Crime Reported in CEN Crime PS
ಪಿರ್ಯಾದಿದಾರರು ದಿನಾಂಕ 22-05-2023 ರಂದು QUIKR.COM ಆ್ಯಪ್ ನಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಿರುತ್ತಾರೆ. ದಿನಾಂಕ:22-05-2023 ರಂದು ಯಾರೋ ಅಪರಿಚಿತ ವ್ಯಕ್ತಿ (PhNo.7318799934) ನೇ ನಂಬ್ರ ನಿಂದ ಕರೆ ಮಾಡಿ ನಾನು ಭಾರತೀಯ ಸೇನೆಯಲ್ಲಿ ಇರುವುದಾಗಿ ಪರಿಚಯಿಸಿಕೊಂಡು ನನಗೆ ಬಾಡಿಗೆ ಮನೆ ಬೇಕಾಗಿದ್ದು ನಾನು ನನ್ನ ಸರ್ಕಾರಿ ಕಛೇರಿಯ ಖಾತೆಯಿಂದ ಹಣ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಹಣ ವರ್ಗಾವಣೆ ಮಾಡಬೇಕಾದರೆ ಮೊದಲು ನೀವು ರೂ.55,000/- ಹಣ ಪಾವತಿಸಬೇಕು ಎಂದು ತಿಳಿಸಿದ್ದು ಅದನ್ನು ನಂಬಿದ ಪಿರ್ಯಾದಿದಾರರು ದಿನಾಂಕ:22-05-2023 ರಂದು ತಮ್ಮ Bank ದಿಂದ ಹಂತ ಹಂತವಾಗಿ ರೂ.45,000/-,43,000/-,11,000/- ಈ ರೀತಿ ಒಟ್ಟು ರೂ.99,000 ಹಣವನ್ನು ಆರೋಪಿಯ HDFC ಬ್ಯಾಂಕ್ ಖಾಯೆ ಸಂಖೆ.50100617531785 ನೇದಕ್ಕೆ ವರ್ಗಾಯಿಸಿಕೊಂಡು ಪಿರ್ಯಾದಿದಾರರನ್ನು ನಂಬಿಸಿ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ
Konaje PS
ಪಿರ್ಯಾದಿ Raghavendra M Naik ದಿನಾಂಕ 23-05-2023 ರಂದು ಬೆಳಿಗ್ಗೆ 07-30 ಗಂಟೆಗೆ ಕಂಬಳಪದವು ಕ್ರಾಸ್ ರಸ್ತೆಯಿಂದ ಕೈಗಾರಿಕ ಪ್ರದೇಶಕ್ಕೆ ಹೋಗುವ ರಸ್ತೆಯಲ್ಲಿ ಇಬ್ಬರು ಯುವಕರು ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿದ್ದು, ಸುಮಾರು 09-25 ಗಂಟೆಗೆ ಪೊಲೀಸ್ ಸಿಬ್ಬಂದಿಗಳು ಅವರ ಬಳಿಗೆ ಹೋಗುತ್ತಿದ್ದಂತೆ ಆರೋಪಿಗಳು ಓಡಿ ಹೋಗಲು ಪ್ರಯತ್ನಿಸಿದವರನ್ನು, ಪಿರ್ಯಾದಿದಾರರು ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ಹಿಡಿದು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಅಬ್ದುಲ್ ಹಕಂ, ಪ್ರಾಯ 24 ವರ್ಷ, ವಾಸ : ಕಿಲ್ಲೂರು ಮನೆ,ಕಿಲ್ಲೂರು ಪೋಸ್ಟ್, ಮಿತ್ತಬಾಗಿಲು ಗ್ರಾಮ ಬೆಳ್ತಂಗಡಿ ತಾಲೂಕು 2) ಅಬೂಬಕ್ಕರ್, ಪ್ರಾಯ 23 ವರ್ಷ, ವಾಸ : ಕಿರ್ನಡ್ಕ ಮನೆ, ನಾವೂರು ಪೋಸ್ಟ್, ನಾವೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬುದಾಗಿ ತಿಳಿಸಿದ್ದು, ನಂತರ ಅಂಗ ಶೋಧನೆ ಮಾಡಿಸಿ ಆರೋಪಿ ಅಬ್ದುಲ್ ಹಕಂ ಎಂಬಾತನ ವಶದಲ್ಲಿ ದೊರೆತ 2 ಗ್ರಾಂ ಮಾದಕ ದ್ರವ್ಯ ಮೆಥಾಎಂಪೆಟಾಮೈನ್, ಪ್ಲಾಸ್ಟಿಕ್ ಕವರ್ ಇರುವ 1 ಪ್ಯಾಕೇಟ್, ಡಿಜಿಟಲ್ ತೂಕ ಮಾಪನ, ಒಂದು ಮೊಬೈಲ್ ಪೋನ್ ಗಳು,ರೂ 300/- ಮತ್ತು ಆರೋಪಿ ಅಬೂಬಕ್ಕರ್ ಎಂಬಾತನ ವಶದಲ್ಲಿ ದೊರೆತ 32 ಗಾಂ ಗಾಂಜಾ ಎಂಬ ಮಾದಕ ವಸ್ತು, ACE ಕಂಪನಿಯ ನೀಲಿ ಬಣ್ಣದ ಮೊಬೈಲ್ ಪೋನ್ ಮತ್ತು ನಗದು ರೂ 200/-ನ್ನು ಮುಂದಿನ ಕ್ರಮದ ಬಗ್ಗೆ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿದ್ದು, ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.
Mangalore South PS
ಪಿರ್ಯಾದಿ VITTAL DEVADIGA ತಮ್ಮ ಬಾಲಕೃಷ್ಣ ದೇವಾಡಿಗ ಎಂಬುವರು ಸುಮಾರು 04 ತಿಂಗಳಿನಿಂದ ಧರ್ಮಸ್ಥಳದಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದು. ಆಗಾಗ ತಮ್ಮ ಮೂಡುಶೆಡ್ಡೆ ಮನೆಗೆ ಬಂದು ಹೋಗಿ ಮಾಡುತ್ತಿದ್ದ ಅದರಂತೆ ದಿನಾಂಕ:21.05.2023 ರಂದು ಮೂಲ್ಕಿಯಲ್ಲಿ ತಮ್ಮ ಕುಟುಂಬದ ದೈವದ ಪೂಜೆ ಇದ್ದುದ್ದರಿಂದ ಮೂಲ್ಕಿಗೆ ಬಂದು ರಾತ್ರಿ 8.00 ಗಂಟೆಯವರೆಗೆ ಕುಟುಂಬದವರೊಟ್ಟಿಗೆ ಇದ್ದವನು, ನಂತರ ಅವನು ನಮಗೆ ಹೇಳದೇ ಅಲ್ಲಿಂದ ಹೊರಟು ಹೋಗಿರುತ್ತಾನೆ. ಅವನು ಮುಂಚಿನಿಂದಲೂ ಇದೇ ರೀತಿ ಮನೆಯವರಿಗೆ ಹೇಳದೇ ಮನೆಯಿಂದ ಹೋಗುತ್ತಿದ್ದುದ್ದರಿಂದ ಅವನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ನಂತರ ನಿನ್ನೆ ದಿನ ದಿನಾಂಕ:22.05.2023 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರ ಸೊಸೆ ಕಲಾವತಿಯು ತನ್ನ ಮೊಬೈಲ್ ನಿಂದ ಬಾಲಕೃಷ್ಣ ನ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಬಾಲಕೃಷ್ಣ ನ ಮೊಬೈಲ್ ನಿಂದ ಬೇರೆ ಯಾರೋ ಅಪರಿಚಿತ ವ್ಯಕ್ತಿ ಮಾತಾಡಿ ಬಾಲಕೃಷ್ಣ ರವರಿಗೆ ಹುಷಾರಿಲ್ಲ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ ಬಂದು ನೋಡಿ ಎಂದು ಹೇಳಿದರು. ಅದರಂತೆ ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಬಂದು ನೋಡಲಾಗಿ ಬಾಲಕೃಷ್ಣ ಅಲ್ಲಿ ಇರಲಿಲ್ಲ, ಪುನಃ ಅದೇ ನಂಬ್ರಕ್ಕೆ ಕರೆ ಮಾಡಿದಾಗ ಅದೇ ವ್ಯಕ್ತಿ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ, ಎಜೆ ಆಸ್ಪತ್ರೆಯಲ್ಲಿಯೂ ಹುಡುಕಾಡಿ ನೋಡಿದಾಗ ಬಾಲಕೃಷ್ಣ ದೇವಾಡಿಗ ಅಲ್ಲಿ ಇರಲಿಲ್ಲ, ನಂತರ ಪಿರ್ಯಾದಿದಾರರು ಕರೆ ಮಾಡಿದ ವ್ಯಕ್ತಿಯನ್ನು ಮುಖತಃ ಸಂಪರ್ಕಿಸಿ ವಿಚಾರಿಸಲಾಗಿ ಸದ್ರಿ ವ್ಯಕ್ತಿಯ ಹೆಸರು ಶಿವಪ್ಪ ಕೊಪ್ಪಳ ಎಂದು ತಿಳಿಸಿದ್ದು. ಬಾಲಕೃಷ್ಣ ನ ಬಗ್ಗೆ ಕೇಳಿದಾಗ ಆತನು “ನಾವು ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿ ರೈಲ್ವೆ ಸ್ಟೇಷನ್ ಬಳಿ ಮಲಗಿಕೊಂಡಿದ್ದೇವು. ಬೆಳಿಗ್ಗೆ ಅವರಿಗೆ ಹುಷಾರಿಲ್ಲದಾಗಿದ್ದು ಅವರಿಗೆ ಮಾತ್ರೆ ಕೊಟ್ಟು ಗ್ಲೂಕೋಸ್ ನೀಡಿ, ವಿಶ್ರಾಂತಿ ಪಡೆಯುವಂತೆ ತಿಳಿಸಿದೆ. ನಂತರ ನಾನು ಅವರ ಮೊಬೈಲ್ ಪಡೆದುಕೊಂಡು ನನ್ನ ಮನೆಗೆ ಪೋನ್ ಕರೆ ಮಾಡಿ ಮಾತಾಡಿ ವಾಪಸ್ಸು ಮೊಬೈಲ್ ಕೊಡಲು ನೋಡಿದಾಗ ಅವರು ಸ್ಥಳದಲ್ಲಿ ಇರಲಿಲ್ಲ, ಎಲ್ಲಿ ಹೋದರು ಎಂಬುದು ನನಗೆ ತಿಳಿದಿಲ್ಲ, ನಾನು ಕುಡಿದ ಮತ್ತಿನಲ್ಲಿ ಏನು ಹೇಳಿದ್ದೆನೆಂದು ಗೊತ್ತಿಲ್ಲ” ಎಂದು ಹೇಳಿದ್ದಾಗಿಯೂ. ಪಿರ್ಯಾದುದಾರರು ಮಂಗಳೂರಿನ ಸುತ್ತಮುತ್ತ ಎಲ್ಲಾ ಕಡೆಗೆ ಹುಡುಕಾಡಿದ್ದು ತನ್ನ ತಮ್ಮ ಬಾಲಕೃಷ್ಣ ಎಲ್ಲಿಯೂ ಪತ್ತೆಯಾಗಿರುವುದಿಲ್ಲ.
Ullal PS
ದಿನಾಂಕ 22.05.2023 ರಂದು ರಾತ್ರಿ 19:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಅಲ್ ಫಾಯಿ(24) ತನ್ನ ಮೋಟಾರ್ ವಾಹನದಲ್ಲಿ ಜೀಜೋ ಬೆನ್ ಹಿಮ್ ರವರನ್ನು ಸಹ ಸಾವರನಾಗಿ ಕುಳುಸಿಕೊಂಡು ಕುತ್ತಾರಿಗೆ ಹೋಗುವ ವೇಳೆ, ಕುತ್ತಾರ್ ಭವಿಷ್ ಬಜಾರ್ ಬಳಿ ಪಂಡಿತ್ ಹೌಸ್ ಯಶವಂತ್ ಪಿರ್ಯಾದಿದಾರರನ್ನು ಗಾಂಜ ಸೇವನೆ ಮಾಡಿದ್ದಿರ ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಮಾತಿಗೆ ಮಾತಗಿ ಗಲಾಟೆ ಮಾಡಿ ಉರುಡಾಟ ಹಾಗುವ ವೇಳೆ ಅಲ್ಲಿ ಸುಮಾರು 5-6 ಜನರು ಸೇರಿ ಪಿರ್ಯಾದಿದಾರರರಿಗೆ ಕೈ ಯಿಂದ ಹೊಡೆದು ಬಿಯರ್ ಬಾಟಲಿನಿಂದ ತಲೆಗೆ ಹೊಡೆದು ರಕ್ತ ಗಾಯ ಉಂಟು ಮಾಡೆದಲ್ಲದೆ ನಿಮ್ಮನು ಜೀವ ಸಹಿತ ಬಿಡುವುದಿಲ್ಲವಾಗಿ ಬೇದರಿಕೆ ಹಾಕಿದ್ದು ಉಂಟಾದ ನೊವಿಗೆ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕಣಚೂರು ಆಸ್ಪತ್ರೆ ಹೋಗಿ ವೈದ್ಯರಲ್ಲಿ ತೋರಿಸಿದಲ್ಲಿ ಒಳರೋಗಿಯಾಗಿ ದಾಖಲು ಮಾಡಿದ್ದು ಹಲ್ಲೆ ನಡೆಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.
Crime Reported in Panambur PS
ಪಿರ್ಯಾಧಿ Chandresh ಸುಮಾರು 15 ವರ್ಷಗಳಿಂದ ಮಂಗಳೂರು ತಾಲೂಕು, ತಣ್ಣೀರುಬಾವಿ ಎಂಬಲ್ಲಿಯ ಫಾತೀಮಾ ಚರ್ಚ ಬಳಿಯ ಶಶಿಕುಮಾರ ಎಂಬುವರ ಬಾಡಿಗೆ ಮನೆಯಲ್ಲಿ ಹೆಂಡತಿ ಪುಷ್ಪ, ಮಗಳು ಕಲ್ಪನಾ ಮತ್ತು ಮಗ ಪ್ರಶಾಂತ್ ರವರೊಂದಿಗೆ ವಾಸಮಾಡಿಕೊಂಡು, ತಣ್ಣೀರುಬಾವಿ ಬೀಚ್ ನಲ್ಲಿ ಚುರುಮುರಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ಪಿರ್ಯಾಧಿದಾರರ ಮಗಳು ಕಲ್ಪನಾ ಕಾರ್ ಸ್ಟ್ರೀಟ್ ಗರ್ಲ್ಸ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿವರೆಗೆ ವ್ಯಾಸಂಗ ಮಾಡಿದ್ದು, ದ್ವೀತಿಯ ಪಿ.ಯು.ಸಿಗೆ ಕಾಲೇಜಿಗೆ ಹೋಗದೇ ಮನೆಯಲ್ಲೇ ಕುಳಿತು ಕಲಿತು, ದಿನಾಂಕ: 22-05-2023 ರಂದು ಬೆಳಿಗ್ಗೆ ಸಮಯ 08-30 ಗಂಟೆಗೆ ತಣ್ಣೀರುಬಾವಿ ಫಾತೀಮಾ ಚರ್ಚ್ ಫೆರಿ ಮಖಾಂತರ ಕಾರ್ ಸ್ಟ್ರೀಟ್ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರು ಸಂಜೆ 06-00 ಗಂಟೆ ಸುಮಾರಿಗೆ ಶಾಲೆಯ ಪ್ರೀನ್ಸಿಪಾಲರಿಗೆ ಪೋನ್ ಮಾಡಿ ವಿಚಾರಿಸಿದಾಗ ಕಲ್ಪನಾ ರವರು ಶಾಲೆಗೆ ಬರಲಿಲ್ಲವೆಂದು ತಿಳಿಸಿರುವುದಾಗಿದೆ. ಪಿರ್ಯಾಧಿದಾರರು ಮಗಳು ಕಲ್ಪನಾ ರವರು ಸುಲ್ತಾನ್ ಬತ್ತೇರಿಯಿಂದ ಬರುವ ಕೊನೆಯ ಫೆರಿಯಲ್ಲಿ ಮನೆಗೆ ಬರುಬಹುದೆಂದು ಭಾವಿಸಿದರು ಸಹ ಕೊನೆಯ ಫೆರಿಯಲ್ಲಿಯು ಕೂಡ ಪಿರ್ಯಾಧಿದಾರರ ಮಗಳು ಮನೆಗೆ ಬಂದಿರುವುದಿಲ್ಲ. ಪಿರ್ಯಾಧಿದಾರು ಮಗಳು ಕಲ್ಪನ ಬಗ್ಗೆ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದಾಗ ಅಲ್ಲಿಯು ಹೋಗದಿರುವುದು ತಿಳಿದು ಬಂದಿರುತ್ತದೆ. ಪಿರ್ಯಾಧಿದಾರರ ಮಗಳಾದ ಕಲ್ಪನಾ ಪ್ರಾಯ: 19 ವರ್ಷ ಎಂಬಾಕೆಯನ್ನು ಪತ್ತೆ ಹಚ್ಚಿಕೊಡಬೇಕಾಗಿ ಕೋರಿಕೆ ಎಂಬಿತ್ಯಾಧಿಯಾಗಿರುತ್ತದೆ.
ಚಹರೆ ಗುರುತುಗಳು:
ಹೆಸರು: ಕುಮಾರಿ ಕಲ್ಪನಾ ಪ್ರಾಯ: 19 ವರ್ಷ
ಶಾಲೆ : ಪ್ರಥಮ ಪಿ.ಯು.ಸಿ ತನಕ ವ್ಯಾಸಂಗ , ಕಾರ್ ಸ್ಟ್ರೀಟ್ ಗರ್ಲ್ಸ್ ಕಾಲೇಜು.
ಎತ್ತರ: 5 ಅಡಿ,
ಬಣ್ಣ:ಬಿಳಿಮೈಬಣ್ಣ
ಭಾಷೆ: ಕನ್ನಡ,ಹಿಂದಿ
ಬಟ್ಟೆ ಬರೆ:ನೀಲಿ ಬಣ್ಣದ ಚೂಡಿದಾರ ಟಾಪ್, ನೀಲಿ ಬಣ್ಣದ ಪ್ಯಾಂಟ್ ಬಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
Konaje PS
ದಿನಾಂಕ 20-05-2023 ರಂದು ನಾನು Rekha P B ಎಂದಿನಂತೆ ಬೆಳಿಗ್ಗೆ ಸುಮಾರು 09-00 ಗಂಟೆಗೆ ಕೆಲಸಕ್ಕೆ ಹೋಗಿದ್ದು, ಅವರ ಗಂಡ ಜಗನ್ನಾಥ್ ಧನರಾಜ್ (35 ವರ್ಷ) ರವರಿಗೆ ಕೆಲಸಕ್ಕೆ ರಜೆ ಇದುದರಿಂದ ಮನೆಯಲ್ಲಿಯೇ ಇದ್ದರು. ಪಿರ್ಯಾದಿದಾರರು ಸುಮಾರು 15.30 ಗಂಟೆಗೆ ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಅವರ ಗಂಡ ಜಗನ್ನಾಥ್ ಧನರಾಜ್ ಮನೆಯಲ್ಲಿಯೇ ಇಲ್ಲದೇ ಇದುದರಿಂದ ಅವರ ಮೊಬೈಲ್ ಪೋನ್ ಗೆ ಕರೆ ಮಾಡಿದಾಗ ಮೊಬೈಲ್ ಪೋನ್ ಮನೆಯಲ್ಲಿಯೇ ಇದ್ದು, ಹಾಗೂ ಅವರು ಉಪಯೋಗಿಸಿದ ವಾಹನ ಮನೆಯಲ್ಲಿಯೇ ಇರುತ್ತದೆ. ನಂತರ ಪಿರ್ಯಾದಿದಾರರು ಅವರ ಅತ್ತೆ ಹೇಮವತಿರವರಲ್ಲಿ ಜಗನ್ನಾಥ್ ಧನರಾಜ್ ರವರು ವಿಚಾರಿಸಿದಾಗ ಬೆಳಿಗ್ಗೆ 10-30 ಗಂಟೆಗೆ ಮನೆಯಿಂದ ಹೋಗಿರುವುದಾಗಿ ತಿಳಿಸಿತ್ತಾರೆ. ರಾತ್ರಿಯಾದರೂ ಜಗನ್ನಾಥ್ ಧನರಾಜ್ ರವರು ಮನೆಗೆ ಬಾರದೇ ಇದುದರಿಂದ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಜಗನ್ನಾಥ ಧನರಾಜ್ ರವರು ಯಾವುದೋ ಕಾರಣಕ್ಕೆ ಮಾನಸಿಕವಾಗಿ ನೊಂದು ಮನೆಬಿಟ್ಟು ಹೋಗಿರಬಹುದು.ಕಾಣೆಯಾದ ಜಗನ್ನಾಥ ಧನರಾಜ್ ರವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ.
Ullal PS
ದಿನಾಂಕ 22.05.2023 ರಂದು ರಾತ್ರಿ 19:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಯಶವಂತ ( 61) ರವರು ರಸ್ತೆಯಲ್ಲಿ ನಡೆದು ಕೊಂಡು ಬರುವಾಗ, ಕುತ್ತಾರ್ ಭವಿಷ್ ಬಜಾರ್ ಬಳಿ 1)ದೇರಳಕಟ್ಟೆಯ ಜೀಜೋ ಬೆನ್ ಹಿಮ್ ಹಾಗು 2)ದೇರಳಕಟ್ಟೆಯ ಅಲ್ ಪಾಯಿ ಎಂಬುವರು ಮೋಟಾರ್ ಸೈಕಲ್ ನಲ್ಲಿ ಏಕಾಏಕಿ ತಡೆದು ನಿಲ್ಲಿಸಿ ಬೇವರ್ಸಿ ಮುದುಕ ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಆತನ ಮುಖಕ್ಕೆ ಹೊಡೆದು,ಮೈ ಕೈ ಗೆ ಹೊಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಪಿರ್ಯಾದಿದಾರರ ತುಟಿಗೆ ರಕ್ತ ಗಾಯ ಹಾಗು ಮೈಕೈಗೆ ನೋವುಂಟು ಮಾಡಿದ್ದು ಚಿಕಿತ್ಸೆ ಬಗ್ಗೆ ನೇತಾಜಿ ಎಲ್ಲಪ್ಪ ಆಸ್ಪತ್ರೆ ಹೋಗಿ ವೈದ್ಯರಲ್ಲಿ ತೋರಿಸಿದಲ್ಲಿ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಿದ್ದು ಹಲ್ಲೆ ನಡೆಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.