ಅಭಿಪ್ರಾಯ / ಸಲಹೆಗಳು

Crime report in Mulki PS  

ಪಿರ್ಯಾದಿ ಅಶೋಕ್ ರವರ ಮಗಳು ದುರ್ಗಾಶ್ರೀ ಪ್ರಾಯ:20 ವರ್ಷ ಎಂಬವರು ಎಂದಿನಂತೆ ದಿನಾಂಕ:15-06-2023 ರಂದು ಮನೆಯಿಂದ ಬೆಳಿಗ್ಗೆ 08:30 ಗಂಟೆಗೆ ಫಿರ್ಯಾಧಿದಾರರ ಜೊತೆ ಆಕ್ಟೀವಾದಲ್ಲಿ 08:40 ಗಂಟೆಗೆ ಎಸ್ ಕೋಡಿ ವರೆಗೆ ಬಂದು ಅಲ್ಲಿಂದ ಕಟೀಲು ಕಾಲೇಜಿಗೆ ಹೋಗುತ್ತೇನೆಂದು ಹೋದವಳು ಈ ವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿವುದಾಗಿದೆ.

ಕಾಣೆಯಾದವರ ಚಹರೆ:-

ಹೆಸರು: ದುರ್ಗಾಶ್ರೀ,

ಪ್ರಾಯ: 20 ವರ್ಷ

ಎತ್ತರ:   5 ಅಡಿ

ಮೈಬಣ್ಣ: ಬಿಳಿ ಮೈ ಬಣ್ಣ 

ಮೈಕಟ್ಟು:  ದೃಢಕಾಯ ಶರೀರ

ಧರಿಸಿದ ಬಟ್ಟೆ: ಆಕಾಶ ನೀಲಿ ಬಣ್ಣದ ಕಟೀಲು ಪದವಿ ಕಾಲೇಜಿನ ಯೂನಿಫಾರ್ಮ್ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕೋಟ್ ಧರಿಸಿದ್ದರು

ಗೊತ್ತಿರುವ ಭಾಷೆ: ಕನ್ನಡ,ತುಳು ಮತ್ತು ಇಂಗ್ಲೀಷ್

CEN Crime PS

ದಿನಾಂಕ: 13-06-2023 ರಂದು ಪಿರ್ಯಾದಿದಾರರ ಮೊಬೈಲ್ ನಂಬ್ರ.  ಕ್ಕೆ ಮೊಬೈಲ್ ನಂ. 7451970874 ನೇದ್ದರಿಂದ  ಯಾರೋ  ಅಪರಿಚಿತ ಮಹಿಳೆ ಕರೆ ಮಾಡಿ  ತಾವು   www.fashionindiahub.com  ನಿಂದ ಕರೆ ಮಾಡಿರುವುದಾಗಿ  ಪರಿಚಯಿಸಿಕೊಂಡು ಒಂದು ಶೇ40 ರಷ್ಟು ಆಫರ್ ನೀಡುವುದಾಗಿ ತಿಳಿಸಿದಂತೆ  ಪಿರ್ಯಾದಿದಾರರು ಮೊದಲಿಗೆ  ರೂ.899/- ಮೊತ್ತದ  ವಾಚ್ ನ್ನು  ಆರ್ಡರ್ ಮಾಡುವಂತೆ ಆಕೆಗೆ ತಿಳಿಸಿದಾಗ ಅದಕ್ಕಾಗಿ ಆಕೆಯು  ಮೊದಲಿಗೆ  ರೂ.899/-ಹಣವನ್ನು  ಪಾವತಿಸುವಂತೆ ತಿಳಿಸಿ ಒಂದು  ಕ್ಯೂ ಆರ್ ಕೋಡ್ ಕಳುಹಿಸಿದ್ದು  ಅದರಂತೆ ಪಿರ್ಯಾದಿದಾರರು  ರೂ.899/-ಹಣವನ್ನು  ಪಾವತಿಸಿದ್ದು ಇದಕ್ಕೆ ಪ್ರತಿಯಾಗಿ ಪಿರ್ಯಾದಿದಾರರ ಇಮೇಲ್ ಗೆ info@fashionindiahub.com ನೇ ಇಮೇಲ್ ನಿಂದ ರೂ.899/-ಹಣ ಪಾವತಿಸಿರುವುದಾಗಿ ಹಾಗೂ ಆರ್ಡರ್ ಬುಕ್ ಆಗಿರುವುದಾಗಿ ಸಂದೇಶ ಬಂದಿರುತ್ತದೆ. ತದನಂತರ   APPLE 14 PRO ಮೊಬೈಲ್  ಆಫರ್ ಇರುವುದಾಗಿ ತಿಳಿಸಿದಾಗ ಪಿರ್ಯಾದಿದಾರರು ಅದನ್ನು ಖರೀದಿಸಲು ಆರ್ಡರ್ ಮಾಡುವಂತೆ ಆಕೆಗೆ  ತಿಳಿಸಿದ್ದು ಅದಕ್ಕಾಗಿ ಆಕೆಯು  ಮೊಬೈಲ್ ಆರ್ಡರ್ ಬಿಲ್ ಮಾಡಲು ಜಿ ಎಸ್ ಟಿ ಮೊತ್ತ, ಇನ್ಶುರೇನ್ಸ್ ಮೊತ್ತ ವಿವಿಧ ಕಾರಣಗಳನ್ನು ನೀಡಿ  ರೂ.11,840/-ಹಣವನ್ನು  ಪಾವತಿಸುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಅವರು ನೀಡಿದ   UPI ID.gstlink47259@idfcbank ಇದಕ್ಕೆ  ಪಾವತಿಸಿದ್ದು  ಅನಂತರ  ಅದನ್ನು  ಸ್ವಲ್ಪ ಕಾಲಾವಕಾಶದ ನಂತರ  ರಿಫಂಡ್  ಮಾಡುವುದಾಗಿ ನಂಬಿಸಿ ಅದಕ್ಕಾಗಿ  ಪುನಃ ರೂ.11,840/-ಹಣವನ್ನು   ಮತ್ತೊಂದು  UPI ID:globle6845in@airtel ನೇದ್ದಕ್ಕೆ  ವರ್ಗಾಯಿಸುವಂತೆ ತಿಳಿಸಿದ್ದು  ಅದರಂತೆ ಪಿರ್ಯಾದಿದಾರರು ರೂ.11,840/-ಹಣವನ್ನು ಪಾವತಿಸಿರುತ್ತಾರೆ. ಪಿರ್ಯಾದಿದಾರರಿಗೆ ಕರೆ  ಬಂದಿದ್ದ  ಮೊಬೈಲ್ ಸಂಖ್ಯೆಯು ಈಗಲು ಸಂಪರ್ಕಕ್ಕೆ ಲಭ್ಯವಿದ್ದು  ಪುನಃ  ಕರೆ ಮಾಡಿ ವಿಚಾರಿಸಲಾಗಿ  ಮೊದಲಿನಂತೆಯೆ ಹಣವನ್ನು ಪಾವತಿಸುವಂತೆ  ತಿಳಿಸುತ್ತಿದ್ದು,   ಈ ರೀತಿ ಪಿರ್ಯಾದಿದಾರರಿಂದ  ಒಟ್ಟು  ರೂ.24,579/-ಹಣವನ್ನು ಗೂಗಲ್ ಪೇ ಮುಖೇನ   ವರ್ಗಾಯಿಸಿಕೊಂಡಿದ್ದು  ನಂತರ ಪಿರ್ಯಾದಿದಾರರಿಗೆ ಇದು ಒಂದು  ವಂಚನೆಯ ಜಾಲವೆಂದು ತಿಳಿದ್ದುಬಂದಿರುತ್ತದೆ.  ಎಂಬಿತ್ಯಾದಿಯಾಗಿದೆ.

Mangalore North PS                                  

 ಪಿರ್ಯಾದಿ TENZIN WANGMO ದಾರರು ದಿನಾಂಕ 19.06.2023 ರಂದು ಸುಮಾರು 16.00 ಗಂಟೆಗೆ ತಮ್ಮ ಬಾಬ್ತು KA-19 –HH-9663 ನೇ ನಂಬ್ರ ಹೊಂಡಾ ಕಂಪನಿಯ ಡಿಯೋ ಸ್ಕೂಟಿಯನ್ನು ಮಂಗಳೂರಿನ ಕೆ ಎಸ್ ಠಾವ್ ರಸ್ತೆಯ ಸಿಟಿಸೆಂಟರ್ ಎದುರು ಇರುವ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಬಳಿ ಪಾರ್ಕ್ ಮಾಡಿ ಸಿಟಿಸೆಂಟರ್ ಮಾಲ್ ಗೆ ತೆರಳಿದ್ದು ವಾಪಾಸ್ಸು ಸುಮಾರು 17.00 ಗಂಟೆಯ ವೇಳೆಗೆ ತಾವು ಪಾರ್ಕ್ ಮಾಡಿದ ಸ್ಕೂಟರ್ ಬಳಿ ಬಂದಾಗ ಸದ್ರಿ ಸ್ಥಳದಲ್ಲಿ ಡಿಯೋ ಹೋಂಡಾ ಸ್ಕೂಟಿ ಅಲ್ಲಿರದೇ ಇದ್ದು ನಂತರ ಎಲ್ಲಾ ಕಡೆ ಹುಡುಕಾಡಿದರೂ  ಸಿಗದೇ ಇದ್ದುದರಿಂದ  ಪಿರ್ಯಾದಿದಾರರ   KA-19 –HH- 9663 ನೊಂದಣಿ ನಂಬ್ರದ  ಹೋಂಡಾ ಕಂಪನಿಯ ಡಿಯೋ ಸ್ಕೂಟರ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ತಾನು  ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

ಕಳವಾದ ಮೋಟಾರ್ ಸೈಕಲ್  ನ ವಿವರಗಳು ಈ ಕೆಳಗಿನಂತಿದೆ:

KA-19 –HH- 9663 ನೊಂದಣಿ ನಂಬ್ರದ  ಹೋಂಡಾ ಕಂಪನಿಯ  ಡಿಯೋ ಮಾಡೆಲ್ 2021 ನಸು ಬೂದು ಬಣ್ಣ ,ಅಂದಾಜು ಮೌಲ್ಯ ರೂ. 80,000/-

ಇಂಜಿನ್ ನಂಬ್ರ:JF98EG1129244 ಚಾಸಿಸ್ ನಂಬ್ರ: ME4JF984KMG095122 ಆಗಿರುತ್ತದೆ.

 

 

 

Moodabidre PS

ದಿನಾಂಕ 20.06.2023 ರಂದು ಪಿರ್ಯಾದಿ ಅಜ್ಮಲ್ ದಾರರು ತನ್ನ ತಂದೆಯೊಂದಿಗೆ ಕೆ.ಎ 21 ಝಡ್ 4381 ನೆ ಮೊಟಾರ್ ಸೈಕಲ್ ನಲ್ಲಿ ಮಂಗಳೂರು ರೆಸ್ಟೋರೆಂಟ್ ಗೆ ಬರುತ್ತಿದ್ದಾಗ ಹಿಂದಿನಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಸಿನಾನ್ ಎಂಬಾತನು ಲಾಡಿ ಆಯಿಶಾ ಮಸೀದಿ ಹತ್ತಿರ ಅಡ್ಡ ಪಡಿಸಿದ್ದು, ಆಗ ಪಿರ್ಯಾದಿದಾರರು ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರು ರೆಸ್ಟೋರೆಂಟ್ ಗೆ ಬಂದಾಗ ಸಂಜೆ 05.35 ಗಂಟೆಗೆ ಸಿನಾನ್ ನು ತನ್ನ ಸ್ಕೂಟರ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಏಕಾಏಕಿ ಹೊಡೆಯಲು ಬಂದಾಗ ಪಿರ್ಯಾದಿದಾರರು ಬಿಡಿಸಲು ಮುಂದಾಗಿದ್ದು, ಆ ಸಮಯ ಸಿನಾನ್, ಹಸೈನಾರ್ ಮತ್ತು ಸಿರಾಜ್ ಎಂಬುವರು ಪಿರ್ಯಾದಿದಾರರನ್ನು ಹೋಟೆಲ್ ನಿಂದ ಹೊರಗಡೆ ಎಳೆದುಕೊಂಡು ಬಂದು ಬೈದು ಕೈಯಿಂದ ಹೊಡೆದಿದ್ದು, ಆಗ ಬಿಡಿಸಲು ಬಂದ ಪಿರ್ಯಾದಿದಾರರ ತಂದೆಯವರನ್ನು ಮುನ್ನ ಎಂಬಾತನು ಹಿಡಿದುಕೊಂಡು ಹೊಟೇಲ್ ಕಡೆಗೆ ಹೋಗಿದ್ದು ನಂತರ ಹೊಟೇಲ್ ನಲ್ಲಿದ್ದ ನೌಶಾದ್, ಮಹಿಯಾ ಮತ್ತು ಇರ್ಫಾನ್ ರವರುಗಳು ಬಂದು ಗಲಾಟೆಯನ್ನು ಬಿಡಿಸದೆ ಗಲಾಟೆಗೆ ಕುಮ್ಮಕ್ಕು ನೀಡಿರುತ್ತಾರೆ ಎಂಬಿತ್ಯಾದಿ

Kankanady Town PS                              

ಪಿರ್ಯಾದು Sangeetha ರವರು ತಮ್ಮ ಕುಟುಂಬದೊಂದಿಗೆ ಉಡುಪಿಯಲ್ಲಿ ವಾಸವಾಗಿದ್ದು ಮನೆವಾರ್ತೆ ಕೆಲಸಮಾಡಿಕೊಂಡಿದ್ದು. ಪಿರ್ಯಾದುದಾರರ ಅಣ್ಣ ಸಹನ್ 28 ವರ್ಷ ರವರು, ಬಿಜೈ, ಮಂಗಳೂರು ಎಂಬಲ್ಲಿ ಖಾಸಗೀ ಸಂಸ್ಥೆಯಲ್ಲಿ ಕಳೆದ ಒಂದು ತಿಂಗಿಳಿನಿಂದ ಕೆಲಸ ಮಾಡುತ್ತಿದ್ದು,  ಮೇರಿಹೀಲ್ ನಲ್ಲಿ ಸಂಸ್ಥೆಯ  ರೂಮ್ ನಲ್ಲಿ ಸಂದೀಪ್ ಎಂಬುವವರೊಂದಿಗೆ ಉಳಿದುಕೊಂಡಿರುತ್ತಾರೆ. ಸಹನ್ ಗೆ ವಿಪರೀತ ಕುಡಿತದ ಚಟ ಹೊಂದಿದ್ದು ಸಹನ್ ರವರು ಕೆಲಸ ಮುಗಿದ ನಂತರ ಸಂಜೆ ಪೋನ್ ಮಾಡಿ ಪಿರ್ಯಾದುದಾರರೊಂದಿಗೆ ಮಾತಾನಾಡುತ್ತಿದ್ದರು. ದಿನಾಂಕ 17-06-2023 ರಂದು ಕೆಲಸಕ್ಕೂ ಹೋಗದೆ, ರೂಮ್ ನಲ್ಲಿಯೂ ಇರದೇ ಅದೇ ದಿನ ಸಂಜೆ ಸುಮಾರು 7:00 ಗಂಟೆಗೆ ರೂಮ್ ಗೆ ಬಂದು ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ಹೋಗುವುದಾಗಿ ರೂಮೆಟ್ ಸಂದೀಪ್ ರವರು ತಿಳಿಸಿ ಹೋಗಿದ್ದು. ಮನೆಗೆ ಬಾರದೆ ಇದ್ದು  ಸಹನ್ ರವರ ಮೊ ನಂ  ನೇ ದಕ್ಕೆ ಪೋನ್ ಕರೆ ಮಾಡಿದ್ದಲ್ಲಿ ಸ್ವೀಚ್ಡ್ ಆಪ್ ಆಗಿದ್ದು ಪಿರ್ಯಾದುದಾರರು ಎಲ್ಲ ಕಡೆಗೂ ಹುಡುಕಾಡಿ ಸಂಬಂಧಿಕರ ಮನೆಯಲ್ಲಿ ವಿಚಾರಿಸಿಕೊಂಡು ಎಲ್ಲಿಯೂ ಪತ್ತೆಯಾಗದೆ.  ಇರುವುದ್ದರಿಂದ ದೂರು ನೀಡಿರುವುದಾಗಿ ಎಂಬಿತ್ಯಾದಿ. 

ಚಹರೆ/ಗುರುತು:

ಹೆಸರು: ಸಹನ್

ಪ್ರಾಯ: 28 ವರ್ಷ

ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಾಧರಣ ಮೈ ಕಟ್ಟು, ಕೈ ಯಲ್ಲಿ ಓಂ ಟ್ಯಾಟೋ, ಕಪ್ಪು ತಲೆಕೂದಲು, ತೆಳು ಗಡ್ಡ ಮತ್ತು ಮೀಸೆ ಇರುತ್ತದೆ.

ಧರಿಸಿದ ಬಟ್ಟೆ: ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್, ನಸು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್

ಭಾಷೆ: ಕನ್ನಡ, ತುಳು & ತಮಿಳು

ಕೆಲಸ: ಆಟೋಮ್ಯಾಟ್ರೀಕ್ಸ್, ಟಾಟಾ ಮೋಟಾರ್ಸ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ (ಬಿಜೈ, ಮಂಗಳೂರು)

 

 

 

 

 

 

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080