ಅಭಿಪ್ರಾಯ / ಸಲಹೆಗಳು

Crime Report in Mangalore East Traffic PS

ಪಿರ್ಯಾದಿದಾರರಾದ ಮೊಹಮ್ಮದ್ ಸಿನಾನ್  ಪ್ರಾಯ 21 ವರ್ಷ ಎಂಬುವರು ನಿನ್ನೆ ದಿನ ದಿನಾಂಕ 21-08-2023 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಕಣ್ಣೂರು ಬಸ್ ನಿಲ್ದಾಣದಿಂದ KA-19-D-4505 ನೊಂದಣಿ ನಂಬ್ರದ 10 A PTC  ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಾ ಬಂದು ಜ್ಯೋತಿ ಬಸ್ ನಿಲ್ದಾಣದಲ್ಲಿ ಇಳಿಯುವರೇ ಬಸ್ಸಿನ ಡೋರಿನ ಬಳಿ ಬಂದು ನಿಂತುಕೊಂಡಿದ್ದಾಗ ಸಮಯ ಸುಮಾರು 8.40 ಗಂಟೆಗೆ ಬಸ್ಸು ಬಲ್ಮಠ ಯೆನಪೋಯ ಕಾಲೇಜ್ ಸಮೀಪ ತಲುಪುತ್ತಿದ್ದಂತೆ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಗರೂಕತೆಯಿಂದ ಚಲಾಯಿಸಿ ರಸ್ತೆಯ ಎಡಬದಿಯಲ್ಲಿದ್ದ ವಾಹನಗಳನ್ನು ಓವರ್ ಟೇಕ್ ಮಾಡುತ್ತಾ ರಸ್ತೆಯ ತೀರ ಎಡಬದಿಗೆ ಬಂದು  ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಬಾಕ್ಸ್ ಗೆ ಒರೆಸಿಕೊಂಡು ಹೋಗಿದ್ದು, ಪಿರ್ಯಾದಿದಾರರ ಎಡಕಾಲಿನ ಹೆಬ್ಬೆರಳಿಗೆ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಬಸ್ಸಿನ ಕಂಡೆಕ್ಟರ್ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಎಡಕಾಲಿನ ಹೆಬ್ಬೆರಳಿನಲ್ಲಿ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿದ್ದು,  ಪಿರ್ಯಾದಿದಾರರು ನಂತರ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ.

Mangalore East PS                     

ಪಿರ್ಯಾಧಿ Faheem Hamza ದಾರರು ದಿನಾಂಕ 19-08-2023 ರಂದು ಕೆಲಸದ ನಿಮಿತ್ತ ತನ್ನ ಅಣ್ಣ ಶ್ರೀ ಫಾರೀಸ್ ಹಂಝ ರವರ ಹೆಸರಿನಲ್ಲಿರುವ ಸ್ಕೂಟರ್ ನಂಬ್ರ KL-60 P-7682 (SUZUKI ACCESS 125) ನೇದರಲ್ಲಿ ಮಂಗಳೂರಿಗೆ ಬಂದಿದ್ದು ತನ್ನ ಕೆಲಸ ಮುಗಿಸಿ ವಾಪಾಸ್ಸು ಹೋಗುವ ಮುಂಚೆ ಪಿರ್ಯಾಧಿದಾರರು ಈ ಹಿಂದೆ ಕಂಕನಾಡಿ ಬೈಪಾಸ್ ರೋಡ್ ನಲ್ಲಿರುವ ಪಿ.ಜಿ ಯಲ್ಲಿ ವಾಸವಾಗಿದ್ದ ಪರಿಚಯದಲ್ಲಿ ಮಂಗಳೂರು ಮೆನ್ಸ್ ಹಾಸ್ಟೆಲ್ ನ ವಾರ್ಡನ್ ಅವರನ್ನು ಮಾತನಾಡಿಸಿಕೊಂಡು ಹೋಗುವರೆ ಸಂಜೆ 4-00 ಗಂಟೆಗೆ ಬಂದು ಮಂಗಳೂರು ಮೆನ್ಸ್ ಹಾಸ್ಟೆಲ್ ನ ಎದುರು ಇರುವ ರೋಡ್ ನಲ್ಲಿ ಸದ್ರಿ KL-60 P-7682 ACCESS 125 ಸ್ಕೂಟರನ್ನು  ಪಾರ್ಕ್ ಮಾಡಿ ಹೋಗಿದ್ದು ವಾಪಾಸ್ಸು ಅರ್ಧ ಗಂಟೆ ಬಿಟ್ಟು ಬಂದು ಪಾರ್ಕ್ ಮಾಡಿದ ಜಾಗದಲ್ಲಿ ಸ್ಕೂಟರನ್ನು ನೋಡಿದಾಗ ಸ್ಕೂಟರ್ ಇಲ್ಲದೇ ಇದ್ದು, ಈ ಸ್ಕೂಟರ ನ್ನು ಸಂಜೆ 04-00 ಗಂಟೆಯಿಂದ ಸಂಜೆ 04:30 ಗಂಟೆಯ- ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಸ್ಕೂಟರನ್ನು ನಗರದ ಕೆಲವು ಕಡೆಗಳಲ್ಲಿ ಹುಡುಕಾಡಿದ್ದು, ಈ ವರೆಗೆ ಕಳವಾದ ಸ್ಕೂಟರ್ ಸಿಗದ ಕಾರಣ, ಮನೆಯವರಿಗೆ ಕೂಡ ಈ ಬಗ್ಗೆ ತಿಳಿಸಿ ವಿಚಾರ ವಿನಿಮಯ ಮಾಡಿಕೊಂಡು ತಡವಾಗಿ ಈ ದಿನ ದಿನಾಂಕ: 22-08-2023 ರಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿರುವುದಾಗಿದ್ದು, ಇದರ ಅಂದಾಜು ಮೌಲ್ಯ ರೂ: 40,000/- ಆಗಬಹುದು. ಇದರ ಚಾಸಿಸ್ ನಂ: MB8DP11AHJ8009710, ಇಂಜಿನ್ ನಂಬರ್:  AF211791160, ಗ್ರೇ ಬಣ್ಣ, ಮಾಡೆಲ್: 2018, ಆಗಿರುತ್ತದೆ ಎಂಬಿತ್ಯಾದಿ.

Traffic North Police Station               

 ಪಿರ್ಯಾದಿ Ahmed Ismail Mubarak ದಾರರು ದಿನಾಂಕ 21.08.2023 ರಂದು ತನ್ನ ಕಿರಿಯ ಸಹೋದರ ಮಹಮ್ಮದ್ ಝುಲ್ಫಿಕರ್ (22 ವರ್ಷ) ಎಂಬವರೊಂದಿಗೆ ಆಕ್ಟಿವಾ ದ್ವಿಚಕ್ರ ವಾಹನ ನಂಬ್ರ KA-19HL-8838  ರಲ್ಲಿ ಮನೆಯಿಂದ ಸುರತ್ಕಲಿನ ಕೃಷ್ಣಾಪುರ 7ನೇ ಬ್ಲಾಕಿಗೆ ಹೋಗಿದ್ದು ಬಳಿಕ ಅಲ್ಲಿಂದ ವಾಪಾಸ್ಸು ಮನೆ ಕಡೆಗೆ ಹೋಗುವರೇ ಮಹಮ್ಮದ್ ಝುಲ್ಫಿಕರ್ ನು ದ್ವಿಚಕ್ರ ವಾಹನವನ್ನು ಸವಾರನಾಗಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ಸಂಶುದ್ದೀನ್ ಸರ್ಕಲ್ ನಿಂದ ಗಣೇಶಪುರ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 1:30 ಗಂಟೆಗೆ ಮಂಗಳೂರು ತಾಲೂಕು, ಸುರತ್ಕಲ್ ಸಂಶುದ್ದೀನ್ ಸರ್ಕಲ್ ಡೈಮಂಡ್ ಹೆರಿಟೇಜ್ ವಸತಿ ಸಂಕೀರ್ಣ ಬಳಿ ತಲುಪುತ್ತಿದ್ದಂತೆಯೇ ಹಿಂದಿನಿಂದ ಮೋಟಾರ್ ಸೈಕಲ್ ಒಂದನ್ನು ಅದರ ಸವಾರನು ಮೋಟಾರ್ ಸೈಕಲಿನ ಹಿಂಬದಿಯಲ್ಲಿ ಇಬ್ಬರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಮಹಮ್ಮದ್ ಝುಲ್ಫೀಕರ್ ಈತನ ಬಲ ಕೈಯ ತಟ್ಟಿನ ಬಳಿ ಮೂಳೆ ಮುರಿತದ ಗಾಯ, ಬಲ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ. ಹಾಗೂ ಪಿರ್ಯಾದಿಯ ಕುತ್ತಿಗೆಯ ಹಿಂಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಅಫಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನು ಅಫಘಾತ ಪಡಿಸಿದ  ಬಳಿಕ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಗಾಯಾಳುಗಳು ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ಪ್ರಥಂ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ದೆ ಆಸ್ಪತ್ರೆಯಲ್ಲಿ ಮಹಮ್ಮದ್ ಝುಲ್ಫಿಕರ್ ನು ಒಳರೋಗಿಯಾಗಿ ಮತ್ತು ಫಿರ್ಯಾದಿದಾರರು ಹೊರರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic South Police Station              

ದಿನಾಂಕ:21/08/2023 ರಂದು ಮೃತ ಎ.ಮಹಮ್ಮದ್ ರವರು ಸ್ಕೂಟರ್ ನಂಬ್ರ KA-19-EK-9455 ನೇದರಲ್ಲಿ ಸಹಸವಾರರನ್ನಾಗಿ ಕೆ.ಎಂ ಅಬ್ಬಾಸ್ ರವರನ್ನು ಕುಳ್ಳಿರಿಸಿಕೊಂಡು ದನ ಖರೀದಿಸಲು ಮಂಜನಾಡಿಗೆ ಹೋಗಿ ವಾಪಸ್ಸು ಕಿನ್ಯಾ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರನ್ನು ಸವಾರಿ ಮಾಡಿಕೊಂಡು ಬರುತ್ತಾ ಸಂಜೆ 4-30 ಗಂಟೆಯ ಸುಮಾರಿಗೆ ಕಿನ್ಯಾ ಗ್ರಾಮದ ವಾದಿತ್ವೈಬ ಸಂಸ್ಥೆಯ  ಬಳಿ ತಿರುವಿನಲ್ಲಿ ಸ್ಕೂಟರ್ ನ್ನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ  ರಸ್ತೆಯ ಎಡ ಬದಿಗೆ ಸುಮಾರು 15 ಅಡಿ ಕೆಳಗೆ ಅಯಾಜ್ ಎಂಬುವರ ಮನೆಯ ಅಂಗಳಕ್ಕೆ ಬಿದ್ದ ಪರಿಣಾಮ ಸ್ಕೂಟರ್ ಸವಾರಿ ಮಾಡಿತ್ತಿದ್ದ ಮೊಹಮ್ಮದ್ ರವರಿಗೆ ಹಣೆಗೆ ಎಡಕಣ್ಣಿನ ಬಳಿ,ಮುಖದ ಎಡಭಾಗಕ್ಕೆ ರಕ್ತಗಾಯ, ಹಾಗೂ  ಎಡಕೈ ತೋಳಿಗೆ ಬಲಕಾಲಿಗೆ ಅಲ್ಲಲ್ಲಿ ತರಚಿದ  ಗಾಯ,  ಹಾಗೂ ಎದೆಯ ಎಡಭಾಗದಲ್ಲಿ  ಗುದ್ದಿದ ಗಾಯ ಹಾಗೂ K I ಅಬ್ಬಾಸ್ ರವರಿಗರ ಬೆನ್ನಿನ ಮೂಳೆಮುರಿತದ ಗಾಯ ಹಾಗೂ ಹಣೆಯ ಎಡಭಾಗಕ್ಕೆ ರಕ್ತಗಾಯ,ಬಲಕೈ,ಎಡಕಾಲು ಗಂಟಿಗೆ ತರಚಿದ  ಗುದ್ದಿದ  ಗಾಯವಾಗಿರುತ್ತದೆ. ನಂತರ ಅಲ್ಲಿ ಸೇರಿದ ಜನರು ಗಾಯಳುಗಳನ್ನು ಉಪಚರಿಸಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದ ಮೊಹಮ್ಮದ್ ರವರು ಅಪಘಾತದಿಂದಾದ ಗಾಯದ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:22-08-2023 ರಂದು ಬೆಳಗಿನ ಜಾವ  01-19 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾಧಿ

ಇತ್ತೀಚಿನ ನವೀಕರಣ​ : 22-08-2023 07:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080