ಅಭಿಪ್ರಾಯ / ಸಲಹೆಗಳು

Crime Report in : Traffic South Police Station    

ದಿನಾಂಕ: 21-12-2023 ರಂದು ಫಿರ್ಯಾದಿ FAROOQ AHAMMAD ದಾರರು ಉಳ್ಳಾಲದಲ್ಲಿ ವಿವಾಹ ಸಮಾರಂಭವೊಂದರಲ್ಲಿ ಮದುವೆ ಕಾರ್ಯಕ್ರಮದಲ್ಲಿ ಇದ್ದಾಗ, ತನ್ನ ಸಹೋದರ ಅಬ್ದುಲ್ ರವೂಫ್ ರವರಿಗೆ ಎಕ್ಕೂರು ಬಳಿಯ ಇಂಡಿಯನ್ ಮದುವೆ ಹಾಲ್ ಮುಂಭಾಗದ ರಸ್ತೆಯಲ್ಲಿ ರಸ್ತೆ ಅಪಫಾತವಾಗಿರುವುದಾಗಿ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದು ವಿಚಾರಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ಹೋದಾಗ ಫಿರ್ಯಾದಿದಾರರ ಅಣ್ಣ ಅಬ್ದುಲ್ ರವೂಫ್ ರವರು ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು, ಆಸ್ಪತ್ರೆಯ ಶವಾಗಾರದಲ್ಲಿದ್ದ ಅಣ್ಣನ ಮೃತದೇಹವನ್ನು ನೋಡಿದಾಗ ಆತನ ತಲೆ, ಹೊಟ್ಟೆಯ ಭಾಗಗಳಿಗೆ ಗಂಭೀರ ಸ್ವರೂಪುದ ಗಾಯವಾಗಿ ಹೊಟ್ಟೆಯ ಒಳಗಿನ ಭಾಗಗಳು ದೇಹದಿಂದ ಹೊರಬಂದು ಗಂಭೀರ ಸ್ವರೂಪದ ಗಾಯಗಳಾಗಿರುತ್ತದೆ. ನಂತರ ಫಿರ್ಯಾದಿದಾರರು ವಾಪಾಸು ಘಟನಾ ಸ್ಥಳಕ್ಕೆ ಬಂದು ಕೂಲಂಕುಷವಾಗಿ ವಿಚಾರ ತಿಳಿಯಲಾಗಿ  ದಿನಾಂಕ:21-12-2023 ರಂದು ಬೆಳಿಗ್ಗೆ ಸುಮಾರು 11.50 ಗಂಟೆಗೆ ಫಿರ್ಯಾದಿದಾರರ ಸಹೋದರ ಅಬ್ದುಲ್ ರವೂಫ್ ರವರು ಮೋಟಾರು ಸೈಕಲ್ KA-19-R-1757 ನೇದರಲ್ಲಿ ಸುರತ್ಕಲ್  ಕಡೆಯಿಂದ ಉಳ್ಳಾಲದ ಕಡೆಗೆ ಸವಾರಿ ಮಾಡಿಕೊಂಡು ರಾ.ಹೆ.-66 ರ ಎಕ್ಕೂರು ಇಂಡಿಯಾನ ಕನ್ವೆಷನ್ ಹಾಲ್ ಮುಂಭಾಗದಲ್ಲಿ ತಲುಪುತ್ತಿದ್ದಂತೆಯೇ ಮೋಟಾರು ಸೈಕಲ್ ನ ಬಲಭಾಗದಲ್ಲಿ ಕೆಎ-19-ಎ.ಸಿ.5880 ನೇದರ ಲಾರಿಯ ಚಾಲಕ ಕಮಾಲ್ ಎಂ. ಎಂಬಾತನು ತನ್ನ ಲಾರಿಯನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಫಿರ್ಯಾದಿದಾರರ ಸಹೋದರ ಅಬ್ದುಲ್ ರವೂಫ್ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಲಾರಿಯಡಿಗೆ ಸಿಲುಕಿ ಸುಮಾರು ದೂರ ಮೊಟಾರ್ ಸೈಕಲ್ ಸಮೇತ ಎಳೆದೊಯ್ಯಲ್ಪಟ್ಟು ತಲೆ, ಹೊಟ್ಟೆಯ ಭಾಗಗಳಿಗೆ ಗಂಭೀರ ಸ್ವರೂಪುದ ಗಾಯವಾಗಿ ಹೊಟ್ಟೆಯ ಒಳಗಿನ ಭಾಗಗಳು ದೇಹದಿಂದ ಹೊರಬಂದು ಗಂಭೀರ ಸ್ವರೂಪದ ಗಾಯಗಳುಂಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಎಂಬಿತ್ಯಾದಿ

Konaje PS

ದಿನಾಂಕ:21-12-2023 ರಂದು ಪಿರ್ಯಾದಿದಾರರು ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ 17.00 ಗಂಟೆಗೆ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ನಾಟೇಕಲ್ ಬಳಿಯ ವಿಜಯನಗರಕ್ಕೆ ಹೋಗುವ ರಸ್ತೆಯ ಪಕ್ಕದ ಖಾಲಿ ಮೈದಾನ ಎಂಬಲ್ಲಿಗೆ ತಲುಪಿದಾಗ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಅಬ್ದುಲ್ ಖಾದರ್ ಪ್ರಾಯ 27 ವರ್ಷ, ವಾಸ: ಜರೀನಾ ಮಂಜಿಲ್, ಕೋಟೆಪುರ ಉಳ್ಳಾಲ ತಾಲೂಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ 17.10 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು AMPHETAMINE ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

Traffic North Police Station                       

ದಿನಾಂಕ 20-12-2023 ರಂದು ಪಿರ್ಯಾದಿ Balappa Moolya ದಾರರ ಸಹೋದರ ಸುರೇಶ ರವರು ಅವರ ಗೆಳಯ ಪ್ರದೀಪ್ ರವರ ಬಾಬ್ತು KA-20-EU-7374 ನಂಬ್ರದ ಸ್ಕೂಟರಿನಲ್ಲಿ ದಾಮಸಕಟ್ಟೆ-ಕಿನ್ನಿಗೋಳಿ ರಸ್ತೆಯ ಪಟ್ಟೆ ಕ್ರಾಸ್ ನಿಂದ ಕುದ್ರಿಪದವು ರಸ್ತೆಯಲ್ಲಿ ಸ್ಕೂಟರನ್ನು ಸವಾರಿ ಮಾಡಿಕೊಂಡು ಶುಂಠಿಪಾಡಿ ಕ್ರಾಸ್ ತಲುಪುತ್ತಿದ್ದಂತೆ ಸಂಜೆ  ಸಮಯ ಸುಮಾರು 6:00 ಗಂಟೆಗೆ ಶುಂಠಿಪದವು ಕಡೆಯಿಂದ KA-19-HM-9024 ನಂಬ್ರದ ಸ್ಕೂಟರನ್ನು ಅದರ ಸವಾರ ಅಬೂಬಕ್ಕರ್ ಸಿದ್ದಿಕ್ ಎಂಬಾತನು ತೀರಾ ನಿರ್ಲಕ್ಷ್ಯತನ ಹಾಗೂ ದುಡುಕತನದಿಂದ ಮುಖ್ಯ ರಸ್ತೆಗೆ ಮುನ್ನುಗಿಸಿ ನೇರವಾಗಿ ಬರುತ್ತಿದ್ದ ಪಿರ್ಯಾದಿದಾರರ ಸಹೋದರ ಸುರೇಶ ರವರ ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸುರೇಶ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಹಣೆಯ ಎಡಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ಮತ್ತು ಎಡಕಾಲಿನ ಬೆರಳಿಗೆ ತರಚಿದ ರೀತಿಯ ರಕ್ತಗಾಯವಾಗಿದ್ದು,ಅಲ್ಲದೇ ಡಿಕ್ಕಿಪಡಿಸಿದ ಸ್ಕೂಟರ್ ಸವಾರ ಅಬುಬಕ್ಕರ್ ಸಿದ್ದಿಕ್ ರವರಿಗೂ ಗಾಯವಾಗಿರುತ್ತದೆ. ಇಬ್ಬರೂ ಚಿಕಿತ್ಸೆಯ ಬಗ್ಗೆ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸುರೇಶ್ ರವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬಿತ್ಯಾದಿ

 

Panambur PS       

 ದಿನಾಂಕ 21.12.2023 ರಂದು 13:00 ಗಂಟೆಗೆ ಪಿರ್ಯಾದಿದಾರರು ತನ್ನ ಬಾವ ಹುಸೈನ್ ಜೊತೆ ಮಂಗಳೂರು ತಾಲೂಕು, ಬೇಂಗ್ರೆ ಗ್ರಾಮದ ಕಸಬ ಬೇಂಗ್ರೆಯ ಮುಖ್ಯ ರಸ್ತೆಯಲ್ಲಿರುವ ತನ್ನ ತಂದೆಯ ಅಂಗಡಿಯಲ್ಲಿರುವ ಸಮಯ ಅಲ್ಲಿಗೆ ಬಂದ ಮುನೀಬ್ ಎಂಬವರ ತಮ್ಮ ಸಫ್ವಾನ್ ಎಂಬವನು ಅಂಗಡಿಯಲ್ಲಿದ್ದ ತಿಂಡಿಯ ಗಾಜಿನ ಭರಣಿಯನ್ನು ಎತ್ತಿ ಕೆಳಗೆ ಹಾಕಿ ಪುಡಿ ಮಾಡಿದ್ದು, ಇದರಿಂದ ರೂ 250/- ನಷ್ಟವಾಗಿರುತ್ತದೆ, ನಂತರ ಪಿರ್ಯಾದಿದಾರರು ಆಕ್ಷೇಪಿಸಿದ್ದಕ್ಕೆ, ಅವನು ಹೊಡೆಯಲು ಬಂದಿದ್ದು, ಜೊತೆಗಿದ್ದ ಹುಸೈನ್ ರವರು ತಡೆದಿದ್ದು, ನಂತರ ಅಲ್ಲಿಂದ ನೇರ ಪಿರ್ಯಾದಿದಾರರ ತಂದೆಯ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ತಂದೆಯವರಿಗೆ ಚೂರಿ ತೋರಿಸಿ ಜೀವ ಬೆದರಿಕೆ ಹಾಕಿದ್ದು, ಮುನೀಬ್ ಬಂದು ಅವನನ್ನು ಕರೆದುಕೊಂಡು ಹೋಗಿದ್ದು, ಸ್ವಲ್ಪ ಹೊತ್ತಿನಲ್ಲಿ ಮತ್ತೆ ಅಲ್ಲಿಗೆ ಬಂದ ಮುನೀಬ್ ಮತ್ತು ಸಫ್ವಾನ್ ರವರು, ಪಿರ್ಯಾದಿದಾರರಿಗೆ ಮತ್ತು ಅವರ ಅಕ್ಕನಿಗೆ ಅವಾಚ್ಯವಾಗಿ ಬೈದು, ಅಂಗಡಿಗೆ ಬೆಂಕಿ ಹಾಕಿ ಸುಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಮುನೀಬ್ ರವರು ಬೇಂಗ್ರೆಯಲ್ಲಿ ರಸ್ತೆ ನಿರ್ಮಾಣ ಮಾಡಿಸಿದ್ದು, ಕಳಪೆ ಕಾಮಾಗಾರಿಯಾಗಿರುತ್ತದೆ ಎಂದು ಇತರರೊಂದಿಗೆ ಪಿರ್ಯಾದಿದಾರರ ತಂದೆಯೂ ಆಡಿಕೊಂಡಿದ್ದಾರೆ ಎಂದು ಭಾವಿಸಿ ದ್ವೇಷದಿಂದ ಈ ಕೃತ್ಯವೆಸಗಿರುತ್ತಾರೆ ಎಂಬಿತ್ಯಾದಿ.

 

Mangalore South PS

ಮಾಧಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti drug Team ನ  ಅಧಿಕಾರಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್ ಟಿ.ಆರ್ ರವರು ಸದ್ರಿ Anti drug Team ನ ಸಿಬ್ಬಂದಿರವರೊಂದಿಗೆ ದಿನಾಂಕ 21-12-2023 ರಂದು ಸಂಜೆ 18-00 ಗಂಟೆಯಿಂದ  ರೌಂಡ್ಸ್ ಕರ್ತವ್ಯದಲ್ಲಿರುವಾಗ 18-30 ಗಂಟೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಸರ್ಕಲ್ ಬಳಿ ಓರ್ವ ಯುವಕ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಪಿರ್ಯಾದಿದಾರರು ಆತನನ್ನು ಕಂಡು ವಿಚಾರಿಸಿದಾಗ ಆತನು ಅಮಲು ಪದಾರ್ಥ ಸೇವನೆ ಮಾಡಿದ ರೀತಿ ವಾಸನೆ ಬರುತ್ತಿದ್ದು, ಆತನನ್ನು ವಿಚಾರಿಸಿದಾಗ ಆತ ತನ್ನ ಹೆಸರು ಮೊಹಮ್ಮದ್ ಶಮಾಲ್ ಪ್ರಾಯ: 21 ವರ್ಷ, ವಾಸ: ರಸಕಾ ಪೊಸ್ಟ್, ಪಲ್ಲೂರ್ ಮಾಹಿ, ಕೇರಳ ರಾಜ್ಯ ಎಂಬುದಾಗಿ ತಿಳಿಸಿದ್ದು, ಈತನನ್ನು ಪಿರ್ಯಾದಿದಾರರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದರಿಂದ  ಆರೋಪಿತನ ವಿರುದ್ದ NDPS ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲು ವರದಿಯೊಂದಿಗೆ ಹಾಜರುಪಡಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ 21-12-2023 ರಂದು ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ತಲಪಾಡಿ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಒರ್ವ ಯುವಕನು ಯಾವುದೋ ಮಾದಕ ವಸ್ತು ಸೇವಿಸಿ ನಸೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದಂತೆ ಸದ್ರಿ ಸ್ಥಳಕ್ಕೆ ಅಪರಾಹ್ನ 3-55 ಗಂಟೆಗೆ ತಲುಪಿ ಆತನ ಬಳಿಗೆ ಹೋಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಆತನು ನಿಷೇದಿತ ಮಾದಕ ವಸ್ತು ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ಹೆಸರು ಹೆಸರು ಪ್ರದೀಪ್ (43) ವಾಸ:  ದೇವಿಪುರ ತಲಪಾಡಿ ಗ್ರಾಮ ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ಆತನನ್ನು ದೇರಳಕಟ್ಟೆ ಕೆ ಎಸ್ ಹೆಗಡ್ಎ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಷಣೆಗೊಳಪಡಿಸಿದಲ್ಲಿ ವೈದ್ಯಾಧಿಕಾರಿಯವರು ಪ್ರದೀಪ್ ರವರು Tetrahydrocannabinol ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ. ಆದುದರಿಂದ ಆರೋಪಿ ಪ್ರದೀಪ್ ನ ವಿರುಧ್ದ ಕಲಂ ಎನ್ ಡಿ.ಪಿ.ಎಸ್ ಕಾಯಿದೆ 1985 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 22-12-2023 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080