ಅಭಿಪ್ರಾಯ / ಸಲಹೆಗಳು

Crime Report in :   Mangalore Rural PS

ಪಿರ್ಯಾದಿ P Babu ದಾರರ ಮಗಳಾದ ಅನಿತಾ ಡಿಸೋಜಾ(38) ಎಂಬವರು ಅನಿಲ್ ಡಿಸೋಜಾ ಎಂಬವರೊಂದಿಗೆ ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಆಕೆಗೆ 2 ಹೆಣ್ಣು ಮಕ್ಕಳಿರುತ್ತಾರೆ. 2023 ನೇ ನವೆಂಬರ್ ತಿಂಗಳಲ್ಲಿ ಮಂಗಳೂರಿಗೆ ಬಂದು ವಾಮಂಜೂರು ಸಂತೋಷ್ ನಗರ ಆರ್.ಟಿ.ಓ ಕಚೇರಿ ಬಳಿ ಬಾಡಿಗೆ ಮನೆ ಮಾಡಿಕೊಂಡು ಅನಿತಾಳು ಮಕ್ಕಳೊಂದಿಗೆ ಇಲ್ಲೇ ಬಂದು ವಾಸ್ತವ್ಯ  ಮಾಡಿಕೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ನರ್ಸಿಂಗ್ ಎಜುಕೇಟರ್ ಆಗಿ ಕೆಲಸ ಮಾಡಿಕೊಂಡಿದ್ದಳು.ಎಂದಿನಂತೆ ದಿನಾಂಕ:    16-01-2024 ರಂದು ಆಕೆ ಕೆಲಸಕ್ಕೆ ಮನೆಯಿಂದ ಹೋಗಿ ಅಲ್ಲಿಂದಲೇ ಕೆಲಸದ ನಿಮಿತ್ತ  ಬೆಂಗಳೂರಿಗೆ ತೆರಳಿದ್ದು ದಿನಾಂಕ: 21-01-2024 ರಂದು ಪಿರ್ಯಾದಿದಾರರ ಕಿರಿಯ ಮಗಳು ಅಖಿತಾ ಳಿಗೆ ನನ್ನನ್ನು ಹುಡುಕಬೇಡಿ, ನಾನು ಸೇಫ್ ಆಗಿದ್ದೇನೆ ಮನೆಯ ಕೀ ಯನ್ನು ಅಂಗಡಿಯೊಂದರಲ್ಲಿ ಕೊಟ್ಟಿರುತ್ತೇನೆ ಎಂಬುದಾಗಿ ಮೆಸೇಜ್ ಮಾಡಿದ್ದು,  ನಂತರ ಯಾವುದೇ ಫೋನ್ ಕರೆಗೆ ಸ್ಪಂದಿಸಿರುವುದಿಲ್ಲ. ನಂತರ ಪಿರ್ಯಾದಿದಾರರು ಮಗಳ ಮನೆಗೆ ಬಂದು ಅಂಗಡಿಯಲ್ಲಿ ವಿಚಾರಿಸಿದಾಗ ಅನಿತಾ ಡಿಸೋಜಾಳು ದಿನಾಂಕ:19-01-2024 ರಂದು ಮನೆಯ ಕೀ ಯನ್ನು ಅಂಗಡಿಯಲ್ಲಿ ಕೊಟ್ಟು ಹೋಗಿರುವುದಾಗಿ ತಿಳಿಸಿದ್ದು, ಆಕೆಯ ದಾಂಪತ್ಯದಲ್ಲಿ ವಿರಸದಿಂದಾಗಿ ಮಾನಸಿಕವಾಗಿ ನೊಂದಿದ್ದು, ಅಲ್ಲದೇ ಸರಿಯಾದ ಕೆಲಸ ಇಲ್ಲದೇ ಇರುವುದರಿಂದ ಒತ್ತಡದಲ್ಲಿದ್ದವಳು ತಾನು ಎಲ್ಲಿಗೆ ಹೋಗಿರುವುದಾಗಿ ಪಿರ್ಯಾದಿದಾರರಿಗೆ ಯಾವುದೇ ಮಾಹಿತಿ ನೀಡದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು,  ಆಕೆಯ ಸ್ನೇಹಿತರು ಮತ್ತು ಇತರ ಕಡೆಗಳಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗದೆ ಇದ್ದು  ಕಾಣೆಯಾದ ಅನಿತಾ ಡಿಸೋಜಾ(38ವ) ಳನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ 

 

Traffic South PS

ಪಿರ್ಯಾದುದಾರರಾದ ಹರಿಶ್ ಜಿ.ಎನ್, ಸಿ.ಪಿ.ಸಿ ಹಾಗೂ ಹರೀಶ್ ಗುಮಚಿ. ಸಿ.ಪಿ.ಸಿ.  ನೇ ರವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ 22-01-2024 ರಂದು ಅಯೋಧ್ಯಾ ಶ್ರೀರಾಮ ಪ್ರಾಣ ಪ್ರತಿಷ್ಠಾ ಬಂದೋಬಸ್ತ್ ಕರ್ತವ್ಯ ನಿಮಿತ್ತ ಪಡೀಲ್ ಜಂಕ್ಷನ್ ಬಳಿ ಇರುವ ಪೊಲೀಸ್ ಚೆಕ್ ಪೊಸ್ಟ್ ಬಳಿ ಕರ್ತವ್ಯದಲ್ಲಿರುವ ಸಮಯ ಸಂಜೆ 4.00 ಗಂಟೆಗೆ ಬಿ. ಸಿ. ರೋಡ್ ಕಡೆಯಿಂದ KA 19 MK 6109 ನೇ ನಂಬ್ರದ ಕಾರನ್ನು ಅದರ ಚಾಲಕನಾದ ಕಾಶಿನಾಥ ಅಚಾರ್ಯ ರವರು  ಚಲಾಯಿಸಿಕೊಂಡು ಬಂದು ಪಡೀಲ್ ಜಂಕ್ಷನ್ ಬಳಿ ಚೆಕ್ ಪಾಯಿಂಟ್ ನ ಅರಿವಿದ್ದರೂ ಸಹ, ಅಲ್ಲದೇ ಅಲ್ಲಿ ವಾಹನ ಚೆಕ್ ಮಾಡುವ ಸಲುವಾಗಿ ರಸ್ತೆಗೆ ಅಳವಡಿಸಿದ ಬ್ಯಾರಿಕೇಡ್ ನ ಬಲಭಾಗದಿಂದ ಬರಬೇಕಾದವರು, ಬ್ಯಾರಿಕೇಡ್ ನ ಎಡಭಾಗದಿಂದ ಕಾರನ್ನು ಚಲಾಯಿಸಿದಲ್ಲಿ ಅಪಘಾತವಾಗಿ ಮಾನವ ಜೀವಕ್ಕೆ ಹಾನಿಯಾಗಬಹುದು ಎಂಬ ತಿಳುವಳಿಕೆ ಇದ್ದರೂ ಸಹ ಅದರ ಬಗ್ಗೆ ನಿರ್ಲಕ್ಷಿಸಿ, ಒಮ್ಮೇಲೆ ದುಡುಕುತನದಿಂದ ರಸ್ತೆಯಲ್ಲಿಟ್ಟಿರುವ ಬ್ಯಾರಿಕೇಡ್ ನ ಎಡಭಾಗದಿಂದ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಡಸಿ ಮಲಿಕ್ ರವರಿಗೆ ಡಿಕ್ಕಿ ಹೊಡೆದು ನಂತರ ಪೊಲೀಸ್ ಚೆಕ್ ಪೋಸ್ಟ್ ಗೆ ಹಾಗೂ ಮೋಟಾರ್ ಸೈಕಲ್ ನಂಬ್ರ KA-19-HB 8793 ಕ್ಕೆ  ಡಿಕ್ಕಿ ಪಡಿಸಿದ್ದು ಪಕ್ಕದಲ್ಲಿ ನಿಂತಿದ್ದ ಪಿ.ಸಿ. ಹರೀಶ್ ಗುಮಚಿ ರವರ ಕಾಲು ಪೊಲೀಸ್ ಚೆಕ್ ಪೋಸ್ಟ್ ಮತ್ತು ಬೈಕಿನ ಮದ್ಯೆ ಸಿಲುಕಿ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಪಾದಚಾರಿ ಒರಿಸ್ಸಾ ಮೂಲದ  ದಂಡಸಿ ಮಲಿಕ್ ರವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಉಪಚರಿಸಿದ ಸಾರ್ವಜನಿಕರು ವಾಹನವೊಂದರಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ  ದಾಖಲಿಸಿದ್ದು, ವೈದ್ಯರು ಸಂಜೆ 5.12 ಗಂಟೆಗೆ ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಗಾಯಗೊಂಡ ಪಿಸಿ  ಹರೀಶ್  ಗುಮಚಿ ರವರ  ಬಲ ಕಾಲಿನ ಹೆಬ್ಬೆರಳು ಮತ್ತು ಪಕ್ಕದ ಬೆರಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಲ್ಲದೇ ಪೊಲೀಸ್ ಚೆಕ್ ಪೊಸ್ಟ್ ಮತ್ತು   ಮೋಟಾರ್ ಸೈಕಲ್ ನಂಬ್ರ KA-19-HB 8793 ಜಖಂ ಗೊಳ್ಳಲು ಕಾರಣರಾಗಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 23-01-2024 05:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080