ಅಭಿಪ್ರಾಯ / ಸಲಹೆಗಳು

Crime Reported in : Mangalore Traffic West PS

ಪಿರ್ಯಾದಿದಾರರಾದ RAZIA ದಿನಾಂಕ:19-08-2022ರಂದು ಸಂಜೆ ವೇಳೆಗೆ ಅಂಗಡಿಯಿಂದ ಸಾಮಾನು ತರಲೆಂದು ಮನೆಯಿಂದ ಹೊರಟು ಬಂದರು ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ಕುದ್ರೋಳಿ ಜಾಮಿಯಾ ಮಸೀದಿ ಬಳಿ ಯಲ್ಲಿನ ಫಿಶ್ ಮರ್ಚಂಟ್ ಸಲೀಂ ಎಂಬವರ ಮನೆಯ ಎದುರು ಸಮಯ ಸುಮಾರು 16:30 ಗಂಟೆಯ ವೇಳೆಗೆ  ತಲುಪುವ ಸಮಯ ಬಂದರು ಕಡೆ ರಸ್ತೆಯಿಂದ ನೊಂದಣಿ ಸಂಖ್ಯೆ ತಿಳಿಯದ ದ್ವಿಚಕ್ರ ವಾಹನ ಸವಾರ ರಿಯಾನ್ ಎಂಬಾತನು ದ್ವಿಚಕ್ರ ವಾಹನದಲ್ಲಿ 1+1ರ ಬದಲಾಗಿ 1+2 ಸಹಸವಾರರನ್ನು ಕುಳ್ಳಿರಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದುದಾರರ ಸೊಂಟಕ್ಕೆ ತೀವ್ರ ರೀತಿಯ ಮತ್ತು ಕುತ್ತಿಗೆಯ ಹಿಂಭಾಗಕ್ಕೆ ಗುದ್ದಿದ ನಮೂನೆಯ ನೋವುಂಟಾಗಿದ್ದು, ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಕೊಡಿಯಾಲಬೈಲು ಯನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿದೆ. ಎಂಬಿತ್ಯಾದಿ.

 

Crime Reported in : Mangalore Traffic North PS

ಪಿರ್ಯಾದಿದಾರರಾದ Rajan ಪೊಲೀಸ್ ಇಲಾಖೆಯಲ್ಲಿ ASI ಅಗಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಈ ದಿನ ದಿನಾಂಕ:20-08-2022 ರಂದು ಹಗಲು ಠಾಣಾ ಪ್ರಭಾರ ಕರ್ತವ್ಯ ಇದ್ದು ಬೆಳಿಗ್ಗೆ 9;00 ಗಂಟೆಯಿಂದ ರಾತ್ರಿ 20:00 ಗಂಟೆವೆರೆಗೂ ಠಾಣಾ ಪ್ರಭಾರ ಕರ್ತವ್ಯ ನಿರ್ವಹಿಸಿ ವಿಶ್ರಾಂತಿ ಬಗ್ಗೆ ಮನೆಯ ಕಡೆಗೆ ತನ್ನ ಬಾಬ್ತು KA-19-EX-8477 “HONDA SHINE” ಮೋಟಾರ್ ಸೈಕಲಿನಲ್ಲಿ ಚಾಲನೆ ಮಾಡುತ್ತಾ ರಾಹೆ 66ರ ಡಾಮಾರು ರಸ್ತೆಯಲ್ಲಿ ಸುರತ್ಕಲ್ ಕಡೆಯಿಂದ ಹೊಸಬೆಟ್ಟು ಕಡೆಗೆ ಹೋಗುತ್ತಿರುವಾಗ ರಾತ್ರಿ ಸಮಯ ಸುಮಾರು 21:15 ಗಂಟೆಗೆ ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪ ತಲುಪುತ್ತಿದ್ದಂತೆ ತನ್ನ ಮುಂದೆ ವಾಹನ ಸಂಖ್ಯೆ KA-04-MD-0136 ಕಾರಿನ ಚಾಲಕನು ತನ್ನ ಕಾರನ್ನು ಯಾವುದೇ ಸೂಚನೇ ನೀಡದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಒಮ್ಮೆಲೇ ಎಡಕ್ಕೆ ತಿರುಗಿಸಿದ್ದು ಸದ್ರಿ ಕಾರಿನ ಹಿಂದೆ ಚಲಾಯಿಸುತ್ತಿದ್ದ ತನ್ನ ಬಾಬ್ತು ವಾಹನವು ಸದ್ರಿ ಕಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು ಪರಿಣಾಮ ರಸ್ತೆಗೆ ಬೈಕ್ ಸಮೇತ ಬಿದ್ದಿದ್ದು, ಈ ಅಪಘಾತದಿಂದ ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಎಡಕಾಲಿನ ಬೆರಳು, ಪಾದ, ಬಲಕಾಲಿನ ಎಡಕ್ಕೆ ಮತ್ತು ಬಲಕೈಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in : Mangalore Traffic North PS

ದಿನ ದಿನಾಂಕ; 21-08-2022 ರಂದು ಪಿರ್ಯಾದಿದಾರರಾದ Sharanabasu ಚಿಕ್ಕಪ್ಪ ಶಿವಾನಂದ (39) ರವರು ಅವರ ಬಾಬ್ತು KA-19-EM-7006 ನಂಬರಿನ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ರಾ.ಹೆ 66ರಲ್ಲಿ ಹಳೆಯಂಗಡಿ ಕಡೆಯಿಂದ ಮುಲ್ಕಿ ಕಡೆಗೆ ಹೋಗುತ್ತಾ ಸಮಯ ಸುಮಾರು 17:30 ಗಂಟೆಗೆ ಪಡುಪಣಂಬೂರು ಪೆಟ್ರೋಲ್ ಪಂಪ್ ನ ಎದುರು ತೆರೆದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಹಿಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-19-AD-4595 ನಂಬರಿನ ಖಾಸಗಿ ಬಸ್ ನ್ನು ಅದರ ಚಾಲಕ ಉಮೇಶ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಚಿಕ್ಕಪ್ಪ ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು ಇದರ ಪರಿಣಾಮ ತಲೆಯ ಹಿಂಬದಿಗೆ ಚರ್ಮ ಹರಿದ ರಿತಿಯ ರಕ್ತ ಗಾಯ, ಹಣೆಯ ಬಲಬದಿಗೆ ರಕ್ತ ಗಾಯ, ಬಲ ಕಣ್ಣಿನ ಕೆಳ ಬಾಗದಲ್ಲಿ ತರಚಿದ ಗಾಯ, ಬಲ ಪಕ್ಕೆಲುಬಿನ ಬಳಿ ಗುದ್ದಿದ ನೋವು ಆಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in : Moodabidre PS

ಪಿರ್ಯಾದಿದಾರರಾದ Ayisha D'Silva ಅಣ್ಣ ವಿವಿಯನ್ ಡಿಸಿಲ್ವ ಪ್ರಾಯ 28 ವರ್ಷ ಎಂಬವರು ದಿನಾಂಕ:20-08-2022 ರಂದು ರಾತ್ರಿ ತನ್ನ  ಮೋಟಾರು ಸೈಕಲ್ ನಂಬ್ರ ಕೆ.ಎ 19 ಇ.ಪಿ 4626 ರಲ್ಲಿ ಈಗ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು, ರಾತ್ರಿ 9.00 ಗಂಟೆ ಸಮಯಕ್ಕೆ ಕಲ್ಲಮುಂಡ್ಕೂರ್ ಸರ್ವೋದಯ ಶಾಲೆಯ ಬಳಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿರುವಾಗ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಬಿದ್ದು, ಅಪಘಾತವಾಗಿದ್ದು ಈ ಅಪಘಾತದಿಂದ ವಿವಿಯನ್ ಡಿಸಿಲ್ವರವರ ತಲೆಗೆ ತೀವ್ರ ತರದ ಗಾಯವಾಗಿದ್ದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಬಿತ್ಯಾದಿ

 

Crime Reported in : Bajpe PS

ಪಿರ್ಯಾದಿದಾರರಾದ ಪೂವಪ್ಪ ಪಿಎಸ್ಐ ಬಜಪೆ ಪೊಲೀಸ್ ಠಾಣೆ  ರವರಿಗೆ ಮಂಗಳೂರು ತಾಲೂಕು ಅಡ್ಡೂರಿನಲ್ಲಿ ಎ ಕೆ ಅಶ್ರಫ್ ಎಂಬುವನು ತನ್ನ ಮನೆಯ ಮುಂದೆ ಎಲ್ಲಿಂದಲೊ ಕಳವು ಮಾಡಿ ತಂದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆಂದು ಮಾಹಿತಿಯಂತೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಅವರ ಮನೆಯ ಪಶ್ಚಿಮ ದಿಕ್ಕಿನಲ್ಲಿ ಮಹಮ್ಮದ್ ಇಸ್ಮಾಯಿಲ್ ಎಂಬುವರ ವಾಣಿಜ್ಯ ಮಳಿಗೆಗಳ ಕಟ್ಟಡದ ಹಿಂಬಾಗದಲ್ಲಿನ ಖಾಲಿ ಜಾಗದಲ್ಲಿ ಸುಮಾರು 3 ರಿಂದ 4 ಲೋಡ್ ಗಳಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಈ ಬಗ್ಗೆ ಸ್ಥಳಿಯರಾದ ಹಮ್ಮಬ್ಬ ಎಂಬುವರಲ್ಲಿ ಸಂಗ್ರಹಿಸಿರುವ ಮರಳಿನ ಬಗ್ಗೆ ವಿಚಾರಿಸಿದ್ದಲ್ಲಿ ಈ ಮರಳನ್ನು ಎಕೆ ಅಶ್ರಫ್ ಎಂಬುವನು ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದ್ದು ಈ ಮರಳು ರಾಶಿಯ ಬಳಿ ಕೆಎ 19 ಎಬಿ 2115 ಮತ್ತು ಕೆಎ 19 ಎಎ 5604 ನಂಬ್ರ ಈಚರ್ ಕಂಪನಿಯ ಟಿಪ್ಪರ್ ಲಾರಿಗಳಿದ್ದು ಇವೇ ಲಾರಿಗಳಿಂದ ಅಕ್ರಮವಾಗಿ ಮರಳನ್ನು ತಂದು ಸಂಗ್ರಹಿಸಿಟ್ಟಿರುವಂತೆ ಕಂಡು ಬಂದಿರುವುದರಿಂದ  ಬಗ್ಗೆ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ

 

Crime Reported in : Ullal PS

ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ವ್ಯಾಪ್ತಿಗೊಳಪಡುವ ದಸ್ತಗಿರಿಗೆ ಬಾಕಿ ಇರುವ ಹಾಗೂ  ದಸ್ತಗಿರಿ ವಾರಂಟ್ ನಲ್ಲಿ ಹಾಜರಾಗದೆ ತಲೆಮರೆಸಿಕೊಂಡಿರುವ ಆಸಾಮಿಗಳ ಪತ್ತೆಯ ಬಗ್ಗೆ ದಿನಾಂಕ 21-08-2022 ರಂದು ವಿಶೇಷ ಕರ್ತವ್ಯದ ಬಗ್ಗೆ ಕಂಕನಾಡಿ ಠಾಣೆಯ ಪಿಎಸ್ಐ ರಘು ನಾಯಕ್ ನೇತೃತ್ವದ ತಂಡಕ್ಕೆ  ಉಳ್ಳಾಲ ಪೊಲೀಸ್ ಠಾಣಾ ಅಪರಾಧ ಪ್ರಕರಣದಲ್ಲಿ  ಮಾನ್ಯ ಸೆಸೆನ್ಸ್ ನ್ಯಾಯಾಲಯ ಹೊರಡಿಸಿದ ದಸ್ತಗಿರಿ ವಾರೆಂಟ್ ಆಸಾಮಿ ಹ್ಯಾರೀಸ್ ಯಾನೆ ಕೋಳಿ ಹ್ಯಾರೀಸ್ ಎಂಬಾತನು ಸೋಮೇಶ್ವರ ಕಡೆಯಿಂದ ಉಚ್ಚಿಲ  ಬಟ್ಟಂಪಾಡಿ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿರುವುದಾಗಿ ತಿಳಿದು ಬಂದಂತೆ ಪಿರ್ಯಾದಿದಾರರಾದ ಪಿಎಸ್ಐ ರಘುನಾಯಕ ರವರು ಸಿಬ್ಬಂಧಿಗಳೊಂದಿಗೆ ಇಲಾಖಾ ವಾಹನದಲ್ಲಿ ಉಚ್ಚಿಲ ಕಡೆಯಿಂದ ಪೆರಿಬೈಲ್ ಮಾರ್ಗವಾಗಿ ಸೋಮೇಶ್ವರ ಕೈಲಾಸ್ ನಗರ ತಲುಪಿ ಸದ್ರಿ ಸ್ಥಳದಲ್ಲಿ ಕಾಯುತ್ತಿರುವಾಗ ಮದ್ಯಾಹ್ನ 12-30 ಗಂಟೆಗೆ ಓರ್ವ ವ್ಯಕ್ತಿ ಅತೀ ವೇಗದಲ್ಲಿ ಸ್ಕೂಟರನ್ನು ಚಲಾಯಿಸಿಕೊಂಡು ಬರುತ್ತಿದ್ದು ಕೈಸನ್ನೆ ಮಾಡಿ ನಿಲ್ಲಿಸುವಂತೆ ಸೂಚಿಸಿದಾಗ ಸ್ಕೂಟರ್ ಸವಾರ ಸ್ಕೂಟರನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ಪಿರ್ಯಾದಿದಾರರು ಸಿಬ್ಬಂಧಿಗಳೊಂದಿಗೆ ಆತನ ಬಳಿಗೆ ಹೋಗಿ ವಿಚಾರಿಸಿದಾಗ ತನ್ನ ಹೆಸರು ಹ್ಯಾರೀಸ್ ಯಾನೆ ಕೋಳಿ ಹ್ಯಾರೀಸ್ ಪ್ರಾಯ(35) ತಂದೆ.ಇದಿನಬ್ಬ ವಾಸ.ಯು.ಬಿ.ಎಮ್ ಉಮರಬ್ಬ ಹೌಸ್ ಮದನಿ ಕ್ವಾರ್ಟಸ್ ಬಸ್ತಿಪಡ್ಪು ಉಳ್ಳಾಲ ತಾಲೂಕು ಎಂದು ತಿಳಿಸಿದ್ದು ಆತನಲ್ಲಿ ಸ್ಕೂಟರ್ ನ ಡಿಕ್ಕಿ ತೆಗೆಯಲು ತಿಳಿಸಿದಾಗ ಡಿಕ್ಕಿಯನ್ನು ತೆರೆಯುವಂತೆ ಮಾಡಿ ಸ್ಕೂಟರ್ ಕೀಯೊಂದಿಗೆ  ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಸಿಬ್ಬಂಧಿಗಳು ಸುತ್ತುವರಿದು ಹಿಡಿದು ಆತನಲ್ಲಿ ಕೂಲಂಕುಶವಾಗಿ ವಿಚಾರಿಸಿದಾಗ ಡಿಕ್ಕಿಯ ಒಳಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್ ಇದ್ದು ಅದನ್ನು ತೆಗೆದು ನೋಡಿದಾಗ  ಗಾಂಜಾ ಇದ್ದು ಅಲ್ಲದೇ ಗಾಂಜಾ ತುಂಬಿದ 4 ಪಾರದರ್ಶಕ ಪ್ಲಾಸ್ಟಿಕ್ ಸಾಚೇಟ್ ಇದ್ದು ಇದನ್ನು ಕೇರಳ ರಾಜ್ಯದ ಮಂಜೇಶ್ವರದಿಂದ ಓರ್ವ ವ್ಯಕ್ತಿಯಿಂದ ಹಣ ಕೊಟ್ಟು ಖರೀದಿಸಿದ್ದು ಇವುಗಳನ್ನು ಸಣ್ಣ ಸಣ್ಣ ಪ್ಯಾಕೇಟ್ ಮಾಡಿ ಸಮುದ್ರ ಬದಿಯಲ್ಲಿ ಓಡಾಡುವ ಹಾಗೂ ಬೀಚಿಗೆ ಬರುವ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದು ಸ್ಕೂಟರ್ ನ ಡಿಕ್ಕಿಯಲ್ಲಿ ಇರಿಸಿದ್ದ ಗಾಂಜಾವನ್ನು ಕಪ್ಪು ಪ್ಲಾಸ್ಟಿಕ್ ಬ್ಯಾಗ್ ಸಮೇತ ತೂಕ ಮಾಡಲಾಗಿ ಒಟ್ಟು 1 ಕೆಜಿ 160 ಗ್ರಾಂ ತೂಕವಿದ್ದು, ಇದರ ಅಂದಾಜು ಮೌಲ್ಯ ರೂ 14,200/- ಆಗಬಹುದು. ಹಾಗೂ 4 ಪಾರದರ್ಶಕ ಪ್ಲಾಸ್ಟಿಕ್ ಸಾಚೇಟ್ ಬ್ಯಾಗ್ ನಲ್ಲಿ ತಲಾ 15 ಗ್ರಾಂ ನಂತೆ ಒಟ್ಟು 60ಗ್ರಾಂ ತೂಕವಿದ್ದು  ಅಂದಾಜು ಮೌಲ್ಯ  ರೂ.800/- ಆಗಬಹುದು. ಸ್ಕೂಟರ್ ನ ಡಿಕ್ಕಿಯಲ್ಲಿದ್ದ ಸ್ಯಾಮ್ ಸಂಗ್ ಕಂಪನಿಯ ನೀಲಿ ಬಣ್ಣದ ಟಚ್ ಸ್ಕ್ರೀನ್ ಮೊಬೈಲ್ -1. ಕೆಎ 19 ಇಎಕ್ಸ್ 8553 ನೇ ನಂಬ್ರದ ಹೋಂಡಾ ಕಂಪನಿ ಡಿಯೋ ಸ್ಕೂಟರ್-1 ಅಂದಾಜು ಮೌಲ್ಯ ರೂ 20,000/- ಗಳನ್ನು ಸ್ವಾದೀನ ಪಡಿಸಿ ಆರೋಪಿ ವಿರುದ್ದ ಪ್ರಕರಣ ದಾಕಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

 

2) ದಿನಾಂಕ. 21-08-2021 ರಂದು ಫಿರ್ಯಾದಿದಾರರಾದ ಉಳ್ಳಾಲ ಠಾಣೆಯ ಪೊಲೀಸ್ ಉಪ-ನೀರಿಕ್ಷಕರು ಶಿವಕುಮಾರ್ ಕೆ  , ರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಪೆರ್ಮನ್ನೂರು  ಗ್ರಾಮದ  ಕೆರೆಬೈಲ್ ಅಜ್ಜನ್ ಕಟ್ಟೆಯ ಸುದೀರ್ ಶೇಟ್ಟಿ ಅಂಗಡಿಯ ಬಳಿ  ಒಬ್ಬ ಯುವಕನು ಯಾವುದೋ ನಶೆ ಬರುವ ವಸ್ತುವನ್ನು ಸೇವಿಸಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಸಮಯ 17-45  ಗಂಟೆಗೆ ಮಾಹಿತಿ ದೊರೆತ  ಸ್ಥಳಕ್ಕೆ ತೆರಳಿದಾಗ ಅಲ್ಲಿ   ಸುಮಂತ್ (23) ವಾಸ: ಗಿರಿಜಾ ಕೃಪಾ ಕೆರೆಬೈಲು ಪೆರ್ಮನ್ನೂರು ಗ್ರಾಮ ಉಳ್ಳಾಲ ತಾಲೂಕು. ಎಂಬವನು ಮಾದಕ ದ್ರವ್ಯ ಸೇವನೆ ಮಾಡಿ ಸಾರ್ವಜಿನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು ವಶಕ್ಕೆ ಪಡದು  ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ತಪಾಸಣೆಗೊಳಪಡಿಸಿದ್ದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರು ಅಭಿಪ್ರಾಯ ಪತ್ರ ನೀಡಿರುವುದರಿಂದ ಆರೋಪಿತನ ವಿರುದ್ಧ  ಪ್ರಕರಣ ದಾಕಲಿಸಿ ತನಿಕೆ ಕೈಗೊಂಡಿರುವುದು  ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 22-08-2022 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080