ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿ ಮನೆಯನ್ನು ಬಾಡಿಗೆ ನೀಡುವುದಾಗಿ OLX ನಲ್ಲಿ ಜಾಹೀರಾತನ್ನು ನೀಡಿರುತ್ತಾರೆ,ದಿನಾಂಕ 21-05-2023 ರಂದು ಸದ್ರಿ ಜಾಹೀರಾತನ್ನು ನೋಡಿದ ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರನ್ನು ದೂರವಾಣಿ ನಂಬ್ರ 7418944751 ನೇದರಿಂದ ಸಂಪರ್ಕಿಸಿ  ವಿಚಾರಿಸಿರುತ್ತಾರೆ.ನಂತರ ಸದ್ರಿ ಅಪರಿಚಿತ ವ್ಯಕ್ತಿಯು ತಾನು ಆರ್ಮಿ ಆಫೀಸರ್ ಎಂಬುದಾಗಿ ಪರಿಚಯಿಸಿಕೊಂಡು ಪಿರ್ಯಾದಿದಾರರಿಗೆ ವಾಟ್ಸಪ್ ಮೂಲಕ ತನ್ನ ಆರ್ಮಿ ಗುರುತಿನ ಚೀಟಿಯನ್ನು ಕಳುಹಿಸಿರುತ್ತಾರೆ.ಇದನ್ನು ನಂಬಿದ ಪಿರ್ಯಾದಿದಾರರು ಆತನೊಂದಿಗೆ ಮನೆ ಬಾಡಿಗೆ ನೀಡುವುದಾಗಿ ತಿಳಿಸಿರುತ್ತಾರೆ,ನಂತರ ಸದ್ರಿ ಅಪರಿಚಿತ ವ್ಯಕ್ತಿಯು ಮನೆಯ ಮುಂಗಡ ಹಣವನ್ನು ತನ್ನ ಆರ್ಮಿ ಕಛೇರಿಯಿಂದ ಪಾವತಿಸುವುದಾಗಿ ತಿಳಿಸಿರುತ್ತಾರೆ, ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರಿಗೆ ದೂರವಾಣಿ ಸಂಖ್ಯೆ-7008825149 ನೇದರಿಂದ ಯಾರೋ ಅಪರಿಚಿತ ವ್ಯಕ್ತಿ ಆರ್ಮಿ ಕಛೇರಿಯಿಂದ ಮಾತನಾಡುವುದಾಗಿ ತಿಳಿಸಿ ಹಾಗೂ ಮನೆಯ ಮುಂಗಡ ಹಣ ಪಾವತಿಸುವುದಾಗಿ ಪಿರ್ಯಾದಿದಾರರು ಕೆನಾರ ಬ್ಯಾಂಕ್ ಖಾತೆ ಸಂಖ್ಯೆ ನೇದಕ್ಕೆ 1 ರೂ ರಂತೆ ಎರಡು ಸಲ ಯುಪಿಐ ಮುಖಾಂತರ ಪಾವತಿಸಿರುತ್ತಾರೆ.ಬಳಿಕ ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಗಮನಕ್ಕೆ ಬಾರದೇ ಅನಧಿಕೃತವಾಗಿ ಎರಡು ಹಂತದಲ್ಲಿ 50,000/- ರೂ ಮತ್ತು 49,999/- ರೂ ಗಳ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುತ್ತಾರೆ.ಈ ರೀತಿಯಾಗಿ ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿಯು ಮನೆ ಬಾಡಿಗೆ ಬೇಕೆಂದು ಆರ್ಮಿ ಆಫೀಸರ್ ಹೆಸರಿನಲ್ಲಿ ಒಟ್ಟು 99,999/- ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ.

Kavoor PS

ಪಿರ್ಯಾದಿ ಬೆಂಗಳೂರಿನ ಕಂಪನಿಯೊಂದರಲ್ಲಿ ಹೆಚ್ .ಆರ್. ವಿಭಾಗದಲ್ಲಿ ಪ್ರಸ್ತುತ  “ವರ್ಕ್ ಫ್ರಂ ಹೋಮ್ “ ಕೆಲಸ ಮಾಡಿಕೊಂಡಿರುವುದಾಗಿದೆ.ಪಿರ್ಯಾದುದಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬೇಂಗಳೂರಿನ ಮೂಲದ ವಿನಯ್  ಕುಮಾರ್ @ ವಿನಯ್ ದೇವರಾಜ್ ಎಂಬಾತನು ಬೆಂಗಳೂರಿನ HONEYWELL ಎಂಬ ಕಂಪನಿಯಲ್ಲಿ ಹೆಚ್ ಆರ್ ವಿಭಾಗದಲ್ಲಿ ಒಳ್ಳೆಯ ಕೆಲಸ  ಕೊಡಿಸುವುದಾಗಿ ನಂಬಿಸಿ ದಿನಾಂಕ 20-02-2023 ರಿಂದ 09-04-2023 ರವರೆಗೆ ಸುಮಾರು 22,11,477/- ರೂಪಾಯಿಗಳನ್ನು ಆತನು ನೀಡಿದ ವಿವಿಧ ಬ್ಯಾಂಕ್ ಗಳ  ಖಾತೆಗಳಿಗೆ ಜಮಾ ಮಾಡುವಂತೆ ತಿಳಿಸಿದ ಮೇರೆಗೆ ಪಿರ್ಯಾದುದಾರರು ಈ ಮೊತ್ತವನ್ನು ಜಮಾ ಮಾಡಿರುತ್ತಾರೆ.ಆದರೆ ಪಿರ್ಯಾದುದಾರರಿಗೆ ಅಪಾದಿತನು ಇನ್ನೂ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಿರಿಂದ ಪಿರ್ಯಾದುದಾರರು ತನ್ನ ಹಣವನ್ನು ವಾಪಸ್ಸು ನೀಡುವಂತೆ ತಿಳಿಸಿದಂತೆ ಈವರೆಗೂ ಹಣವನ್ನು ನೀಡದೇ ಮೋಸ ವಂಚನೆ ಮಾಡಿರುವುದಾಗಿ ಎಂಬಿತ್ಯಾದಿ.

Mangalore West Traffic PS  

ಪಿರ್ಯಾದಿ ARUN ಮಾವ ಮುತ್ತುರಾಜ್ ರವರು ದಿನಾಂಕ 21-05-2023 ರಂದು ಮಧ್ಯಾಹ್ನ ಸಮಯ ಸುಮಾರು 02.45 ಗಂಟೆಗೆ ಮಂಗಳೂರು ನಗರದ ಹೇರಿಟೇಜ್ ಅಪಾರ್ಟ ಮೆಂಟ್ ಎದುರುಗಡೆಯಿಂದ ಕೆಎ-19-ಇಎಸ್-6646 ನೇ ಮೋಟಾರ್ ಸೈಕಲ್ ನಲ್ಲಿ ಇಶಾನ್ ರವರನ್ನು ಕುಳ್ಳಿರಿಸಿಕೊಂಡು ಮಣ್ಣಗುಡ್ಡೆ ಕಡೆಯಿಂದ ಉರ್ವ ಮರ್ಕೇಟ್ ಕಡೆಗೆ ಹಾದು ಹೋಗುವ ಮುಖ್ಯ ರಸ್ತೆಗೆ ಬರುತ್ತಿರುವಾಗ ಮಣ್ಣಗುಡ್ಡೆ ಕಡೆಯಿಂದ ಉರ್ವ ಮರ್ಕೇಟ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕೆಎ-19-ಎಡಿ-5509 ನೇ ಆಟೋ ರಿಕ್ಷಾವನ್ನು ಅದರ ಚಾಲಕನು ನಿರ್ಲಕ್ಷತನದಿಂದ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಾವ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ ಹಿಂಬದಿಯ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಾವ ಹಾಗೂ ಅಳಿಯ ಇಶಾನ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮಾವನಿಗೆ ತಲೆಗೆ ತೀವ್ರ ಸ್ವರೂಪದ ಗಾಯ ಹಾಗೂ ಇಶಾನ್ ಗೆ ಬಲ ಕಣ್ಣಿನ ಬಳಿ ಹಾಗೂ ಬಲ ಕೈಗೆ ತೆರಚಿದ ಗಾಯವಾಗಿದ್ದು ಪಿರ್ಯಾದಿದಾರರ ಮಾವನವರು ಸರಕಾರಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಜ್ನಾಹೀನ ಸ್ಥಿತಿಯಲ್ಲಿದ್ದು ಮಾತನಾಡುತಿರುವುದಿಲ್ಲಾ ಎಂಬಿತ್ಯಾದಿ.

CEN Crime PS

ದಿನಾಂಕ 21-04-2023 ರಂದು ಯಾರೋ ಅಪರಿಚಿತ ವ್ಯಕ್ತಿ ದೂರವಾಣಿ ಸಂಖ್ಯೆ-6204176275 ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆನೇದಕ್ಕೆ ಎಲೆಕ್ಟ್ರಸಿಟಿ ಬಿಲ್ ಪಾವತಿ ಮಾಡುವಂತೆ ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಾಗಿ ವಾಟ್ಸಾಪ್ ಸಂದೇಶವಿರುವ ಲೆಟರ್ ಮೂಲಕ ಕಳುಹಿಸಿರುತ್ತಾರೆ.ಪಿರ್ಯಾದಿದಾರು ಸದ್ರಿ ಲೆಟರ್ ನಲ್ಲಿರುವ ದೂರವಾಣಿ ಸಂಖ್ಯೆ-9827998574 ನೇದಕ್ಕೆ ಕರೆ ಮಾಡಿ ವಿಚಾರಿಸಿದಾಗ ಪಿರ್ಯಾದಿದಾರರ ಎಲೆಕ್ರ್ಟಿಕ್ ಕನ್ಸೂಮರ್ ನಂಬರ್ ತಿಳಿಸುವಂತೆ ಅಪರಿಚಿತ ವ್ಯಕ್ತಿಯು ಹೇಳಿರುತ್ತಾರೆ,ನಂತರ ಪಿರ್ಯಾದಿದಾರರಿಗೆ ಎಸ್ ಎಂ ಎಸ್ ಸಂದೇಶ ಬರಲಿದ್ದು ಸದ್ರಿ ಸಂದೇಶವನ್ನು ಫಾರ್ವರ್ಡ್ ಮಾಡುವಂತೆ ಸಹ ತಿಳಿಸಿರುತ್ತಾರೆ,ಅದರಂತೆ ಪಿರ್ಯಾದಿದಾರರಿಗೆ 7811044854 ನೇದರಿಂದ ಎಸ್ಎಂ ಎಸ್ ಮೂಲಕ ಸಂದೇಶ ಬಂದಿರುತ್ತದೆ,ಸದ್ರಿ ಸಂದೇಶವನ್ನು ಪಿರ್ಯಾದಿದಾರರು 9664555555 ನೇದಕ್ಕೆ ಫಾರ್ವರ್ಡ್ ಮಾಡಿರುತ್ತಾರೆ,ಕೂಡಲೇ ಪಿರ್ಯಾದಿದಾರರ ಹೆಚ್ ಡಿ ಎಫ್ ಸಿ ಬ್ಯಾಂಕ್,ಅಮರಾವತಿ ಶಾಖೆ,ಖಾತೆ ನಂಬ್ರ ನೇದರಿಂದ ದಿನಾಂಕ 21-04-2023 ರಂದು 3 -/- ರೂಗಳು ಕಡಿತಗೊಂಡಿರುತ್ತದೆ.ನಂತರ ದಿನಾಂಕ 24-04-2023 ರಂದು ಪಿರ್ಯಾದಿದಾರರ ಗಮನಕ್ಕೆ ಬಾರದೆ 70,000-/- ರೂ ಮತ್ತು 1,200/-ರೂ ಗಳು ವರ್ಗಾವಣೆಯಾಗಿರುತ್ತದೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಎಲೆಕ್ಟ್ರಸಿಟಿ ಬಿಲ್ ಪಾವತಿ ಮಾಡುವ ನಕಲಿ ಸಂದೇಶವನ್ನು ಕಳುಹಿಸಿ ಹಂತ ಹಂತವಾಗಿ ಒಟ್ಟು 71,203/- ರೂ ಗಳನ್ನು ತನ್ನ ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ.

CEN Crime PS

ಪಿರ್ಯಾದಿದಾರರು OLX ನಲ್ಲಿ ಇಂಡಿಗೋ ಏರ್ ಲೈನ್ ನಲ್ಲಿ ಕೆಲಸವಿರುವ ಬಗ್ಗೆ ಜಾಹೀರಾತನ್ನು ನೋಡಿ ಮೆಸೆಜ್ ಮಾಡಿ ವಿಚಾರಿಸಿರುತ್ತಾರೆ.ನಂತರ ಯಾರೋ ಅಪರಿಚಿತ ವ್ಯಕ್ತಿ 7676147099 ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಏರ್ ಲೈನ್ ನಲ್ಲಿ ಕೆಲಸವಿರುವ ಬಗ್ಗೆ ತಿಳಿಸಿ ಅದಕ್ಕಾಗಿ ಪಿರ್ಯಾದಿದಾರರ ಆಧಾರ್ ಕಾರ್ಡ್,ಫೋಟೋ,ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆದುಕೊಂಡು,ನಂತರ ಶುಲ್ಕ ಪಾವತಿಸಬೇಕೆಂದು ತಿಳಿಸಿರುತ್ತಾರೆ, ಪಿರ್ಯಾದಿದಾರರು ಅದರಂತೆ ತಮ್ಮ ಕೆನಾರ ಬ್ಯಾಂಕ್,ಸುರತ್ಕಲ್ ಶಾಖೆ,ಖಾತೆ ನಂಬ್ರ- ನೇದರಿಂದ ದಿನಾಂಕ;14-05-2023 ರಂದು 1,420/-ರೂಗಳನ್ನು ಪಾವತಿಸಿರುತ್ತಾರೆ,ನಂತರ ಯಾರೋ ಅಪರಿಚಿತ ವ್ಯಕ್ತಿ 9643972832 ನೇದರಿಂದ ಕರೆ ಮಾಡಿ ನಿಮಗೆ ಕೆಲಸದ ಯೂನಿಫಾರ್ಮ್ ಮತ್ತು ಶೂಗಳನ್ನು ಕಳುಹಿಸಲಾಗುವುದು ಅದಕ್ಕಾಗಿ ಪಿರ್ಯಾದಿದಾರರ ವಿಳಾಸ ಹಾಗೂ ಆಧಾರ್ ಕಾರ್ಡ್,ಫೋಟೋ ಇತರೆ ವಿವರಗಳನ್ನು ನೀಡುವಂತೆ ತಿಳಿಸಿ ಮತ್ತು ಕೋರಿಯರ್ ಚಾರ್ಜ್ 3,648/- ರೂ ಪಾವತಿಸುವಂತೆ ತಿಳಿಸಿರುತ್ತಾರೆ,ನಂತರ ಪಿರ್ಯಾದಿದಾರರು ದಿನಾಂಕ 16-05-2023 ರಂದು ತಮ್ಮ ಕೆನಾರ ಬ್ಯಾಂಕ್ ಖಾತೆಯಿಂದ ಪಾವತಿಸಿರುತ್ತಾರೆ.ಇದೇ ರೀತಿ ಪಿರ್ಯಾದಿದಾರರು ಹಂತ ಹಂತವಾಗಿ ದಿನಾಂಕ 14-05-2023 ರಿಂದ ದಿನಾಂಕ 20-05-2023 ರವರೆಗೆ ಒಟ್ಟು 1,89,996/- ರೂಗಳನ್ನು ಪಾವತಿಸಿರುತ್ತಾರೆ ,ಆದರೆ ಪಿರ್ಯಾದಿದಾರರಿಗೆ ಇದೂವರೆಗೂ ಯಾವುದೇ ಕೆಲಸವನ್ನು ನೀಡದೇ ಇನ್ನೂ ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸಿರುತ್ತಾರೆ, ಈ ರೀತಿಯಾಗಿ ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿ  ಇಂಡಿಗೋ ಏರ್ ಲೈನ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಒಟ್ಟು 1,89,996 ರೂಗಳನ್ನು ಮೋಸದಿಂದ ವರ್ಗಾಹಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ,ಎಂಬಿತ್ಯಾದಿ.

Konaje PS

ದಿನಾಂಕ 21-05-2023 ರಂದು ಪಿರ್ಯಾದಿ Ashok  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮದ್ಯಾಹ್ನ 13.00 ಗಂಟೆ ಸಮಯಕ್ಕೆ  ಬಂಟ್ವಾಳ ತಾಲೂಕು,ನರಿಂಗಾನ ಗ್ರಾಮದ, ತೌಡುಗೋಳಿ ಕ್ರಾಸ್ ಎಂಬಲ್ಲಿಗೆ ತಲುಪಿದಾಗ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಆಶಿಕ್ ರಹಿಮಾನ್, ಪ್ರಾಯ 23 ವರ್ಷ,  ವಾಸ : ಆರಂಗಡಿ ಹೌಸ್, ಮಂಜನಾಡಿ ಅಂಚೆ ಮತ್ತು ಗ್ರಾಮ,  ಬಂಟ್ವಾಳ ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ  13.45 ಗಂಟೆಗೆ ವಶಕ್ಕೆ ಪಡೆದುಕೊಂಡು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು Amphetamine And Tetrahydrocannabinol ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

Traffic North Police Station                                                             

ಪಿರ್ಯಾದಿ Narayana Poojary ಅಕ್ಕ ಬೇಬಿ (66 ವರ್ಷ) ಯವರು ದಿನಾಂಕ 20-05-2023 ರಂದು ಕಿನ್ನಿಗೋಳಿಯ PPP MALL ಗೆ ತೆರಳಿ ಅಲ್ಲಿಂದ ವಾಪಾಸು ನಡೆದುಕೊಂಡು ಮುಲ್ಕಿ-ಕಿನ್ನಿಗೋಳಿ ರಸ್ತೆಯನ್ನು ದಕ್ಷಿಣದ ಕಡೆ ದಾಟುತ್ತಿದ್ದಾಗ ಸಂಜೆ ಸಮಯ ಸುಮಾರು 7:00 ಗಂಟೆಗೆ  ಅದೇ ಮಾರ್ಗವಾಗಿ ಅಂದರೆ ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ KA-19-HJ-0506 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಪ್ರಕಾಶ್ ಶೆಟ್ಟಿ ಎಂಬವರು ವೇಗವಾಗಿ ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಅಕ್ಕ ಬೇಬಿ(66 ವರ್ಷ) ಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೇಬಿ ಯವರು ರಸ್ತೆಗೆ ಬಿದ್ದು, ಅವರ ಎಡಕೈ ತೋಳು ಬಳಿ ಮೂಳೆ ಮುರಿತದ ಗಾಯ, ಎಡಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಾಯವಾಗಿದ್ದು, ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಾಗೂ ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಪ್ರಕಾಶ್ ಶೆಟ್ಟಿ ಯವರೂ ಸಹ ಈ ಅಪಘಾತದ ಸಮಯ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕೈ ಕಿರು ಬೆರಳಿಗೆ ರಕ್ತಗಾಯ,ಎಡಕಾಲಿನ ಹಾಗೂ ಬಲಕಾಲಿನ ಮಂಡಿಗಳಿಗೆ ತರಚಿದ ಗಾಯ,ಎಡಕಾಲಿನ ಹೆಬ್ಬೆರಳು ಮತ್ತು 4ನೇ ಬೆರಳಿಗೆ ತರಚಿದ ಗಾಯ, ಎಡಕೈ ಅಂಗೈ ಬಳಿ ತರಚಿದ ಗಾಯ,ಬಲಕೈಯ ಕಿರು ಬೆರಳಿನ ಬಳಿ ಚರ್ಮ ಹರಿದ ಗಾಯವಾಗಿದ್ದು ಅವರೂ ಸಹ ಕಿನ್ನಿಗೋಳಿ ಕನ್ಸೆಟ್ಟಾ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುರತ್ಕಲ್ ನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic South Police Station

ದಿನಾಂಕ: 20-05-2023 ರಂದು ಪಿರ್ಯಾಧಿ ಸುನಿಲ್ ಕುಮಾರ್ [34 ವರ್ಷ] ಎಂಬವರು ಅವರ ಸ್ನೇಹಿತ ಸಚಿನ್ ಸಿ ಎಂಬವರ ಬಾಬ್ತು ಮೋಟಾರು ಸೈಕಲ್  ನಂಬ್ರ KL-14-S-4373 ನೇದನ್ನು ಸವಾರಿ ಮಾಡಿಕೊಂಡು ಮಂಗಳೂರಿನಿಂದ ತನ್ನ ಮನೆಯಾದ ಚಿರುಗೋಳಿ ಮಂಗಲ್ಪಾಡಿ ಕಡೆಗೆ ರಾ. ಹೆ 66 ರಲ್ಲಿ ಮೋಟಾರು ಸೈಕಲ್  ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 20:15 ಗಂಟೆಗೆ ಅಡ್ಕ ಬಜಾರ್ ಹತ್ತಿರ ಕೊಲ್ಯ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಅಂದರೆ ಪಂಪವೆಲ್ ಕಡೆಯಿಂದ ತಲಪಾಡಿ ಕಡೆಗೆ ಹೊಗುತ್ತಿದ್ದ ಬಸ್ಸು ನಂಬ್ರ KA-19-AD-9222 ನೇದರ ಬಸ್ ಚಾಲಕ ಅನ್ಸಾಫ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ  ಮೋಟಾರು ಸೈಕಲ್ ನ ಮುಂದುಗಡೆಯ ಎಡಬದಿಯ ಹ್ಯಾಂಡಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಾಗ ಅದೇ ಸಮಯದಲ್ಲಿ ಪಿರ್ಯಾದಿದಾರರ ಹಿಂದುಗೆಡೆಯಿಂದ ಬರುತ್ತಿದ್ದ ಕಾರು ನಂಬ್ರ KA-19-MD-4724 ನೇದರ ಕಾರು ಚಾಲಕ ಗಗನ್ ಆರ್ ಶೆಟ್ಟಿ ಎಂಬಾತನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎರೆಡೂ ಕಾಲಿನ ಮೇಲೆ ಹತ್ತಿಸಿದ ಪರಿಣಾಮ ಪಿರ್ಯಾದಿದಾರರ ಎರಡೂ ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ  ಗಾಯ ,ಬಲ ಬುಜಕ್ಕೆ ಗುದ್ದಿದ ಗಾಯ,ಮೂಗಿಗೆ ಗುದ್ದಿದ ಗಾಯ ವಾಗಿದ್ದು ಕೂಡಲೇ ಅಲ್ಲಿ  ಸೇರಿದ್ದ ಸಾರ್ವಜನಿಕರು ಮತ್ತು ಅಪಘಾತ ಪಡಿಸಿದ  ಕಾರು ಚಾಲಕನು  ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ.ಎಂಬಿತ್ಯಾದಿ.

Traffic South Police Station

ದಿನಾಂಕ: 21-05-2023 ರಂದು OMINI ಕಾರು ನಂಬ್ರ KL-14-K-7820 ನೇದರಲ್ಲಿ  ಪಿರ್ಯಾಧಿದಾರರಾದ ಮೂಸಾ ಮತ್ತು ಅವರ ತಾಯಿ ಬಿ ಫಾತಿಮಾ ರವರು ಸಹ ಪ್ರಯಾಣಿಕರಾಗಿ ಹಾಗೂ ಪಿರ್ಯಾಧಿದಾರರ ಅಣ್ಣನ ಮಗ ಮೊಹಮ್ಮದ್ ಮುಸ್ತಾಪರವರು ಚಾಲಕರಾಗಿಯೂ ಕುಳಿತುಕೊಂಡು ಅಡ್ಡೂರು ಕಡೆಯಿಂದ ಕೇರಳದ ಕುಂಜೂತ್ತುರು ಕಡೆಗೆ ಪಂಪುವೆಲ್ ಮಾರ್ಗವಾಗಿ ರಾ ಹೆ 66 ಡಾಮಾರು ರಸ್ತೆಯಲ್ಲಿ  ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 02-30 ಘಂಟೆಗೆ ಕೆ.ಸಿ ರೋಡ್ ಉಚ್ಚಿಲ ಬಳಿ ತಲುಪಿದಾಗ ಪಿರ್ಯಾಧಿದಾರರ ಓಮಿನಿ ಕಾರಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಓಮಿನಿ ಕಾರಿನ ಚಾಲಕ ಮೊಹಮ್ಮದ್ ಮುಸ್ತಾಪ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಎಡಕ್ಕೆ ಚಲಿಸಿ ರಸ್ತೆಯ ಎಡಬದಿಯಲ್ಲಿದ್ದ ಕಬ್ಬಿಣದ ಕ್ರಾಷ್ ಗಾರ್ಡ್ ಗೆ ಕಾರನ್ನು ಡಿಕ್ಕಿ ಪಡಿಸಿದನು ಡಿಕ್ಕಿ ಪಡಿಸಿದ ರಭಸಕ್ಕೆ  ಕಬ್ಬಿಣದ ಕ್ರಾಷ್ ಗಾರ್ಡ್ ಕಾರಿನ ಮುಂದಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಪಿರ್ಯಾಧಿದಾರರ ತಾಯಿಯವರ ಹೊಟ್ಟೆಗೆ ತಾಗಿ ಗಂಭೀರ ಸ್ವರೂಪದ ಗುದ್ದಿದ ಗಾಯ, ತಲೆಗೆ ಗುದ್ದಿದ ಗಾಯ, ಬಲಕೈಗೆ ಮೂಳೆ ಮುರಿತದ ಗಾಯ, ಹಾಗೂ ಎಡಕೈಗೆ ಗುದ್ದಿದ ಗಾಯವಾಗಿರುತ್ತದೆ. ಹಾಗೂ ಪಿರ್ಯಾಧಿದಾರರಿಗೆ ಎಡಕಾಲಿಗೆ ಗುದ್ದಿದ ಗಾಯ, ಡಿಕ್ಕಿ ಪಡಿಸಿದ ಕಾರಿನ ಚಾಲಕನಿಗೂ ಕೈ ಕಾಲುಗಲಿಗೆ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಜನರು ಪಿರ್ಯಾಧಿದಾರರನ್ನು ಮತ್ತು ಕಾರಿನ ಚಾಲಕರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರಗೆ ಹಾಗೂ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಗಾಯಾಳು ಬಿ ಪಾತಿಮಾರವರನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.. ಚಿಕಿತ್ಸೆಯಲ್ಲಿದ್ದ ಗಾಯಾಳು ಬಿ ಪಾತಿಮಾರವರು ಚಿಕಿತ್ಸೆ ಫಲಕಾರಿಯಾಗದೇ ಸಮಯ ಬೆಳಿಗ್ಗೆ 03-55 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಎಂಬಿತ್ಯಾದಿ.

 

Traffic South Police Station

ಪಿರ್ಯಾದಿದಾರರಾದ ಶ್ರೀಮತಿ ಶಾಂಭವಿ ಆಚಾರ್ಯ (68 ವರ್ಷ) ರವರು ದಿನಾಂಕ: 19-05-2023 ರಂದು ಮನೆಯಾದ ಕೋಟೆಕಾರು ಕಡೆಯಿಂದ ಸಂಜೆ 5-30 ಗಂಟೆಗೆ ಸೋಮೆಶ್ವರ ಕಡೆಗೆ ನಡೆದುಕೊಂಡು ಹೋಗುತ್ತಾ ಕೊರಗಜ್ಜನ ಕಟ್ಟೆ ಬಳಿ ರಸ್ತೆ ದಾಟುತ್ತಿರುವಾಗ ಉಳ್ಳಾಲ ರೈಲ್ವೆ ಸ್ಟೇಷನ್ ಕಡೆಯಿಂದ ಉಳ್ಳಾಲ ಕಡೆಗೆ ಸ್ಕೂಟರ್ ನಂಬ್ರ:KA-19-HJ-7164  ನೇದನ್ನು ಅದರ ಸವಾರ ಮಹಮ್ಮದ್ ಸಹಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಕೂಡಾ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ ರಕ್ತಗಾಯ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಎಡಕಿವಿಗೆ ರಕ್ತ ಗಾಯವಾಗಿದ್ದು ಸ್ಕೂಟರ್ ಸವಾರನಿಗೆ ಬಲಕೈಗೂ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಅಪಘಾತ ಪಡಿಸಿದ ಸ್ಕೂಟರ್ ಸವಾರನು ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿರುತ್ತಾನೆ ಎಂಬಿತ್ಯಾದಿ.

 

 

 

 

 

 

ಇತ್ತೀಚಿನ ನವೀಕರಣ​ : 21-08-2023 12:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080