ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                 

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಶ್ರೀಮತಿ ಸೋನಾಲಿ ಅಶ್ವಿನ್ ಬಲ್ಲಾಳ್ ಪ್ರಾಯ-34 ವರ್ಷ ಎಂಬವರು ನಿನ್ನೆ   ದಿನಾಂಕ: 21/02/2024 ರಂದು ತನ್ನ ಬಾಬ್ತು KA-19-MM-2722 ನಂಬ್ರದ  ಕಾರಿನಲ್ಲಿ ತನ್ನ ಮಗಳಾದ ಬೇಬಿ ಆರಾದ್ಯ, ಪ್ರಾಯ-9 ವರ್ಷ ಎಂಬಾಕೆಯನ್ನು ಕುಳ್ಳಿರಿಸಿಕೊಂಡು ತನ್ನ ತಾಯಿ ಮನೆಯಾದ ಬಂಟ್ವಾಳ ಕಡೆಯಿಂದ ತನ್ನ ಗಂಡನ ಕಡೆಗೆ ಫರಂಗೀಪೇಟ್ ,ಪಡೀಲ್  ಮಾರ್ಗವಾಗಿ ಬರುತ್ತಾ ಕುಲಶೆಕರ ಕಂಡೆಟ್ಟು ಕ್ರಾಸ್ ಬಳಿಯ ತೆರೆದ ಡಿವೈಡರ್ ಬಳಿ ಬರುತ್ತಿದ್ದಂತೆ  ರಾತ್ರಿ ಸಮಯ ಸುಮಾರು 9:30 ಗಂಟೆಗೆ ಕಂಡೆಟ್ಟು ಕಡೆಯಿಂದ KA-19-MK-4788 ನಂಬ್ರದ ಕಾರನ್ನು  ಅದರ ಚಾಲಕನಾದ ವಿಶ್ವನಾಥ ಎಂಬವರು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ತೆರೆದ ಡಿವೈಡರ ಜಾಗದಲ್ಲಿ ರಾ.ಹೆ 73 ನೇ ರಸ್ತೆಗೆ ಮುನ್ನುಗ್ಗಿಸಿ ಪಿರ್ಯಾದಿದಾರರ ಕಾರಿನ ಬಲಬದಿಯ ಮುಂಭಾಗಕ್ಕೆ ಡಿಕ್ಕಿಪಡಿಸಿದ  ಪರಿಣಾಮ ಪಿರ್ಯಾದಿದಾರರ ಹೊಟ್ಟೆ ಮತ್ತು ಎದೆಗೆ ಭಾಗ ಸ್ಟೇರಿಂಗ್ ಗೆ  ತಾಗಿ ಹೊಟ್ಟೆ ಮತ್ತು ಎದೆಗೆ ಭಾಗಕ್ಕೆ ಗುದ್ದಿದ ನಮೂನೆಯ ಒಳನೋವಾಗಿದ್ದು,  ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆ ದಾಖಲಾಗಿದ್ದು ಅಲ್ಲದೆ ಈ ಅಪಘಾತದಿಂದ ಎರಡೂ ಕಾರಗಳು  ಜಖಂಗೊಂಡಿರುತ್ತವೆ ಎಂಬಿತ್ಯಾದಿ .

 

 

Mangalore Rural PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ:22-02-2024 ರಂದು ಪಿರ್ಯಾದಿ Arun Kumar Dಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಅಡ್ಯಾರ್ ಕಟ್ಟೆ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದ  ನೌಶಾದ್ (40 ವರ್ಷ) ತಂದೆ: ಮೊಹಮ್ಮದ್, ವಾಸ: ಎಲಿಯಾರ್ ಪದವು, ಅಂಬ್ಲಮೊಗರು, ಕೊಣಜೆ ಮಂಗಳೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟಿದ್ದು, ಆರೋಪಿತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Kavoor PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 21/02/2024 ರಂದು ಮಲ್ಲಿಕಾರ್ಜುನ ಬಿರಾದಾರ ಪೊಲೀಸ್ ಉಪ ನಿರೀಕ್ಷಕರು ಕಾವೂರು ಪೊಲೀಸ್ ಠಾಣೆ ಕಾವೂರು ಮಂಗಳೂರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ  ಮಂಗಳೂರು ನಗರದ ಕುಂಟಿಕಾನ ಸಾರ್ವಜನಿಕ ಬಸ್ಸ ನಿಲ್ದಾನದ ಬಳಿ  ಅಪ್ತಬ್ ಅಶ್ರಪ್ ಎ (21 ವರ್ಷ ) ತಂದೆ: ಅಶ್ರಪ್ ಎಮ್, ವಾಸ:  ಕ್ಲೈವ್ ಓಸಿಯನ್ ಪರ್ಲ ಎದುರುಗಡೆ ಪಿ ವಿ ಎಸ್ ಹತ್ತಿರ ಮಂಗಳೂರು  ಎಂಬಾತನು ಅಮಲು ಪದಾರ್ಥ ಸೇವನೆ ಮಾಡಿದ ಬಗ್ಗೆ ವಾಸನೆ ಬರುತ್ತಿದ್ದು ಮುಂದಿನ ಕ್ರಮದ ಬಗ್ಗೆ  ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ  ದೃಡಪತ್ರ ನೀಡಿರುತ್ತಾರೆ ಎಂಬಿತ್ಯಾದಿ.

 

Ullal PS

ಪ್ರಕರಣದ ಸಾರಾಂಶವೇನೆಂದರೆ ಈ ದಿನ ದಿನಾಂಕ. 22-02-2024 ರಂದು ಪಿರ್ಯಾದಿದಾರರಾದ  ಸಂತೋಷಕುಮಾರ್ ಡಿ, PSI ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಮರ್ಕಾಝ್ ಶಾಲೆಯ  ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಯುವಕ ನೊರ್ವ ನಿಷೇದಿತ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ  ಮೊಹಮ್ಮದ್ ಹನೀಫ್, ಪ್ರಾಯ: 32 ವರ್ಷ, ತಂದೆ: ದಿ| ಸಯ್ಯದ್  ವಾಸ: 3-128/19 ಹಿದಾಯತ್ ನಗರ ಅಂಗನವಾಡಿ ಹತ್ತಿರ ಮುಳ್ಳುಗುಡ್ಡೆ ಮಸೀದಿ ಸಮೀಪ ಕೆ.ಸಿ.ರೋಡ್ ಕೋಟೆಕಾರ್ ಗ್ರಾಮ ಉಳ್ಳಾಲ ತಾಲೂಕು  ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು  TETRAHYDROCANNABINOL ( A Derivative Of Cannabis)  ಸೇವನೆ ಮಾಡಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ದೃಢಪತ್ರ ನೀಡಿರುವುದರಿಂದ ಮೊಹಮ್ಮದ್  ಹನೀಫ್  ನ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 23-02-2024 08:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080