ಅಭಿಪ್ರಾಯ / ಸಲಹೆಗಳು

Crime Report in  Mangalore West Traffic PS

ಪಿರ್ಯಾದಿ KAVITHA LAMANI ದಾರರು ಮಂಗಳೂರು ನಗರದಲ್ಲಿ ಮನೆ ಸ್ವಚ್ಚತೆ ಮಾಡುವ ಕೆಲಸಮಾಡಿಕೊಂಡಿದ್ದು ದಿನಾಂಕ;20-09-2023 ರಂದು ಬಾಲ್ಲಾಳ್ ಬಾಗ್ ಕಡೆಯಿಂದ ಕೆಲಸದ ನಿಮಿತ್ತ ತನ್ನ ಬಾಬ್ತು ದ್ವಿ ಚಕ್ರ ವಾಹನ ನಂಬ್ರKA-08-J-2889ನೇದರಲ್ಲಿ ಲಾಲ್ ಬಾಗ್ ಕಡೆಗೆ ಹೋಗುತ್ತಿರುವ ಸಮಯ ಸುಮಾರು 11;30ಗಂಟೆಗೆ ನೆಹರು ಅವೆನ್ಯು ರೋಡ್ ಬಳಿ  ತಲುಪುತ್ತಿದ್ದಂತೆ. ನೆಹರು ಅವೆನ್ಯೂ ರೋಡ್ ನಿಂದ ಬಂದ KA-19-MH-5497 ನೇ ನಂಬ್ರದ ಕಾರನ್ನು ಅದರ ಚಾಲಕ ರಮೇಶ ಕುಮಾರ ರವರು ನಿರ್ಲಕ್ಷತನದಿಂದ ಹಾಗೂ ದುಡುಕುತನದಿಂದ ಮುಖ್ಯರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ.ಪಿರ್ಯಾದಿದಾರರು  ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಏಡಕಾಲಿನಸೊಂಟದ ಹತ್ತಿರ ಗುದ್ದಿದ ನೋವಾಗಿರುತ್ತದೆ ,ಎಂಬಿತ್ಯಾದಿ,

Bajpe PS

ಪಿರ್ಯಾದು SURESH ದಾರರ ತಮ್ಮ ಸೀತಾರಾಮ (38) ರವರು ದಿನಾಂಕ:19-09-2023 ರಂದು ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಡ್ಡೂರಿನ ಗಣೇಶ ವಿಸರ್ಜನೆ ಕಾರ್ಯಕ್ರಮ ನೋಡಲು ಮನೆಯಲ್ಲಿ ಹೇಳಿ ಹೋಗಿದ್ದು ರಾತ್ರಿ ಸುಮಾರು 10:00 ಗಂಟೆಗೆ ಕಾಜಿಲಕೋಡಿ ಎಂಬಲ್ಲಿ ಪಾದಾಚಾರಿ ರಸ್ತೆಯಲ್ಲಿ ನಿಂತು ಅಡ್ಡೂರು ಕಡೆಯಿಂದ ನೂಯಿ ಕಡೆಗೆ ಬರುತ್ತಿದ್ದ ಗಣೇಶೋತ್ಸವ ಮೆರವಣಿಗೆ ಕಾರ್ಯಕ್ರಮ ನೋಡುತ್ತಿರುವಾಗ ಜನರೇಟರ್ ತಂದಿದ್ದ ಪಿಕಪ್ ವಾಹನ ನಂಬ್ರ ಕೆಎ-19 ಎಸಿ-1714 ನ್ನು ಅದರ ಚಾಲಕ ತೀರಾ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಕ್ಕೆ ಅಂದರೆ ಪಾದಾಚಾರಿ ರಸ್ತೆಗೆ ವೇಗವಾಗಿ ಚಲಾಯಿಸಿದ್ದರಿಂದ ಪಿಕಪ್ ವಾಹನದ ಹಿಂಬದಿ ಎಡಬದಿಯ ಚಕ್ರ ಪಿರ್ಯಾದಿದಾರರ ತಮ್ಮ ಸೀತಾರಾಮ ರವರ ಎಡಕಾಲಿನ ಪಾದದ ಮೇಲೆ ಹರಿದು ಸೀತಾರಾಮರವರು ಬೊಬ್ಬೆ ಹಾಕಿದಾಗ ಜೊತೆಯಲ್ಲಿದ್ದ ಮೋಹನ್ ದಾಸ್ ರವರು ಸೇರಿದ ಜನರ ಸಹಾಯದೊಂದಿಗೆ ಉಪಚರಿಸಿ ಸ್ಥಳಕ್ಕೆ ಬಂದ ಅಂಬ್ಯೂಲೆನ್ಸ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದಾಗಿ ಮೋಹನ್ ದಾಸ್ ರವರು ಪಿರ್ಯಾದಿದಾರರಿಗೆ ಪೋನ್ ಮೂಲಕ ತಿಳಿಸಿ ಸೀತಾರಾಮರವರನ್ನು ಮನೆಗೆ ಕರೆದುಕೊಂಡು ಬಂದಿರುವುದಾಗಿದ್ದು, ಸದ್ರಿ ಅಪಘಾತದಿಂದ ಸೀತಾರಾಮರವರ ಎಡಕಾಲಿನ ಪಾದಕ್ಕೆ ಗುದ್ದಿದ ಒಳನೋವು ಉಂಟಾಗಿದ್ದು, ಸದ್ರಿ ಅಪಘಾತಕ್ಕೆ ಪಿಕಪ್ ವಾಹನ  ನಂಬ್ರ ಕೆಎ-19-ಎಸಿ-1714 ನ್ನು ಅದರ ಚಾಲಕ ಸಾ,ರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯತನದಿಂದ ಪಾದಾಚಾರಿ ರಸ್ತೆಯಲ್ಲಿ ಅತೀವೇಗವಾಗಿ ಚಲಾಯಿಸಿರುವುದೇ ಕಾರಣವಾಗಿದ್ದು, ಸದ್ರಿ ಪಿಕಪ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

Traffic South Police Station              

ದಿನಾಂಕ 14-09-2023 ರಂದು ಫಿರ್ಯಾದಿ Venkappa N ದಾರರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-EP-3305 ನೇದನ್ನು ಸವಾರಿ ಮಾಡಿಕೊಂಡು ಮನೆಯಿಂದ ಹೊರಟು ಸಮಯ ಮದ್ಯಾಹ್ನ 01.22 ಗಂಟೆಗೆ ಮುಡಿಪು ಜವಾಹರ್ ವಿದ್ಯಾಲಯದ ಬಳಿ ತಲುಪುತ್ತಿದ್ದಂತೆ ಹೂ ಹಾಕುವ ಕಲ್ಲು ಕಡೆಯಿಂದ ಮುಡಿಪು ಕಡೆಗೆ KA-04-MJ-1252 ನೇ ನಂಬ್ರ ಕಾರನ್ನು ಅದರ ಚಾಲಕ ಹಸೈನರ್ ಎಂಬಾತನು ದುಡುಕತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ನ್ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದರಿಂದ ಫಿರ್ಯಾದಿದಾರರ ಎರಢೂ ಕಾಲಿಗೆ  ಗುದ್ದಿದ ಗಾಯವಾಗಿದ್ದು ಮತ್ತು ಎಡ ಕೈಗೆ ಗಾಯವಾಗಿರುತ್ತದೆ. ಈ ಬಗ್ಗೆ ಕಣಚೂರು ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಬಳಿಕ ಫಿರ್ಯಾದಿದಾರರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ದಿನಾಂಕ 19-09-2023 ರಂದು ಕೆ.ಎಸ್.ಹೆಗಡೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು ಪರೀಕ್ಷಿಸಿದ ವೈಧ್ಯರು ಎದೆಯ ರಿಬ್ಸ್ ಮುರಿದಿದ್ದು ಇದರಿಂದ ರಕ್ತಸ್ರಾವವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಅಪಘಾತ ಪಡಿಸಿದ ಕಾರು ಚಾಲಕರು ಈ ಮೊದಲು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂಬುದಾಗಿ ತಿಳಿಸಿ ಈಗ ನಿರಾಕರಿಸಿರುತ್ತಾರೆ. ಈ ಮೊದಲು ಫಿರ್ಯಾದಿದಾರರು ದೂರು ಬೇಡವೆಂದು ಬರೆದು ಕೊಟ್ಟಿದ್ದು ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 22-09-2023 11:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080