ಅಭಿಪ್ರಾಯ / ಸಲಹೆಗಳು

CEN Crime PS Mangaluru City

ಪಿರ್ಯಾದಿ ಮೇಘಾಲಯದ ಜೋವೈ ಬ್ರಾಂಚಿನಲ್ಲಿ ಎಸ್.ಬಿ.ಐ ಖಾತೆ ಸಂಖ್ಯೆ  ನೇ ದನ್ನು ಹೊಂದಿರುತ್ತಾರೆ. ಪಿರ್ಯಾದಿದಾರರು ದಿನಾಂಕ 22-03-2023 ರಂದು P7_allure ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬಟ್ಟೆಯೊಂದನ್ನು ಆರ್ಡರ್ ಮಾಡಿದ್ದು ಸದ್ರಿ ಆರ್ಡರ್ ಮಾಡಿ ಹಲವು ದಿನ ಕಳೆದರು ಪಾರ್ಸೆಲ್ ಪಾರ್ಸೆಲ್ ಮನೆಗೆ ಬಂದಿರುವುದಿಲ್ಲ. ದಿನಾಂಕ 18-04-2023 ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಿಗೆ  8371886720ನೇ ಮೊಬೈಲ್ ನಂಬ್ರದಿಂದ ಕರೆ ಮಾಡಿ ನಿಮ್ಮ ಪಾರ್ಸೆಲ್ ನಿಮಗೆ ಬರುತ್ತದೆ ಎಂಬುದಾಗಿ .ತಿಳಿಸಿ ಪೋನ್ ಕಟ್ ಮಾಡಿರುತ್ತಾರೆ.  ಮರುದಿನ 19-04-2023 ರಂದು  ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರು 9.50 ಗಂಟೆಗೆ ತನ್ನ ಮೊಬೈಲ್ ನೋಡುತ್ತಿದ್ದ ಸಮಯ https://q1x.26b.myftpupload.com/  ಎಂಬ ಲಿಂಕ್ ಒಂದು ಬಂದಿದ್ದು ನಂತರ ಸಂಜೆ ಸಮಯ ಸುಮಾರು 6.00 ಗಂಟೆಗೆ ಸಮಯಕ್ಕೆ ಪಿರ್ಯಾದಿದಾರರ  ಎಸ್.ಬಿ.ಐ ಖಾತೆ ಸಂಖ್ಯೆ ನೇ ದರಿಂದ ರೂ. 50000/- ಹಾಗೂ ರೂ. 30560 ಹೀಗೆ ಒಟ್ಟು 80,560/- ಡೆಬಿಟ್ ಆಗಿರುವ ಬಗ್ಗೆ ತಿಳಿದು ಬಂದಿದ್ದು ಕೂಡಲೇ ಪಿರ್ಯಾದಿದಾರರು ಮಂಗಳೂರಿನ ಮಲ್ಲಿಕಟ್ಟೆ ಎಸ್.ಬಿ.ಐ ಬ್ರಾಂಚಿಗೆ ಹೋಗಿ ವಿಚಾರಿಸಿದಲ್ಲಿ ಯಾರೋ ಅಪರಿಚಿತರು ಪಿರ್ಯಾದಿದಾರರಿಗೆ  ಪಾರ್ಸೆಲ್ ಟ್ರ್ಯಾಕ್ ಮಾಡುವುದಾಗಿ ಕರೆ ಮಾಡಿ ನಂತರ ನನಗೆ ಲಿಂಕ್ ಒಂದನ್ನು ಕಳುಹಿಸಿ ಅದರ ಮೂಲಕ ಪಿರ್ಯಾದಿದಾರರ ಬ್ಯಾಂಕ್ ಖಾತೆಯ ವಿವರವನ್ನು  ಪಡೆದು ಬ್ಯಾಂಕ್ ಖಾತೆಯಿಂದ ಒಟ್ಟು ರೂ. 80560/- ನ್ನು  ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿ  ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ. ಎಂಬಿತ್ಯಾದಿ

CEN Crime PS Mangaluru City

ಪಿರ್ಯಾದಿ ಎಂಬ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಸುಮಾರು ಎರಡು ತಿಂಗಳ ಹಿಂದೆ dr_fredlutodc ಎಂಬ ಇನ್ಸ್ಟಾಗ್ರಾಮ್ ಹೆಸರುಹೊಂದಿರುವ ಖಾತೆದಾರರು ಪಿರ್ಯಾದಿದಾರರಿಗೆ ಫ್ರೇಂಡ್ಸ್  ರಿಕ್ವೆಸ್ಟ್  ಕಳುಹಿಸಿದ್ದು ಪಿರ್ಯಾದಿದಾರರು ಫ್ರೇಂಡ್ಸ್  ರಿಕ್ವೆಸ್ಟ್ ಒಪ್ಪಿಕೊಂಡಿರುತ್ತಾರೆ ನಂತರ ಆರೋಪಿಯು ಪಿರ್ಯಾದಿದಾರರಿಂದ ವಾಟ್ಸಪ್ ನಂಬ್ರ ಪಡೆದುಕೊಂಡು 8880237242 ಮತ್ತು +447418370799 ನೇದರದಿಂದ ಪಿರ್ಯಾದಿದಾರರ ವಾಟ್ಸಪ್ ನಂಬ್ರಗೆ ಮೇಸೇಜ್ ಗಳುನ್ನು ಕಳುಹಿಸಿತ್ತಿದ್ದು. ಪಿರ್ಯಾದಿದಾರರಿಗೆ ದಿನಾಂಕ 27-03-2023 ರಂದು ಐ ಪೋನ್ ಗಿಫ್ಟ್ ಕಳುಹಿಸಿದ್ದೇನೆ ಎಂದು ಹೇಳಿ ಕೊರಿಯರ್ ಚಾರ್ಜ್ ಎಂದು ಪಿರ್ಯಾದಿದಾರರಿಂದ  50,000/- ಹಣವನ್ನು ರಾಣಿ ದಾಸ್ ಎಂಬ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 110080570502 ನೇ ದಕ್ಕೆ ಹಣ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ.ಈ ರೀತಿ ಮೋಸದಿಂದ ಹಣ ಪಡೆಯಲು ನಾನು ಡಾಕ್ಟರ್ ಎಂದು ಸುಳ್ಳು ಹೇಳಿ ಪಿರ್ಯಾದಿದಾರರನ್ನು ಇಷ್ಟಪಡುತ್ತಿದ್ದೇನೆ ಎಂದು ನಂಬಿಸಿ ಮೋಸಮಾಡಿರುವುದಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿ ಎಂಬಿತ್ಯಾದಿ

Traffic South Police Station                                                     

ಪಿರ್ಯಾದಿ ಹೆಚ್ ಬಿ ಅಭಿಷೇಕ್ ರವರು ಕೆ ಎಸ್ ಆರ್ ಟಿ ಸಿ ಬಸ್ಸ್ ಚಾಲಕನಾಗಿ ಈ ದಿನ ದಿನಾಂಕ: 21-04-2023 ರಂದು ಅವರಿಗೆ ನೇಮಿಸಿದ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರೂಟ್ ನಂಬ್ರ: 123.124 ರ ಬಸ್ಸ್ ನಂಬ್ರ :KA-19-F-3498 ನೇದನ್ನು ಮಂಗಳೂರು ಬಸ್ಸ್ ನಿಲ್ದಾಣದಿಂದ ಬೆಳಿಗ್ಗೆ 6-00 ಗಂಟೆಗೆ ಹೊರಟು ಬೆಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 06-15 ಗಂಟೆಗೆ ಪಡೀಲ್ ನ ಅಳಪೆ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಬಸ್ಸಿನ ಎದುರಿನಿಂದ ಅಂದರೆ ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ನಂಬ್ರ: KA-21-N-3406 ನೇದನ್ನು ಅದರ ಚಾಲಕ ಎಂ ಅಬ್ದುಲ್ ಮಜೀದ್ ರವರು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಸ್ಸ್ ವೊಂದನ್ನು ಓವರ್ ಟೇಕ್ ಮಾಡಿ ಪಿರ್ಯಾದಿದಾರರ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಬಸ್ಸಿನ ಮುಂಭಾಗವು ಜಖಂಗೊಂಡಿರುತ್ತದೆ ಹಾಗೂ ಕಾರಿನ ಮುಂಭಾಗ ಸಹ ಜಖಂಗೊಂಡಿರುತ್ತದೆ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಮತುಮ ಎಂಬ ಮಹಿಳೆಗೆ ಹಾಗೂ ಮಗುವಾದ ನಾಫೀಯರವರಿಗೆ ರಕ್ತಗಾಯವಾಗಿರುತ್ತದೆ ಚಾಲಕನಾದ ಎಂ ಅಬ್ದುಲ್ ಮಜೀದ್ ರವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಗಾಯಾಳುವಾದ ಮಹಿಳೆ ಮತ್ತು ಮಗುವನ್ನು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಕಂಕನಾಡಿ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Traffic South Police Station

ಪಿರ್ಯಾದಿ ಯೋಗೀತ ಹೆಚ್ ಎನ್  ರವರು ಮಾಂಡೋವಿ ಕಾರ್ ಶೋ ರೂಮಿನಲ್ಲಿ ಎಕ್ಸ್ ಕ್ಯೂಟಿವ್ ಮೇನೆಜರ್ ಆಗಿ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನ ದಿನಾಂಕ: 20-04-2023 ರಂದು ಅವರ ಗ್ರಾಹಕರಾದ ಯೋಜನ್ ಎಂಬುವರು ಗ್ರ್ಯಾಂಡ್ ವಿಟಾರ ಕಾರನ್ನು ಟೇಸ್ಟ್ ಡ್ರೈವ್ ಗಾಗಿ ತೆಗೆದುಕೊಂಡು ಪಿರ್ಯಾದಿದಾರರ ಶೋ ರೂಮಿನಲ್ಲಿದ್ದ ಕಾರು ನಂಬ್ರ: KA-19-MM-8716 ನೇದರಲ್ಲಿ ಯೋಜನ್ ರವರನ್ನು ಚಾಲಕರಾಗಿ ಕುಳ್ಳಿರಿಸಿ ಪಿರ್ಯಾದಿದಾರು ಕಾರಿನ ಎದುರು ಎಡಬದಿ ಸೀಟಿನಲ್ಲಿ ಕುಳಿತುಕೊಂಡು ಕಾರನ್ನು ಚಲಾಯಿಸಿಕೊಂಡು ಅವರ ಶೋ ರೂಮಿನಿಂದ ಹೊರಗೆ ಬಂದು ಬೊಂದೇಲ್ ನಿಂದ ಕೆಪಿಟಿ ಕಡೆಗೆ ಹಾದು ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಚಲಾಯಿಸಿಕೊಂಡು ಮುಂದೆ ಕೆಪಿಟಿ ಕಡೆಗೆ ಹೋಗುತ್ತಿರುವ ಸಮಯ ಸುಮಾರು ಮಧ್ಯಾಹ್ನ 1-30 ಗಂಟೆಗೆ ಮೇರಿಹೀಲ್ ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರ ಕಾರಿನ ಚಾಲಕ ಯೋಜನ್ ಕಾರನ್ನು ನಿರ್ಲಕ್ಷ್ಯತನದಿಂದ ಓಮ್ಮೇಲೆ ನಿಲ್ಲಿಸಿದಾಗ ಆ ಸಮಯ ಅವರ ಕಾರಿನ ಹಿಂದಿನಿಂದ ಅಂದರೆ ಬೊಂದೆಲ್ ಕಡೆಯಿಂದ ಕೆಪಿಟಿ ಕಡೆಗೆ ಬರುತ್ತಿದ್ದ ಕಾರು ನಂಬ್ರ: KA-19-MG-0852 ನೇದನ್ನು ಅದರ ಚಾಲಕ ತೇಜಸ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂದಿನ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಕಾರಿನ ಹಿಂದಿನ ಬಲಬದಿಯ ಬಂಪರ್ ಹಾಗೂ ಟೇಲದ ಲ್ಯಾಂಪ್ ಅಸೆಂಬ್ಲಿ ಸಂಪೂರ್ಣ ಜಖಂಗೊಂಡಿದ್ದು  ಹಾಗೂ ಅಪಘಾತ ಪಡಿಸಿದ ತೇಜಸ್ ನ ಕಾರು ನಂಬ್ರ: KA-19-MG-0852 ನೇದರ ಮುಂದಿನ ಎಡಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

 

Traffic North Police Station     

ಪಿರ್ಯಾದಿ  ರತೀಶ (25 ವರ್ಷ) ರವರು ದಿನಾಂಕ: 20-04-2023 ರಂದು KA-19-AD-8269 ನಂಬ್ರದ ಮಂಗಳೂರು- ಉಡುಪಿ Express ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಈ ದಿನ ಪಿರ್ಯಾದಿದಾರರು ಕೆಲಸ ಮಾಡುವ ಬಸ್ಸಿನಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಹೊರಟು ಕೊಲ್ನಾಡು ಜಂಕ್ಷನ್ ಬಳಿ ಜನರನ್ನು ಇಳಿಸುವ ಸಲುವಾಗಿ ಬಸ್ಸಿನ ಚಾಲಕನಿಗೆ ಬಸ್ಸನ್ನು ನಿಲ್ಲಿಸಲು ಸೂಚನೇ ನೀಡಿದಂತೆ ಬಸ್ ಚಾಲಕ ಬಸ್ಸನ್ನು ರಸ್ತೆಯ ಎಡಬದಿಗೆ ನಿಲ್ಲಿಸಿದ್ದ ಸಮಯ ಸಂಜೆ ಸುಮಾರು 5:30 ಗಂಟೆಗೆ ಸುರತ್ಕಲ್ ಕಡೆಯಿಂದ KA-19-Z-9368 ನಂಬ್ರದ ಕಾರನ್ನು ಅದರ ಚಾಲಕ ಅಬೂಬಕ್ಕರ್ ಸಿದ್ದಿಕ್ ಎಂಬಾತನು ವೇಗವಾಗಿ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿದ್ದ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ್ದು  ಪರಿಣಾಮ ಕಾರಿನ ಚಾಲಕನ ಸೀಟಿನ ಪಕ್ಕದಲ್ಲಿ ಕುಳಿತಿದ್ದ ಅಬ್ದುಲ್ ಜಲೀಲ್ ಎಂಬಾತನಿಗೆ ಹಣೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಈ ಅಪಘಾತದಿಂದ ಬಸ್ಸಿನ ಹಿಂಬದಿ ಮತ್ತು ಕಾರಿನ ಎದುರು ಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ ಸಾರಾಂಶ.

Traffic North Police Station

ಪಿರ್ಯಾದಿ Mohammed Shavaan ತಮ್ಮನಾದ ಮಹಮ್ಮದ್ ಇಲ್ಯಾಸ್ (24 ವರ್ಷ) ರವರು ದಿನಾಂಕ: 20-04-2023 ರಂದು KA-19-HH-3868 ನಂಬ್ರದ ಮೋಟಾರ್ ಸೈಕಲಿನಲ್ಲಿ ಕಾಟಿಪಳ್ಳದ ತನ್ನ ಚಿಕ್ಕಮ್ಮನ್ನ ಮನೆಗೆ ಬಂದು ಅಲ್ಲಿಂದ ಚಿಕ್ಕಮ್ಮನ ಮಗಳಾದ ಆಸಿಫಾಳನ್ನು ಮೋಟಾರ್ ಸೈಕಲಿನಲ್ಲಿ ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಮಹಮ್ಮದ್ ಇಲ್ಯಾಸ್ ಮೋಟಾರ್ ಸೈಕಲನ್ನು ಸವಾರಿ ಮಾಡುತ್ತಾ ಶಂಶುದ್ದೀನ್ ಸರ್ಕಲ್ ಕಡೆಯಿಂದ ಕೃಷ್ಣಾಪುರ ಕಡೆಗೆ ಹೋಗುತ್ತಾ ಸಂಜೆ ಸಮಯ ಸುಮಾರು 3:45 ಗಂಟೆಗೆ ಕಾಟಿಪಳ್ಳದ 5ನೇ ಬ್ಲಾಕಿನ ಯುವಕ ಮಂಡಳದ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಕೃಷ್ಣಾಪುರ ಕಡೆಯಿಂದ KA-19-AD-5424 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ವಿಶ್ವನಾಥ ಎಂಬಾತನು ದುಡುಕುತನದಿಂದ ವೇಗವಾಗಿ ಆಟೋರಿಕ್ಷಾವನ್ನು ರಸ್ತೆಯ ಎಡಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ ತಮ್ಮ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರೆ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಈ ಅಪಘಾತದಿಂದ ಮೋಟಾರ್ ಸೈಕಲ್ ಸವಾರನಾದ ಮಹಮ್ಮದ್ ಇಲ್ಯಾಸ್ ರಿಗೆ ಬಲಕಾಲಿನ ಪಾದದ ಮದ್ಯದ ಬೆರಳು ತುಂಡಾಗಿದ್ದು, ಬಲಕೈ ತೋಳುಭಾಗದಲ್ಲಿ ಮೂಳೆ ಮುರಿತವಾಗಿದ್ದು, ಬಲಕೈ ಮದ್ಯ ಹಾಗೂ ನಾಲ್ಕು, ಐದನೇ ಬೆರಳುಗಳಿಗೆ ಗಾಯವಾಗಿರುತ್ತದೆ ಹಾಗೂ ಸಹಸವಾರೆ ಆಸಿಫಾಳಿಗೆ ಬಲಕಾಲಿನ ತೊಡೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Mangalore South PS

ದಿನಾಂಕ 20-04-2023 ರಂದು 14-28 ಗಂಟೆಗೆ ಪಿರ್ಯಾದಿ Sri.Ravi Kumar.M.R ಮಂಗಳೂರು ನಗರದ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸಾರ್ವತ್ರಿಕ ವಿಧಾನ ಸಭೆ ಚುನಾವಣೆ ನಿಮಿತ್ತ ಚುನಾವಣಾ ವೀಕ್ಷಕರೊಂದಿಗೆ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ,  ಪಿರ್ಯಾದಿದಾರರ ಮೊಬೈಲ್ ಸಂಖ್ಯೆ    ನೇದಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ಮೊಬೈಲ್ ಸಂಖ್ಯೆ 7353998242 ನೇದರಿಂದ ಕರೆ  ಮಾಡಿ  ಅನವಶ್ಯಕವಾಗಿ ಕೆಟ್ಟ ಶಬ್ದಗಳಿಂದ ಬೆದರಿಕೆ ಹಾಕಿ, ಪಿರ್ಯಾದಿದಾರರನ್ನು ಉದ್ದೇಶಿಸಿ “ಒಂದೂವರೆ ತಿಂಗಳ ಕಾಣಿಕೆ ನೀಡುವುದಾಗಿ, ಒಬ್ಬ ಕೆ.ಎಮ್.ಎಫ್ ಸಿಬ್ಬಂದಿಯನ್ನು ಈಗಲೇ ಮಂಗಳೂರಿನಿಂದ ತುಮಕೂರಿಗೆ ಕಳುಹಿಸಿಕೊಡಬೇಕು” ಎಂಬುದಾಗಿ  ಬೆದರಿಕೆ ಹಾಕಿರುತ್ತಾರೆ. ಎಂಬುದಾಗಿ ನೀಡಿದ ದೂರನ್ನು  ಸ್ವೀಕರಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, ಎಂಬಿತ್ಯಾದಿಯಾಗಿರುತ್ತದೆ.

Moodabidre PS

ಪಿರ್ಯಾದಿ Lalitha ದಿನಾಂಕ 20-04-2023 ರಂದು ತನ್ನ ಮನೆಯ ಹೊರಗೆ ಕಟ್ಟಿಗೆ ಒಟ್ಟು ಮಾಡುತ್ತಿರುವಾಗ ಮದ್ಯಾಹ್ನ ಸುಮಾರು 3.50 ಗಂಟೆಗೆ ಇಬ್ಬರು ವ್ಯಕ್ತಿಗಳು ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಬಂದು ಪಿರ್ಯಾದುದಾರರ ಮನೆಯ ಬಳಿಯ ಡಾಮಾರು ರಸ್ತೆಯಲ್ಲಿ ನಿಲ್ಲಿಸಿ ಸ್ಕೂಟರ್ ನಲ್ಲಿದ್ದ ಸಹ ಸವಾರ ಪಿರ್ಯಾದುದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾದುದಾರರಲ್ಲಿ ತುಳು ಭಾಷೆಯಲ್ಲಿ “ನಿಮ್ಮ ಮಗನ ಆನ್ ಲೈನ್ ಆರ್ಡರ್ ನ ಐಟಂ ಬಂದಿದ್ದು ಮಗ ಎಲ್ಲಿ’ ಎಂದು ಕೇಳಿದ್ದು ಆಗ ಪಿರ್ಯಾದುದಾರರು ಅವರ ಮಗ ತುಷಾರ್ ನಿಗೆ ಪೋನ್ ಮಾಡಿ ಯಾವುದಾದರೂ ಆರ್ಡರ್ ಬುಕ್ ಮಾಡಿದ್ದೀಯಾ ಎಂದು ಕೇಳಿದಾಗ ಆತನು ಇಲ್ಲ ಎಂದು ತಿಳಿಸಿದ್ದು ಆ ಸಮಯ ಪಿರ್ಯಾದುದಾರರು  ಆ ವ್ಯಕ್ತಿಯಲ್ಲಿ ಯಾರ ಹೆಸರಿನಲ್ಲಿ ಪಾರ್ಸೆಲ್ ಬಂದಿದೆ’ ಎಂದು ಕೇಳಿದಾಗ ಆತನು ರಾಜೇಶ್ ನ ಹೆಸರಿನಲ್ಲಿ ಎಂದು ಹೇಳಿದ್ದು,  ಅಂತಹ ಹೆಸರಿನವರು ನಮ್ಮ ಮನೆಯಲ್ಲಿ ಯಾರೂ ಇಲ್ಲ, ಎಂದು ಪಿರ್ಯಾದುದಾರರು ಹೇಳಿದಾಗ ಆತನು ಪಿರ್ಯಾದುದಾರರಲ್ಲಿ ಕುಡಿಯಲು ನೀರು ಕೇಳಿದ್ದು ಪಿರ್ಯಾದುದಾರರು ಮನೆಯೊಳಗೆ ಹೋಗಿ ಚೆಂಬಿನಲ್ಲಿ ನೀರು ತಂದು ಕೊಟ್ಟಿದ್ದು ಆಗ ಬಂದ ವ್ಯಕ್ತಿಯು ಪಿರ್ಯಾದುದಾರರ ಕೈಯಲ್ಲಿದ್ದ ಮೊಬೈಲ್ ಕೇಳಿದಾಗ ಪಿರ್ಯಾದುದಾರರು ಕೊಡುವುದಿಲ್ಲ ಎಂದು ಹೇಳಿದ್ದು  ಆಗ ಆತನು ಆತನ ಕೈಯಲ್ಲಿದ್ದ ಚೆಂಬಿನಿಂದ ಪಿರ್ಯಾದುದಾರರ ಮುಖಕ್ಕೆ ಗುದ್ದಿದ ಪರಿಣಾಮ ಪಿರ್ಯಾದುದಾರರ ಮುಂದಿನ ಹಲ್ಲು ಉದುರಿ ಬಿದ್ದಿದ್ದು ಆಗ ಅಂಗಳಕ್ಕೆ ಬಂದಿದ್ದ ವ್ಯಕ್ತಿಯು ಪಿರ್ಯಾದುದಾರರ  ಕುತ್ತಿಗೆಯಲ್ಲಿದ್ದ ಬಂಗಾರದ ಕರಿಮಣಿ ಸರವನ್ನು ಕಸಿದುಕೊಂಡು ಸ್ಕೂಟರ್ ನಿಲ್ಲಿಸಿದಲ್ಲಿಗೆ ಓಡಿ ಹೋಗಿ ಸ್ಕೂಟರ್ ನಲ್ಲಿ ಇಬ್ಬರೂ ಕುಳಿತುಕೊಂಡು ಹೊರಟು ಹೋದರು. ಆರೋಪಿಗಳು ಕಸಿದುಕೊಂಡು ಹೋದ ಪಿರ್ಯಾದುದಾರರ ಬಂಗಾರದ ಕರಿಮಣಿ ಸರದ ಅಂದಾಜು ಮೌಲ್ಯ ರೂ.80,000/- ರೂ ಆಗಬಹುದು ಎಂಬಿತ್ಯಾದಿಯಾಗಿದೆ.

ಇತ್ತೀಚಿನ ನವೀಕರಣ​ : 21-08-2023 12:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080