ಅಭಿಪ್ರಾಯ / ಸಲಹೆಗಳು

 

 Crime Report in Kavoor PS

ಪಿರ್ಯಾದಿ SUNIL RODRIGUES ದಾರರು ಭಾರತ್ ಪೆಟ್ರೋಲಿಯಂ ನವರ ಮಹಾಲಕ್ಷ್ಮೀ ಪ್ಯೂಯಲ್ಸ್ ಪಂಪ್ ನಲ್ಲಿ ದಿನಾಂಕ 20/07/2023 ರಂದು ಪಂಪ್ ಗೆ ಬರುವ ವಾಹನಗಳಿಗೆ ಪೆಟ್ರೋಲ್ ಇಂಧನ ತುಂಬಿಸುವ ಕೆಲಸ ಮಾಡುವ ಸಮಯ ರಾತ್ರಿ 11-19 ಗಂಟೆಗೆ ನೀಲಿ ಬಣ್ಣದ ರೆನೋಲ್ಟ್ ಕಾರಿನಲ್ಲಿ ಬಂದ ಓರ್ವ ಅಪರಿಚಿತನು ಸದ್ರಿ ಕಾರಿಗೆ ಪುಲ್ ಟ್ಯಾಂಕ್ ಪೆಟ್ರೋಲ್ ಇಂಧನ ತುಂಬಿಸಿ ರೂ. 4100.60 ಹಣವನ್ನು ಪಾವತಿಸದೇ ಕಾರು ಸ್ಟ್ರಾಟ್ ಮಾಡಿ ವೇಗವಾಗಿ ಕಾವೂರು ಜಂಕ್ಷನ್ ಕಡೆಗೆ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ, ಪಿರ್ಯಾದಿದಾರರು ಕಾರನ್ನು ಬೆನ್ನಟ್ಟಿ ನೋಡಿದಾಗ ಕಾರಿನ ಎದುರು ಮತ್ತು ಹಿಂಬದಿ ನೊಂದಣಿ ಸಂಖ್ಯೆ ಇಲ್ಲವಾಗಿರುತ್ತದೆ. ಆದ್ದರಿಂದ ರೂ 4100.60 ಮೌಲ್ಯದ ಪೆಟ್ರೋಲ್ ಇಂಧನ ತುಂಬಿಸಿ ಹಣ ಪಾವತಿಸದೇ ಪರಾರಿಯಾದ ಅಪರಿಚಿತ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ, ಎಂಬಿತ್ಯಾದಿ.

                                      

Panambur PS

ದಿನಾಂಕ 21-07-2023 ರಂದು ಸ್ವಾತಿ ಪೆಟ್ರೋಲ್ ಪಂಪ್ ಹಿಂದುಗಡೆ ಮಾರುತಿ ರೋಡ್ ಲೈನ್ಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳೊಂದಿಗೆ ಹಣವನ್ನು ಪಣವಾಗಿಟ್ಟು ಆಡುತ್ತಿದ್ದಾರೆಂಬ ಮಾಹಿತಿ ಅನುಸಾರ 18-45 ಗಂಟೆಗೆ ದಾಳಿ ನಡೆಸಿ ಅಲ್ಲಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಆಡುತ್ತಿದ್ದ 1) ಚಂದ್ರಶೇಖರ್ ಪ್ರಾಯ 43 ವರ್ಷ,  ವಾಸ: ಡೋರ್ ನಂಬ್ರ 2/16 ಡಿ, ಚಂದ್ರ ನಿಲಯ, ಪಕ್ಷಿಕೆರೆ, ಮಂಗಳೂರು. 2) ಮೋಹನ್ ಸನಿಲ್ ಕೆ. ಪ್ರಾಯ 50 ವರ್ಷ,  ವಾಸ: ವಿಶಾಲ್ ಮಾರ್ಟ್ ಬಳಿ ಗಂಗಾಧರ ಎಂಬವರ ಬಾಡಿಗೆ ಮನೆ, ಸುರತ್ಕಲ್, ಮಂಗಳೂರು. 3) ಅರುಣ್ ಕುಮಾರ್ ಶೆಟ್ಟಿ ಪ್ರಾಯ 47 ವರ್ಷ,  ವಾಸ: ಶಬರಿ ನಿಲಯ, ಕೊಯ್ಯಕೊಡೆ, ಪಕ್ಷಿಕೆರೆ, ಮಂಗಳೂರು. 4) ಕಿಶೋರ್ ಶೆಟ್ಟಿ ಎಂಬವರನ್ನು ವಶಕ್ಕೆ ಪಡೆದು ಅವರುಗಳಿಂದ ಒಟ್ಟು 665/- ರೂಪಾಯಿ ನಗದು ಹಣ, 52 ಇಸ್ಪೀಟ್ ಎಲೆಗಳನ್ನು  ಹಾಗೂ ಹಳೆಯ ನ್ಯೂಸ್ ಪೇಪರನ್ನು ಸ್ವಾಧೀನಪಡಿಸಿಕೊಂಡು ಈ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

 

 

 

Mangalore East PS

 ದಿನಾಂಕ 21-07-2023 ರಂದು ಬೆಳಗ್ಗಿನ ಜಾವಾ 04:15 ಗಂಟೆಗೆ ಮಂಗಳೂರು ನಗರದ ಸೈಂಟ್ ಆಗ್ನೇಸ್ ಶಾಲೆ ಬೆಂದೂರು ಹತ್ತಿರ ಒಬ್ಬ ವ್ಯಕ್ತಿಯು ಯಾವುದೋ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ವೈದ್ಯರು ಪರೀಕ್ಷಿಸಿ Methamphetamine 1000 ng per ml POSITIVE ಎಂದು ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Radni Vishwas Dsoza ದಾರರ ಪತ್ನಿ ಶ್ರೀಮತಿ ಲವಿನಾ ಮರೀನಾ ಲೋಬೊ(36 ವರ್ಷ) ರವರು  ದಿನಾಂಕ 20.07.2023 ರಂದು ಅವರ ಸಹದ್ಯೋಗಿ S N ಭಟ್ ರವರೊಂದಿಗೆ ಆಟೋರಿಕ್ಷಾ ನಂಬ್ರ KA19 AD 6812  ನೇದರಲ್ಲಿ ಮಂಗಳೂರು ಕಡೆ ಬರುತ್ತಿರುವ ಸಮಯ ರಾತ್ರಿ 7.45 ಗಂಟೆಗೆ ಅದ್ಯಾಪಾಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ತಿರುವಿನಲ್ಲಿ KA19 AD 6812  ನೇದರ ಚಾಲಕ  ಮಲ್ಲಿಕ್ ಭಾಷ ರವರು ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿದ್ದು ಆಟೋ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಇದರಿಂದ ಪಿರ್ಯಾದಿದಾರರ ಪತ್ನಿಗೆ ಬಲಕೈ ಗೆ ರಕ್ತಗಾಯವಾಗಿದ್ದು ಹಾಗೂ SN ಭಟ್ ಮತ್ತು ಮಲ್ಲಿಕ್ ಭಾಷ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪಿರ್ಯಾದಿದಾರರ ಪತ್ನೀಯನ್ನು ತೇಜಶ್ವಿನಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

Surathkal PS

ಪಿರ್ಯಾದಿ Smt Susheela Setty ದಾರರ ಗಂಡ ಬಾಲಕೃಷ್ಣ ಶೆಟ್ಟಿ, ಪ್ರಾಯ – 65 ವರ್ಷ ರವರು ಚೇಳಾರ್ ನಲ್ಲಿ ತನ್ನ ಸ್ವಂತ ಆಟೋ ರಿಕ್ಷಾ KA-19-AD-1024 ನೇದರಲ್ಲಿ ದುಡಿಯುತ್ತಿದ್ದು ನಿನ್ನೆ ದಿನ ದಿನಾಂಕ : 20-07-2023 ರಂದು ಬೆಳಿಗ್ಗೆ 09.30 ಗಂಟೆಗೆ ತನ್ನ ಆಟೋ ರಿಕ್ಷಾ ವನ್ನು ರಿಪೇರಿಯ ಬಗ್ಗೆ ಮುಲ್ಕಿಯ ಕಾರ್ನಾಡು ಗ್ಯಾರೇಜ್ ಗೆ ಕೊಂಡು ಹೋಗುತ್ತೇನೆಂದು ಪಿರ್ಯಾದಿದಾರರಲ್ಲಿ ಹೇಳಿ ಹೋದವರು ಮಧ್ಯಾಹ್ನ ಮನೆಗೆ ಊಟಕ್ಕೆ ಬಾರದೆ ಇದ್ದು ಸಂಜೆ ಪಿರ್ಯಾದಿದಾರರು ತನ್ನ ಗಂಡನಿಗೆ ದೂರವಾಣಿ ಕರೆ ಮಾಡಿದಾಗ ಅವರ ಪೋನ್ ಸ್ವಿಚ್ ಆಫ್ ಆಗಿರುತ್ತದೆ ನಂತರ ಪಿರ್ಯಾದಿದಾರರು ಮತ್ತು ಅವರ ಮಗ ರೋಷನ್ ಹುಡುಕಾಡಿದಾಗ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಪಕ್ಕ ಕಂಡಿಗೆ ರಸ್ತೆಯ ಬದಿಯಲ್ಲಿ ಅವರ ಆಟೋ ರಿಕ್ಷಾ ಅದರ ಕೀ ಹಾಗೂ ಒಂದು ಮೊಬೈಲ್ ಪೋನ್ ನ್ನು ಆಟೋ ರಿಕ್ಷಾದಲ್ಲೇ ಬಿಟ್ಟು ಹೋಗಿರುತ್ತಾರೆ ದಿನಾಂಕ : 21-07-2023 ರಂದು ಬೆಳಿಗ್ಗೆ 07.40 ಗಂಟೆಗೆ ಪಿರ್ಯಾದಿದಾರರ ಗಂಡ ಬಾಲಕೃಷ್ಣ ಶೆಟ್ಟಿ ರವರು ನೆರೆಮನೆಯ ಸರಿತಾ ರವರಿಗೆ 20,000 ರೂ ಕೊಡಲು ಇದೆ ಈ ಹಣ ಕಪಾಟಿನಲ್ಲಿ ಇದ್ದು ಈ ಹಣವನ್ನು ಸರಿತಾಳಿಗೆ ಕೊಡುವಂತೆ ಅವರ ಇನ್ನೊಂದು ಮೊಬೈಲ್ ನಂಬರ್ ನಿಂದ ತನ್ನ ಮಗಳಿಗೆ ವಾಟ್ಸಪ್ ವಾಯಿಸ್ ಮೆಸೇಜ್ ಕಳುಹಿಸಿ ನಂತರ ಸ್ವಿಚ್ ಆಫ್ ಮಾಡಿರುತ್ತಾರೆ ಪಿರ್ಯಾದಿದಾರರು ಬಾಲಕೃಷ್ಣ ಶೆಟ್ಟಿ ರವರನ್ನು ನೆರೆಹೊರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಲಾಗಿ ಈ ವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

 

Kankanady Town PS

ಪಿರ್ಯಾದಿ Mamatha ದಾರರು ಮಂಗಳೂರಿನ ಶಾಂತಿನಗರ ಅಳಪೆ ಪಡೀಲ್ ನಲ್ಲಿ ತನ್ನ ಸಂಸಾರದೊಂದಿಗೆ ವಾಸಮಾಡಿಕೊಂಡು ಮನೆ ವಾರ್ತೆ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಗಂಡ ನವೀನ್ ಕಮಾರ್ ಪ್ರಾಯ: 45 ವರ್ಷ ಎಂಬಾತನು ಪೈಟಿಂಗ್ ಆಗಿ ಕೆಲಸಮಾಡುತ್ತಿದ್ದು. ದಿನಾಂಕ 20-07-2023 ರಂದು ರಾತ್ರಿ ಸಮಯ 11-30 ಗಂಟೆಗೆ ಪಿರ್ಯಾದುದಾರರಿಗೆ ತಿಳಿಸದೆ ಮನೆಯಿಂದ ಹೊರಗೆ ಹೋದವರು ದಿನಾಂಕ 21-07-2023 ರವರೆಗೂ ಮನೆಗೆ ವಾಪಾಸು ಬಾರದೆ ಇದ್ದು ನಂತರ ಪಿರ್ಯಾದಿದಾರರು ಸುತ್ತಮುತ್ತಲಿನ ಪರಿಸರದವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದ್ದು ಏಲ್ಲಿಯೂ ಪತ್ತೆಯಾಗದೆ ಇರುವುದರಿಂದ ಪಿರ್ಯಾದುದಾರರ ಗಂಡ ನವೀನ್ ಕಮಾರ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ.ಎಂಬಿತ್ಯಾದಿ.

Mangalore South PS            

 ಪಿರ್ಯಾದಿದಾರರಾದ ಶ್ರೀಮತಿ, ಪಿ ಕೆ ಗೌರವಿ [41] ರವರ ಗಂಡ:ರಾಜ್ ಶೇಖರ್ [48] ಎಂಬವರು  ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆ ಎದುರು ಇರುವ ಲಿಂಕಿಂಗ್ ಟವರ್ ಬಿಲ್ಡಿಂಗ್  ನಲ್ಲಿ  ನವೀನ್   ಟ್ರೆಡಿಂಗ್ ಎಂಬ ವ್ಯಾಪಾರ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಸದ್ರಿಯವರು   ದಿನಾಂಕ: 16.07.2023 ರಂದು ಸಮಯ ರಾತ್ರಿ 8:30 ಗಂಟೆಗೆ ದೂರವಾಣಿ ಕರೆ ಮೂಲಕ ಬೆಂಗಳೂರಿಗೆ ಅರ್ಡರ್ ಸಲುವಾಗಿ ಹೊಗುವುದಾಗಿ ತಿಳಿಸಿ, ಮನೆಯಿಂದ ಹೋದವರು ವಾಪಸ ಮನೆಗೆ  ಬಾರದ ಕಾರಣ ಪಿರ್ಯಾದಿದಾರರು ಮರುದಿನ  ದಿನಾಂಕ: 17-07-2023 ರಂದು ರಾಜಶೇಖರ್ ರವರಿಗೆ ಬೆಂಗಳೂರಿಗೆ  ಸುರಕ್ಷಿತವಾಗಿ ತಲುಪಿರುವ ಬಗ್ಗೆ ಕೇಳಲು ಮೊಬೈಲ್ ಕರೆ ಮಾಡಿದಾಗ ರಾಜ್ ಶೇಖರ್ ರವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪಿರ್ಯಾದಿದಾರರು ಸದ್ರಿಯವರ ಕಛೇರಿಗೆ ಹೋಗಿ ವಿಚಾರಿಸಲಾಗಿ, ಅಲ್ಲಿನ ಸಿಬ್ಬಂದಿಗಳು ಯಾವೂದೇ  ಮಾಹಿತಿ ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ಬಳಿಕ  ಮಂಗಳೂರು ನಗರದ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ರಾಜಶೇಖರ ರವರು ಈವರೆಗೆ ಪತ್ತೆಯಾಗಿರುವುದಿಲ್ಲ, ಅಲ್ಲದೇ ನೆರೆಕೆರೆಯವರನ್ನು ಹಾಗೂ ಸಂಭಂಧಿಕರನ್ನು, ಪರಿಚಯದ ಸ್ನೇಹಿತರನ್ನು ವಿಚಾರಿಸಿದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ, .ಆದುದರಿಂದ ಪಿರ್ಯಾದಿದಾರರು  ಪರಿಚಯದವರನ್ನು ವಿಚಾರಿಸಿಕೊಂಡು ಠಾಣೆಗೆ ಬಂದು ತಡವಾಗಿ ದೂರು ನೀಡಿದ್ದು,  ಕಾಣೆಯಾದ  ಪಿರ್ಯಾದಿದಾರರ ಗಂಡ ರಾಜಶೇಖರ್ ರವರನ್ನು  ಪತ್ತೆ ಮಾಡಿ ಕೊಡಬೇಕಾಗಿ ವಿನಂತಿ ಎಂಬಿತ್ಯಾದಿಯಾಗಿರುತ್ತದೆ.

 

 

 

 

 

 

 

 

 

 

 

 

Urva PS 66/23

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಈ ದಿನ ತಾರೀಕು 21-07-2023 ರಂದು ಪಿರ್ಯಾದಿದಾರರು ತನ್ನ ಗೆಳೆಯ ನಫೀಝ್ ಇಸ್ಮಾಯಿಲ್ ನೌಶದ್, ಹಾಗೂ ತಮ್ಮ  ಕಾಲೇಜಿನ ವ್ಯಾಸಂಗ ಮಾಡುತ್ತಿರುವ ತಮ್ಮ  ಸ್ನೇಹಿತೆಯರಾದ ಫಾತಿಮತ್ತುಲ್ ಹನ್ನ, ಮರಿಯ ಫ್ರಾನ್ಸಿಸ್, ಅನಘ ಕೆ, ಮತ್ತು ನಿವ್ಯ ರೊಂದಿಗೆ ಪಣಂಬೂರು ಬೀಚಿಗೆ ಹೋಗಿದ್ದು, ಪಣಂಬೂರು ಬೀಚಿನಲ್ಲಿ ಜ್ಯೂಸ್ ಕುಡಿಯುತ್ತಿದ್ದ ಸಮಯ ಪರಿಚಯವಿರದ ಯುವಕನೊಬ್ಬನು ಪಿರ್ಯಾದಿದಾರರ ಹಾಗೂ ಅವರ ಗೆಳೆಯ ಗೆಳತಿಯರ ವೀಡಿಯೋವನ್ನು ಮಾಡಿದ್ದು , ಪಿರ್ಯಾದಿದಾರರ ಮತ್ತು ಅವರ ಗೆಳೆಯ ನಫೀಝ್ ಇಸ್ಮಾಯಿಲ್ ನೌಶದ್ ರವರು ಮೋಟಾರ್ ಸೈಕಲ್ ನಲ್ಲಿ ಬಿಜೈ ಕಾಪಿಕಾಡ್ ನ 7 ನೇ ಕ್ರಾಸ್ ನಲ್ಲಿರುವ ಶ್ರೀ ದುರ್ಗಾ ಅಪಾರ್ಟ್ ಮೆಂಟ್ ಗೆ ಹೋಗಿರುವುದಲ್ಲದೇ  ಉಳಿದ ಗೆಳತಿಯರು ಬಸ್ ಮೂಲಕ ಮಂಗಳೂರು ಕಡೆಗೆ ಹೋಗಿದ್ದು ಅವರಲ್ಲಿ ಮರಿಯ ಪ್ರಾನ್ಸಿಸ್ ರವರು  ಚಿಲಿಂಬಿಯಲ್ಲಿ ತನ್ನ ರೂಂ ಗೆ ಹೋಗಲು ಬಸ್ಸಿನಿಂದ ಇಳಿದಾಗ ಬೀಚಿನಲ್ಲಿ ವೀಡಿಯೊ ಮಾಡಿದ ಯುವಕನು ಬಸ್ಸನ್ನು ಫಾಲೋ ಮಾಡಿಕೊಂಡು ಬಂದು ಮರಿಯರವರನ್ನು ಹೆದರಿಸಿ ಅವರ ತಂದೆಯ ಫೊನ್ ನಂಬ್ರವನ್ನು ಪಡೆದು ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಬಸ್ಸಿನಲ್ಲಿ ಹೋಗುತ್ತಿದ್ದ ಇತರರು ಈ ದೃಶ್ಯವನ್ನು ನೋಡಿ ಬಸ್ಸಿನಿಂದ ಇಳಿದು ಸ್ಥಳಕ್ಕೆ ಬಂದಾಗ ಆ ಯುವಕನು ಇವರಲ್ಲಿ “ಹಿಂದು ಹುಡುಗಿಯರಾದ ನೀವು ಮುಸ್ಲಿಂ ಹುಡುಗರ ಜೊತೆ ಬೀಚಿಗೆ ಹೋಗಿದ್ದಿರಿ ಎಂಬುದಾಗಿ, ಬೈದು ಹೆದರಿಸಿದ್ದಲ್ಲದೇ  ಪಿರ್ಯಾದಿದಾರರನ್ನು ತೋರಿಸುವಂತೆ ತಿಳಿಸಿ ಪಿರ್ಯಾದಿದಾರರ ಗೆಳತಿಯರು  ಕುಳಿತು ಹೋಗುತ್ತಿದ್ದ ಆಟೋ ರಿಕ್ಷಾವನ್ನು ಫಾಲೋ ಮಾಡಿಕೊಂಡು ಬಂದು ವಿಷಯ ತಿಳಿದ ಪಿರ್ಯಾದಿದಾರರು ತಮ್ಮ ಗೆಳತಿಯರನ್ನು ಹುಡುಕಿಕೊಂಡು ಹೋಗಲು ಬಿಜೈ ಕಾಫಿಕಾಡ್ ನ ಬಬ್ಬು ಸ್ವಾಮಿ ದ್ವಾರದ ಬಳಿ  ಸಮಯ ಸುಮಾರು 7-40 ವೇಳೆಗೆ   ತಲುಪಿದಾಗ ಬೀಚಿನಲ್ಲಿ ವಿಡಿಯೋ ಮಾಡಿದ ಯುವಕನು ಸ್ಕೂಟರ್ ನಲ್ಲಿ ಬಂದು ಪಿರ್ಯಾದಿದಾರರಲ್ಲಿ ಬೇವರ್ಸಿ, “ನಿಮಗೆ ಮಾಡುತ್ತೇನೆ”, ನೀವು ಹಿಂದು ಹುಡುಗಿಯರ ಜೊತೆ ಯಾಕೆ ಬೀಚಿಗೆ ಹೋಗಿದ್ದು, ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಾಲರ್ ಪಟ್ಟಿ ಹಿಡಿದು ಬಲ ಕೆನ್ನೆಗೆ ಮತ್ತು  ಕುತ್ತಿಗೆಗೆ ಹೊಡೆದಾಗ ಆತನಿಂದ ತಪ್ಪಿಸಿಕೊಂಡ ಪಿರ್ಯಾದಿದಾರರಿಗೆ  ಜೀವ ಬೆದರಿಕೆ ಒಡ್ಡಿರುತ್ತಾನೆ. ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-08-2023 02:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080