ಅಭಿಪ್ರಾಯ / ಸಲಹೆಗಳು

Crime Report in : Mangalore West Traffic PS     

 ಪಿರ್ಯಾದು RAVISHANKARA M K ದಾರರು ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದವರು  ದಿನಾಂಕ: 20-12-2023  ರಂದು ತಮ್ಮ ಬಾಬ್ತು ಆಟೋ ರಿಕ್ಷಾ ನಂಬ್ರ ಕೆಎ-19-ಎಎ-8573 ನೇ ದರಲ್ಲಿ ಬಲ್ಲಾಳ್ ಬಾಗ್ ಆಟೋ ಪಾರ್ಕ್ ನಿಂದ ಪ್ರಯಾಣಿಕರೊಬ್ಬರನ್ನು ಕುಳ್ಳಿರಿಸಿಕೊಂಡು ಕಂಕನಾಡಿ ಕಡೆಗೆ ಹೋಗುವರೇ ಸಮಯ ಸುಮಾರು ಬೆಳಿಗ್ಗೆ 7.30 ಗಂಟೆಗೆ ಎಂ ಜಿ ರಸ್ತೆಯ ಬೆಸೆಂಟ್ ಜಂಕ್ಷನ್ ತಲುಪುತ್ತಿದ್ದಂತೇ ಕಲಾಕುಂಜ ರಸ್ತೆ ಕಡೆಯಿಂದ ದ್ವಿ ಚಕ್ರ ವಾಹನ ನಂಬ್ರ  ಕೆಎ19-ಇಇ-3201 ನೇದರ ಸವಾರ ಹೆಚ್ ರಮಾನಂದ ಶೆಣೈ ರವರು ಸಾರ್ವಜನಿಕ  ರಸ್ತೆಯಲ್ಲಿ  ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಆಟೋ ಸಮೇತ ರಸ್ತೆಗೆ ಬಿದ್ದಿದ್ದು ಬಲಗಾಲಿನ ಹಿಮ್ಮಡಿಯ ಬಳಿಯಲ್ಲಿ ಮೂಳೆ ಮುರಿತದ ಗಾಯವಾದವರನ್ನು  ಸೇರಿದ ಸಾರ್ವಜನಿಕರು ಉಪಚರಿಸಿ ಪ್ರಥಮ ಚಿಕಿತ್ಸೆಯ ಬಗ್ಗೆ  ವಿನಯ ಆಸ್ಪತ್ರೆಗೆ ದಾಖಲಿಸಿದ್ದು , ಹೆಚ್ಚಿನ ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.   

Mangalore North PS

ದಿನಾಂಕ 20/12/2023 ರಂದು ಸಂಜೆ ಸುಮಾರು 06.45 ಗಂಟೆಗೆ  ಮಂಗಳೂರು ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿಯಿಂದ ಕಂಡತಪಳ್ಳಿ ಮಂಡಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಸಾರ್ವಜನಿಕ ರಸ್ತೆಯ ದಕ್ಷಿಣಕ್ಕಿರುವ ಶಟರ್ ಬಾಗಿಲು ಮುಚ್ಚಿರುವ ಗೋಡೌನ್ ಕಟ್ಟಡದ  ಮುಂಬದಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬಾತ ವ್ಯಕ್ತಿ ಹೋಂಡಾ ಆಕ್ಟಿವಾ ಸ್ಕೂಟರಿನಲ್ಲಿ ಬಂದು ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಮೇರೆಗೆ  ಮಂಗಳೂರು ನಗರದ ನ್ಯೂಚಿತ್ರಾ ಜಂಕ್ಷನ್ ಬಸವನಗುಡಿಯಿಂದ ಕಂಡತಪಳ್ಳಿ ಮಂಡಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಸಾರ್ವಜನಿಕ ರಸ್ತೆಯ ದಕ್ಷಿಣಕ್ಕಿರುವ ಶಟರ್ ಬಾಗಿಲು ಮುಚ್ಚಿರುವ ಗೋಡೌನ್ ಕಟ್ಟಡದ  ಮುಂಬದಿ ಸಾರ್ವಜನಿಕ ಸ್ಥಳಕ್ಕೆ ಸಂಜೆ 07.25 ಗಂಟೆಗೆ ದಾಳಿ ನಡೆಸಿ ಗಾಂಜಾ ಹಾಗೂ ಗಾಂಜಾ ಆಷ್ ನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಲವೇಶ್ ರಾಕೇಶ್ ಜೈನ್ ಎಂಬಾತನನ್ನು ದಸ್ತಗಿರಿ ಮಾಡಿ ಅಂಗಶೋಧನೆ ನಡೆಸಿದಲ್ಲಿ ಆರೋಪಿ ಲವೇಶ್ ರಾಕೇಶ್ ಜೈನ್ ವಶದಿಂದ ಸುಮಾರು 2500 ರೂ ಮೌಲ್ಯದ 50 ಗ್ರಾಂ ಗಾಂಜಾ, ರೂ 25000 ಮೌಲ್ಯದ  ಒನ್ ಪ್ಲಸ್ ಮೊಬೈಲ್ ಫೋನ್-1,.ರೂ 2000 ಮೌಲ್ಯದ 42 ಗ್ರಾಂ ಗಾಂಜಾ, ರೂ 3500 ಮೌಲ್ಯದ 08 ಗ್ರಾಂ ಗಾಂಜಾ ಆಷ್, ರೂ 500 ಮೌಲ್ಯದ ಸಣ್ಣ ಡಿಜಿಟಲ್ ಡಿಸ್ ಪ್ಲೇ ಇರುವ ತೂಕಮಾಪನ-1 ಹಾಗೂ ಒಟ್ಟು ರೂ 6,38,000/- ಮೌಲ್ಯದ ವಿವಿಧ ತೂಕದ ಚಿನ್ನದ ಬ್ರಾಸ್ ಲೈಟ್ ಗಳು-5, ಮತ್ತು ಬಿಳಿ ಕಲ್ಲು ಅಳವಡಿಸಿದ ಚಿನ್ನದ ಪೆಂಡೆಂಟ್-9, Kaju Katli ಎಂದು ಬರೆದಿರುವ ರಟ್ಟಿನ ಸಣ್ಣ ಬಾಕ್ಸ್-1 , ರೂ 300 ಮೌಲ್ಯದ ಕಪ್ಪು ಬಣ್ಣದ ಬೆನ್ನ ಹಿಂದೆ ಹಾಕುವ ಬಟ್ಟೆಯ ಬ್ಯಾಗ್-1  ಮತ್ತು 70,000/- ರೂ ಮೌಲ್ಯದ KA-19HF-7694 ನೋಂದಣಿ ನಂಬ್ರನ ಗ್ರೇ ಕಲರನ ಆಕ್ಟಿವಾ ಹೋಂಡಾ-1 ಸೊತ್ತುಗಳನ್ನು ಮಹಜರು ತಯಾರಿಸಿ ಸ್ವಾಧೀನಪಡಿಸಿಕೊಂಡಿದ್ದು, ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Mangalore East PS

ದಿನಾಂಕ: 20-12-2023 ರಂದು ಸಮಯ ಸುಮಾರು 13.00 ಗಂಟೆ ವೇಳೆಗೆ ಮಂಗಳೂರು ನಗರದ ಶಿವಭಾಗ್ 2 ನೇ ಕ್ರಾಸ್ ಕಸ್ತೂರಿ ಮೇನ್ ಷನ್ ಅಪಾರ್ಟ್ ಮೆಂಟ್ ಬಳಿಯಲ್ಲಿ  ಓರ್ವ ವ್ಯಕ್ತಿಯು ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದಿದ್ದು ಆತನನ್ನು ವಶಕ್ಕೆ ತೆಗೆದು ಕೊಂಡು ವಿಚಾರಿಸಲಾಗಿ ಆತನ ಹೆಸರು ಮೊಹಮ್ಮದ್ ಆಸೀಫ್ ಪ್ರಾಯ 22 ವರ್ಷ ವಾಸ: ಕರಿಂಬನಕಲ್ ಹೌಸ್ ಮಲಪುರಂ ಕೇರಳ ಎಂಬುದಾಗಿ ತಿಳಿಸಿದ್ದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ  ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) ಪಾಸಿಟಿವ್ ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Surathkal PS    

ದಿನಾಂಕ 20-12-2023 ರಂದು ಮದ್ಯಾಹ್ನ 12-30 ಗಂಟೆಗೆ ಸುರತ್ಕಲ್ ಪೊಲೀಸ್  ಠಾಣಾ ಎಚ್.ಸಿ. ದಿಲಿಪ್ ರಾಜೇ ಅರಸ್ ರವರು ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕಿನ, ಸುರತ್ಕಲ್ ಗ್ರಾಮದ ತಡಂಬೈಲ್ ಬಳಿಯ ನಿರ್ಮಿತಿ ಕೇಂದ್ರದ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ಉಲಾಯಿ ಪಿದಾಯಿ (ಅಂದರ್ ಬಾಹರ್) ಎಂಬ ನಸೀಬಿನ ಜೂಜಾಟ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡು ದಿನಾಂಕ 20-12-2023 ರಂದು 16-15 ಗಂಟೆಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ತಡಂಬೈಲ್ ನ ನಿರ್ಮಿತಿ ಕೇಂದ್ರದ ಬಳಿ ಪೊದೆಯ ಒಳಗೆ 4 ಜನರು ನೆಲದ ಮೇಲೆ ಕುಳಿತ್ತಿದ್ದು,  ಅವರ ಪೈಕಿ ಒಬ್ಬನು ಎಸ್ಪೀಟ್ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಅಂದರ್ ಬಾಹರ್ ಎಂದು ಹೇಳಿಕೊಂಡು ಇಸ್ಪಿಟ್ ಎಲೆಯನ್ನು ಹಾಕುತಿದ್ದು, ಉಳಿದವರು ಕೈಯಲ್ಲಿ ಹಣವನ್ನು ಪಣವಾಗಿ ಹಿಡಿದುಕೊಂಡು, ಸದ್ರಿ ನೆಲದ ಮೇಲೆ ಹಾಸಿದ್ದ ಪ್ಲಾಸ್ಟಿಕ್ ಟರ್ಪಾಲ್ ನ ಮೇಲೆ ಅಂದರ್  ರೂ 100/ ಬಾಹರ್  ರೂ 100/ ಎಂದು ಹೇಳಿಕೊಂಡು ಹಣವನ್ನು ಹಾಕುತ್ತಾ ಜೂಜಾಟದಲ್ಲಿ ಮೈಮರೆತಿರುವುದನ್ನು  ಖಚಿತ ಪಡಿಸಿಕೊಂಡು 16-40 ಗಂಟೆಗೆ ದಾಳಿ ನಡೆಸಲಾಗಿ, ಜೂಜಾಟದಲ್ಲಿ ತೊಡಗಿದ್ದ 04 ಜನರನ್ನು  ಹಿಡಿದುಕೊಂಡು, ವಿಚಾರಿಸಲಾಗಿ ಈ ನಾಲ್ಕು ಜನರು ಅಂದರ್ ಬಾಹರ್ ಎಂಬ ನಸೀಬಿನ ಜೂಜಾಟ ಆಡುತ್ತಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಇವರುಗಳ ಹೆಸರು ವಿಳಾಸ ಕೇಳಲಾಗಿ 1) ನಿಂಗಪ್ಪ ಪಾಟೀಲ್, 2) ಶರಣಪ್ಪ ಗುಳಬಾಳ 3) ಸುನೀಲ್   4) ಸಕ್ರಪ್ಪ  ಎಂದು ತಿಳಿಸಿದ್ದು, ಆರೋಪಿಗಳು ಅದೃಷ್ಟದ ಆಟ ಅಂದರ್ ಬಾಹರ್ ಜೂಜಾಟ ಆಡಿದ್ದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಗಳನ್ನು ದಸ್ತಗಿರಿಯನ್ನು ಮಾಡಿ ಆರೋಪಿಗಳು ಜುಗಾರಿ ಜೂಜಾಟಕ್ಕೆ ಉಪಯೋಗಿಸಿದ ನೆಲದ ಮೇಲೆ ಇದ್ದ ನಗದು ರೂ. 400/- ಮತ್ತು ನಾಲ್ಕು ಮೊಬೈಲ್ ಫೋನುಗಳನ್ನು ಮತ್ತು ಆರೋಪಿತರ ವಶದಲ್ಲಿದ್ದ ಹಣವನ್ನು ಲೆಕ್ಕ ಮಾಡಿ ನೋಡಲಾಗಿ 1580/-  ರೂ. ಹೀಗೆ ಒಟ್ಟು ರೂ. 1980/- ( ರೂಪಾಯಿ ಸಾವಿರದ ಒಂಬೈನೂರ ಎಂಬತ್ತು ಮಾತ್ರ ) ಹಾಗೂ ಇಸ್ಪೀಟ್ ಎಲೆಗಳು-52 ನ್ನು ಹಾಗೂ ನೆಲಕ್ಕೆ ಹಾಸಲಾದ ಬಿಳಿ ಬಣ್ಣದ ಪ್ಲಾಸ್ಟಿಕ್ ಟರ್ಪಾಲ್ ನ್ನು ಸ್ವಾಧೀನಪಡಿಸಲಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-12-2023 03:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080