ಅಭಿಪ್ರಾಯ / ಸಲಹೆಗಳು

Barke PS

ಪಿರ್ಯಾದಿದಾರರಾದ ಶ್ರೀಮತಿ ವಾಹಿದ (50) ಗಂಡ:ಅಬ್ದುಲ್ ರಹಿಮಾನ್ ರಫೀಕ್, ವಾಸ:ಅಮೀನ ಮಂಜಿಲ್, ಕರ್ಬಲಾ ಕಂಫೌಂಡ್ ಕುದ್ರೋಳಿ ಮಂಗಳೂರು ಎಂಬವರು ತಾನು ಮೂಲ ಗೇಣಿ ಪ್ರಕಾರ ಅನುಭವಿಸಿಕೊಂಡಿದ್ದ ಕಸಬಾ ಬಜಾರ್ ಗ್ರಾಮದ ಮಂಗಳೂರು ಮಹಾನಗರ ಪಾಲಿಕೆಯ ಕುದ್ರೋಳಿ ಯಾರ್ಡ್ ನ ಮಂಗಳೂರು ಸಿಟಿ ಸಬ್ ರಿಜಿಸ್ಟರ್ ವ್ಯಾಪ್ತಿಯ ವಕ್ಫ್ ಮಂಡಳಿಗೆ ಸಂಧಿಸಿದ R.S. N31B-1ರಲ್ಲಿನ 0-02-5 ಸೆಂಟ್ಸ್ ಜಮೀನು ಹಾಗೂ ಅದರಲ್ಲಿರುವ ಕಟ್ಟಡದ ನಂ:8-1ನೇದನ್ನು ಆರೋಪಿಗಳಲ್ಲಿ ನೂರುಲ್ಲಾ ಎಂಬವರು ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದು ಉಳಿದ ಆರೋಪಿಗಳಾದ ಆಸಿಫ್, ಅಮೀರ್ ಮತ್ತು ಮಕ್ಬೂಲ್ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವ ಸಮಯ ಜಮೀನು ಹಾಗೂ ಕಟ್ಟಡವು ಆರೋಪಿಗಳಿಗೆ ಸಂಬಂಧ ಪಡದೇ ಇದ್ದರೂ ಸಹ ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದಲೇ ಕಟ್ಟಡ ಹಾಗೂ ಜಮೀನನ್ನು ಪಿರ್ಯಾದಿದಾರರಿಗೆ ಮಾರಾಟ ಮಾಡುವುದಾಗಿ ನಂಬಿಸಿ ಅವರಿಂದ ರೂಪಾಯಿ 1,75,000/- ಹಾಗೂ ಬಾಕಿ ಇದ್ದ ಬಾಡಿಗೆ ಹಣ ರೂಪಾಯಿ 7000/- ಪಡೆದು ಆರೋಪಿಗಳೆಲ್ಲರೂ ಸೇರಿ ಜಮೀನು ಹಾಗೂ ಕಟ್ಟಡವನ್ನು ಪಿರ್ಯಾದಿದಾರರ ಹೆಸರಿಗೆ ಮಾಡಿಕೊಡದೇ ಅಪರಾಧಿಕ ನಂಬಿಕೆ ದ್ರೋಹ ಹಾಗೂ ವಂಚಿಸಿರುವುದಾಗಿದೆ ಎಂಬಿತ್ಯಾದಿಯಾಗಿದೆ.

Konaje PS

ದಿನಾಂಕ 21.02.2023 ರಂದು ಸಂಜೆ ಸುಮಾರು 19.30 ಗಂಟೆಗೆ ಪಿರ್ಯಾದಿ Mohammad Ubaidulla ದಾರರು ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ನೆತ್ತಿಲಪದವು ಜಂಕ್ಷನ್ ಬಳಿಗೆ ಹೋಗಿ ನೆರೆಯ ಅಬ್ಬಾಸ್ ಎಂಬವರ ಮಗ ಅಜ್ಮಲ್ ಎಂಬಾತನೊಂದಿಗೆ ರಿಕ್ಷಾ ಪಾರ್ಕ ಬಳಿ ಮಾತನಾಡುತ್ತಾ ಇರುವಾಗ, ಜಂಕ್ಷನ್ ನಲ್ಲಿರುವ ಧ್ವಜ ಸ್ತಂಭದ ಬಳಿ ಪಿರ್ಯಾದಿ ದಾರರ ಅಣ್ಣ ಹಂಜ, ನೆರಮನೆಯ ಅಬ್ಬಾಸ್ ಹಾಗೂ ಗೇರುಕಟ್ಟೆಯ ಸಿಯಾಬ್, ಆತನ ಜೊತೆಗಿದ್ದ ಗಪೂರ್ & ಫಯಾಜ್ ರವರಿಗೆ ಮಾತಿನ ಜಗಳವಾಗುತ್ತಿದ್ದದನ್ನು ಕಂಡು ಪಿರ್ಯಾದಿದಾರರು ಮತ್ತು ಅಜ್ಮಲ್ ಅವರ ಬಳಿಗೆ ಹೋಗುತ್ತಿದ್ದಂತೆ ಸಿಯಾಬ್ ಎಂಬಾತನು ಅಲ್ಲಿಯೇ ಪಕ್ಕದಲ್ಲಿದ್ದ ಹಾರ್ಡವೇರ್ ಅಂಗಡಿಯಿಂದ ಹೊಸ ಪಿಕ್ಕಾಸವೊಂದನ್ನು ಹಿಡಿದುಕೊಂಡು ಬಂದು ಅಬ್ಬಾಸ್ ರವರನ್ನು ಹೊಡೆಯಲು ಮುಂದಾಗಿದ್ದು, ಇದನ್ನು ತಡೆಯಲು ಹೋದ ಪಿರ್ಯಾದಿದಾರರನ್ನು ಸಿಯಾಬ್ ತಡೆದು ನಿಲ್ಲಿಸಿ “ರಂಡೆ ಮೋನು, ಬೇವರ್ಸಿ, ಸೂಳೆ ಮೋನು, ನಿಂಗಳ ಎಲ್ಲರ ಕೊಲ್ಲುವೆ, ನಿವೇಲ್ಲಾ, ನೆತ್ತಿಲಪದವುಂಡ ಬೆಳಿಯಾಲ್, ಸೂಳೆ ಮಕ್ಕಳೆ” ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ಬೈದಾಡಿ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಬಲವಾಗಿ ತಲೆಗೆ ಪಿಕ್ಕಾಸಿನಿಂದ ಗಂಭೀರ ರಕ್ತ ಗಾಯಗೊಳಿಸಿದ್ದಲ್ಲದೆ, ಅಬ್ಬಾಸ್ ರವರ ಎದೆಗೆ ಕಾಲಿನಿಂದ ತುಳಿದು ಕೈಯಿಂದ ಹೊಡೆದಿರುವುದಾಗಿದೆ. ಜೊತೆಗೆ ಗಪೂರ್ ಎಂಬಾತನು ಅಜ್ಮಲ್ ಎದೆಗೆ ಕಾಲಿನಿಂದ ತುಳಿದು, ನೆಲಕ್ಕೆ ಬಿಳಿಸಿ ಕೈಯಿಂದ ಹೊಡೆದಿದ್ದು, ಅಷ್ಟರಲ್ಲಿ ಜನ ಸೇರುತ್ತಿದ್ದಂತೆ ನೆಲಕ್ಕೆ ಬಿದ್ದಿದ್ದ ಪಿರ್ಯಾದಿದಾರರನ್ನು ಪಿರ್ಯಾದಿದಾರರ ಅಣ್ಣ ಹಂಜನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಯೇನಪೋಯ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದ್ದು, ಈ ಘಟನೆಗೆ ಸಿಯಾಬ್ ನಿಗೂ ಮತ್ತು ಅಬ್ಬಾಸ್ ರವರಿಗೂ ಒಂದು ವಾರದ ಹಿಂದೆ ಹಣದ ವಿಚಾರವಾಗಿ ಸಿಯಾಬ್ ಹಲ್ಲೆ ಮಾಡಲು ಮುಂದಾಗಿದ್ದೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

Moodabidre PS 

 ಪಿರ್ಯಾದಿದಾರರಿಗೆ ತನ್ನ ಗಂಡನಿಂದ ವಿಚ್ಛೇದನವಾಗಿರುತ್ತದೆ. ಪಿರ್ಯಾದಿದಾರರ ತಾಯಿ ಮತ್ತು ತಮ್ಮ ಪಿರ್ಯಾದಿದಾರರಿಗೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದು ಆ ಸಮಯದಲ್ಲಿ ವೇಣೂರು ನಿವಾಸಿ ಮೊಹಮ್ಮದ್ ಶರೀಫ್ ಎಂಬಾತನು ಪಿರ್ಯಾದಿದಾರರಿಗೆ ಪರಿಚಯವಾಗಿ ಮದುವೆಯಾಗುತ್ತೇನೆ ಎಂದು ನಂಬಿಸಿ, ಅಲ್ಲದೇ ತಾನು ವಿದೇಶದಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ವಿದೇಶಕ್ಕೆ ಹೋಗಲು 50000/- ರೂ ನಗದನ್ನು ಪಡೆದುಕೊಂಡಿದ್ದು, ನಂತರ ಆತನ ಪತ್ನಿಗೆ ದಿನಾಂಕ 24/06/2022 ರಂದು 5000/-ರೂ, ಆತನ ಖಾತೆಗೆ ದಿನಾಂಕ 15/10/2022 ರಂದು 6000/- ರೂ ಮತ್ತು ಆತನ ಅಕ್ಕನ ಗಂಡನ ಖಾತೆಗೆ 5000/- ರೂ ವನ್ನು ಪಡೆದುಕೊಂಡು ನಂತರ ಮದುವೆಯಾಗುವುದಿಲ್ಲವಾಗಿ ಮೋಸ ಮಾಡಿ ನಂಬಿಕೆ ದ್ರೋಹ ಮಾಡಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 22-02-2023 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080