ಅಭಿಪ್ರಾಯ / ಸಲಹೆಗಳು

Crime Report in : Ullal PS

ಪಿರ್ಯಾದಿದಾರರು ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾ ಕಾಂಪ್ಲೆಕ್ಸ್ ತೊಕ್ಕೊಟ್ಟು ಎಂಬಲ್ಲಿರುವ ಸೂಪರ್ ಗೋಲ್ಡ್ & ಡೈಮಂಡ್ಸ್ ಆಭರಣದ ಅಂಗಡಿಯಲ್ಲಿ ದಿನಾಂಕ 05/12/2023 ರಂದು ಸಂಜೆ 6-30 ಗಂಟೆಗೆ ಅಪರಿಚಿತ ಬುರ್ಖಾದಾರಿ ಮಹಿಳೆಯೋರ್ವಳು ಚಿನ್ನದ ಬ್ರೇಸ್ ಲೆಟ್ ಖರೀದಿ ಮಾಡುವ ಬಗ್ಗೆ ಬಂದಿದ್ದು ಆಕೆಗೆ ಚಿನ್ನದ ಬ್ರೇಸ್ ಲೆಟ್  ಇರುವ ಟ್ರೇಯನ್ನು ತೋರಿಸಿದ ಸಿಬ್ಬಂದಿಗೆ ಮತ್ತೊಂದು ಟ್ರೇಯನ್ನು ತೋರಿಸಲು ಹೇಳಿ ಬಳಿಕ ಬ್ರೇಸ್ ಲೆಟ್ ನ್ನು ಖರೀದಿ ಮಾಡದೇ ವಾಪಾಸ್ಸು ಹೋಗಿದ್ದು ಸಂಜೆ ವೇಳೆಗೆ ಶಾಪ್ ನ ಸಿ.ಸಿ ಕ್ಯಾಮೇರಾವನ್ನು ಪರಿಶೀಲಿಸಿದಾಗ ಒಂದು ಚಿನ್ನದ ಬ್ರೇಸ್ ಲೆಟ್ ನ್ನು ಸದ್ರಿ ಬುರ್ಖಾದಾರಿ ಮಹಿಳೆ ತನ್ನ ಬುರ್ಖಾದ ಎಡ ಕೈ ಒಳಗೆ ಹಾಕಿ ಮೋಸದಿಂದ ಕಳವು ಮಾಡಿದ ಬಗ್ಗೆ ಕಂಡು ಬಂದಿದ್ದು ಅದರ ತೂಕ 14.230 ಮಿಲಿಗ್ರಾಂ ಆಗಿದ್ದು ಅಂದಾಜು ಮೌಲ್ಯ ರೂಪಾಯಿ ಒಂದು ಲಕ್ಷ ಆಗಬಹುದು. ಎಂಬಿತ್ಯಾದಿ.

Moodabidre PS    

 ದಿನಾಂಕ 18-12-2023 ರಂದು ಪಿರ್ಯಾದಿದಾರರಾದ ಪ್ರದೀಪ್ ಹೆಚ್.ಸಿ  ಮೂಡಬಿದ್ರೆ ಪೊಲೀಸ್ ಠಾಣೆ- ರವರು ಒಂಟಿಕಟ್ಟೆ ಕೋಟಿ ಚೆನ್ನಯ್ಯ ಕಂಬಳದ ಬಂದೋಬಸ್ತ್ ಕರ್ತವ್ಯದ ಬಗ್ಗೆ ಒಂಟಿಕಟ್ಟೆ ಕ್ರಾಸ್ ಬಳಿ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 00.40  ಗಂಟೆಗೆ KA-17-ER-0145 ನೇ ಮೋಟಾರ್ ಸೈಕಲ್ ನಲ್ಲಿ ಅಲ್ಲಿಗೆ ಬಂದ ಮನೀಶ್ ಹಾಗೂ ಒಂಟಿಕಟ್ಟೆ ಕ್ರಾಸ್ ನಲ್ಲಿದ್ದ ಸಂಜಯ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ಮತ್ತು ಶಶಾಂಕ್ ಎಂಬುವರು ಪರಸ್ಪರ ಗಲಾಟೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿರುವವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ

Moodabidre PS

 ದಿನಾಂಕ 15-12-2023 ರಂದು ಪಿರ್ಯಾದಿದಾರರಾದ ಸುಜಿತ್ (23) ರವರು ತನ್ನ ಸ್ನೇಹಿತ ಅವಿನಾಶ್ ಜೊತೆಗೆ ಅವರ ಮೋಟಾರು ಸೈಕಲ್ ನಲ್ಲಿ ಹಾಗೂ ಪ್ರವೀಣ್ ಮತ್ತು ಚಂದ್ರವರ್ಮ ರವರು ಮತ್ತೊಂದು ಮೋಟಾರು ಸೈಕಲ್ ನಲ್ಲಿ ಜೊತೆಗೂಡಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ವಿರಾಸತ್ ಕಾರ್ಯಕ್ರಮಕ್ಕೆಂದು ಹೊರಟು ರಾತ್ರಿ ಸುಮಾರು 9.20 ಗಂಟೆಗೆ ಕೊಣಾಜೆಕಲ್ಲು ಪೋಸ್ಟ್ ಆಫೀಸ್ ಬಳಿ ತಲುಪುತ್ತಿದ್ದಂತೆ ಮೂಡಬಿದ್ರೆ ಕಡೆಯಿಂದ PY-01-CS-0005 ನೇ ಕಾರನ್ನು ಅದರ ಚಾಲಕರಾದ ತಿಮ್ಮಯ್ಯ ಶೆಟ್ಟಿ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಯಾವುದೇ ಸೂಚನೆಯನ್ನು ನೀಡದೆ ಒಮ್ಮಲೇ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಸ್ನೇಹಿತ ಪ್ರವೀಣ್ ಚಲಾಯಿಸುತ್ತಿದ್ದ KA-19-EV-4073 ನೇ ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ್ದು, ಈ ಅಪಘಾತದಿಂದ ಪ್ರವೀಣ್ ಮತ್ತು ಚಂದ್ರವರ್ಮ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಪ್ರವೀಣ್ ರವರ ಎಡಕಾಲಿಗೆ ಹಾಗೂ ಚಂದ್ರವರ್ಮ ರವರಿಗೆ ಹಣೆ ಮತ್ತು ಮೊಣಕಾಲಿಗೆ ರಕ್ತ ಗಾಯವಾಗಿದ್ದು, ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಂಬಿತ್ಯಾದಿ.

Mangalore South PS

ಮಾಧಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti drug Team ನ  ಅಧಿಕಾರಿ ಸಿಬ್ಬಂದಿಗಳು  ದಿನಾಂಕ 19-12-2023 ರಂದು 18-00 ಗಂಟೆಯಿಂದ  ರೌಂಡ್ಸ್ ಕರ್ತವ್ಯದಲ್ಲಿರುವಾಗ   18-30 ಗಂಟೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಾವರ ಕಟ್ಟೆಯ ಬಳಿ ಓರ್ವ ಯುವಕ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು  ಆತನನ್ನು  ಕರೆದು ವಿಚಾರಿಸಿದಾಗ ಆತನು ಅಮಲು ಪದಾರ್ಥ ಸೇವನೆ ಮಾಡಿದ ರೀತಿ ವಾಸನೆ ಬರುತ್ತಿದ್ದು, ಆತನನ್ನು ವಿಚಾರಿಸಿದಾಗ ಆತ ತನ್ನ ಹೆಸರು ವೈಷ್ಣವ್ ಪ್ರಾಯ: 24 ವರ್ಷ, ವಾಸ: ಡೋರ್ ನಂಬ್ರ: 1-2 ರಾಮ ಕೃಪ ಹೌಸ್, ಬೋಂದೆಲ್ ಚರ್ಚ್ ಬಳಿ, ಪದವಿನಂಗಡಿ, ಕಾವೂರು, ಮಂಗಳೂರು   ಎಂಬುದಾಗಿ ತಿಳಿಸಿದ್ದು, ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದರಿಂದ  ಆರೋಪಿತನ ವಿರುದ್ದ NDPS ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Kankanady Town PS

ಪಿರ್ಯಾದಿದಾರರಾದ ಶ್ರೀ ಹರ್ಷಿತ್ ರವರು KA-19-HH –3520 ನೇ ಬಜಾಜ್ ಪಲ್ಸರ್ ಎನ್ ಎಸ್ 200 ಬೈಕ್ ನ್ನು ಉಪಯೋಗಿಸಿಕೊಂಡಿದ್ದು, ಈ ಬೈಕ್ ನ್ನು ಮಂಗಳೂರು ನಗರದ ಪಡೀಲ್ ನಲ್ಲಿರುವ ಟೊಯೋಟಾ ಶೋರೂಮ್ ನ ಎದುರು ಇರುವ ಖಾಲಿ ಜಾಗದಲ್ಲಿ  ದಿನಾಂಕ: 16-12-2023 ರಂದು ಸಂಜೆ : 6-00 ಗಂಟೆಗೆ ಪಾರ್ಕ್ ಮಾಡಿ ಕೆಲಸದ ನಿಮಿತ್ತ  ಅಲ್ಲಿಂದ ಹೋಗಿ, ನಂತರ ಸಂಜೆ 7-00 ಗಂಟೆ ಯ ಮದ್ಯೆ ಪಿರ್ಯಾದಿದಾರರ ಬಜಾಜ್ ಪಲ್ಸರ್ ಎನ್ ಎಸ್ ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬೈಕ್ ನ ಇಂಜಿನ್ ನಂಬರ್: JLXCMD65554, ಚಾಸಿಸ್ ನಂಬರ್: MD2A36FX3MCD22572, ಬಣ್ಣ: ಗ್ರೇ , ಮೌಲ್ಯ: 1,20,000/- ಆಗಬಹುದು, ಈ ಬೈಕ್ ನ್ನು ಪಿರ್ಯಾದಿದಾರರು ನಗರದ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದ ಕಾರಣ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Urva PS

 ಪಿರ್ಯಾಧಿದಾರರು ಮಂಗಳೂರು ನಗರದ ಬಂದರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿದ್ದು,  ಮೇಲಾಧಿಕಾರಿಯವರ ಆದೇಶದಂತೆ ಮಾದಕ ವಸ್ತು ಸೇವನೆ ಮಾಡುವವರ ಪತ್ತೆ ಬಗ್ಗೆ ವಿಶೇಷ ತಂಡದಲ್ಲಿ ಮಂಗಳೂರು ನಗರ ಕೇಂದ್ರ ಉಪ-ವಿಭಾಗದ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ  ದಿನಾಂಕ: 19-12-2023 ರಂದು  ಸಂಜೆ 19-15 ಗಂಟೆಗೆ ಕೊಟ್ಟಾರ ಚೌಕಿ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು,  ಆತನನ್ನು  ಕಂಡು ಪಿರ್ಯಾಧಿದಾರರು ಮತ್ತು  ಸಿಬ್ಬಂದಿಗಳು ವಿಚಾರಿಸಿದಾಗ ಬಾಯಿಂದ ಯಾವುದೊ ಅಮಲು ಪದಾರ್ಥ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ನಾಲಿಗೆ ತೊದಲುತ್ತಾ  ಆತನ ಹೆಸರು ರಿತೇಶ್ ಪಿ , ಪ್ರಾಯ- 22 ವರ್ಷ, ವಾಸ- ಬಾಂತಾಜೆ ಮನೆ ನೂಜಿಬಾಳ್ತೀಲ ಪೋಸ್ಟ, ಪುತ್ತೂರು ತಾಲೂಕ, ರೇಂಜಿಲಡಿ, ದಕ್ಷಿಣ ಕನ್ನಡ, ಎಂಬುದಾಗಿ ತಿಳಿಸಿದ್ದು, ಆತನು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲ್ಲಂಕುಶವಾಗಿ ವಿಚಾರಿಸಲಾಗಿ, ಆತನು ಗಾಂಜಾ ಸೇವನೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡ  ಮೇರೆಗೆ  ಆತನು ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವ ಸಲುವಾಗಿ ಈತನನ್ನು ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಬಳಿ ಕಳುಹಿಸಿಕೊಟ್ಟಲ್ಲಿ ಪರೀಕ್ಷಿಸಿದ ವೈಧ್ಯರು ಆತನು ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢಪತ್ರವನ್ನು ನೀಡಿರುವ ಮೇರಗೆ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 20-12-2023 02:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080