Mangalore North PS
ದಿನಾಂಕ 19.04.2023 ರಂದು ಪಿರ್ಯಾದಿ ಉತ್ತರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಚಿತ್ತರಂಜನ್ ದಾಸ್ ನೇರವರು ಸಮವಸ್ತ್ರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿ ಹೆಚ್ ಸಿ ಬಾಲಚಂದ್ರ ರವರೊಂದಿಗೆ ಠಾಣೆಯಿಂದ 23-00 ಗಂಟೆಗೆ ಹೊರಟು ಠಾಣಾ ಸರಹದ್ದಿನ ಜೆ.ಎಂ.ರೋಡ್, ಅನ್ಸಾರಿ ರೋಡ್, ಅಜೀಜುದ್ದೀನ್ ರೋಡ್, ಕುದ್ರೋಳಿ, ಅಳಕೆ, ಕಾರ್ ಸ್ಟ್ರೀಟ್, ಜಿ.ಹೆಚ್.ಎಸ್ ರೋಡ್, ಕೆ.ಎಸ್. ರಾವ್ ರೋಡ್, ಹಂಪನ್ ಕಟ್ಟಾ, ಜ್ಯೋತಿ, ಬಂಟ್ಸ್ ಹಾಸ್ಟೆಲ್, ಮಿಲಾಗ್ರೀಸ್ ಇತ್ಯಾದಿ ಕಡೆಗಳಲ್ಲಿ ಸಂಚರಿಸಿಕೊಂಡು ದಿನಾಂಕ: 20.04.2023 ರಂದು ಬೆಳಗ್ಗಿನ ಜಾವ ಸುಮಾರು 01-00 ಗಂಟೆಗೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿಗೆ ತಲುಪುತ್ತಿದ್ದಂತೆ ಒರ್ವ ವ್ಯಕ್ತಿಯು ಪೊಲೀಸ್ ವಾಹನವನ್ನು ಕಂಡು ಕತ್ತಲೆ ಕಡೆಗೆ ಸರಿದಿದ್ದು ಅತ್ತ ಕಡೆ ಟಾರ್ಚ್ ಲೈಟ್ ನ್ನು ಹಾಯಿಸಿದಾಗ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ಕಂಡು ಓಡಲು ಪ್ರಯತ್ನಿಸುತ್ತಿದ್ದವನನ್ನು ಚಾಲಕ ಹಾಗೂ ಸೆಕ್ಯೂರಿಟಿಯವರ ಸಹಾಯದಿಂದ ಆತನನ್ನು ಹಿಡಿದು ವಿಚಾರಿಸಿದಾಗ ನೌಶದ್ ವಯಸ್ಸು (30) ವಾಸ: 23/72, ಕಬೀರ್ ಮಂಜೀಲ್,ಕಸಬ ಬೆಂಗ್ರೆ, ಮಂಗಳೂರು ಎಂದು ನುಡಿದಿರುತ್ತಾನೆ. ಇವನು ಈ ಅಪರಾತ್ರಿ ಸಮಯದಲ್ಲಿ ಸದ್ರಿ ಸ್ಥಳದಲ್ಲಿ ಕತ್ತಲೆಯಲ್ಲಿ ಅವಿತಿದ್ದು, ಈತನ ಚಲನವಲನದಿಂದ ಇವನು ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಸದ್ರಿ ಸಿಟಿ ಸೆಂಟರ್ ಬಳಿ ಇರುವ ಅಂಗಡಿಗಳ ಬಾಗಿಲ ಬೀಗ ಮುರಿಯಲು ಹೊಂಚು ಹಾಕುತ್ತಿದ್ದಾನೆಂಬ ಬಲವಾದ ಸಂಶಯಬಂದಿದ್ದು ಆರೋಪಿತರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ.
.
Barke PS
ಪಿರ್ಯಾದಿ Shruthi S kamath ದಿನಾಂಕ: 17-02-2023 ರಂದು ಬೆಳಿಗ್ಗೆ ಸುಮಾರು 08-40 ಗಂಟೆಗೆ ಪಿರ್ಯಾದಿದಾರಿಗೆ ಸೇರಿದ ದಾರಿಯಲ್ಲಿ ನಿಂತುಕೊಂಡಿರುವಾಗ ಆರೋಪಿಗಳಾದ ವೈಲೆಟ್ ಸೀಕ್ವೇರಾ, ಸರಿತಾ ಸೀಕ್ವೇರಾ, ಜನಿಟಾ ಸೀಕ್ವೇರಾ, ಮತ್ತು ಅವರ ಕೆಲಸದವರು ಏಕಾಏಕಿ ಪಿರ್ಯಾದಿದಾರರು ಇದ್ದದನ್ನು ನೋಡಿ ಆರೋಪಿಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಮೈಮೇಲೆ ಕಲ್ಲು ಬಿಸಾಡಿದ್ದು ಒಂದು ಕಲ್ಲು ಪಿರ್ಯಾದಿದಾರರ ಎಡ ಕಾಲಿಗೆ ತಾಗಿದ್ದು, ಆರೋಪಿಗಳು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಾದ ಬೇವರ್ಶಿ, ನಾಯಿ ಎಂಬಿತ್ಯಾದಿ ಬೈದು ಕೊಲಿನಿಂದ ಹೊಡೆಯಲು ಹೋಗಿ ನಿಂದಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.
CEN Crime PS
ಪಿರ್ಯಾದಿ ದಿನಾಂಕ: 07/04/2023 ರಂದು ಇನ್ ಸ್ಟಾಗ್ರಾಮ್ ನಲ್ಲಿ ಪಾರ್ಟ್ ಟೈಮ್ ಜ್ಯಾಬ್ ಬಗ್ಗೆ ಜಾಹಿರಾತು ನೋಡಿದ್ದು ಜಾಹಿರಾತಿನ ಮೇಲೆ ಕ್ಲಿಕ್ ಮಾಡಿದಾಗ ನೇರವಾಗಿ ವಾಟ್ಸಪ್ ನಲ್ಲಿ ಓಪನ್ ಆಗಿದ್ದು ಅದರಲ್ಲಿ 10 ಟಾಸ್ಕ್ ಗಳನ್ನು ಆಡುವಂತೆ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಹೇಳಿರುತ್ತಾರೆ. ಅದರಂತೆ ಪಿರ್ಯಾದಿದಾರರು ಒಂದರನಂತರ ಒಂದು ಟಾಸ್ಕ್ ಆಡಿದ್ದು ಪ್ರಥಮ ಟಾಸ್ಕ್ 200 ರೂ.ಆಗಿರುತ್ತದೆ.ನಂತರದಲ್ಲಿ ಪಿರ್ಯಾದಿದಾರರು ಹಂತ ಹಂತವಾಗಿ ಪೋನ್ ಪೇ ಮೂಲಕ 81,995/-ರೂ ಗಳು ಹಾಗೂ ನೆಫ್ಟ್ ಮೂಲಕ 22,512/-ರೂ ಒಟ್ಟು 1,04,707/-ರೂ ಗಳನ್ನು ಹಂತ ಹಂತ ವಾಗಿ ತಮ್ಮ ಕರ್ನಾಟಕ ಮತ್ತು ಕೆನರಾ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಯ ಯೆಸ್ ಬ್ಯಾಂಕ್ ಖಾತೆ ಸಂಖ್ಯೆ 012563300006091 ನಂಬ್ರಗೆ ಮೋಸದಿಂದ ಹಣ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಸದ್ರಿ ಹಣವನ್ನು ಹಿಂಪಡೆಯುವ ಬಗ್ಗೆ ಕ್ರಮಕೈಗೊಳ್ಳುವಂತೆ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿ ಎಂಬಿತ್ಯಾದಿ.
CEN Crime PS
ಪಿರ್ಯಾದಿ ಮಂಗಳೂರಿನ ಬಲ್ಲಾಳ್ ಭಾಗ್ ಬ್ರಾಂಚಿನಲ್ಲಿ ಐ.ಡಿ.ಎಫ್.ಸಿ ಖಾತೆ ಸಂಖ್ಯೆ ನೇ ದನ್ನು ಹೊಂದಿರುತ್ತಾರೆ. ಪಿರ್ಯಾದಿದಾರರು ಸುಮಾರು 7 ವರ್ಷಗಳಿಂದ ತನ್ನ ಫೇಸ್ ಬುಕ್ ಖಾತೆ ಯನ್ನು ಉಪಯೋಗಿಸುತ್ತಿದ್ದು ದಿನಾಂಕ:19-04-2023 ರಂದು ಬೆಳಿಗ್ಗೆ ಸಮಯ ಸುಮಾರು 9.30 ಸಮಯಕ್ಕೆ ಫೇಸ್ ಬುಕ್ ನೋಡುತ್ತಿದ್ದ ಸಮಯ ಫೇಸ್ ಬುಕ್ ನ market place page ನಲ್ಲಿ camera Nikon d5600 price Rs.8500 good condition urgent sale ಎಂಬುದಾಗಿ ಹಾಕಲಾಗಿದ್ದ ಜಾಹೀರಾತನ್ನು ನೋಡಿ ಅದನ್ನು ಕ್ಲಿಕ್ ಮಾಡಿದ ಕೂಡಲೇ ವಾಟ್ಸಪ್ ಪೇಜ್ ಒಂದು ಓಪನ್ ಆಗಿದ್ದು ಮೊಬೈಲ್ ನಂಬರ್ 7430847036 ಎಂದು ಆಗಿರುತ್ತದೆ. ನಂತರ ಪಿರ್ಯಾದಿದಾರರು ತನ್ನ ವಿಳಾಸವನ್ನು ಆತನಿಗೆ ಕಳುಹಿಸಿದ್ದು ತದನಂತರ 7430847036,9777168738,7430847036,7479149430, 7381197595, 7430847036,6370816451ನೇ ಮೊಬೈಲ್ ನಂಬ್ರಗಳಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ಹಲವಾರು ಕಾರಣವನ್ನು ಹೇಳಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ. 1,12,803/- ನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುತ್ತಾರೆ. ನಂತರ ಕ್ಯಾಮೆರಾವನ್ನು ಕಳುಹಿಸಿರುವುದಿಲ್ಲ. ಈ ರೀತಿ ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕ್ಯಾಮೆರಾವನ್ನು ಕಡಿಮೆ ಹಣಕ್ಕೆ ನೀಡುವುದಾಗಿ ನಂಬಿಸಿ ಪಿರ್ಯಾದಿದಾರರ ಐ.ಡಿ.ಎಫ್.ಸಿ ಖಾತೆ ಸಂಖ್ಯೆ ನೇ ದರಿಂದ ಹಂತ ಹಂತವಾಗಿ ಒಟ್ಟು ರೂ. 1,12,803/- ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿ ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ. ಎಂಬಿತ್ಯಾದಿ
Mulki PS
ಪಿರ್ಯಾದಿ Abdul Rahaman Shahil KA-19-EV-0431 ನೇ ನೊಂದಣಿ ಸಂಖ್ಯೆಯ KTM RC-200 ಬೈಕನ್ನು ಹೊಂದಿದ್ದು ದಿನಾಂಕ:19-04-2023 ರಂದು ಪಿರ್ಯಾದಿದಾರರು ತನ್ನ ಬೈಕಿನಲ್ಲಿ ಸುರತ್ಕಲ್ ಗೆ ಹೋಗಿ ಬಂದು ರಾತ್ರಿ 9-30 ಗಂಟೆಗೆ ಬೈಕನ್ನು ಹಳೆಯಂಗಡಿ ಗ್ರಾಮದ ಸಂತೆ ಕಟ್ಟೆ ಜುಮ್ಮಾ ಮಸೀದಿ ಬಳಿ ಇರುವ ತನ್ನ ಬಾಡಿಗೆ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು ದಿನಾಂಕ:20-04-2023 ರಂದು ಬೆಳಿಗ್ಗೆ 8.00 ಗಂಟೆಗೆ ನೋಡುವಾಗ ಪಿರ್ಯಾದಿದಾರರು ನಿಲ್ಲಿಸಿದ ಸ್ಥಳದಲ್ಲಿ ಬೈಕ್ ಇಲ್ಲದೇ ಕಳವಾಗಿರುತ್ತದೆ. ಕಳವಾದ ಪಿರ್ಯಾದಿದಾರರ ಬೈಕಿನ ಇಂಜಿನ್ ನಂಬ್ರ: 690669247 ಆಗಿದ್ದು ಚಾಸೀಸ್ ನಂಬ್ರ: MD2JYC4G1GC059714 ಆಗಿರುತ್ತದೆ ಮತ್ತು ಕಳವಾದ ಬೈಕಿನ ಅಂದಾಜು ಮೌಲ್ಯ 1 ಲಕ್ಷ ರೂಪಾಯಿ ಆಗಬಹುದು ಎಂಬಿತ್ಯಾದಿಯಾಗಿರುತ್ತದೆ.
Mangalore East Traffic PS
ಪಿರ್ಯಾದಿ ಮೊಹಮ್ಮದ್ ಅನೀಸ್ ರವರು ದಿನಾಂಕ 19-04-2023 ರಂದು ರಂದು ರಾತ್ರಿ ತನ್ನ ಸ್ನೇಹಿತ ತೌಸೀಫ್ ಎಂಬಾತನೊಂದಿಗೆ KA-10-E-9418 ನೊಂದಣಿ ನಂಬ್ರ ಮೋಟಾರ್ ಸೈಕಲಿನಲ್ಲಿ ಹಿಂಬದಿ ಸಹ ಸವಾರನಾಗಿ ಕುಳಿತುಕೊಂಡು ಕಂಕನಾಡಿ ಕಡೆಯಿಂದ ಪಳ್ನೀರ್ ಮಾರ್ಗವಾಗಿ ಹಂಪನಕಟ್ಟೆ ಕಡೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 10.45 ಗಂಟೆಗೆ ಫಳ್ನೀರ್ ನಲ್ಲಿರುವ ವೆಸ್ಟ್ ಗೇಟ್ ಪ್ರೈಡ್ ಕಟ್ಟಡದಲ್ಲಿರುವ ಸಂಜೀವಿನಿ ಕ್ಲಿನಿಕ್ ಎದುರು ತಲುಪುತ್ತಿದ್ದಂತೆ KA-20-N-1656 ನೊಂದಣಿ ನಂಬ್ರದ ಕಪ್ಪು ಬಣ್ಣದ ಇನೋವಾ ಕಾರನ್ನು ಅದರ ಚಾಲಕ ಆರೀಝ್ ಮೊಹಮ್ಮದ್ ಶಬು ಎಂಬಾತನು ಒಮ್ಮೇಲೆ ಭಾರತ್ ಪೆಟ್ರೋಲ್ ಬಂಕ್ ಒಳಗಿನಿಂದ ವೆಸ್ಟ ಗೇಟ್ ಪ್ರೈಡ್ ಕಟ್ಟಡದ ಪಕ್ಕದಲ್ಲಿ ಹಾದು ಹೋಗಿರುವ ಒಳರಸ್ತೆ ಕಡೆಗೆ ಹೋಗಲು ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ರಸ್ತೆಯ ಮದ್ಯದಲ್ಲಿ ನಿಲ್ಲಿಸಿದಂತೆ ಮಾಡಿ ಒಮ್ಮೇಲೆ ಒಳ ರಸ್ತೆಗೆ ಕಡೆಗೆ ಮುನ್ನುಗ್ಗಿಸಿ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಅಪಘಾತವನ್ನು ತಪ್ಪಿಸಲು ದೂರದಿಂದಲೇ ಬ್ರೇಕ್ ಹಾಕಿದರೂ ನಿಯಂತ್ರಣಕ್ಕೆ ಬಾರದೇ ಕಾರಿನ ಎಡ ಹಿಂಬದಿಯ ಡೋರ್ ಗೆ ಢಿಕ್ಕಿಯಾಗಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಹಾಗೂ ಆತನ ಸ್ನೇಹಿತ ತೌಸೀಫ್ ಎಂಬಾತನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ತೌಸೀಫ್ ಎಂಬಾತನ ತಲೆಯ ಮುಂಭಾಗ ಎಡಭಾಗದಲ್ಲಿ ಚರ್ಮ ಹರಿದ ರಕ್ತಗಾಯ, ಎಡಕೈ ಕೋಲು ಕೈಗೆ, ಬಲಕೈಗೆ ತರಚಿದ ರಕ್ತಗಾಯ ಮತ್ತು ಎಡಕೆನ್ನೆಗೆ ಗುದ್ದಿದ ಗಾಯ ಹಾಗೂ ಬಲ ಬದಿಯ ಕಣ್ಣಿನ ಹುಬ್ಬಿಗೆ ಚರ್ಮ ಹರಿದ ರಕ್ತಗಾಯವಾಗಿದ್ದು, ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಪಿರ್ಯಾದಿದಾರರಿಗೆ ಎಡ ಹುಬ್ಬಿನ ಬಳಿ ಚರ್ಮ ಹರಿದ ರಕ್ತಗಾಯ ಮತ್ತು ಸೊಂಟದ ಬಲಬದಿಗೆ ಮತ್ತು ಬಲತೊಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಸದ್ರಿ ಅಪಘಾತಕ್ಕೆ KA-20-N-1656 ನಂಬ್ರದ ಕಾರು ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ.
Traffic North Police Station
ಪಿರ್ಯಾದಿ ಧನುಷ್ (22 ವರ್ಷ) ರವರು ದಿನಾಂಕ: 19-04-2023 ರಂದು ಅವರ ಬಾಬ್ತು KA-19-EW-6450 ನಂಬ್ರದ ಮೋಟಾರ್ ಸೈಕಲಿನಲ್ಲಿ ಅವರ ಸ್ನೇಹಿತ ಅರುಣ್ ರಾಜ್ ಎಂಬಾತನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿಗೆ ಹೋದವರು ವಾಪಾಸು ಮನೆ ಕಡೆಗೆ ಬರುತ್ತಾ ರಾತ್ರಿ ಸಮಯ ಸುಮಾರು 8:40 ಘಂಟೆಗೆ ಕಿನ್ನಿಗೋಳಿ ಪದ್ಮನೂರು ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಆಟೋರಿಕ್ಷಾ ಒಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಈ ಅಪಘಾತದಿಂದ ಪಿರ್ಯಾದಿದಾರರಾದ ಧನುಷ್ ರವರಿಗೆ ಬಲಕಾಲಿನ ಮಣಿಗಂಟಿನ ಕೆಳಗೆ ಕೋಲು ಕಾಲಿಗೆ ಮೂಳೆ ಮುರಿತದ ತೀವ್ರ ಸ್ವರೂಪದ ರಕ್ತಗಾಯ, ಬಲಕಾಲು ಪಾದದ ಬಳಿ, ಬಲಭುಜ ಹಾಗೂ ಬಲಕೈಗೆ ಮತ್ತು ಎಡಕೈ ತಟ್ಟಿಗೆ ತರಚಿದ ಗಾಯ ಹಾಗೂ ಸಹಸವಾರ ಅರುಣ್ ರಾಜ್ ರವರಿಗೆ ಬಲಕಾಲು ಪಾದದ ಬೆರಳಿನ ಬಳಿ ರಕ್ತಗಾಯ, ಬಲಕಾಲು ಕೋಲು ಕಾಲಿಗೆ ಬಲಗೈ ಭುಜಕ್ಕೆ, ಬಲಕೈ ಮಣಿಗಂಟಿನ ಬಳಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಅಪಘಾತ ಪಡಿಸಿದ ಆಟೋ ರಿಕ್ಷಾ ಚಾಲಕ ಅಪಘಾತ ಸ್ಥಳದಲ್ಲಿ ಆಟೋರಿಕ್ಷಾವನ್ನು ನಿಲ್ಲಿಸದೇ ಅಪಘಾತ ಸ್ಥಳದಿಂದ ಪರಾರಿಯಾಗಿದ್ದು ಆಟೋರಿಕ್ಷಾ ನೋಂದಣಿ ನಂಬ್ರ ತಿಳಿದು ಬಂದಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.
Traffic North Police Station
ಪಿರ್ಯಾದಿ Vishwanatha N ದಿನಾಂಕ: 19-04-2023 ರಂದು ಮೇಲಾಧಿಕಾರಿಗಳ ಆದೇಶದಂತೆ ಇಲಾಖಾ ಸಮವಸ್ತ್ರ ಧರಿಸಿಕೊಂಡು ಪಾಯಿಂಟ್ ಸಿಬ್ಬಂದಿಗಳಾದ ಪಿಸಿ ದೂಳಪ್ಪ ಮತ್ತು ಪಿಸಿ ಸಣ್ಣ ಕಲ್ಲಪ್ಪ ರವರೊಂದಿಗೆ ಕರ್ತವ್ಯದಲ್ಲಿದ್ದ ಸಮಯ ಮದ್ಯಾಹ್ನ ಸುಮಾರು 12:39 ಘಂಟೆಗೆ KA-19-HG-9992 ಸ್ಕೂಟರ್ ಸವಾರನು ಸ್ಕೂಟರಿನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಸುರತ್ಕಲ್ ಸರ್ವೀಸ್ ರಸ್ತೆ ಕಡೆಯಿಂದ ಮಂಗಳೂರು ರಾಹೆ 66ರ ಕಡೆಗೆ ಸವಾರ ಹಾಗೂ ಸಹಸವಾರರ ಇಬ್ಬರೂ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಸ್ಕೂಟರ್ ಚಲಾಯಿಸುವುದನ್ನು ಕಂಡು ನಾನು ಮೋಬೈಲಿನಲ್ಲಿ ಫೋಟೋ ತೆಗೆದು ಅವರಿಗೆ ನಿಲ್ಲಿಸಲು ಕೈಯಿಂದ ಸನ್ನೆ ಮಾಡಿದಾಗ ಸ್ಕೂಟರ್ ಸವಾರನ ಹಿಂಬದಿ ಕುಳಿತಿದ್ದ ಸಹಸವಾರ ಹೋಗು ಹೋಗು ನಿಲ್ಲಿಸುವುದು ಬೇಡ ಎಂದು ಸವಾರನಿಗೆ ಪ್ರಚೋದನೆ ಮಾಡಿದ್ದು ನಂತರ ಸ್ಕೂಟರನ್ನು ಠಾಣಾ ಸಿಬ್ಬಂಧಿಗಳ ಸಹಾಯದಿಂದ ತಡೆದು ನಿಲ್ಲಿಸಿದಾಗ ಸ್ಕೂಟರ್ ಸವಾರ ನನ್ನನ್ನು ಉದ್ದೇಶಿಸಿ ಬೊಬ್ಬೆ ಹಾಕುತ್ತಾ ನೀನು ನನಗೆ ಏನು ಮಾಡಲು ಸಾದ್ಯ ನನ್ನ ಬೆಲೆ ನಿಮಗೆ ಗೊತ್ತಿದೆಯಾ ನಾನು ಯಾರು ಎಂದು ತೊರಿಸಿಕೊಳ್ಳುತ್ತೇನೆ ನಾನು ವಾಹನದ ಒಂದು ನೋಂದಣಿ ನಂಬರಿಗೆ 70 ಸಾವಿರ ಕೊಟ್ಟು ಪಡೆದುಕೊಳ್ಳುವವ ನನಗೆ ನೀವು ಯಾವ ಲೆಕ್ಕ ನೀವು ಮಾಡುವುದನ್ನು ಮಾಡಿ ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ದುರ್ವರ್ತನೆ ತೋರಿರುತ್ತಾರೆ ನಂತರ ಸವಾರನ ಹೆಸರು ಕೇಳಲಾಗಿ ಸವಾರನ ಹೆಸರು ಮೊಹಮ್ಮದ್ ಶರೀಫ್ ಸಿದ್ದಕಿ ಹಾಗೂ ಸಹಸವಾರನ ಹೆಸರು ಅಲಿ ಎಂಬುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ ಸಾರಾಂಶ.