ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore West Traffic PS                         

ಈ ಪ್ರಕರಂಣದ ಸಾರಾಂಶವೇನೆಂದರೇ ಪಿರ್ಯಾದಿ KUNHI ARANGADI IBRAHIM ಇವರು ದಿನಾಂಕ 22-02-2024 ರಂದು ಕೆಎ-19-ಹೆಚ್ ಸಿ-2164  ನೇ ದ್ವಿಚಕ್ರ ವಾಹನದಲ್ಲಿ ಹೆಂಡತಿ ಮತ್ತು ಮಗುವನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಎ ಬಿ ಶೆಟ್ಟಿ ಸರ್ಕಲ್ ನಿಂದ ಬಂದರು ಕಡೆಗೆ ಹೋಗುವರೇ ಹ್ಯಾಮಿಲ್ಟನ್ ಸರ್ಕಲ್ ತಲುಪುತ್ತಿದ್ದಂತೆ ಸಮಯ KA-19-MN-6602 ನೇ ಕಾರಿನ ಚಾಲಕ ಸುರೇಶ ಎಂಬುವರು ರೊಜಾರಿಯೊ ಕಡೆಯಿಂದ ರಾವ್ & ರಾವ್ ಸರ್ಕಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ದ್ವಿಚಕ್ರ ವಾಹನಕ್ಕೆ ಒಮ್ಮೇಲೆ ಅಡ್ಡ ಬಂದ ಪರಿಣಾಮ ಪಿರ್ಯಾದಿದಾರರ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಕಾರಿನ ಬಲ ಬದಿಯ ಹಿಂಬದಿಯ ಚಕ್ರದ ಬಳಿ  ಡಿಕ್ಕಿಯಾದ   ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು. ಬಲಗೈಯ ಅಂಗೈಗೆ, ಹೆಬ್ಬೆರಳಿಗೆ, ಬಲ ಮುಂಗೈಗೆ ಹಾಗೂ ಎಡಗಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು  ಪಿರ್ಯಾದಿದಾರರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆಪಡೆದು ಮನೆಗೆ ಹೋಗಿದ್ದು, ದಿನಾಂಕ 23-02-2024 ರಂದು ನೋವು ಹೆಚ್ಚಾದ ಕಾರಣ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ  ಪಡೆದಿರುತ್ತಾರೆ. ಈ ಅಪಘಾತದಲ್ಲಿ ಪಿರ್ಯಾದಿದಾರರ ಹೆಂಡತಿ ಮತ್ತು ಮಗುವಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಎಂಬಿತ್ಯಾದಿ

 

Mangalore West Traffic PS                                                           

ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ: 23-02-2024 ರಂದು ಪಿರ್ಯಾದಿ UJJAL KUMAR DAS ಇವರು  KA-19-ML-9514 ನೇ ಕಾರನ್ನು   ಯೆಯ್ಯಾಡಿ ಕಡೆಯಿಂದ ಹೊಯಿಗೆ ಬೈಲ್ ಕಡೆಗೆ  ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ  ಸಮಯ ಲಾಲ್ ಬಾಗ್ ಜಂಕ್ಷನ್ ಬಳಿ ತಲುಪುತಿದ್ದಂತೆ ಅದೇ ಮಾರ್ಗವಾಗಿ  ಬಂದ  KA -19-AD-8250 ನೇದರ ಆಟೋ ರಿಕ್ಷಾದ  ಚಾಲಕನು ನಿರ್ಲಕ್ಷತನ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂಬದಿಯಿಂದ  ಡಿಕ್ಕಿ ಪಡಿಸಿದ ಪರಿಣಾಮ ಕಾರು  ಜಖಂಗೊಂಡಿರುವುದಾಗಿದೆ  ಎಂಬಿತ್ಯಾದಿ

 

Traffic North Police Station

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಈ ದಿನ ದಿನಾಂಕ 23-02-2024 ರಂದು ಬೆಳಿಗ್ಗೆ ಸುರತ್ಕಲಿನಲ್ಲಿ ಕಾಂಕ್ರೀಟ್ ಹಾಕುವ ಕೂಲಿ ಕೆಲಸದ ಬಗ್ಗೆ ಲಿಂಗಪ್ಪಯ್ಯ ಕಾಡು ಪರಿಸರದ ಸುಮಾರು 10 ಜನ ಕೂಲಿ ಕಾರ್ಮಿಕರೊಂದಿಗೆ 407 ಟೆಂಪೊ ನಂಬ್ರ KA-19-AD-9243 ರಲ್ಲಿ ಮಂಜುನಾಥ ಹೆಚ್ ಮತ್ತು ವೀರೇಶ ಎಂಬವರು ಟೆಂಪೋದ ಮುಂದಿನ ಸೀಟಿನಲ್ಲಿ ಹಾಗೂ ಇತರರು ಟೆಂಪೋದ ಹಿಂಬದಿ ಬಾಡಿಯಲ್ಲಿ ಕುಳಿತುಕೊಂಡು ಲಿಂಗಪ್ಪಯ್ಯಕಾಡಿನಿಂದ ಹೊರಟು ಸದ್ರಿ ಟೆಂಪೋವನ್ನು ಚಾಲಕ ಮಲ್ಲಿಕಾರ್ಜುನ ಎಂಬವರು ಉಡುಪಿ-ಮಂಗಳುರು ರಾಷ್ಟ್ರೀಯ ಹೆದ್ದಾರಿರಲ್ಲಿ ಚಾಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ ಸಮಯ ಸುಮಾರು 08:15 ಗಂಟೆಗೆ ಪಾವಂಜೆ ಸೇತುವೆ ದಾಟಿ ಸ್ವಲ್ಪ ಮುಂದೆ ಇರುವ ನಂದಿನಿ ಬಸ್ಸು ತಂಗುದಾಣದ ಬಳಿ ತಲುಪುತ್ತಿದ್ದಂತೆಯೇ ಮುಂದಿನಿಂದ ಹೋಗುತ್ತಿದ್ದ ಬಸ್ಸು ನಂಬ್ರ  KA-20-AA-6844 ನೇಯದನ್ನು  ಅದರ ಚಾಲಕ ಸುರೇಶ ಎಂಬವರು ಪ್ರಯಾಣಿಕರನ್ನು ಹತ್ತಿಸುವ ಸಲುವಾಗಿ ರಸ್ತೆ ಮಧ್ಯೆ ನಿಲ್ಲಿಸಿದ ಸಮಯ ಟೆಂಪೋವನ್ನು ಅದರ ಚಾಲಕ ಮಲ್ಲಿಕಾರ್ಜುನನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಹಿಂಬದಿ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಟೆಂಪೋ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದು ಸದ್ರಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಬಲಕೈಗೆ ತರಚಿದ ರಕ್ತಗಾಯಮಲ್ಲಿನಾಥರವರ ತಲೆಯ ಹಿಂಭಾಗ, ಎಡಕಿವಿಯ ಬಳಿ ಮತ್ತು ಬಲಕಿವಿಯ ಬಳಿ ರಕ್ತಗಾಯ ಹಾಗೂ ಬಲಕೈ ಭುಜದ ಕೆಳಭಾಗದಲ್ಲಿ ಮೂಳೆ ಮುರಿತದ ಗಂಬೀರ ಸ್ವರೂಪದ ಗಾಯ, ಲಕ್ಷ್ಮಣರವರ ಬಲಕಾಲಿನ ಪಾದದ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಶಂಕರ ಬಾಯಿರವರ ಎಡಕೈಗೆ ಮೂಳೆ ಮುರಿತದ ಗಂಭೀರ ಸ್ವರೂದ ಗಾಯ, ಹಾಗೂ ಯಲ್ಲಮ್ಮ, ಸಂತೋಷ, ಶೋಭಾ, ಶಂಕ್ರಮ್ಮ ಮತ್ತು ಭೂತಾಳಿರವರಿಗೆ ಅಲ್ಲಲ್ಲಿ ರಕ್ತಗಾಯವಾಗಿದ್ದು ಗಾಯಾಳುಗಳು  ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

 

Traffic South Police Station                

ಈ ಪ್ರಕರಣದ ಸಾರಾಂಶವೇನೆಂದರೆ ಫಿರ್ಯಾದಿ SPANDAN RAI ಇವರು ದಿನಾಂಕ; 22-02-2024 ರಂದು ಕೆಲಸ ನಿಮಿತ್ತ ಮುಡಿಪು ಕಡೆಗೆ ಹೋಗಿದ್ದು, ಮುಡಿಪುನಲ್ಲಿರುವ ಡೆಕ್ಕನ್ ಪ್ಲಾಸ್ಟಿಕ್ ಕಂಪನಿ ಸಮೀಪ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯ ಪಕ್ಕದಲ್ಲಿ ತನ್ನ ಬಾಬ್ತು ಮೊಟಾರ್ ಸೈಕಲ್ ನಂಬರ್ KA-19-HQ-4840 ನ್ನು ನಿಲ್ಲಿಸಿಕೊಂಡು ತಾನು ಹಾಗೂ ತಮ್ಮ ಕಂಪನಿಯ ಗ್ರಾಹಕರಾದ  ಮೊಹಮ್ಮದ್ ಸಫೀವುಲ್ಲ ರವರೊಂದಿಗೆ ನಿಂತುಕೊಂಡು ಮಾತನಾಡುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 9-15 ಗಂಟೆಗೆ ಅಸೈಗೋಳಿ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ನೀಲಿ ಬಣ್ಣದ ಟಾಟಾ ಕಂಪನಿಯ ನ್ಯಾನೋ  ಕಾರ್ ನಂಬರ್ KA-19-ME-5480 ನೇದರ ಚಾಲಕ ನಾಗೇಶ್ ಕಾಮತ್ ಎಂಬಾತನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಕೊಂಡು ಬಂದು ನಿಂತಿದ್ದ ಫಿರ್ಯಾದಿದಾರರಿಗೆ ಹಾಗೂ ಅವರ ಮೊಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರು ಮತ್ತು ಮೊಹಮ್ಮದ್ ಸಫೀವುಲ್ಲಾ ರವರು ಕೆಳಗೆ ಬಿದ್ದವರನ್ನು ಸಾರ್ವಜನಿಕರು ಮತ್ತು ಕಾರಿನ ಚಾಲಕ ಉಪಚರಿಸಿ ಅಪಘಾತ ಪಡಿಸಿದ ಕಾರಿನಲ್ಲಿಯೇ ಹತ್ತಿರದ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ಫಿರ್ಯಾದಿದಾರರಿಗೆ ಬಲಕೈಯ ಮೊಣಕೈ ಗಂಟು ತಪ್ಪಿರುವುದಾಗಿ  ಹಾಗೂ ಬಲಕೈ ಕೋಲು ಮೂಳೆಗೆ ಸಣ್ಣ ಪ್ರಮಾಣದ ಮೂಳೆ ಮುರಿತವಾಗಿದ್ದು, ಬಲಕಾಲಿನ ಪಾದದ ಗಂಟಿನ ಬಳಿ ಗುದ್ದಿದ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂಬಿತ್ಯಾದಿ

 

 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 21-02-2024 ರಂದು ಪಿರ್ಯಾದಿ Mohandas  ಇವರ ಮಗ ಮಾಸ್ಟರ್ ಕಿಶನ್ ಎಂ. (11) ಎಂಬವನು ಎಂದಿನಂತೆ KA-27-B-6998 ನಂಬ್ರ ಖಾಸಗಿ ಮಿನಿ ಟೆಂಪೋದಲ್ಲಿ ಶಾಲೆಗೆ ಹೋದವನು ಸಂಜೆ ವೇಳೆಗೆ ಶಾಲೆ ಮುಗಿಸಿ ಸದ್ರಿ ಟೆಂಪೋದಲ್ಲಿ ಪಿರ್ಯಾದಿಯ ಮಗ ಮತ್ತು ಇತರ ಶಾಲಾ ಮಕ್ಕಳನ್ನು ಕರೆದುಕೊಂಡು ಚಾಲಕ ಕಿರಣ್ ಎಂಬಾತನು ಟೆಂಪೂವನ್ನು ಚಲಾಯಿಸಿಕೊಂಡು ಬರುತ್ತಾ ಸಂಜೆ ಸಮಯ ಸುಮಾರು 4:30 ಗಂಟೆಗೆ ಪಿರ್ಯಾದಿಯ ಮನೆಯ ಪಕ್ಕದ ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಯಲ್ಲಿ ಪಿರ್ಯಾದಿಯ ಮಗನನ್ನು ಇಳಿಸಿದ್ದು ಪಿರ್ಯಾದಿದಾರರ ಮಗ ಮಾಸ್ಟರ್ ಕಿಶನ್ ತನ್ನ ಮನೆಗೆ ಹೋಗುವರೇ ಸದ್ರಿ ಮಿನಿ ಟೆಂಪೋದ ಮುಂದಿನಿಂದ ರಸ್ತೆ ದಾಟುತ್ತಿದ್ದ ಸಮಯ ಮಿನಿ ಟೆಂಪೋ ಚಾಲಕ ಕಿರಣ್ ಏಕಾಏಕಿಯಾಗಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಟೆಂಪೋವನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿಯ ಮಗನಿಗೆ ಡಿಕ್ಕಿಯಾಗಿ ಆತನು ರಸ್ತೆಗೆ ಎಸೆಯಲ್ಪಟ್ಟು ಆತನ ಎಡ ಕೈಯ ಮೊಣಗಂಟಿನ ಬಳಿ, ಭುಜದ ಬಳಿ, ಹಣೆಯ ಎಡಬದಿ, ಬಲಕೈ ಮುಷ್ಠಿಗೆ ತರಚಿದ ಗಾಯ ಮತ್ತು ಬೆನ್ನ ಹಿಂದೆ ಗುದ್ದಿದ ನೋವಾಗಿದ್ದು ಸುರತ್ಕಲಿನ ಡಾ| ಅನಿಲ್ ಕುಮಾರ್ ರವರ ಕ್ಲಿನಿಕಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಈ ದಿನ ದಿನಾಂಕ 23-02-2024 ರಂದು ಬೆನ್ನಿಗೆ ಆದ ನೋವು ಹೆಚ್ಚಾಗಿರುವುದರಿಂದ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾನೆ ಎಂಬಿತ್ಯಾದಿ

 

Traffic North Police Station                         

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಈ ದಿನ ದಿನಾಂಕ 23-02-2024 ರಂದು ಪಿರ್ಯಾದಿ Manasa Udupa ಇವರು ತನ್ನ ಅಕ್ಕ ಪೂರ್ಣಿಮಾ ರವರನ್ನು ತನ್ನ ಬಾಬ್ತು KA-19-HP-4837 ನಂಬ್ರದ ಸ್ಕೂಟರಿನಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಣಂಬೂರು ಪೊಲೀಸ್ ಠಾಣೆ ಕ್ರಾಸಿಗಿಂತ ಸ್ವಲ್ಪ ಮುಂದೆ GAIL Gas ಪಂಪ್ ಬಳಿ ತಲುಪಿದಾಗ ಪಿರ್ಯಾದಿದಾರರ ಸ್ಕೂಟರಿನ ಬಲಬದಿಯಿಂದ ಅಂದರೇ ಅದೇ ರಸ್ತೆಯಲ್ಲಿ ಬೈಕಂಪಾಡಿ ಕಡೆಯಿಂದ ಪಣಂಬೂರು ಕಡೆಗೆ KA-19-AB-0927 ನಂಬ್ರದ ಸೀಮೆಂಟ್ ಮಿಕ್ಸರ್ ಲಾರಿಯೊಂದನ್ನು ಅದರ ಚಾಲಕ ದೀಪಕ್ ಸುನಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಎಡಕ್ಕೆ ಚಲಾಯಿಸಿದ ಪರಿಣಾಮ ಲಾರಿಯ ಬಾಡಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಹ್ಯಾಂಡಲಿನ ಬಲಬದಿಗೆ ಡಿಕ್ಕಿಯಾಗಿದ್ದು, ಪಿರ್ಯಾದಿದಾರರು ಎಡಕ್ಕೆ ಹಾಗೂ ಪಿರ್ಯಾದಿದಾರರ ಅಕ್ಕ ಪೂರ್ಣಿಮಾ ರವರು ಬಲಕ್ಕೆ ಡಾಂಬಾರು ರಸ್ತೆಗೆ ಬಿದ್ದಿದ್ದು, ಆ ಸಮಯ ಲಾರಿಯ ಹಿಂಭಾಗದ ಎಡಭಾಗದ ಚಕ್ರವು ಪಿರ್ಯಾದಿದಾರರ ಅಕ್ಕನ ಹೊಟ್ಟೆಯ ಮೇಲೆ ಹರಿದು ಮುಂದೆ ಹೋದ ಪರಿಣಾಮ ಪಿರ್ಯಾದಿದಾರರ ಅಕ್ಕ ಪೂರ್ಣಿಮಾ ರವರಿಗೆ ಹೊಟ್ಟೆಗೆ ಮತ್ತು ಎಡಕೈಗೆ ಗಂಭೀರ ಸ್ವರೂಪ ರಕ್ತಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ಆಂಬ್ಯುಲೆನ್ಸವೊಂದರಲ್ಲಿ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿದೆ.ಅಲ್ಲದೇ ಪಿರ್ಯಾದಿದಾರರಿಗೆ ಬಲಕೈಗೆ ತರಚಿದ ಗಾಯವಾಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಗ್ಲೇವಿನ್ ರವರು ದಿನಾಂಕ 23-02-2024 ರಂದು ತನ್ನ ತಾಯಿಯಾದ ಶ್ರೀಮತಿ ಜೂಲಿಯಾನ ರವರೊಂದಿಗೆ ಮಾಸ್ತಿಕಟ್ಟೆ ಮನೆಯಿಂದ ಮೂಡಬಿದ್ರೆ ಪೇಟೆಗೆ ಸಾಮಾನು ತರಲೆಂದು ಮಾಸ್ತಿಕಟ್ಟೆಯ ಪೊನ್ನೆಚ್ಚಾರಿ ದೇವಸ್ಥಾನದ ಬಳಿ ಇರುವ ಗಾಡ್ಸ್ ಗಿಫ್ಟ್ ಎಂಬ ಹೆಸರಿನ ಕಟ್ಟಡದ ಮುಂಭಾಗ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಬಂದ KA 20 L 9164 ನಂಬ್ರದ ಮೋಟಾರ್ ಸೈಕಲ್ ಸವಾರ ಸುಮಂತ್ ಎಂಬಾತನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಾಯಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ನೆಲಕ್ಕೆ ಎಸೆಯಲ್ಪಟ್ಟು ಅವರ ಎಡ ಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಅಲಂಗಾರಿನಲ್ಲಿರುವ ಮೌಂಟ್ ರೋಸಾರಿಯಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾಧಿ Prakash ಇವರ ಮಗಳಾದ ಆದಿರ ಎಂಬವಳು ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಪಿ.ಟಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು, ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಂಸ್ಥೆಯ ಶಾಂಭವಿ ಹಾಸ್ಟೇಲಿನ `ಸಿ` ಬ್ಲಾಕ್ ನಲ್ಲಿ ವಾಸ್ತವ್ಯವಿದ್ದವಳು ಈ ದಿನ ದಿನಾಂಕ 23-02-2024ರಂದು ಬೆಳಿಗ್ಗೆ 7:45 ಗಂಟೆಗೆ ಶಾಂಭವಿ ಹಾಸ್ಟೇಲಿನಿಂದ ಕಾಲೇಜಿಗೆಂದು ಆಳ್ವಾಸ್ ಸಂಸ್ಥೆಯ ಬಸ್ಸಿನಲ್ಲಿ ಹೋದವಳು ಸ್ವರಾಜ್ ಮೈದಾನದ ಬಳಿ ಇರುವ ಕನ್ನಡ ಭವನದ ಬಳಿ ಬಸ್ಸಿನಿಂದ ಇಳಿದವಳು ಕಾಲೇಜಿಗೆ ಹೋಗದೇ ನಾಪತ್ತೆಯಾಗಿರುತ್ತಾಳೆ ಎಂಬಿತ್ಯಾದಿ

ಕಾಣೆಯಾದವರ ಚಹರೆ:-

ಹೆಸರು: ಆದಿರ (ಪ್ರಾಯ: 19 ವರ್ಷ)

ಎತ್ತರ:5.2

ಶರೀರ: ದುಂಡು ಮುಖ ಸಾಧಾರಣ ಶರೀರ

ಮೈಬಣ್ಣ: ಬಿಳಿ ಮೈಬಣ್ಣ

ಧರಿಸಿದ್ದ ಬಟ್ಟೆ: ಆಕಾಶ ನೀಲಿ ಬಣ್ಣದ ಟಾಪ್ ಮತ್ತು ಕಪ್ಪ ಬಣ್ಣದ ಪ್ಯಾಂಟು ಧರಿಸಿರುತ್ತಾಳೆ.

ಭಾಷೆ: ಕನ್ನಡ, ಇಂಗ್ಲೀಷ್, ಮಲಿಯಾಳಿ

ವಿದ್ಯಾಭ್ಯಾಸ: ಪ್ರಥಮ ವರ್ಷದ ಬಿ.ಪಿ.ಟಿ

ಇತ್ತೀಚಿನ ನವೀಕರಣ​ : 01-03-2024 08:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080