ಅಭಿಪ್ರಾಯ / ಸಲಹೆಗಳು

Bajpe PS

ಪಿರ್ಯಾದಿ Ganesh Venkappa Shettigar ದಿನಾಂಕ 22.02.2023 ರಂದು ಮಂಗಳೂರಿಗೆ ಕೆಲಸಕ್ಕೆ ತೆರಳಲು KA19D8699 ನೇ ಬಸ್ಸಿನಲ್ಲಿ ಎಡಭಾಗದ 6ನೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವಾಗ ಸಮಯ ಬೆಳಗ್ಗೆ 11.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಕಿನ್ನಿಪದವು ಪೆಟ್ರೋಲ್ ಪಂಪ್ ಬಳಿ ಬಸ್ಸು ಸಂಚರಿಸುತ್ತಿರುವ ಸಮಯ ಬಸ್ಸಿನ ಎಡಭಾಗದಲ್ಲಿನ ಹಿಂಭಾಗದ ಒಂದು ಟೈಯರ್ ಒಡೆದು ಸಿಡಿದ ಪರಿಣಾಮ ಬಸ್ಸಿನ ಟೈಯರ್ ಮೇಲ್ಭಾಗದ ಸೀಟಿನಲ್ಲಿ ಕುಳಿತು ಪ್ರಯಾಣಿಸುತಿದ್ದ ಪಿರ್ಯಾದಿದಾರರ ಬಲಕಾಲಿಗೆ ಗುದ್ದಿದ ಗಾಯವಾಗಿದ್ದು ನಂತರ ಪಿರ್ಯಾದಿದಾರರನ್ನು ಬಜಪೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ KMC ಆಸ್ಪತ್ರೆಗೆ ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಮತ್ತು ಈ ಅಪಘಾತಕ್ಕೆ ಬಸ್ಸಿನ ಚಾಲಕನ ಅತೀವೇಗ ಮತ್ತು ಅಜಾಗಾರುಕತೆಯೆ ಕಾರಣವಾಗಿರುತ್ತದೆ ಎಂಬಿತ್ಯಾದಿ

Moodabidre PS    

ದಿನಾಂಕ: 21/02/2023 ರಂದು ರಾತ್ರಿ 20-15 ಗಂಟೆಗೆ ಮೂಡಬಿದರೆಯ ಬಜಾಜ್ ಶೋ ರೂಮ್ ಬಳಿಯಲ್ಲಿ ಪಿರ್ಯಾದಿ Subhash Poojary ತಮ್ಮನಾದ ವಿಶ್ವನಾಥ ಪೂಜಾರಿಯು ತಿಂಡಿ ತರಲೆಂದು ರಸ್ತೆ ದಾಟುವ ಸಲುವಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಹಳೇ ಪೊಲೀಸ್ ಠಾಣೆಯಿಂದ ಮಹಾವೀರ ಕಾಲೇಜು ಕಡೆಗೆ ಹೊರಟಿದ್ದ ಕೆ.ಎ-19-ಎಮ್.ಎಲ್-2992 ನೇ ಕಾರಿನ ಚಾಲಕರಾದ ಸುರೇಂದ್ರ ಪೂಜಾರಿಯವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರ ತಮ್ಮನಿಗೆ ಡಿಕ್ಕಿಪಡಿಸಿದ್ದರಿಂದ ಎಡಗಾಲಿನ ಪಾದಕ್ಕೆ ಮತ್ತು ಇತರೆ ಕಡೆಗಳಲ್ಲಿ ಗಾಯದ ನೋವುಗಳಾಗಿದ್ದು ಸಾರ್ವಜನಿಕರ ಸಹಾಯದಿಂದ ಮೂಡಬಿದರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಎಡಗಾಲಿನ ಪಾದದ ಬೆರಳುಗಳ ಮೂಳೆ ಮುರಿತವಾಗಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Traffic South Police Station  

ದಿನಾಂಕ:23-02-2023 ರಂದು ಪಿರ್ಯಾದಿ UMAR FAROOQ  ಪರಿಚಯದವರಾದ ಮಹಮ್ಮದ್ ನೌಫಲ್ (26 ವರ್ಷ) ಎಂಬಾತನು  ಅವನ ಬಾಬ್ತು ಸ್ಕೂಟರ್ ನಂಬ್ರ KA-19-HK-7644 ನೇದನ್ನು ಪಂಪ್ವೆಲ್ ಕಡೆಯಿಂದ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಕಡೆಗೆ ರಾ.ಹೆ-66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 03:15 ಗಂಟೆಗೆ ನೇತ್ರಾವತಿ ಸೇತುವೆ ಬಳಿ ತಲುಪಿದಾಗ ಅಲ್ಲಿ ಟಿಂಬರ್ ಲಾರಿ ನಂಬ್ರ: KL-18-AC-6030 ನೇದರಲ್ಲಿ ಟಿಂಬರ್ ತುಂಬಿದ್ದು ಸದ್ರಿ ಟಿಂಬರ್ ಲಾರಿಯ ಬಾಡಿಯ ಹೊರಗಡೆ ಬಂದಿದ್ದು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ನಿಲ್ಲಿಸಿರುವಾಗ ಮಹಮ್ಮದ್ ನೌಫಲ್ ನು ಆ ಸಮಯ ಆತನ ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗಿ ಸದ್ರಿ ಲಾರಿಯ ಹಿಂಬದಿಗೆ ಸ್ಕೂಟರನ್ನು ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಎಡಕಾಲಿಗೆ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಹಮ್ಮದ್ ನೌಫಲ್ ನನ್ನು ಪಿರ್ಯಾದಿದಾರರ ಕಾರಿನಲ್ಲಿ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಮಹಮ್ಮದ್ ನೌಫಲ್ ನನ್ನು ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Mangalore South PS                               

ಪಿರ್ಯಾದಿ CHITTARANJAN ಮಂಗಳೂರಿನ ಬೋಂದೆಲ್ ಕೃಷ್ಣ ನಗರ ಬಾಲಕರ ಬಾಲ ಮಂದಿರದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ದಿನಾಂಕ;20/02/2023 ರಂದು ಬಾಲಮಂದಿರದಲ್ಲಿ ಬಾಗಲಕೋಟೆ ನಿವಾಸಿ ಬಸವರಾಜ ಎಂಬವನು ಸೇರಿಕೊಂಡಿದ್ದು ಸಂಜೆ ಸಮಯ ಸುಮಾರು 7-00 ಗಂಟೆಗೆ ಸೋಪನ್ನು ತಿಂದಿರುವುದಾಗಿ ಮಂದಿರದ ಇತರ ಮಕ್ಕಳು ”ಅಣ್ಣ ಬಸವರಾಜ ಸಾಬೂನು ನುಂಗಿದ್ದಾನೆ.” ಎಂದು ಹೇಳಿದರು. ಇದರಿಂದ ಪಿರ್ಯಾದುದಾರರು ಸುಪರಿಡೆಂಟ್ ರಿಗೆ ಮಾಹಿತಿಯನ್ನು ತಿಳಿಸಿ ಇನ್ನೊಬ್ಬ ಗಾರ್ಡ್ ತಾರನಾಥ, ಸುಜೀತ್ ರೊಂದಿಗೆ ಕೂಡಲೇ ರಿಕ್ಷವೊಂದರಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಂದಿದ್ದು, ವೈಧ್ಯರು ಬಸವರಾಜನನ್ನು ಪರೀಕ್ಷಿಸಿ ಆರೋಗ್ಯದ ಮೇಲೆ-ನಿಗಾ ಇರಿಸಲು 2-3 ದಿನಗಳು ಬೇಕೆಂದು ಒಳರೋಗಿಯಾಗಿ ದಾಖಲಿಸಿ ಕೊಂಡಿರುತ್ತಾರೆ. ಆಸ್ಪತ್ರೆಯಲ್ಲಿ ದಿನಾಂಕ;21/02/2023 ರಂದು ಸಂಜೆ ಸಮಯ 7-15 ಗಂಟೆ ಸುಮಾರಿಗೆ ಕೈ ತೊಳೆಯಲಿದೆಯೆಂದು  ಹೇಳಿ ಹೊರಗಡೆ ಹೋದ ಬಸವರಾಜನು ಬಾರದೇ ಇದ್ದಾಗ ಸುತ್ತ ಮುತ್ತ ಹುಡುಕಾಡಿ. ಸೆಕ್ಯುರಿಟಿಯವರಲ್ಲಿ ವಿಚಾರಿಸಿ, ಹುಡುಕಾಡಿದರೂ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಆತನ ಮನೆಯವರಲ್ಲಿ ವಿಚಾರಿಸಿಕೊಂಡು ಇಂದು ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿರುವುದಾಗಿದೆ. ಆತನನ್ನ ಯಾರಾದರೂ ಪುಸಲಾಯಿಸಿ ಕರೆದುಕೊಂಡು ಹೋಗಿರುವ ಸಾದ್ಯತೆ ಇರುತ್ತದೆ. ಚಹರೆ ವಿವರ:- ಎತ್ತರ: ಸುಮಾರು 5 ಅಡಿ, ಎಣ್ಣೆ ಕಪ್ಪು ಮೈಬಣ್ಣ, ನೀಲಿ ಬಣ್ಣದ ಉದ್ದ ಕೈ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಬಾಷೆ ಮಾತನಾಡುತ್ತಾರೆ. ಕಾಣೆಯಾದ ಬಸವರಾಜನನ್ನು ಪತ್ತೆ ಮಾಡಿಕೊಡಬೇಕೆಂದು ವಿನಂತಿ.” ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-02-2023 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080