ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS                       

ಪಿರ್ಯಾದಿದಾರರಾದ ನಿತೇಶ್ ಕುಮಾರ್ ಎಂಬುವರಿಗೆ ಅವರ ಸ್ನೇಹಿತ ಸುಶೀತ್ ರವರು ದೂರವಾಣಿ ಕರೆ ಮಾಡಿ ದಿನಾಂಕ: 21/10/2023 ರಂದು ಬೆಳಗಿನ ಜಾವ ನೊಂದಣಿ ಸಂಖ್ಯೆ: KA-19-HF-2907 ನೇ ಮೋಟಾರ್ ಸೈಕಲಿನಲ್ಲಿ ಕೀರ್ತಿಕ್ ರವರನ್ನು ಹಿಂಬದಿ ಸವಾರನ್ನಾಗಿ ಕುಳ್ಳರಿಸಿಕೊಂಡು ನಂತೂರು ಕಡೆಯಿಂದ ಪಡೀಲ್ ಕಡೆಗೆ ಇರುವ ರಾ.ಹೆ 73 ನೇಯದರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ನಿಡ್ಡೇಲ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ಬಿದ್ದು ಹಿಂಬದಿ ಸವಾರನಾಗಿದ್ದ ಕೀರ್ತಿಕ್ ರವರು ಗಾಯಗೊಂಡು ವಾಂತಿ ಮಾಡಿಕೊಳ್ಳುರತ್ತಿದ್ದು ಕೂಡಲೇ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಹೋಗಿದ್ದು ಅಷ್ಟರಲ್ಲಿ ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳುವನ್ನು ಉಪಚರಿಸುತ್ತಿದ್ದು ಗಾಯಾಳು ಪ್ರಜ್ಞಾಹೀನಗೊಂಡಿದ್ದರು, ಕೂಡಲೇ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಗಾಯಾಳು ದಾರಿಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ 04-22 (AM) ಗಂಟೆಗೆ ದೃಢಪಡಿಸಿರುತ್ತಾರೆ, ಈ ಅಪಘಾತದ ಬಗ್ಗೆ ಅಪಘಾತ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ತಿಳಿದುಕೊಂಡಾಗ ನಂತೂರು ಕಡೆಯಿಂದ ಪಡೀಲ್ ಕಡೆಗೆ ಸುಶೀತ್ ರವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಬೆಳಗಿನ ಜಾವ 03-25 ಸುಮಾರಿಗೆ ನಿಡ್ಡೇಲ್ ಅಡ್ಡರಸ್ತೆಯ ಬಳಿ ಇರುವ ತಿರುವು ರಸ್ತೆಯ ಬಳಿ ತಲುಪುತ್ತಿದ್ದಂತೆ ಸುಶೀತ್ ರವರು ಬೈಕನ್ನು ನಿಧಾನಗೊಳಿಸದೆ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನುಗ್ಗಿ ಚರಂಡಿಗೆ ಬಿದ್ದಿರುವುದಾಗಿದೆ ಆದುದರಿಂದ ಸದ್ರಿ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

CEN Crime PS

 ಫಿರ್ಯಾದಿ JR LOBO ರವರು   2019 ನೇ ಇಸವಿಯಲ್ಲಿ ವಾಮಂಜೂರು ಬಳಿ ಮುನ್ಸಿಪಲ್ ಕಾರ್ಪೋರೇಷನ್ ಮತ್ತು Ministry of Micro, Small and Medium Enterprises Government of India ರಲ್ಲಿ  Micro Unit ನಂತೆ ನೋಂದಣಿ ಮಾಡಿಕೊಂಡು ಅಣಬೆ ಬೆಳೆಯುವ ಜೊತೆಗೆ Horticulture Activity ಯನ್ನು ಕಳೆದ 2 ವರ್ಷಗಳಿಂದ ನಡೆಸುತ್ತಿರುವುದಾಗಿದೆ. ಇದಕ್ಕಾಗಿ ಮಂಗಳೂರು ಮಹಾನಗರಪಾಲಿಕೆ ಮತ್ತು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ ಪಡೆದಿರುತ್ತಾರೆ. ಹೀಗಿರುವಾಗ 2 ವರ್ಷಗಳಿಗೂ ಹೆಚ್ಚು ಕಾಲ ಯಾರ ಆಕ್ಷೇಪವಿಲ್ಲದೇ ಅಣಬೆ ಕೃಷಿ ಮಾಡುತ್ತಿದ್ದು, 2023 ನೇ ಇಸವಿಯ ಫೆಬ್ರವರಿ ತಿಂಗಳಿನಲ್ಲಿ ರಾಜಕೀಯ ದ್ವೇಷದ ಬೆಂಬಲಿತ ಕೆಲವರು ರಾಸಾಯನಿಕ ಬಳಸುತ್ತಿದ್ದಾರೆ, ಸಾಗುವಳಿ ಪ್ರದೇಶದಿಂದ  ದುರ್ವಾಸನೆ ಬರುತ್ತಿದೆ  ಎಂದು ಸುಳ್ಳು ಆರೋಪಗಳನ್ನು ಹೊರಿಸಿದ್ದು, ಈ ಬಗ್ಗೆ ತಜ್ಞರ ಸಮಿತಿಯಿಂದ  ವರದಿ ಪಡೆದ ಜಿಲ್ಲಾಧಿಕಾರಿಯವರು ಗೊಬ್ಬರ ಮುಚ್ಚುವ  ಆದೇಶವನ್ನು ಹಿಂಪಡೆದು ಕಾಂಪೋಸ್ಟ್ ಗೆ ಅನುಮತಿ ನೀಡಿ ಅಣಬೆ ಕೃಷಿಗೆ ಕ್ಲೀನ್ ಚಿಟ್ ನೀಡಿದ್ದರೂ ಒಂದು ಗುಂಪು ತಡವಾಗಿ ಹಲವಾರು ಸುಳ್ಳು ಮತ್ತು ಮಾನಹಾನಿಕಾರಕ ಲೇಖನಗಳನ್ನು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್, ಇನ್ಸ್ ಸ್ಟಾ ಗ್ರಾಂ, ಯು ಟ್ಯೂಬ್ ಗಳಲ್ಲಿ ಹರಿಯಬಿಡುತ್ತಿದ್ದಾರೆ. ನಮ್ಮ ಚಟುವಟಿಕೆಗಳಿಂದ ಯಾವುದೇ ಕೆಟ್ಟವಾಸನೆ ಉತ್ಪತ್ತಿಯಾಗುವುದಿಲ್ಲ. ಉದ್ದೇಶಪೂರ್ವಕವಾಗಿ ಸದರಿ ಸುಳ್ಳು ಸಂದೇಶ, ಸುದ್ದಿಗಳನ್ನು ಸ್ಥಳೀಯ ಮುಗ್ದ ಜನರು ನಂಬಿ ಉದ್ರಿಕ್ತ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಂತೆ ಪ್ರೇರೇಪಿಸಿರುತ್ತಾರೆ. ಎಂಬಿತ್ಯಾದಿ.  

 

2) ದಿನಾಂಕ: 15-10-2023 ಪಿರ್ಯಾದಿದಾರಿಗೆ ಯಾರೋ ಅಪರಿಚಿತರು ಟೆಲಿಗ್ರಾಂ ಅಪ್ಲಿಕೇಶನ್ ನಲ್ಲಿ ಪರಿಚಯವಾಗಿ ಪಿರ್ಯಾದಿದಾರರನ್ನು THE DIGITAL MEDIA INVESTMENT COMPANY ಗ್ರೂಪ್ ಗೆ ಸೇರಿಸಿರುತ್ತಾರೆ. ಹಾಗೂ ಅದರಲ್ಲಿ ಹಲವಾರು ಲಾಭದಾಯಕ ಅಂಶಗಳನ್ನು ತೋರಿಸಿರುತ್ತಾರೆ ಹಾಗೂ ಅಪರಿಚಿತರು ಪಿರ್ಯಾದಿದಾರರನ್ನು ಹೂಡಿಕೆ ಮಾಡವುವಂತೆ ಹೇಳಿ ಅಪ್ಲಿಕೇಶನ್ ಲಿಂಕ್ ಗಳನ್ನು ಕಳುಹಿಸಿ BINANCE ಅಪ್ಲಿಕೇಶನ್ ನನ್ನು ರಿಜಿಸ್ಟ್ರೆಶನ್ ಮಾಡುವಂತೆ ಹೇಳಿದ್ದು ಪಿರ್ಯಾದಿದಾರರು ಅವರನ್ನು ನಂಬಿ ರಿಜಿಸ್ಟ್ರೆಶನ್ ಮಾಡಿ ಅದರಲ್ಲಿ ಅವರು ಹೇಳಿದಂತೆ ಹಣ ಹೂಡಿಕೆ ಮಾಡಿರುತ್ತಾರೆ. ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣ ವ್ಯಾಲೆಟ್ ನಲ್ಲಿ ಇದ್ದು ಸದ್ರಿ ಹಣವನ್ನು ಅಪರಿಚಿತು ಮೋಸದಿಂದ ವರ್ಗಾಯಿಸಿಕೊಂಡಿದ್ದು ಇದರಿಂದ ಪಿರ್ಯಾದಿದಾರರ ಖಾತೆ ಸಂಖ್ಯೆ  ನೇದರಿಂದ 60,000/- ರೂ ಹಾಗೂ ಬಾಗಲಕೋಟೆ ಬ್ರಾಂಚ್ ಯುನಿಯನ್ ಬ್ಯಾಂಕ್ ಖಾತೆ ಸಂಖ್ಯೆ  ನೇದರಿಂದ 80,000/- ರೂಗಳು ಒಟ್ಟು 1,40,000/- ರೂಗಳು ಅಪರಿಚಿತರ ಖಾತೆಗೆ ವರ್ಗಾವಣೆಗೊಂಡಿರುತ್ತದೆ ಎಂಬಿತ್ಯಾದಿ.

Panambur PS

ಶ್ರೀಮತಿ. ಕಲ್ಯಾಣಿ ಬಾಲಕೃಷ್ಣನ್ ಎಂಬವರು ನೇತ್ರಾವತಿ ಎಕ್ಸ್ ಪ್ರೆಸ್ ರೈಲು ನಂಬ್ರ 16346 ನೇಯದರಲ್ಲಿ ತ್ರಿಶೂರಿನಿಂದ ಮುಂಬೈಗೆ ಕೋಚ್ ನಂಬ್ರ ಸ್ 7ರಲ್ಲಿ ಸೀಟು ನಂಬ್ರ 7 ರಲ್ಲಿ ದಿನಾಂಕ:04-10-2023 ರಂದು ಪ್ರಯಾಣಿಸುತ್ತಿದ್ದು, ರಾತ್ರಿ 10.10 ಗಂಟೆಯ ಸುಮಾರಿಗೆ ರೈಲು ಮಂಗಳೂರು ಸಮೀಪದ ತೋಕೂರು ರೈಲ್ವೇ ನಿಲ್ದಾಣದ ಹತ್ತಿರ ರೈಲು ನಿಧಾನಗತಿಯಲ್ಲಿ ಚಲಿಸುತ್ತಿರುವಾಗ ಯಾರೋ ಕಳ್ಳರು ಶ್ರೀಮತಿ. ಕಲ್ಯಾಣಿ ಬಾಲಕೃಷ್ಣನ್ ರವರ ಬ್ಯಾಗನ್ನು ಕಳವು ಮಾಡಿದ್ದು, ಸದ್ರಿ ಬ್ಯಾಗಿನಲ್ಲಿ 127 ಗ್ರಾಂ ತೂಕದ ಚಿನ್ನಾಭರಣಗಳು, ಮೊಬೈಲ್, ಹ್ಯಾಂಡ್ ಬ್ಯಾಗ್, ಎಸ್.ಬಿ.ಐ. ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಕನ್ನಡಕ ಇತ್ಯಾದಿ ವಸ್ತುಗಳಿದ್ದು ಅದರ ಮೌಲ್ಯ ರೂ. 6,70,000/= ಆಗಬಹುದು.

         ದಿನಾಂಕ:04-10-2023 ರಂದು ರಾತ್ರಿ 11.30 ಗಂಟೆಗೆ ಟಿ.ಟಿ.ಇ. ಚಂದ್ರಕಾಂತ ಶೆಟ್ಟಿಯವರು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ 7306 ನೇ ಶ್ರೀಕಾಂತ್ ಇವರಿಗೆ ಮಾಹಿತಿಯನ್ನು ನೀಡಿದ್ದು, ಸದ್ರಿ ಶ್ರೀಕಾಂತರವರು ದಿನಾಂಕ:04-10-2023 ರಂದು ರಾತ್ರಿ 11.55 ಗಂಟೆಗೆ ಉಡುಪಿ ರೈಲ್ವೇ ಪ್ಲಾಟ್ ಫಾರಂನಲ್ಲಿ ಅನುಮಾಸ್ಪದವಾಗಿ ಇದ್ದ ಸನ್ನಿ ಮ್ಕಹೋತ್ರ ಎಂಬವನನ್ನು ಪತ್ತೆ ಹಚ್ಚಿ ಪಿರ್ಯಾದಿದಾರರ ಎದುರು ಹಾಜರುಪಡಿಸಿದ್ದು ಕಳವಾದ ಸ್ವತ್ತಿನ ಪೈಕಿ ಆರೋಪಿಯ ವಶದಲ್ಲಿರುವ 93.17 ಗ್ರಾಂ ಚಿನ್ನಾಭರಣಗಳನ್ನು ಹಾಗೂ ನಗದು 3700/= ರೂಪಾಯಿಗಳು ಮತ್ತು ಕಲ್ಯಾಣಿ ಬಾಲಕೃಷ್ಣನ್ ರವರ ಎಟಿಎಂ ಕಾರ್ಡ್. ಒಟ್ಟು ಮೌಲ್ಯ ರೂ. 4,71,320/= ಆಗಬಹುದು. ಈ ಬಗ್ಗೆ ವಶಕ್ಕೆ ಪಡೆದು ಮಣಿಪಾಲ ಪೊಲೀಸರಿಗೆ ಹಾಜರುಪಡಿಸಿದಂತೆ ಪ್ರಕರಣವು ದಾಖಲಾಗಿದ್ದು, ಈ ಪ್ರಕರಣವನ್ನು ತಕ್ಷೀರು ಸ್ಥಳದ ಆಧಾರದಲ್ಲಿ ಪಣಂಬೂರು ಪೊಲೀಸ್ ಠಾಣೆಗೆ ವರ್ಗಾಯಿಸಿರುವುದನ್ನು ಮುಂದಿನ ತನಿಖೆಯ ಬಗ್ಗೆ ಕಡತವನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Mangalore East PS

ದಿನಾಂಕ 21/10/2023 ರಂದು ಫಿರ್ಯಾದಿ Jayanthi Bhat ದಾರರು ಬೆಳಗಿನ ಜಾವ ಸುಮಾರು  5:30 ಗಂಟೆಯ ವೇಳೆಗೆ ಎಂದಿನಂತೆ ಮನೆಯಾದ ಬಿಜೈ ನ್ಯೂ ರೋಡ್ ನಿಂದ ಬಾರತಿ ನಗರ ಕ್ರಾಸ್ ರಸ್ತೆಯಿಂದ ಬಿಜೈ ಚರ್ಚ್ ಕಡೆಗೆ ಪುಟ್ ಪಾತ್ ನಲ್ಲಿ ವಾಕಿಂಗ್ ಮಾಡುತ್ತಾ ಬಿಜೈ ಜಂಕ್ಷನ್ ಕಡೆಗೆ ಹೋಗುತ್ತಿರುವಾಗ ಎದುರುಗಡೆ ಬಿಜೈ ಜಂಕ್ಷನ್ ಕಡೆಯಿಂದ  ಯಾರೋ ಇಬ್ಬರು ಸುಮಾರು 30 ವರ್ಷ ಪ್ರಾಯದ ಅಪರಿಚಿತರು ಕಪ್ಪು ಬಣ್ಣದ ಬೈಕನಲ್ಲಿ ಬಂದು ರಮೇಶ್ ಭಾಳಿಗಾ ರವರ ಅಂಗಡಿಯ ಎದುರುಗಡೆ ಪಿರ್ಯಾದಿದಾರರನ್ನು ನಿಲ್ಲಿಸಿ ಸಹ ಸವಾರನು ಬೈಕ್ ನಿಂದ ಇಳಿದು  ಬೀಚ್ ಗೆ ಹೋಗುವ ರಸ್ತೆಯ ಬಗ್ಗೆ ಕೇಳಿದ್ದು ನಾನು ಗೊತ್ತಿಲ್ಲ ಎಂದು ಹೇಳಿದ ಕ್ಷಣದಲ್ಲಿ ಪಿರ್ಯಾದಿಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಸುಮಾರು 32 ಗ್ರಾಂ ತೂಕದ ರೂ 1,25,000/- ಅಂದಾಜು ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಇಬ್ಬರು ಬಿಜೈ ಮೋರ್ ಕಡೆಗೆ ಹೋಗಿರುವುದಾಗಿದೆ ಎಂಬಿತ್ಯಾದಿ.

Konaje PS

ದಿನಾಂಕ 20-10-2023 ರಂದು ಬೆಳಿಗ್ಗೆ ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ಫೋನ್ ಗೆ ಪಿರ್ಯಾದಿದಾರರ ಕೆನರಾ ಬ್ಯಾಂಕ್  ನರಿಂಗಾನ ಶಾಖೆ ಅಕೌಂಟ್ ನಂಬ್ರ(ಉಳಿತಾಯ ಖಾತೆ)  ನೇದರಿಂದ ದಿನಾಂಕ 19-10-2023 ರಂದು 15,000/- ರೂ ಮತ್ತು ದಿನಾಂಕ 20-10-2023 ರಂದು 21,000/- ರೂ ಹಾಗೂ ಕೆನರಾ ಬ್ಯಾಂಕ್  ನರಿಂಗಾನ ಶಾಖೆಯ ಫಿಷರಿಸ್ ಅಕೌಂಟ್ (ಓ ಡಿ ಖಾತೆ) ನಂಬ್ರ  ನೇದರಿಂದ ದಿನಾಂಕ 19-10-2023 ರಂದು 50,000/- ದಂತೆ 4 ಬಾರಿ 2 ಲಕ್ಷ ರೂಪಾಯಿ, ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯಲ್ಲಿ ಅಕೌಂಟ್ ನಂಬ್ರ (ಉಳಿತಾಯ ಖಾತೆ)  ನೇದರಿಂದ ದಿನಾಂಕ 20-10-2023 ರಂದು 2,100/- ರೂ, ಹಾಗೂ ದೇರಳಕಟ್ಟೆಯ  ಯೂನಿಯನ್ ಬ್ಯಾಂಕ್ ಅಕೌಂಟ್ ನಂಬ್ರ (ಉಳಿತಾಯ ಖಾತೆ) ನೇದರಿಂದ ದಿನಾಂಕ 18-10-2023 ರಂದು 5,000/- ರೂ, ದಿನಾಂಕ 19-10-2023 ರಂದು 5,000/- ರೂ ಒಟ್ಟು 2,48,100/- ರೂ ಪಿರ್ಯಾದಿದಾರರ ಖಾತೆಯಿಂದ ಕಡಿತಗೊಂಡಿರುವುದು ಕಂಡು ಬಂದಿರುತ್ತದೆ, ಈ ಬಗ್ಗೆ ಪಿರ್ಯಾದಿದಾರರು ಕೆನರಾ ಬ್ಯಾಂಕ್ ನರಿಂಗಾನ ಶಾಖೆಯನ್ನು ಸಂಪರ್ಕಿಸಿದಾಗ ನರಿಂಗಾನ ಗ್ರಾಮದ ಕೆನರಾ ಶಾಖೆಯ (ಓ ಡಿ)ಫಿಷರಿಸ್ ಅಕೌಂಟ್ ನಂಬ್ರ   ನೇದರಿಂದ  ಅಬ್ದುಲ್ ಹೈ ರವರ ಖಾತೆ ನಂಬ್ರ 923010047386755 (IFSC-UTIB0003237)ನೇದಕ್ಕೆ 50,000/- ರೂ, ಅಬ್ದೇಶ್ ರಾಯ್  ಖಾತೆ ನಂಬ್ರ 8702010000002967 (IFSC-DBSS01N0702) ನೇದಕ್ಕೆ 50,000/- ರೂ, ಧರ್ಮದಾಸ್ ದಿಬಾರ್ ರವರ ಖಾತೆ ನಂಬ್ರ 50100665860999 (IFSC-HDFC0003188) ಖಾತೆಗೆ 50,000/- ರೂ ಮತ್ತು ಬಿಪ್ ಲಬ್ ಪಾಲ್ ರವರ ಖಾತೆ ನಂಬ್ರ 50100665855884( IFSC-HDFC0002505) ಖಾತೆಗೆ 50,000/- ರೂ ವರ್ಗಾವಣೆಯಾದ ಬಗ್ಗೆ ತಿಳಿದಿರುತ್ತದೆ..

ಇತ್ತೀಚಿನ ನವೀಕರಣ​ : 21-10-2023 05:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080