ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                 

ಈ ದಿನ ದಿನಾಂಕ: 23-03-2024 ರಂದು ಸಮಿತ್ ಶೆಟ್ಟಿ (30 ವರ್ಷ) ಎಂಬಾತನು KA-19-MK-8338 ನಂಬ್ರದ ಕಾರಿನಲ್ಲಿ ನಂತೂರು ಜಂಕ್ಷನ್ ಕಡೆಯಿಂದ ಪಂಪ್ ವೆಲ್ ಕಡೆಗೆ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಬೆಳಗಿನ ಜಾವ ರಸ್ತೆಯ ಮಧ್ಯದ ಡಿವೈಡರಿಗೆ ಸಂಬಂಧಿಸಿದ ಸಿಮೆಂಟ್ ದಿಂಡೆಯ ಮೇಲೆ ಚಲಿಸಿ ಡಿವೈಡರಿನ ಮಧ್ಯಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ತಂತಿಬೇಲಿ ಮೇಲೆ ಚಲಿಸಿ ಡಿವೈಡರಿನ ಮಧ್ಯಭಾಗದಲ್ಲಿರುವ ಗಾರ್ಡನಿನಲ್ಲಿ ಸುಮಾರು 40 ಅಡಿ ದೂರದ ವರೇಗೆ ಮುಂದಕ್ಕೆ ಚಲಿಸಿ ಡಿವೈಡರಿಗೆ ಸಂಬಂಧಿಸಿದ ಬಲಬದಿಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ತಂತಿಬೇಲಿಯ ಮೇಲೆ ಕಾರು ನಿಂತಿದ್ದು, ಅಪಘಾತದ ರಭಸಕ್ಕೆ ಸಮೀತ್ ಶೆಟ್ಟಿಯ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಯುನಿಟಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿರುವುದಾಗಿದೆ

 

Panambur PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ : 23-03-2024 ರಂದು ಮಂಗಳೂರು ತಾಲೂಕು, ಪಣಂಬೂರು ಗ್ರಾಮದ, ಕುದುರೆ ಮುಖ ಜಂಕ್ಷನ್ ಬಳಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡು ಬಂದಿದ್ದ 1) ಚೇತನ್ ಪ್ರಾಯ:22 ವರ್ಷ,ತಂದೆಃಹರೀಶ್ ವಾಸಃಬಿಕರ್ನಕಟ್ಟೆ 2ನೇ ಬಿಜ್ಜೋಡಿ ಕುಲಶೇಖರ ಅಂಚೆ ಮರೋಳಿ ಗ್ರಾಮ ಮಂಗಳೂರು 2) ದೀಕ್ಷಾನ್ ಪ್ರಾಯಃ22 ವರ್ಷ ತಂದೆಃ ದಿ,ಹರೀಶ್ ವಾಸಃ ದೇರೆಬೈಲ್ ಕೊಂಚಾಡಿ ಮಿತ್ರಮಂಡಲ ಭಜನಾಮಂದಿರ ಬಳಿ ದೇರೆಬೈಲ್ ಅಂಚೆ ಮತ್ತು ಗ್ರಾಮ ಮಂಗಳೂರು ಇವರನ್ನು ವೈದ್ಯಕೀಯ ತಪಾಸಣೆಯ ಬಗ್ಗೆ ಎ.ಜೆ.ಆಸ್ಪತ್ರೆ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿ, ವೈದ್ಯಕೀಯ ಪರೀಕ್ಷಾ ವರದಿಯ ಪ್ರತಿಯನ್ನು ಪಡೆಯಲಾಗಿ “TETRAHYDRACANNABINOID (MARIJUANA) is Positive” ಎಂದು ವರದಿ ಬಂದಿರುವುದರಿಂದ ಸದ್ರಿ ಆಪಾಧಿತರ ವಿರುದ್ದ ಕಲಂ: 27(ಬಿ) ಎನ್.ಡಿ.ಪಿ.ಎಸ್ ಕಾಯ್ದೆ- 1985 ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 24-03-2024 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080