೆ 11-45 ಗಂಟೆಗೆ ಮನೆಯಲ್ಲಿದ್ದ ಸಮಯ ಫಿರ್ಯಾದಿದಾರರ ತಮ್ಮನಾದ ಅಹ್ ಮ್ಮದ್  ಫರ್ ಝಾನ್ (21 ವರ್ಷ) ನ ಗೆಳಯನಾದ ಶ್ರೀನಿವಾಸ ಎಂಬಾತನು ಕರೆ ಮಾಡಿ ಬೆಳಿಗ್ಗೆ 11-15 ಗಂಟೆಗೆ ಫಿರ್ಯಾದಿದಾರರ ತಮ್ಮ ಅಹ್ ಮ್ಮದ್  ಫರ್ ಝಾನ್ ಎಂಬಾತನು ವಳಚ್ಚಿಲ್ ಎಂಬಲ್ಲಿ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುವ ರಾಷ್ಟ್ರೀಯ ಹೆದ್ದಾರಿಯನ್ನು ರಸ್ತೆ ವಿಭಾಜಕದ ಕಡೆಯಿಂದ ದಾಟುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ KA-19-EM-8166ನೇ ಸ್ಕೂಟರೊಂದನ್ನು ಅದರ ಸವಾರನಾದ ಅಹಮ್ಮದ್ ಫವುಝಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಹ್ ಮ್ಮದ್  ಫರ್ ಝಾನ್ (21 ವರ್ಷ) ನಿಗೆ ಡಿಕ್ಕಿ ಹೊಡೆದ ಪರಿಣಾಮ ಅಹ್ ಮ್ಮದ್  ಫರ್ ಝಾನ್  ರಸ್ತೆಗೆ ಬಿದ್ದು, ಹಣೆಯ ಬಲಬದಿಗೆ ತರಚಿದ ಗುದ್ದಿದ ಗಾಯ ಹಾಗೂ ಎರಡು ಕಾಲಿನ ಗಂಟಿಗೆ ಹಾಗೂ ಬಲಕೈ ಗಂಟಿಗೆ ತರಚಿದ ಗಾಯವಾದ್ದು, ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದು, ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಎಂಬಿತ್ಯಾದಿ

Traffic South PS

ಪಿರ್ಯಾದಿ SANDEEP KUMAR K ದಾರರು  ದಿನಾಂಕ 20-10-2023 ರಂದು ಕೆಲಸಕ್ಕೆಂದು ಅವರ ಬಾಬ್ತು KA-19-EQ-3809  ನೇ ನಂಬ್ರದ ಸ್ಕೂಟರ್ ನಲ್ಲಿ ಪಂಪವೆಲ್ ಮಾರ್ಗವಾಗಿ ಪಡೀಲ್ ಕಡೆಗೆ ಹೋಗುತ್ತಿರುವ ಸಮಯ ಸುಮಾರು  ಬೆಳಿಗ್ಗೆ 9.30 ಗಂಟೆಗೆ  ಪಂಪವೆಲ್ ಓವರ್ ಬ್ರಿಡ್ಜ್ ಬಳಿ ಬಸ್ಸ್ ನಿಲ್ದಾಣ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕಂಕನಾಡಿಯಿಂದ ಪಡೀಲ್ ಕಡೆಗೆ ಹೋಗುತ್ತಿದ್ದ  KA-19-AD-3754ನೇ ನಂಬ್ರದ ಸಿಟಿ ಬಸ್  ನ್ನು ಅದರ ಚಾಲಕ ಕುಮಾರಸ್ವಾಮಿ ಎ. ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಸ್ಕೂಟರ್ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಂಬರ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರ ಬಲ ಕೈ ಭುಜದ ಬಳಿ ಮೂಳೆ ಮುರಿತದ ಗಾಯ, ಬೆನ್ನಿನ ಬಲ ಬದಿಗೆ ತರಚಿದ ರಕ್ತ ಗಾಯ, ಬಲ ಕಾಲಿನ ಪಾದಕ್ಕೆ ತರಚಿದ ರಕ್ತ ಗಾಯವಾಗಿರುತ್ತದೆ. ಫಿರ್ಯಾದಿದಾರರನ್ನು ಸಾರ್ವಜನಿಕರು ಹಾಗೂ ಬಸ್ಸಿನ ಚಾಲಕನು ಹತ್ತಿರದ ಇಂಡಿಯನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 20-10-2023 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080