ಅಭಿಪ್ರಾಯ / ಸಲಹೆಗಳು

 

 Crime Report in Mangalore North PS                                                  

ಪಿರ್ಯಾದಿದಾರರಾದ ಅಕ್ಷಯ  ಕುಮಾರ್ ಪಿ ಕೆ ಎಂಬುವರು ಮಂಗಳುರು ನಗರದ ಭವಂತಿ ಸ್ಟ್ರೀಟ್ ಎಂಬಲ್ಲಿ ದೂಜ ಪೂಜಾರಿ & ಕೋ ಎಂಬ ಕಂಪನಿ ನಡೆಸಿಕೊಂಡು ಬರುತ್ತಿದ್ದು,ಎಂದಿನಂತೆ ದಿನಾಂಕ:20-07-2023 ರಂದು ವ್ಯಾಪಾರ ಮುಗಿಸಿ ಅಂಗಡಿಯನ್ನು ಬಂದು ಮಾಡಿ ತನ್ನ ಮನೆಗೆ ಹೋಗಿದ್ದು, ದಿನಾಂಕ:21-07-2023 ರಮದು 08-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಿಗೆ ಪರಿಚಯದವರು ಫೋನ್ ಮಾಡಿ ಅಂಗಡಿಯ ಬೀಗವನ್ನು ಒಡೆದಿರುತ್ತಾರೆ.ಎಂಬುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ತನ್ನ ಅಂಗಡಿಗೆ ಬಂದಾಗ ಅಂಗಡಿಯ ಶೆಟರ್ ಬಾಗಿಲಿನ ಬೀಗವನ್ನು ಒಡೆದು ಎದುರುಗಡೆ ಇದ್ದ ಗ್ಲಾಸನ್ನು ತುಂಡರಿಸಿ ಒಳ ಪ್ರವೇಶಿಸಿ ಡ್ರವರ್ ನಲ್ಲಿದ್ದ ಸುಮಾರು 20 ಸಾವಿರ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು,ಅಂಗಡಿಗೆ ಪ್ರವೇಶಿಸಿದ ಆರೋಪಿಯನ್ನು ಪತ್ತೆ ಹಚ್ಚಬೇಕಾಗಿ ಪಿರ್ಯಾದಿ.

Kavoor PS

ಪಿರ್ಯಾದಿ NISHMITHA PERRAO ದಾರಿಗೆ  ಲಾಯಿಡ ಡೆಸ್ ಎಂಬವನು ಮದುವೆಯಾಗುತ್ತೇನೆ ಎಂದು ಹೇಳಿದ್ದರಿಂದ ಪಿರ್ಯಾದಿದಾರರು ಆಪಾದಿತ ಲಾಯಿಡ ಡೆಸ್ ರವರ ಮನೆಯಲ್ಲಿ ವಾಸವಾಗಿದ್ದು ದಿನಾಂಕ 20.07.2023 ರಂದು ಪಿರ್ಯಾದಿದಾರರು ಆಪಾದಿತ  ಲಾಯಿಡ ಡೆಸ್ ರವರ ಮನೆಯಲ್ಲಿರುವಾಗ ಸಾಯಂಕಾಲ 4:00ಗೆ  ಆಪಾದಿತನು ಕುಡಿದು ಬಂದು ಪಿರ್ಯಾದಿದದಾರರಿಗೆ ಕೈಯಿಂದ ದೂಡಿ ತಲೆ ಕೂದಲು ಹಿಡಿದು ಎಳೆದಾಡಿ ಕಬ್ಬಿಣದ ಮಂಚಕ್ಕೆ ಗುದ್ದಿ ತಲೆಗೆ ಗಾಯ ಉಂಟು ಮಾಡಿರುತ್ತಾರೆ ಈ ಸಮಯ ಆಪಾದಿತನ ತಾಯಿ ಲೂಸಿ ಡೆಸ ರವರು ಚಪಾತಿ ಮಾಡುವ ಲಟ್ಟಣಿಗೆಯನ್ನು ತಂದಿದ್ದು ಆಪಾದಿತ  ಲಾಯಿಡ ಡೆಸ್ ರವರೊಂದಿಗೆ ಸೇರಿ ಪಿರ್ಯಾದಿದಾರರ ಎಡಗೈಗೆ ಹೊಡೆದು ಇಬ್ಬರು ಸೇರಿ ಪಿರ್ಯಾದಿದಾರರಿಗೆ ಹೊಡೆಯುವ ಸಮಯ " ಬ್ಯಾವರ್ಸಿ ರಂಡೆ" ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಆದ್ದರಿಂದ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

Urva PS

ದಿನಾಂಕ: 20-07-2023 ರಂದು 19-00 ಗಂಟೆಗೆ 19-45  ಗಂಟೆಗೆ ಠಾಣಾ ವ್ಯಾಪ್ತಿಯ ಚಿಲಿಂಬಿ ಸೊರಕೆ ಪಿಡೊರಾ ಅಪಾರ್ಟಮೆಂಟ್ ಬಳಿ  ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ,    ವೈಶಾಕ್ ಶಾಜಿ. ಪ್ರಾಯ: 35 ವರ್ಷ, ವಾಸ:  ಮಿಸ್ಟಿ ಹಿಲ್, ನವೋದಯ ವಾಯನಶಾಲಾ ರಸ್ತೆ, ನವೂದಯ ಸ್ಟೂಡಿಯೋ ಹತ್ತಿರ, ತೆಂಗು ಅಂಚೆ, ಕಾಕನಾಡು, ಎರ್ನಾಕುಲಂ ಜಿಲ್ಲೆ, ಕೇರಳ ಎಂಬವನನ್ನು   ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಅಭಿಪ್ರಾಯ ವರದಿಯನ್ನು ನೀಡಲು ವೈದ್ಯಾಧಿಕಾರಿಗಳು, ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ಕಳುಹಿಸಿ ವೈದ್ಯಾಧಿಕಾರಿಗಳು ಪರೀಕ್ಷಿಸಿ TETRAHYDRACANNABINOID( MARIJUNA) IS POSITIVE ಎಂದು ವರದಿ ನೀಡಿರುತ್ತಾರೆ. ಆಪಾದಿತ ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿರುತ್ತದೆ. ನಂತರ ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

 

Bajpe PS

ಪಿರ್ಯಾದಿ Mahammad Naseer ದಾರರು ಆಟೋ ಚಾಲಕ/ಮಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20.07.2023 ರಂದು ಪ್ರಯಾಣಿಕರಾದ ಶ್ರೀನಿಧಿ ಎಂಬವರನ್ನು ಕುಪ್ಪೆ ಪದವು ಬಟ್ಟೆ ಅಂಗಡಿಯಿಂದ ಮುತ್ತೂರಿನಲ್ಲಿರುವ ನೋನಾಲ್ ಎಂಬಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಸಂಜೆ ಸಮಯ ಸುಮಾರು 7.15 ಗಂಟೆಗೆ ಮಂಗಳೂರು ತಾಲೂಕು ನೂದೊಟ್ಟಿನ ಹಿದಾಯತ್ ರವರ ಮನೆ ಬಳಿ ಹೋಗುತ್ತಿರುವಾಗ ಶ್ರೀನಿಧಿರವರು ರಿಕ್ಷಾವನ್ನು ನಿಲ್ಲಿಸುವಂತೆ ತಿಳಿಸಿ, ರಿಕ್ಷಾದಲ್ಲಿ ಮಾತನಾಡುತ್ತಿದ್ದಾಗ ಮೂರು ಜನ ಬೈಕಿನಲ್ಲಿ ಬಂದು ತುಳು ಭಾಷೆಯಲ್ಲಿ “ ಮುಲ್ಪ ಈ ದಾದ ಮಲ್ತೊಂದುಲ್ಲ” ಎಂದು ಕೇಳಿದ್ದು, ಅದಕ್ಕೆ ಪ್ಯಾಸೆಂಜರ್ ನಿಲ್ಲಿಸುವಂತೆ ಹೇಳಿರುವುದಾಗಿ ಪಿರ್ಯಾದಿದಾರರು ತಿಳಿಸಿರುತ್ತಾರೆ. ಆಗ ಅವರು ನಿನ್ನ ಪುದರ್ ದಾಯಯ ಎಂದು ಕೇಳಿದ್ದು, ಪಿರ್ಯಾದಿದರರು ತನ್ನ ಹೆಸರು ತಿಳಿಸಿದ್ದು, ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ “ಬ್ಯಾರಿ ನಿಕ್ಕ್ ಹಿಂದುಲ್ನಾ ಪೊನ್ನುಲೇ ಅವೊಡ” ಎಂದು ಹೇಳಿ ಕೈಯಿಂದ ಹೊಡೆದಿದ್ದು, ಆಗ ಪಿರ್ಯಾದಿದಾರರು ರಿಕ್ಷಾವನ್ನು ಚಲಾಯಿಸಿದಾಗ ಆರೋಪಿಗಳು ರಿಕ್ಷಾಕ್ಕೆ ಅಡ್ಡನಿಂತು ಪಿರ್ಯಾದಿದಾರರನ್ನು ರಿಕ್ಷಾದಿಂದ ಎಳೆದು ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಅದೇ ಸಮಯ ಪಿರ್ಯಾದಿದಾರರಿಗೆ ಪರಿಚಯವಿರುವ ಶೇಖರ್ ಎಂಬವನು ರಿತು ಎಂಬಾತನೊಂದಿಗೆ ಆಟೋದಿಂದ ಬಂದು “ನಿನ್ನನ್ನು ಮೂಜಿ ದಿನಡದ ಪೋಲೋ ಮಲ್ತೊಂದುಲ್ಲೆ, ನಿಕ್ಕ್  ತಿರಿಗೆರೆ ಹಿಂದಲ್ನಾ ಪೊನ್ನುಲೆ ಬೋಡ ಬ್ಯಾವರ್ಸಿ, ರಂಡೆ ಮಗ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಾಲಿನಿಂದ ತುಳಿತ್ತಿದ್ದಾಗ, ಪಿರ್ಯಾದಿದಾರರು ಓಡಿ ಹೋಗಲು ಪ್ರಯತ್ನಿಸಿದಾಗ ರೀತು ಎಂಬಾತನು ಅಲ್ಲೇ ಇದ್ದ ಕಲ್ಲಿನಿಂದ, ಜೋರಾಗಿ ಹೊಡೆದ ಕಲ್ಲು ಪಿರ್ಯಾದಿದಾರರ ಎಡ ಪಕ್ಕೆಗೆ ತಾಗಿ ರಕ್ತಗಾಯವಾಗಿರುತ್ತದೆ. ನಂತರ ಚಿತ್ತರಂಜನ್ ಎಂಬವನು “ನಿನ್ನನ್ನು ಇವತ್ತು ಸಾಯಿಸದೇ ಬಿಡುವುದಿಲ್ಲ” ಎಂದು ಹೇಳಿ ದಪ್ಪ ಕಲ್ಲು ತಂದು ಪಿರ್ಯಾದಿದಾರರ ಮೇಲೆ ಹಾಕಲು ಪ್ರಯತ್ನಿಸಿದಾಗ, ಪಿರ್ಯಾದಿದಾರರು ಓಡಿ ಹೋಗಿ ತಪ್ಪಿಸಿಕೊಂಡಿದ್ದು, ಆಗ ಆರೋಪಿಗಳು “ಬೋಳಿ ಮಗನೇ, ನಿನ್ನನ್ನು ದುಂಬುಗುಲ ಬುಡ್ರುಜ್ಜಿ” ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಕಂಕನಾಡಿಯ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಸದ್ರಿ ಘಟನೆಯಿಂದ ಪಿರ್ಯಾದಿದಾರರಿಗೆ ಎಡಪಕ್ಕೆಗೆ ರಕ್ತಗಾಯವಾಗಿದ್ದು, ಮೈಕೈಗೆ ಗುದ್ದಿದ ನೋವಿನ ಗಾಯಗಳಾಗಿರುತ್ತವೆ. ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ಮಾಡಿ, ಬೈದು ಬೆದರಿಕೆ ಹಾಕಿದ ಶೇಖರ್, ಚಿತ್ತರಂಜನ್, ರೀತು ಹಾಗೂ ಇನ್ನಿತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯಲ್ಲಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080