ಅಭಿಪ್ರಾಯ / ಸಲಹೆಗಳು

Crime Report in Barke PS

ದಿನಾಂಕ: 20-11-2023ರಂದು 16-22 ಗಂಟೆಗೆ ಮಂಗಳೂರು ನಗರದ ಬಳ್ಳಾಲ್ ಭಾಗ್ ಬಳಿ ಯುವಕನೊಬ್ಬ ಅಮಲಿನಲಿನಲ್ಲಿದ್ದಂತೆ ಕಂಡು ಬಂದಿದ್ದು ವಿಚಾರಿಸಿದಾಗ ತಡವರಿಸುತ್ತಾ ಯುವಕನು ತನ್ನ ಹೆಸರು ಕೆ.ಆದಿತ್ಯ ಭಟ್ ವಾಸ; ದಿವ್ಯಧಾಮ, ಅಚ್ಚುಕೋಡಿ ರಸ್ತೆ, ಬೊಂದೇಲ್ ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ಗಾಂಜಾ ಸೇವೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ಆತನನ್ನು ಮಂಗಳೂರು ಎ.ಜೆ ಆಸ್ಪತ್ರೆಯ ವೈಧ್ಯರ ಮುಂದೆ ವೈಧ್ಯಕೀಯ ತಪಾಸಣೆ ಬಗ್ಗೆ ಹಾಜರುಪಡಿಸಿದ್ದು ವೈಧ್ಯರು ಯುವಕನನ್ನು ವೈಧ್ಯಕೀಯ ತಪಾಸಣೆ ನಡೆಸಿ ವೈಧ್ಯರು “TETRAHYDRACANNABINOID (MARIJUANA )  : POSITIVE   ಎಂಬುದಾಗಿ ದೃಢಪತ್ರವನ್ನು  ನೀಡಿರುತ್ತಾರೆ. ಸದ್ರಿ ಆಪಾದಿತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಆಪಾದಿತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Mangalore East Traffic PS                

ಪಿರ್ಯಾದಿದಾರರಾದ ಸರ್ಪಾಜ್ ಅಹ್ಮದ್ ರವರು ದಿನಾಂಕ 19-11-2023 ರಂದು ಸಂಜೆ ಅವರ ಸ್ನೇಹಿತ ಅರ್ಫಾಜ್ ಮಹಮ್ಮದ್ ರವರು ಚಲಾಯಿಸುತ್ತಿದ್ದ ಸ್ಕೂಟರ್ ನೊಂದಣಿ ಸಂಖ್ಯೆ್: KA-19-HH-0265 ನೇಯದರಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಜೆಪ್ಪು ಕುಡ್ಪಾಡಿ ಮಾರ್ಗದ ಮೂಲಕ ಮಾರ್ನಮಿಕಟ್ಟೆ ಕಡೆಗೆ ಬರುತ್ತಿರುವಾಗ ಸಮಯ 18-30 ಗಂಟೆಗೆ ಮಾರ್ನಮಿಕಟ್ಟೆ ಸರ್ಕಲ್ ಬಳಿ ತಲುಪುತ್ತಿದ್ದಂತೆ ನಂದಿಗುಡ್ಡೆ ಕಡೆಯಿಂದ ಸದ್ರಿ ಸರ್ಕಲ್ ಗೆ ಬಂದು ಸೇರುವ ಸಾರ್ವಜನಿಕ ರಸ್ತೆಯಲ್ಲಿ ಆಟೋರಿಕ್ಷಾ ನೊಂದಣಿ ಸಂಖ್ಯೆಡ: KA-19-AB-8623 ನೇಯದನ್ನು ಅದರ ಚಾಲಕ ಸಾಹುಲ್ ಹಮೀದ್ ಎಂಬಾತನು ಸರ್ಕಲ್ ಬಳಸಿ ಮಂಗಳಾದೇವಿ ಕಡೆಗೆ ಹೋಗುವ ಗಡಿಬಿಡಿಯಲ್ಲಿ ಆಟೋರಿಕ್ಷಾವನ್ನು ನಿಧಾನಗೊಳಿಸದೇ ಅಜಾಗರೂಕತೆಯಿಂದ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸುತ್ತಾ ಒಮ್ಮೇಲೆ ಬಲಕ್ಕೆ ತಿರುಗಿಸಿದ ಪರಿಣಾಮ ರಿಕ್ಷಾವು ಸ್ಕೂಟರಿಗೆ ಢಿಕ್ಕಿಯಾಗಿ ಸ್ಕೂಟರ್ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅರ್ಫಾಜ್ ಮಹಮ್ಮದ್ ರವರ ಎಡಕೋಲುಕಾಲಿನಲ್ಲಿ ಮೂಳೆ ಮುರಿತವಾಗಿರುವುದಾಗಿ ತಿಳಿಸಿರುತ್ತಾರೆ, ಅಲ್ಲದೆ ಪಿರ್ಯಾದಿದಾರರಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ.ಈ ಬಗ್ಗೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Panambur PS   

ದಿನಾಂಕ: 20-11-2023 ರಂದು ಪಣಂಬೂರು ಗ್ರಾಮದ, ಪಣಂಬೂರು ದೀಪಕ್ ಪೆಟ್ರೋಲ್ ಪಂಪ್ ನ ಹಿಂದುಗಡೆ ಮಧ್ಯಾಹ್ನ ಸಮಯ ಸುಮಾರು  15-00  ಗಂಟೆಗೆ  ಒಬ್ಬ ವ್ಯಕ್ತಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದಿದ್ದು, ಈ ಬಗ್ಗೆ  ಆತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಆತನ  ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ರತನ್ ಕುಮಾರ್ (37) ವಾಸ: ಪವನ್ ವಿಹಾರ್ , ನಿಯರ್  ಓವರ್ ಬ್ರಿಡ್ಜ್ ತೊಕ್ಕೊಟ್ಟು ಮಂಗಳೂರು  ಎಂಬುದಾಗಿದ್ದು ಸದ್ರಿಯವರುಗಳನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಧೃಡಪಡಿಸುವರೇ ವೈದ್ಯಾಧಿಕಾರಿಗಳು ಎ.ಜೆ.ಆಸ್ಪತ್ರೆ, ಮಂಗಳೂರುರವರ ಮುಂದೆ ಹಾಜರುಪಡಿಸಿ ಪರೀಕ್ಷಾ ವರದಿಯ ಪ್ರತಿಯನ್ನು ಪಡೆಯಲಾಗಿ “TETRAHYDRACANNABINOID (MARIJUANA) is Positive” ಎಂದು ವರದಿ ಬಂದಿರುವುದರಿಂದ ಸದ್ರಿ ಆಪಾಧಿತರ ವಿರುದ್ದ ಕಲಂ: ಎನ್.ಡಿ.ಪಿ.ಎಸ್ ಕಾಯ್ದೆ- 1985 ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುವುದಾಗಿದೆ ಎಂಬಿತ್ಯಾದಿ.

Mulki PS

ದಿನಾಂಕ: 19-11-2023 ರಂದು ಸುಮಾರು 19-15 ಗಂಟೆಗೆ ಹಳೆಯಂಗಡಿ ಗ್ರಾಮದ ಕದಿಕೆ ಸೇತುವೆಯ ದಂಡೆಯಲ್ಲಿ  ಜೋಯಲ್ ಫೆರ್ನಾಂಡೀಸ್, ಪ್ರಾಯ 23 ವರ್ಷ,  ವಾಸ: ಜೋಯ್ ವಿಲ್ಲಾ ಬಜ್ಜೋಡಿ 1 ನೇ ಸೈಟ್ ಬಿಕರ್ನಕಟ್ಟೆ  ಗ್ರಾಮ, ಮಂಗಳೂರು ತಾಲ್ಲೂಕು ಎಂಬಾತನು ಯಾವುದೋ ಮಾದಕ ವಸ್ತು ಸೇವನೆ ಮಾಡಿ  ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವವನನ್ನು ವಶಕ್ಕೆ ಪಡೆದು ಮಂಗಳೂರು ಎಜೆ ಆಸ್ಪತ್ರೆಗೆ ಕಳುಹಿಸಿದ್ದು ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ಪರೀಕ್ಷಾ ವರದಿಯ ಧೃಡಪತ್ರವನ್ನು  ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಕಲಂ: ಎನ್.ಡಿ.ಪಿ.ಎಸ್ ಕಾಯ್ದೆಯಂತೆ  ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

Mulki PS  

ಪಿರ್ಯಾದಿ Rashmi Rita Pinto ದಾರರ ಗಂಡ,: ರಿಚ್ಚರ್ಡ್ ಡಿ ಸೋಜ,  ಪ್ರಾಯ: 85 ವರ್ಷ, ಗಂಡ: ದಿ. ಪೆಟ್ರಿಕ್ ಡಿ ಸೋಜ ಎಂಬವರು ದಿನಾಂಕ: 18-11-2023 ರಂದು 10.15 ಗಂಟೆಗೆ ಲ್ಯಾಫ್ ಟಾಫ್ ರಿಪೇರಿ ಮಾಡಿಸಲು ಮಂಗಳೂರಿಗೆ ಹೋಗಿ ಬರುತ್ತೇನೆಂದು ತಾವು ಪ್ರಸುತ್ತ ವಾಸ್ತವ್ಯವಿರುವ Kinnigoli Talipady Village ಜೋಲಿ ಡಿ ಸೋಜ ರವರ ಬಾಡಿಗೆ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಅನೇಕ ಕಡೆ ಹುಡುಕಾಡಿದ್ದಲ್ಲಿ  ಇತರ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿವುದಾಗಿದೆ.

ಕಾಣೆಯಾಗಿವುದಾಗಿದೆ.

ಕಾಣೆಯಾದವರ ಚಹರೆ:-

ಹೆಸರು: ರಿಚ್ಚರ್ಡ್ ಡಿ ಸೋಜ

ಪ್ರಾಯ: 49 ವರ್ಷ

ಎತ್ತರ: 5.2 ಅಡಿ

ಮೈಬಣ್ಣ: ಗೋದಿ ಮೈ ಬಣ್ಣ 

ಮೂಖ: ಗುಂಡು ಮುಖ

Traffic North Police Station                       

ದಿನಾಂಕ 20-11-2023 ರಂದು ಪಿರ್ಯಾದಿ Liyakath Ali ದಾರರ ಮಾವನಾದ ಮಯ್ಯದ್ದಿ(51) ಎಂಬವರು ತಮ್ಮ ಬಾಬ್ತು KA-19-AB-8308 ನಂಬ್ರದ ಆಟೋರಿಕ್ಷದಲ್ಲಿ NH 66  ರಲ್ಲಿ ಹಳೆಯಂಗಡಿ ಕಡೆಯಿಂದ ಮುಕ್ಕ ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಂಜೆ ಸಮಯ ಸುಮಾರು 4.15 ಗಂಟೆಗೆ ಮುಕ್ಕ ಚೆಕ್ ಪೋಸ್ಟ್ ಬಳಿ ಲಾರಿ ನಂಬ್ರ KA-19-AD-9903 ನೇಯದನು ಅದರ ಚಾಲಕ ಕಳಸಪ್ಪ ವೈ ಮಾದರ ಎಂಬಾತನು  NH 66 ರಸ್ತೆಯಲ್ಲಿ ಯಾವುದೇ ಮುನ್ಸೂಚನೆ ನಿಡದೇ ಅಥವಾ ಫಲಕಗಳನ್ನು ಅಳವಡಿಸದೆ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ ಲಾರಿಗೆ ನಿರ್ಲಕ್ಷತನದಿಂದ ಆಟೋರಿಕ್ಷವನ್ನು ಮಯ್ಯದ್ದಿ ಎಂಬುವರು ಚಲಾಯಿಸಿ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಮಯ್ಯದ್ದಿ ರವರ ಹಣೆಗೆ ಗಂಭೀರ ಸ್ವರೂಪದ ರಕ್ತಗಾಯ ,ಮೂಗಿಗೆ ರಕ್ತ ಗಾಯ ,ಎಡ ಕಣ್ಣಿಗೆ ಗುದ್ದಿದ ರೀತಿಯ ಗಾಯ ಮತ್ತು ಎಡ ಎದೆಯ ಬಳಿ ಗುದ್ದಿದ ರೀತಿಯ  ಗಾಯಗೊಂಡಿದ್ದು ಮುಕ್ಕ  ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆಯ ಬಗ್ಗೆ A J ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ  ಎಂಬಿತ್ಯಾದಿ

Konaje PS

ದಿನಾಂಕ:20-11-2023 ರಂದು 11:00 ಗಂಟೆಗೆ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ವಿಜಯ ನಗರ ಬಯಲು ಪ್ರದೇಶ  ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತರಾದ ಶಾಹಿಕ್ ಪ್ರಾಯ:23 ವರ್ಷ,  ವಾಸ:ಕಿನ್ಯಾ, ಮಂಜನಾಡಿ ಗ್ರಾಮ,ಉಳ್ಳಾಲ ತಾಲೂಕು ಮತ್ತು ಇಸ್ಮಾಯಿಲ್ ಅಮೀರ್ ಪ್ರಾಯ:34 ವರ್ಷ,  ವಾಸ:ಕಿನ್ಯಾ ಬೆಳರಿಂಗೆ, ಕಿನ್ಯಾ ಗ್ರಾಮ, ಉಳ್ಳಾಲ ತಾಲೂಕು   ಎಂಬಾತರನ್ನು ಮುಂದಿನ ಕ್ರಮದ ಬಗ್ಗೆ ಮಧ್ಯಾಹ್ನ 11:10 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು Positive for TETRAHYDROCANNABINOL ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುವ ಮೇರೆಗೆ ಆರೋಪಿತರ ವಿರುದ್ದ  ಎನ್.ಡಿ.ಪಿ.ಎಸ್ ಕಾಯ್ದೆಯಂತೆ  ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ.

CEN Crime PS

ದಿನಾಂಕ 03-06-2023 ರಂದು ಸಂಜೆ ಸಮಯ 18:00 ಗಂಟೆಗೆ ಟೆಲಿಗ್ರಾಂ ಆ್ಯಪ್ ನಲ್ಲಿ ಮೇಸೆಜ್ ಬಂದಿದ್ದು,ಇದರಲ್ಲಿ ಆನ್ ಲೈನ್ ನಲ್ಲಿ ಹಣ ತೊಡಗಿಸಿದರೆ ಎರಡು ಪಟ್ಟು ಆಗುವುದಾಗಿ ಮೇಸೆಜ್ ಇರುತ್ತದೆ.ಇದನ್ನು ನಂಬಿದ ಪಿರ್ಯಾದಿದಾರರು  UPI ವಿವರವನ್ನು ನೀಡಿರುತ್ತಾರೆ.ನಂತರ ಪಿರ್ಯಾದಿದಾರರು ಬ್ಯಾಂಕ್ ವಿವರವನ್ನು ಪರಿಶೀಲಿಸಿದಾಗ ಹಣ ವಿತ್ ಡ್ರಾ ಆಗಿರುವುದು ಕಂಡು ಬಂದಿರುತ್ತದೆ. UPI ಮೂಲಕ ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆ  ನೇದರಿಂದ ಯಾರೋ ಅಪರಿಚಿತರು ದಿನಾಂಕ.03-06-2023 ರಂದು 20,000 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ. ಅಪರಿಚಿತ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೆಕಾಗಿ ವಿನಂತಿಸಿಕೊಳ್ಳುತ್ತೇನೆ.

Moodabidre PS

ದಿನಾಂಕ: 19-11-2023 ರಂದು 11.30 ಗಂಟೆಗೆ ಠಾಣಾ ಸರಹದ್ದಿನಲ್ಲಿ ಪೊಲೀಸ್ ನಿರೀಕ್ಷಕರು ಸಂದೇಶ್ ಪಿ.ಜಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಸ್ವರಾಜ್ ಮೈದಾನದ ಬಳಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ದೊರೆತ ಮಾಹಿತಿಯಂತೆ 12.00 ಗಂಟೆಗೆ ಸ್ವರಾಜ್ ಮೈದಾನದ ಬಳಿಗೆ ತಲುಪಿದಾಗ ಅಲ್ಲಿ ಕೆಲವು ಜನರು ಸೇರಿದ್ದು ಒಬ್ಬ ವ್ಯಕ್ತಿಯು ಚೀಟಿಯಲ್ಲಿ ಬರೆಯುತ್ತಾ ಇದು ಬಾಂಬೆ ಕಲ್ಯಾಣಿ ಮಟ್ಕಾ ಎಂದು ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಅಲ್ಲಿಗೆ ಹೋದಾಗ ಸಾರ್ವಜನಿಕರು ಓಡಿ ಹೋಗಿದ್ದು, ಸಿಬ್ಬಂದಿಗಳ ಸಹಾಯದಿಂದ ಚೀಟಿ ಬರೆಯುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ರೋಹನ್ ಪ್ರಾಯ: 30 ವರ್ಷ,  ವಾಸ: ಅಲಂಗಾರ್ ಹೌಸ್, ಮಾರ್ಪಾಡಿ ಗ್ರಾಮ, ಮೂಡಬಿದರೆ ತಾಲೂಕು ಎಂಬುದಾಗಿ ತಿಳಿಸಿದ್ದು ಆತನನ್ನು ಪ್ರಶ್ನಿಸಲಾಗಿ ಸಾರ್ವಜನಿಕರಿಂದ ಮಟ್ಕಾ ಜೂಜಾಟಕ್ಕೆ ಹಣವನ್ನು ಸಂಗ್ರಹಿಸುತ್ತಿರುವುದಾಗಿಯೂ ತಿಳಿಸಿದ್ದು ಆರೋಪಿತನ ವಶದಲ್ಲಿದ್ದ ನಗದು ಹಣ ರೂ: 1120/- ನಗದು ಮಟ್ಕಾ ನಂಬರ್ ಬರೆದ ಸಣ್ಣ ಡೈರಿ-01 ಹಾಗೂ ಮಟ್ಕಾ ಬರೆಯಲು ಉಪಯೋಗಿಸಿದ ಒಂದು ಪೆನ್ನನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಆರೋಪಿತರನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-11-2023 03:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080