ಅಭಿಪ್ರಾಯ / ಸಲಹೆಗಳು

Traffic South Police Station         

ಪಿರ್ಯಾದಿದಾರರಾದ ಅನುಪಮ ಬೇಬಿ (21 ವರ್ಷ) ರವರು ದಿನಾಂಕ: 23-03-2023 ರಂದು ಬೆಳಿಗ್ಗೆ ಅಡ್ಯಾರಿನಲ್ಲಿರುವ ಹಾಸ್ಟೆಲ್ ನಿಂದ ಬಿಕರ್ಣಕಟ್ಟೆಯಲ್ಲಿರುವ ಕಾಲೇಜಿಗೆ ಅವರ ಸ್ನೇಹಿತೆಯರಾದ ಜಿಸ್ಸಂ ಓ ಎಸ್ ಮತ್ತು ಜೋಸ್ನ ಚಾಕೋ ರವರೊಂದಿಗೆ ಹೋಗಲು ಅವರ ಕಾಲೇಜಿನ ಬಸ್ಸು ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ -73 ರ ರಸ್ತೆಬದಿಯಲ್ಲಿ ನಿಂತಿದ್ದನ್ನು ಕಂಡು ಪಿರ್ಯಾದಿದಾರರು ಮತ್ತು ಅವರ ಸ್ನೇಹಿತೆಯರು ಕಾಲೇಜಿನ ಬಸ್ಸು ಹತ್ತಲು ಮಂಗಳೂರು ಕಡೆಯಿಂದ ಬಿಸಿ ರೋಡ್ ಕಡೆಗೆ ಹೋಗುವ ರಾ ಹೆ-73 ರ ಡಾಮಾರು ರಸ್ತೆಯನ್ನು ದಾಟುತ್ತಿದ್ದಾಗ ಸಮಯ ಸುಮಾರು ಬೆಳಿಗ್ಗೆ 8-40 ಗಂಟೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಬಳಿ ಮಸೂದ್ ಹಾಸ್ಟೆಲ್ ನ ಎದುರು ಅದೇ ರಸ್ತೆಯಲ್ಲಿ ಅಂದರೆ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ನಂಬ್ರ: KA-19-MB-5360 ನೇದನ್ನು ಅದರ ಚಾಲಕ ಮೊಹಮ್ಮದ್ ಆಶ್ರಫ್ ಎಂಬುವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಅವರ ಮುಂದಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ : KA-19-HH-1318 ನೇದರ ಹಿಂಬದಿಗೆ ಡಿಕ್ಕಿ ಪಡಿಸಿ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರು ಅವರ ಸ್ನೇಹಿತೆಯರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರಿಗೆ ಹಣೆಗೆ ಗುದ್ದಿದ ರಕ್ತಗಾಯ ಮತ್ತು ಸ್ನೇಹಿತೆ ಜಿಸ್ಸ ಓ ಎಸ್ ರವರಿಗೆ ಬಲಕಾಲು,ತೊಡೆಗೆ ಮತ್ತು ಮಣಿಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಬಲಕೈತಟ್ಟಿನಲ್ಲಿ ತರಚಿದ ಗಾಯ,ಜೋಸ್ಸ ಚಾಕೋರವರಿಗೆ ಬಲಕಾಲು,ಕೋಲುಕಾಲು,ಪಾದಕ್ಕೆ ತರಚಿದ ಗಾಯ,ಎಡಕಾಲು ಮತ್ತು ಪಾದದ ಬೆರಳಿಗೆ ,ಬಲಕೈಗೆ ,ತಲೆಯ ಬಲಬದಿಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಮತ್ತು ಅಪಘಾತಪಡಿಸಿದ ಚಾಲಕ ಸೇರಿ ಗಾಯಾಗಳನ್ನು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ,ಬಂಟ್ವಾಳ ಇಲ್ಲಿಗೆ ಕರೆದುಕೊಂಡು ಬಂದು ದಾಖಲಿಸಿದ್ದು ಹಾಗೂ ಅಪಘಾತಕ್ಕಿಡಾದ ಮೋಟಾರ್ ಸೈಕಲ್ ಸವಾರ ಶಿವ ಪ್ರಸಾದ್ ರವರು ಕೂಡ ಅದೇ ಆಸ್ಪತ್ರೆಯಲ್ಲಿ ಹೋಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

 

Mangalore East Traffic PS       

ಪಿರ್ಯಾದಿದಾರರಾದ ರವಿ ಹೆಚ್. ಸಿ.ಹೆಚ್.ಸಿ  ರವರು ದಿನಾಂಕ 21-03-2023 ರಂದು ರಾತ್ರಿ ಠಾಣೆಯಲ್ಲಿ ತನಿಖಾ ಸಹಾಯಕ ಕರ್ತವ್ಯದಲ್ಲಿದ್ದ ವೇಳೆ, ರಾತ್ರಿ ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ ಕೇಶವಮೂರ್ತಿ ರವರು ಅತ್ತಾವರ ಡಿಮಾರ್ಟ್ ಬಳಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಅಲ್ಲಿಗೆ ಹೋಗುವಂತೆ ಪಿರ್ಯಾದಿದಾರರಿಗೆ ತಿಳಿಸಿದ್ದು, ಪಿರ್ಯಾದಿದಾರರು ರಾತ್ರಿ ಸುಮಾರು 8.45 ಗಂಟೆಗೆ  ಅತ್ತಾವರ ಕಟ್ಟೆಯ ಬಳಿ ತೆರಳಿ, ರಸ್ತೆಯಲ್ಲಿದ್ದ ವಾಹನಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ವೇಳೆ KA-21-E-6513  ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಅತ್ತಾವರ ಕೆ.ಎಂ.ಸಿ ಕಡೆಯಿಂದ ಅತ್ತಾವರ ಕಟ್ಟೆಯ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಡಿಮಾರ್ಟ್ ಮುಂಭಾಗ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಗೆ ಜೀವ ಭಯ ಹುಟ್ಟಿಸುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ, ಜೋರಾಗಿ ಕರ್ಕಶ ಶಬ್ದವನ್ನು ಮಾಡುತ್ತಾ ಚಲಾಯಿಸಿಕೊಂಡು ಹೋಗುತ್ತಿದ್ದವನನ್ನು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಅತೀ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದು,   ಈ ಬಗ್ಗೆ KA-21-E-6513  ನಂಬ್ರದ ಮೋಟಾರ್ ಸೈಕಲ್ ಸವಾರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

 

Kavoor PS         

ಫಿರ್ಯಾದಿ RAMACHANDRA ತಂಗಿಯಾದ  ಲತಾ (30 ವರ್ಷ) ಎಂಬವರು  ಪಿಲಿಕುಳದಲ್ಲಿ ಹೌಸ್ ಕೀಪೀಂಗ್ ಕೆಲಸ ಮಾಡಿಕೊಂಡಿದ್ದು, ದಿನಾಲೂ ಬೆಳಿಗ್ಗೆ 08.00 ಗಂಟೆಗೆ ಕೆಲಸಕ್ಕೆ ಮನೆಯಿಂದ ಹೋಗಿ ಸಂಜೆ 06.00 ಗಂಟೆಗೆ ಮನೆಗೆ ಬರುವುದಾಗಿದ್ದು, ಆದರೆ ದಿನಾಂಕ 21-03-2023 ರಂದು ಎಂದಿನಂತೆ ಕೆಲಸಕ್ಕೆ ಹೋದವರು ಸಂಜೆ 07.30 ಗಂಟೆ ಆದರೂ ಕೂಡ ಮನೆಗೆ ಬಾರದೇ ಇದ್ದು, ಫಿರ್ಯಾದಿದಾರರು  ತಂಗಿಯಾದ  ಲತಾರವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಫಿರ್ಯಾದಿದಾರರು ಬೆಳಿಗ್ಗೆ ಅವಳು ಕೆಲಸ ಮಾಡುತ್ತಿದ್ದ ಪಿಲಿಕುಳದಲ್ಲಿ  ವಿಚಾರಿಸಲಾಗಿ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಸಂಬಂಧಿಕರನ್ನು ವಿಚಾರಿಸಿದಲ್ಲಿ ಯಾವುದೇ ಸುಳಿವು ತಿಳಿದು ಬಾರದೇ ಇದ್ದು, ಲತಾಳೂ ಕಾಣೆಯಾಗಿರುತ್ತಾಳೆ. ಈ ದಿನ ದಿನಾಂಕ 22-03-2023 ರಂದು  ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣಿಯಾದವರ ಚಹರೆ:

ಹೆಸರು: ಲತಾ (30 ವರ್ಷ)

ಎತ್ತರ: 5 ಅಡಿ, ಎಣ್ಣೆ ಕಪ್ಪು ಮೈಬಣ್ಣ,

ಧರಿಸಿದ ಬಟ್ಟೆ: ಚೂಡಿದಾರ್ ಧರಿಸಿದ್ದಾಳೆ

ಮಾತಾನಾಡುವ ಭಾಷೆ: ತುಳು ಮತ್ತು ಕನ್ನಡ

 

Traffic North Police Station                                             

 ಪಿರ್ಯಾದಿ ರಾಜೇಂದ್ರ ಸಾಲಿಯಾನ್ (46 ವರ್ಷ) ರವರು ದಿನಾಂಕ: 18-03-2023 ರಂದು ಕೆಲಸದ ನಿಮಿತ್ತ ಅವರ ಕಂಪೆನಿಯ ಬಾಬ್ತು KA-19-MK-9383 ನಂಬ್ರದ ಕಾರಿನಲ್ಲಿ ಮನೆಯಿಂದ ಹೊರಟು ಜೋಕಟ್ಟೆ ದಾಟಿ ಹೋಗುತ್ತಾ ಸಮಯ  ಸುಮಾರು ಬೆಳಿಗ್ಗೆ 9:30 ಘಂಟೆಗೆ ಕುಡುಂಬೂರು ಬಳಿಯ ಸೇತುವೆ ತಲುಪುತ್ತಿದ್ದಂತೆ ಕುಡುಂಬೂರು ಮುಂಗಾರು ಕಡೆಯಿಂದ KA-19-EU-2319 ನಂಬ್ರದ ಸ್ಕೂಟರನ್ನು ಅದರ ಸವಾರ ಮೊನಪ್ಪ ಎಂಬಾತನು ಸ್ಕೂಟರಿನ ಹಿಂಬದಿಯಲ್ಲಿ ವಿದ್ಯಾಶ್ರೀ ಎಂಬಾಕೆಯನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಿರುವು ರಸ್ತೆಯಲ್ಲಿ ರಸ್ತೆಯ ತೀರಾ ಬಲಬದಿಗೆ ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಕಾರಿನ ಎದುರಿನ ಬಲಬದಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಸ್ಕೂಟರ್ ಸವಾರ ಮತ್ತು ಸಹಸವಾರೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸ್ಕೂಟರ್ ಸವಾರನಿಗೆ ಕಾಲಿಗೆ ಮತ್ತು ಸೊಂಟಕ್ಕೆ ಗುದ್ದಿದ ನೋವಾಗಿದ್ದು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಮತ್ತು ಈ ಅಪಘಾತದಿಂದ ಪಿರ್ಯಾದಿದಾರರ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿರುತ್ತದೆ ಎಂಬಿತ್ಯಾದಿ ಸಾರಾಂಶ.

ಇತ್ತೀಚಿನ ನವೀಕರಣ​ : 21-08-2023 12:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080