ಅಭಿಪ್ರಾಯ / ಸಲಹೆಗಳು

Crime Report in Mangalore East Traffic PS       

ದಿನಾಂಕ 20-08-2023 ರಂದು ಪ್ರಕರಣದ ಪಿರ್ಯಾದಿದಾರರಾದ ವಿನಯಕುಮಾರ ರವರು (42 ವರ್ಷ) ಪಡುಬಿದರೆಯಿಂದ ಉಳ್ಳಾಲ ಕಡೆಗೆ KA-19-EZ-0201 -ನೇ ನಂಬ್ರದ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಮೋಟಾರು ಸೈಕಲನ್ನು ಪ್ರವೀಣ್ ಎಂಬವರು ಚಲಾಯಿಸುತ್ತ ರಾತ್ರಿ ಸಮಯ ಸುಮಾರು 7:45ಗಂಟೆಗೆ ನಂತೂರು ಕಡೆಯಿಂದ ಜೆಪ್ಪಿನ ಮೋಗರು ಕಡೆಗೆ ಹಾದು ಹೋಗಿರುವ ರಾ.ಹೆ 66 ರಲ್ಲಿ ಪಂಪ್ ವೆಲ್ ಫ್ಲೈ ಓವರ ಮೇಲುಗಡೆಯಿಂದ ಹೋಗುತ್ತಿದ್ದಂತೆ ಹಿಂದಿನಿಂದ ಅಂದರೆ ನಂತೂರು ಕಡೆಯಿಂದ KL-05-AW-3669 ನೇ ನೋಂದಣಿ ನಂಬ್ರದ ಮೋಟಾರು ಸೈಕಲನ್ನು ಮೆಫಿನ್ ಥಾಮಸ್ ಎಂಬವರು ಸವಾರಿ ಮಾಡುತ್ತಾ ಹಿಂಬದಿ ಸವಾರರಾಗಿ ಜೋಬಿನ್ ಥಾಮಸ್ ರವರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷ್ಯತನದಿಂದ ತೀರಾ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಇದ್ದ ಮೋಟಾರು ಸೈಕಲಿಗೆ   ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಪಡಿಸಿದ ಮೋಟಾರು ಸೈಕಲ್ ನಲ್ಲಿದ್ದ ಮೆಫಿನ್ ಥಾಮಸ್, ಜೋಬಿನ್ ಥಾಮಸ್ ರವರು ಹಾಗೂ ವಿನಯ ಕುಮಾರ್ ಮತ್ತು ಪ್ರವೀಣ ಕುಮಾರ್ ರಸ್ತೆ ಮೇಲೆ ಬಿದ್ದಿದ್ದು,  ಮೆಫಿನ್ ಥಾಮಸ್ ರವರು ರಸ್ತೆಗೆ ಬಿದ್ದಾಗ ತಲೆಗೆ ಪೆಟ್ಟಾಗಿ ಸುಮಾರು 35 ಮೀಟರ್ ದೂರದ ವರೆಗೆ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದ್ದು  ಅಪಘಾತವನ್ನು ಕಂಡು ಮೋಟಾರು ಸೈಕಲ್ ಸವಾರನಿಗೆ ಅಪಘಾತ ಉಂಟಾಗಬಾರದು ಎಂಬ ಉದ್ದೇಶದಿಂದ  ಒಮ್ಮೆಲೆ ಬ್ರೇಕ್ ಹಾಕಿ ನಿಲ್ಲಿಸಿದ KL-17-N-9895 ನೇ ನಂಬ್ರದ  ಲಾರಿಯ ಮುಂಬದಿಯ ಚಕ್ರದ ಹತ್ತಿರ ಹೋಗಿ ಬಿದ್ದಿರುತ್ತಾರೆ. ಅಪಘಾತದಲ್ಲಿ ತೀವ್ರತರದಲ್ಲಿ ಗಾಯಗೊಂಡಿದ್ದ ಮೆಫಿನ್ ಥಾಮಸ್ ರವರನ್ನು ಅಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿದ್ದು, ವಿನಯ ಕುಮಾರ, ಪ್ರವೀಣ್ ಮತ್ತು ಜೋಬಿನ್ ಥಾಮಸ್ ರವರಿಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ, ಈ ಅಪಘಾತಕ್ಕೆ ಮೆಫಿನ್ ಥಾಮಸ್ ರವರು ವೇಗವಾಗಿ ಮೋಟಾರು ಸೈಕಲ್ ಚಾಲನೆ ಮಾಡಿದ್ದು ಕಾರಣವಾಗಿರುತ್ತದೆ ಎಂಬಿತ್ಯಾದಿ.

Traffic North Police Station               

ದಿನಾಂಕ 21-08-2023 ರಂದು ಪಿರ್ಯಾದಿ Nikhil Kumar ದಾರರು ತನ್ನ ತಾಯಿ ಹೇಮಲತಾ ಜಿ ಬಂಗೇರ ರವರೊಂದಿಗೆ ನಾಗರ ಪಂಚಮಿ ಪ್ರಯುಕ್ತ ಎರ್ಮಾಳಿಗೆ ಹೋಗಿದ್ದು, ಪೂಜೆ ನಂತರ ವಾಪಾಸ್ಸು ಮನೆಗೆ ಬರುವರೇ ಉಚ್ಚಿಲದಲ್ಲಿ KA-20-D-5481 ನಂಬ್ರದ ವಿಜಯ ಲಕ್ಷ್ಮೀ ಎಂಬ ಬಸ್ಸಿನಲ್ಲಿ ಕುಳಿತು ಮುಕ್ಕದ ಕಡೆಗೆ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 11-45 ಗಂಟೆಗೆ ಮುಕ್ಕಾ ಜಂಕ್ಷನ್ ನಲ್ಲಿ ಬಸ್ಸು ನಿಂತಾಗ ಪಿರ್ಯಾದಿದಾರರು ಬಸ್ಸಿನ ಎದುರು ಬಾಗಿಲಿನಿಂದ ಇಳಿದು, ಅವರ ತಾಯಿ ಹೇಮಲತಾ ರವರು ಅದೇ ಬಾಗಿಲಿನಲ್ಲಿ ಇಳಿಯುತ್ತಿದಂತೆ ಬಸ್ಸ್ನ ಚಾಲಕ ರೋಮಿನ್ ಎಂಬಾತನು ಬಸ್ಸಿನ ನಿರ್ವಾಹಕನ ಸೂಚನೆಗೆ ಕಾಯದೇ ಒಮ್ಮಲೇ ಮುಂದಕ್ಕೆ ಚಲಾಯಿಸಿದ್ದರಿಂದ ಪಿರ್ಯಾದಿದಾರರ ತಾಯಿಯು ಬಸ್ಸಿನಿಂದ ಕೆಳಗೆ ಬಿದ್ದು, ಆ ಸಮಯ ಬಸ್ಸಿನ ಹಿಂಬದಿಯ ಎಡಬಾಗದ ಚಕ್ರವು ಹೇಮಲತಾ ರವರ ಎರಡು ಕಾಲಿನ ಮೇಲೆ ಚಲಿಸಿದ ಪರಿಣಾಮ ಅವರ ಎರಡುಕ ಕಾಲಿನ ಮೊಣಗಂಟಿನ ಕೆಳಗಡೆ, ಮೂಳೆ ಮುರಿತ ತೀರ್ವ ತರಹದ ಗಾಯವಾಗಿದ್ದು, ಅಲ್ಲದೇ ಸೂಂಟಕ್ಕೆ ಗುದ್ದಿದ ರೀತಿಯ ನೋವಾಗಿರುತ್ತದೆ. ಅವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

   

2) ದಿನಾಂಕ 20-08-2023 ರಂದು ಅಪರಿಚಿತ ಸುಮಾರು 45 ವರ್ಷ ಪ್ರಾಯದ ಗಂಡಸು ಕೊಟ್ಟಾರಚೌಕಿಯಿಂದ ಪಣಂಬೂರು ಕಡೆಗೆ ಹಾದು ಹೋಗುವ ಡಾಮಾರು ರಸ್ತೆಯಲ್ಲಿ ಕೂಳೂರು ಎಂಬಲ್ಲಿ ರಸ್ತೆಯ ಎಡಬದಿಯಲ್ಲಿರುವ ಪ್ಲಾಝಾಸ್ಟೋರ್ ಎಂಬ ಅಂಗಡಿಯ ಕಟ್ಟಡದ ಕಡೆಯಿಂದ ರಸ್ತೆ ದಾಟುತ್ತಾ ಪ್ಲೈ ಓವರ್ ಕೆಳಭಾಗದ ಕಡೆಗೆ ನಡೆದುಕೊಂಡು ಬರುತ್ತಿದ್ದಂತೆ ಬೆಳಿಗ್ಗೆ ಸುಮಾರು 10-00 ಗಂಟೆಗೆ TN-40-AA-9468 ನಂಬ್ರದ ಪಿಕ್ ಆಪ್ ವಾಹನದಲ್ಲಿ ಬಾಳೆಹಣ್ಣು ತುಂಬಿಕೊಂಡು ಅದರ ಚಾಲಕನು ಕೊಟ್ಟಾರ್ ಚೌಕಿ ಕಡೆಯಿಂದ ಪಣಂಬೂರು ಕಡೆಗೆ ಅಜಾಗುರಕತೆಯಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಚಾರಿ ವ್ಯಕ್ತಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಾದಚಾರಿ ವ್ಯಕ್ತಿಯು ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ಅಪಘಾತ ಪಡಿಸಿದ ಪಿಕ್ ಆಪ್ ವಾಹನ ಮುಂದಕ್ಕೆ ಚಲಿಸಿ ಪಿಕ್ ಆಪ್ ವಾಹನದ ಹಿಂದಿನ ಬಲಬದಿ ಚಕ್ರವು ಪಾದಚಾರಿ ವ್ಯಕ್ತಿಯ ಹೊಟ್ಟೆ ಹಾಗೂ ಎದೆಯ ಮೇಲೆ ಚಲಿಸಿ ಪಕ್ಕೆಲಬುಗಳು ಮುರಿತಗೊಂಡಂತಾಗಿದ್ದು, ಎದೆ ಮತ್ತು ಎಡ ಕೈಯಲ್ಲಿ ಚರ್ಮ ತರಚಿ, ಎಡಕೈ ಅಂಗೈ ಚರ್ಮ ಹಾಗೂ ಮಾಂಸ ಹರಿದು ಅಪರಿಚಿತ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ.

Surathkal PS

ಪಿರ್ಯಾದಿ Mahammed Musthaf ದಾರರು ದಿ. 20-08-2023 ರಂದು ಸಂಜೆ 7-45 ಗಂಟೆಗೆ ಕಾಟಿಪಳ್ಳ ಗ್ರಾಮದ 4 ನೇ ಬ್ಲಾಕ್ ಕೃಷ್ಣಾಪುರದಲ್ಲಿ ಅವರ ಬಾಬ್ತು ರೂಬಿ ಟ್ರಾವಲ್ಸ್ ಎಂಬ ಹೆಸರಿನ ಬಾಡಿಗೆ ಕಾರು  ನೀಡುವ ಕಛೇರಿಯಲ್ಲಿ ಇರುವಾಗ ಅವರ ಮೊಬೈಲ್ ನಂಬ್ರ  ನೇಯದಕ್ಕೆ  ಮೊಬೈಲ್ ನಂಬ್ರ 7996734919 ನೇಯದರಿಂದ ಸಂಜೆ 7-50 ಗಂಟೆಗೆ ಕರೆ ಬಂದಿದ್ದು, ಕಾಲ್ ರಿಸೀವ್ ಮಾಡಿ ಯಾರು ನೀವು ಎಂದು ಕೇಳಿದಾಗ ಬ್ಯಾರಿ ಬಾಷೆಯಲ್ಲಿ ನಾನು ಮುಕ್ಸಿನ್ ಗೊತ್ತಾಗಲಿಲ್ಲವಾ ಭಟ್ಕಳ ಪೊಲೀಸ್ ಸ್ಟೇಷನ್ ನಲ್ಲಿ ದೊಡ್ಡದಾಗಿ ಮಾತನಾಡಿದ್ದು ಗೊತ್ತಿಲ್ವಾ ಎಂದು ಕೇಳಿದಾಗ ಅದಕ್ಕೆ ಪಿರ್ಯಾದಿದಾರರು ನೀನು ನನಗೆ ಸಂಬಂಧವಿಲ್ಲ ನಾನು ಕಾರು ಬಾಡಿಗೆಗೆ ಅಕೀಬ್ ಮತ್ತು ಸಮೀರ್ ಗೆ ನೀಡಿದ್ದು ಆಗ ನಾನು ಅಶ್ಪಕ್ ಮಾತನಾಡುತ್ತಿರುವುದು ಗೊತ್ತಾಗಲಿಲ್ಲಿವಾ ಅಕೀಬ್ ಮತ್ತು ಸಮೀರ್ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ನಿನ್ನನ್ನು ಹೊಡೆಸಿಯೇ ಅವರುಗಳನ್ನು ಪೊಲೀಸರಿಗೆ ಸರೆಂಡರ್ ಮಾಡಿಸುತ್ತೇನೆ. ಎಂದು ಹೇಳಿದಾಗ ಅದಕ್ಕೆ ಪಿರ್ಯಾದಿದಾರರು ಪೊಲೀಸರು ಕೇಳಿದ ಮಾಹಿತಿ ನೀಡುವುದು ನನ್ನ ಜವಾಬ್ದಾರಿ ನಾನು ಮಾಹಿತಿ ನೀಡುತ್ತೇನೆ. ಆಗ ಅದೇ ಮೊಬೈಲ್ ನಲ್ಲಿ ನಾನು ಇರ್ಫಾನ್ ಮಾತನಾಡುವುದು ಗೊತ್ತಾಗಲಿಲ್ಲವಾ ನಿನ್ನ ಆಪೀಸ್ ಹೊರಗೆ ಇದ್ದೇನೆ. ಧಮ್ ಇದ್ದರೇ ಹೊರಗೆ ಬಾ ಎಂದು ಬೆವರ್ಸಿ ರಂಡೆ ಮಗ ಎಂಬಿತ್ಯಾದಿ ಅವಾಚ್ಯ ಶಬ್ದಗಗಳಿಂದ ಬೈದು ಬೆದರಿಕೆ ಹಾಕಿ ಮೊಬೈಲ್ ನ್ನು ಅಶ್ಫಕ್ ನಿಗೆ ಕೊಟ್ಟಾಗ ಪಿರ್ಯಾದಿದಾರರ ಮೊಬೈಲ್ ನಲ್ಲಿ ಅಶ್ಪಕ್ ನೊಂದಿಗೆ ಮಾತನಾಡುತ್ತಾ ಹೊರಗೆ ಬಂದಾಗ ಇರ್ಫಾನ್ ಆಫೀಸ್ ಗೇಟ್ ನಿಂದ ಒಳಗೆ  ಬಂದು ಸಂಜೆ 7-55 ಗಂಟೆಗೆ ಪಿರ್ಯಾದಿದಾರರ ಆಫೀಸ್ ನ ಮುಂದೆ ತನ್ನ ಬಲಕೈಯನ್ನು ಬೆನ್ನ ಹಿಂದೆ ಇಟ್ಟುಕೊಂಡು ಆಫೀಸ್ ಕಡೆಗೆ  ಬಂದ ಇರ್ಫಾನ್ ನು ಬೆನ್ನ ಹಿಂದೆ ಇಟ್ಟಿದ್ದ ಡ್ರ್ಯಾಗರ್ ನಿಂದ ನಿನ್ನನ್ನು ಕೊಲೆ ಮಾಡುತ್ತೆನೆ ಎಂದು ಹೇಳಿ ಪಿರ್ಯಾದಿದಾರರ ಹೊಟ್ಟೆಗೆ ಇರಿಯಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ತಪ್ಪಿಸಿಕೊಂಡು ಆಫೀಸ್ ನ ಒಳಗೆ ಓಡಿ ಹೋಗಿ ಬೊಬ್ಬೆ ಹಾಕಿದಾಗ ಜನರು ಬರುತ್ತಿರುವುದನ್ನು ಕಂಡು ಇರ್ಫಾನ್ ಹಾಗೂ ಅಶ್ಪಕ್ ಇವರುಗಳು ಅಲ್ಲಿಂದ ಪರಾರಿಯಾಗಿರುತ್ತಾರೆ. ಪಿರ್ಯಾದಿದಾರರು ಬಾಡಿಗೆ ಕಾರನ್ನು ಅಕೀಬ್ ಮತ್ತು ಸಮೀರ್ ಎಂಬವರಿಗೆ ನೀಡಿದ್ದು ಸದ್ರಿ ಕಾರಿನಲ್ಲಿ ದನ ಸಾಗಾಟದ ಬಗ್ಗೆ ಮುಸ್ಕಿನ್ ಎಂಬಾತನನ್ನು ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು ಉಳಿದ ಆರೋಪಿಗಳಾದ ಅಕೀಬ್ ಮತ್ತು ಸಮೀರ್ ರವರ ಮಾಹಿತಿಯನ್ನು ಪಿರ್ಯಾದಿದಾರರು ನೀಡಿದ್ದಕ್ಕೆ ದ್ವೇಷಗೊಂಡು ಆರೋಪಿಗಳು ಸಂಚು ರೂಪಿಸಿ ಈ ಕೃತ್ಯ ಮಾಡಿದ್ದಾಗಿರುತ್ತದೆ, ಸದ್ರಿ ಆರೋಪಿಗಳ ಮೇಲೆ ಕ್ರಮ ಜರಗಿಸಬೇಕಾಗಿ ಎಂಬಿತ್ಯಾದಿ.       

Ullal PS

ದಿನಾಂಕ:18-08-2023 ರಂದು ಬೆಳಿಗ್ಗೆ 9.00 ಗಂಟೆಗೆ ಅರ್ಜಿದಾರರಾದ ರಾಖಿ ಜಯದಾಸರವರು ಆಫೀಸ್ಗೆ ಹೋದಾಗ ಅವರ ಮನೆಯಲ್ಲಿ ಉಳಿದುಕೊಂಡಿದ್ದ ಅರ್ಜಿದಾರರ ಅಣ್ಣನ ಮಗಳು ಗೌರಿ 23 ಇವರು ಮನೆಯಲ್ಲಿ ಒಬ್ಬಳಿದ್ದು ಅರ್ಜಿದಾರರು ವಾಪಸ್ ಆಫೀಸ್  ಕೆಲಸ ಮುಗಿಸಿಕೊಂಡು ಸಂಜೆ 6.45 ಗಂಟೆಗೆ  ಮನೆಗೆ ಬಂದು ನೋಡಿದಾಗ ಅರ್ಜಿದಾರರ ಇಬ್ಬರು ಮಕ್ಕಳಿದ್ದು ಅಣ್ಣನ ಮಗಳು ಗೌರಿ ,ಮನೆಯಲ್ಲಿ ಇರದೇ ಇದ್ದ ಬಗ್ಗೆ ಮಕ್ಕಳಲ್ಲಿ ವಿಚಾರಿಸಲಾಗಿ  ಅವರು ಶಾಲೆಯಿಂದ ಬರುವಾಗ ಮನೆಗೆ ಬೀಗ ಹಾಕದೇ ಇದ್ದು ಮನೆಯೊಳಗೆ ಗೌರಿ ಇಲ್ಲದೇ ಇರುವುದಾಗಿ ತಿಳಿಸಿದಂತೆ ಅರ್ಜಿದಾರರು ಗೌರಿಯ ತಂದೆ ಶೀಬು ಹಾಗೂ ಅವರ ಸಂಬಂದಿಕರಲ್ಲಿ ಹಾಗೂ ಗೌರಿಯ ಸ್ನೇಹಿತರಲ್ಲಿ ಪತ್ತೆಯ ಬಗ್ಗೆ ವಿಚಾರಿಸಿದ್ದುಯ ಇವರೆಗೂ ಪತ್ತೆಯಾಗದೇ ಇದ್ದುದ್ದರಿಂದ  ಈ ದಿನ ದಿನಾಂಕ:20.08.2023 ರಂದು  ದೂರು ನೀಡಿರುವುದಾಗಿದೆ.ಹಾಗೂ ಕಾಣೆಯಾದ ಗೌರಿಯನ್ನು ಪತ್ತೆ ಹಚ್ಚಿ ಕೊಡಬೇಕಾಗಿ ಪ್ರಕರಣದ ಸಾರಾಂಶ

Mangalore South PS                   

ದಿನಾಂಕ : 20-08-2023 ರಂದು 14-30 ಗಂಟೆ ಸುಮಾರಿಗೆ ಮಂಗಳೂರು ನಗರದ ವೆಲೆನ್ಸಿಯಾ ಚರ್ಚ್ ಬಳಿ ಸ್ಮಶಾನದ ಬಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪಿ ಇಮ್ಯಾನುವೆಲ್ ಮಾರ್ಕೋಸ್ ಜೋಕೋಬ್,  ಪ್ರಾಯ 22 ವರ್ಷ,  ವಿಳಾಸ : ವಟ್ಟತಿಕ್ಕಲ್, ಮರಿಯಾ ಕೃಪಾ ಹೌಸ್, ಚಿಂಗವನಂ ಅಂಚೆ, ಕೊಟ್ಟಾಯಂ, ಕೇರಳ ರಾಜ್ಯ ತಾಲೂಕು ಎಂಬಾತನನ್ನು ವಶಕ್ಕೆ ಪಡೆದುಕೊಂಡು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗಾಗಿ ಮಂಗಳೂರು ನಗರದ ದೇರಳಕ್ಟೆಯ ಕಣಚೂರು ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ  ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Urva PS   

ದಿನಾಂಕ 20-08-2023 ರಂದು ಸಂಜೆ ಸುಮಾರು 04.00 ರ ವೇಳೆಗೆ ಚಿಲಿಂಬಿಗುಡ್ಡೆಯ ಆದರ್ಶನಗರದ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬನು ಕೈಯಲ್ಲಿ ಸಿಗರೇಟನ್ನು ಸೇದುತ್ತಾ ಅನುಮಾನಾಸ್ಪದವಾಗಿ ನಿಂತಿದ್ದವನನ್ನು ವಿಚಾರಿಸಿಕೊಂಡಲ್ಲಿ ಆತನು ತನ್ನ ಹೆಸರು ಅನಿವಿಂದ್ ಕೃಷ್ಣ (20 ವರ್ಷ) ವಾಸ: ಮುಂಗಡ ಹೌಸ್, ಪೊಟರ್ ಅಂಚೆ, ತ್ರಿಶೂಲ್ ಜಿಲ್ಲೆ, ಕೇರಳ ರಾಜ್ಯ ಎಂಬುದಾಗಿ ತಿಳಿಸಿರುತ್ತಾನೆ. ಈತನನ್ನು ವಿಚಾರಿಸಿದಾಗ ಆತನು ಸಿಗರೇಟಿನ ಒಳಗಡೆ ಗಾಂಜಾ ವನ್ನು ತುಂಬಿಸಿ ಸೇದುತ್ತಿದ್ದುದಾಗಿ ತಿಳಿಸಿದ ಮೇರೆಗೆ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವ ಸಲುವಾಗಿ ಆತನನ್ನು ಎ.ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಬಳಿ ಕಳುಹಿಸಿಕೊಟ್ಟಲ್ಲಿ ಪರೀಕ್ಷಿಸಿದ ವೈಧ್ಯರು ಆತನು ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢಪತ್ರವನ್ನು ನೀಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080