ಅಭಿಪ್ರಾಯ / ಸಲಹೆಗಳು

Mangalore East Traffic PS                        

ಪಿರ್ಯಾದಿ ಸಂದೇಶ್ ಆಳ್ಪ್ ರವರು ದಿನಾಂಕ: 21/02/2023 ರಂದು ತಮ್ಮ ಮನೆಯಲ್ಲಿದ್ದ ವೇಳೆ ಅವರ ಚಿಕ್ಕಪ್ಪ ರವರು ದೂರವಾಣಿ ಕರೆ ಮಾಡಿ ಪಿರ್ಯಾದಿದಾರ ಸಹೋದರ ಸಂಬಂಧಿ ಕವನ್ ಆಳ್ವ ರವರಿಗೆ ರಸ್ತೆ ಅಪಘಾತವಾಗಿದ್ದು ಚಿಕಿತ್ಸೆಗಾಗಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಬಗ್ಗೆ ಆಸ್ಪತ್ರೆಯಿಂದ ತಮಗೆ ದೂರವಾಣಿ ಕರೆ ಬಂದಿದ್ದು ಕೂಡಲೇ ಆಸ್ಪತ್ರೆಗೆ ತೆರಳಿ ವಿಚಾರಿಸುವಂತೆ ಪಿರ್ಯಾದಿದಾರರಿಗೆ ತಿಳಿಸಿದ್ದು ಆಗ ಪಿರ್ಯಾದಿದಾರರು ಕೂಡಲೇ ಎ.ಜೆ ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸಾ ಘಟಕದಲ್ಲಿದ್ದ ಕವನ್ ರವರನ್ನು ನೋಡಲಾಗಿ ಕವನ್ ರವರಿಗೆ ಕಿವಿ ಮೂಗಿನಲ್ಲಿ ರಕ್ತಸ್ರಾವ ವಾಗುತ್ತಿದ್ದು ವೈದ್ಯರಲ್ಲಿ ಕೇಳಿದಾಗ ಕವನ್ ರವರು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು ಅಲ್ಲಿಯೇ ಇದ್ದ ಕವನ್ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದವರಲ್ಲಿ ವಿಚಾರಿಸಲಾಗಿ ಮೃತ ಕವನ್ ರವರು ಬೆಳಿಗ್ಗೆ 11-20 ಗಂಟೆಗೆ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-HJ-5472 ನೇಯದನ್ನು ಬಿಜೈ ಜೈಲ್ ರೋಡ್ ಕಡೆಯಿಂದ ಬಿಜೈ ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಬಿಜೈ ಚರ್ಚ್ ಬಳಿ ಇರವ ಎಸ್.ಎಲ್.ವಿ ಬುಕ್ ಶಾಫ್ ಎದುರು ತಲುಪುತ್ತಿದ್ದಂತೆ ಅದೇವೇಳೆ ಆಟೋ ರಿಕ್ಷಾ ನೊಂದಣಿ ಸಂಖ್ಯೆ: KA-19-AD-7498 ನೇಯದನ್ನು ಅದರ ಚಾಲಕನು ವಾಪಸ್ ಬಿಜೈ ಸರ್ಕಲ್ ಕಡೆಗೆ ಹೋಗಲು ಯು ಟರ್ನ್ ಮಾಡುತ್ತಿರುವ ವೇಳೆ ಬೈಕ್ ಸವಾರನು ಆಟೋ ರಿಕ್ಷಾವನ್ನು ಗಮನಿಸದೇ ದುಡುಕುತನದಿಂದ ಚಲಾಯಿಸಿ ಆಟೋರಿಕ್ಷಾಗೆ ಢಿಕ್ಕಿ ಪಡಿಸಿದ್ದು ಇದರಿಂದ ಬೈಕ್ ಸವಾರನು ರಸ್ತೆಗೆ ಬಿದ್ದು ತಲೆಗೆ ಗಾಯಗೊಂಡು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ದಾರಿಮಧ್ಯದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Traffic North Police Station       

ಪಿರ್ಯಾದಿ Abdul Khader ದಿನಾಂಕ 20.02.2023 ರಂದು ರಾತ್ರಿ ಸುರತ್ಕಲ್ ಮಾರ್ಕೆಟ್ ನಲ್ಲಿರುವ ತನ್ನ  ಅಂಗಡಿಯನ್ನು ಮುಚ್ಚಿ, ಮಾರ್ಕೆಟ್ ಬಳಿ ಇರುವ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ,ಬಳಿಕ ತನ್ನ ಮನೆಗೆ ಹೋಗುವರೇ ರಸ್ತೆ ದಾಟುವ ಸಲುವಾಗಿ ರಾತ್ರಿ ಸುಮಾರು 09:30 ಗಂಟೆಗೆ ಶೌಚಾಲಯದ ಎದುರು ರಸ್ತೆಗೆ ಇಳಿಯುತ್ತಿದ್ದಂತೆ ಚೊಕ್ಕಬೆಟ್ಟು ಕಡೆಯಿಂದ ಸುರತ್ಕಲ್ ಜಂಕ್ಷನ್ ಕಡೆಗೆ KA-29-EG-5021 ನಂಬ್ರದ ಬೈಕನ್ನು ಅದರ ಸವಾರ ಮುತ್ತಪ್ಪ ಎಂಬಾತ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಬೈಕ್ ಸವಾರ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಹಣೆಯ ಬಲ ಭಾಗ, ಎಡ ಕೋಲು ಕಾಲಿನ ಬಳಿ ತರಚಿದ ರಕ್ತ ಗಾಯ ಹಾಗೂ ಸೊಂಟದ ಹಿಂಭಾಗ ಮತ್ತು ಎದೆಯ ಬಳಿ ಗುದ್ದಿದ ರೀತಿಯ ಗಂಭೀರ ಗಾಯವಾಗಿದ್ದು, ಬೈಕ್ ಸವಾರನಿಗೂ ಕೂಡ ಸಣ್ಣ ಪುಟ್ಟ ಗಾಯವಾಗಿದ್ದು, ಪಿರ್ಯಾದಿದಾರರು ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಯೆನೆಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.                  

Traffic North Police Station   

ಪಿರ್ಯಾದಿದಾರರು Mallikarjun Biradar ದಿನಾಂಕ: 20-02-2023 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ 2ನೇ ಬ್ಲಾಕ್ ಕಾಟಿಪಳ್ಳ ಬಳಿ ಕರ್ತವ್ಯದಲ್ಲಿದ್ದು ರಾತ್ರಿ ಸಮಯ ಸುಮಾರು 9:00 ಗಂಟೆಗೆ KA-19-EY-4818 ನಂಬ್ರದ ಸ್ಕೂಟರನ್ನು ಅದರ ಸವಾರನು ಹೆಲ್ಮೇಟ್ ಧರಿಸದೇ ಅಲ್ಲದೇ ಹಿಂಬದಿಯಲ್ಲಿ ಕೂಡಾ ತಲೆಗೆ ಹೆಲ್ಮಟ್ ಧರಿಸದ ಇಬ್ಬರು ವ್ಯಕ್ತಿಗಳನ್ನು ಕುಳ್ಳಿರಿಸಿಕೊಂಡು ಶಂಶುದ್ದಿನ್ ಸರ್ಕಲ್ ಕಡೆಯಿಂದ ಬೊಬ್ಬೆ ಹೊಡೆಯುತ್ತಾ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರುಕತೆಯಿಂದ ಜಿಗ್ ಜಾಗ್ ರೈಡಿಂಗ್ ಮಾಡಿಕೊಂಡು ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸ್ಕೂಟರ್  ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ನಿಗದಿತ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರು ಸದ್ರಿ ಸ್ಕೂಟರನ್ನು ನಿಲ್ಲಿಸಿ ವಿಚಾರಿಸಿದಾಗ ಸ್ಕೂಟರ್ ಸವಾರನು ತನ್ನ ಹೆಸರು ಸೈಯ್ಯದ್ ಅನಾಸ್ ತಂದೆ: ಮೊಹಮ್ಮದ್ ವಾಸ: ಆಯಿಶಾ ರೆಸಿಡೆನ್ಸಿ 6ನೇ ಬ್ಲಾಕ್ ಕೃಷ್ಣಾಪುರ, ಮಂಗಳೂರು ಮತ್ತು ಹಿಂಬದಿಯಲ್ಲಿದ್ದ ಸಹ ಸವಾರರು 1) ಸಾಹೀಲ್ ತಂದೆ : ಅಬೀಬ್ ವಾಸ : ಹೀರಾ ಶಾಲೆಯ ಬಳಿ 6ನೇ ಬ್ಲಾಕ್ ಕೃಷ್ಣಾಪುರ, ಮಂಗಳೂರು, 2) ಮೊಹಮ್ಮದ್ ಸದೀಂ ತಂದೆ : ಖಾಲೀದ್ ವಾಸ : ಮಿಸ್ಬಾ ಕಾಲೇಜು ಹತ್ತಿರ 4ನೇ ಬ್ಲಾಕ್ ಕೃಷ್ಣಾಪುರ, ಮಂಗಳೂರು ಎಂಬುದಾಗಿ ತಿಳಿಸಿದಂತೆ ಸದ್ರಿ ಸ್ಕೂಟರನ್ನು ವಶಕ್ಕೆ ಪಡೆದು ಠಾಣೆಗೆ ತಂದು ಹಾಜರು ಪಡಿಸಿದ್ದು. ಜಿಗ್ ಜಾಗ್ ರೈಡಿಂಗ್ ಮಾಡಿಕೊಂಡು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದ ಸ್ಕೂಟರ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಸಲ್ಲಿಸಿದ ವರದಿ.

Traffic North Police Station       

ಪಿರ್ಯಾದಿ Mallikarjun Biradar ದಿನಾಂಕ: 20-02-2023 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ 2ನೇ ಬ್ಲಾಕ್ ಕಾಟಿಪಳ್ಳ ಬಳಿ ರೌಂಡ್ಸ್ ಹೋಗುತ್ತಿರುವಾಗ ರಾತ್ರಿ ಸಮಯ ಸುಮಾರು 9:15 ಗಂಟೆಗೆ ಕಾಟಿಪಳ್ಳ  2ನೇ ಬ್ಲಾಕ್ ಮೋರ್ ಸೂಪರ್ ಮಾರ್ಕೇಟ್ ಬಳಿ ತಲುಪಿದಾಗ KA-19-ES-0694 ನೇ ನಂಬ್ರದ ಮೋಟಾರ್ ಬೈಕಿನಲ್ಲಿ ಅದರ ಸವಾರ ನೌಷದ್ ಎಂಬಾತನು ಪಿರ್ಯಾದಿದಾರರ ವಾಹನವನ್ನು ಹಿಂಬಾಲಿಸಿಕೊಂಡು ಹೆಲ್ಮೆಟ್ ಹಾಕದೇ, ಮೊಬೈಲಿನಲ್ಲಿ ಮಾತನಾಡಿಕೊಂಡು, ಜಿಗ್ ಜಾಗ್ ರೀತಿಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದಿದ್ದು, ಆತನಿಗೆ ವಾಹನವನ್ನು ನಿಲ್ಲಿಸಲು ಕೈಯಿಂದ ಸನ್ನೆ ಮಾಡಿದಾಗ ವಾಹನವನ್ನು ನಿಲ್ಲಿಸದೆ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ. ಮೋಟಾರು ಸೈಕಲನ್ನು ಜಿಗ್ ಜಾಗ್ ರೈಡಿಂಗ್ ಮಾಡಿಕೊಂಡು ನಿರ್ಲಕ್ಷ್ಯತನದಿಂದ, ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಹೋದ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಸಲ್ಲಿಸಿದ ವರದಿ.               

Mangalore East Traffic PS        

ಪಿರ್ಯಾದಿ ವಿಜಯ ಅಮಿನ್ ರವರು ದಿನಾಂಕ: 20-02-2023 ರಂದು ಕೆಲಸಕ್ಕೆಂದು ಮನೆಯಿಂದ ಹೊರಟು ಬಸ್ಸಿನಲ್ಲಿ ಕಂಕನಾಡಿಯ ಬೈಪಾಸ್ ರಸ್ತೆ ಬಳಿ ಬಂದು ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:30 ಗಂಟೆಗೆ ಕರಾವಳಿ ಜಂಕ್ಷನ್ ಬಳಿ ಇರುವ ಉದಯ ಕಿಚನ್ ನೆಕ್ಸ್ಟ್ ಎದುರುಗಡೆ ಬಂದು ತಲುಪಿದಾಗ ಪಿರ್ಯಾದಿದಾರರಿಗೆ ತಲೆ ಸುತ್ತು ಬಂದಂತಾಗಿ ಅಲ್ಲಿಯೇ ರಸ್ತೆ ಬದಿಯಲ್ಲಿ  ನಿಂತಿದ್ದ  ವೇಳೆ ಪಂಪ್ ವೆಲ್ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಹಾದು ಹೋಗಿರುವ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ KA-19-AA-4860 ನಂಬ್ರದ ಗೂಡ್ಸ್  ಟೆಂಪೋ ಟ್ರಾವೇಲರ್ ಚಾಲಕ ಸುನೀಲ್ ಎಂಬಾತನು ತನ್ನ  ಗೂಡ್ಸ್  ಟೆಂಪೋ ಟ್ರಾವೇಲರ್ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಎಡಕ್ಕೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರ ಬಲಕಾಲಿಗೆ ಢಿಕ್ಕಿ ಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದಕ್ಕೆ ಮತ್ತು ಹಿಮ್ಮಡಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವಾದವರನ್ನು, ಚಿಕಿತ್ಸೆ ಬಗ್ಗೆ ಅಪಘಾತ ಪಡಿಸಿದ ಟೆಂಪೋ ಚಾಲಕ ಅಪಘಾತ ಪಡಿಸಿದ ವಾಹನದಲ್ಲಿಯೇ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಬಲಕಾಲಿನ ಹಿಮ್ಮಡಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುವುದಾಗಿ  ತಿಳಿಸಿ, ಪ್ರಸ್ತುತ ಪ್ಲಾಸ್ಟರನ್ನು ಹಾಕಿ ಹೋರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ.

Panambur PS   

ಪಿರ್ಯಾದಿ ವಿತೇಶ್ ವಿನೋದ್ ಕೋಟ್ಯಾನ್ ಎಂಬವರು ಸ್ಟಾರ್ ಪ್ಲೆಕ್ಸ್ ಲ್ಯಾಮಿನೆಟರ್ ಪ್ರೈವೆಟ್ ಲಿಮಿಟೆಡ್, ಬೈಕಂಪಾಡಿ ಕೈಗಾರಿಕಾ ಪ್ರದೇಶ ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದು ದೂರಿನಲ್ಲಿ ನಮೂದಿಸಿದ 1)vishnumoorthy 2) prabhakar kulal 3) ramachandra kotian 4) rajaneesh 5) ajay 6) rajesh 7) shakthi Prasad 8) jayaram 9) ashok T 10) babu poojar 11) nithin 12) shashidhar 13) leeladhar kulal 14) charan kumar 15) chethan kumar 16) vinod 17) tukaram Shetty 18) sathish 19) Gopal naik   ಆರೋಪಿಗಳು ಸದ್ರಿ ಕಂಪೆನಿಯ ಮಾಜಿ ನೌಕರರಾಗಿರುತ್ತಾರೆ. ಆರೋಪಿಗಳಿಗೆ ಕಂಪೆನಿ ಕಡೆಯಿಂದ ಯಾವುದೇ ಬಾಕಿ ಹಣ ಇಲ್ಲದಿದ್ದರು ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಲ್ಲದೇ ಆರೋಪಿತರು ರಾಜಿನಾಮೆ ನೀಡುವ ಮೊದಲು ಕಂಪೆನಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳು ಗುಪ್ತ ಮಾಹಿತಿ, ಗ್ರಾಹಕರ ಮಾಹಿತಿ,  ವಿತರಕರು ಮತ್ತು ಪೂರೈಕೆದಾರರ ನಂಬರ್ ಗಳನ್ನು ಕಂಪೆನಿಯ ಗಣಕಯಂತ್ರದಿಂದ ಪಿರ್ಯಾದಿಯ ಗಮನಕ್ಕೆ ಬಾರದೆ, ಅನುಮತಿ ಪಡೆಯದೆ ಕಳವು ಮಾಡಿ ಅದನ್ನು ಪಿರ್ಯಾದಿಯೊಂದಿಗೆ ಸ್ಫರ್ಧೆ ಮಾಡುತ್ತಿದ್ದ ಕಂಪೆನಿಗೆ ಕೊಟ್ಟು ಲಕ್ಷಾಂತರ ರೂಪಾಯಿ ನಷ್ಠವಾಗಲು ಕಾರಣರಾಗಿರುತ್ತಾರೆ. ಅದೂ ಅಲ್ಲದೆ ಆರೋಪಿಗಳು ಕಂಪೆನಿಯ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ ಅದನ್ನು ವಾಟ್ಸಪ್ ಸಾಮಾಜಿಕ ಜಾಲತಾಣದ ಮೂಲಕ ದಿನಾಂಕ: 08-08-2022 ರಂದು ಸಮಯ 11-00 ಗಂಟೆಗೆ ಕಳುಹಿಸಿದ್ದರಿಂದ 75,00,000/- ರೂಪಾಯಿಗಳು ಒಂದೇ ದಿನದಲ್ಲಿ ನಷ್ಠವಾಗಿರುತ್ತದೆ. ಆರೋಪಿಗಳು ನನ್ನ ತಮ್ಮ ಮತ್ತು ಕಂಪೆನಿಯ ಪಾಲುದಾರರನ್ನು ಮುಗಿಸುವ ಉದ್ದೇಶ ಹೊಂದಿದ್ದಲ್ಲದೆ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ದಿನಾಂಕ; 08-08-2022 ರಂದು ಸಮಯ 10-30 ಗಂಟೆಗೆ ಪಿರ್ಯಾದಿ ಕಂಪೆನಿಯ ಒಳಗೆ ಅಕ್ರಮ ಪ್ರವೇಶಿಸಿ ಪಿರ್ಯಾದಿ ಮತ್ತು ಪಿರ್ಯಾದಿ ತಮ್ಮನಿಗೆ ಬೆದರಿಕೆ ನೀಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Panambur PS

ಪಿರ್ಯಾದಿ ಜೂಡ್ ಜೆರಾಲ್ಡ್ ಗೊವಿಯಸ್ ಎಂಬವರು Stems N Leaves International ಎಂಬ ಗ್ರಾನೈಟ್ ತಯಾರಿಕಾ ಕಂಪೆನಿ ಹೊಂದಿದ್ದು ಸದ್ರಿಯವರ ಕಂಪನಿಯು ರಪ್ತು ವ್ಯವಹಾರ ಮಾಡಿಕೊಂಡಿದೆ ಹೀಗಿರುವಾಗ ದಿನಾಂಕ: 30-06-2022 ರಂದು ಪಿರ್ಯಾದಿ ಗ್ರಾನೈಟ್ ಬ್ಲಾಕ್ ಗಳ ಎರಡು ಲೋಡುಗಳನ್ನು ಪ್ರಣವಂ ಎಂಟರ್ ಪ್ರೈಸಸ್ ಸಕಲೇಶಪುರದಿಂದ ತರಿಸಿದ್ದು ಈ ಬಗ್ಗೆ RTGS ಮೂಲಕ ಹಣ ಪಾವತಿಸಿರುತ್ತಾರೆ. ಅಲ್ಲದೆ ಇದಕ್ಕೆ ಸಂಬಂಧಿಸಿ ಸರಕಾರದ ನಿಯಮಗಳನ್ನು ಪಾಲಿಸಿರುತ್ತಾರೆ. ಗ್ರಾನೈಟ್ ಗಳನ್ನು ಸಾಗಣೆ ಮಾಡುವ ಬಗ್ಗೆ ಕೋರಿ ಮಾಲಿಕ ಸ್ವರೂಪ್ ಎಂಬಾತನನ್ನು ಸಂಪರ್ಕಿಸಿ ಬೈಕಂಪಾಡಿಯಲ್ಲಿ ಇಳಿಸುವ ವ್ಯವಸ್ಥೆ ಮಾಡಿ, ಪ್ರತಿ ಲೋಡಿಗೆ 50,000/- ರೂಪಾಯಿಗಳಂತೆ ಎರಡು ಲೋಡಿಗೆ ಒಂದು ಲಕ್ಷ ನಿಗದಿಯಾಗಿರುತ್ತದೆ. ಪಿರ್ಯಾದಿಯು ಆರೋಪಿಗೆ ಒಂದು ಲಕ್ಷ RTGS ಮೂಲಕ ಪಾವತಿಸಿದ್ದು ಎರಡು-ಮೂರು ದಿನಗಳಲ್ಲಿ ಲೋಡ್ ನ್ನು ಇಳಿಸಲು ಒಪ್ಪಿಕೊಂಡಿದ್ದು, ಆರೋಪಿಯು ನೀಡಿದ ವಾಗ್ದಾನದಂತೆ ಡೆಲಿವರಿ ಮಾಡದೆ, ಈ ಬಗ್ಗೆ ಯಾವುದೇ ವಿವರಗಳನ್ನು ಪಿರ್ಯಾದಿಗೆ ತಿಳಿಸದೆ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆ ನೀಡಿದ್ದು, ನಿಗದಿತ ಸಮಯದಲ್ಲಿ ಲೋಡ್ ಡೆಲಿವರಿ ಆಗದೆ ಇದ್ದುದರಿಂದ ಪಿರ್ಯಾದಿಗೆ ನಷ್ಠ ಉಂಟಾಗಿರುತ್ತದೆ. ಆದುದರಿಂದ ನಿಗದಿತ ಸಮಯದಲ್ಲಿ ಲೋಡ್ ಡೆಲಿವರಿ ಮಾಡದೇ ನಂಬಿಕೆದ್ರೋಹ ಎಸಗಿದ್ದಲ್ಲದೆ ಹಣ ಪಡೆದು ಮೋಸ ಮಾಡಿರುವುದರಿಂದ ಆರೋಪಿತರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ 

Konaje PS

ಪಿರ್ಯಾದಿ Abdul Salam ಕಳೆದ 6 ತಿಂಗಳಿನಿಂದ ಪಾವೂರು ಗ್ರಾಮ ಪಂಚಾಯತ್ ನಲ್ಲಿ ನೀರು ಬಿಡುವ ಕೆಲಸ ಮಾಡುತ್ತಿದ್ದು, ಅದರಂತೆ ದಿನಾಂಕ 20.02.2023 ರಂದು ಬೆಳಿಗ್ಗೆ 11.45 ಗಂಟೆಗೆ ಉಳ್ಳಾಲ ತಾಲೂಕು ಪಾವೂರು ಗ್ರಾಮದ ಅಕ್ಷರ ನಗರ ಕೆಳಗಿನ ಏರಿಯಾಗೆ ನೀರು ಬಿಡುವರೇ ತೆರಳುತ್ತಿದ್ದಾಗ, ಹೈದ್ರೋಸ್ ಮತ್ತು ಇಕ್ಬಾಲ್ ಎಂಬವರ ಮನೆಯ ಬಳಿ ನೀರು ಪೋಲಾಗುತ್ತಿದ್ದು, ಇದನ್ನು ಕಂಡು ಪಿರ್ಯಾದಿದಾರರು “ಪತ್ತಾಯರ್ ತನ್ನಿ ಬನ್ನಟ್ಟು, ಮೈಯಾಕ್ಲೆ, ಇನಿ ತನ್ನಿಯಡಿತಿಟ್ಟು ಬೆಡಕಾಕ್ರೆ ಎಂದ್ರೆಕ್” ಎಂದು ಬ್ಯಾರಿ ಭಾಷೆಯಲ್ಲಿ ಹೇಳಿದ್ದು, ಅದಕ್ಕೆ ಇಕ್ಬಾಲ್ ಎಂಬವನು “ಸೂಳೆಡೆ ಮೋನು, ರಂಡೆಡೆ ಮೋನು, ನೀನು ಯಾರು ಕೇಳಲಿಕ್ಕೆ, ನೀರು ನಿನ್ನ ಅಪ್ಪನದಾ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರನ್ನು ತಡೆದು ಏಕಾಎಕಿ  ಪಿರ್ಯಾದಿದಾರರ ಬಲಭುಜಕ್ಕೆ, ಕುತ್ತಿಗೆ ಬೆನ್ನಿಗೆ ಕೈಯಿಂದ ಹೊಡೆದು, ಎಡಭುಜದ ಬಳಿ ಬಾಯಿಯಿಂದ ಕಚ್ಚಿರುತ್ತಾನೆ. ಆಗ ಹೈದ್ರೋಸ್ ಮತ್ತು ಮನ್ಸೂರ್ ಬಂದಿದ್ದು, ಹೈದ್ರೋಸ್ ಸಹಾ ಇಕ್ಬಾಲ್ ನೊಂದಿಗೆ ಸೇರಿ ಪಿರ್ಯಾದಿದಾರರ ಬೆನ್ನಿಗೆ ಕುತ್ತಿಗೆಗೆ ಕೈಯಿಂದ ಹೊಡೆದಿರುತ್ತಾನೆ. ಇಕ್ಬಾಲ್ ನು ಪಿರ್ಯಾದಿದಾರರನ್ನು ಎಳೆದಾಡಿದ್ದರಿಂದ ಪಿರ್ಯಾದಿದಾರರ ಅಂಗಿಯು ಎಡ ಭುಜದ ಬಳಿ ಹರಿದಿರುತ್ತದೆ. ಮನ್ಸೂರು ಎಂಬವನು ಅಲ್ಲಿಯೇ ಇದ್ದ ಕಲ್ಲೊಂದು ತೆಗೆದು ನೀರಿನ ಪೈಪ್ ಮೇಲೆ ಬಿಸಾಡಿರುತ್ತಾನೆ. ಆದುದರಿಂದ ಆರೋಪಿಗಳಾದ ಹೈದ್ರೋಸ್, ಇಕ್ಬಾಲ್ ಹಾಗೂ ಮನ್ಸೂರು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Traffic South Police Station

ದಿನಾಂಕ:18-02-2023 ರಂದು ಪಿರ್ಯಾದಿ ಕೆ.ಮಹಮ್ಮದ್ ರಫಿ(62 ವರ್ಷ) ರವರು ಪದವಿನಂಗಡಿಯಿಂದ ಯೆಯ್ಯಾಡಿ ಕಡೆ ಹೋಗುವ ಕಾಂಕ್ರೀಟ್ ರಸ್ತೆಯನ್ನು ಮೇರಿಹಿಲ್ ಜಂಕ್ಷನ್ ನಲ್ಲಿ ಸಮಯ ಸುಮಾರು ರಾತ್ರಿ 7:00 ಗಂಟೆಗೆ ರಸ್ತೆ ದಾಟುತ್ತಿರುವಾಗ ಪದವಿನಂಗಡಿ ಕಡೆಯಿಂದ ಕಾರು ನಂಬ್ರ:KA-19-P-0745 ನೇದನ್ನು ಅದರ ಚಾಲಕ ಮೇರಿಹಿಲ್ ಕಡೆಗೆ ಚಲಾಯಿಕೊಂಡು ಹೋಗಿ ನಂತರ ಮೇರಿಹಿಲ್ ಜಂಕ್ಷನ್ ನಲ್ಲಿ ಕಾರನ್ನು ಬಲಗಡೆ ತಿರುಗಿಸಲು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಎಡ ಕೆನ್ನೆಗೆ ಗುದ್ದಿದ ಗಾಯವಾಗಿರುತ್ತದೆ, ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಅಪಘಾತ ಪಡಿಸಿದ ಕಾರಿನ ಚಾಲಕ ಪಿರ್ಯಾದಿದಾರರಾದ ಕೆ.ಮಹಮ್ಮದ್ ರಫಿ(62 ವರ್ಷ)ರವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಬೇರೊಂದು ವಾಹನದಲ್ಲಿ ಕೊಲಾಸೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯರು ಹೊರ ರೋಗಿಯಾಗಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದು ನಂತರ ದಿನಾಂಕ:20-02-2023 ರಂದು ಪಿರ್ಯಾದಿದಾರರ ಗಾಯವು ಉಲ್ಬಣಗೊಂಡು ಕೊಲಾಸೋ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಎಂಬಿತ್ಯಾದಿ.

Kankanady Town PS                                     

ಪಿರ್ಯಾದಿ Pushparaj  ಕನಪತಗು, ಮರೋಳಿ, ಮಂಗಳೂರುನವರಾಗಿದ್ದು, ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಸೂಪರ್ ಟೆಕ್ನಾಲಜಿಸ್  ಎಂಬ ಕಂಪೆನಿಯಲ್ಲಿ ಮಿಷಿನ್ ಆಪರೇಟರ್ ಆಗಿ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ದಿನಾಂಕ 14-02-2023 ರಂದು ಪಿರ್ಯಾದುದಾರರು ಕೆಲಸ ಮುಗಿಸಿಕೊಂಡು ಸುಮಾರು ರಾತ್ರಿ 10.30 ಗಂಟೆಗೆ ಮನೆ ಬಳಿಯ ರೋಡ್ ನಲ್ಲಿ ಎಂದಿನಂತೆ ತಮ್ಮ ಬಾಬ್ತು KA-19-EQ-2728 ನೇ ಬಜಾಜ್ ಪಲ್ಸರ್-150 ಕಪ್ಪು ಬಣ್ಣದ ಬೈಕ್ ನ್ನು ರೋಡ್ ಸೈಡ್ ಬಳಿ ಇಟ್ಟು ಮನೆಗೆ ಹೊಗಿದ್ದು, ಮರುದಿನ ದಿನಾಂಕ 15-02-2023 ರಂದು ಬೆಳಗ್ಗೆ 05.45 ಗಂಟೆಗೆ ಬೈಕ್ ಇಟ್ಟ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಅಲ್ಲಿ ಇಲ್ಲದೇ ಇದ್ದು, ಕೂಡಲೇ ಸುತ್ತುಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಬೈಕ್ ಕಂಡು ಬರದೇ ಇದ್ದು ಯಾರೋ ಕಳ್ಳರು ಕಳವು ಮಾಡಿ ಹೋಗಿರುವುದು ಕಂಡು ಬಂದಿರುತ್ತದೆ. ನಂತರ ಕಳ್ಳತನವಾದ KA-19-EQ-2728 ನೇ ಬೈಕ್ ನ್ನು ದಿನಾಂಕ 20-02-2023 ರವರೆಗೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದೇ ಇದ್ದು, ಆದ್ದರಿಂದ ಕಳ್ಳತನವಾದ ನನ್ನ ಬೈಕ್ ನ್ನು ಮತ್ತು ಕಳ್ಳರನ್ನು ಪತ್ತೇ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಹಾಗೂ ಇದರ ಅಂದಾಜು ಮೌಲ್ಯ ರೂ 25,000/- ಆಗಬಹುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-02-2023 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080