ಅಭಿಪ್ರಾಯ / ಸಲಹೆಗಳು

Crime Report in  : Mangalore East Traffic PS             

ದಿನಾಂಕ; 21/11/2023 ರಂದು ಬೆಳಗಿನ ಜಾವ 12-20 ಗಂಟೆಗೆ ಯಯ್ಯಾಡಿ ಇಂಡಸ್ಟ್ರೀಯಲ್ ಜಂಕ್ಷನ್ ನಲ್ಲಿ ಕೆ.ಪಿ.ಟಿ ಕಡೆಯಿಂದ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ನೊಂದಣಿ ಸಂಖ್ಯೆ; KA-19-MC-9181 ನೇಯದನ್ನು ಅದರ ಚಾಲಕನು ವಾಪಸ್ ಕೆ.ಪಿ.ಟಿ ಕಡೆಗೆ ಬರಲು ಯು ಟರ್ನ ಮಾಡುವುದಕ್ಕಾಗಿ ಯಾವುದೇ ಮುನ್ಸೂಚನೆ ನೀಡದೇ ಅಜಾಗರೂಕತೆಯಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿದ್ದು ಅದೇ ವೇಳೆ ಸ್ಕಾರ್ಪಿಯೋ ಕಾರಿನ ಹಿಂಭಾಗದಲ್ಲಿ ಕೆ.ಪಿ.ಟಿ ಕಡೆಯಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-EJ-8779 ನೇಯದನ್ನೂ ಕೂಡ ಅದರ ಸವಾರನು ನಿಧಾನಗೊಳಿಸದೇ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಬೈಕು ಸ್ಕಾರ್ಪಿಯೋ ಕಾರಿಗೆ ಢಿಕ್ಕಿಯಾಗಿ ಬೈಕ್ ಸವಾರ ಅಲಿಸ್ಟರ್ ಜೋಸೆಪ್ ತೌವರೋ ಹಾಗೂ ಸಹ ಸವಾರ ಲಾಯೆಡ್ ಡಿಸೋಜಾ ರವರು ರಸ್ತೆಗೆ ಬಿದ್ದು ಸವಾರನ ಮುಖಕ್ಕೆ ತಲೆಗೆ ರಕ್ತಗಾಯವಾಗಿ ಪ್ರಜ್ಞಾಹೀನಗೊಂಡಿದ್ದು ಸಹ ಸವಾರನೂ ಗಾಯಗೊಂಡಿರುತ್ತಾನೆ, ಅಲ್ಲದೇ ಈ ಅಪಘಾತದ ಸ್ಕಾರ್ಪಿಯೋ ಕಾರು ಚಾಲಕನು ಕಾರನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ. ಎಂಬಿತ್ಯಾದಿ.

CEN Crime PS

ಪಿರ್ಯಾದಿದಾರರು ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 14/11/2023 ರಂದು ಪಿರ್ಯಾದಿದಾರರ ಟೆಲಿಗ್ರಾಂ ಖಾತೆ ಸಂಖ್ಯೆ:  ನೇಯದಕ್ಕೆ ರಂಜಿತ್ ಯಾದವ್ ಎಂಬ ಹೆಸರಿನ ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು, ಅದರಂತೆ ಪಿರ್ಯಾದಿದಾರರು ಸದ್ರಿ ಖಾತೆದಾರರಿಗೆ ಸಂದೇಶ ಕಳುಹಿಸಿ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಮಾಹಿತಿ ವಿಚಾರಿಸಿದಲ್ಲಿ ಇದು ಆನ್ಲೈನ್ ಮೂಲಕ ಎಲೆಕ್ಟ್ರಾನಿಕ್, ಗೃಹೋಪಯೋಗಿ ಹಾಗು ಇತರ ವಸ್ತುಗಳಿಗೆ ಆನ್ಲೈನ್ ಮೂಲಕ ರೇಟಿಂಗ್ ನೀಡುವ ಉದ್ಯೋಗ ಆಗಿರುವುದಾಗಿಯೂ moz2003.com (Discount Goods) ಎಂಬ ವೆಬ್ಸೈಟ್ ನಲ್ಲಿ ಖಾತೆಯನ್ನು ತೆರೆದು ಅದರಲ್ಲಿ ಜಾಹಿರಾತು ಹಾಕಿರುವ ಎಲೆಕ್ಟ್ರಾನಿಕ್, ಗೃಹೋಪಯೋಗಿ ಹಾಗು ಇತರ ವಸ್ತುಗಳಿಗೆ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳುವುದಾಗಿ ತಿಳಿಸಿರುತ್ತಾರೆ. ಅದರಂತೆ ಅದೇ ದಿನ ಟೆಲಿಗ್ರಾಂ ಮೂಲಕ ಅವರು ಕಳುಹಿಸಿದ moz2003.com (Discount Goods) ವೆಬ್ ಸೈಟ್ ಲಿಂಕ್ ನಲ್ಲಿ ಪಿರ್ಯಾದಿದಾರರ ಮೊಬೈಲ್ ನಂಬ್ರ ನಮೂದಿಸಿ ಖಾತೆಯನ್ನು ತೆರೆದಿರುತ್ತಾರೆ. ನಂತರ ಸದ್ರಿ ಆಪ್ ನಲ್ಲಿ ಟ್ರಯಲ್ ಜಾಬ್ ನೀಡಿದ್ದು ಅದರಂತೆ ಸದ್ರಿ ಆಪ್ ನಲ್ಲಿ ಜಾಹೀರಾತು ಬರುವ ವಸ್ತುಗಳನ್ನು ನೋಡಿ ಅದಕ್ಕೆ ರೇಟಿಂಗ್ ನೀಡಿರುತ್ತಾರೆ. ಈ ಬಗ್ಗೆ ಆರಂಭದಲ್ಲಿ ರೂ 860/- ಗಳನ್ನು ಕಮಿಷನ್ ನೀಡಿರುತ್ತಾರೆ. ನಂತರ ಪಾರ್ಟ್ ಟೈಮ್ ಜಾಬ್ ಮುಂದುವರಿಸಲು ರೂ 10,000 ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು, ಅದರಂತೆ ಪಿರ್ಯಾದಿದಾರರು ದಿನಾಂಕ: 16/11/2023 ರಂದು ತನ್ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ: ನೇಯದರಿಂದ ಅವರು ಕಳುಹಿಸಿದ ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ: 13400100287512 IFSC: FDRL0005555 ನೇಯದಕ್ಕೆ ರೂ 10,000/- ವರ್ಗಾಯಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ಪಾವತಿಸಿದ ಮೊತ್ತಕ್ಕೆ ರೂ 14,900/- ಮರುಪಾವತಿ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ವೆಬ್ ಸೈಟ್ ನಲ್ಲಿ  ತನ್ನ ಖಾತೆಯನ್ನು ಪರಿಶೀಲಿಸಿದಲ್ಲಿ ಪಾವತಿಸಿದ ಹಣಕ್ಕೆ ಕಮೀಷನ್ ಸೇರಿಸಿ ಹೆಚ್ಚಿನ ಹಣ ಇರುವುದು ಕಂಡು ಬಂದಿದ್ದು, ಅದರಂತೆ ಪಿರ್ಯಾದಿದಾರರು ಹೆಚ್ಚಿನ ಹಣ ದೊರಕಬಹುದೆಂದು ನಂಬಿ ಅವರು ತಿಳಿಸಿದಂತೆ ದಿನಾಂಕ: 17/11/2023 ರಿಂದ 19/11/2023 ರ ಮಧ್ಯಾವಧಿಯಲ್ಲಿ ಅವರು ಕಳುಹಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು ರೂ 11,30,510/- ಹಾಗೂ ತನ್ನ ತಂದೆ ಕೃಪಾಕರ ರಾವ್ ರವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ: ನೇಯದರಿಂದ ರೂ 3,74,328/- ಗಳನ್ನು  ಬ್ಯಾಂಕ್ ಖಾತೆಗಳಿಗೆ ಮತ್ತು ಯುಪಿಐ ಐಡಿ ಗೆ ವರ್ಗಾಯಿಸಿರುತ್ತಾರೆ. ಬಳಿಕ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ವಿಡ್ರಾ ಮಾಡಲು ಶ್ರಮಿಸಿದಲ್ಲಿ ಪುನಃ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು ಆ ಸಮಯ ಮೋಸ ಹೋಗಿರುವುದು ಮನವರಿಕೆಯಾಗಿರುತ್ತದೆ. ಆದುರಿಂದ ಆನ್ಲೈನ್ ಮೂಲಕ ಪಾರ್ಟ್ ಟೈಮ್ ಉದ್ಯೋಗ ಒದಗಿಸುವುದಾಗಿ ನಂಬಿಸಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ  15,04,838/- ಗಳನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬೇಕಾಗಿ ಎಂಬಿತ್ಯಾದಿ ದೂರಿನ ಸಾರಾಂಶ.

Urva PS   

ಪಿರ್ಯಾದಿ SUKESH RAI ದಾರರ ಸ್ನೇಹಿತರಾದ ಶ್ರೀ  ಧನ್  ರಾಜ್  ರವರು  ಓನ್  ಲೈನ್    ಷೇರು  ಮಾರುಕಟ್ಟೆ  ಮತ್ತು ಟ್ರೇಡಿಂಗ್   ವ್ಯವಹಾರ  ಮಾಡಿಕೊಂಡಿದ್ದು,  ಅವರು  ದಿನಾಂಕ  19.11.2023 ರಂದು 16:00 ಗಂಟೆಗೆ ಉರ್ವಾ  ಸ್ಟೋರ್  ಕೊಟ್ಟಾರದಲ್ಲಿ  ಪಿರ್ಯಾದಿದಾರರಲ್ಲಿ ಮಾತನಾಡಲು ಬಂದಿದ್ದು, ನಂತರ  ಅವರ  ಸ್ವಂತ  ಮನೆಯಾದ  ಮಂಜೇಶ್ವರಕ್ಕೆ  ಹೋಗುತ್ತೇನೆ ಎಂದು ಹೋದವರು,  ಮಂಜೇಶ್ವರ ಮನೆಗೆ  ಹೋಗದೇ  ಕಾಣೆಯಾಗಿರುವುದಾಗಿದೆ ಎಂಬಿತ್ಯಾದಿ.

Mangalore East PS

ದಿನಾಂಕ: 20-11-2023 ರಂದು ರಾತ್ರಿ 8:45 ಗಂಟೆ ಸುಮಾರಿಗೆ ಪಿರ್ಯಾದಿದಾರರು ಮಂಗಳೂರು ಉತ್ತರ ಠಾಣೆಯಲ್ಲಿದ್ದಾಗ ಬಾತ್ಮಿದಾರರೊಬ್ಬರಿಂದ ಬಂದ ಮಾಹಿತಿಯಂತೆ ಮಂಗಳೂರು ನಗರದ ಅಪ್ಪರ್ ಬೆಂದೂರ್ ನ ದಿವ್ಯಾ ಪ್ಯಾಲೇಸ್ ಅಪಾರ್ಟ್ ಮೆಂಟ್ ಬಳಿಯ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಇಬ್ಬರು ಯುವಕ ಪ್ರಾಯದ ವ್ಯಕ್ತಿಗಳು ಝೋಮೆಟೋ ಪುಢ್ ಡೆಲಿವರಿ ಎಂಬ ಕೆಂಪು ಬ್ಯಾಗ್ ನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯನ್ನು ಪಡೆದುಕೊಂಡು ಮಂಗಳೂರು  ನಗರದ ಅಪ್ಪರ್ ಬೆಂದೂರ್ ನಲ್ಲಿರುವ ದಿವ್ಯಾ ಅಪಾರ್ಟ್ ಮೆಂಟ್ ಬಳಿ ರಾತ್ರಿ 9:30    ಗಂಟೆಗೆ ತಲುಪಿದಾಗ ಸಾರ್ವಜನಿಕ ಸ್ಥಳದ ರಸ್ತೆ ಬದಿಯಲ್ಲಿ ಒಂದು  ನೀಲಿ ಬಣ್ಣದ ಸ್ಕೂಟರಿನ ಬಳಿ ಇಬ್ಬರೂ ಯುವಕ ಪ್ರಾಯದ ವ್ಯಕ್ತಿಗಳು ನಿಂತುಕೊಂಡಿದ್ದು, ಯಾರಿಗೋ ಕಾಯುತ್ತಿರುವಂತೆ ಕಾಣುತ್ತಿದ್ದು, ಬಾತ್ಮಿದಾರರು ತಿಳಿಸಿದ ವ್ಯಕ್ತಿಗಳು ಇವರೇ ಎಂದು ಖಚಿತ ಪಡಿಸಿಕೊಂಡು ಸುತ್ತುವರಿದು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಒಬ್ಬಾತನು ತನ್ನ ಹೆಸರು ಮಹಮ್ಮದ್ ಜಾಸೀಮ್ ಕೆ. ಎ. ( ಪ್ರಾಯ 20 ವರ್ಷ) ವಾಸ: ತ್ರಿಶ್ಯರ್ ಜಿಲ್ಲೆ ಕೇರಳ ಇನ್ನೊಬ್ಬಾತನ ಹೆಸರು ಅಲ್ ಅನೀಶ್ (ಪ್ರಾಯ-21 ವರ್ಷ) ಕೊಲ್ಲಂ ಕೇರಳ ಎಂದು ತಿಳಿಸಿದ್ದು, ಇಬ್ವರು ಪ್ರಸ್ತುತ 1 ನೇ ಕ್ರಾಸ್ ಅಪ್ಪರ್ ಬೆಂದೂರ್ ಮೋಹನ್ ಬಾಗ್ ಹಿಂಬದಿ ಬೆಂದೂರ್ ಮಂಗಳೂರು ಇಲ್ಲಿ  ಬಾಡಿಗೆ ಮನೆಯಲ್ಲಿರುವುದಾಗಿ ತಿಳಿಸಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಗಾಂಜಾ ಮಾರಾಟ ಮಾಡಿ ಲಾಭ ಗಳಿಸಬಹುದಾಗಿ ತಿಳಿಸಿರುತ್ತಾರೆ.  ಅಂಗ ಸಂಶೋಧನೆ ಮಾಡಿ ಸಿಕ್ಕಿದ ವಸ್ತುಗಳಲ್ಲಿ ತೂಕ ಮಾಡಿದಾಗ ಒಂದು ಪ್ಲಾಸ್ಟಿಕ್ ಪ್ಯಾಕೇಟಿನಲ್ಲಿ 1 ಕೆಜಿ 38 ಗ್ರಾಂ ಗಾಂಜಾ,( 40,000 ರೂ.) ಇನ್ನೊಂದು ಪ್ಲಾಸ್ಟಿಕ್ ಬ್ಯಾಗಿನಲ್ಲಿದ್ದ ಬಿಳಿ ಬಣ್ಣದ ಸಣ್ಣ ಡಿಜಿಟಲ್ ತೂಕಮಾಪನ (500 ರೂ.) ಮತ್ತೊಂದು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಪ್ಯಾಕ್ ಮಾಡಲು ಉಪಯೋಗಿಸಲಾದ 20 ಪ್ಲಾಸ್ಟಿಕ್ ಕವರ್ ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್  ನಂಬ್ರ ಕೆಎಲ್-11-ಬಿಟಿ-9232 ನೀಲಿ ಬಣ್ಭದ ಸುಜುಕಿ ಅಕ್ಸೆಸ್ 125 ಸ್ಕೂಟರ್ (ಮೌಲ್ಯ 40,000 ರೂ.) ಮತ್ತು ಝಮೊಟೋ ಪುಢ್ ಡೆಲಿವರಿ ಕೆಂಪು ಬಣ್ಣದ ಬ್ಯಾಗ್, 02 ಮೊಬೈಲ್ ಪೋನ್ ಗಳನ್ನು ಮತ್ತು ಆರೋಪಿಗಳನ್ನು ವಶಪಡಿಸಿಕೊಂಡು ದಿನಾಂಕ: 21-11-2023 ರಂದು ಬೆಳಗಿನ ಜಾವ 2:15 ಗಂಟೆಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಹಾಜರುಪಡಿಸಿರುವುದಾಗಿದೆ ಎಂಬಿತ್ಯಾದಿ.

Traffic South Police Station                      

ಫಿರ್ಯಾದಿ BANASHREE B V ದಾರರು ದಿನಾಂಕ: 20-11-2023 ರಂದು ಫಿರ್ಯಾದಿದಾರರು ಅವರ ಮನೆಯಲ್ಲಿದ್ದ ಸಮಯ ಅಪರಿಚಿತ ನಂಬರಿನಿಂದ ಕರೆ ಬಂದು ಫಿರ್ಯಾದಿದಾರರ ತಾಯಿ ಸುಧಾ ಬಿ.ವಿ. (64 ವರ್ಷ)ರವರು ರಸ್ತೆ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೆ ಫಿರ್ಯಾದಿದಾರರು ಯೆನಪೋಯ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಲ್ಲಿ ಫಿರ್ಯಾದಿದಾರರ ತಾಯಿ ಚಿಕಿತ್ಸೆಯಲ್ಲಿದ್ದು, ಸ್ಥಳದಲ್ಲಿದ್ದವರಲ್ಲಿ ವಿಚಾರಿಸಿದ್ದಲ್ಲಿ ಫಿರ್ಯಾದಿದಾರರ ತಾಯಿ ಆಡಂ ಕುದ್ರು ನೇತ್ರಾವತಿ ಬ್ರಿಡ್ಜ್ ಬಳಿ ಪಂಪ್ ವೆಲ್ ನಿಂದ ತೊಕ್ಕೊಟ್ಟಿಗೆ ಹಾದು ಹೋಗುವ ರಾ.ಹೆ. 66 ನ್ನು ರಿವರ್ ಡೆಲ್ ಕಡೆಯಿಂದ  ದಾಟುತ್ತಿದ್ದ ಸಮಯ ಸುಮಾರು 21-00 ಗಂಟೆಗೆ KA-19-AC-1037 ನೇ ಪಿಕಪ್ ಚಾಲಕ ಉಸ್ಮಾನ್ ಎಂಬಾತನು ಪಿಕಪ್ ನ್ನು ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಾಯಿಗೆ ಡಿಕ್ಕಿ ಪಡಿಸಿದ್ದು, ಫಿರ್ಯಾದಿದಾರರ ತಾಯಿ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಕಾಲಿಗೆ ಮೂಳೆ ಮುರಿತದ ಗಾಯ, ಭುಜಕ್ಕೆ ಗುದ್ದಿದ ಗಾಯ, ಸೊಂಟದ ಬಳಿ ಮೂಳೆ ಮುರಿತದ ಗಾಯ ಹಾಗೂ ತಲೆಯ ಒಳಗಡೆ ರಕ್ತಸೋರಿಕೆ ಗಾಯವಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಇಂಡಿಯನ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Ullal PS

ದಿನಾಂಕ. 21-10-2023 ರಂದು ಬೆಳಗ್ಗಿನ ಜಾವ   ಉಳ್ಳಾಲ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ಸಂತೋಷ್ ಕುಮಾರ್ ಡಿ ರವರು ಸಿಬ್ಬಂದಿಗಳ ಜೊತೆ ಮೋರ್ನಿಂಗ್ ರೌಂಡ್ಸ್ ಕರ್ತವ್ಯ ನಿರ್ವಹಿಸುವ ಸಮಯ ಬೆಳಿಗ್ಗೆ ಸುಮಾರು 5-50 ಗಂಟೆಗೆ ಉಳ್ಳಾಲ ಪೊಲೀಸ್ ನಿರೀಕ್ಷಕರಿಗೆ ರಾಹೆ-66 ನೇದರಲ್ಲಿ ಕಲ್ಲಾಪು ಕಡೆಯಿಂದ ಕೋಟೆಕಾರು ಕಡೆಗೆ ರಸ್ತೆಯಲ್ಲಿ ಕೆಎ-21ಎ-6988ನೇ ಈಚರ್ ಗಾಡಿಯಲ್ಲಿ ಅಕ್ರಮ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸದ್ರಿ ವಾಹನವನ್ನು ಪತ್ತೆ ಮಾಡುವ ಬಗ್ಗೆ ತಿಳಿಸಿದ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಲಾಖಾ ಜೀಪಿನಲ್ಲಿ ಕೋಟೆಕಾರಿಗೆ ಹೋಗುತ್ತಿರುವ ಸಮಯ ಕುಂಪಲ ಬೈಪಾಸ್ ಬಳಿ ರಸ್ತೆಯಲ್ಲಿ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕನು ಚಲಾಯಿಸಿಕೊಂಡು ಹೋಗುತ್ತಿದ್ದು, ಸದ್ರಿ ಟಿಪ್ಪರ್ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದಾಗ ಅದರ ಚಾಲಕನು ಟಿಪ್ಪರ್ ಲಾರಿಯನ್ನು ರಸ್ತೆಯ ತೀರಾ ಎಡಬದಿ ನಿಲ್ಲಿಸಿ ಟಿಪ್ಪರ್ ಲಾರಿಯಿಂದ ಇಳಿದು ಪರಾರಿಯಾಗಿರುತ್ತಾನೆ. ಬಳಿಕ ನೋಡಲಾಗಿ ಸದ್ರಿ ಟಿಪ್ಪರ್ ಲಾರಿಯಲ್ಲಿ ಎಲ್ಲಿಂದಲೋ ಸಾಮಾನ್ಯ ಮರಳನ್ನು ಕಳ್ಳತನ ಮಾಡಿ ಲೋಡು ಮಾಡಿಕೊಂಡು ಹೋಗುತ್ತಿದ್ದು,  ಟಿಪ್ಪರ್ ಲಾರಿ ಹಾಗೂ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.  ಸ್ವಾಧೀನ ಪಡಿಸಿದ ಟಿಪ್ಪರ್ ಲಾರಿಯ ಮೌಲ್ಯ 4 ಲಕ್ಷ ರೂ ಹಾಗೂ ಸಾಮಾನ್ಯ ಮರಳಿನ ಅಂದಾಜು ಮೌಲ್ಯ 4000/- ರೂ ಆಗ ಬಹುದು.      

 

ಇತ್ತೀಚಿನ ನವೀಕರಣ​ : 22-11-2023 05:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080