ಅಭಿಪ್ರಾಯ / ಸಲಹೆಗಳು

Crime report in CEN Crime PS

ದಿನಾಂಕ: 07-06-2023 ಪಿರ್ಯಾದಿದಾರರ ಹೆಂಡತಿಯ ಇನ್ಸ್ಟಾಗ್ರಾಮ್ ಖಾತೆಗೆ ಪಾರ್ಟ್ ಟೈಮ್ ಉದ್ಯೋಗ ಬಗ್ಗೆ https://okay8.in/register?invete_code=4c2cc3 ವೆಬ್ ಸೈಟ್ ಕಳುಹಿಸಿದ್ದು ಪಿರ್ಯಾದಿದಾರರು ವಿಚಾರಿಸಿದಾಗ ಯಾರೋ ಅಪರಿಚಿತ ವ್ಯಕ್ತಿ 9568564712 ನೇದಕ್ಕೆ ವಾಟ್ಸಪ್ ಮೂಲಕ ಮೇಸೆಜ್ ಮಾಡುವಂತೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಪಾರ್ಟ್ ಟೈಮ್ ಕೆಲಸ ಮಾಡುವುದಾಗಿ 9568564712 ನಂಬ್ರಗೆ ಮೇಸೆಜ್ ಮಾಡಿದಾಗ ಅಪರಿಚಿತನು https://okay8.in/register?invete_code=4c2cc3ಎಂಬ ಟೆಲಿಗ್ರಾಮ್ ವೆಬ್ ಸೈಟ್ ಲಿಂಕ್ ಕಳುಹಿಸಿ ಅದರಲ್ಲಿ ರಿಜಿಸ್ಟರ್ ಮಾಡುವಂತೆ ತಿಳಿಸಿ ಪಿರ್ಯಾದಿದಾರರಿಗೆ ಟೆಲಿಗ್ರಾಮ್ ಆ್ಯಪ್ ಡೌನ್ ಲೋಡ್ ಮಾಡಿಸಿ @Amandeep8866 ಎಂಬ ಟೆಲಿಗ್ರಾಮ್ ಐಡಿ ಯನ್ನು ಸಂಪರ್ಕಿಸುವಂತೆ ತಿಳಿಸಿರುತ್ತಾರೆ. ಸದ್ರಿ ಟೆಲಿಗ್ರಾಂ ಖಾತೆದಾರರನ್ನು  ಸಂಪರ್ಕಿಸಿದಾಗ VGL ಆ್ಯಪ್ ನ್ನು ಡೌನ್ ಲೋಡ್   ಮಾಡಿ ಅದರಲ್ಲಿ  ಲಾಗಿನ್ ಆಗಿ ನಿಮ್ಮ ಬ್ಯಾಂಕ್ ಖಾತೆಯಿಂದ ರೂ 500 /- ಹಣವನ್ನು ಪಾವತಿಸುವಂತೆ ಹೇಳಿ ಅದಕ್ಕೆ 850/- ರೂ.ಗಳನ್ನು  ಮರು ಪಾವತಿಸಿರುತ್ತಾರೆ.ಹೆಚ್ಚಿನ ಹಣಗಳಿಸಲು ಬೇರೆ ಬೇರೆ ಟಾಸ್ಕ್ ಗಳನ್ನು ನೀಡಿ ಟಾಸ್ಕ್ ಪೂರ್ಣಗೋಳಿಸಿದರೆ. ಹೆಚ್ಚು ಲಾಭ ನೀಡುವುದಾಗಿ ಹೇಳಿ ಪಿರ್ಯಾದಿದಾರರ ಐಸಿಐಸಿ ಬ್ಯಾಂಕ್ ಖಾತೆ  ನೇದಿಂದ ರೂ.90,620/- ಮತ್ತು ಪಿರ್ಯಾದಿದಾರರ ಹೆಂಡತಿ ಬ್ಯಾಂಕ್ ಆದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆ ನೇದಿಂದ ರೂ.82,570/- ದಿನಾಂಕ 11-06-2023 ರಿಂದ 13-06-2023ರ ವರೆಗೆ ಒಟ್ಟು 1,73,190/-ರೂ.ಗಳನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡು ಈ ವರೆಗೆ ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ಮರುಪಾವತಿ ಮಾಡದೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

Panambur PS

ದಿನಾಂಕ : 22-06-2023 ರಂದು 13-00 ಗಂಟೆಗೆ ಬೈಕಂಪಾಡಿ  ಸಮೀಪ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ   ಇಬ್ರಾಯಿಂ ಫಾರೀಶ್ (20), ವಾಸ. Mjm 261 ಕಸಾಬಾ ಬೆಂಗ್ರೆ,  ಮಂಗಳೂರು ಎಂಬವನನ್ನು ವಶಕ್ಕೆ ಪಡೆದುಕೊಂಡಿದ್ದು ನಂತರ  ಸದ್ರಿಯವನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿ ಮಾದಕ ವಸ್ತುಗಳನ್ನು/ ದ್ರವ್ಯಗಳನ್ನು ಸೇವನೆ ಮಾಡಿರುವರೇ ಎಂಬುದರ ಬಗ್ಗೆ ಅಭಿಪ್ರಾಯ ವರದಿಯನ್ನು ನೀಡಲು  ವೈದ್ಯಾಧಿಕಾರಿಗಳು, ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ಕಳುಹಿಸಿಕೊಟ್ಟು. ವೈದ್ಯಾಧಿಕಾರಿಗಳು ಪರೀಕ್ಷಿಸಿ The Urine Sample Tested For The Presence of Tetrahydracannabinol ( A Derivative of Cannabis) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Mangalore North PS                                 

 ಪಿರ್ಯಾದಿ MR DIKSHITH RAI ದಾರರು Code Craft Technologies Pvt.Ltd ಕಂಪನಿಯ ಮಾಲೀಕರಾಗಿದ್ದು ,ಇಲ್ಲಿ ಕೆಲಸ ಮಾಡಕೊಂಡಿದ್ದ ಆರೋಪಿತರಾದ ಸಂತೋಷ ಕೊಟ್ಯಾನ್ ,ವಿಳಾಸ: ಕಂದಾವರ ವಿಲೇಜ್ (ಪದವು) ಕಿನ್ನಿಕಂಬಳ ಪೋಸ್ಟ್ ಎಂಬವರು ಸದ್ರಿ ಕಂಪನಿಯಲ್ಲಿ ದಿನಾಂಕ 14.09.2016  ರಿಂದ ಡಿಸೆಂಬರ್ 9,2022 ನೇ ಇಸ್ವಿಯವರೆಗೆ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು ,ಕಂಪನಿಯ ಹಣದ ವ್ಯವಹಾರವನ್ನು ಸಂಪೂರ್ಣವಾಗಿ ಅವರೇ ನೋಡಿಕೊಳ್ಳುತ್ತಿದ್ದು  2022 ನೇ ಇಸ್ವಿಯ ನಂತರ  ನಂದಿನಿ ಎಂಬವರನ್ನು  ಹೊಸತಾಗಿ ಅಕೌಂಟೆಂಟ್ ಆಗಿ ನೇಮಕ ಮಾಡಿಕೊಂಡಿದ್ದು ,ಅವರು ಹಣದ ವ್ಯವಹಾರದ ಬಗ್ಗೆ ಪರಿಶೀಲಿಸುವ ವೇಳೆ ಹಣದ ವ್ಯತ್ಯಾಸ ಕಂಡುಬಂದಿದ್ದು,ಈ ವಿಷಯವನ್ನು ನಂದಿನಿಯವರು ಪಿರ್ಯಾದಿದಾರರಿಗೆ  ತಿಳಿಸಿದ್ದು ,ನಂತರ ಪಿರ್ಯಾದಿದಾರರು ಅದನ್ನು ಪರೀಶಿಲಿಸಿಲಾಗಿ ಹಣದ ವ್ಯತ್ಯಾಸ ಕಂಡುಬಂದಿದ್ದು ಆರೋಪಿತರಾದ ಸಂತೋಷ ಕೋಟ್ಯಾನ್ ರವರಲ್ಲಿ ವಿಚಾರಿಸಿದಾಗ ಅವರು ಒಪ್ಪಿಕೊಂಡಿದ್ದು ,ನಂತರ ಪಿರ್ಯಾದಿದಾರರು ಪುನ: ಪರೀಶಿಲಿಸಿದಾಗ ಹೆಚ್ಚಿನ ಮೊತ್ತದ  ಕಂಪನಿಯ ಹಣವನ್ನು ಕಂಪನಿಗೆ ನೀಡದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಕಂಪನಿಗೆ ನಷ್ಟ ಉಂಟು ಮಾಡಿ ಪಿರ್ಯಾದಿದಾರರಿಗೆ ಮೋಸ ಮಾಡಿ ದುರ್ಲಾಭ ಪಡೆಯುವ ಉದ್ದೇಶದಿಂದ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ ಪಿರ್ಯಾದುವಿನ ಸಾರಾಂಶವಾಗಿರುತ್ತದೆ.

 

Bajpe PS

ದಿನಾಂಕ 22.06.2023 ರಂದು ಬೆಳಗ್ಗೆ 09.15 ಗಂಟೆಗೆ ಪಿರ್ಯಾದಿ Rafeek ದಾರರು ತನ್ನ ಬಾಬ್ತು ಪಿಕಪ್ ವಾಹನ್ ನಂ KA19AD7041 ನೇದರಲ್ಲಿ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಾ ಮಂಗಳೂರು ತಾಲೂಕಿನ ಮೂಳೂರು ಗ್ರಾಮದ ಗುರುಪರ ಜಂಕ್ಷನ್ ಕಳೆದು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆಯೇ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ KA51C0692 ನೇ ಬಸ್ಸನ್ನು  ಅದರ ಚಾಲಕ ಬಶೀರ್ ಎಂಬುವರು ಮಾನವ ಜೀವಕ್ಕೆ ಅಪಾಯವಾಗುವ ರೀತಿ ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಎದುರಿನಿಂದ ಮಂಗಳೂರು ಕಡೆಗೆ ಸಂತೋಷ್ ಎಂಬುವರು ಚಾಲಾಯಿಸಿಕೊಂಡು ಹೋಗುತಿದ್ದ ಮೋಟಾರ್ ಸೈಕಲ್ ನಂ  KA19ET8621 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬಸ್ಸಿನಡಿಗೆ ಸಿಲುಕಿ ಆತನ ತಲೆಗೆ ಮತ್ತು ದೇಹಕ್ಕೆ ಗಂಬೀರ ಗಾಯವಾಗಿದ್ದು ಗಾಯಾಳುವನ್ನು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ ಅಲ್ಲದೆ ಬಸ್ಸು ಪಿರ್ಯಾದಿದಾರರ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ವಾಹನದ ಬಲಬದಿ ಜಖಂಗೊಂಡಿರುತ್ತದೆ ಹಾಗೂ ಬಸ್ಸು ಇನ್ನೂ ಮುಂದಕ್ಕೆ ಹೋಗಿ ಮಂಗಳೂರು ಕಡೆಗೆ ಹೋಗುತಿದ್ದ KA19AB5484 ನಂಬ್ರದ ಶಾಲಾ ವಾಹನಕ್ಕೆ ಡಿಕ್ಕಿಯಾಗಿದ್ದು ವಾಹನಗಳು ಜಖಂಗೊಂಡಿರುತ್ತದೆ ಎಂಬಿತ್ಯಾದಿ

 

Traffic South Police Station     

ಪಿರ್ಯಾದಿದಾರರಾದ  ಮಂಗಳೂರಿನ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರ ಅವರು    ದಿನಾಂಕ 20-06-2023 ರಂದು ಸಾಮಾಜಿಕ ಜಾಲತಾಣಗಳಲ್ಲಿ ಗೋಪಾಲಕೃಷ್ಣ ಹೆಸರಿನ ಬಸ್ಸು ನಂಬ್ರ KA 51-AC-7835  ನೇದನ್ನು ಅದರ ಚಾಲಕನು  ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಕರ್ಕಶವಾದ ಹಾರ್ನ್ ಹಾಕಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ರಸ್ತೆ ದಾಟುತ್ತಿದ್ದ ಮಹಿಳೆಯು ಪವಾಡ ಸದೃಶ ರೀತಿಯಲ್ಲಿ ಪಾರಾದ   ವೀಡಿಯೋ  ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಗಮನಿಸಿ ಈ ಬಗ್ಗೆ ಮೇಲಾಧಿಕಾರಿಗಳಿಂದ ಬಂದ ಆದೇಶದ ಮೇರೆಗೆ  ಸದ್ರಿ ವೀಡಿಯೋದ ಬಗ್ಗೆ ವಿಚಾರಣೆ ನಡೆಸಿದಾಗ ಗೋಪಾಲಕೃಷ್ಣ ಹೆಸರಿನ ಬಸ್ಸು ನಂಬ್ರ KA 51-AC-7835  ನೇದರ ಚಾಲಕನು ದಿನಾಂಕ 20-06-2023 ರಂದು ಮದ್ಯಾಹ್ನ 12-00 ಗಂಟೆಗೆ ತೌಡುಗೋಳಿ ಕ್ರಾಸ್ ಎಂಬಲ್ಲಿ ಕನ್ಯಾನದಿಂದ ಮಂಗಳೂರು ಕಡೆಗೆ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ  ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಕರ್ಕಶವಾದ ಹಾರ್ನ್ ಹಾಕುತ್ತಾ ಬಸ್ಸನ್ನು  ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿಪಡಿಸುವ ರೀತಿಯಲ್ಲಿ ಭಯ ಉಂಟಾಗುವಂತೆ  ಚಲಾಯಿಸಿರುವುದು ತಿಳಿದುಬಂದಿರುತ್ತದೆ ಎಂಬಿತ್ಯಾದಿ .

 

 

Bajpe PS   

ಪಿರ್ಯಾದಿ Pankaj Kumar Guptha ದಾರರು ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಸಮರೆನ್ ವಿಲ್ಲ್ ಅಹಮ್ಮದ್ ನಗರ ಪರ್ಕೋಡಿ ಎಂಬಲ್ಲಿ ತನ್ನ ಹೆಂಡತಿ ಮಗನೊಂದಿಗೆ ವಾಸವಾಗಿದ್ದು ಸುಮಾರು 10 ವರ್ಷಗಳ ಹಿಂದೆ ಪಿರ್ಯಾದಿದಾರರ ರಿಚಾಸಿಂಗ್ ಪ್ರಯಾ:29 ವರ್ಷ ರವರನ್ನು ವಿವಾಹವಾಗಿರುತ್ತಾರೆ. ಒಂದು ವಾರದಿಂದ ಪಿರ್ಯಾದಿದಾರರ ಹೆಂಡತಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ದಿನಾಂಕ 21.06.2023 ರಂದು ತನ್ನ ಗಂಡನ ಮೊಬೈಲ್ ನಂಬ್ರಗೆ 11.30 ಗಂಟೆಗೆ ವಾಟ್ಸಪ್ ಮೂಲಕ ವಾಯ್ಸ್ ಮೇಸೆಜ್ ನಲ್ಲಿ ತಾನು ಮನೆಬಿಟ್ಟು ಹೋಗುತ್ತಿರುವುದಾಗಿ ಕಳುಹಿಸಿದ್ದು ನಂತರ ಪಿರ್ಯಾದಿದಾರರ ಕೆಲಸ ಮುಗಿಸಿ ಸಂಜೆ 6.15 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಬೀಗ ಹಾಕಿದ್ದು ನಂತರ ತನ್ನ ಮೊಬೈಲ್ ನ್ನು ನೋಡಲಾಗಿ ಹೆಂಡತಿ ಕಳುಹಿಸಿದ ವಾಟ್ಸಪ್ ವಾಯ್ಸ್ ಮೇಸೆಜ್ ಕೇಳಿದ್ದು  ನಂತರ ಟ್ಯೂಷನ್ ನಲ್ಲಿದ್ದ ಮಗನಲ್ಲಿ ವಿಚಾರಿಸಲಾಗಿ ಅವನು ಕೂಡ ಗೊತ್ತಿರುವುದಿಲ್ಲ ಎಂಬುದಾಗಿ ತಿಳಿಸಿದ್ದು  ನಂತರ ಮನೆಯ ಓನರ್ ರವರು ಮಧ್ಯಾಹ್ನ 1.00 ಗಂಟೆಗೆ ಪಿರ್ಯಾದಿದಾರರ ಹೆಂಡತಿ ರಸ್ತೆಯಲ್ಲಿ ನಿಂತಿರುವುದಾಗಿ ತಿಳಿಸಿದ್ದು ನಂತರ ಎಲ್ಲಾಕಡೆ ಹುಡುಕಿ ನೆರೆಯವರಲ್ಲಿ ಕೆಳಿದ್ದು ಯಾವುದೇ ಮಾಹಿತಿ ತಿಳಿದುಬಂದಿರುವುದಿಲ್ಲ ಆದ್ದರಿಂದ ಕಾಣೆಯಾದ ಪಿರ್ಯಾದಿದಾರರ ಹೆಂಡತಿಯನ್ನು ಪತ್ತೆಮಾಡಬೇಕಾಗಿ ನೀಡಿದ ದೂರು ಎಂಬಿತ್ಯಾದಿ

 

 

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 21-08-2023 01:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080