ಅಭಿಪ್ರಾಯ / ಸಲಹೆಗಳು

Crime Report in  CEN Crime PS

ದಿನಾಂಕ 09-09-2023 ರಂದು ಪಿರ್ಯಾದಿದಾರರು ಹೊಂದಿರುವ INSTAGRAM ACCOUNT ಗೆ ಅಪರಿಚಿತ ಕಂಪನಿಯ ಹೆಸರಿನಲ್ಲಿ ಒಂದು ಜಾಹೀರಾತು ಬಂದಿರುತ್ತದೆ. ಅದನ್ನು ನೋಡಿದ ಪಿರ್ಯಾದಿದಾರರು ಸದ್ರಿ ಜಾಹೀರಾತಿನಲ್ಲಿರುವ ಲಿಂಕ್ ನ್ನು ಒತ್ತಿರುತ್ತಾರೆ. ಪ್ರತಿದಿನ ಹಣ ತೊಡಗಿಸಿ ಟಾಸ್ಕ್ ಕಂಪ್ಲೀಟ್ ಮಾಡಿ ಟ್ಯಾಕ್ಸ್ ಅಮೌಂಟ್ ನ್ನು ಹಾಕುವಂತೆ ತಿಳಿಸಿದಂತೆ ಪಿರ್ಯಾದಿದಾರರು ಟಾಸ್ಕ್ ಕಂಪ್ಲೀಟ್ ಆದ ನಂತರ ಮೊದಲಿಗೆ ಟ್ಯಾಕ್ಸ್ ಅಮೌಂಟ್ 166348/- ರೂಪಾಯಿ ಹಣವನ್ನು ವರ್ಗಾಯಿಸಿರುತ್ತಾರೆ. ನಂತರ 10-09-2023 ರಂದು 1000 ರೂ ಹಣ ವರ್ಗಾಯಿಸಿಕೊಂಡಿದ್ದು, ಆ ಬಳಿಕ ಹಂತಹಂತವಾಗಿ ದಿನಾಂಕ 18-09-2023 ರ ತನಕ ಒಟ್ಟು 6,32,218/- ರೂಪಾಯಿ ಹಣವನ್ನು ಅಪರಿಚಿತ ವ್ಯಕ್ತಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಪಿರ್ಯಾದಿದಾರರು ವರ್ಗಾಯಿಸಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮೂಲಕ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ತಿಳಿಸಿ ಪಿರ್ಯಾದಿದಾರರಿಂದ ಒಟ್ಟು 6,32,218 ರೂ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

Traffic North Police Station               

ದಿನಾಂಕ 21-09-2023 ರಂದು ಪಿರ್ಯಾದಿ Lohith ದಾರರು ರಾತ್ರಿ ಹಳೆಯಂಗಡಿಯ ಗಣೇಶೋತ್ಸವ ವಿರ್ಸಜನೆ ಮೆರವಣಿಗೆ ಕಾರ್ಯಕ್ರಮ ಇದ್ದುದರಿಂದ  ಪಿರ್ಯಾದಿದಾರರು ರಾತ್ರಿ ಸಮಯ ಸುಮಾರು 23.00 ಗಂಟೆಗೆ ಹಳೆಯಂಗಡಿ ಪೆಟ್ರೋಲ್ ಬಂಕ್ ಹತ್ತಿರ ಮಂಗಳೂರು- ಉಡುಪಿ ರಸ್ತೆಯನ್ನು ದಾಟಿ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುವ  ರಸ್ತೆಯನ್ನು ದಾಟುತ್ತಿದ್ದ ಸಮಯ ಉಡುಪಿ ಮಂಗಳೂರು ರಸ್ತೆಯಲ್ಲಿ ಗಣೇಶೋತ್ಸವ ವಿರ್ಸಜನೆ ಮೆರವಣಿಗೆ ಪ್ರಯುಕ್ತ  ಹಳೆಯಂಗಡಿ ಜಂಕ್ಷನ್ ನಿಂದ ಪಡುಪಣಂಬೂರು ಕ್ರಾಸ್ ತನಕ ಏಕಮುಖ ಸಂಚಾರ ಮಾಡಿದ್ದರಿಂದ   ಹಳೆಯಂಗಡಿ ಕಡೆಯಿಂದ ಬಂದಂತಹ KA19HN7289 ನಂಬ್ರದ ಸ್ಕೂಟರ್ ಅದರ ಚಾಲಕ ನವೀನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತನ್ನ ಸ್ಕೂಟರ್ ನ್ನು ಮಾನವ ಜೀವಕ್ಕೆ ಅಪಾಯಕಾರಿ ಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದು ಈ ಅಪಘಾತದ ಪರಿಣಾಮ ಪಿರ್ಯಾದಿದಾರರ , ಬಲ ಕಾಲಿನ ಮೊಣ ಗಂಟಿನ ಕೆಳೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

2) ದಿನಾಂಕ 21-09-2023 ರಂದು ಪಿರ್ಯಾದಿ Sharan ದಾರರು ತನ್ನ ತಾಯಿಯ ಬಾಬ್ತು KA-19-HJ-5589 ನಂಬ್ರದ ಸ್ಕೂಟರಿನಲ್ಲಿ ಯೆಯ್ಯಾಡಿಯಿಂದ ಕೊಂಚಾಡಿಯ ತನ್ನ ಮನೆಯ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಶಂಕರಭವನ ಹೋಟೆಲಿನ ಎದುರಿನ ತೆರೆದ ಡಿವೈಡರ್ ಬಳಿ ತಲುಪುತ್ತಿದ್ದಂತೆ ರಾತ್ರಿ ಸಮಯ ಸುಮಾರು 7:15 ಗಂಟೆಗೆ ಮೇರಿಹಿಲ್ ಕಡೆಯಿಂದ KA-20-N-6784 ನಂಬ್ರದ ಕಾರಿನ ಚಾಲಕನಾದ ಕಿಶೋರ್ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತೆರೆದ ಡಿವೈಡರ್ ಜಾಗದಲ್ಲಿ ಯಾವುದೇ ಸೂಚನೇ ನೀಡದೇ ಒಮ್ಮಲೇ ಬಲಬದಿಗೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲಿನ ತೊಡೆಯ ಭಾಗಕ್ಕೆ ಮೂಳೆಮುರಿತದ ಗಂಭೀರ ಸ್ವರೂಪದ ಗಾಯ, ಬಲ ಕೋಲುಕಾಲಿಗೆ ಮತ್ತು ಹಣೆಗೆ ಚರ್ಮ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

3) ದಿನಾಂಕ 22-09-2023 ರಂದು ಪಿರ್ಯಾದಿ Abdul Rasak ದಾರರು ತನ್ನ ಕೆಲಸಕ್ಕೆಂದು ಅವರ ಬಾಬ್ತು KA-19-HG-1422 ನಂಬ್ರದ ಸ್ಕೂಟರಿನಲ್ಲಿ ಶರೀಪ್ ಎಂ. ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೂಳೂರಿನಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 06:30 ಗಂಟೆಗೆ ಕೋಡಿಕಲ್ ಕ್ರಾಸ್ ತಲುಪಿ ಕೋಡಿಕಲ್ ಕಡೆಗೆ ಹೋಗುವರೇ ರಸ್ತೆ ಕ್ರಾಸ್ ಮಾಡುತ್ತಿರುವಾಗ ಪಿರ್ಯಾದಿದಾರರ ಎಡಗಡೆಯಿಂದ ಅಂದರೆ ಕೊಟ್ಟಾರ್ ಚೌಕಿ ಪ್ಲೈ ಓವರ್ ಕಡೆಯಿಂದ ಕೂಳೂರು ಕಡೆಗೆ KA-17-8090 ನಂಬ್ರದ ಓಮಿನಿ ಕಾರಿನ ಚಾಲಕನಾದ ಥೋಮಸ್ ಎಂಬಾತನು ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರನಾಗಿ ಕುಳ್ಳಿತಿದ್ದ ಶರೀಪ್ ಎಂ. ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡ ಕೈಯ ತೋಳಿಗೆ ತರಚಿದ ರೀತಿಯ ರಕ್ತಗಾಯ, ಮುಖದ ಎಡಭಾಗದಲ್ಲಿ ತರಚಿದ ಗಾಯ ಅಲ್ಲದೇ ಸಹಸವಾರ ಶರೀಪ್ ಎಂ ರವರಿಗೆ ಹಣೆಯ ಬಲಭಾಗದ ಕಣ್ಣಿನ ಮೇಲ್ಬದಿ ಚರ್ಮ ಹರಿದ ರಕ್ತಗಾಯ ಮತ್ತು ಬಲಭಾಗದ ಕಣ್ಣಿನ ಕೆಳಭಾಗದಲ್ಲಿ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 22-09-2023 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080