ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police

 ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 18-02-2024 ರಂದು ಬೆಳಿಗ್ಗೆ ಸಮಯ ಸುಮಾರು 10:00 ಗಂಟೆಗೆ ಪಿರ್ಯಾದಿ Prakash Kanchan ಇವರ ಮಗ ನಕ್ಷ್ ಕಾಂಚನ್ (ಮೂರುವರೆ ವರ್ಷ) ಎಂಬಾತನು ಕೂಳೂರಿನ, ಪಯ್ಯರಗುಡ್ಡೆ ಎಂಬಲ್ಲಿರುವ ತನ್ನ ತಾಯಿಯ ಮನೆಯಾದ ಸೀತುಸದನದಿಂದ ಆಟವಾಡಲು ಹೊರಗಡೆ ರಸ್ತೆಗೆ ಬಂದಾಗ ಕೂಳೂರು ಕಡೆಯಿಂದ ಪಯ್ಯರಗುಡ್ಡೆ ಕಡೆಗೆ Honda SP125 ದ್ವಿಚಕ್ರ ವಾಹನ ನಂಬ್ರ KA-19-HP-1018 ನೇಯದನ್ನು ಅದರ ಸವಾರ ಅಮಿತ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯಲ್ಲಿದ್ದ ನಕ್ಷ್ ಕಾಂಚನ್ ಈತನಿಗೆ ಢಿಕ್ಕಿ ಪಡಿಸಿದ ಪರಿಣಾಮ ನಕ್ಷ್ ಕಾಂಚನ್ ರಸ್ತೆಗೆ ಬಿದ್ದು ಆತನ ಈತನ ಎಡಕಾಲಿನ ಮೊಣಗಂಟಿನಿಂದ ಪಾದದವರೆಗೆ ರಕ್ತಗಾಯವಾಗಿದ್ದು, ಅಲ್ಲದೇ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಳು ನಕ್ಷ್ ಕಾಂಚನ್ ನನ್ನು ಚಿಕಿತ್ಸೆ ಬಗ್ಗೆ ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ ಎಂಬಿತ್ಯಾದಿ.

 

 Bajpe PS

 ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Girish ಇವರ ಪಿರ್ಯಾದಿದಾರರ  ಮಾವನಾದ ಹರೀಶ್ ಎಂಬುವರು  KA19HF2032 ನೇ ಸ್ಕೂಟರ್ ನಲ್ಲಿ ಬಜಪೆ ಕಡೆಯಿಂದ ಪರ್ಕೋಡಿ ಕಡೆ ತೆರಳುತ್ತಿರುವಾಗ ಜೋಕಟ್ಟೆ ಕಡೆಯಿಂದ KA19AD6786 ನೇ ಟಿಪ್ಪರ್ ಚಾಲಕನಾದ ನಿತ್ಯಾನಂದ ಶೆಟ್ಟಿ ಎಂಬುವರು ತನ್ನ ಟಿಪ್ಪರ್ ಲಾರಿಯನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಮಂಗಳೂರು ತಾಲೂಕು ಬಜಪೆ ಗ್ರಾಮದ ಪರ್ಕೋಡಿ ದ್ವಾರದ ಬಳಿ ಪಿರ್ಯಾದಿದಾರರ ಮಾವನಾದ ಹರೀಶ್ ರವರು ಚಲಾಯಿಸುತಿದ್ದ ಸ್ಕೂಟರ್ ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಮಾವ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಹರೀಶ್ ರವರಿಗೆ ಎಡಕಾಲಿನ ಮೊಣಗಂಟಿಗೆ ಗಂಭೀರ ರಕ್ತಗಾಯವಾಗಿದ್ದು ಸ್ಕೂಟರ್ ಜಖಂಗೊಂಡಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 22-02-2024 09:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080